Tag: Legion of Merit

  • ಪ್ರಧಾನಿ ಮೋದಿಗೆ ಲೀಜನ್ ಆಫ್ ಮೆರಿಟ್ ನೀಡಿದ ಟ್ರಂಪ್

    ಪ್ರಧಾನಿ ಮೋದಿಗೆ ಲೀಜನ್ ಆಫ್ ಮೆರಿಟ್ ನೀಡಿದ ಟ್ರಂಪ್

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪದಕವನ್ನು ನೀಡಿ ಗೌರವಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರಣ್‍ಜೀತ್ ಸಿಂಗ್ ಸಂಧು ಅವರು ಲೀಜನ್ ಆಫ್ ಮೆರಿಟ್ ಪದಕವನ್ನು ಸ್ವೀಕರಿಸಿದ್ದಾರೆ. ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಅವರು ಪದಕವನ್ನು ಹಸ್ತಾಂತರಿಸಿದ್ದಾರೆ. ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ನಾಯಕತ್ವ ವಹಿಸಿದ್ದಕ್ಕೆ ಹಾಗೂ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವಂತೆ ಮಾಡಿದ್ದಕ್ಕೆ ಟ್ರಂಪ್ ಪದಕವನ್ನು ನಿಡಿದ್ದಾರೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಪದಕವನ್ನು ಕೊಡಮಾಡಿದ್ದು, ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ನಾಯಕತ್ವ ವಹಿಸಿದ್ದಕ್ಕೆ ಪದಕ ನೀಡಿರುವುದಾಗಿ ತಿಳಿಸಿದ್ದಾರೆ.

    ಲೀಜನ್ ಆಫ್ ಮೆರಿಟ್ ಅತ್ಯುನ್ನತ ಪದಕವನ್ನು ದೇಶದ ಮುಖ್ಯಸ್ಥರು ಅಥವಾ ಸರ್ಕಾರಕ್ಕೆ ನೀಡಲಾಗುತ್ತದೆ. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಸಲು ನಾಯಕತ್ವ, ದೂರ ದೃಷ್ಟಿ ಹಾಗೂ ಭಾರತ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಕೊಡಮಾಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೆ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಶಿಂಜೊ ಅಬೆ ಅವರಿಗೂ ಲೀಜನ್ ಆಫ್ ಮೆರಿಟ್ ನೀಡಲಾಗಿದ್ದು, ದೇಶಗಳ ರಾಯಭಾರಿಗಳು ಪದಕವನ್ನು ಸ್ವೀಕರಿಸಿದ್ದಾರೆ ಎಂದು ಒ’ಬ್ರಿಯೆನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.