Tag: laxmi hebbalkar

  • ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ

    ಬೆಳಗಾವಿಯಲ್ಲಿ ಬಾಣಂತಿಯರು, ಮಕ್ಕಳ ಸಾವು ಪ್ರಕರಣ – ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತನಿಖೆಗೆ ಹೆಬ್ಬಾಳ್ಕರ್ ಆದೇಶ

    ಬೆಳಗಾವಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ (Belagavi) ಬಾಣಂತಿಯರು, ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಒಂದು ವಾರಗಳ ಡೆಡ್‌ಲೈನ್ ನೀಡಲಾಗಿದೆ.

    ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳ ಸಾವು ಯಾವ ಕಾರಣಕ್ಕೆ ಆಗಿದೆ ಎಂದು ನೋಡುತ್ತಿದ್ದೇವೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಸಮಗ್ರ ವರದಿಯನ್ನು ಕೇಳಿದ್ದೇವೆ. ಐವಿ ಫ್ಲೂಯಿಡ್‌ನಿಂದ (IV Fluid) ಆಗಿರಬಹುದು ಎಂದು ಕಂಪನಿ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳ ಸಾವಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪೌಷ್ಠಿಕಾಂಶದ ವಿಚಾರವಾಗಿ ನಮ್ಮ ಇಲಾಖೆ ಆರೋಗ್ಯ ಇಲಾಖೆ ಜಂಟಿಯಾಗಿ ಪ್ರೋಟಿನ್ ಸಂಬಂಧ ಮೂರು ತಿಂಗಳ ಗರ್ಭಿಣಿ ಇದ್ದಾಗಿನಿಂದ ನೋಡುತ್ತಿದ್ದೇವೆ. ಬರೀ ಪೌಷ್ಠಿಕಾಂಶದಿಂದ ಸಾವಾಗಿದೆ ಎಂದು ಹೇಳಲು ಆಗಲ್ಲ. ಬೇರೆ ಕಾರಣ ಇರಬಹುದು. ಒಂದು ವಾರದ ಗಡುವು ಕೊಟ್ಟು ತನಿಖೆ ನಡೆಸಿ ವರದಿ ಕೊಡುವಂತೆ ಹೇಳುತ್ತೇವೆ. ಬೆಳಗಾವಿಯಲ್ಲಿ ಸಾವಿನ ಕುರಿತು ಕೂಡ ವರದಿ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: 24 ಗಂಟೆಯಲ್ಲಿ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿ – ಹೊಸ ವರ್ಷಕ್ಕೆ 23ರ ಯುವತಿ ತಯಾರಿ!

    ಪೌಷ್ಠಿಕ ಆಹಾರ ನೀಡುವಲ್ಲಿ ಯತ್ನಾಳ್ ಭ್ರಷ್ಟಾಚಾರ ಆರೋಪ ಹೊರಿಸಿದ ಕುರಿತು ಮಾತನಾಡಿ, ಸದನದಲ್ಲಿ ಹತ್ತು ಸಾರಿ ಚರ್ಚೆ ಆಗಿದೆ. ನಾವೇನು ಹೊಸದು ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಈ ರೀತಿ ಆಗಿದೆ. 70,000 ಅಂಗನವಾಡಿಯಲ್ಲಿ ಏನೂ ದುರ್ಘಟನೆ ಆಗಿಲ್ಲ. ದೇವರ ಆಶೀರ್ವಾದದಿಂದ ಯಾವ ಮಕ್ಕಳ ಆರೋಗ್ಯ ಸಮಸ್ಯೆ ಆಗಿಲ್ಲ. ಎಲ್ಲಿಯಾದರೂ ಘಟನೆ ಆದರೆ, ಕಳಪೆ ಆಹಾರ ಏನಾದರೂ ಬಂದರೆ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಕನ ಮೇಲೆ ಬೀದಿ ನಾಯಿ ದಾಳಿ – ಹರಿದು ಹೋಯ್ತು ತುಟಿ

  • ನಕ್ಸಲೈಟನ್ನು ಬೇರು ಸಮೇತ ಕಿತ್ತುಹಾಕಬೇಕು: ಲಕ್ಷ್ಮೀ ಹೆಬ್ಬಾಳ್ಕರ್

    ನಕ್ಸಲೈಟನ್ನು ಬೇರು ಸಮೇತ ಕಿತ್ತುಹಾಕಬೇಕು: ಲಕ್ಷ್ಮೀ ಹೆಬ್ಬಾಳ್ಕರ್

    ಉಡುಪಿ: ನಕ್ಸಲೈಟನ್ನು (Naxalite) ಬೇರು ಸಮೇತ ಕಿತ್ತುಹಾಕಬೇಕು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಲುವು. ಎನ್ ಕೌಂಟರ್ ಬಗ್ಗೆ ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.

    ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಪ್ರಕಾರ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಕ್ಸಲೈಟ್‌ಗಳನ್ನು ಕಟ್ಟಿ ಹಾಕಬೇಕು. ಇದು ಸರ್ಕಾರದ ನಿರ್ಧಾರ. ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷದಿಂದ ಯತ್ನಾಳ್‌ ಉಚ್ಚಾಟಿಸಿ; ಬಿಜೆಪಿ ಕಾರ್ಯಕರ್ತರಿಂದ ಆಗ್ರಹ

    ವಿಕ್ರಂಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇತ್ತು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದಾರೆ. ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಪ್ರಾಣಹಾನಿ ಆಗುತ್ತಿತ್ತು. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ಮತ್ತೆ ಸ್ಪಷ್ಟನೆ ಕೊಡಲು ನಾವು ತಯಾರಿದ್ದೇವೆ. ನ್ಯಾಯಾಂಗ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ. ನ್ಯಾಯಾಂಗ ತನಿಖೆಗೆ ಕೊಡುವುದು ಸರ್ಕಾರದ ತೀರ್ಮಾನ. ಈ ಬಗ್ಗೆ ಮುಖ್ಯಮಂತ್ರಿಗಳು ಗೃಹ ಸಚಿವರ ಬಳಿ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ – ಚಂದ್ರಶೇಖರ ಸ್ವಾಮೀಜಿ ಯೂಟರ್ನ್‌

  • ಬೆಳಗಾವಿಯಲ್ಲಿ ಶೆಟ್ಟರ್‌ಗೆ ಗೆಲುವು- ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತೀವ್ರ ಮುಖಭಂಗ

    ಬೆಳಗಾವಿಯಲ್ಲಿ ಶೆಟ್ಟರ್‌ಗೆ ಗೆಲುವು- ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತೀವ್ರ ಮುಖಭಂಗ

    ಬೆಳಗಾವಿ: ವಲಸಿಗ ಎಂಬ ಹಣೆಪಟ್ಟಿಯ ನಡುವೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಭರ್ಜರಿ ಗೆಲುವು ಸಾಧಿಸಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Laxmi Hebbalkar) ತೀವ್ರ ಮುಖಭಂಗವಾಗಿದೆ.

    8 ಲೋಕಸಭಾ ಮತಕ್ಷೇತ್ರ ಹೊಂದಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಪೈಕಿ ಗ್ರಾಮೀಣ ಕ್ಷೇತ್ರ ಪ್ರತಿನಿಧಿಸುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಅತಿಹೆಚ್ಚು ಮತಗಳನ್ನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಶ್ರೇಯಸ್‌ಗೆ ಸಿಂ`ಹಾಸನ’ – ಎರಡೂವರೆ ದಶಕಗಳ ಬಳಿಕ ಐತಿಹಾಸಿಕ ಗೆಲುವು!

    ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸದ್ಯ 113495 ಮತ ಇದ್ದು ಕಾಂಗ್ರೆಸ್ ಮೃಣಾಲ್‌ ಹೆಬ್ಬಾಳ್ಕರ್ ಗೆ 67403ಮತಗಳು ಬಂದಿವೆ. ಈ ಮತಗಳ ಪೈಕಿ 46,092 ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಲೀಡ್‌ ಬಂದಿದ್ದು ಹೆಬ್ಬಾಳ್ಕರ್ ಗೆ ಕ್ಷೇತ್ರದಲ್ಲೇ ಮತದಾರರು ಕೈಕೊಟ್ಟಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದ ‘ಕ್ಯಾಪ್ಟನ್’ ಚೌಟ

  • ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ: ಹೆಬ್ಬಾಳ್ಕರ್‌

    ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ: ಹೆಬ್ಬಾಳ್ಕರ್‌

    ಬೆಳಗಾವಿ: ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ. ನನಗೆ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದೇ ನನಗೆ ಕೇಳಿಸಿದೆ ಎಂದು ಹೇಳುವ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮೂವರನ್ನು ಬಂಧನ ಮಾಡಿರುವ ಕುರಿತು ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ಮೂವರ ಬಂಧನ ಆಗಿದೆ. ನಾನು ನನ್ನ ಪಿಆರ್ ಕಡೆಯಿಂದ ಮಾಹಿತಿ ಪಡೆದಿದ್ದೇನೆ. ಏನು ಹೇಳಿಕೆ ಕೊಡಬೇಕು ಎಂಬುದರ ಬಗ್ಗೆ ನಾನು ಹೋಮ್ ಮಿನಿಸ್ಟರ್ ಬಳಿ ಮಾತನಾಡುತ್ತೇನೆ ಎಂದರು.

    ಒಂದಂತು ನಿಜ ಯಾರೇ ಆಗಿರಲಿ ನಮ್ಮ ದೇಶ ವಿರುದ್ಧವಾಗಿ ಹೇಳಿದರೆ ಅವರಿಗೆ ಕಠಿಣವಾಗಿ ಕ್ರಮ ಆಗಲೇ ಬೇಕು. ನಾನು ಅದಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತೇವೆ‌. ಏಕೆಂದರೆ ದೇಶದ್ರೋಹಿಗಳನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಅನೇಕ ಬಲಿದಾನ ನೀಡಿದ ಪಕ್ಷ ನಮ್ಮದು. ಪಕ್ಷದ ಚೌಕಟ್ಟಿನಲ್ಲಿ ನಾವೆಲ್ಲರೂ ಬದ್ಧರಿದ್ದೇವೆ. ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡುವುದಿಲ್ಲ ಎಂದು ಸಚಿವೆ ಪುಣರುಚ್ಚರಿಸಿದ್ದಾರೆ. ಇದನ್ನೂ ಓದಿ: ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಆರೋಪಿಗಳ ಪತ್ತೆಗೆ ಭಾರೀ ಕಸರತ್ತು: ಪೊಲೀಸರಿಂದ ವೀಡಿಯೋ ಆಧಾರಗಳನ್ನು ಪಡೆದಿದ್ದ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಆರೋಪಿಗಳ ಪತ್ತೆಗೆ ಭಾರೀ ಕಸರತ್ತು ನಡೆಸಿತ್ತು. 15 ಧ್ವನಿ ಮಾದರಿಗಳನ್ನ ಸಂಗ್ರಹಿಸಿತ್ತು. ಪ್ರತಿಯೊಂದು ಧ್ವನಿಗಳನ್ನು ಆಲಿಸುವ ಮೂಲಕ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿತ್ತು. ಕೊನೆಗೆ 15 ಜನರಲ್ಲಿ ಮೂವರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದನ್ನು ವರದಿಯಲ್ಲಿ ದೃಢಪಡಿಸಿತು. ಈ ಬೆನ್ನಲ್ಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

  • ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ಫೈಟ್ ಶುರುವಾದಂತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ಹಣಕಾಸಿನ ವಿಚಾರವನ್ನು ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಬಹಿರಂಗಪಡಿಸುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲೆ ಚನ್ನರಾಜ್ ಹಟ್ಟಿಹೊಳಿ (Channaraja hattiholi) ಹಲ್ಲೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಎಫ್‍ಐಆರ್ ಕೂಡ ದಾಖಲಾಗಿದೆ. ಒಂದು ಕಾಲದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ಪಕ್ಷದಲ್ಲಿದ್ದ ವೇಳೆ ಪೃಥ್ವಿ ಸಿಂಗ್ ಹಾಗೂ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ ಒಂದಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು.  ಪೃಥ್ವಿ ಸಿಂಗ್ ಮನೆಯನ್ನು ಲೀಜ್‍ಗೆ ಹಾಕಿಕೊಂಡಿದ್ರು.

    ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರುತ್ತಿದಂತೆ ಇತ್ತ ಆಪ್ತರು ಸಹ ದೂರವಾದರು. ಈ ವೇಳೆ ಲೀಜ್ ಪಡೆದ ಪೃಥ್ವಿ ಸಿಂಗ್‍ನಿಂದ ಹೊರ ಬಂದು ಹಣ ವಾಪಸ್ ನೀಡಲು ಬೇಡಿಕೆಯಿಟ್ಟಿದ್ದರು. ಮನೆ ಒಪ್ಪಂದ ಪತ್ರ ಕೇಳಿದ್ದು ನಿಜವೆಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಹೇಳಿದ್ದಾರೆ. ಹೀಗಾಗಿ ಈ ರೀತಿಯ ಒಪ್ಪಂದಗಳು ಆಪ್ತರ ನಡುವೆ ಎಷ್ಟಾಗಿವೆಂಬ ಚರ್ಚೆ ಸಹ ಅರಂಭವಾಗಿದೆ. ಆದರೆ ರಮೇಶ್ ಜಾರಕಿಹೊಳಿ ಮಾತ್ರ ಈ ಘಟನೆಯಲ್ಲಿ ಲ್ಯಾಂಡ್ ಮಾಫಿಯಾ ಕೆಲಸ ಮಾಡ್ತಿದೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

    ಬೆಳಗಾವಿ ಪಾರಿಶ್ವಾಡ ಗ್ರಾಮದಲ್ಲಿ ಹೆಂಗಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬೆಳಗಾವಿ ಕನಕಪುರ ಆಗ್ತಿದೆಯೆಂದು ಚುನಾವಣೆ ವೇಳೆ ಹೇಳಿದ್ದೆ ಇದೀಗ ಅದು ಸಹ ನಿಜವಾಗಿದೆ. ಹೀಗಾಗಿ ಪೃಥ್ವಿ ಸಿಂಗ್‍ಗೆ ನಿಜ ಸಂಗತಿ ಹೇಳು ಎಂದು ಸೂಚನೆ ಕೊಟ್ಟಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ನ್ಯಾಯವಾಗಿದ್ದರೆ ನಾವು ಬಂದು ನಿಲ್ಲುತ್ತೇವೆಂದು ರಮೇಶ್ ಜಾರಕಿಹೊಳಿ ಈ ಹೇಳಿಕೆ ಕೊಟ್ಟಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

    ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

    ಬೆಂಗಳೂರು: ಗೃಹಲಕ್ಷ್ಮಿ 2,000 ರೂ. ಜಮೆಗೆ ನೂರೆಂಟು ವಿಘ್ನಗಳು. ಗೃಹಲಕ್ಷ್ಮಿಯರಿಗೆ (Gruhalakshmi Scheme) ದುಡ್ಡು ತಲುಪದೇ ಸಾಕಷ್ಟು ಗೊಂದಲ ಉದ್ಭವವಾಗಿತ್ತು. ಆದರೆ ಇದೀಗ ಕೊನೆಗೂ ಇದಕ್ಕೆ ಇತಿಶ್ರೀ ಹಾಕೋಕೆ ಸರ್ಕಾರ ರೆಡಿಯಾಗಿದೆ.

    ರಾಜ್ಯದಲ್ಲಿ ಒಟ್ಟು 1.10 ಕೋಟಿ ಗೃಹಲಕ್ಷ್ಮಿಯರಿಗೆ ಹಣ ಜಮೆಯಾಗಿದ್ರೂ 5-6 ಲಕ್ಷದಷ್ಟು ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗಿರಲಿಲ್ಲ. ಇದೀಗ ಗೃಹಲಕ್ಷ್ಮಿಯರಿದ್ದಡೆಗೆ ಅಧಿಕಾರಿಗಳು ತೆರಳಿ ಅದಾಲತ್ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಪಂಚಾಯತಿ, ನಗರಸಭೆ, ಪುರಸಭೆ ಸೇರಿದಂತೆ ರಾಜ್ಯಾದ್ಯಂತ ಅದಾಲತ್ ನಡೆಯಲಿದ್ದು ಅಕೌಂಟ್‍ಗೆ ದುಡ್ಡು ಬಾರದ ಮಹಿಳೆಯರು ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.

    ಡಿಸೆಂಬರ್ 31 ರೊಳಗೆ ಎಲ್ಲಾ ಫಲಾನುಭವಿಗಳ ಅಕೌಂಟ್‍ಗೆ ಹಣ ಜಮೆ ಮಾಡಲು ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಸುಮಾರು 50 ಸಾವಿರ ಟ್ಯಾಕ್ಸ್ ಪೇಯರ್ ಮಹಿಳೆಯರು ಕೂಡ ಗೃಹಲಕ್ಷ್ಮಿ ದುಡ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇವರ ಅರ್ಜಿ ತಿರಸ್ಕಾರ ಮಾಡಿರೋದಾಗಿ ಸಚಿವೆ ತಿಳಿಸಿದ್ದಾರೆ.

    ಏಕಕಾಲಕ್ಕೆ ಬಾಕಿ ಕಂತಿನ ದುಡ್ಡನ್ನು ಪಾವತಿ ಮಾಡೋದಾಗಿ ಕೂಡ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಡಿಸೆಂಬರ್ (December) ನೊಳಗಾದ್ರೂ ಗೃಹಲಕ್ಷ್ಮಿಯರ ಗೊಂದಲ ಬಗೆಹರಿಯುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ರೆಬೆಲ್ ರಮೇಶ್ ಜಾರಕಿಹೊಳಿ ಭೇಟಿಯಾದ ವಿಜಯೇಂದ್ರ: ಗೋಕಾಕ್ ಸಾಹುಕಾರನ ಮನವೊಲಿಕೆ ಸಕ್ಸಸ್

     

  • ಉಡುಪಿಯಲ್ಲಿ ನಾಲ್ವರ ಕೊಂದ ಕೇಸ್- ಸರ್ಕಾರದ ಮುಂದೆ ಬೇಡಿಕೆ ಇಟ್ಟ ಕುಟುಂಬ

    ಉಡುಪಿಯಲ್ಲಿ ನಾಲ್ವರ ಕೊಂದ ಕೇಸ್- ಸರ್ಕಾರದ ಮುಂದೆ ಬೇಡಿಕೆ ಇಟ್ಟ ಕುಟುಂಬ

    ಉಡುಪಿ: ನೇಜಾರಿನ (Nejar) ತಾಯಿ ಮಕ್ಕಳ ಹಂತಕನಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಎಂದು ಕುಟುಂಬ ಒತ್ತಾಯಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ (Laxmi Hebbalkar) ಸಂತ್ರಸ್ತ ಕುಟುಂಬ ಮನವಿ ಮಾಡಿದೆ. ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕೆಂದು ಕೂಡ ಕುಟುಂಬದ ಸದಸ್ಯರು ಒತ್ತಾಯಿಸಿದರು.

    ಸಾಮೂಹಿಕ ಹತ್ಯಾಕಾಂಡದ ಆಘಾತದಿಂದ ಕುಟುಂಬ ಇನ್ನು ಹೊರಬಂದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ತನ್ನ ಸಹೋದರಿ ಅನುಭವಿಸಿದ ನೋವು ಬೇರೆ ಯಾರೂ ಅನುಭವಿಸಬಾರದು ಎಂದು ಸಹೋದರ ಅಸಾದ್ ಹೇಳಿದ್ದಾರೆ. ಸಹೋದ್ಯೋಗಿಗಳ ಕಿರುಕುಳದಿಂದ ಅನೇಕ ಯುವತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆಯವರಿಗೆ ತಿಳಿಸಿದರೆ ಕೆಲಸದಿಂದ ಬಿಡಿಸುತ್ತಾರೆ ಎಂಬ ಭಯದಲ್ಲಿ ಹೇಳುವುದಿಲ್ಲ. ಹಾಗಾಗಿ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಸಾದ್ ಒತ್ತಾಯಿಸಿದ್ದಾರೆ. ದುಡಿಯುವ ಹೆಣ್ಣು ಮಕ್ಕಳಿಗೆ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಈ ಸಾಮೂಹಿಕ ಹತ್ಯಾಕಾಂಡಕ್ಕೆ ಕಾರಣವೇನು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಅಯ್ನಾಸ್ ಕುರಿತಾಗಿ ನರಹಂತಕ ಪ್ರವೀಣ್ ಚೌಗಲೆ (Praveen Chaugale) ಹೊಂದಿದ್ದ ಪೊಸೆಸಿವ್ ನೆಸ್ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ಪ್ರವೀಣ್ ಚೌಗುಲೆ ಅಸೂಯೆ ಮತ್ತು ಹಗೆತನದಿಂದ ಕೂಡಿದ ವ್ಯಕ್ತಿ. ಅಯ್ನಾಸ್‍ಳನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಆಕೆ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದ. ಅಯ್ನಾಜ್ ತನ್ನ ಜೊತೆ ಮಾತ್ರ ಮಾತನಾಡಬೇಕು, ಬೆರೆಯಬೇಕು ಎಂಬ ಮನಸ್ಥಿತಿಯ ವ್ಯಕ್ತಿ ಎಂದಿದ್ದಾರೆ.

    ಸದ್ಯ ಆರೋಪಿಯ ತನಿಖೆ ಮತ್ತಷ್ಟು ತೀವ್ರವಾಗಿ ನಡೆಯುತ್ತಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲಿದ್ದಾರೆ. ವಿಚಾರಣೆ ಬಗ್ಗೆ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- 10 ದಿನದೊಳಗೆ ಅಂಗನವಾಡಿಗಳಿಗೆ ಹಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- 10 ದಿನದೊಳಗೆ ಅಂಗನವಾಡಿಗಳಿಗೆ ಹಣ

    – ಕ್ರಮಕ್ಕೆ ಮುಂದಾದ ಸಚಿವೆ

    ಬೆಂಗಳೂರು: ಅಂಗನವಾಡಿ (Anganawadi) ಮಕ್ಕಳು ಹಾಗೂ ಗರ್ಭಿಣಿಯರಿಗೆ (Pregnant) ಕೊಡುವ ಮೊಟ್ಟೆ (Egg) ಖರೀದಿ ಹಾಗೂ ಗ್ಯಾಸ್ (Gas) ಖರೀದಿ ದುಡ್ಡು ಕೊಡದೇ ಸತಾಯಿಸುತ್ತಿದ್ದಾರೆ ಎಂಬುದರ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಗೊಂಡಿತ್ತು. ಈ ವರದಿ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi  Hebbalkar) ಎಚ್ಚೆತ್ತುಕೊಂಡಿದ್ದಾರೆ.

    ಪಬ್ಲಿಕ್ ವರದಿ ಬೆನ್ನಲ್ಲೇ ಕ್ರಮಕ್ಕೆ ಮುಂದಾದ ಸಚಿವೆ, ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದರು. 10 ದಿನದೊಳಗೆ ಅಂಗನವಾಡಿಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ ಹೇಳಿದ್ದಾರೆ.

    ಇತ್ತ ಬೆಳಗಾವಿಯಲ್ಲಿ (Belagavi) ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮೊಟ್ಟೆ ಖರೀದಿಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಖರೀದಿ ಮಾಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಕರ್ತೆಯರ ಖಾತೆಗೆ ಹಣ ಜಮಾವನೆ ವಿಚಾರದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹಣ ಸಂದಾಯ ಆಗಿದೆ. ಬೀದರ್ ಹಾಗೂ ಬೆಂಗಳೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸರಿಯಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಏನಾಗಿದೆ ಎಂಬ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    ಬೆಂಗಳೂರಿನಲ್ಲಿ ನಾಲ್ಕು ವರ್ಷದಿಂದ ಒಂದು ಸಾವಿರ ಆಯಾ ಹಾಗೂ 440 ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈಗಾಗಲೇ 13 ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಇದರ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡುತ್ತೇನೆ. ಹಣಕಾಸು ಬಿಡುಗಡೆ ವಿಚಾರದಲ್ಲಿ ಯಾವಾಗಲೂ ನನ್ನ ಮತ್ತು ಫೈನಾನ್ಸ್ ಡಿಪಾರ್ಟ್‍ಮೆಂಟ್ ನಡುವೆ ಒಂದು ತರಹ ಕಾಂಪಿಟೇಶನ್ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    ಬೆಂಗಳೂರು: ಅಂಗನವಾಡಿಯಲ್ಲಿ (Anganawadi) ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಮೊಟ್ಟೆಗೂ ಕುತ್ತು ಬಂದಿದೆ. ಈ ಹಿಂದೆ ಕಳಪೆ ಮೊಟ್ಟೆ ಸಪ್ಲೈ ಮಾಡಿ ಸುದ್ದಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗ ಬೆಂಗಳೂರಿನ ಅಂಗನವಾಡಿಗಳಿಗೆ ಮೊಟ್ಟೆ, ಗ್ಯಾಸ್ (Egg, Gas Bill) ಖರೀದಿ ದುಡ್ಡು ಕೊಡದೇ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಮಕ್ಕಳ ಗರ್ಭಿಣಿಯರ ಅಪೌಷ್ಠಿಕತೆ ನೀಗಿಸೋಕೆ ಅಂಗನವಾಡಿಗಳಲ್ಲಿ ಮೊಟ್ಟೆ ಕೊಡುತ್ತಾರೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನೇರವಾಗಿ ಸರ್ಕಾರ ಮೊಟ್ಟೆ ಸಪ್ಲೈ ಮಾಡಲ್ಲ. ಬದಲಾಗಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡುತ್ತಾರೆ. ಸರ್ಕಾರ ಇದರ ದುಡ್ಡನ್ನು ಅಕೌಂಟ್ ಗೆ ಹಾಕುತ್ತೆ. ಆದರೆ ಈಗ ಕಳೆದ 3-4 ತಿಂಗಳಿಂದ ಮೊಟ್ಟೆ ದುಡ್ಡನ್ನು ಸರ್ಕಾರ ಕೊಡುತ್ತಿಲ್ಲ. ಅಷ್ಟೇ ಅಲ್ಲ ಗ್ಯಾಸ್ ದುಡ್ಡನ್ನು ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪರದಾಟ ಪಡುವ ಪರಿಸ್ಥಿತಿನಿರ್ಮಾಣವಾಗಿದೆ.

    ಬೆಂಗಳೂರಿನಲ್ಲಿ ಸದ್ಯ 2,800 ಕ್ಕೂ ಹೆಚ್ಚು ಅಂಗನವಾಡಿಗಳು ಇದೆ. ಕಳೆದ ಮೂರು ನಾಲ್ಕು ತಿಂಗಳಿಂದ ಮೊಟ್ಟೆ ದುಡ್ಡು ಗ್ಯಾಸ್ ಸಿಲಿಂಡರ್ ಹಣ ಕೊಡದೇ ಸರ್ಕಾರ ಸತಾಯಿಸುತ್ತಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಾವೇ ತಮ್ಮ ಸಂಬಳದ ದುಡ್ಡನ್ನು ಮೊಟ್ಟೆಗಾಗಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ – ಡಿಕೆಶಿ ಸೇರಿ 14 ಸಚಿವರು ಭಾಗಿ

    ತಲಾ ಒಬ್ಬೊಬ್ಬ ಗರ್ಭಿಣಿಗೂ ತಿಂಗಳಿಗೆ 25 ಮೊಟ್ಟೆಯನ್ನು ಅಂಗನವಾಡಿಯಲ್ಲಿ ನೀಡಬೇಕು. 3-6 ವರ್ಷದ ಮಕ್ಕಳಿಗೆ ತಿಂಗಳಿಗೆ 8 ಮೊಟ್ಟೆಯನ್ನು ಕೊಡಬೇಕು. ಅಪೌಷ್ಠಿಕತೆ ಇರುವ ಮಕ್ಕಳಿಗೆ ಒಟ್ಟು 12 ಮೊಟ್ಟೆಯನ್ನು ಕೊಡಬೇಕು. ಒಂದೊಂದು ಅಂಗನವಾಡಿಯಲ್ಲಿ 20, 30 , 40 ಜನ ಮಕ್ಕಳು, ದಿನಕ್ಕೆ 10 ಜನ ಗರ್ಭಿಣಿಯರು ಆಹಾರ ಸೇವನೆ ಮಾಡುತ್ತಾರೆ. ಮೊಟ್ಟೆ ಖರ್ಚು ನಾಲ್ಕರಿಂದ ಐದು ಸಾವಿರ ಒಂದೊಂದು ಅಂಗನವಾಡಿಗಳಿಗೆ ಬರುತ್ತಿದೆ. ಸರ್ಕಾರ ಈ ದುಡ್ಡನ್ನು ಬಿಡುಗಡೆ ಮಾಡುತ್ತಿಲ್ಲ ಅನ್ನೋದು ಅಂಗನವಾಡಿ ಕಾರ್ಯಕರ್ತೆಯರ ಆರೋಪವಾಗಿದೆ.

    ಮೊಟ್ಟೆ ಖರೀದಿ ಜೊತೆಗೆ ಗ್ಯಾಸ್ ಖರೀದಿಯನ್ನು ಕೂಡ ಸ್ವಂತ ದುಡ್ಡಿನಲ್ಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಡಿದ ಸಂಬಳವೆಲ್ಲ ಇದಕ್ಕೆ ಖರ್ಚಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದು ಹೇಲುವ ಮೂಲಕ ಸಚಿವ ಸತೀಶ್ ಜಾರಕಿಹೊಳಿಗೆ (Sathish Jarakiholi) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತಿರುಗೇಟು ನೀಡಿದ್ದಾರೆ.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ರಾಜಕಾರಣದ ಬಗ್ಗೆ ಬೆಳಗಾವಿ ಮಾಧ್ಯಮಗಳಿಗೆ ಗೊತ್ತಿದೆ. ಬೇರೆ ಜಿಲ್ಲೆಯ ವರದಿಗಾರರು ಕೇಳಿದ್ರೆ ಉತ್ತರ ಕೊಡುತ್ತಿದ್ದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಣ್ಣ ಸಮಸ್ಯೆಯಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡ್ತಿದ್ದೇವೆ ಎಂದರು.

    ಮೈಸೂರು ಪ್ರವಾಸದ ಲಿಸ್ಟ್ ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೆವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಮೈಸೂರಿನಲ್ಲಿ ಮಹಿಳಾ ದಸರಾ ಉದ್ಘಾಟನೆ ನಾನೇ ಮಾಡಬೇಕಿತ್ತು. ಆದರೆ ಬಾಯ್ಲರ್ ಉದ್ಘಾಟನೆ ಮಾಡಬೇಕಿತ್ತು, ಸಹೋದರ ಕರೆದ. ಅದಕ್ಕೆ ನಾನು ಬೆಳಗಾವಿಗೆ (Belagavi) ಮರಳಿ ನಂತರ ಭದ್ರಾವತಿಗೆ ಹೋದೆ ಎಂದು ಹೇಳಿದರು. ಇದನ್ನೂ ಓದಿ: ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ

    ಮೈಸೂರು ಪ್ರವಾಸ ಕ್ಯಾನ್ಸಲ್ ಆಗಿದ್ದೇಕೆ ನನಗೆ ಗೊತ್ತಿಲ್ಲ ಸತೀಶ್ ಅವರನ್ನು ಕೇಳಿ. ಡಿಕೆಶಿ ಬೆಳಗಾವಿಗೆ ಬಂದಾಗ ಯಾರದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದು ಹೇಳುವ ಮೂಲಕ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದರು.

    ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಮಾತನಾಡಿ, ಡಿಕೆಶಿ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ತಿಂಗಳಿಂದ ಹೊಂದುಕೊಂಡು ಹೋಗುತ್ತಿದ್ದೇನೆ. ಸೈಲೆಂಟ್ ಆಗಿರೋದೇ ನನ್ನ ವೀಕ್ನೆಸ್ ಅಲ್ಲ ಎಂದು ಹೇಳಿದ್ದರು. ಇದೀಗ ಸತೀಶ್ ಜಾರಕಿಹೊಳಿಗೆ ಅವರದ್ದೇ ಮಾತಿನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.

    ಒಂದೇ ವಿಮಾನದಲ್ಲಿ ಆಗಮನ: ಬೆಳಗಾವಿ ರಾಜಕೀಯದಲ್ಲಿ ಡಿಕೆ ಶಿವಕುಮಾರ ಹಸ್ತಕ್ಷೇಪ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಇಂದು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಮೂಲಕ ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ ಎನ್ನುವುದ ತೋರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]