Tag: layoffs

  • ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ವಾಷಿಂಗ್ಟನ್: ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಈ ವರ್ಷದ 2ನೇ ಸುತ್ತಿನ ಉದ್ಯೋಗಿಗಳ ಕಡಿತವನ್ನು ಘೋಷಿಸಿದೆ. ಕಳೆದ ಬಾರಿ 18,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದ ಅಮೆಜಾನ್ ಈ ಬಾರಿ 9,000 ಉದ್ಯೋಗಿಗಳನ್ನು (Employees) ವಜಾಗೊಳಿಸುವುದಾಗಿ (Layoffs) ಹೇಳಿದೆ.

    ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಉದ್ಯೋಗಿಗಳಿಗೆ ಪತ್ರ ಬರೆದು, ವಜಾಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಕಳೆದ 3 ತಿಂಗಳುಗಳಿಂದ ಕಂಪನಿ 27,000ಕ್ಕೂ ಅಧಿಕ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಇದು ಕಂಪನಿಯ ಇತಿಹಾಸದಲ್ಲೇ ಅತಿ ದೊಡ್ಡ ವಜಾ ಆಗಿದೆ.

    ಅನಿಶ್ಚಿತ ಆರ್ಥಿಕತೆ ಹಾಗೂ ಭವಿಷ್ಯದ ಕಾರಣದಿಂದ ಕಂಪನಿ ತನ್ನ ವೆಚ್ಚಗಳನ್ನು ಹೆಚ್ಚು ಸುವ್ಯವಸ್ಥಿತವಾಗಿಡಲು ಯೋಜಿಸುತ್ತಿದೆ. ಇದರ ಪರಿಣಾಮವಾಗಿ ಕಂಪನಿಯ ಕೆಲ ಸ್ಥಾನಗಳನ್ನು ತೆಗೆದುಹಾಕಲಾಗುತ್ತಿದೆ. ಈ ಹಿಂದೆ ಘೋಷಿಸಲಾಗಿದ್ದ 18,000 ಉದ್ಯೋಗಿಗಳ ವಜಾದೊಂದಿಗೆ 9,000 ಉದ್ಯೋಗಿಗಳ ಕಡಿತವನ್ನೂ ಮಾಡಲಾಗುತ್ತಿದೆ ಎಂದು ಆಂಡಿ ಜಾಸ್ಸಿ ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್‌ ತಯಾರಿಸುವ ಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ

    ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗಾಗಿ ಕಂಪನಿ ಪಾವತಿ, ಆರೋಗ್ಯ ವಿಮೆಯ ಪ್ರಯೋಜನ ಹಾಗೂ ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ಸೇರಿದಂತೆ ಹಲವು ಭರವಸೆಗಳನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ವಿಶ್ವದ ಜನಪ್ರಿಯ ಬೃಹತ್ ಕಂಪನಿಗಳು ಈ ರೀತಿ ಉದ್ಯೋಗ ಕಡಿತಗಳನ್ನು ನಡೆಸುತ್ತಿರುವುದು ಭಾರೀ ಆತಂಕ ಮೂಡಿಸುತ್ತಿದೆ.

    2022ರಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಫೇಸ್‌ಬುಕ್ ಕಳೆದ ವಾರವಷ್ಟೇ ಮತ್ತೆ 10,000 ಸಿಬ್ಬಂದಿಯನ್ನು ತೆಗೆದುಹಾಕುವುದಾಗಿ ಹೇಳಿದೆ. ಈ ಮೂಲಕ ಫೇಸ್‌ಬುಕ್ 2ನೇ ಸುತ್ತಿನ ವಜಾಗೆ ಕೈ ಹಾಕಿದ್ದು, ಅಮೆಜಾನ್ ಕೂಡಾ ಇಂತಹದ್ದೇ ತೀರ್ಮಾನಕ್ಕೆ ಬಂದಿದೆ. ಇದನ್ನೂ ಓದಿ: Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್: ನಟ ಚೇತನ್ ಬಂಧನ

  • ಅಮೆಜಾನ್‌ನಲ್ಲಿ ಉದ್ಯೋಗ ಕಡಿತ – ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟ ಉದ್ಯೋಗಿಗಳು

    ಅಮೆಜಾನ್‌ನಲ್ಲಿ ಉದ್ಯೋಗ ಕಡಿತ – ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟ ಉದ್ಯೋಗಿಗಳು

    ಬೆಂಗಳೂರು: ಆನ್‌ಲೈನ್‌ ಶಾಪಿಂಗ್‌ ದಿಗ್ಗಜ ಅಮೆಜಾನ್‌ ಕಂಪನಿಯಲ್ಲಿ (Amazon India) ಉದ್ಯೋಗ ಕಡಿತ (Layoffs) ಆರಂಭಗೊಂಡಿದ್ದು ಉದ್ಯೋಗಿಗಳು ಕಣ್ಣೀರಿಟ್ಟು ಕಂಪನಿಯನ್ನು ತೊರೆದಿದ್ದಾರೆ.

    ವಿಶ್ವಾದ್ಯಂತ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಅಮೆಜಾನ್‌ ಮುಂದಾಗಿದ್ದು, ಭಾರತದಲ್ಲಿ ಕನಿಷ್ಠ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಹೋಗಲಿದ್ದಾರೆ. ಈ ತಿಂಗಳು ಸುಮಾರು 1,000 ಉದ್ಯೋಗಿಗಳನ್ನು ವಜಾ ಮಾಡುವ ನಿರೀಕ್ಷೆಯಿದೆ ಮತ್ತು ಈಗಾಗಲೇ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

    ಟೆಕ್ ಮತ್ತು ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡತ್ತಿರುವ ಉದ್ಯೋಗಿಗಳಿಗೆ ಈಗಾಗಲೇ ಮೇಲ್‌ ಬಂದಿದೆ. ಇದನ್ನೂ ಓದಿ: ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

     

    ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್‌ ಇಂಡಿಯಾದ ಸದ್ಯದ ಸ್ಥಿತಿಯನ್ನು ಉದ್ಯೋಗಿಯೊಬ್ಬರು ವಿವರಿಸುವ ಪೋಸ್ಟ್‌ ವೈರಲ್‌ ಆಗಿದೆ. ನನ್ನ ತಂಡದ ಶೇ.75 ರಷ್ಟು ಸದಸ್ಯರನ್ನು ತೆಗೆಯಲಾಗಿದೆ. ನಾನು ಸೇರಿದಂತೆ ತಂಡದಲ್ಲಿ ಶೇ.25 ಮಂದಿ ಇದ್ದಾರೆ. ಕ್ಯಾಬಿನ್‌ನಲ್ಲಿ ಕುಳಿತಿರುವಾಗಲೇ ಕೆಲಸದಿಂದ ತೆಗೆಯುತ್ತಿದ್ದಾರೆ. ವಜಾಗೊಂಡ ಸುದ್ದಿ ಕೇಳಿ ಅವರು ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟಿದ್ದಾರೆ. ನನಗೆ ಇನ್ನು ಮುಂದೆ ಕೆಲಸ ಮಾಡಲು ಯಾವುದೇ ಉತ್ಸಾಹ ಇಲ್ಲ ಎಂದು ಬರೆದಿದ್ದಾರೆ.

    ಗುರುಗ್ರಾಮ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ವಜಾ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದು ಭಾರತದ ಹಲವಾರು ವಿಭಾಗಗಳ ಮೇಲೆ ಪರಿಣಾಮ ಬೀರಿದೆ. ವಜಾಗೊಳಿಸಿದ ಉದ್ಯೋಗಿಗಳಿಗೆ 5 ತಿಂಗಳ ವೇತನವನ್ನು ಅಮೆಜಾನ್‌ ಪಾವತಿ ಮಾಡಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಕಳೆದ ವರ್ಷದ ನವೆಂಬರ್‌ನಲ್ಲಿ  ಸಾಮೂಹಿಕ ವಜಾಗೊಳಿಸಿ ಉದ್ಯೋಗ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬರೋಬ್ಬರಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

    ವಾಷಿಂಗ್ಟನ್: ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನ (Facebook) ಮಾತೃ ಕಂಪನಿ ಮೆಟಾ (Meta) ತನ್ನ ಕಂಪನಿಯ ಶೇ.13 ರಷ್ಟು ಅಂದರೆ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಳನ್ನು (Employees) ವಜಾಗೊಳಿಸಿದೆ (layoffs).

    ಈ ಬಗ್ಗೆ ತಿಳಿಸಿರುವ ಮೆಟಾದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್‌ಬರ್ಗ್ (Mark Zuckerberg), ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ನಿರ್ಧಾರಕ್ಕೆ ಹೇಗೆ ಬಂದಿದ್ದೇವೆ ಎಂಬುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಈ ನಿರ್ಧಾರ ಎಲ್ಲರಿಗೂ ಕಷ್ಟ ತಂದಿದೆ ಎಂಬುದು ನನಗೆ ತಿಳಿದಿದೆ. ವಜಾಗೊಳಗಾಗುತ್ತಿರುವವರ ಬಗ್ಗೆ ನಾನು ವಿಷಾದಿಸುತ್ತೇನೆ ಎಂದಿದ್ದಾರೆ.

    2004 ರಲ್ಲಿ ಫೇಸ್‌ಬುಕ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕಂಪನಿಯಲ್ಲಿ ನಡೆದಿರುವ ವಜಾದ ಪ್ರಕ್ರಿಯೆಯಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ್ದಾಗಿದೆ. ಸುಮಾರು 87 ಸಾವಿರ ಉದ್ಯೋಗಿಗಳು ಇರುವ ಫೇಸ್‌ಬುಕ್‌ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ, ಹೊಸ ನೇಮಕಾತಿಯನ್ನು ನಡೆಸಲು ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

    ಕಂಪನಿ ಆರ್ಥಿಕ ಕುಸಿತ ಹಾಗೂ ಹೆಚ್ಚಿನ ಸ್ಪರ್ಧೆಗಳಿಂದಾಗಿ ಜಾಹೀರಾತುಗಳ ನಷ್ಟವನ್ನು ಅನುಭವಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ವಜಾ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ. ಆದರೂ ಹೊಸ ಉದ್ಯೋಗಿಗಳಿಗೆ ನೇಮಕಾತಿಯನ್ನು 2023ರ ಮಾರ್ಚ್ ವರೆಗೆ ತಡೆಹಿಡಿಯಲಾಗಿದ್ದು, ಬಳಿಕ ಅದನ್ನು ವಿಸ್ತರಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ

    Live Tv
    [brid partner=56869869 player=32851 video=960834 autoplay=true]

  • 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    ಬೀಜಿಂಗ್‌: ಆರ್ಥಿಕ ಹಿಂಜರಿತ ಭೀತಿ ಬೆನ್ನಲ್ಲೇ ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಕ್ಸಿಯೋಮಿ 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

    ಕ್ಸಿಯೋಮಿ ಶೇ.3 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

    ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ ಆದಾಯ ಕುಸಿತದಿಂದ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗುತ್ತದೆ.

    ಜೂನ್‌ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕ್ಸಿಯೋಮಿ ಶೇ.20 ರಷ್ಟು ಆದಾಯ ಕುಸಿತ ಕಂಡಿತ್ತು. ಕ್ಸಿಯೋಮಿ ಕಂಪನಿಗೆ ಅರ್ಧಕ್ಕಿಂತಲೂ ಹೆಚ್ಚಿನ ಆದಾಯ ಸ್ಮಾರ್ಟ್‌ಫೋನ್‌ ಮಾರಾಟದಿಂದಲೇ ಬರುತ್ತದೆ. ಸ್ಮಾರ್ಟ್‌ಫೋನ್‌ ಮಾರಾಟ ಶೇ.29 ರಷ್ಟು ಕುಸಿತ ಕಂಡಿದೆ. ಐಪಿಒ ಲಿಸ್ಟಿಂಗ್‌ ಆದ ಬಳಿಕ ಮೊದಲ ಬಾರಿಗೆ ಕ್ಸಿಯೋಮಿ ಆದಾಯ ಇಳಿಕೆಯಾಗಿದೆ.

    ಜೂನ್‌ವರೆಗೆ 32,869 ಮಂದಿ ಉದ್ಯೋಗದಲ್ಲಿದ್ದರು. ಈ ಪೈಕಿ ಚೀನಾದಲ್ಲೇ 30,110 ಮಂದಿ ಕೆಲಸದಲ್ಲಿದ್ದಾರೆ. ಉಳಿದಂತೆ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಉದ್ಯೋಗಿಗಳಿದ್ದಾರೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಜಾಗತಿಕ ಹಣದುಬ್ಬರ, ವಿದೇಶಿ ವಿನಿಮಯ ಏರಿಳಿತ, ಸಂಕೀರ್ಣ ರಾಜಕೀಯ ಪರಿಸರದಿಂದಾಗಿ ಆದಾಯ ಕುಸಿತಗೊಂಡಿದೆ ಎಂದು ಕ್ಸಿಯೋಮಿ ಅಧ್ಯಕ್ಷ ವಾಂಗ್‌ ಕ್ಸಿಯಾಂಗ್‌ ತಿಳಿಸಿದ್ದಾರೆ.

    ಚೀನಾ ಬಿಟ್ಟರೆ ಕ್ಸಿಯೋಮಿಯ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಆದರೆ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಸಿಯೋಮಿ ಕಂಪನಿ ಮೇಲೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ, ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ತನ್ನ ನಡವಳಿಕೆಯನ್ನು ಟೀಕಿಸಿದ ಉದ್ಯೋಗಿಗಳನ್ನು ಕಂಪನಿಯಿಂದ ಕಿತ್ತೊಗೆದಿದ್ದಾರೆ ಎಂದು ವರದಿಯಾಗಿದೆ.

    ಮಸ್ಕ್ ಅವರ ನಡವಳಿಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಉದ್ಯೋಗಿಗಳು ಟೀಕಿಸಿದ್ದು, ಈ ಹಿನ್ನೆಲೆ ಟೀಕಿಸಿರುವ ಸ್ಪೇಸ್‌ಎಕ್ಸ್‌ನ ಉದ್ಯೋಗಿಗಳನ್ನೇ ವಜಾ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ

    ಇತ್ತೀಚೆಗೆ ಸ್ಪೇಸ್‌ಎಕ್ಸ್‌ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ. ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ

    ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ನೆ ಶಾಟ್‌ವೆಲ್ ಈ ಪತ್ರವನ್ನು ರಚಿಸಿರುವ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಬಗ್ಗೆ ಸ್ಪೇಸ್‌ಎಕ್ಸ್ ಅಧಿಕೃತ ವಿವರವನ್ನು ನೀಡಿಲ್ಲ. ಯಾರೆಲ್ಲಾ ಹಾಗೂ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದನ್ನೂ ಬಹಿರಂಗ ಪಡಿಸಿಲ್ಲ.

    Live Tv

  • ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ವಾಷಿಂಗ್ಟನ್: ಟೆಕ್ನಾಲಜಿ ಕಂಪನಿ ಐಬಿಎಂ ರಷ್ಯಾದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆ. ಇದೀಗ ಹೆಚ್ಚುವರಿ ಹಂತವಾಗಿ ಕಂಪನಿ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.

    ಐಬಿಎಂ ಸಿಇಒ ಅರವಿಂದ್ ಕೃಷ್ಣ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ರಷ್ಯಾದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಕೊನೆಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ಐಬಿಎಂ ಈ ವರ್ಷ ಮಾರ್ಚ್‌ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಅಲ್ಲಿನ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಮುಂದುವರಿಸಿದೆ. ಇದೀಗ ನಾವು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ. ಈ ಮೂಲಕ ನಾವು ಇತರ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು, ರಷ್ಯಾದ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಸ್ಥಗಿತಗೊಳಿಸಬಹುದು ಎಂದು ಅರವಿಂದ್ ಕೃಷ್ಣ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

    ಉಕ್ರೇನ್ ರಷ್ಯಾದ ಯುದ್ಧದ ಪರಿಣಾಮ ಹೆಚ್ಚುತ್ತಿರುವ ಅಭದ್ರತೆಯ ಕಾರಣ ನಮ್ಮ ವ್ಯವಹಾರಗಳನ್ನು ಕ್ರಮಬದ್ಧವಾಗಿ ಕೈಬಿಡುವ ನಿರ್ಧಾರ ಮಾಡಿದ್ದೇವೆ. ರಷ್ಯಾದಲ್ಲಿರುವ ನಮ್ಮ ಸಹೋದ್ಯೋಗಿಗಳು ಹಲವು ತಿಂಗಳುಗಳಿಂದ ಒತ್ತಡ ಹಾಗೂ ಅನಿಶ್ಚಿತತೆಯನ್ನು ಸಹಿಸಿಕೊಂಡಿದ್ದಾರೆ. ಕಂಪನಿಯಿಂದ ವಜಾಗೊಳಿಸುವಲ್ಲಿ ಅವರ ಯಾವುದೇ ತಪ್ಪುಗಳಿಲ್ಲ ಎಂದು ಸಿಇಒ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ರಷ್ಯಾದಲ್ಲಿರುವ ನಮ್ಮ ಉದ್ಯೋಗಿಗಳಿಗೆ ಈ ವಿಷಯ ಆಘಾತಕಾರಿಯಾಗಿರುವುದು ನಮಗೆ ತಿಳಿದಿದೆ. ಆದರೆ ಅವರಿಗೆ ಬೆಂಬಲ ನೀಡುವುದನ್ನು ನಾವು ಮುಂದುವರೆಸುತ್ತೇವೆ ಹಾಗೂ ಅವರ ಮುಂದಿನ ವೃತ್ತಿಯ ಬಗ್ಗೆ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

    ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

    ನವದೆಹಲಿ: ಸ್ಟಾರ್ಟ್ಅಪ್ ಕಂಪನಿಗಳು ನೀಡುವ ಲಾಭದಾಯಕ ಕೊಡುಗೆಗಳಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಇದೀಗ ಸ್ಟಾರ್ಟ್ಅಪ್‌ಗಳು ಭಾರತೀಯ ಉದ್ಯೋಗಿಗಳಿಗೆ 10 ಬಾರಿ ಯೋಚನೆ ಮಾಡಬೇಕಾದ ಜಾಗವಾಗಿದೆ.

    ಭಾರತದ ಪ್ರಸಿದ್ಧ ಸ್ಟಾರ್ಟ್ಅಪ್‌ಗಳಾದ ಅನಕಾಡೆಮಿ, ಕಾರ್ಸ್ 24, ವೇದಾಂತು, ಮೀಶೋ, ಟ್ರೆಲ್, ಫೆರ್ಲೆಂಕೋ ಸೇರಿದಂತೆ ಹಲವು ಕಂಪನಿಗಳಿಂದ 5,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸವನ್ನು ತೊರೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಕಂಪನಿಗಳೇ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಆಘಾತಕಾರಿಯಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಸಾಮೂಹಿಕ ವಜಾಗಳ ಹಿಂದಿನ ಮುಖ್ಯ ಕಾರಣ ಏನು ಎಂಬುದನ್ನು ಕಂಪನಿಗಳು ಸ್ಪಷ್ಟಪಡಿಸಿಲ್ಲ. ಆದರೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಎಲ್ಲಾ ಕಂಪನಿಗಳಲ್ಲಿ ಸಾಮಾನ್ಯವಾಗಿರುವ ಒಂದು ಕಾರಣವೆಂದರೆ, ಹೂಡಿಕೆಯ ಕೊರತೆ. ಇದರೊಂದಿಗೆ ಹೆಚ್ಚಿನ ಸ್ಟಾರ್ಟ್ಅಪ್ ಕಂಪನಿಗಳು ಶಿಕ್ಷಣಕ್ಕೆ ಸಂಬಂಧಪಟ್ಟವುಗಳಾಗಿದ್ದು, ಲಾಕ್‌ಡೌನ್ ಮುಗಿದು ಶಾಲೆಗಳು ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿಯಲಾರಂಭಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

    ನಿಖರವಾದ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ ಓಲಾ 2022ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅನಕಾಡೆಮಿ 926, ವೇದಾಂತು 600, ಕಾರ್ಸ್ 24 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೊಸದಾಗಿ ಸ್ಥಾಪಿಸಲಾದ ಮೀಶೋ ತನ್ನ ಆದಾಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾರಂಭವಾದ ಕೆಲವು ವರ್ಷಗಳಲ್ಲಿ ಕೇವಲ 150 ಉದ್ಯೋಗಿಗಳನ್ನು ಮಾತ್ರ ಕೈಬಿಟ್ಟಿದೆ.