Tag: leave letter

  • ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

    ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

    ಲಕ್ನೋ: ಸಾಮಾನ್ಯವಾಗಿ ಯಾವುದೇ ಹಬ್ಬಗಳು ಬಂದಾಗಲೂ ಪೊಲೀಸರಿಗೆ (Police) ಬಿಡುವಿಲ್ಲದ ಕೆಲಸ ಇರುತ್ತದೆ. ಹಾಗಾಗಿ ಸಾಮಾನ್ಯ ದಿನಗಳಿಗಿಂತ ಭದ್ರತೆ ಹೆಚ್ಚಾಗಿಯೇ ಇರುತ್ತದೆ. ಆದ್ರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೋಳಿ (Holi Festival) ಆಚರಿಸಲು 10 ದಿನ ರಜೆ ಕೇಳಿ ಸುದ್ದಿಯಾಗಿದ್ದಾರೆ.

    ಉತ್ತರಪ್ರದೇಶದ (Uttar Pradesh) ಫರೂಕಾಬಾದ್ ಜಿಲ್ಲೆಯ ಇನ್ಸ್‌ಪೆಕ್ಟರ್‌ ಹೋಳಿಗೆ ಮುಂಚಿತವಾಗಿ 10 ದಿನಗಳ ರಜೆ ಕೇಳಿದ್ದಾರೆ. ದಾಂಪತ್ಯ ಕಲಹ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ. ರಜೆಯ ಅರ್ಜಿ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ರಜೆ ಅರ್ಜಿಯಲ್ಲಿ ಏನಿದೆ?
    `ಮದುವೆಯಾಗಿ (Marriage) 22 ವರ್ಷಗಳಾದರೂ ನಾನು ಅತ್ತೆ ಮನೆಗೆ ಹೋಗಿ ಹೋಳಿ ಆಚರಿಸಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಹೆಂಡತಿ ತುಂಬಾ ಕೋಪಗೊಂಡಿದ್ದಾಳೆ. ಈ ಬಾರಿ ಅಲ್ಲಿಗೆ ಹೋಗಲೇಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ರಜೆ ಇಲ್ಲದೆ ಹೋಗಿಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು 10 ದಿನ ಸಾಮಾನ್ಯ ರಜೆ ಒದಗಿಸಿ’ ಎಂದು ಅರ್ಜಿ ಸಲ್ಲಿಸಿದ್ದಾರೆ.

    ಅರ್ಜಿಯನ್ನು ಓದಿದ ನಂತರ ಎಸ್ಪಿ ಅಶೋಕ್ ಕುಮಾರ್ ಮಾರ್ಚ್ 4 ರಿಂದ ಇನ್ಸ್‌ಪೆಕ್ಟರ್‌ಗೆ 5 ದಿನಗಳ ಸಾಮಾನ್ಯ ರಜೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

  • ಹುಡ್ಗೀರ ಕಾಟ ತಡೆಯಲು ಆಗ್ತಿಲ್ಲ, 5 ದಿನ ರಜೆ ಕೊಡಿ: ವಿದ್ಯಾರ್ಥಿಯ ರಜಾರ್ಜಿ ವೈರಲ್

    ಹುಡ್ಗೀರ ಕಾಟ ತಡೆಯಲು ಆಗ್ತಿಲ್ಲ, 5 ದಿನ ರಜೆ ಕೊಡಿ: ವಿದ್ಯಾರ್ಥಿಯ ರಜಾರ್ಜಿ ವೈರಲ್

    ಚಾಮರಾಜನಗರ: ವಿದ್ಯಾರ್ಥಿಯೊಬ್ಬ ಫೆಬ್ರವರಿ 14ರಂದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ರಜೆ ಕೇಳಿ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ದ್ವೀತಿಯ ಬಿ.ಕಾಂ ವಿದ್ಯಾರ್ಥಿ ಎಸ್ ಶಿವರಾಜು ವಿಕ್ಟರ್ ರಜೆ ಕೋರಿ ಪತ್ರ ಬರೆದಿದ್ದಾನೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಪತ್ರದಲ್ಲಿ ಏನಿದೆ..?
    ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹುಡುಗಿಯರ ಕಾಟ ತಡೆಯಲು ಆಗ್ತಿಲ್ಲ. ಹೀಗಾಗಿ ನನಗೆ ಐದು ದಿನ ರಜೆ ಕೋರಿ ಎಂದು ರಜಾರ್ಜಿ ಬರೆದಿದ್ದಾನೆ. ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವಿದ್ಯಾರ್ಥಿಯ ರಜಾರ್ಜಿ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ಕಾಮೆಂಟ್ ಗಳು ಬಂದಿವೆ.

  • ಚಿತ್ರ ವೀಕ್ಷಣೆಗಾಗಿ ರಜೆ ಕೇಳಿದ ಗ್ರಾಮ ಪಂಚಾಯ್ತಿ ನೌಕರ

    ಚಿತ್ರ ವೀಕ್ಷಣೆಗಾಗಿ ರಜೆ ಕೇಳಿದ ಗ್ರಾಮ ಪಂಚಾಯ್ತಿ ನೌಕರ

    ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರ ವೀಕ್ಷಿಸಲು ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ರಜೆ ಕೋರಿ ಪತ್ರ ಬರೆದಿದ್ದಾರೆ.

    ಅನಿಲ್ ಚೌಹಾನ್ ರಜೆ ಪತ್ರ ಕಳುಹಿಸಿದ ನೌಕರ. ಅನಿಲ್ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಪಂಚಾಯ್ತಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನಿಲ್, ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ ಆಗಿದ್ದು, ಗುರುವಾರ ಬಿಡುಗಡೆ ಆಗುತ್ತಿರುವ ನಟಸಾರ್ವಭೌಮ ಚಿತ್ರ ವೀಕ್ಷಿಸಲು ರಜೆ ಕೋರಿದ್ದಾರೆ.

    ಅನಿಲ್ ಅವರು ಪಂಚಾಯ್ತಿ ಪಿಡಿಓ ಹಿರೇಮಠ್ ಅವರಿಗೆ ವಾಟ್ಸಪ್ ಮೂಲಕ ರಜೆ ಪತ್ರ ಕಳುಹಿಸಿದ್ದಾರೆ. ಅನಿಲ್ ಅವರ ರಜೆ ಕೋರಿಕೆಗೆ ಪಿಡಿಓ ಹಿರೇಮಠ್ ಅವರು ರಜೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ಪತ್ರದಲ್ಲಿ ಏನಿದೆ?
    ನಟಸಾರ್ವಭೌಮ ಚಿತ್ರ ಬಾಗಲಕೋಟೆಯಲ್ಲಿ ಫೆ. 7ರಂದು ನೋಡಲು ರಾಜ್ಯಾದ್ಯಂತ ಈ ಚಿತ್ರವು ಬಿಡುಗಡೆ ಆಗಲಿದೆ. ಈ ಚಿತ್ರ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಎಲ್ಲಾ ವಯಸ್ಸಿನವರು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು ಹಾಗೂ ಚಿತ್ರದ ನಟ ನಮ್ಮ ರಾಜಕುಮಾರ ಅವರ ಹೆಮ್ಮೆಯ ತೃತೀಯ ಮಗನಾದ ಪುನೀತ್ ರಾಜ್‍ಕುಮಾರ್ ಅವರಾಗಿದ್ದು, ಹಾಗಾಗಿ ನಾನು ನಟಸಾರ್ವಭೌಮ ಚಿತ್ರ ನೋಡಲು ದಿನಾಂಕ 7ರಂದು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿರುವುದರಿಂದ ನಾನು ಒಂದು ದಿನದ ರಜೆಯನ್ನು ಕೋರಿರುತ್ತೇನೆ. ಆದ್ದರಿಂದ ನನಗೆ ಕಾರ್ಯಾಲಯಕ್ಕೆ ಹಾಜರಾಗಲು ಆಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿನಿಮಾ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. `ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರವನ್ನು ವೀಕ್ಷಿಸಲು ವಿದ್ಯಾರ್ಥಿನಿಯೊಬ್ಬಳು ರಜೆ ಕೋರಿ ಪತ್ರ ಬರೆದಿರುವ ಫೋಟೋ ವೈರಲ್ ಆಗಿದೆ.

    ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ನಿಸರ್ಗ ಸಿನಿಮಾ ವೀಕ್ಷಿಸಲು ರಜೆ ನೀಡುವುದಾಗಿ ಪತ್ರ ಬರೆದಿದ್ದಾರೆ. ಈ ಪತ್ರದ ಫೋಟೋವನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, “ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ನನಗೆ ನಗು ತಡೆಯಲು ಆಗುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನಟಸಾರ್ವಭೌಮ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರ ಕುಟುಂಬದ ಎಲ್ಲ ಸದಸ್ಯರು ಹಾಗೂ ಎಲ್ಲ ವಯಸ್ಸಿನವರು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು ಹಾಗೂ ಚಿತ್ರದ ನಾಯಕನಟ ನಮ್ಮ ರಾಜ್‍ಕುಮಾರ್ ಅವರ ಹೆಮ್ಮೆಯ ತೃತೀಯ ಸುಪುತ್ರನಾದ ಪುನೀತ್ ರಾಜ್‍ಕುಮಾರ್ ಅವರಾಗಿದ್ದು, ಹಾಗೂ ಹೀಗಿನ ಮಕ್ಕಳ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಹಾಗಾಗಿ ನಾನು ನಟಸಾರ್ವಭೌಮ ಚಿತ್ರವನ್ನು ನೋಡಲು ಫೆ.8ರಂದು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿರುವುದರಿಂದ ನಾನು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ರಜೆ ನೀಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ಎಂದು ಬರೆದಿದ್ದಾರೆ.

    ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಮುಂಬೈ: ಎರಡು ದಿನದ ರಜಾ ಅರ್ಜಿಯನ್ನು ತರದಕ್ಕೆ 10 ವರ್ಷದ ಬಾಲಕಿಗೆ ಚೆನ್ನಾಗಿ ಥಳಿಸಿದ್ದ ಮುಂಬೈ ಶಾಲೆಯೊಂದರ ತರಗತಿ ಶಿಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ.

    ಈ ಘಟನೆ ನಗರದ ಮುನ್ಸಿಪಲ್ ಕಾರ್ಪೋರೇಷನ್ ನಡೆಸಲ್ಪಡುವ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆಯಿಂದ ಅಮನಾತಾದ ಶಿಕ್ಷಕನನ್ನು ಶ್ರೀಕೃಷ್ಣ ಕೆಂಜಾಲೆ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: 5ನೇ ತರಗತಿಯಲ್ಲಿ ಓದುತ್ತಿದ್ದ ಬಿಹಾದ ಮೂಲದ ವಿದ್ಯಾರ್ಥಿನಿ ಹೊಟ್ಟೆ ನೋವು ಅಂತ ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಆದ್ರೆ ರಜೆ ಕಳೆದು ಶಾಲೆಗೆ ಹೋಗಬೇಕಿದ್ರೆ ಆಕೆ ರಜೆಯ ಅರ್ಜಿಯನ್ನು ತೆದುಕೊಂಡು ಹೋಗಲು ಮರೆತಿದ್ದಳು. ಇದರಿಂದ ಸಿಟ್ಟುಗೊಂಡ ಶಿಕ್ಷಕ ಆಕೆಗೆ ಶಿಕ್ಷೆಯಾಗಿ ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿಯ ಬಲಗೈಯಲ್ಲಿ ಬಾಸುಂಡೆ ಬಂದಿದೆ.

    ಬುಧವಾರ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಕಟ್ಟಡ ಕಾರ್ಮಿಕರಾಗಿದ್ದು ಈ ವಿಚಾರವನ್ನು ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಜಾಧವ್ ಅವರು ಪುಣೆ ನಗರಾಯುಕ್ತರಿಗೆ ವಿಷಯ ತಿಳಿಸುತ್ತಾರೆ. ಜಾಧವ್ ಮಾಹಿತಿಯಂತೆ ಅವರು ಚಿಕಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆಯ ಬಗ್ಗೆ ಬಾಲಕಿ ಅಥವಾ ಆಕೆಯ ತಂದೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿ ನಗರದ ಯಶ್ವಂತ್ ರಾವ್ ಚೌಹಾಣ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಅಷ್ಟಕ್ಕೂ ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು. ಸದ್ಯ ಪ್ರಕರಣ ಸಂಬಂಧ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಅಂತ ಶಿಕ್ಷಣಾಧಿಕಾರಿ ಬಿ ಎಸ್ ಅವಾರಿ ತಿಳಿಸಿದ್ದಾರೆ.

  • ರಜೆ ಅಂತಾ ಲೆಟರ್ ಕೊಟ್ರೆ ರಾಜೀನಾಮೆ ಎಂದು ಮನೆಗೆ ಕಳಿಸಿದ್ರು

    ರಜೆ ಅಂತಾ ಲೆಟರ್ ಕೊಟ್ರೆ ರಾಜೀನಾಮೆ ಎಂದು ಮನೆಗೆ ಕಳಿಸಿದ್ರು

    ರಾಯಚೂರು: ಅನಕ್ಷರತೆ ಅನ್ನೋದು ಒಂದೊಂದು ಸಾರಿ ಎಷ್ಟು ದೊಡ್ಡ ಯಡವಟ್ಟಿಗೆ ದಾರಿ ಮಾಡಿಕೊಡುತ್ತದೆ ಅಂದ್ರೆ ರಾಯಚೂರಿನಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ತನ್ನ ಹೆಸರು ಬಿಟ್ಟು ಬೇರೆ ಏನನ್ನೂ ಬರೆಯಲು ಬಾರದ ಸಹಾಯಕಿಯ ರಜೆಯ ಪತ್ರ ರಾಜೀನಾಮೆ ಪತ್ರವಾಗಿ ಸರ್ಕಾರ ಅದನ್ನ ಅಂಗೀಕರಿಸಿ ಮನೆಗೆ ಕಳುಹಿಸಿದೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿಹಾಳ ಕ್ಯಾಂಪ್ ಅಂಗನವಾಡಿ ಸಹಾಯಕಿ ಭೀಮಮ್ಮ ಮಾರ್ಚ್ 1, 2017 ರಂದು ರಜೆ ಪತ್ರ ನೀಡಿದ್ದರು. ರಜೆ ಮೇಲೆ ತೆರಳಿದ ಭೀಮಮ್ಮ ನಾಲ್ಕೈದು ದಿನ ತಡವಾಗೇ ಕೆಲಸಕ್ಕೆ ಹಾಜರಾಗಿದ್ದಾರೆ. ಆದ್ರೆ ಓದಲು, ಬರೆಯಲು ಬಾರದ ಭೀಮಮ್ಮ ಅಂಗನವಾಡಿ ಕಾರ್ಯಕರ್ತೆಗೆ ಬಿಳಿ ಹಾಳೆಯ ಮೇಲೆ ಸಹಿ ಮಾಡಿ ಕೊಟ್ಟಿದ್ದೇ ಯಡವಟ್ಟಾಗಿದೆ.

    ರಜೆ ಪತ್ರ ಬರೆಯುವ ಬದಲಾಗಿ ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ಬರೆದು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಸಿಂಧನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾ ಬಾಯಿ ರಾಜೀನಾಮೆಯನ್ನ ಶಿಫಾರಸ್ಸು ಮಾಡಿದ್ದಾರೆ. ಈಗ ಜೂನ್ 13 ಕ್ಕೆ ರಾಜೀನಾಮೆಯನ್ನ ಅಂಗೀಕರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದ್ರೆ ಏನೂ ತಿಳಿಯದೆ ಕೆಲಸಕ್ಕೆ ಹೋದ ಭೀಮಮ್ಮನಿಗೆ ಶಾಕ್ ಹೊಡೆದಂತಾಗಿದೆ.

    ಖಾಲಿ ಹಾಳೆಯ ಮೇಲೆ ಸಹಿ ಮಾಡಿ ಹೇಳಿದ್ದಕ್ಕಿಂತ ಹೆಚ್ಚು ದಿನ ರಜೆ ತೆಗೆದುಕೊಂಡಿದ್ದೇ ಕೆಲಸಕ್ಕೆ ಕುತ್ತು ತಂದಿದೆ. ಹೇಳದೆ ಕೇಳದೆ ರಜೆ ತೆಗೆದುಕೊಳ್ಳುತ್ತಿದ್ದರಿಂದ ಈ ರೀತಿ ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕ್ರಮ ಕೈಗೊಳ್ಳುವ ಬದಲು ಅನಕ್ಷರತೆಯನ್ನ ದುರ್ಬಳಕೆ ಮಾಡಿಕೊಂಡು ಅಂಗನವಾಡಿ ಸಹಾಯಕಿಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.

    ಒಟ್ನಲ್ಲಿ, ಓದು, ಬರಹ ಬಾರದ ಅನಕ್ಷರಸ್ಥೆ ಈಗ ಕೆಲಸ ಕಳೆದುಕೊಂಡಿದ್ದಾರೆ. ಆದ್ರೆ ಪಿತೂರಿ ಮಾಡಿ ವ್ಯಾಪ್ತಿಮೀರಿ ರಾಜೀನಾಮೆ ಪತ್ರ ಬರೆದು ಮೇಲಾಧಿಕಾರಿಗಳಿಗೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ದೂರು ನೀಡಲು ಭೀಮಮ್ಮ ಮುಂದಾಗಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ಕೆಲಸ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.