Tag: Legal action

  • ಇಂಗ್ಲಿಷ್ ಆ್ಯಪ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಶಶಿ ತರೂರ್

    ಇಂಗ್ಲಿಷ್ ಆ್ಯಪ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಶಶಿ ತರೂರ್

    ತಿರುವನಂತಪುರ: ಇಂಗ್ಲಿಷ್ ಭಾಷೆ ಜ್ಞಾನ ವಿಷಯದಲ್ಲಿ ಶಶಿ ತರೂರ್ ಪ್ರತಿಭಾನ್ವಿತ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈಗ ಅವರ ಹೆಸರನ್ನು ದುರ್ಬಳಕೆ ಮಾಡಿ ಪ್ರಚಾರಕ್ಕೆ ಪಡೆಯಲು ಆ್ಯಪ್ ಕಂಪನಿ ಮುಂದಾಗಿದೆ.

    ತಮ್ಮ ಹೆಸರು ಮತ್ತು ಫೋಟೋವನ್ನು ದುರ್ಬಳಕೆ ಮಾಡಿ ಇಂಗ್ಲಿಷ್ ಕಲಿಸಲು ಮುಂದಾದ ಆ್ಯಪ್ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಗರಂ ಆಗಿದ್ದಾರೆ.

    ಇಂಗ್ಲಿಷ್ ಕಲಿಕಾ ಆ್ಯಪ್ ಒಂದು ಶಶಿ ತರೂರ್ ರೀತಿಯಲ್ಲಿ ಸುಲಲಿತವಾಗಿ ಇಂಗ್ಲಿಷ್ ಮಾತನಾಡಲು ಕಲಿಸಿಕೊಡುವುದಾಗಿ ಪ್ರಚಾರ ಮಾಡಿ ಇದೀಗ ಸಂಕಷ್ಟಕ್ಕೆ ಒಳಗಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ತರೂರ್, ನನಗೂ ಈ ಆ್ಯಪ್‍ಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡು ಮಕ್ಕಳನ್ನು ದಾರಿ ತಪ್ಪಿಸುವುದರೊಂದಿಗೆ ನನ್ನ ಅನುಮತಿ ಇಲ್ಲದೆ ವಾಣಿಜ್ಯ ಬಳಕೆಗೆ ನನ್ನ ಹೆಸರು ಮತ್ತು ಛಾಯಚಿತ್ರವನ್ನು ಬಳಸಿಕೊಂಡ ಈ ಆ್ಯಪ್ ವಿರುದ್ಧ ನಾನು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆಂದು ಟ್ವೀಟ್ ಮಾಡಿದ್ದಾರೆ.

    ಬ್ಲ್ಯಾಕ್ ಬೋರ್ಡ್ ರೇಡಿಯೋ ಎಂಬ ಇಂಗ್ಲಿಷ್ ಕಲಿಕಾ ಆ್ಯಪ್ ತನ್ನ ಪ್ರಚಾರಕ್ಕಾಗಿ ಶಶಿ ತರೂರ್ ಅವರ ಫೋಟೋ ಹಾಗೂ ಹೆಸರನ್ನು ಬಳಸಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಶಶಿ ತರೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

  • ಯುದ್ಧ ಗೆದ್ದು ಬಂದಂತೆ ಮೆರವಣಿಗೆ – ಪಾಷಾ ವಿರುದ್ಧ ಕ್ರಮಕ್ಕೆ ಜಮೀರ್ ಆಗ್ರಹ

    ಯುದ್ಧ ಗೆದ್ದು ಬಂದಂತೆ ಮೆರವಣಿಗೆ – ಪಾಷಾ ವಿರುದ್ಧ ಕ್ರಮಕ್ಕೆ ಜಮೀರ್ ಆಗ್ರಹ

    ಬೆಂಗಳೂರು: ಯುದ್ಧ ಗೆದ್ದು, ಬಂದಂತೆ ಮೆರವಣಿಗೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ ಎಂದು ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಶಾಸಕ ಜಮೀರ್ ಅಹಮ್ಮದ್ ಅವರು ಕಿಡಿಕಾರಿದ್ದಾರೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಪಾಷಾ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಆಸ್ಪತ್ರೆಯಿಂದ ಹೊರೆ ಬಂದ ಅವರನ್ನು ಅವರ ಬೆಂಬಲಿಗರು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿಕೊಂಡು ಹೂಮಾಲೆ ಹಾಕಿ ಸ್ವಾಗತ ಕೋರಿದ್ದರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ರೂಲ್ಸ್ ಬ್ರೇಕ್ ಮಾಡಿದ್ದರು.

    ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಮೀರ್ ಅಹಮ್ಮದ್, ರಾಜ್ಯಕ್ಕೆ ರಾಜ್ಯವೇ ಕೊರೊನಾ ಇಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ ಎಂದು ಪ್ರಶ್ನೆ ಮಾಡಿ ಇಮ್ರಾನ್ ಪಾಷಾ ವಿರುದ್ಧ ಟ್ವೀಟ್ ಮಾಡಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಜಮೀರ್, ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೊರೊನಾ ಇಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿತ್ತು, ಆದರೆ ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಈಗಾಗಲೇ ಇಮ್ರಾನ್ ಪಾಷಾ ಅವರನ್ನು ಬಂಧಿಸಲಾಗಿದೆ. ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಪಾಷಾನನ್ನು ಬಂಧಿಸಿದ್ದಾರೆ. ಕೊರೊನಾ ಸಮಯದಲ್ಲಿ ರಾಜಕೀಯ ಮೆರವಣಿಗೆ ನಡೆಸಬಾರದು ಎಂದು ಸೂಚಿಸಿದ್ದರೂ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮೆರವಣಿಗೆ ನಡೆಸಿ ಕೋವಿಡ್ 19 ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಪಾಷಾ ವಿರುದ್ಧ ಪ್ರಕರಣ ದಾಖಲಾಗಿದೆ.