Tag: leave

  • ಕರಸೇವಕರ ಅರೆಸ್ಟ್‌ ಮಾಡಿದ್ದ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆ – ಪ್ರಶ್ನೆಗೆ ಕಾರಣವಾಯ್ತು ಸರ್ಕಾರದ ನಡೆ

    ಕರಸೇವಕರ ಅರೆಸ್ಟ್‌ ಮಾಡಿದ್ದ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆ – ಪ್ರಶ್ನೆಗೆ ಕಾರಣವಾಯ್ತು ಸರ್ಕಾರದ ನಡೆ

    ಹುಬ್ಬಳ್ಳಿ: ಕರಸೇವಕರ ಬಂಧನ ಮಾಡಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರ ಈಗ ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ (Judicial Custody) ಕಳುಹಿಸಿದ್ದ ಶಹರ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಸರ್ಕಾರ ಕಳುಹಿಸಿದೆ.

    ಶ್ರೀಕಾಂತ್‌ ಪೂಜಾರಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದ ಮಹಮದ್ ರಫೀಕ್ (Mohammad Rafiq) ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಅವರ ಜಾಗಕ್ಕೆ ಪ್ರಭಾರಿ ಇನ್ಸ್‌ಪೆಕ್ಟರ್‌ (Inspector) ಆಗಿ ಬಿಎ ಜಾಧವ್ ಅವರನ್ನು ನೇಮಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಬಿಎ ಜಾಧವ್‌ಗೆ ಪ್ರಭಾರಿ ಠಾಣಾಧಿಕಾರಿಯಾಗಿ ಹೆಚ್ಚುವರಿ ಅಧಿಕಾರ ನೀಡಿದ್ದಾರೆ.  ಇದನ್ನೂ ಓದಿ: ಕರಸೇವಕರ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು: ಬಿ.ವೈ.ವಿಜಯೇಂದ್ರ

     

    ಡಿ. 29 ರಂದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇನ್ಸಪೆಕ್ಟರ್ ಅಮಾನತಿಗೆ  ಆಗ್ರಹಿಸಿ ಬಿಜೆಪಿ ನಾಯಕರು ಭಾರೀ ಪ್ರತಿಭಟನೆ ನಡೆಸಿದ್ದರು.

     
    ಹಳೇಯ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಬಂಧನ ಮಾಡಲಾಗಿದೆ. ಇದರಲ್ಲಿ  ಯಾವುದೇ ರಾಜಕೀಯ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ಠಾಣೆಯ ಇನ್ಸ್‌ಪೆಕ್ಟರ್‌ ರಫೀಕ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ಅಗತ್ಯವೇ ಇರಲಿಲ್ಲ. ಕಾನೂನು ಪ್ರಕಾರವೇ ನಡೆದುಕೊಂಡಿದ್ದರೆ ಪ್ರಭಾರಿಯನ್ನು ನೇಮಿಸುವ ಅಗತ್ಯವೇ ಇರಲಿಲ್ಲ.

    ಕಡ್ಡಾಯ ರಜೆಯ ಮೇಲೆ ಇನ್ಸ್‌ಪೆಕ್ಟರ್‌ ಅವರನ್ನು ಬಂಧಿಸಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಆ ಜಾಗಕ್ಕೆ ಜಾದವ್‌ ಅವರಿಗೆ ಪ್ರಭಾರ ಅಧಿಕಾರ ಕೊಟ್ಟಿದ್ದು ಯಾಕೆ? ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೆ ಈ ತಂತ್ರ ಮಾಡಿದ್ಯಾ ಎಂಬ ಹಲವು ಪ್ರಶ್ನೆಗಳು ಈಗ ಎದ್ದಿದೆ.

     

  • ಸಾಲು ಸಾಲು ರಜೆ – ಬಸ್ ಟಿಕೆಟ್ ದರ ದುಪ್ಪಟ್ಟು!

    ಸಾಲು ಸಾಲು ರಜೆ – ಬಸ್ ಟಿಕೆಟ್ ದರ ದುಪ್ಪಟ್ಟು!

    – ಖಾಸಗಿ ಬಸ್ ಟಿಕೆಟ್ ದರದಲ್ಲಿ 50% ಏರಿಕೆ

    ಬೆಂಗಳೂರು: ಶನಿವಾರದಿಂದ ಸಾಲು ಸಾಲು ರಜೆಗಳು ಆರಂಭವಾಗ್ತಿವೆ. ನಾಲ್ಕು ದಿನದ ರಜೆ ಕಳೆಯಲು, ಊರಿಗೆ ಹೋಗೋ ಪ್ಲಾನ್ ಮಾಡಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

    ಹೌದು, ಆಗಸ್ಟ್ 15ರ ಹಿನ್ನೆಲೆ ನಾಲ್ಕು ದಿನ ಸಾಲು ಸಾಲು ರಜೆಗಳು ಬರುತ್ತಿವೆ. ಶನಿವಾರ, ಭಾನುವಾರ, ಮಂಗಳವಾರ ಆಗಸ್ಟ್ 15ರ ರಜೆ, ಸೋಮವಾರ ಸೇರಿ ನಾಲ್ಕು ದಿನ ರಜೆ ಸಿಗಲಿದೆ. ಹೀಗಾಗಿ ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಕೆಎಸ್‍ಆರ್ ಟಿಸಿ ಬಸ್‍ಗಳಲ್ಲಿ ಶಕ್ತಿ ಯೋಜನೆಯಿಂದ ಬಸ್‍ಗಳು ರಶ್ ಆಗ್ತಿವೆ. ಹೀಗಾಗಿ ಜನ ಖಾಸಗಿ ಬಸ್‍ಗಳತ್ತ (Private Bus) ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಹೆಚ್ಚಿಸಿದ್ದಾರೆ. ಇಂದು ರಾತ್ರಿ ಹಾಗೂ ಶನಿವಾರ ರಾತ್ರಿ ಹೊರಡುವ ಖಾಸಗಿ ಬಸ್‍ಗಳ ದರವನ್ನು ದುಪ್ಪಟ್ಟು ಮಾಡಿದೆ. ಟಿಕೆಟ್ ದರ ಒನ್ ಟು ಡಬ್ಬಲ್ ಮಾಡಿದ್ದಕ್ಕೆ ಪ್ರಯಾಣಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹೆಚ್ಚು ಹೆಚ್ಚು ಬಸ್ ಟಿಕೆಟ್ ಬುಕ್ಕಿಂಗ್ ಆಗ್ತಿದ್ದಂತೆ ಏಕಾಏಕಿ ಟಿಕೆಟ್ ದರವನ್ನು ಖಾಸಗಿ ಬಸ್ ಮಾಲೀಕರು ಏರಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆಪ್‍ನಲ್ಲಿ ಒನ್ ಟು ಡಬಲ್ ರೇಟ್ ತೋರಿಸುತ್ತಿವೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಹೊರಗೆ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

    ಇಂದು ರಾತ್ರಿಯ ಬಸ್ ಟಿಕೆಟ್ ದರ ಎಷ್ಟಿದೆ?
    * ಬೆಂಗಳೂರು TO ಶಿವಮೊಗ್ಗ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 450 ರೂ. ನಿಂದ 550 ರೂ. – ಇಂದಿನ ಟಿಕೆಟ್ ದರ 1,200 ರೂ.
    * ಬೆಂಗಳೂರು TO ಹುಬ್ಬಳ್ಳಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 700 ರೂ. -900 ರೂ.- ಇಂದಿನ ಟಿಕೆಟ್ ದರ 1,600 ರೂ.
    * ಬೆಂಗಳೂರು TO ಮಂಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 850 ರೂ. – 900 ರೂ. – ಇಂದಿನ ಟಿಕೆಟ್ ದರ 1,400 ರೂ. – 2,100 ರೂ.
    * ಬೆಂಗಳೂರು TO ಉಡುಪಿ (ಎಸಿ ಬಸ್): ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 1000 ರೂ. – 1200 ರೂ.- ಇಂದಿನ ಟಿಕೆಟ್ ದರ 2100 ರೂ. – 3500 ರೂ.

    * ಬೆಂಗಳೂರು TO ಧಾರವಾಡ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 800 ರೂ. – 1000 ರೂ. – ಇಂದಿನ ಟಿಕೆಟ್ ದರ 1,300 ರೂ. – 1,600 ರೂ.
    * ಬೆಂಗಳೂರು TO ಬೆಳಗಾವಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 1100 ರೂ. – ಇಂದಿನ ಟಿಕೆಟ್ ದರ 1,200 ರೂ. – 1,900 ರೂ.
    * ಬೆಂಗಳೂರು TO ದಾವಣಗೆರೆ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 500 ರೂ. – 700 ರೂ. – ಇಂದಿನ ಟಿಕೆಟ್ ದರ 750 ರೂ. – 1200 ರೂ.
    * ಬೆಂಗಳೂರು TO ಚಿಕ್ಕಮಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 650 ರೂ. – 800 ರೂ.- ಇಂದಿನ ಟಿಕೆಟ್ ದರ 1500 ರೂ.
    * ಬೆಂಗಳೂರು TO ಹಾಸನ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 950 ರೂ.- ಇಂದಿನ ಟಿಕೆಟ್ ದರ 1,300 ರೂ. – 1,800 ರೂ.

    ಒಟ್ಟಿನಲ್ಲಿ ಈ ಖಾಸಗಿ ಬಸ್‍ಗಳ ಹಗಲು ದರೋಡೆಗೆ ಪ್ರಯಾಣಿಕರು ರೋಸಿಹೋಗಿದ್ದು, ಊರುಗಳಿಗೆ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಿಕೊಳ್ಳಬೇಕಾ ಅಥವಾ ದುಪ್ಪಟ್ಟು ಹಣ ಕೊಟ್ಟು ಹೋಗಬೇಕಾ ಅನ್ನೋ ಗೊಂದಲದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾದಗಿರಿಯಲ್ಲಿ ಭಾರೀ ಮಳೆ- ಶಾಲೆಗಳಿಗೆ ಇಂದು ರಜೆ ಘೋಷಣೆ

    ಯಾದಗಿರಿಯಲ್ಲಿ ಭಾರೀ ಮಳೆ- ಶಾಲೆಗಳಿಗೆ ಇಂದು ರಜೆ ಘೋಷಣೆ

    ಯಾದಗಿರಿ: ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ (Hevay Rain In Yadagiri) ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ (Leave) ಘೋಷಣೆ ಮಾಡಲಾಗಿದೆ.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ಒಂದು ದಿನ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಯಾ ತಹಶೀಲ್ದಾರ್ ಮೂಲಕ ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ. ಯಾದಗಿರಿ, ಸುರಪುರ, ಹುಣಸಗಿ, ಶಹಾಪುರ, ವಡಗೇರಾ ಹಾಗೂ ಗುರಮಠಕಲ್ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಇಂದು ಕೂಡ ಹೆಚ್ಚಿನ ಪ್ರಮಾಣದ ಮಳೆ ಬರುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ (Weather Department) ನೀಡಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಪ್ರಾಥಮಿಕ, ಪ್ರೌಢ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳ ರಜೆ ಘೋಷಿಸಲಾಗಿದೆ. ರಜಾ ದಿನ ಅವಧಿ ಸರಿದೂಗಿಸಲು ಭಾನುವಾರ ಶಾಲೆಗಳನ್ನು ಯಥಾ ಪ್ರಕಾರ ನಡೆಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ದೇವಸ್ಥಾನಗಳಿಗೆ `ಶಕ್ತಿ’ ತುಂಬಿದ ನಾರಿಯರು – ಒಂದೇ ತಿಂಗಳಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!

    ಗುರುವಾರ ತಡರಾತ್ರಿ ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆ ಹೊಡೆತಕ್ಕೆ ಯಾದಗಿರಿ ನಗರದ ರಸ್ತೆಗಳು ಜಲಾವೃತವಾಗಿವೆ. ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವುದರಿಂದ ವಾಹನ ಸವಾರರು ಪರದಾಡಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ರೈಲ್ವೆ ಸ್ಟೇಷನ್ ರಸ್ತೆ ಜಲಾವೃತಗೊಳ್ಳುತ್ತಿದ್ದು, ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ

    ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

    ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿಗೆ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಉಳಿದೆಡೆ ತಹಶೀಲ್ದಾರ್ ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಿದ್ದಾರೆ.

    ಮಳೆ ಪರಿಸ್ಥಿತಿ ನೋಡಿಕೊಂಡು ಆಯಾ ತಾಲೂಕು ತಹಶೀಲ್ದಾರ್ ಗಳು ರಜೆ ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ದ.ಕ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ಸೋಮವಾರ ಸಂಜೆ ವೇಳೆಗೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆ (Heavy Rain In Dakshina Kannada) ಜನ ಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿತ್ತು. ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ನಗರದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಪಂಪ್‍ವೆಲ್ ಸರ್ಕಲ್‍ನಲ್ಲಿ ಪಕ್ಕದ ಚರಂಡಿ ತುಂಬಿ ರಸ್ತೆ ಜಲಾವೃತವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು.

    ಪಂಪ್‍ವೆಲ್ ಸರ್ಕಲ್‍ನಲ್ಲಿ (Pumpwell Circle) ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದಾಗಿನಿಂದ ಈ ಸಮಸ್ಯೆ ಇದೆ. ಫ್ಲೈಓವರ್‍ನ ಅಡಿ ಭಾಗದಲ್ಲಿ ನಗರಕ್ಕೆ ಹೋಗೋ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ. ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರೋದ್ರಿಂದ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಐದಾರು ವರ್ಷದಿಂದ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಹೀಗಾಗಿ ಈ ಸಮಸ್ಯೆ ಪ್ರತೀ ವರ್ಷದ ಮೊದಲ ಮಳೆಗೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 24 ವರ್ಷಗಳ ಸೇವೆಯಲ್ಲಿ ಬರೋಬ್ಬರಿ 20 ವರ್ಷ ರಜೆ ಹಾಕಿದ ಶಿಕ್ಷಕಿ ವಜಾ

    24 ವರ್ಷಗಳ ಸೇವೆಯಲ್ಲಿ ಬರೋಬ್ಬರಿ 20 ವರ್ಷ ರಜೆ ಹಾಕಿದ ಶಿಕ್ಷಕಿ ವಜಾ

    ರೋಮ್: 24 ವರ್ಷಗಳ ತಮ್ಮ ಸುದೀರ್ಘ ಸೇವೆಯಲ್ಲಿ ಬರೋಬ್ಬರಿ 20 ವರ್ಷ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿರುವ ಶಿಕ್ಷಕಿಯನ್ನು ಕೊನೆಗೂ ವಜಾ ಮಾಡಲಾಗಿದೆ. ಅಲ್ಲದೆ ಈಕೆಗೆ ‘ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ’ ಎಂಬ ಪಟ್ಟವನ್ನು ನೀಡಲಾಗಿದೆ.

    ಶಿಕ್ಷಕಿಯನ್ನು ಸಿಂಜಿಯಾ ಪಾವೊಲಿನಾ ಡಿ ಲಿಯೊ (Cinzia Paolina De Lio) ಎಂದು ಗುರುತಿಸಲಾಗಿದೆ. ಈಕೆ ವೆನಿಸ್ (Venice) ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇದನ್ನೂ ಓದಿ: France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    ಲಿಯೋ ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ಪಾಠ ಮಾಡಲು ತರಗತಿಗೆ ಹೋಗಿಲ್ಲ. ಮೊದಲ 10 ವರ್ಷ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು. ಉಳಿದ 14 ವರ್ಷ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ವಿಶೇಷ ಅಂದರೆ ಕರ್ತವ್ಯಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಇಟಲಿಯ ಶಿಕ್ಷಣ ಸಚಿವಾಲಯ ಹೇಳಿದೆ.

    ಮಕ್ಕಳ ಪರೀಕ್ಷೆ ಸಂದರ್ಭದಲ್ಲಿಯೂ ಶಾಲೆಗೆ ರಜೆ ಹಾಕುತ್ತಿದ್ದ ಲಿಯೋ, ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಅಲ್ಲದೆ ಈ ಬಗ್ಗೆ ಆಕೆಗೆ ಮೇಸೆಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳನ್ನು ಗದರುತ್ತಿದ್ದಳು. ಇನ್ನು ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದಳು. ಇದನ್ನೂ ಓದಿ: ಉಪ್ಪಿನ ಕಣಕ್ಕಿಂತ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷ ರೂ.ಗೆ ಸೇಲ್

    ಶಿಕ್ಷಕಿಯ ವರ್ತನೆಯಿಂದ ಬೇಸತ್ತ ಶಾಲೆಯ ವಿದ್ಯಾರ್ಥಿಗಳು ಜೂನ್ 22ರಂದು ಮುಷ್ಕರ ನಡೆಸಿದ್ದರು. ಆ ಬಳಿಕ ಶಿಕ್ಷಕಿಯನ್ನು ವಜಾಗೊಳಿಸಲಾಗಿತ್ತು. ಆದರೆ ಲಿಯೋ, ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು, ಶಿಕ್ಷಕಿಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿತು. ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.‌

    ರಜೆಯ ಕಾರಣಗಳು: ಲಿಯೋ ಕಳೆದ 2 ವರ್ಷಗಳಲ್ಲಿ 67 ದಿನ ಅನಾರೋಗ್ಯ ರಜೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾಳೆ. ಅದರಲ್ಲಿ ಅಪಘಾತಗಳ ಕಾರಣದಿಂದಾಗಿ ಸುದೀರ್ಘ ರಜೆ ಜೊತೆಗೆ ತನ್ನ ಮಗುವನ್ನು ನೋಡಿಕೊಳ್ಳಲು ಮಾತೃತ್ವ ರಜೆ, ಮಗುವಿನ ಅನಾರೋಗ್ಯ, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಲು ರಜೆ ಇಷ್ಟು ಮಾತ್ರವಲ್ಲದೇ ಅಂಗವೈಕಲ್ಯ ಹೊಂದಿರುವ ಸಂಬಂಧಿಕರಿಗೆ ಸಹಾಯ ಮಾಡಲು ಸಹ ರಜೆಯನ್ನು ಪಡೆದಿದ್ದಳು. ಹೀಗಾಗಿ ಇಟಾಲಿಯನ್ ಸರ್ವೋಚ್ಚ ನ್ಯಾಯಾಲಯವು ಆಕೆ ಶಿಕ್ಷಕ ವೃತ್ತಿಗೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್‌ಟೇಬಲ್

    ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್‌ಟೇಬಲ್

    ಲಕ್ನೋ: ಪತ್ನಿ (Wife) ಕೋಪಿಸಿಕೊಂಡಿದ್ದಾಳೆ ಸಮಾಧಾನ ಪಡಿಸಬೇಕು ಎಂದು ಉತ್ತರಪ್ರದೇಶದ (Uttar Pradesh) ಕಾನ್ಸ್‌ಟೇಬಲ್‍ನೊಬ್ಬ (Constable) ಬರೆದಿರುವ ರಜಾ (Leave) ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಾನ್ಸ್‌ಟೇಬಲ್‍ ಕಳೆದ ತಿಂಗಳು ವಿವಾಹವಾಗಿದ್ದರು. ಅಂದಿನಿಂದ ಅವರು ಉತ್ತರ ಪ್ರದೇಶದ ಮಹಾರಾಜ್‍ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಇಂಡೋ-ನೇಪಾಳ ಗಡಿಯಲ್ಲಿರುವುದರಿಂದ ಅವರಿಗೆ ರಜೆ ಸಿಗುತ್ತಿರಲಿಲ್ಲ. ಇದರಿಂದಾಗಿ ತನ್ನ ಊರಿಗೂ ಹೋಗಲು ಆಗುತ್ತಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗೆ ರಜಾ ಅರ್ಜಿಯನ್ನು ಬರೆದಿದ್ದಾರೆ. ಆ ರಜಾ ಅರ್ಜಿಯಲ್ಲಿ ಕಾನ್ಸ್‌ಟೇಬಲ್‍, ತನಗೆ ರಜೆ ಸಿಗದ ಕಾರಣ ಪತ್ನಿ ಕೋಪಗೊಂಡಿದ್ದಾಳೆ. ಇದರಿಂದಾಗಿ ಪತ್ನಿಗೆ ಎಷ್ಟೇ ಕರೆ ಮಾಡಿದರೂ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲದೇ ರಿಸಿವ್ ಮಾಡಿದರೂ ತನ್ನ ತಾಯಿಯ ಬಳಿ ಮೊಬೈಲ್ ಅನ್ನು ಹಸ್ತಾಂತರಿಸುತ್ತಿದ್ದಾಳೆ. ಇದರಿಂದಾಗಿ ಅವಳನ್ನು ಸಮಾಧಾನ ಪಡಿಸಬೇಕು. ತನಗೆ ರಜೆ ಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಈ ವೇಳೆ ತನ್ನ ಸಹೋದರ ಅಳಿಯನ ಹುಟ್ಟು ಹಬ್ಬಕ್ಕೆ ಬರುವಂತೆ ಪತ್ನಿಗೆ ತಿಳಿಸಿದ್ದೆ. ಆದರೆ ನನಗೆ ರಜೆ ಸಿಗದ ಕಾರಣ ಮನೆಗೆ ಹೋಗಲು ಆಗಿರಲಿಲ್ಲ ಎಂಬುದನ್ನು ರಜಾ ಅರ್ಜಿಯಲ್ಲಿ ತಿಳಿಸಿದ್ದಾನೆ. ಅರ್ಜಿ ಓದಿದ ನಂತರ ಸಹಾಯಕ ಸೂಪರಿಂಟೆಂಡೆಂಟ್ ಕಾನ್ಸ್‌ಟೇಬಲ್‍ಗೆ 5 ದಿನಗಳ ಕಾಲ ರಜೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿಯನ್ನ ಶೀಘ್ರವೇ ಬಂಧನ ಮಾಡ್ತೀವಿ – ಆರಗ ಜ್ಞಾನೇಂದ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಗಳೂರು ದಸರಾ-2022: ತಾಲೂಕಿನಾದ್ಯಂತ 4 ದಿನ ಹೆಚ್ಚುವರಿ ರಜೆ

    ಮಂಗಳೂರು ದಸರಾ-2022: ತಾಲೂಕಿನಾದ್ಯಂತ 4 ದಿನ ಹೆಚ್ಚುವರಿ ರಜೆ

    ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನಾದ್ಯಂತ ಹೆಚ್ಚುವರಿ ರಜೆ ನೀಡುವಂತೆ ಶಿಕ್ಷಣ ಇಲಾಖೆ (Education Department) ಆದೇಶ ಹೊರಡಿಸಿದೆ.

    ಸೆ.28 ರಿಂದ ಅಕ್ಟೋಬರ್ 16 ರವರೆಗೂ ರಜೆ ನೀಡುವಂತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಡ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನಗಳ ಕಾಲ ರಜೆ ಘೋಷಿಲಾಗಿದೆ.

    ಹೆಚ್ಚುವರಿ ರಜೆಯನ್ನು ನವೆಂಬರ್ ತಿಂಗಳ ನಾಲ್ಕು ಶನಿವಾರ ಹಾಗೂ ಎರಡು ಭಾನುವಾರ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

    ದಸರಾ (Mangaluru Dasara 2022) ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ (Kudroli Gokarnanatha Temple) ದಲ್ಲಿ ದಸರಾಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿದೆ. ಒಂಬತ್ತು ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ದಸರಾಕ್ಕೆ ಸೆಪ್ಟೆಂಬರ್ 26 ರಂದು ಅದ್ಧೂರಿ ಚಾಲನೆ ದೊರೆಯಲಿದೆ. ದಸರಾಕ್ಕಾಗಿ ನಡೆಯಬೇಕಾದ ಸುಣ್ಣಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರ ಅಲಂಕಾರ, ಸಿದ್ಧತೆಗಳು ಪೂರ್ಣಗೊಂಡಿದೆ.

    ಸೆಪ್ಟೆಂಬರ್ 26 ರ ಸೋಮವಾರ ಮುಂಜಾನೆ 11.45ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸುಂದರ ಕಲಾಕೃತಿಗಳೊಂದಿಗೆ ನಿರ್ಮಾಣವಾದ ಸಭಾಂಗಣದಲ್ಲಿ ಗಣಪತಿ, ಶಾರದಾ ಮಾತೆ, ನವದುರ್ಗೆಯರು, ಆದಿಮಾಯೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರೊಂದಿಗೆ ನವರಾತ್ರಿ ಹಾಗೂ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಈ ಬಾರಿಯ ದಸರಾಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರನ್ನು ಆಹ್ವಾನಿಸಿದ್ದು ಬರುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತೀ ಹೆಚ್ಚು ವಿಶ್ರಾಂತಿಯೇ ಪಡೆಯದೇ ಕರ್ತವ್ಯ ಮಾಡುವವರಲ್ಲಿ ಅಗ್ರ ಗಣ್ಯರು ಅಂದ್ರೆ ಪಾಲಿಕೆ ಪೌರಕಾರ್ಮಿಕರು. ಇವರಿಗೆ ಒಂದು ವೀಕಾಫ್ ಇರಲ್ಲ. ಸಣ್ಣ ಜ್ವರ, ಮನೆಯಲ್ಲಿ ಯಾರಾದ್ರೂ ಸತ್ರು ಅಂತ ರಜೆ ಹಾಕಿದ್ರೆ ಮುಗಿತು ಸಂಬಳ ಕಟ್.

    ಅಚ್ಚರಿಯೆನ್ನಿಸಿದ್ರು ನಿಜ. ಇವರು ವಾರದ 7 ದಿನ ಪಕ್ಕಾ ಕೆಲಸಕ್ಕೆ ಹಾಜರಾಗುತ್ತಾರೆ. ಇದಕ್ಕೆ ಸಾಕ್ಷಿ ರಸ್ತೆಗಳು, ಮನೆಯಿಂದ ಖಾಲಿ ಆಗುವ ಕಸವೇ ಸಾಕ್ಷಿ. ಹೀಗಿರುವಾಗ ಅನಿವಾರ್ಯತೆ ಎಲ್ಲರಿಗೂ ಇರುತ್ತೆ. ಅಪ್ಪಿ ತಪ್ಪಿ ಒಂದು ದಿನ ರಜೆ ಹಾಕಿದರೂ ಸಂಬಳಕ್ಕೆ ಕತ್ತರಿ. ಬಯೋ ಮೆಟ್ರಿಕ್ ಹಾಕದಿದ್ದರೆ ಸಂಬಳ ಕೊಡಲ್ಲ. ಗಂಡನ ಸಾವಿನ ಹಿನ್ನೆಲೆಯಲ್ಲಿ ತಿಂಗಳು ರಜಾ ಹಾಕಿದ್ರು ಸಂಬಳ ಒಂದೂ ದಿನದು ಕೊಡದೇ ಕಟ್ ಮಾಡುತ್ತಾರೆ.

    ಈ ಕಾಟ ಬಿಬಿಎಂಪಿಗೆ ಸೀಮಿತವಾಗಿಲ್ಲ. ಅದು ಪಿಡಬ್ಲ್ಯೂಡಿ ಸ್ವಚ್ಛತಾ ಸಿಬ್ಬಂದಿಗೂ ಇದೆ. ಶಕ್ತಿಸೌಧ ಸುತ್ತಮುತ್ತ ಸ್ವಚ್ಛತೆ ಮಾಡುವ ಸಿಬ್ಬಂದಿಗೆ ಕೂಡ ಇದೇ ಗತಿ. ಹಾಗಂತ ಇವರಿಗೆ ಮತ್ತೊಂದು ಐಡಿಯಾ ಮಾಡಿದ್ದಾರೆ. ಈ ಪ್ರಕಾರ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ಅಂತಾ ಹೇಳಿದ್ದಾರೆ. ಹೀಗಾಗಿ ಒಂದು ಊರು, ಒಂದ್ ಫಂಕ್ಷನ್, ನೆಂಟರ ಮನೆಗೆ ಒಂದು ದಿನ ಹೋಗಿಲ್ಲ, ಉಳಿದಿಲ್ಲ. ಇದು ಬಿಟ್ಟು ಕಾಯಿಲೆ ಬಂದರೂ ರಜೆ ಹಾಕುವಂತಿಲ್ಲ. ಅದಕ್ಕೂ ರೂಲ್ಸ್ ಇದೆ. ಅದುವೇ ಇಎಸ್‍ಐ ಹೋಗಿ ಆರೋಗ್ಯ ಸಂಬಂಧ ಚೀಟಿ ಪಡೆಯಬೇಕು. ಆಮೇಲೆ ಬೇಕಾದರೆ ಬೇರೆ ಯಾವುದೇ ಸಣ್ಣ ಪುಟ್ಟ ಆಸ್ಪತ್ರೆ ತೊರಿಸಬಹುದು. ಮನೆ ಹತ್ತಿರ ಗೊತ್ತು ಅಂತಾ ಹೋಗಿ ತೋರಿಸಿ ಚೀಟಿ ಕೊಟ್ಟರೆ ಒಪ್ಪುವ ಮಾತೇ ಇಲ್ಲ. ರಜೆಗೆ ಸಂಬಳ ಕಟ್ ಇಲ್ಲ ಸಜೆ ಫಿಕ್ಸ್.

    16800 ಖಾಯಂ ಪೌರಕಾರ್ಮಿಕರಿಲ್ಲವಾದ್ರೆ ನಿಜ ರಸ್ತೆ, ಚರಂಡಿ, ಮನೆ ಕಸ ಕ್ಲಿಯರ್ ಆಗಲ್ಲ ಒಪ್ಪಿಕೊಳ್ಳೋನ. ಆದರೆ ಹಾಗಂತ ಕಾಯಿಲೆ, ಜ್ವರಕ್ಕೂ ಚಿಕಿತ್ಸೆ ಪಡೆದಾಗ ಚೀಟಿ ಕೊಟ್ರು ಸಂಬಳ ಕೊಡದ ಈ ಸ್ಥಿತಿ ಯಾರಿಗೂ ಬೇಡ. ಅದಕ್ಕೆ ಪೌರಕಾರ್ಮಿಕರ ತ್ಯಾಗಕ್ಕೆ ಸರಿ ಸಾಟಿಯೇ ಇಲ್ಲ. ಒಟ್ಟಿನಲ್ಲಿ ಇನ್ನಾದರೂ ಪಾಲಿಕೆ ಅವರ ರಜೆ ಹಾಗೂ ಕಾಯಿಲೆ ಸಂಬಂಧಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಒಡಿಶಾದ ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಒಂದು ವಾರ ರಜೆ

    ಒಡಿಶಾದ ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಒಂದು ವಾರ ರಜೆ

    ಭುವನೇಶ್ವರ: ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಒಡಿಶಾದ ಸರ್ಕಾರಿ ನೌಕರರು ಒಂದು ವಾರ ರಜೆ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

    ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ ಬಳಿಕ ರಜೆಯನ್ನು ತೆಗೆದುಕೊಳ್ಳಬಹುದು. ಪ್ರಸ್ತುತ ಕೊರೊನಾ ಮೂರನೇ ಅಲೆ ಇರುವುದರಿಂದ ಯಾವುದೇ ಉದ್ಯೋಗಿ ಕೊರೊನಾ ಸೋಂಕಿಗೆ ಒಳಗಾದಲ್ಲಿ 7 ದಿನಗಳವರೆಗೂ ರಜೆಯನ್ನು ನೀಡಲು ನಿರ್ಧರಿಸಲಾಗಿದೆ. ಈ ನಿರ್ದೇಶನವು ತಕ್ಷಣವೇ ಜಾರಿ ಬರಲಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಮುನ್ನ ಕೊರೊನಾ ವೈರಸ್ ಪಾಸಿಟಿವ್ ಹೊಂದಿರುವ ಸರ್ಕಾರಿ ನೌಕರರಿಗೆ 14 ದಿನಗಳವರೆಗೂ ರಜೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಮತ್ತೊಂದೆಡೆ ಕೆಲವು ದಿನಗಳ ಹಿಂದೆಯಷ್ಟೇ ವಿಕಲಾಂಗರಿಗೆ ಮತ್ತು ನಗರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅವಕಾಶ ನೀಡಿತ್ತು. ಈ ನೌಕರರು ಇನ್ನು ಮುಂದೆ ಕಚೇರಿಗಳಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಡಿಡಿಎಂಎ ತಿಳಿಸಿತ್ತು.

    ಪಿಎಸ್‍ಯುಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ಆಗಮಿಸುವ ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಚೇರಿಗೆ ಆಗಮಿಸುವ ಬದಲಾಗಿ ಮನೆಯಲ್ಲಿಯೇ ಕೆಲಸ ಮಾಡಲು ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

  • ತಂದೆ-ತಾಯಿ, ಅತ್ತೆ-ಮಾವರೊಂದಿಗೆ ಹೊಸ ವರ್ಷ ಆಚರಿಸಲು ನೌಕರರಿಗೆ 4 ದಿನ ರಜೆ- ಅಸ್ಸಾಂ ನಿರ್ಧಾರ

    ತಂದೆ-ತಾಯಿ, ಅತ್ತೆ-ಮಾವರೊಂದಿಗೆ ಹೊಸ ವರ್ಷ ಆಚರಿಸಲು ನೌಕರರಿಗೆ 4 ದಿನ ರಜೆ- ಅಸ್ಸಾಂ ನಿರ್ಧಾರ

    ದಿಸ್ಪುರ: ಹೊಸ ವರ್ಷದ ಸಂದರ್ಭದಲ್ಲಿ ತಂದೆ-ತಾಯಿ ಹಾಗೂ ಅತ್ತೆ-ಮಾವರನ್ನು ಭೇಟಿಯಾಗಲು ನೌಕರರಿಗೆ ನಾಲ್ಕು ದಿನಗಳ ರಜೆ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

    2022ರ ಜನವರಿ ತಿಂಗಳಲ್ಲಿ 6-9ನೇ ತಾರೀಖಿನವರೆಗೆ ಸರ್ಕಾರಿ ನೌಕರರಿಗೆ ರಜೆ ನೀಡಲಾಗುವುದು. ತಂದೆ-ತಾಯಿ ಅಥವಾ ಅತ್ತೆ-ಮಾವ ಬದುಕಿಲ್ಲದಿದ್ದರೆ ಅಂತಹ ನೌಕರರಿಗೆ ಈ ವಿಶೇಷ ರಜೆ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ನೇತೃತ್ವದ ಸಂಪುಟ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್‌

    ಪಶ್ಚಿಮ ಅಸ್ಸಾಂನ ಬೊಂಗೈಗಾವ್‌ನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಿತು. ರಾಜ್ಯದಲ್ಲಿ ನಿಯೋಜನೆಗೊಂಡಿರುವ ಸಚಿವರು, ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಸಹ ಈ ರಜೆಗೆ ಅರ್ಹರಾಗಿರುತ್ತಾರೆ. ಆದರೆ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯವರೆಗಿನ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಕ್ಷೇತ್ರ ಸೇವಕರು ಈ ರಜೆಯನ್ನು ಪಡೆಯುವಂತಿಲ್ಲ ಎಂದು ಸಂಪುಟ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಆ್ಯಂಡರ್ಸನ್‌

    ಸರ್ಕಾರಿ ನೌಕರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ವರ್ಷ ಆಚರಿಸಲು ರಜೆ ನೀಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.