Tag: Leela

  • ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

    ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

    `ಕಾಂತಾರ'(Kantara) ಸೂಪರ್ ಸಕ್ಸಸ್ ನಂತರ ನಾಯಕಿ ಸಪ್ತಮಿ ಗೌಡ ಕೂಡ ಫುಲ್ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾದ ಸ್ಟಾರ್ ನಾಯಕಿಯಾಗಿ ಮಿಂಚ್ತಿರುವ ಸಪ್ತಮಿ(Saptami Gowda) ಇದೀಗ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದ್ದಾರೆ.

    ಕನ್ನಡದ `ಕಾಂತಾರ’ ಈಗ ಗಡಿ ದಾಟಿ ಸೂಪರ್ ಸಕ್ಸಸ್ ಕಂಡಿದೆ. ಕಾಂತಾರ ಚಿತ್ರದ ಪ್ರತಿ ಕಲಾವಿದರಿಗೂ ಈಗ ಬೇಡಿಕೆ ಜಾಸ್ತಿಯಾಗಿದೆ. ಅದರಂತೆ ಚಿತ್ರದ ನಾಯಕಿ ಸಪ್ತಮಿ ಗೌಡ ಅವರಿಗೂ ಕೂಡ. ಚಿತ್ರದ ಸಕ್ಸಸ್ ನಂತರ ದೈವಿ ಕ್ಷೇತ್ರಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಕೊರಗಜ್ಜ, ಗುಳಿಗ ಸನ್ನಿಧಿಗೆ ಭೇಟಿಯ ನಂತರ ಇದೀಗ ಕಟೀಲು ದರ್ಗಾ ಪರಮೇಶ್ವರಿ(Kateel Durga Parameshwari Temple) ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ.

    ಈ ವೇಳೆ ಸಪ್ತಮಿ ತನ್ನ ತಾಯಿ ಜೊತೆ, ಕಟೀಲು ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರ ವಿಶೇಷ ವಸ್ತ್ರ ನೀಡಿ, ದವಳದ ಅರ್ಚಕರು ಗೌರವಿಸಿದ್ದಾರೆ. ಹಾಗೆಯೇ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್

    ʻಕಾಂತಾರʼ ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ತುಳುನಾಡಿನ ದೈವರಾಧನೆ ಬಗ್ಗೆ ಮೊದಲು ನನಗೆ ತಿಳಿದಿರಲಿಲ್ಲ. ಕಾಂತಾರ ಚಿತ್ರೀಕರಣದ ವೇಳೆ ಈ ಬಗ್ಗೆ ತಿಳಿದುಕೊಂಡೆ. ಇನ್ನೂ ಬೇರೆ ಬೇರೇ ಸಿನಿಮಾಗಳ ಮಾತುಕಥೆ ನಡೆಯುತ್ತಿದೆ. ಇನ್ನೂ ತುಳು ಭಾಷೆಯಲ್ಲೂ ನಟಿಸಲು ಅವಕಾಶ ಸಿಕ್ಕರೆ ಖಂಡಿತಾ ನಟಿಸುವೆ ಎಂದು ಸಪ್ತಮಿ ಮಾತನಾಡಿದ್ದಾರೆ. ಅಭಿಮಾನಿಗಳು ಈ ವೇಳೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಚಿತ್ರಕ್ಕಾಗಿ ನಡೆದ ಫೋಟೋ ಶೂಟ್ : ಲೀಲಾ ಮತ್ತು ಶಿವ ಮುದ್ದು ಮುದ್ದು

    ‘ಕಾಂತಾರ’ ಚಿತ್ರಕ್ಕಾಗಿ ನಡೆದ ಫೋಟೋ ಶೂಟ್ : ಲೀಲಾ ಮತ್ತು ಶಿವ ಮುದ್ದು ಮುದ್ದು

    ಕಾಂತಾರ (Kantara) ಸಿನಿಮಾದ ನಂತರ ಈ ಸಿನಿಮಾದ ನಾಯಕಿ ಸಪ್ತಮಿ ಗೌಡಗೆ (Sapthami Gowda) ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲೇ ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ಹೊತ್ತಲ್ಲಿ ಸಪ್ತಮಿ ಗೌಡ ಕಾಂತಾರ ಸಿನಿಮಾದ ಲೀಲಾ ಪಾತ್ರಕ್ಕಾಗಿ ನಡೆಸಿದ ಫೋಟೋ ಶೂಟ್ (Photoshoot) ಆಚೆ ಬಂದಿದೆ. ಈ ಫೋಟೋದಲ್ಲಿ ಸಪ್ತಮಿ ಗೌಡ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ (Rishabh Shetty) ಕೂಡ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ನಡುವೆ ಸಪ್ತಮಿ ಗೌಡ ಅವರಿಗೆ ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪರಭಾಷೆಯಿಂದ ಆಫರ್ಸ್ ಬರುತ್ತಿವೆ ಎಂದು ಅವರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೂ ಮುನ್ನ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಅವರು ನಟಿಸುವ ಸಾಧ್ಯತೆ ಇದ್ದು, ಮಾತುಕತೆ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾವೊಂದು ಮಾಡುತ್ತಿದ್ದು, ಈಗಾಗಲೇ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಸಿನಿಮಾ ಟೈಟಲ್ ಸೇರಿದಂತೆ ಹಲವು ವಿಚಾರಗಳನ್ನೂ ಕೃಷ್ಣ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಇದೇ ಸಿನಿಮಾಗೆ ಸಪ್ತಮಿ ಗೌಡ  ಅವರನ್ನೂ ಕೇಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಸಪ್ತಮಿ ಗೌಡ ಅವರನ್ನು ಕೃಷ್ಣ  ಭೇಟಿಯಾಗಿ ಸಿನಿಮಾದ ಕಥೆ ಮತ್ತು ಪಾತ್ರದ ಹಿನ್ನೆಲೆಯನ್ನು ಹೇಳಿದ್ದಾರೆ ಎಂದು ಗೊತ್ತಾಗಿದ್ದು, ಬಹುಶಃ ಸಪ್ತಮಿ ಅವರೇ ಈ ಚಿತ್ರದ ನಾಯಕಿ ಎನ್ನುತ್ತಿದೆ ಗಾಂಧಿ ನಗರ ಮೂಲ. ಆದರೆ, ಈ ಕುರಿತು ಕೃಷ್ಣ ಆಗಲಿ ಅಥವಾ ಸಪ್ತಮಿ ಗೌಡ ಆಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಹೇಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

    ಕಾಳಿ ಸಿನಿಮಾದ ಕಥೆಯೂ ರೋಚಕವಾಗಿದೆ. ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಈ ಸಿನಿಮಾಗಾಗಿ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ರೆಬಲ್ ಈ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಕಾಳಿ ಸಿನಿಮಾದ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು

    ‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು

    ಕಾಂತಾರ (Kantara) ಸಿನಿಮಾದ ಗೆಲುವು ಆ ಸಿನಿಮಾದ ತಂತ್ರಜ್ಞರಿಗೆ ಮತ್ತು ನಟರಿಗೆ ಕಂಡು ಕೇಳರಿಯದಷ್ಟು ಹೆಸರು ತಂದು ಕೊಡುತ್ತಿದೆ. ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪ್ರವೇಶ ಮಾಡಿರುವ ಸಪ್ತಮಿ ಗೌಡ (Sapthami Gowda) ಅಂತೂ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಬದಲಾಗಿದ್ದಾರೆ. ಅದರಲ್ಲೂ ಅವರು ಎರಡು ಕಡೆ ಮೂಗು ಚುಚ್ಚಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಕಾಂತಾರ ಸಿನಿಮಾದಲ್ಲಿ ಲೀಲಾ (Leela) ಪಾತ್ರ ಮಾಡಿರುವ ಸಪ್ತಮಿ ಗೌಡಗೆ ಇದು ಮೊದಲ ಸಿನಿಮಾ. ಈ ಸಿನಿಮಾಗೆ ಹೇಗೆ ಆಯ್ಕೆಯಾದರು ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಕಾಂತಾರ ಸಿನಿಮಾಗೆ ಸಪ್ತಮಿ ಗೌಡ ನಾಯಕಿ ಎಂದು ರಿಷಬ್ ಹೇಳಿದಾಗ, ಸಿನಿಮಾ ತಂಡವೇ ಮೊದ ಮೊದಲು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲವಂತೆ. ಆನಂತರ ಸಪ್ತಮಿ ಗೌಡಗೆ ತರಬೇತಿ ಕೊಟ್ಟು, ಕ್ಯಾಮೆರಾ ಮುಂದೆ ನಿಲ್ಲಿಸಿದಂತೆ ರಿಷಬ್. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಈ ಸಿನಿಮಾದಲ್ಲಿ ಸಪ್ತಮಿ ಗೌಡ ನಿರ್ವಹಿಸಿದ್ದು ಡಿಗ್ಲಾಮರ್ ಪಾತ್ರ. ಅದು ಫಾರಿಸ್ಟ್ ಆಫೀಸರ್ (Forest Officer) ರೋಲ್. ಈ ಪಾತ್ರದಲ್ಲಿ ಸಪ್ತಮಿ ಹೇಗೆ ಕಾಣುತ್ತಾರೆ ಎನ್ನುವುದು ಮೊದಲು ತಲೆಬಿಸಿ ಆಗಿತ್ತಂತೆ. ಆದರೆ, ರಿಷಬ್ ಅವರಿಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟತೆ ಇತ್ತು. ಹಾಗಾಗಿ ಅವರು ಹೇಗೆ ಹೇಳಿದರೋ ಹಾಗೆಯೇ ಕೇಳಿದೆ. ನಾನು ಎರಡು ಕಡೆ ಮೂಗು ಚುಚ್ಚಿಕೊಳ್ಳಲು ಕಾರಣ ರಿಷಬ್ ಎಂದಿದ್ದಾರೆ ಸಪ್ತಮಿ ಗೌಡ. ಈ ಸಿನಿಮಾದ ಪಾತ್ರಕ್ಕಾಗಿಯೇ ಅವರು ಮೂಗು ಚುಚ್ಚಿಸಿಕೊಂಡರಂತೆ.

    ಬರೋಬ್ಬರಿ ಒಂದು ತಿಂಗಳ ಕಾಲ ಸಪ್ತಮಿಗೆ ರಿಷಬ್ (Rishabh Shetty) ತರಬೇತಿ ನೀಡಿದ್ದಾರೆ. ಆ ಪಾತ್ರ ಹೇಗೆ ಬರುತ್ತದೆ, ಹೇಗೆ ಇರಲಿದೆ, ಮ್ಯಾನರಿಸಂ ಕೂಡ ಹೀಗಿಯೇ ಇರಬೇಕು ಎಂದು ಪಕ್ಕಾ ತಯಾರಿ ಮಾಡಿಯೇ ಸಪ್ತಮಿ ಅವರನ್ನು ಶೂಟಿಂಗ್ ಗೆ ಕರೆದುಕೊಂಡು ಹೋಗಿದ್ದಾರಂತೆ. ಹಾಗಾಗಿ ತಾವು ಅಂದುಕೊಂಡಂತೆಯೇ ಪಾತ್ರ ಮೂಡಿ ಬಂದಿದೆ ಎನ್ನುವುದು ರಿಷಬ್ ಮಾತು.

    ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.

    ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

    ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]