Tag: laxmi hebbalkar

  • ಈಗಿನಿಂದ್ಲೇ ಡಬ್ಬಿ, ಕುಕ್ಕರ್‌ಗಳನ್ನು ಹಂಚಲಾಗ್ತಿದೆ- ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ

    ಈಗಿನಿಂದ್ಲೇ ಡಬ್ಬಿ, ಕುಕ್ಕರ್‌ಗಳನ್ನು ಹಂಚಲಾಗ್ತಿದೆ- ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ

    ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲೀ ಈಗಿನಿಂದಲೇ ಡಬ್ಬಿ-ಕುಕ್ಕರ್ ಗಳನ್ನು ಹಂಚಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಚುನಾವಣೆ (Election) ಮಾಡುವ ಪದ್ಧತಿ ಬೇರೆಲ್ಲೂ ಇಲ್ಲ. ಈಗಲೇ ಡಬ್ಬಿ- ಕುಕ್ಕರ್ ಗಳನ್ನು ಹಂಚುವ ಕೆಲಸಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿವೆ. ನೀವು ಒಳ್ಳೆಯ ಕೆಲಸ ಮಾಡಿದ್ರೆ ಡಬ್ಬಿ ಹಂಚುವ ಅವಶ್ಯಕತೆ ಏನಿದೆ?. ಅವರು ಡಬ್ಬಿ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ದೋಸೆ ಸವಿದಿದ್ದನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು

    ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. 10 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಶಾಸಕ(MLA) ನಾಗುವ ಆಸೆ ಇದೆ. ನಾನೇನೂ ಸನ್ಯಾಸಿ ಅಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಎರಡು ಸಲ ಶಾಸಕನಾಗಿದ್ದೇನೆ. ಈಗ ಜಿಲ್ಲಾಧ್ಯಕ್ಷನಾಗಿರುವೆ ಮುಂದೆಯೂ ರಾಜಕಾರಣದಲ್ಲಿ ಇರುತ್ತೇನೆ. ಟಿಕೆಟ್ ಯಾರಿಗೆ ಸಿಗುತ್ತದೆಯೋ ಅವರ ಪರ ಎಲ್ಲರೂ ಕೆಲಸ ಮಾಡಬೇಕು ಎಂದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗುತ್ತಿರುವುದು ತಪ್ಪಲ್ಲ. ಪಾರ್ಟಿ ಸಂಘಟನಾತ್ಮಕವಾಗಿ ಬೆಳೆಯುತ್ತಿರುವ ಕಾರಣಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಿದೆ. ಜಿಲ್ಲಾ ಅಧ್ಯಕ್ಷನಾಗಿ ಆ ಬಗ್ಗೆ ನನಗೆ ಹೆಮ್ಮೆಯಿದ್ದು ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡ್ತಿದ್ದೇನೆ. ಗ್ರಾಮೀಣ ಕ್ಷೇತ್ರದಲ್ಲೂ ಸಂಘಟನೆ ನಡೆದಿದೆ ಎಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಯುವಕರ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಯುವಕರ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಅಗ್ನಿಪಥ್ ವಿರೋಧಿಸಿ ಸೇನಾಕಾಂಕ್ಷಿಗಳು ಬೆಳಗಾವಿಗೆ ಬರುವುದನ್ನು ತಡೆಹಿಡಿದಿದ್ದಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ಎಲ್ಲರ ಅಧಿಕಾರ ಎಂದಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಕಾಂಗ್ರೆಸ್‌ನವರು ಕೂಡ ಅದನ್ನೇ ಬಯಸುತ್ತಾರೆ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಗೊತ್ತಾಗಿರುವುದರಿಂದ ಪಥ ಸಂಚಲನ ಮಾಡಿ, ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಪ್ರತಿಯೊಂದು ಟೋಲ್ ನಾಕಾನಲ್ಲಿ ಜನರನ್ನು ತಡೆಯುತ್ತಿದ್ದಾರೆ. ಆದರೆ ಈ ರೀತಿ ಎಷ್ಟು ದಿನ ಮಾಡುತ್ತಾರೆ? ಎಷ್ಟು ದಿನ ಹೋರಾಟ ತಡೆಯಲು ಸಾಧ್ಯವಾಗುತ್ತದೆ? ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಿದೆ, 4 ವಾರ ಕಾಲಾವಕಾಶ ನೀಡಿ: ಪೊಲೀಸರಿಗೆ ನೂಪುರ್ ಮೇಲ್

    ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಬಿಜೆಪಿಯವರಿಗೆ ಯುವಕರನ್ನು ಹಾಗೂ ಜನರನ್ನು ಎತ್ತಿ ಕಟ್ಟಿ ರೂಢಿ ಇದೆ. ಬೀಸುವ ಗಾಳಿಯನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಉರಿಯುವ ಸೂರ್ಯನನ್ನು ನಂದಿಸೋಕೆ ಆಗಲ್ಲ. ನಾನು ಯೋಜನೆ ವಿರುದ್ಧ ಎಂದು ಹೇಳಲ್ಲ. ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ. 8 ವರ್ಷದಲ್ಲಿ 16 ಕೋಟಿ ಕೆಲಸ ಕೊಡುತ್ತೇನೆ ಎಂದು ಪ್ರಧಾನಿ ವಾಗ್ದಾನ ಮಾಡಿದ್ದರು. ಪಕೋಡ ಮಾರಿ ಎಂದು ಹೇಳಿದ್ದರು. ಈಗ ಅಗ್ನಿಪಥದಲ್ಲಿ ಅಗ್ನಿವೀರರು ಎನ್ನುತ್ತಿದ್ದಾರೆ. ಅಗ್ನಿವೀರರಾಗಿ 4 ವರ್ಷ ಆದಮೇಲೆ ಅವರ ಭವಿಷ್ಯ ಏನು? 75 ವರ್ಷದ ರಕ್ಷಣಾ ಸಚಿವರು, 71 ವರ್ಷದ ಪ್ರಧಾನಿಗೆ ರಿಟೈರ್‌ಮೆಂಟ್ ಇಲ್ಲ. ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್‌ಸಿ ಆಗಿದ್ದಾರೆ. ಇದೀಗ ಯುವಕರು 21 ಅಥವಾ 25 ವರ್ಷಕ್ಕೆ ನಿವೃತ್ತಿಯಾದರೆ ಸಹಿಸಿಕೊಳ್ಳುತ್ತಾರಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ: ಧೃವನಾರಾಯಣ್

    Live Tv

  • ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್

    ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ: ಲಕ್ಷ್ಮೀ ಹೆಬ್ಬಾಳ್ಕರ್

    – ಆರ್‌ಎಸ್‌ಎಸ್‌ ವಾದ ತರುತ್ತಿದ್ದಾರೆ

    ಬೆಳಗಾವಿ: ಬಿಜೆಪಿ ಸರ್ಕಾರಕ್ಕೆ 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಎಂಬ ಡ್ರಾಮಾ ರಿಲೀಸ್ ಮಾಡಿದ್ದಾರೆ.  ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ ನೋಡೋಣ. ಯಾವ ಮಂತ್ರಿ, ಎಂಎಲ್‍ಎ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗ್ತಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    Amith

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಅವರಿಗೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಾಂಗ್ರೆಸ್‍ನವರು ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು ಕ್ರಮಕೈಗೊಂಡಿದ್ದಾರೆ. ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು. ಆದ್ರೆ, ಪ್ರತಿಭಟನೆಯನ್ನು ಒಂದು ದಿನ ತಡೆಯಬಹುದು ಅಷ್ಟೇ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ

    ಯಾರನ್ಯಾರು ತಡೆಯೋಕಾಗಲ್ಲ. ನನ್ನನ್ನು ನೀವು ತಡೆಯೋಕಾಗಲ್ಲ. ನಿಮ್ಮನ್ನು ನಾವು ತಡೆಯೋಕಾಗಲ್ಲ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಯಾವ ಹೋರಾಟ ತಡೆಯ ಸಾಧ್ಯವಿಲ್ಲ ಎರಡು ವರ್ಷ ಕೊರೊನಾ ಟೈಮ್ ಇತ್ತು. ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು. 1 ಲಕ್ಷ 35 ಸಾವಿರ ಹುದ್ದೆ ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ್ ಯೋಜನೆ. ಅಗ್ನಿಪಥ್ ಯೋಜನೆಯಲ್ಲಿ ರಿಟೈರ್‍ಮೆಂಟ್ ಆದವರನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾ ಬಿಜೆಪಿ ಲೀಡರ್ ಹೇಳ್ತಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ. ಬಡವರ ಮಕ್ಕಳು ಹೋಗ್ತಾರೆ. 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್‍ಎಸ್‍ಎಸ್ ವಾದ ತರುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ವಿರೋಧ ಇಲ್ಲ. ಜಾಬ್ ಸೆಕ್ಯೂರಿಟಿ, ಹೆಲ್ತ್ ಸೆಕ್ಯೂರಿಟಿ, ಪೇನ್ಷನ್ ಇಲ್ಲ. ರಿಟೈಡ್ ಆದ ಎಷ್ಟೋ ಮಾಜಿ ಸೈನಿಕರಿಗೆ ಉದ್ಯೋಗ ಸಿಗುತ್ತಿಲ್ಲ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    Live Tv

  • ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಬೆಳಗಾವಿ: ವಾಯುವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ವ್ಯಕ್ತಪಡಿಸಿದರು.

    ಬೆಳಗಾವಿ ನಗರದ ಮರಾಠಾ ಸಭಾಂಗಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಅತ್ಯಂತ ಸೂಕ್ಷ್ಮ, ಬುದ್ಧಿವಂತರ ಚುನಾವಣೆಯಾಗಿದೆ. ಸ್ವತಂತ್ರ ಸಿಕ್ಕ ನಂತರ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು, ಅಭಿವೃದ್ಧಿ ಕಾಣಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಶಿಕ್ಷಣ ನೀತಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ಕ್ರಾಂತಿಯನ್ನು ಮಾಡಿದೆ. ಸದ್ಯ ದೇಶ ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆಯಲು ಕಾಂಗ್ರೆಸ್ ಪಕ್ಷದ ನೀತಿ ಕಾರಣ ಎಂದರು. ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

    ಎಲ್ಲ ಕ್ಷೇತ್ರದಲ್ಲೂ ಅಪರಾ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರು ಕ್ಷೇತ್ರದ ಅಭ್ಯರ್ಥಿ ಆಗಿರುವ ಪ್ರಕಾಶ್ ಹುಕ್ಕೇರಿ ಆಯ್ಕೆ ಮಾಡಲಾಗಿದ್ದು, ಅವರ ಅನುಭವದ ಉಪಯೋಗ ಮಾಡಿಕೊಳ್ಳಬೇಕಿದೆ. ಬೆಳಗಾವಿಯಲ್ಲಿ ಭೀಮ್ಸ್ ಕಾಲೇಜು ಸ್ಥಾಪನೆ ಸೇರಿದಂತೆ ಪ್ರಕಾಶ್ ಹುಕ್ಕೇರಿ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಕೆಲಸಗಳು ನಮಗೆ ಆದರ್ಶವಾಗಿವೆ ಎಂದು ತಿಳಿಸಿದರು.

    ಇಳಿವಯಸ್ಸಿನಲ್ಲೂ ಕ್ಷೇತ್ರದಲ್ಲಿ ಓಡಾಟ ಮಾಡುವ ಮೂಲಕ ಅಭಿವೃದ್ಧಿ ಕಾರ್ಯವನ್ನು ಮಾಡ್ತಿದ್ದಾರೆ. ಹೀಗಾಗಿ ಪದವೀಧರರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಗೆಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ 

  • ಬಿ.ಎಸ್ ಯಡಿಯೂರಪ್ಪ ಭೇಟಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬಿ.ಎಸ್ ಯಡಿಯೂರಪ್ಪ ಭೇಟಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಇಂದು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.

    ಈಶ್ವರಪ್ಪ ರಾಜೀನಾಮೆ ಆಗ್ರಹಿಸಿ ಖಾಸಗಿ ಹೊಟೆಲ್ ನಲ್ಲಿ ಮಾಜಿ ಸಿಎಂ ಅವರನ್ನು ಶಾಸಕಿ ಭೇಟಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಯಡಿಯೂರಪ್ಪ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಪಕ್ಷದವರೇ ಈಶ್ವರಪ್ಪ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಸಂತೋಷ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಿ ಎಂದು ಶಾಸಕಿ ಆಗ್ರಹಿಸಿದರು. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ

    ಬೆಳಗಾವಿಯ ಸುಭಾಷ್ ನಗರದಲ್ಲಿ ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ ಕಟ್ಟಡ ಅಡಿಗಲ್ಲು ಸಮಾರಂಭ ಕಾರ್ಯಕ್ರಮದಲ್ಲಿ ಬಿಎಸ್‍ವೈ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಮುಖಾಮುಖಿಯಾದರು. ಕಾರ್ಯಕ್ರಮದಲ್ಲಿ ಸಂಸದೆ ಮಂಗಲ ಅಂಗಡಿ, ಸಚಿವ ಮುರುಗೇಶ್ ನಿರಾಣಿ, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸೇರಿ ಹಲವರು ಭಾಗಿಯಾಗಿದ್ದಾರೆ.

  • ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾಗೊಳಿಸಿ: ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

    ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾಗೊಳಿಸಿ: ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

    ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ ಮಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಆಕಸ್ಮಿಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಯತ್ನ ನಡೆಸಿದ್ದಾರೆ. ಹೀಗಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು. ಜೊತೆಗೆ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎನ್ನುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಉದ್ವಿಗ್ನ ಪರಿಸ್ಥಿತಿಯಿಂದ ಕರ್ನಾಟಕಕ್ಕೆ ಬರಲು ಕೈಗಾರಿಕೋದ್ಯಮಿಗಳು ಹೆದರುತ್ತಿದ್ದಾರೆ: ಎಂ.ಬಿ.ಪಾಟೀಲ್‌

    ಬೈಕ್- ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಜಗಳ ನಡೆದು ಆಕಸ್ಮಿಕವಾಗಿ ನಡೆದ ಕೊಲೆ ಪ್ರಕರಣವನ್ನು ಗೃಹ ಸಚಿವರು ತಿರುಚಲು ಯತ್ನಿಸಿದ್ದಾರೆ. ಇಡೀ ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರಿಂದ ಇಂತಹ ಆಘಾತಕಾರಿ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದಂತೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಸಚಿವರನ್ನು ತಕ್ಷಣ ವಜಾಗೊಳಿಸಿ ಬಂಧಿಸಬೇಕು ಎಂದು ಹೆಬ್ಬಾಳ್ಕರ್ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಂಧ್ರ ಸರ್ಕಾರದಿಂದ ವಿಶೇಷ ಆದ್ಯತೆ

  • ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ಬೆಳಗಾವಿ: ಮಂತಾಂತರ ನಿಷೇಧ ಕಾಯ್ದೆ ಪರಿಷತ್‍ನಲ್ಲಿ ಮಂಡನೆಯಾಗಿಲ್ಲ. ಮಂಡನೆಯಾದ ಬಳಿಕ ಯಾರಿಗೆ ಬೆಂಬಲಿಸಬೇಕು ಎಂದು ನಿರ್ಧರಿಸುತ್ತೇನೆ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೀಗ ಪಕ್ಷೇತರ ಪರಿಷತ್ ಸದಸ್ಯನಾಗಿದ್ದೇನೆ. ಹಾಗೇ ಇರುತ್ತೇನೆ. ವಿಷಯಾಧಾರಿತವಾಗಿ ನಾನು ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ. ಪರಿಷತ್ ನಲ್ಲಿ ಬಿಲ್ ಮಂಡನೆ ಆಗಲಿ, ನಂತರ ಈ ಬಗ್ಗೆ ನೋಡೋಣ. ಈ ಸಂಬಂಧ ನನ್ನನ್ನು ಬಿಜೆಪಿ – ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ನನ್ನ ಗುರುಗಳು ಎಂದರು. ಇದನ್ನೂ ಓದಿ: ಮಕ್ಕಳ ಹೃದಯ ಚಿಕಿತ್ಸೆಗೆ ನೆರವಾದ ಟಾಲಿವುಡ್ ಹೃದಯವಂತ ಪ್ರಿನ್ಸ್ 

    ಬೆಳಗಾವಿ ನಗರ, ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಸದ ವಿಚಾರವಾಗಿ ಮಾತನಾಡಿದ ಅವರು, ನಾನು ಜನರಿಗಾಗಿ, ಅವರ ಸೇವೆಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಪ್ರಚಾರಕ್ಕೆ ಮಾತ್ರ ಕೆಲಸವನ್ನು ಮಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯವಾಡಿದರು.

    ಮತಾಂತರ ಕುರಿತು ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ಬೆಂಬಲಿಸಬೇಡಿ ಎಂದು ಸಿದ್ದರಾಮಯ್ಯ ಹೇಳಿದರೆ ನೋಡೋಣ. ಕಾಂಗ್ರೆಸ್ಸಿನಲ್ಲಿ ಕೆಲ ಸ್ವಯಂಘೋಷಿತ ನಾಯಕರಿದ್ದಾರೆ. ಅಂಥ ನಾಯಕರಿಂದಲೇ ಕಾಂಗ್ರೆಸ್ ಬೆಂಬಲಿಸಲು ವಿಚಾರ ಮಾಡಬೇಕಿದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಲಖನ್ ಪರೋಕ್ಷ ವಾಗ್ದಾಳಿ ನಡೆಸಿದರು.

    ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿ ಪರಿಗಣನೆ ವಿಚಾರಕ್ಕೆ, ರಮೇಶ್ ಜಾರಕಿಹೊಳಿ ಸಂಪುಟ ಸೇರುತ್ತಾರೋ? ಇಲ್ಲವೋ ನನಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಹಳಷ್ಟಿದೆ. ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

  • ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಪಣಜಿ: ಗೋವಾ ಮಾಜಿ ರಾಜ್ಯಪಾಲರು ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರದಿಂದ ಬಹಳಷ್ಟು ಭ್ರಷ್ಟಾಚಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಬಿಜೆಪಿ ಅವರಿಗೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಗೋವಾದ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಆದರೆ ಮಾಜಿ ರಾಜ್ಯಪಾಲರು ಕೋವಿಡ್ ಸಮಯದಲ್ಲಿ ಗೋವಾ ಬಿಜೆಪಿ ಸರ್ಕಾರ ಬಹಳಷ್ಟು ಹಗರಣ, ಭ್ರಷ್ಟಾಚಾರ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ನೇಮಿಸಿದ ರಾಜ್ಯಪಾಲರು ಈ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕಿಂತ ಏನಾದರೂ ಸಾಕ್ಷಿ ಬೇಕಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.

    ಗೋವಾದ ಪ್ರಬುದ್ಧ ಮತದಾರರು ಭ್ರಮನಿರಸನಗೊಂಡಿದ್ದಾರೆ. ಹತ್ತು ವರ್ಷದಿಂದ ಬಿಜೆಪಿಯವರು ಏನ್ ಮಾತನಾಡಿದ್ದಾರೋ ಅದನ್ನು ಮಾಡಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಜನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ

    ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚು ಪ್ರಚಾರ ನಡೆಸುತ್ತಿದೆ. ಈ ಬಾರಿ ಶಿವಸೇನೆ, ಆಪ್ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್

  • ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ

    ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್: ಸಚಿವ ಈಶ್ವರಪ್ಪ

    ಬೆಳಗಾವಿ: ಶಾಸಕರೊಬ್ಬರ ಸಂತೃಪ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಂಇಎಸ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ಅನಗೋಳದ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಸಚಿವರು ಇಂದು ಭೇಟಿ ನೀಡಿದರು. ಅನಗೋಳದ ಕನಕದಾಸ ಕಾಲೋನಿಯಲ್ಲಿ ರಾಯಣ್ಣ ಪ್ರತಿಮೆಗೆ ಹಾರ ಹಾಕಿ ನಮನ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಡಿಕೆಶಿ ಮತ್ತು ಸಿದ್ದರಾಮಯ್ಯ ದ್ವಂದ್ವ ಹೇಳಿಕೆ ಬಗ್ಗೆ ಕಿಡಿಕಾರಿದ ಈಶ್ವರಪ್ಪ, ಸದನದೊಳಗೆ ಎಂಇಎಸ್ ನಿಷೇಧ ಮಾಡಲು ಸಿದ್ದರಾಮಯ್ಯ ಒತ್ತಾಯ ಮಾಡುತ್ತಾರೆ. ಹೊರಗೆ ಡಿಕೆಶಿ ಎಂಇಎಸ್ ಪರ ಬ್ಯಾಟ್ ಬೀಸುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಜನರ ಮನವೊಲಿಸಲು ಡಿಕೆಶಿ ದ್ವಂದ್ವ ಹೇಳಿಕೆ ನೀಡುತ್ತಾರೆ. ಕೃತ್ಯದ ಹಿಂದೆ ಯಾವ ಸಂಘಟನೆ ಇದೆ. ಯಾವ ರಾಜಕೀಯ ಶಕ್ತಿ ಇದೆ ಎನ್ನುವ ಬಗ್ಗೆ ತನಿಖೆ ಮಾಡುತ್ತೇವೆ, ಯಾರನ್ನು ಕೂಡ ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಕಾಂಗ್ರೆಸ್ ನಲ್ಲಿ ಎರಡು ಧ್ವನಿ ಇದೆ. ಡಿಕೆಶಿದೊಂದು ಸಿದ್ದರಾಮಯ್ಯದೊಂದು ಧ್ವನಿ ಇದೆ. ಎಂಇಎಸ್ ಗೂ ಕೃತ್ಯಕ್ಕೆ ಸಂಬಂಧ ಇಲ್ಲವೆಂದು ಡಿಕೆಶಿ ಹೇಳೋ ಮೂಲಕ ವಿವಾದ ಮಾಡುತ್ತಿದ್ದಾರೆ. ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಎಂಇಎಸ್ ಬೆಂಬಲ ಪಡೆಯಲು ಈ ರೀತಿ ಹೇಳುತ್ತಿದ್ದಾರೆ. ಜೀವಂತವಾಗಿದ್ದೇವೆ ಎಂದು ತೋರಿಸಲು ಸಂಘಟನೆ ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲಿ ಈ ದುಷ್ಕೃತ್ಯ ಮಾಡೋರಿಗೆ ಗುಂಡು ಹಾಕಿ ಸಾಯಿಸಬೇಕು ಎಂದು ತಿಳಿಸಿದರು.

    ರಾಯಣ್ಣ ಮತ್ತು ಶಿವಾಜಿ ಬಗ್ಗೆ ಗೊತ್ತಿಲ್ಲದ ಕೆಲ ಅಲ್ಪರು ಅವರ ವಿರುದ್ಧ ಕೀಳಾದ ಕೃತ್ಯ ಎಸಗುತ್ತಾರೆ. ಗಡಿಪಾರು, ದೇಶದ್ರೋಹ ಅಲ್ಲ ಉತ್ತರಪ್ರದೇಶದಲ್ಲಿ ಮಾಡಿದಂತೆ ಗುಂಡು ಹಾರಿಸಬೇಕು. ಗುಂಡು ಹಾರಿಸೋ ಬಗ್ಗೆ ಸದನದಲ್ಲಿ ಹೇಳಿದ್ದೇನೆ, ಇಲ್ಲಿಯೂ ಹೇಳ್ತೇನೆ. ಹಾಗೆ ಮಾಡಿದ್ರೆ ಈ ರೀತಿಯ ಕೃತ್ಯಕ್ಕೆ ಕಡಿವಾಣ ಬೀಳುತ್ತದೆ. ಜನಾಪೇಕ್ಷೆ ಮೇರೆಗೆ ಸುವರ್ಣ ಸೌಧದ ಮುಂಭಾಗದಲ್ಲಿ ಚೆನ್ನಮ್ಮ ಮತ್ತು ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು

    ಮನೆಯಲ್ಲಿ ಯಾವುದೇ ಭಾಷೆ ಮಾತನಾಡಲಿ, ರಾಜ್ಯದಲ್ಲಿ ಇರೋರು ಎಲ್ಲರೂ ಕನ್ನಡಿಗರು. ಎಂಇಎಸ್ ಪುಂಡರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ಗಂಭೀರವಾಗಿದೆ. ರಾಜಕೀಯ ಪಕ್ಷ, ಸಂಘಟನೆ, ರಾಜಕೀಯ ಮುಖಂಡರು ಯಾರೇ ಇರಲಿ ಬಿಡೋದಿಲ್ಲ. ಮಹಾರಾಷ್ಟ್ರ ಹೇಡಿತನದ ಸಮಿತಿಯಾಗಿದೆ ಹಗಲಲ್ಲಿ ಕೃತ್ಯ ಮಾಡಿದ್ರೆ ಕನ್ನಡಿಗರು ಅವರನ್ನು ಚಿಂದಿ ಚಿಂದಿ ಮಾಡ್ತಿದ್ರು. ಖಂಡನಾ ನಿರ್ಣಯ ಸದನದಲ್ಲಿ ತೆಗೆದುಕೊಳ್ಳಲಾಗಿದೆ. ಸಂಘಟನೆ ನಿಷೇಧ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡ್ತೇವೆ ಎಂದು ಹೇಳಿದರು.

  • ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

    ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

    ಚಿಕ್ಕೋಡಿ(ಬೆಳಗಾವಿ): ಕರ್ನಾಟಕವನ್ನು ಕನ್ನಡಾಂಬೆ ಎಂದು ಕರೆಯುತ್ತೇವೆ. ಆದರೆ ಎರಡು ದಿನಗಳ ಹಿಂದೆ ಹೆಣ್ಣು ಮಕ್ಕಳಿಗೆ ಯಾವ ರೀತಿ ಥೂ ಥೂ..ಎನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ರಾಯಬಾಗ ಮಹಾವೀರ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜನೆ ಮಾಡಿದ್ದ ಪ್ರಚಾರ ಸಭೆಯ ವೇದಿಕೆ ಭಾಷಣದಲ್ಲಿ ಹೆಬ್ಬಾಳ್ಕರ್ ಮಾತನಾಡಿದರು. ಕಳೆದ ಎರಡು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಥೂ ಥೂ…..ಎಂದಿದ್ದರು. ಇದೀಗ ಹೆಬ್ಬಾಳ್ಕರ್ ಅವರು ತಮ್ಮ ಭಾಷಣದಲ್ಲಿ ರಮೇಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪ ಮಾಡದೇ ಟಾಂಗ್ ಕೊಟ್ಟರು.

    ಭಾರತ ದೇಶದಲ್ಲಿ ಹಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಭಾರತ ದೇಶದ ಹೆಸರು ಕೂಡ ಒಬ್ಬ ಹೆಣ್ಣುಮಗಳ ಹೆಸರಾಗಿದೆ. ಕರ್ನಾಟಕವನ್ನು ಕನ್ನಡಾಂಬೆ ಎಂದು ಕರೆಯುತ್ತೇವೆ. ಆದರೆ ತಾವೇ ನೋಡಿದ್ದೀರಿ ಹೆಣ್ಣು ಮಕ್ಕಳಿಗೆ ಯಾವ ರೀತಿ ಥೂ ಥೂ…ಎನ್ನುತ್ತಿದ್ದಾರೆ ಎಂದು ಗರಂ ಆದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಥೂ ಥೂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಮಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ನನ್ನ ಸಹೋದರನಿಗೆ ಒಂದು ಅವಕಾಶ ಕೊಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.