ಬೆಳಗಾವಿ: ರಾಜ್ಯ ಪರಿಷತ್ ಚುನಾವಣೆಯ ಫೈಟ್ ಜೋರಾಗಿದೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾಮಿಲಿ ಹಾಗೂ ಜಾರಕಿಹೊಳಿ ಬ್ರದರ್ಸ್ ಆಪ್ತರ ನಡ್ವೆ ಟಿಕೆಟ್ ಹಗ್ಗಜಗ್ಗಾಟ ನಡೆಯುತ್ತಿದೆ. ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ ತೆರಳ್ತಿದ್ದಾರೆ.
ಅತ್ತ ಮಂಡ್ಯ ಬಿಜೆಪಿಯಲ್ಲಿ ಹಾಲಿ-ಮಾಜಿ ಸಿಎಂಗಳ ಆಪ್ತರ ಫೈಟ್ ಜೋರಾಗಿದೆ. ಬೊಮ್ಮಾಯಿ ಆಪ್ತ ಎಲೆಚಾಕನಹಳ್ಳಿ ಬಸವರಾಜು, ಬಿಎಸ್‍ವೈ ಸಂಬಂಧಿ ಬೂಕಳ್ಳಿ ಮಂಜುಗೆ ಟಿಕೆಟ್ ರೇಸ್‍ನಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟವಾಗುವ ಸಂಭವ ಇದೆ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಂದು ಅಥವಾ ನಾಳೆ ಪ್ರಕಟವಾಗಲಿದೆ. ಹಾಸನ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಸೂರಜ್ ರೇವಣ್ಣ ಅಭ್ಯರ್ಥಿ ಆಗೋದು ಬಹುತೇಕ ಖಚಿತ ಎನ್ನಲಾಗಿದೆ. ಇದನ್ನೂ ಓದಿ: ಚೀನಾ ಗಡಿ ಕ್ಯಾತೆ ನಡುವೆ ಭಾರತೀಯ ಸೇನೆಯಿಂದ ಆಪರೇಷನ್ ಹರ್ಕ್ಯುಲಸ್
ಬಿಜೆಪಿ ನಾಯಕರು ಇಂದಿನಿಂದ 4 ತಂಡಗಳ ಮೂಲಕ ರಾಜ್ಯ ಪ್ರವಾಸ ಕೈಗೊಳ್ತಿದ್ದಾರೆ. ಉತ್ತರ ಕನ್ನಡದಿಂದ ಯಡಿಯೂರಪ್ಪ, ದಾವಣಗೆರೆಯಿಂದ ಜಗದೀಶ್ ಶೆಟ್ಟರ್, ಕೊಪ್ಪಳದಿಂದ ನಳಿನ್ ಕುಮಾರ್ ಕಟೀಲ್, ಶಿವಮೊಗ್ಗದಿಂದ ಕೆ.ಎಸ್ ಈಶ್ವರಪ್ಪ ಜನಸ್ವರಾಜ್ ಯಾತ್ರೆ ನಡೆಸಲಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಜಯ ಪಾಟೀಲ್ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ, ನಾನು ಯಾಕೆ ಪ್ರತಿಕ್ರಿಯೆ ಕೊಡಲಿ, ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವ ಇಟ್ಟು ಮಾತನಾಡಬೇಕು. ಅದನ್ನು ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್
ಗೋಹತ್ಯೆ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾಯ್ದೆ ಜಾರಿಗೆ ತರುವುದು ಬಹಳ ಮುಖ್ಯ, ಗೋಹತ್ಯೆ ಇವತ್ತು ನಿನ್ನೆ ಬಂದಿದ್ದಲ್ಲ, 1965 ರಲ್ಲಿ ಬಂದಿದೆ. ಎಲ್ಲಿ ಅಕ್ರಮ ಸಾಗಾಣಿಕೆ ಇರುತ್ತದೆ. ಅಲ್ಲಿ ಹಿಡಿಯುವ ಕೆಲಸ ಮಾಡುತ್ತಾರೆ. ಅದನ್ನು ಹುಡುಕಿಕೊಂಡು ಹೋಗಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿನ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸಂಜೆ ಹಾನಗಲ್ ನಲ್ಲಿ ಸಭೆ ಕರೆದಿದ್ದೇವೆ. ಯಾರು, ಯಾರು ಆಕಾಂಕ್ಷಿ ಇದ್ದಾರೆ. ಅವರ ಪಟ್ಟಿ ಹೈಕಮಾಂಡ್‍ಗೆ ಕಳುಹಿಸುತ್ತೇವೆ. ಸೂಕ್ತ ವ್ಯಕ್ತಿಗೆ ಟಿಕೆಟ್ ಕೊಡುತ್ತೇವೆ. ಹಾನಗಲ್ ಹಾಗೂ ಸಿಂದಗಿಯಲ್ಲಿ ನಾವೇ ಗೆಲ್ಲುತ್ತೇವೆ. ಯಾರು ಗೆಲ್ಲುತ್ತಾರೆ ಹಾಗೂ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ. ಅವರಿಗೆ ನನ್ನ ಒಲವು ಎಂದಿದ್ದಾರೆ. ಇದನ್ನೂ ಓದಿ: ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ
ಬೆಳಗಾವಿ: ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿರೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿ ಆಗಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ವೇಳೆ ಮಾತಿನ ಭರದಲ್ಲಿ ಮಾಜಿ ಶಾಸಕರು ನಾಲಿಗೆ ಹರಿಬಿಟ್ಟಿದ್ದಾರೆ. ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಎಂಎಲ್‍ಎ ಆಗುವ ಮೊದಲು ನಾನು ನಿಮ್ಮ ಮಗಳು ಎಂದ್ರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ರಿಯ್ಯಾಕ್ಷನ್ ಕೊಡುತ್ತಿದ್ದಾರೆ. ಆ ರಿಯ್ಯಾಕ್ಷನ್‍ಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡುತ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್‍ದ್ದಾಗಿದೆ. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆಯಂತೆ ನೀವು ಎಂಎಲ್‍ಎ ಆಗಿದ್ದೀರಿ ಎಂದರು. ಇದನ್ನೂ ಓದಿ: ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು
ನೀವು ಕೆಲಸ ಮಾಡಿಲ್ಲ ಅಂತಾ ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಸ್ಕೀಮ್‍ಗಳಿದ್ದಾವೆ. ಏನೂ ಕೆಲಸ ಮಾಡಿಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಾಕುತ್ತಿರಲಿಲ್ಲ. ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಅಂತಾ ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ಸಂಜಯ್ ಪಾಟೀಲ್ ಟಾಂಗ್ ನೀಡಿದರು.
ಬೆಳಗಾವಿ: ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು ಎಂದು ಹೇಳುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ. ಎಂಎಲ್‍ಎ ಆಗುವ ಮೊದಲು ನಾನು ನಿನ್ನ ಮಗಳು ಎಂದಿದ್ದರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ನನಗೆ 20 ಸಾವಿರ ನೀಡಿದೆ – ತಪ್ಪೊಪ್ಪಿಕೊಂಡ ಲಷ್ಕರ್ ಉಗ್ರ
ಜನರ ಪ್ರತಿಕ್ರಿಯೆಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿದ್ದು. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆ ನೀವು ಎಂಎಲ್‍ಎ ಆಗಿದ್ದೀರಿ. ನೀವು ಕೆಲಸ ಮಾಡಿಲ್ಲ ಎಂದು ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಯೋಜನೆಗಳಿದೆ. ಏನೂ ಕೆಲಸ ಮಾಡಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಚ್ಚುತ್ತಿರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ
ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ. ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಎಂದು ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರದೇವರ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಧನಸಹಾಯದ ಚೆಕ್ ಗಳನ್ನು ವಿತರಿಸಿದರು.
ಗ್ರಾಮೀಣ ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಹಾಗೂ ಕೆಲವೆಡೆ ವೈಯಕ್ತಿಕವಾಗಿ ಕೂಡ ಲಕ್ಷ್ಮಿ ಹೆಬ್ಬಾಳಕರ್ ನೆರವು ನೀಡುತ್ತಿದ್ದಾರೆ. ಶ್ರೀ ಬೀರದೇವರ ದೇವಸ್ಥಾನಕ್ಕೆ 6.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 3.50 ಲಕ್ಷ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ 3.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 1.95 ಲಕ್ಷ ರೂ,ಗಳ ಚೆಕ್ ಗಳನ್ನು ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಜನರ ಆರೋಗ್ಯ ಕಾಳಜಿಗಾಗಿ ಉಚಿತ ಅಂಬುಲೆನ್ಸ್ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಯಡಿಯೂರಪ್ಪ ಪಕ್ಷಾತೀತವಾದ ಲೆಜೆಂಡ್ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ದು:ಖದಿಂದ ರಾಜೀನಾಮೆ ನೀಡುವ ಪ್ರಸಂಗ ಬರಬಾರದಿತ್ತು. ಆಡಳಿತದ ಮೇಲೆ ಇದರಿಂದ ಪರಿಣಾಮವಾಗುತ್ತದೆ ಎಂಬುದನ್ನು ಬಿಜೆಪಿ ಅರಿಯಬೇಕಿತ್ತು. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಬಿಜೆಪಿಯ ಬೆಳವಣಿಗೆ ಕಾತುರದಿಂದ ನೋಡುತ್ತಿದೆ. ಯಾವುದೇ ಪಕ್ಷ ಇರಲಿ ಜನರ ಕಾಳಜಿ ಮುಖ್ಯವಾಗಬೇಕು, ರಾಜಕೀಯ ಅಲ್ಲ, ಇಂತಹ ಸಂದರ್ಭಗಳಲ್ಲಿ ಸಿಎಂ ರಾಜೀನಾಮೆ ಬೆಳವಣಿಗೆ ಅವಶ್ಯಕತೆ ಇತ್ತಾ ಎಂಬುದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರಿಗೆ 50 ವರ್ಷ ರಾಜಕೀಯದಲ್ಲಿ ಅನುಭವ ಇದೆ. ಅವರು ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಾಗಿದ್ದಾರೆ. ಭಾವುಕರಾಗಿ ಯಡಿಯೂರಪ್ಪ ಭಾಷಣ ಮಾಡಿದರು. ಇಂತಹ ವ್ಯಕ್ತಿಯ ಆಡಳಿತದ ಯುಗ ಅಂತ್ಯವಾಯಿತು ಎಂದು ಆ ಕ್ಷಣದಲ್ಲಿ ನನಗೆ ಅನಿಸಿತು. ಯಡಿಯೂರಪ್ಪ ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಡಿಯೂರಪ್ಪಗೆ ಅವಧಿ ಪೂರ್ಣ ಮಾಡಲು ಅವಕಾಶ ಇರಬೇಕಿತ್ತು. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ, ದುಃಖದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದರು. ಇದನ್ನೂ ಓದಿ: ಯಡಿಯೂರಪ್ಪನವರಿಗೆ ಬಿಜೆಪಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ: ಸಿ.ಟಿ.ರವಿ
ರಾಜ್ಯದಲ್ಲಿ ಕೋವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ. ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ. ಇದರಿಂದ ಆಡಳಿತದ ಮೇಲೆ ಪರಿಣಾಮ ಆಗಲಿದೆ. ಆಡಳಿತಕ್ಕಿಂತ ಬಿಜೆಪಿಗೆ ರಾಜಕೀಯ ಮುಖ್ಯ ಎಂದು ಅನಿಸುತ್ತದೆ ಎಂದು ಬಜೆಪಿ ವಿರುದ್ಧ ಕಿಡಿಕಾರಿದರು.
ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ:
2021-2022ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಹೆಬ್ಬಾಳ್ಕರ್ ಹಿಂಡಲಗಾ ಗ್ರಾಮದಲ್ಲಿ ಚಾಲನೆ ನೀಡಿದರು. ಹಿಂಡಲಗಾ ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಈ ಕೃಷಿ ಅಭಿಯಾನವು ಸಮಗ್ರ ಕೃಷಿ ಅಭಿಯಾನದ ರಥವನ್ನು ಒಳಗೊಂಡಿದ್ದು, ಈ ರಥ ಗ್ರಾಮ-ಗ್ರಾಮಗಳಿಗೆ ತೆರಳಿ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತದೆ. ಸಮಗ್ರ ಕೃಷಿ ಅಭಿಯಾನವು ರೈತರಿಗೆ ಪೂರಕವಾಗಿದ್ದು, ಗೊಬ್ಬರ, ಬೀಜಗಳ, ಕ್ರಿಮಿನಾಶಕಗಳ ಹಾಗೂ ರೈತರ ಜಮೀನುಗಳ ವಿಮೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಈ ಸಮಗ್ರ ಕೃಷಿ ಅಭಿಯಾನ ಮೊಬೈಲ್ ಆ್ಯಪ್‍ನಲ್ಲಿಯೂ ಸಹ ಲಭ್ಯವಿದ್ದು, ಆ್ಯಪ್‍ನಲ್ಲಿ ರೈತರಿಗೆ ಅನುಕೂಲವಾಗುವಂತಹ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ತ್ವರಿತಗತಿಯಲ್ಲಿ ಸಿಗಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಆರ್ ಬಿ ನಾಯ್ಕರ್, ಕೃಷಿ ಅಧಿಕಾರಿ ಅರುಣ ಕಾಪಸೆ, ಸಹಾಯಕ ಕೃಷಿ ಅಧಿಕಾರಿ ಸಿ.ಎಸ್.ನಾಯ್ಕ್, ಸ್ಥಳೀಯ ಜನ ಪ್ರತಿನಿಧಿಗಳು, ಚೇತನ ಅಗಸ್ಗೆಕರ್, ರೋಹನ್ ಪಾವಸೆ, ವಿಠ್ಠಲ ದೇಸಾಯಿ, ರಾಮಚಂದ್ರ ಕುದ್ರೆಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ: ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಪುತ್ರ ಹರ್ಷಿತ್ ಜನ್ಮದಿನದ ಅಂಗವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿ ‘ಶೌರ್ಯ’ ಎನ್ನುವ ಹುಲಿಯನ್ನು ದತ್ತು ಪಡೆದಿದ್ದಾರೆ.
ಆರಂಭಿಕವಾಗಿ 1 ಲಕ್ಷ ರೂ.ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿರುವ ಅವರು, ಹುಲಿಯ ಸಂಪೂರ್ಣ ಜೀವಿತಾವಧಿ ಆರೈಕೆ ವಹಿಸಿಕೊಂಡಿರುವುದಾಗಿ ತಿಳಿಸಿದರು.
ಈ ಹುಲಿಯ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದು, ಇದರ ಜೀವಿತಾವಧಿಯವರೆಗೆ ಇದರ ಆರೈಕೆಯು ನನ್ನ ಮೇಲಿರುತ್ತದೆ. ಲಾಕ್ ಡೌನ್ ಕಾರಣದಿಂದಾಗಿ ಪ್ರಾಣಿ ಸಂಗ್ರಹಾಲಯಗಳಿಗೆ ಜನರ ಬರುವಿಕೆ ಕಡಿಮೆಯಾಗಿದ್ದು, ಪ್ರಾಣಿ ಸಂಗ್ರಹಾಲಯಗಳ ನಿರ್ವಹಣೆ ಮತ್ತು ಪ್ರಾಣಿಗಳ ಆರೈಕೆ ಮಾಡುವುದು ಅರಣ್ಯ ಇಲಾಖೆಗೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಅತೀ ಸಂತೋಷದಿಂದ ಈ ಶೌರ್ಯ ಹುಲಿಯನ್ನು ದತ್ತು ಪಡೆದಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?
ಇದರ ಆರೈಕೆಯ ಸಲುವಾಗಿ ಪ್ರಾರಂಭದಲ್ಲಿ ಒಂದು ಲಕ್ಷ ರೂ.ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದೇನೆ. ಸಾರ್ವಜನಿಕರು ಪ್ರಾಣಿಗಳ ಆರೈಕೆಗೆ ಮುಂದಾಗುವ ಮೂಲಕ ಮಾನವೀಯತೆಗೆ ಎಡೆ ಮಾಡಿಕೊಡಬೇಕು ಎಂದು ವಿನಂತಿಸಿದರು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಹೌದು. ವಿಧಾನಸಭೆಯ ಮೊಗಸಾಲೆಯ ವಿರೋಧ ಪಕ್ಷದ ನಾಯಕರ ಕೊಠಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚರ್ಚೆ ನಡೆಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಇಬ್ಬರ ಮಧ್ಯೆ ಗುಸು ಗುಸು, ಪಿಸು ಪಿಸು ನಡೆದಿದೆ. ಈ ಮೂಲಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ಬೆನ್ನಲ್ಲೇ ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಆಲರ್ಟ್ ಆದ್ರಾ ಎಂಬ ಪ್ರಶ್ನೆ ಎದ್ದಿದೆ.
ಕಲಾಪ ನಡೆಯುತ್ತಿದ್ದಾಗ ಹೊರಗೆ ಹೋಗಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಶ್ನೋತ್ತರ ಕಲಾಪ ಸಂದರ್ಭ ಗೈರಾಗಿದ್ದರು. ಇದೀಗ ಇಬ್ಬರು ನಾಯಕರ ನಡುವೆ ನಡೆದ ಮಾತುಕತೆ ಚರ್ಚೆಗೆ ಗ್ರಾಸವಾಗಿದೆ. ಇತ್ತ ಇಂದು ಸಂಜೆ 5 ಗಂಟೆಗೆ ಡಿಕೆಶಿ ಸುದ್ದಿಗೋಷ್ಠಿ ನಡೆಸಲಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಯಶವಂತಪುರ ಠಾಣೆಯ ಹತ್ತಿರದ ಅಪಾರ್ಟ್‍ಮೆಂಟ್ ಮತ್ತು ಹುಳಿಮಾವಿನಲ್ಲಿ ಕುಳಿತು ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪಿಸಿದ್ದರು
ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಟಾಕ್‍ಫೈಟ್ ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್‍ರನ್ಬು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಿದ್ದು ನಾನೇ ಎಂದು ಪದೇಪದೇ ಹೇಳುತ್ತಿದ್ದ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದ, ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿಸಿದ್ದು ನಾನೇ ಅಂತಾ ಹೇಳಿದ್ದರು. ಈ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಲಕ್ಷ್ನೀ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವುಮೆನ್ ಅಂತಾ ಲೇವಡಿ ಮಾಡಿದ್ರು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಜಮನಾಳ ಗ್ರಾಮದ ಬಳಿ ಡ್ಯಾಂ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಬಂದಿದ್ದ ರಮೇಶ್ ಜಾರಕಿಹೊಳಿ ಮುಳುಗಡೆಯಾಗುವ ಜಮೀನಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ರಮೇಶ್ ಜಾರಕಿಹೊಳಿ ಮಂತ್ರಿ ಮಾಡಿದ್ದು ನಾನೇ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ‘ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ನನಗೆ ವಾರ್ನಿಂಗ್ ಮಾಡಿದ್ದಾರೆ. ಆಕೆ ಮಾರ್ಕೆಟಿಂಗ್ ವುಮೆನ್, ಏನೇ ಮಾಡಿದರೂ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾಳೆ. ನನ್ನ ಯಾರ ಮಂತ್ರಿ ಮಾಡಿದ್ದಾರೆ ಅಂತಾ ಮುಂದೆ ಹೇಳ್ತೇನೆ. ಸಿದ್ದರಾಮಯ್ಯರನ್ನ ಕೇಳಿ ನನ್ನ ಯಾರು ಮಂತ್ರಿ ಮಾಡಿದ್ದು ಅಂತಾ. ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ಬಹಳಷ್ಟು ಮನವಿ ಮಾಡಿದ್ದಾರೆ ಎಂದರು. ಇನ್ನು ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಸತೀಶ್ ಜಾರಕಿಹೊಳಿ, ನನ್ನದು ಜಾಯಿಂಟ್ ವೆಂಚರ್ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಮೋಸ್ಟ್ ವೆಲಕಮ್.. ಯಾರ ಬಂದರೂ ಹೃದಯಪೂರ್ವಕ ಸ್ವಾಗತ ಮಾಡ್ತೇನೆ ಎಂದರು.
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ದೇಶದ ವಿವಿಧ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಪ್ರತ್ಯೇಕ ಅಧಿಸೂಚನೆ ಪ್ರಕಟಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇ 2ರಂದು ರಾಜ್ಯದ 3 ವಿಧಾನಸಭಾ, ಲೋಕಸಭಾ ಉಪಚುನಾವಣೆ ಫಲಿತಾಂಶ ಬರುತ್ತೆ. ಯಾವ ಹಂತದಲ್ಲಿ ಚುನಾವಣೆ ಮಾಡ್ತಾರೆ ಅವರಿಗೆ ಬಿಟ್ಟ ವಿಷಯ ಎಂದರು. ಇನ್ನು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಜಗದೀಶ್ ಶೆಟ್ಟರ್ ಸ್ಪರ್ಧಿಸಬೇಕೆಂಬ ಒತ್ತಡವಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇಲ್ಲ. ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಅವರ ಪರ ಕೆಲಸ ಮಾಡ್ತೇವೆ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಹೊಸ್ತಿಲಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಟಾಕ್ ಫೈಟ್ ಜೋರಾಗಿದ್ದು, ಚುನಾವಣೆ ವೇಳೆ ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಾರಾ, ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆಗೆ ಟಿಕೆಟ್ ಸಿಗುತ್ತಾ ಅಥವಾ ಹೊಸಮುಖಕ್ಕೆ ಅವಕಾಶ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕು.
– ಯಾರೇ ಏನೇ ಒದರಾಡಿದ್ರೂ, ಹೇಳಿದ್ರೂ ದೇವಸ್ಥಾನ ಹಾಳಾಗಲ್ಲ
– ಸತೀಶ್ ಜಾರಕಿಹೊಳಿ ಜೊತೆ ಹೆಬ್ಬಾಳ್ಕರ್ ಜಾಯಿಂಟ್ ವೆಂಚರ್
ಬೆಳಗಾವಿ: ಕುಂದಾನಗರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಾಕ್ಸಮರ ಮುಂದುವರಿದಿದೆ. ರಮೇಶ್ ಜಾರಕಿಹೊಳಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಹೆಬ್ಬಾಳ್ಕರ್, ಯಾರೇ ಏನೇ ಒದಾಡಿದ್ರೂ ಹೇಳಿದರೂ ದೇವಸ್ಥಾನ ಹಾಳಾಗಲ್ಲ. ಕ್ಷೇತ್ರದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮುಂದಿನ ಬಾರಿ ಗೋಕಾಕ್ ನಿಂದ ಸ್ಪರ್ಧೆ ಮಾಡುವಂತೆ ಅಲ್ಲಿಯ ಜನರು ಒತ್ತಡ ಹಾಕುತ್ತಿದ್ದಾರೆ. ಬಹುತೇಕರು ಕರೆ ಮಾಡಿ ಮಾತನಾಡಿದ್ದು, ಬೆಂಗಳೂರಿಗೂ ಬಂದು ಭೇಟಿಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಾಸಕರನ್ನ ಗೆಲ್ಲಿಸುವ ಜವಾಬ್ದಾರಿ ನನಗೂ ಕೊಟ್ಟಿದ್ದಾರೆ. ನಾವೆಲ್ಲ ಹೈಕಮಾಂಡ್ ಮುಂದೆ ಕಾರ್ಯಕರ್ತರು, ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತೇವೆ ಎಂದರು.
ಬೆಳಗಾವಿಯ 18 ಕ್ಷೇತ್ರಗಳ ಪೈಕಿ ರಮೇಶ್ ಜಾರಕಿಹೊಳಿ ಗ್ರಾಮೀಣ ಕ್ಷೇತ್ರ ಮಾತ್ರ ಫೋಕಸ್ ಮಾಡೋದು ಆಗಬಾರದಿತ್ತು. ಪಿಡಿಓಗಳ ಮಟ್ಟಿಗೆ ಇಳಿದು ರಾಜಕಾರಣ ಮಾಡುವ ಅವಶ್ಯಕತೆ ಇರಲಿಲ್ಲ. ಆದ್ರೆ ಇದನ್ನೆಲ್ಲ ನಿಭಾಯಿಸುವ ಶಕ್ತಿ ನನಗಿದೆ. ನಾನು ರಾಮನ ಭಕ್ತೆ, ರಾಮಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ದೇಣಿಗೆ ಕೊಟ್ಟಿದ್ದೇನೆ. ನನ್ನನ್ನು ಬಸ್ ನಿಲ್ದಾಣದಲ್ಲಿ ಹುಡುಕಬೇಕು ಅಂತ ಹೇಳಿದ್ದಾರೆ. ರಾಮನ ಪಕ್ಷ ಅಂತ ಹೇಳಿಕೊಳ್ಳುವ ಸಚಿವರು ಒಬ್ಬ ಮಹಿಳೆ ಬಗ್ಗೆ ಮಾತನಾಡೋದನ್ನು ಜನತೆ ಗಮನಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಹುಡುಕಬೇಕು ಅಂತಾ ಹೇಳುವುದು. ಧಾರವಾಡ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಬೇಕು ಅನ್ನುವುದು ಅವರಿಗೆ ಶೋಭೆ ತರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಹುಕಾರನ ಸೋಲಿಗೆ ಜಂಟಿ ಕಾರ್ಯಾಚರಣೆ: ಇದೇ ವೇಳೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಗೋಕಾಕ್ ಲಿಂಗಾಯತ ಮುಖಂಡರನ್ನ ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದರು. ಇದು ನನ್ನ ಮತ್ತು ಸತೀಶ್ ಜಾರಕಿಹೊಳಿಯವರ ಜಾಯಿಂಟ್ ವೆಂಚರ್. ಬೆಳಗಾವಿ ಕುಂದಾ ಜೊತೆಗೆ ಗೋಕಾಕ್ ಕರದಂಟು ತಿನ್ನಬಾರದಾ? ಕುಂದಾ ಜೊತೆಗೆ ಕರದಂಟು ಚೆನ್ನಾಗಿರುತ್ತೆ ಎಂದು ಹೇಳುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಹೆಬ್ಬಾಳ್ಕರ್ ಸೋಲಿಸುತ್ತೇನೆ ಅಂದಿದ್ದ ಸಾಹುಕಾರ್ ಗೆ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ದೇವರು ಒಳ್ಳೆಯದು ಮಾಡಲಿ: ಕಾಲ ಒಂದೇ ರೀತಿಯಾಗಿ ಇರುವುದಿಲ್ಲ. ಇಂದು ಅವರ ಸರ್ಕಾರ ಇದೆ ನಾಳೆ ನಮ್ಮ ಸರ್ಕಾರ ಇರುತ್ತೆ. ದ್ವೇಷದ ರಾಜಕಾರಣ ನನಗೂ ಶೋಭೆ ತರುವುದಿಲ್ಲ ಅವರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು ಹೊರತು ಕುಂಟಿತಗೊಳಿಸಬಾರದು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದರು.