ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿನ ನಿವಾಸದಲ್ಲಿ ಪೂಜಾ ವಿಧಾನ ನೆರವೇರಿಸಿದ್ದಾರೆ. ನಟಿಯ ಇಷ್ಟವಾದ ತಿಂಡಿಗಳನ್ನು ಫೋಟೋ ಮುಂದೆ ಇಟ್ಟು ಪೂಜೆ ಮಾಡಿದ್ದಾರೆ ಪುತ್ರ ವಿನೋದ್ ರಾಜ್. ಲೀಲಾವತಿ ಸಮಾಧಿ ಬಳಿ ಅಭಿಮಾನಿಗಳು ಆಗಮಿಸಿ ದರ್ಶನ ಪಡೆದರು.
ಇನ್ನೂ ಡಿ.5ರಂದು ಅಮ್ಮ ಲೀಲಾವತಿ ಅವರ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ನಟಿಯ ಸ್ಮಾರಕವನ್ನು ಕೆ.ಎಚ್ ಮುನಿಯಪ್ಪ ಉದ್ಘಾಟನೆ ಮಾಡಿದ್ದರು.
ಹಿರಿಯ ನಟಿ ಡಾ.ಲೀಲಾವತಿ (Leelavathi) ಸ್ಮಾರಕ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ಜರುಗಿದೆ. ಸಚಿವ ಕೆ.ಎಚ್ ಮುನಿಯಪ್ಪ (K.H Muniyappa) ಅವರಿಂದ ಲೀಲಾವತಿ ಸ್ಮಾರಕ ಉದ್ಘಾಟಿಸಿದ್ದಾರೆ. ಇದನ್ನೂ ಓದಿ:ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ; ಓರ್ವ ಮಹಿಳೆ ಸಾವು
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ವಿನೋದ್ ರಾಜ್ (Vinod raj) ಹೆಸರಿಟ್ಟಿದ್ದಾರೆ. ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.
ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.
11 ವರ್ಷಗಳ ಹಿಂದೆ ವಿನೋದ್ ರಾಜ್ ಹಾರ್ಟ್ ಆಪರೇಷನ್‌ಗೆ (Heart Operation) ಒಳಗಾಗಿದ್ದರು. ಈ ವೇಳೆ, ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಈ ಪರಿಣಾಮ, ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಇದೀಗ ಆಪರೇಷನ್ ಕೂಡ ಮಾಡಲಾಗಿದ್ದು, ಇನ್ನೇರಡು ದಿನಗಲ್ಲಿ ವಿನೋದ್ ರಾಜ್ ಡಿಸ್ಚಾರ್ಜ್ ಕೂಡ ಆಗಲಿದ್ದಾರೆ.
ಅಂದಹಾಗೆ, ವಿನೋದ್ ರಾಜ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡ್ಯಾನ್ಸ್ ರಾಜಾ ಡ್ಯಾನ್ಸ್, ಶ್ರೀ ವೆಂಕಟೇಶ್ವರ ಮಹಿಮೆ, ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನನಗು ಹೆಂಡ್ತಿ ಬೇಕು, ಯುದ್ಧ ಪರ್ವ, ನಾಯಕ, ಬನ್ನಿ ಒಂದ್ಸಲಾ ನೋಡಿ, ಗಿಳಿ ಬೇಟೆ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ನಟ ವಿನೋದ್ ರಾಜ್ (Vinod Raj) ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ ಕೂಡ ಸಮಾಜಮುಖಿ ಕೆಲಸ ಮಾಡುತ್ತಾ ಮಾದರಿಯಾಗಿದ್ದಾರೆ. ಇದೀಗ ಬರಗಾಲದ ಹಿನ್ನೆಲೆ ರೈತರ ಜಾನುವಾರುಗಳಿಗೆ ವಿನೋದ್ ರಾಜ್ ಮೇವು ನೀಡಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್ ಕೃಷ್ಣ ನಟನೆಯ ‘ಫಾದರ್’ ಚಿತ್ರಕ್ಕೆ ಏಪ್ರಿಲ್ 27ರಂದು ಮುಹೂರ್ತ
ಪ್ರಾಣಿ ಪಕ್ಷಿ ಸಂರಕ್ಷಣೆ ಮಾಡೋದು ತಾಯಿ ಲೀಲಾವತಿ(Leelavathi) ಅವರ ಆಸೆಯಾಗಿತ್ತು. ಅದರಂತೆಯೇ ವಿನೋದ್ ರಾಜ್ ನಡೆದುಕೊಳ್ತಿದ್ದಾರೆ. ಬರಗಾಲದ ಸಮಯದಲ್ಲಿ ರೈತರಿಗೆ ನಟ ಸಾಥ್ ನೀಡಿದ್ದಾರೆ. ಕೆಆರ್ ಪೇಟೆ ರೈತರಿಗೆ ವಿನೋದ್ ರಾಜ್ ಮೇವು ಕೊಡಿಸಿದ್ದಾರೆ. ಇದೀಗ ನಟನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವರ್ಷ ಅಂತ್ಯದಲ್ಲಿ ಡಿಸೆಂಬರ್ 8ರಂದು ಲೀಲಾವತಿ ಅವರು ನಿಧನರಾದರು. ಅಮ್ಮನ ಸಾವಿನ ನೋವು ವಿನೋದ್ ರಾಜ್‌ಗೆ ಶಾಕ್ ಕೊಟ್ಟಿತ್ತು. ಕುಟುಂಬದ ಹೊಣೆಯ ನಡುವೆ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.
ಹಿರಿಯ ನಟಿ ಲೀಲಾವತಿ (Leelavathi) ಕಳೆದ ವರ್ಷ ಡಿ.8ರಂದು ವಿಧಿವಶರಾದರು. ಈ ಬೆನ್ನಲ್ಲೇ ವಿನೋದ್ ರಾಜ್ (Vinod Raj) ಕುಟುಂಬ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇಂದು (ಜ.14) ಲೀಲಾವತಿ ಸ್ಮಾರಕಕ್ಕೆ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ನೆಲಮಂಗಲದ ತೋಟ ಮನೆಯ ಬಳಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ವಿನೋದ್ ರಾಜ್ ಚಾಲನೆ ನೀಡಿದ್ದಾರೆ. ಪೂಜೆಯ ಕಾರ್ಯದಲ್ಲಿ ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಭಾಗಿಯಾಗಿದ್ದಾರೆ. ಸ್ಮಾರಕ ಚಾಲನೆಯ ಬಳಿಕ ವಿನೋದ್ ರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲೀಲಾವತಿ ಅವರ ಸ್ಮಾರಕ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 120 ದಿನಗಳಲ್ಲಿ ಸ್ಮಾರಕ ಕೆಲಸ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:‘ಶನಿ’ ಕಂಟಕ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್- ಚಳಿ ಬಿಡಿಸಿದ ಸುದೀಪ್
ತಾಯಿ ಅವರ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡ್ತಿದ್ದೇವೆ ಎಂದು ವಿನೋದ್ ಮಾತನಾಡಿದ್ದಾರೆ. ಅವರ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದ ವರೆಗೆ ಗ್ಯಾಲರಿಯನ್ನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ವಿನೋದ್ ರಾಜ್ ಮಾತನಾಡಿದ್ದಾರೆ.
ಈ ವೇಳೆ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಮಾತನಾಡಿ, ನಟಿ ಲೀಲಾವತಿ ಅವರು ಮಾಡಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಲೀಲಾವತಿ ಅವರು ಎಂದೆಂದಿಗೂ ತುಂಬಿದ ಕೊಡ. ಯಾವಾಗಲೂ ಸಿನಿಮಾಗಳಲ್ಲಿ ನೀತಿ ಪಾಠ ಇರಬೇಕು. ಇವತ್ತಿನ ದಿನಗಳ ಸಿನಿಮಾಗಳಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ ಎಂದು ಮಾತನಾಡಿದ್ದಾರೆ. ನಾವು ಎಂದಿಗೂ ವಿನೋದ್ ರಾಜ್ ಜೊತೆ ಇರುತ್ತೇವೆ ಅವರು ಸ್ಮಾರಕ ಕೆಲಸ ಬೇಗ ಮುಗಿಸಲಿ ಎಂದು ಬೆಂಬಲ ಸೂಚಿಸಿದ್ದರು. ಬಳಿಕ ವಿನೋದ್ ರಾಜ್ ಅವರು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡಿನ ಸಹಾಯ ಪಡೆದಿಲ್ಲ. ಅವರ ಸ್ವಂತ ದುಡ್ಡಲ್ಲಿ ಸ್ಮಾರಕ ನಿರ್ಮಾಣ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಹಿರಿಯ ನಟಿ ಲೀಲಾವತಿ (Leelavathi) ಅವರ ಜನ್ಮದಿನಾಚರಣೆ ಪ್ರಯುಕ್ತ ಇಂದು ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಅಮ್ಮನ ಸಮಾಧಿ ಬಳಿ ವಿನೋದ್ ರಾಜ್ (Vinod Raj) ಜನ್ಮದಿನ ಆಚರಣೆ ಮಾಡಿದ್ದಾರೆ. ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ನಟ ವಿನೋದ್ ಕೇಕ್ ಕತ್ತರಿಸಿದ್ದಾರೆ.
ಕನ್ನಡ ಚಿತ್ರರಂಗ ತಾರೆ ಲೀಲಾವತಿ ಸಾವಿನ ನೋವಿನ ಗಾಯ ಹಾಗೆ ಇದೆ. ಇದರ ನಡುವೆ ಅಮ್ಮನ 87 ವರ್ಷದ ಜನ್ಮದಿನವನ್ನ ವಿನೋದ್ ರಾಜ್ ಆಚರಿಸಿದ್ದಾರೆ. ಇದನ್ನೂ ಓದಿ:ತಮಿಳು ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ನಿಧನ
ತಾಯಿಯ ನೆನಪು ಮಾಡಿಕೊಂಡು ಕಣ್ಣೀರಿಟ್ಟು ಹಾಡು ಹಾಡಿ, ವಿನೋದ್ ರಾಜ್ ಭಾವುಕರಾಗಿದ್ದಾರೆ. ಅಮ್ಮನಿಲ್ಲದ ನೆನಪಿನೊಂದಿಗೆ ಸಮಾಧಿ ಬಳಿ ಜನ್ಮದಿನ ಆಚರಣೆ ಮಾಡಿದ್ದು, ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಲೀಲಾವತಿ (Leelavathi) ನಿಧನದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನರಾಗಿದ್ದಾರೆ. ಲೀಲಮ್ಮನ ಜೊತೆಗೆ ಇರುತ್ತಿದ್ದ ಬಂಗಾರಮ್ಮ (Bangaramma) ಇನ್ನಿಲ್ಲ.
ನಟ ವಿನೋದ್ ರಾಜ್ (Vinod Raj) ಕುಟುಂಬಕ್ಕೆ ಲೀಲಾವತಿ ಅವರ ಹಠಾತ್ ನಿಧನ ಶಾಕ್ ಕೊಟ್ಟಿದೆ. ತಾಯಿಯ ಅಗಲಿಕೆಯ ನೋವಿನಿಂದ ಹೊರಬರುವ ಮುನ್ನವೇ ಮನೆಯ ಸದಸ್ಯರೇ ಆಗಿದ್ದ ಬಂಗಾರಮ್ಮ ಇಹಲೋಕ ತ್ಯಜಿಸಿದ್ದಾರೆ. ಲೀಲಮ್ಮರ ಆರೈಕೆ ಮಾಡುತ್ತ ಸದಾ ಅವರ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ.
65 ವಯಸ್ಸಿನ ಬಂಗಾರಮ್ಮ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ್ದರು. ಡಿಸೆಂಬರ್ 12ರಂದು ತಡರಾತ್ರಿ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:‘ಕರಾವಳಿ’ ಸೊಗಡಿನ ಮತ್ತೊಂದು ಸಿನಿಮಾ: ಪ್ರಜ್ವಲ್ ದೇವರಾಜ್ ಹೀರೋ
ಬಂಗಾರಮ್ಮನವರು ಚಿಕ್ಕವಯಸ್ಸಿನಿಂದಲೂ ಲೀಲಾವತಿ ಅವರ ಜೊತೆಗೆ ಇರುತ್ತಿದ್ದರು, ಲೀಲಾವತಿ ಚೆನ್ನೈನಲ್ಲಿ ವಾಸವಾಗಿದ್ದಾಗಲೂ, ಅವರೊಂದಿಗೆ ಬಂಗಾರಮ್ಮ ಇದ್ದರು. ಲೀಲಾವತಿ ಎಲ್ಲಿಗೇ ಹೋದರೂ, ಬಂಗಾರಮ್ಮ ಜೊತೆಗೆ ಬರುತ್ತಿದ್ದರು. ಇದೀಗ ಲೀಲಾವತಿ ಇನ್ನಿಲ್ಲವಾದ ಬೆನ್ನಲ್ಲೇ ಬಂಗಾರಮ್ಮ ಕೂಡ ಚಿರನಿದ್ರೆಗೆ ಜಾರಿದ್ದಾರೆ.
ಬೆಂಗಳೂರು: ಹಿರಿಯ ನಟಿ ಲೀಲಾವತಿಯವರ (Leelavathi) ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಪ್ರಾರಂಭವಾದ ತಕ್ಷಣ ಉಪಸಭಾಪತಿಗಳು ಸಂತಾಪ ಸೂಚನೆ ಓದಿದರು. ಇದಕ್ಕೆ ಸಭಾ ನಾಯಕರ ಬೋಸರಾಜು, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಹ ದನಿಗೂಡಿಸಿದರು.
ಸಂತಾಪ ಸೂಚನೆ ವೇಳೆ ಮಾತನಾಡಿದ ನಟಿ ಹಾಗೂ ಪರಿಷತ್ ಸದಸ್ಯೆ ಉಮಾಶ್ರೀ (Umashree), ಲೀಲಾವತಿಯವರು ಬಾಲ್ಯದಿಂದ ಸಾವಿನವರೆಗೂ ಸಂಘರ್ಷದ ಜೀವನ ಮಾಡಿಕೊಂಡು ಬಂದವರು. ಇಷ್ಟು ಸಂಘರ್ಷಗಳನ್ನು ಜಯಿಸಿಕೊಂಡು ಬಂದಿದ್ದರು. ಲೀಲಾವತಿ ಮಾಡದ ಪಾತ್ರಗಳೇ ಇಲ್ಲ. ನಾವು ನಟರಾಗಿದ್ದರು ಅವರ ನಟನೆಗೆ ಸಾಟಿ ಅಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಹಾಗೂ ಪೋಷಣೆಯನ್ನು ಅವರು ಒದಗಿಸುತ್ತಿದ್ದರು ಎಂದು ಲೀಲಾವತಿಯವರ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಲೀಲಾವತಿ 3ನೇ ದಿನದ ಕಾರ್ಯ- ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದ ವಿನೋದ್ ರಾಜ್
ಸೋಲದೇವನಹಳ್ಳಿಯಲ್ಲಿ ಅವರು ಮಾಡಿದ ಸೇವೆ ಅಲ್ಲಿನ ಜನರು ಹೇಳುತ್ತಾರೆ. ಅಂತಹ ತಾಯಿಯ ಸೇವೆಯನ್ನು ಪುತ್ರ ವಿನೋದ್ ರಾಜ್ (Vinod Raj) ಮಾಡಿದ್ದಾರೆ. ವಿನೋದ್, ತಾಯಿಗೆ ತಕ್ಕ ಮಗ, ಲೀಲಾವತಿಯವರೂ ಸಹ ಮಗನಿಗೆ ತಕ್ಕ ತಾಯಿ ಎಂದು ಅವರು ಹೇಳಿದ್ದಾರೆ.
ಲೀಲಾವತಿಯವರು ನಾಯಕಿ ಪಾತ್ರ ಮಾಡಿದ್ದರೂ ಸಹ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ನಾನು ಅವರ ಜೊತೆ ಗೋಲ್ಮಾಲ್ ರಾಧಾಕೃಷ್ಣ ಚಲನಚಿತ್ರ ಮಾಡಿದ್ದೇನೆ. ಅಂತಹ ಮಹಾತಾಯಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬರುವುದಿಲ್ಲ. ವಿನೋದ್ ರಾಜ್ ಒಂಟಿಯಲ್ಲ, ಆತನಿಗೂ ಭಗವಂತ ಶಕ್ತಿ ಕೊಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಬಣ್ಣದ ಬದುಕಿನ ನಟಿಯ ಜೀವನ ವರ್ಣರಂಜಿತವಾಗಿರಲಿಲ್ಲ: ಶೋಭಾ ಕರಂದ್ಲಾಜೆ
ನಟ ವಿನೋದ್ ರಾಜ್ (Vinod Raj) ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ತಾಯಿ ಅಗಲಿಕೆಯ ನೋವಿನ ನಡುವೆಯೇ ಇಂದು (ಡಿ.10) ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ವಿನೋದ್ ನೆರವೇರಿಸಿದ್ದಾರೆ. ಕನ್ನಡದ ಹಿರಿಯ ನಟಿ, ಬೆಳ್ಳಿ ಪರದೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಾಯಕಿ, ಪೋಷಕ ನಟಿಯಾಗಿ, ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದ ಅವರು ಶುಕ್ರವಾರ ಸಂಜೆ ಇಹಲೋಕದ ಪಯಣ ಮುಗಿಸಿ ಚಿರನಿದ್ರೆಗೆ ಜಾರಿದ್ದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು.
ಮೂರನೇ ದಿನದ ಹಾಲು ತುಪ್ಪ ಕಾರ್ಯವನ್ನ ಇಂದು ಮದ್ಯಾಹ್ನ ಕುಟುಂಬದ ಸದಸ್ಯರು, ಅಪ್ತರು, ಮತ್ತು ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನರು ಸೇರಿ ಮಾಡಿದ್ದಾರೆ. ಅಗಲಿದ ತಾಯಿಗೆ ಮಗ ವಿನೋದ್ ರಾಜ್ ಭಾರವಾದ ಹೃದಯದಲ್ಲೇ ಹಾಲು ತುಪ್ಪ ಹಾಕಿ ತಾಯಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕೇಳಿಕೊಂಡರು. ಲೀಲಾವತಿಯ (Leelavathi) ಸೊಸೆ ಅನು, ಮತ್ತು ಮೊಮ್ಮಗ ಯುವರಾಜ್ (Yuvaraj) ಕೂಡ ಲೀಲಾವತಿಯ ಸಮಾಧಿಗೆ ಪೂಜೆ ಮಾಡಿ ಹಾಲುತುಪ್ಪ ಕಾರ್ಯ ಮಾಡಿದ್ದರು. ಇದನ್ನೂ ಓದಿ:ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್ ನಡೆಗೆ ಪ್ರೇಕ್ಷಕರು ಛೀಮಾರಿ
ಸೋಲದೇವನಹಳ್ಳಿಯ ಹಿರಿಯರ ಮಾರ್ಗದರ್ಶನದಂತೆ ಹಾಲುತುಪ್ಪ ಕಾರ್ಯವನ್ನ ಕುಟುಂಬದವರು ಮಾಡಿದ್ರೆ ಲೀಲಾವತಿ ಅವರ ನೆಚ್ಚಿನ ನಾಯಿ ಬ್ಲಾಕಿ ಕೂಡ ತಾಯಿಯ ಆಗಲಿಕೆಯ ನೋವನ್ನ ಅನುಭವಿಸುತ್ತಿದ್ದು, ಎಲ್ಲರ ಕಣ್ಣು ಚುರುಕ್ ಅನ್ನೋ ಹಾಗೇ ಮಾಡ್ತಿತ್ತು.
ಮೂರು ದಿನದಿಂದ ಊಟ ತಿಂಡಿ ನೀರು ಬಿಟ್ಟಿರೋ ಬ್ಲಾಕಿಗೆ ಕುಟುಂಬದವರು ಬಾಯಿಗೆ ತುತ್ತು ತಿನ್ನಿಸೋ ಪ್ರಯತ್ನ ಮಾಡಿದ್ರು ಬ್ಲಾಕಿ ಮಾತ್ರ ಲೀಲಮ್ಮನ ನೋವಿನಲ್ಲೇ ಊಟವನ್ನ ನಿರಾಕರಿಸಿ, ಮನೆಯಲ್ಲಿದ್ದ ಲೀಲವಾತಿಯ ಭಾವಚಿತ್ರದ ಮುಂದೆ ಮೂಖರೇದನೆ ಅನುಭವಿಸುತ್ತಿತ್ತು. ಮಣ್ಣಲ್ಲಿ ಮಣ್ಣಗಿರೋ ಕನ್ನಡದ ಮೇರು ಕಲಾವಿದೆ ಲೀಲಾವತಿ ಅವರು ಬೆವರು ಸುರಿಸಿ ಕಷ್ಟಪಟ್ಟು ನಿರ್ಮಿಸಿರೋ ತೋಟದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ (Leelavathi) ಅವರು ನಿಧನರಾಗಿ ಎರಡು ದಿನಗಳು ಕಳೆದಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಒಡನಾಟದ ಬಗ್ಗೆ ವಿನೋದ್ (Vinod Raj) ಪುತ್ರ ಯುವರಾಜ್ (Yuvaraj) ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್
ಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ. ಅಪ್ಪನನ್ನು ನೋಡಿದ್ರೆ ತುಂಬಾ ಬೇಸರ ಆಗುತ್ತದೆ. ಈ ವಯಸ್ಸಿನಲ್ಲೂ ಅಜ್ಜಿ ಜೊತೆ ಈಗಲೂ ಅಪ್ಪನಿಗೆ ತುಂಬಾ ಪ್ರೀತಿ ಇದೆ. ಅಪ್ಪನ ಸ್ಥಿತಿ ನೋಡಿದ್ರೆ, ತುಂಬಾ ಕಷ್ಟ ಆಗ್ತಿದೆ. ನನ್ನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರವನ್ನ ಅಜ್ಜಿನೇ ತೀರ್ಮಾನ ಮಾಡ್ತಿದ್ದರು. ಈಗ ಅವರಿಲ್ಲ, ಒಂಟಿ ಅಂತ ಅನಿಸುತ್ತಿದೆ.
ಒಳ್ಳೆಯ ಮಗನಾಗಿ ಎಲ್ಲರಿಗೂ ಸಹಾಯ ಮಾಡಬೇಕು. ಅಪ್ಪ ಯಾವಾಗಲೂ ಒಂದು ಮಾತು ಹೇಳ್ತಾರೆ, ಅಮ್ಮನ ಚೆನ್ನಾಗಿ ನೋಡಿಕೋ ಅಂತ. ಆ ಮಾತು ನನಗೆ ತುಂಬಾ ಇಷ್ಟ ಆಗುತ್ತೆ. ಅಜ್ಜಿಯಿಂದಲೇ ಕನ್ನಡ ಕಲಿತ್ತಿದ್ದು, ಅವರು ಇದಿದ್ರೆ ಇನ್ನೂ ಜಾಸ್ತಿ ಕನ್ನಡ ಕಲಿಯುತ್ತಿದ್ದೆ ಎಂದಿದ್ದಾರೆ ಯುವರಾಜ್.
ನಟಿ ಲೀಲಾವತಿ (Leelavathi) ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.