Tag: Lecturer

  • ಎನ್‍ಎಸ್‍ಎಸ್ ಶಿಬಿರದಲ್ಲಿ ಶಿಕ್ಷಕರ ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಎನ್‍ಎಸ್‍ಎಸ್ ಶಿಬಿರದಲ್ಲಿ ಶಿಕ್ಷಕರ ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಕೋಲಾರ: ಕಾಲೇಜು ವಿದ್ಯಾರ್ಥಿಗಳೊಂದಿಗೆ ಎನ್‍ಎಸ್‍ಎಸ್ ಶಿಬಿರದಲ್ಲಿ ಉಪನ್ಯಾಸಕನೊರ್ವ ಕನ್ನಡದ ಎವರ್ ಗ್ರೀನ್ ಹಾಡುಗಳಿಗೆ ಮಳೆಯಲ್ಲಿಯೇ ಸಖತ್ ಡ್ಯಾನ್ಸ್ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ವೆಂಗದಂದ್ರ ಸರ್ಕಾರಿ ಶಾಲೆಯ ಮೈದಾನದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್ ಸಕತ್ ಸ್ಟೆಪ್ಸ್ ಹಾಕಿ ಫೇಮಸ್ ಆಗಿದ್ದಾರೆ. ಕಳೆದ ಮೂರು ದಿನಗಳಿಂದ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಎನ್‍ಎಸ್‍ಎಸ್ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಸುರಿಯುತ್ತಿರುವ ಮಳೆ ನೀರಿನಲ್ಲಿ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಪರಸ್ಪರ ನೀರೆರಚಿಕೊಂಡು ಡಾನ್ಸ್ ಮಾಡಿದ್ದಾರೆ.

    ಶಿಕ್ಷಕರು ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಆದರೆ ಸಕತ್ ಡಿ.ಜೆ ಸೌಂಡ್‍ಗೆ ಸಾರಾಯಿ ಶೀಸೆಯಲ್ಲಿ ನನ್ನ ದೇವಿ ಕಾಣುವಳು ಎಂಬ ಹಾಡಿಗೆ ಥೇಟ್ ಕುಡುಕರಂತೆ ಉಪನ್ಯಾಸಕ ಸ್ಟೆಪ್ ಹಾಕುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಠ ಪ್ರವಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಉಪನ್ಯಾಸಕ ಹೀಗೆ ಮಕ್ಕಳೊಂದಿಗೆ ನೃತ್ಯ ಮಾಡಿರುವುದು ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಜೊತೆಗೆ ಉಪನ್ಯಾಸಕ ಮಂಜುನಾಥ್‍ಗೆ ವಿರಹ ವೇದನೆ ಕಾಡುತ್ತಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಎನ್‍ಎಸ್‍ಎಸ್ ಶಿಬಿರದ ನೃತ್ಯ ವೈರಲ್ ಆಗಿದ್ದು, ಉಪನ್ಯಾಸಕನ ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವು ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  • ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    – 5 ಸಾವಿರಕ್ಕೂ ಹೆಚ್ಚು ಸಸಿಗಳ ನೆಟ್ಟು ಯುವಕರಿಗೆ ಮಾದರಿ

    ಬಾಗಲಕೋಟೆ: ಪರಿಸರದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆಯಿಂದ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ. ಇದರಿಂದ ಎಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಆದರೆ ಇಲ್ಲೊಬ್ಬರು ಉಪನ್ಯಾಸಕ ನಿವೃತ್ತಿ ಹೊಂದಿದರೂ ಮನೆಯವರೊಂದಿಗೆ ಕಾಲ ಕಳೆಯದೇ, ತಮ್ಮ ನಿವೃತ್ತಿ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.

    ಪರಿಸರ ರಕ್ಷಣೆಗೆ ಮುಂದಾಗಿರುವ ಬಾದಾಮಿ ಪಟ್ಟಣದ ನಿವಾಸಿ ಶಿವರೆಡ್ಡಿ ವಾಸನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಿಸರ್ಗ ಬಳಗ ಎಂಬ ಸಂಘಟನೆ ಹುಟ್ಟುಹಾಕಿ ಸುಂದರ ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ಯುವಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತ, ಇಡೀ ಪಟ್ಟಣವನ್ನೇ ಹಸಿರೀಕರಣ ಮಾಡಲು ಹೊರಟಿದ್ದಾರೆ. ಪಿಯು ಕಾಲೇಜ್‍ನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದ ವಾಸನ್, 63ರ ಇಳಿ ವಯಸ್ಸಿನಲ್ಲಿಯೂ ಪರಿಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಪಟ್ಟಣದ ಸುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹಸರೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ಹೆಚ್ಚುತ್ತಿರುವ ತಾಪಮಾನವನ್ನು ಸಸಿ ನೆಡುವ ಮೂಲಕ ಕಡಿಮೆ ಮಾಡಬೇಕು. ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು ಎಂಬ ಕನಸುಗಳನ್ನು ಹೊತ್ತು ಬಿಡುವಿನ ವೇಳೆಯಲ್ಲಿ ಊರೂರು ಸುತ್ತಿ ಪರಿಸರ ರಕ್ಷಣೆ, ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಂಡಿದ್ದಾರೆ. ಯುವಕರು, ಮಹಿಳೆಯರು, ಶಿಕ್ಷಕರನ್ನೊಳಗೊಂಡ ಸುಮಾರು 50 ಸದಸ್ಯರ ನಿಸರ್ಗ ಬಳಗ ಹುಟ್ಟು ಹಾಕಿ ಚಾಲುಕ್ಯರ ನಾಡನ್ನು ಹಸಿರು ನಾಡು ಮಾಡಲು ಹೊರಟಿದ್ದಾರೆ.

    ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ, ಪಟ್ಟಣದಲ್ಲಿ ಚಾಲುಕ್ಯರ ಆಳ್ವಿಕೆಗೆ ಸಾಕ್ಷಿಯಾದ ಸುಂದರ ಕಲಾಶಿಲ್ಪಗಳಿವೆ. ಇದನ್ನು ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಪಟ್ಟಣ ಮಾತ್ರ ಬಿಸಿಲ ಕೂಪದಲ್ಲಿ ಸುಡುವಂತಿದೆ. ಇದನ್ನರಿತ ಎಸ್.ಎಚ್ ವಾಸನ್, ಬಾದಾಮಿ ಪಟ್ಟಣವನ್ನು ಸುಂದರ ಪರಿಸರದ ಪಟ್ಟಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ, ಪಟ್ಟಣದ ಹಸರೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    ಸಸಿ ನೆಡುವುದರಲ್ಲಿಯೂ ಜಾಣತನ ಮೆರೆದಿರುವ ಇವರು, ಹೊಂಗೆ ಮರದಿಂದ ಮುಂದೊಂದು ದಿನ ಜೈವಿಕ ಇಂಧನ ಸಿಗುತ್ತೆ ಎಂಬ ಉದ್ದೇಶದಿಂದ ಹೆಚ್ಚಾಗಿ ಹೊಂಗೆ ಸಸಿಗಳನ್ನೇ ನೆಡುತ್ತಿದ್ದಾರೆ. ಅಲ್ಲದೆ, ಈ ಹಿಂದಿನ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಭೇಟಿ ಮಾಡಿ, ಬಾದಾಮಿ ಪಟ್ಟಣಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಸಹ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬಾದಾಮಿ ಜನ ಇವರನ್ನು ಪರಿಸರ ಪ್ರೇಮಿ ಎಂದು ಕರೆಯುತ್ತಾರೆ.

  • ಲಿಪ್‍ಸ್ಟಿಕ್ ಹಚ್ಚಂಗಿಲ್ಲ, ಮೇಕಪ್ ಮಾಡಂಗಿಲ್ಲ-ಉಪನ್ಯಾಸಕಿಗೆ ಪ್ರಿನ್ಸಿಪಾಲ್ ಕಿರಿಕ್

    ಲಿಪ್‍ಸ್ಟಿಕ್ ಹಚ್ಚಂಗಿಲ್ಲ, ಮೇಕಪ್ ಮಾಡಂಗಿಲ್ಲ-ಉಪನ್ಯಾಸಕಿಗೆ ಪ್ರಿನ್ಸಿಪಾಲ್ ಕಿರಿಕ್

    ತುಮಕೂರು: ಉಪನ್ಯಾಸಕಿಯೊಬ್ಬರು ಮೇಕಪ್ ಮಾಡಿಕೊಂಡು ಕಾಲೇಜಿಗೆ ಬಂದರೆ ಇಲ್ಲಿನ ಪ್ರಾಂಶುಪಾಲರಿಗೆ ಆಗಲ್ವಂತೆ. ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡ್ರೂ, ಪರಿಚಯದವರ ಬಳಿ ಬೈಕ್‍ನಲ್ಲಿ ಡ್ರಾಪ್ ತೆಗೆದುಕೊಂಡರೂ ಕೆಟ್ಟದಾಗಿ ಕಮೆಂಟ್ ಮಾಡ್ತಾರಂತೆ. ಇದ್ರಿಂದ ರೋಸಿಹೋದ ಉಪನ್ಯಾಸಕಿ ಈಗ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ತುಮಕೂರಿನ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ. ಕನ್ನಡ ಉಪನ್ಯಾಸಕಿ ಜ್ಯೋತಿ (ಹೆಸರು ಬದಲಾಯಿಸಲಾಗಿದೆ)ಅವರಿಗೆ  ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಎದುರೇ ಡ್ರೆಸ್, ಮೈಮಾಟದ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿಸಿದ್ದಾರೆ ಅಲ್ಲದೆ ಲಿಪ್‍ಸ್ಟಿಕ್ ಹಚ್ಚಿ, ಮೇಕಪ್ ಮಾಡಿಕೊಂಡು ಕಾಲೇಜಿಗೆ ಹೋದರೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ ಎಂದು ಜ್ಯೋತಿ ಆರೋಪಿಸುತ್ತಾರೆ.

    ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಜ್ಯೋತಿ ಈಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವಮಾನ, ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತಾ ದೂರು ನೀಡಿದ್ದಾರೆ. ಆದರೆ ಪೊಲೀಸರು ಎನ್‍ಸಿಆರ್ (Non-Cognizable Report) ಮಾಡಿ ಕೈ ತೊಳೆದುಕೊಂಡಿದ್ದಾರೆ. ದೂರು ನೀಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

    ಉಪನ್ಯಾಸಕಿ ಜ್ಯೋತಿ ಮಾಡಿರುವ ಆರೋಪದ ಬಗ್ಗೆ ಪ್ರಾಂಶುಪಾಲ ಪ್ರವೀಣ್ ರಾಜ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂತಾ ಮಾಧ್ಯಮಗಳಿಗೂ ಬೆದರಿಸಿದ್ದಾರೆ. ಯಾರದ್ದು ಸತ್ಯ ಯಾರದ್ದು ಸುಳ್ಳು ಅನ್ನೋದು ತನಿಖೆ ನಂತರವಷ್ಟೇ ತಿಳಿಯಬೇಕಿದೆ.

  • ಓರ್ವನ ಪ್ರತಿಭಟನೆಗೆ 50ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ!

    ಓರ್ವನ ಪ್ರತಿಭಟನೆಗೆ 50ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ!

    ಚಿಕ್ಕಬಳ್ಳಾಪುರ: ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕಿಳಿದ ಉಪನ್ಯಾಸಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

    ಖಾಸಗಿ ಕಾಲೇಜಿನ ಉಪನ್ಯಾಸಕ ಪ್ರದೀಪ್ ಈಶ್ವರ್ ಪೊಲೀಸರು ವಶಕ್ಕೆ ಪಡೆದಾತ. ಅಂದಹಾಗೆ ರಾಜಕೀಯ ಮುಖಂಡ ನವೀನ್ ಕಿರಣ್ ಬೆಂಬಲಿಗ ಉಪನ್ಯಾಸಕ ಪ್ರದೀಪ್ ಈಶ್ವರ್ ಹಾಗೂ ಶಾಸಕ ಸುಧಾಕರ್ ಬೆಂಬಲಿಗ ನಗರಸಭಾ ಸದಸ್ಯ ಗಜೇಂದ್ರ ನಡುವೆ ನಗರಸಭಾ ಆವರಣದಲ್ಲೇ ಗಲಾಟೆ ಆಗಿತ್ತು.

    ಈ ಪ್ರಕರಣದಲ್ಲಿ ಪರಸ್ಪರರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಗಲಾಟೆಯ ಸಂಪೂರ್ಣ ಚಿತ್ರಣ ನಗರಸಭೆ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಆ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡುವಂತೆ ಹಾಗೂ ನಗರಸಭಾ ಸದಸ್ಯ ಗಜೇಂದ್ರನನ್ನ ಬಂಧಿಸುವಂತೆ ಉಪನ್ಯಾಸಕ ಪ್ರದೀಪ್ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಅಮರಣಾಂತ ಸತ್ಯಾಗ್ರಹಕ್ಕೆ ಅವಕಾಶ ಮಾಡಿಕೊಡದ ಪೊಲೀಸರು ಪ್ರದೀಪ್ ಈಶ್ವರನನ್ನ ವಶಕ್ಕೆ ಪಡೆದುಕೊಂಡರು.

    ಈ ವೇಳೆ ಮಾತನಾಡಿದ ಪ್ರದೀಪ್, ಶಾಸಕ ಸುಧಾಕರ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಓರ್ವ ಉಪನ್ಯಾಸಕ ಪ್ರತಿಭಟನೆಗೆ ಮುಂದಾದರೆ ಚಿಕ್ಕಬಳ್ಳಾಪುರ ಪೊಲೀಸರು 50 ಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದರು. ಚಿಕ್ಕಬಳ್ಳಾಪುರ ನಗರ, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲದೆ ಹೆಚ್ಚುವರಿಯಾಗಿ ಶಿಡ್ಲಘಟ್ಟ ನಗರ ಠಾಣಾ ಪಿ ಎಸ್ ಐ ಹಾಗೂ ಗ್ರಾಮಾಂತರ ಠಾಣಾ ಪಿ ಎಸ್ ಐ ಸೇರಿದಂತೆ ಸಿಬ್ಬಂದಿಯನ್ನ ಸಹ ಕರೆಸಿಕೊಂಡಿದ್ದರು. ಇವರು ಸಾಲದೂ ಅಂತ ಒಂದು ಡಿ ಆರ್ ವ್ಯಾನ್ ತುಕಡಿಯೊಂದಿಗೆ ಸಿಬ್ಬಂದಿಯನ್ನ ನಿಯೋಜನೆಗೊಳಿಸಿದ್ದರು.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಅಂತ ಉಪನ್ಯಾಸಕ ಪ್ರದೀಪ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಕೂತು ಪ್ರತಿಭಟನೆ ನಡೆಸಿದ್ದರು. ಇತ್ತ ಪೊಲೀಸ್ ಠಾಣೆ ಬಳಿ ಬಂದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ 50ಕ್ಕೂ ಹೆಚ್ಚು ಮಂದಿ ಪೊಲೀಸರೊಂದಿಗೆ ಪರಿಸ್ಥಿತಿ ನಿಭಾಯಿಸಿ, ಪ್ರದೀಪ್ ಈಶ್ವರ್ ನನ್ನ ವಶಕ್ಕೆ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಬ್ರರಿ, ಲ್ಯಾಬ್‍ಗಳಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ!

    ಲೈಬ್ರರಿ, ಲ್ಯಾಬ್‍ಗಳಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ!

    ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉಮೇಶ್ ನಾಯ್ಕ್ ವಿದ್ಯಾರ್ಥಿಗಳಿಗೆ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಲೆಕ್ಚರರ್ ಬಗ್ಗೆ ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಸ್ಪರ್ಶ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಾಕಷ್ಟು ಬಾರಿ ದೂರು ನೀಡಿದ್ದರೂ ವಿದ್ಯಾರ್ಥಿಗಳಿಗೆ ಆಡಳಿತ ತನಿಖೆ ನಡೆಸಲಿಲ್ಲ. ಈಗ ಕಾಮುಕ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

    ಕ್ಲಾಸ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದೇನೆಂದು ಪಾಧ್ಯಾಪಕ ಬೆದರಿಸುತ್ತಿದ್ದು, ದೂರು ನೀಡಿದರೆ ದಲಿತ ದೌರ್ಜನ್ಯ ಕೇಸ್ ದಾಖಲಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಲೈಬ್ರರಿ ಮತ್ತು ಲ್ಯಾಬ್ ಗಳಲ್ಲಿ ಉಮೇಶ್ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ವಿಶ್ವ ವಿದ್ಯಾಲಯ ಮಾತ್ರ ಜಾಣ ಮೌನ ವಹಿಸಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ದೂರು ಕೊಡಲು ಮುಂದಾದ ವಿದ್ಯಾರ್ಥಿನಿಯರಿಗೆ ಡಾ. ಉಮೇಶ್ ಕಾಲ್ ಮಾಡಿ ಬೆದರಿಕೆ ಹಾಕಿದ್ದು, ಬೆದರಿಕೆಯ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಹುಡುಗಿಯರು ಅಂದ್ರೆ ಬಾಯಿ ಬಾಯಿ ಬಿಡೋ ಕಾಮುಕ- ವಿದ್ಯಾರ್ಥಿಗಳ ಮೇಲೆ ಕಣ್ ಹಾಕೋ ಪ್ರಾಧ್ಯಾಪಕ

    ಹುಡುಗಿಯರು ಅಂದ್ರೆ ಬಾಯಿ ಬಾಯಿ ಬಿಡೋ ಕಾಮುಕ- ವಿದ್ಯಾರ್ಥಿಗಳ ಮೇಲೆ ಕಣ್ ಹಾಕೋ ಪ್ರಾಧ್ಯಾಪಕ

    ಬೆಂಗಳೂರು: ಸಹಾಯಕ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ನಡೆದಿದೆ.

    ವಿಶ್ವನಾಥ್ ಮಹಾರಾಣಿ ಕಾಲೇಜಿನ ಜೀವಾಣು ಶಾಸ್ತ್ರದ ಪ್ರಾಧ್ಯಾಪಕನಾಗಿದ್ದು, ಈತ ಮಾಡೋ ಕೆಲಸ ಮಾತ್ರ ಪ್ರಾಧ್ಯಾಪಕ ವೃತ್ತಿಗೆನೇ ಕಳಂಕ ತರೋವಂತದ್ದು. ಮಹಾರಾಣಿ ವಿಜ್ಞಾನ ಕಾಲೇಜ್ ಕ್ಯಾಂಟೀನ್ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ.

    ವಿಶ್ವನಾಥ್ ವಿದ್ಯಾರ್ಥಿನಿಗಳ ಜೊತೆ ಚೆಲ್ಲಾಟ ಆಡುತ್ತಾನೆ. ಅನೇಕ ವರ್ಷಗಳಿಂದ ಈ ಕಾಲೇಜಿನಲ್ಲೇ ಕೆಲಸ ಮಾಡಿಕೊಂಡಿದ್ದು, ವಿಶ್ವನಾಥ್‍ನಿಗೆ ಕಾಲೇಜಿನಲ್ಲಿ ಹೇಳೋರು ಕೇಳೋರು ಇಲ್ಲ. ಇದರಿಂದಾನೇ ಅತಿಯಾಗಿ ಆಡುತ್ತಿದ್ದಾನೆ ಎಂದು ಹೇಳಲಾಗಿದೆ.

    ವಿಶ್ವನಾಥ್ ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸ್ತಾನೆ. ಅಷ್ಟೇ ಅಲ್ಲದೇ ಕೊಠಡಿಯ ಬೀಗದ ಕೈ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಇನ್ನೂ ರಜಾ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಕಾಲೇಜಿಗೆ ಬಂದು ಕೆಲ ವಿದ್ಯಾರ್ಥಿನಿಯರ ಜೊತೆ ಮಜಾ ಮಾಡುತ್ತಾನೆ.

    ಇನ್ನು ವಿಶ್ವನಾಥ್‍ನ ಈ ಕೆಲಸದಿಂದ ಬೇಸೆತ್ತಿರೋ ಕಾಲೇಜು ಆಡಳಿತ ಮಂಡಳಿ ನೋಟೀಸ್ ಕೂಡಾ ಜಾರಿ ಮಾಡಿದೆ. ಅಷ್ಟೇ ಅಲ್ಲ ಮಹಿಳಾ ಆಯೋಗಕ್ಕೂ ದೂರು ನೀಡಿದೆ.

  • `ಸುಧಾಕರ್ ಹಠಾವೋ ಚಿಕ್ಕಬಳ್ಳಾಪುರ ಬಚಾವೋ’- ಘೋಷಣೆ ಕೂಗಿ ರಾತ್ರೋ ರಾತ್ರಿ ಸಂಚಲನ ಮೂಡಿಸಿದ ಉಪನ್ಯಾಸಕ

    `ಸುಧಾಕರ್ ಹಠಾವೋ ಚಿಕ್ಕಬಳ್ಳಾಪುರ ಬಚಾವೋ’- ಘೋಷಣೆ ಕೂಗಿ ರಾತ್ರೋ ರಾತ್ರಿ ಸಂಚಲನ ಮೂಡಿಸಿದ ಉಪನ್ಯಾಸಕ

    ಚಿಕ್ಕಬಳ್ಳಾಪುರ:“ಸುಧಾಕರ್ ಹಠಾವೋ ಚಿಕ್ಕಬಳ್ಳಾಪುರ ಬಚಾವೋ” ಅಂತ ಘೋಷಣೆ ಕೂಗುವ ಮೂಲಕ ರಾತ್ರೋ ರಾತ್ರಿ ಉಪನ್ಯಾಸಕರೊಬ್ಬರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

    ಶಾಸಕರ ಸ್ವಗ್ರಾಮದವರೇ ಆಗಿರುವ ಹಾಗೂ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಪೇರೇಸಂದ್ರ ಗ್ರಾಮದ ಪ್ರದೀಪ್, ಶಾಸಕ ಡಾ.ಕೆ. ಸುಧಾಕರ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ 15 ದಿನಗಳಿಂದ ಉಪನ್ಯಾಸಕ ಪ್ರದೀಪ್ ಸುಧಾಕರ್ ವಿರುದ್ಧ ದನಿ ಎತ್ತಿದ್ದಾರೆ. ಶಾಸಕರ ವಿರುದ್ಧ ಸೆಲ್ಫಿ ವಿಡಿಯೋ ಮಾಡಿ ನೀವು ಮಾಡ್ತಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದು, ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಹೀಗಾಗಿ ಶಾಸಕರ ಬೆಂಬಲಿಗ ಹಾಗೂ ನಗರಸಭಾ ಸದಸ್ಯ ಗಜೇಂದ್ರ ಎಂಬವರು ಶಾಸಕ ಸುಧಾಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ ಅಂತ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ವಿರುದ್ಧ ಐಪಿಸಿ ಸೆಕ್ಷೆನ್ 107 ರಡಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪ್ರದೀಪ್ ರನ್ನ ಬಂಧಿಸಿದ್ದ ಪೊಲೀಸರು ಮಂಗಳವಾರದಂದು ತಾಲೂಕು ದಂಡಾಧಿಕಾರಿಗಳ ವಿರುದ್ಧ ಹಾಜರುಪಡಿಸಿದ್ರು. ಮುಂದೆ ಈ ರೀತಿ ಮಾಡದಂತೆ ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ಪ್ರದೀಪ್ ಬಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

    ಆದ್ರೆ ಇಷ್ಟು ದಿನ ಶಾಸಕ ಸುಧಾಕರ್ ವಿರುದ್ಧ ದನಿ ಎತ್ತದವರೇ ಇಲ್ಲದ ಕ್ಷೇತ್ರದಲ್ಲಿ ಶಾಸಕರ ವಿರುದ್ಧ ತಿರುಗಿಬಿದ್ದು ಹೊರಬರುತ್ತಿದ್ದಂತೆ ಪ್ರದೀಪ್ ಗೆ ಪಕ್ಷಾತೀತವಾಗಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಾಂಗ್ರೆಸ್ ಶಾಸಕ ಸುಧಾಕರ್ ವಿರುದ್ಧ ಜೆಡಿಎಸ್, ಬಿಜೆಪಿ, ಸೇರಿದಂತೆ ಪಕ್ಷೇತರರವಾಗಿರುವ ರಾಜಕೀಯ ಮುಖಂಡರು ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದೆಡೆ ಪ್ರದೀಪ್ ಗೆ ಹೂವಿನ ಹಾರ, ಜೈಕಾರ ಹಾಕಿ ನಗರದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದ್ರು.

  • ನನ್ನ ಜೊತೆ ಅಡ್ಜಸ್ಟ್ ಆದ್ರೆ ಮಾತ್ರ ಅಂಕ ಎಂದ ಧಾರವಾಡ ವಿವಿ ಪ್ರಾಧ್ಯಾಪಕ!

    ನನ್ನ ಜೊತೆ ಅಡ್ಜಸ್ಟ್ ಆದ್ರೆ ಮಾತ್ರ ಅಂಕ ಎಂದ ಧಾರವಾಡ ವಿವಿ ಪ್ರಾಧ್ಯಾಪಕ!

    ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ನೀನು ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ನಿನಗೆ ಆಂತರಿಕ(ಇಂಟರ್‍ನಲ್) ಅಂಕಗಳನ್ನು ನೀಡುತ್ತೇನೆ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದ್ದು ಈಗ ದೂರು ದಾಖಲಾಗಿದೆ.

    ಕವಿವಿ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದಿನೇಶ್ ನಾರಾಯಣಕರ್ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದಾರೆ. ಮೂರನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿನಿ ದಿನೇಶ್ ವಿರುದ್ಧ ಕುಲಪತಿ ಡಾ. ಪ್ರಮೋದ್ ಗಾಯಿ ಅವರಿಗೆ ಲಿಖಿತ ದೂರನ್ನು ಸಹ ನೀಡಿದ್ದಾರೆ.

    ನನಗೆ ತನ್ನ ಜೊತೆ ಸಹಕರಿಸದೇ ಇದ್ರೆ ಇಂಟರನಲ್ ಅಂಕ ನೀಡಲ್ಲ. ನಿನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್‍ನಲ್ಲಿ ಕ್ಯಾರೆಕ್ಟರ್‍ಲೆಸ್ ಎಂದು ಹಾಕುತ್ತೆನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಮೈಮುಟ್ಟಿ ಮಾತನಾಡುತ್ತಾ ನನ್ನನ್ನು ಡುಮ್ಮಿ ಎಂದು ಕರೆಯುತ್ತಾರೆ. ಹೀಗಾಗಿ ನನಗೆ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ವಿದ್ಯಾರ್ಥಿನಿ 2016ರ ಡಿಸೆಂಬರ್ 19ರಂದು ಕುಲಪತಿ ಅವರಿಗೆ ದೂರು ನೀಡಿದ್ದರೂ ಆಡಳಿತ ಮಂಡಳಿ ಮಾತ್ರ ಇದೂವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

    ಈ ಕುರಿತು ಆರೋಪ ಕೇಳಿಬಂದಿರುವ ಪ್ರಾಧ್ಯಪಕ ದಿನೇಶ್ ಪ್ರತಿಕ್ರಿಯೇ ನೀಡಲು ಹಿಂಜರಿದಿದ್ದಾರೆ. ಸದ್ಯ ಕವಿವಿ ಕುಲಪತಿ ಸೋಮವಾರ ಈ ಬಗ್ಗೆ ಸ್ಪಷ್ಟೀಕರಣ ನೀಡಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟಂತಹ ಹಿರಿಯ ಅಧಿಕಾರಿಗಳು ಆರೋಪ ಕೇಳಿ ಬಂದವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

    https://youtu.be/SLukh9oaADA