Tag: laxmi hebbalkar

  • ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಬೆಳಗಾವಿ: ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ಈ ಬಾರಿ ಚುನಾವಣೆಯಲ್ಲಿ ನಮ್ಮೆಲ್ಲರ ಮತ ಕಾಂಗ್ರೆಸ್ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಸುಳೆಬಾವಿ ಗ್ರಾಮದಲ್ಲಿ ಪ್ರಚಾರಕೈಗೊಂಡಿದ್ದ ವೇಳೆ ಮಾತನಾಡಿದ ಶಾಸಕರು, ಭಾರತ ಹಿಂದೂ ರಾಷ್ಟ್ರ. ರಾಮ ಮಂದಿರ ನಿರ್ಮಾಣ ಆಗಬೇಕಿದ್ದು, ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ. ನಾವು ರಾಮ ಮಂದಿರ ನಿರ್ಮಾಣ ಮಾಡೋರು, ಅವರು ಬಾಬರಿ ಮಸೀದಿ ಕಟ್ಟುವರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಬಾರಿ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ನಾವೆಲ್ಲರೂ ಕಾಂಗ್ರೆಸ್‍ಗೆ ಮತ ಹಾಕೋಣ ಅಂತಾ ಹೇಳಿದ್ದಾರೆ.

    ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಇಲ್ಲ. ಇದು ಹಿಂದು, ಮುಸ್ಲಿಂ ಧರ್ಮದ ಬಗ್ಗೆ ಇದೆ. ಯಾರಿಗೆ ಬಾಬಾರಿ ಮಸೀದಿ, ಟಿಪ್ಪು ಜಯಂತಿ ಮಾಡೋದು ಇಷ್ಟವೋ ಅವರೆಲ್ಲರು ಕಾಂಗ್ರೆಸ್‍ಗೆ ಬೆಂಬಲ ನೀಡಿ, ಶಿವಾಜಿ ಮಹರಾಜರು ಬೇಕಿದರೆ ಬಿಜೆಪಿಗೆ ನಿಮ್ಮ ಬೆಂಬಲ ನೀಡಿ ಎಂಬ ಹೇಳಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಕನ್ನಡಿಗರ ವಿರುದ್ಧ ಸಿಎಂ ಲಕ್ಷ್ಮೀ ಹೆಬ್ಬಾಳ್ಕರನ್ನ ಛೂ ಬಿಟ್ಟಿದ್ದಾರೆ: ಕರಂದ್ಲಾಜೆ

    ಕನ್ನಡಿಗರ ವಿರುದ್ಧ ಸಿಎಂ ಲಕ್ಷ್ಮೀ ಹೆಬ್ಬಾಳ್ಕರನ್ನ ಛೂ ಬಿಟ್ಟಿದ್ದಾರೆ: ಕರಂದ್ಲಾಜೆ

    ಬೆಂಗಳೂರು: ಕನ್ನಡಿಗರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಿದ್ದರಾಮಯ್ಯ ಛೂ ಬಿಟ್ಟಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಚುನಾವಣೆ ವೇಳೆಯಲ್ಲಿ ಮಾತ್ರ ಕನ್ನಡ ಪ್ರೀತಿ ತೋರಿಸ್ತಾರೆ. ಧ್ಚಜದ ವಿಚಾರದಲ್ಲಿ ಆಗಿರಬಹುದು, ಹಿಂದೆ ಹೇಳಿಕೆ ಆಗಿರಬಹುದು, ಈ ವಿಚಾರಗಳಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ರು. ಆದ್ರೆ ನಿಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯ ಹೇಳಿಕೆಯ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದರು.

    ಕೊಲೆ ಮಾಡಿ ಕ್ಷಮೆ ಕೇಳಿದ್ರೆ ಕ್ಷಮಿಸಲ್ಲ ಕೋರ್ಟ್. ಮೊದಲು ಶಿಕ್ಷೆ ಆಗುತ್ತೆ, ಬಳಿಕ ಜೈಲಿನಲ್ಲಿದ್ದಾಗ ಕ್ಷಮಾದಾನ ಸಿಗುತ್ತೆ. ತಪ್ಪು ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳಿದ್ರೆ ಆಗಲ್ಲ. ಮೊದಲು ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

    ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಕಾನೂನು ಎಲ್ಲರಿಗೂ ಒಂದೇ. ಸಿದ್ದರಾಮಯ್ಯ ಅವರೇ, ಪರಮೇಶ್ವರ್ ಅವರೇ ನಿಮ್ಮ ಮಹಿಳಾ ಘಟಕದ ಅಧ್ಯಕ್ಷೆಯನ್ನ ವಜಾ ಮಾಡಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಎಂದರು.

    ಮಹಾಜನ್ ವರದಿ ಜಾರಿಯಾಗಬೇಕು ಎಂಬುದು ಬಿಜೆಪಿ ನಿಲುವು. ಭಾಷೆ, ನಾಡು, ಗಡಿ ಬಗ್ಗೆ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಬಗ್ಗೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಜೈ ಮಹಾರಾಷ್ಟ್ರ ಎಂದು ಭಾಷಣ ಮುಕ್ತಾಯಗೊಳಿಸುತ್ತಾರೆ. ಕರ್ನಾಟಕ ವಿರೋಧಿ ನೀತಿ ಕಾಂಗ್ರೆಸ್ ಪ್ರತಿಸಲ ಅನುಸರಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

    ಬೆಳಗಾವಿ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟ ಇದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಸಾಬೀತು ಪಡಿಸಲೆಂದೇ ಬಿಜೆಪಿ ಅವಧಿಯಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ್ದು. ಅಧಿವೇಶನ ನಡೆಸುವಂತೆ ಮಾಡಿದ್ದು ನಾವು. ಇಷ್ಟಾದ ಮೇಲೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಮರ್ಥಿಸಿಕೊಳ್ತಿದ್ದಾರೆ ಎಂದರು.

    ಬೆಳಗಾವಿಯಲ್ಲಿ ಮಹಾರಾಷ್ಟ್ರಿಗರ ಪುಂಡಾಟಿಕೆ ಮಾಡಿದ್ರೆ ಏನು ಕ್ರಮ ಕೈಗೊಳ್ಳಲಾಗುತ್ತೋ ಅದೇ ಕ್ರಮವನ್ನು ಹೆಬ್ಬಾಳ್ಕರ್ ವಿರುದ್ಧ ಸರ್ಕಾರ ಕೈಗೊಳ್ಳಬೇಕು. ಕನ್ನಡದ ನೆಲದ ಮೇಲೆ ನಿಂತು ಕನ್ನಡಿಗರಿಗೆ ಅವಹೇಳನ ಮಾಡುವುದನ್ನು ಸಹಿಸಲ್ಲ. ಕನ್ನಡ ಧ್ವಜ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ನಾಡಗೀತೆಗೆ ಮತ್ತು ಧ್ವಜಕ್ಕೆ ನಾವೆಲ್ಲಾ ಗೌರವ ನೀಡುತ್ತಿದ್ದೇವೆ. ಆದರೆ ಹೆಬ್ಬಾಳ್ಕರ್ ಹೇಳಿಕೆಯಿಂದಾಗಿ ಕಾಂಗ್ರೆಸ್ ನ ಗೋಸುಂಬೆತನ ಬಹಿರಂಗವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದರು.

    ಸುಳ್ಳು ಮಾಹಿತಿ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿರುವ ಆರ್‍ಬಿ ತಿಮ್ಮಾಪುರ ಅವರನ್ನು ಯಾವುದೇ ಕಾರಣಕ್ಕೂ ಮಂತ್ರಿ ಮಾಡಬಾರದು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅಲ್ಲದೆ ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

     

  • ಊಟಕ್ಕೆ ದುಡ್ಡು ಕೊಟ್ಟಿರಬಹುದು, ವಾಹನಗಳಿಗೆ ಬಾಡಿಗೆ ಕೊಡಬಾರದೇ: ಡಿಕೆಶಿ ಪ್ರಶ್ನೆ

    ಊಟಕ್ಕೆ ದುಡ್ಡು ಕೊಟ್ಟಿರಬಹುದು, ವಾಹನಗಳಿಗೆ ಬಾಡಿಗೆ ಕೊಡಬಾರದೇ: ಡಿಕೆಶಿ ಪ್ರಶ್ನೆ

    ಬೆಂಗಳೂರು: ಊಟ ಮಾಡಲು ದುಡ್ಡು ಕೊಟ್ಟಿರಬಹುದು, ವಾಹನಗಳಿಗೆ ಬಾಡಿಗೆ ಕೊಡಬಾರದೇ? ಪೆಟ್ರೋಲ್ ಖರೀದಿಗೆ ದುಡ್ಡು ಬೇಡವೇ? ಬಿಜೆಪಿಯವರ ಆರೋಪ ಸುಳ್ಳು ಎಂದು ಕಾಂಗ್ರೆಸ್ ಮುಖಂಡ, ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ದುಡ್ಡನ್ನು ಹಂಚಿಕೆ ಮಾಡಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೋಡಿ ನಾನು ವಿಡಿಯೋ ನೋಡಿಲ್ಲ. ಶುಕ್ರವಾರ ಕೆಪಿಸಿಸಿ ಮಹಿಳಾ ಘಟಕದಿಂದ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಲವು ಖರ್ಚುಗಳು ಇದೆ. ಊಟದ ಜವಾಬ್ದಾರಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ವಹಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಗೆ 26 ಲಕ್ಷ ರೂ. ಹಣವನ್ನು ಖರ್ಚು ಮಾಡಲು ಆಯೋಗವೇ ಅನುಮತಿ ನೀಡಿದೆ. ಈ ಮಿತಿ ಒಳಗಡೆ ನಾವು ಖರ್ಚು ಮಾಡುತ್ತಿದ್ದೇವೆ. ಯಾರಿಗೂ ಹಣವನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಕ್ಷದ ಖರ್ಚಿಗೆ ಕೈ ಮುಗಿದು ಹಣವನ್ನು ನೀಡುವ ಅಗತ್ಯ ಏನಿದೆ ಎಂದು ಕೇಳಿದ್ದಕ್ಕೆ, ಪಕ್ಷದ ಖರ್ಚಿಗಾಗಿ ಕಾರ್ಯಕರ್ತರಿಗೆ ದುಡ್ಡು ನೀಡಿರಬಹುದು. ಈ ವೇಳೆ ಮತಯಾಚನೆಗೆ ನಮ್ಮ ಜವಾಬ್ದಾರಿ ಇದೆ ಎಂದು ಹೇಳಲು ಕೈ ಮಗಿದಿರಬಹುದು. ಪ್ರಚಾರದ ವೇಳೆ ನಾವಲ್ಲ, ಎಲ್ಲರೂ ಕೈ ಮುಗಿಯುತ್ತಿದ್ದಾರೆ. ಇದಕ್ಕೆ ಯಾವುದೇ ಪ್ರತ್ಯೇಕ ಅರ್ಥವನ್ನು ಕಲ್ಪಿಸಬೇಕಿಲ್ಲ ಎಂದರು.

    ಆದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ಸಾವಿರ ರೂ. ನೋಟುಗಳನ್ನೇ ನೀಡುತ್ತಿದ್ದಾರೆ, ಊಟದ ಖರ್ಚಿಗೆ ಎರಡು ಸಾವಿರ ರೂ. ಅಗತ್ಯ ಇದೆಯೇ ಎಂದು ಕೇಳಿದ್ದಕ್ಕೆ, ಬಹಳಷ್ಟು ಜನ ಪ್ರಚಾರಕ್ಕೆ ಬಂದಿದ್ದಾರೆ. ಅವರಿಗೆ ರೂಂ ವ್ಯವಸ್ಥೆ ಆಗಬೇಕು. ವಾಹನಗಳಿಗೆ ಪೆಟ್ರೋಲ್ ಹಾಕಬೇಕು. ಇವುಗಳಿಗೆಲ್ಲ ದುಡ್ಡು ಬೇಕಾಗುತ್ತದೆ. ಈ ಕಾರಣಕ್ಕೆ ಅವರು ಹಣ ಕೊಟ್ಟಿರಬಹುದು ಎಂದು ತಿಳಿಸಿದರು.

    ಬಿಜಿಪಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದೆ ಇದಕ್ಕೆ ನೀವು ಏನು ಹೇಳ್ತೀರಿ ಎಂದಿದ್ದಕ್ಕೆ, ಬಿಜೆಪಿಯವರ ಆರೋಪ ಶುದ್ಧ ಸುಳ್ಳು, ಅವರಲ್ಲಿ ಸಾಕ್ಷ್ಯಧಾರ ಇದ್ದರೆ ಕೊಡಲಿ. ಲಕ್ಷಿ ಹೆಬ್ಬಾಳ್ಕರ್ ಮತಕ್ಕಾಗಿ ಹಣವನ್ನು ಹಂಚಿಕೆ ಮಾಡಿಲ್ಲ. ಚುನಾವಣಾ ಖರ್ಚಿನ ಮಿತಿ ಒಳಗಡೆ ಹಣವನ್ನುಕಾಂಗ್ರೆಸ್ ಖರ್ಚು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

    https://www.youtube.com/watch?v=EPOTCrqH5d4

    ಬಿಜೆಪಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ

    https://www.youtube.com/watch?v=X7hVtQ9Ggf4

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಪ್ರತಿಕ್ರಿಯೆ

    https://www.youtube.com/watch?v=uIzLKO19ZW4

  • ಗುಂಡ್ಲುಪೇಟೆಯಲ್ಲಿ ಝಣ ಝಣ ಕಾಂಚಾಣ: ಮತದಾರರಿಗೆ ದುಡ್ಡು ಹಂಚಿದ ಲಕ್ಷ್ಮಿ ಹೆಬ್ಬಾಳ್ಕರ್ ವಿಡಿಯೋ ರಿಲೀಸ್

    ಗುಂಡ್ಲುಪೇಟೆಯಲ್ಲಿ ಝಣ ಝಣ ಕಾಂಚಾಣ: ಮತದಾರರಿಗೆ ದುಡ್ಡು ಹಂಚಿದ ಲಕ್ಷ್ಮಿ ಹೆಬ್ಬಾಳ್ಕರ್ ವಿಡಿಯೋ ರಿಲೀಸ್

    ಬೆಂಗಳೂರು: ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತದಾರರಿಗೆ ಹಣವನ್ನು ಹಂಚಿಕೆ ಮಾಡುತ್ತಿದೆ ಎನ್ನುವ ಆರೋಪಕ್ಕೆ ಪೂರಕ ಎನ್ನುವುಂತೆ ಬಿಜೆಪಿ ಇಂದು ಮಾಧ್ಯಮಗಳಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹಣವನ್ನು ಹಂಚಿಕೆ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

    ಕೆಬ್ಬಳ್ಳಿ ಜಿ.ಪಂ. ಕ್ಷೇತ್ರದ ಹೆಣ್ಣೂರು ಕೇರಿ ಗ್ರಾಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

    ಹಣ ಹಂಚಿಕೆ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಮುಖಂಡ ರವಿ ಕುಮಾರ್, ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲುವ ಭೀತಿ ಎದುರಾಗಿದೆ. ನಾವು ಮನೆ ಮನೆಗೆ ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಮುಖಂಡರು ಹಣವನ್ನು ಹಂಚಿಕೆ ಮಾಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಸಚಿವರಾದ ಡಿಕೆ ಶಿವಕುಮಾರ್, ಯುಟಿ ಖಾದರ್, ಎಂಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ನಾಯಕರು ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಕಾಂಗ್ರೆಸ್ ನಾಯಕರು ಅಧಿಕಾರಿಗಳನ್ನು ಬಳಸಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಪೊಲೀಸ್ ವಾಹನದಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ. ರೇಷನ್ ಅಂಗಡಿ, ಹಾಲಿನ ಕೇಂದ್ರದಲ್ಲಿ ಹಣವನ್ನು ಹಂಚುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ರಾಜ್ಯಪಾಲರು ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೇಂದ್ರದ ವಿಶೇಷ ಕಾರ್ಯಪಡೆ ಈ ಚುನಾವಣೆಗೆ ಬರಬೇಕು ಎಂದು ಆಗ್ರಹಿಸಿದರು.

    ಹಣವನ್ನು ಹಂಚುವ ಕಾರ್ಯದಲ್ಲಿ ಸರ್ಕಾರವೇ ನೇರವಾಗಿ ಭಾಗಿಯಾಗಿದೆ. ಈ ಚುನಾವಣೆಯಲ್ಲೂ ಇದು ಒಂದಲ್ಲ. ಇಂತಹ ಹಲವರು ಅಕ್ರಮಗಳನ್ನು ಕಾಂಗ್ರೆಸ್ ಎಸಗುತ್ತಿದೆ. ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಈ ತಂತ್ರಕ್ಕೆ ಹೋಗಿದೆ ಎಂದು ರವಿಕುಮಾರ್ ಆರೋಪಿಸಿದರು.

    https://www.youtube.com/watch?v=uIzLKO19ZW4

    https://www.youtube.com/watch?v=io5uv0Ut_pQ