Tag: Laxman

  • ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

    ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

    ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಎ12 ಆರೋಪಿ, ದರ್ಶನ್‌ (Darshan) ಕಾರು ಚಾಲಕ ಲಕ್ಷ್ಮಣ್‌ (Laxman) ಜೈಲಿನಿಂದ ಬಿಡುಗಡೆಯಾಗಿದ್ದಾನೆ.

    ಶಿವಮೊಗ್ಗ ಜೈಲಿನಿಂದ (Shivamogga Jail) ಬಿಡುಗಡೆಯಾಗಿ ಹೊರ ಬಂದ ಲಕ್ಷ್ಮಣ್‌ನನ್ನು  ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದ್ದವು. ಈ ವೇಳೆ ಲಕ್ಷ್ಮಣ್‌ ಓಡೋಡಿ ರಸ್ತೆಯಲ್ಲಿ ನಿಂತಿದ್ದ ಇನ್ನೋವಾ ಕಾರನ್ನು ಹತ್ತಿ ಬೆಂಗಳೂರು ಕಡೆಗೆ ತೆರಳಿದ್ದಾನೆ.

    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಗ್ಯಾಂಗ್‌ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ:ದರ್ಶನ್ ಹೆಸರಲ್ಲಿ ಪವಿತ್ರಾ ಗೌಡ ತಾಯಿ ಅರ್ಚನೆ

    ಲಕ್ಷ್ಮಣ್‌ ಮೇಲಿರುವ ಆರೋಪ ಏನು?
    ಬೆಂಗಳೂರಿನ ಆ‌ರ್‌ಪಿಸಿ ಲೇಔಟ್ ಬಳಿ ನೆಲೆಸಿದ್ದ ಲಕ್ಷ್ಮಣ್‌ ಹಲವು ವರ್ಷಗಳಿಂದ ದರ್ಶನ್ ಕಾರು ಚಾಲಕನಾಗಿದ್ದ. ಕಾರು ಚಾಲನೆಯ ಜೊತೆ ದರ್ಶನ್‌ ಮನೆ ನಿರ್ವಹಣೆಯ ಹೊಣೆಗಾರಿಕೆ ಸಹ ನಿರ್ವಹಿಸುತ್ತಿದ್ದ.

    ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ನಡೆದಾಗ ಲಕ್ಷ್ಮಣ್‌ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಕೃತ್ಯ ಎಸಗಿದ ಬಳಿಕ ಪ್ರಕರಣದಲ್ಲಿ ದರ್ಶನ್ ರಕ್ಷಿಸಲು ಮುಂದಾದ ಲಕ್ಷ್ಮಣ್, ಪೊಲೀಸರಿಗೆ ಶರಣಾಗುತ್ತಿದ್ದ ನಾಲ್ವರಿಗೆ ದರ್ಶನ್ ಹೆಸರು ಹೇಳದಂತೆ ಪವಿತ್ರಾಗೌಡ ಜತೆ ಹಣದಾಸೆ ತೋರಿಸಿದ್ದ ಎಂಬ ಆರೋಪ ಬಂದಿದೆ.

    ಈ ಕೃತ್ಯ ಎಸಗಿದ ಬಳಿಕ ದರ್ಶನ್ ಮನೆಯಲ್ಲಿ ನಡೆದ ಆಪ್ತರ ಸಭೆಯಲ್ಲಿ ಲಕ್ಷ್ಮಣ್ ಕೂಡ ಇದ್ದ. ಈ ಕೃತ್ಯ ಎಸಗಿ ಮೈಸೂರು ಕಡೆ ಪರಾರಿಯಾಗುತ್ತಿದ್ದ ಲಕ್ಷ್ಮಣ್‌ನನ್ನು ಬಿಡದಿ ಟೋಲ್ ಹತ್ತಿರ ಪೊಲೀಸರು ಬಂಧಿಸಿದ್ದರು.

     

  • 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

    819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಬೀಳಿಸಿದ ರೂವಾರಿ. ಅವರು 819 ಕೋಟಿ ರೂ. ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಸಿಎಂ ಬೊಮ್ಮಾಯಿ ಈ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇದುವರೆಗೆ ರಮೇಶ್ ಗೆ ಒಂದು ನೊಟೀಸ್ ಸಹ ನೀಡಲಾಗಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

    ರಮೇಶ್ ಜಾರಕಿಹೊಳಿ ಮಾಡಿರುವ ಕೋಟಿ ರೂ. ಬ್ಯಾಂಕ್ ಸಾಲದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ನವರು ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಎಷ್ಟು ಜನರಿಗೆ ಸಾಲ ಕೊಡಬೇಕು ಅಂತ ಅವರೇ ದಾಖಲೆ ಸಲ್ಲಿಸಿದ್ದಾರೆ. ಇದರ ತನಿಖೆಯೂ ನಡೀತಿದೆ. ಅಭಿನಂದನ್ ಪಾಟೀಲ್, ರಮೇಶ್ ಜಾರಕಿಹೊಳಿಯವರ ಬೇನಾಮಿ. ಇವರ ಅರಿಹಂತ್ ಸೊಸೈಟಿಯಿಂದ 48 ಕೋಟಿ ರೂ ಸಾಲ ಪಡೆದಿದ್ದಾರೆ. 578 ಕೋಟಿ ರೂ ಸಾಲವನ್ನು ವಿವಿಧ ಡಿಸಿಸಿ ಬ್ಯಾಂಕ್ ಗಳಿಂದ ರಮೇಶ್ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    156 ಕೋಟಿ ರೂ. ಆದಾಯ ತೆರಿಗೆ ಕಟ್ಟದೇ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕ್ ನಿಂದ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಗೆ 2021 ರಲ್ಲಿ ನೊಟೀಸ್ ಕೊಟ್ಟಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ನೊಟೀಸ್ ಕೊಟ್ಟಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿ ಸಾಲ ಮರುಪಾವತಿಸಿಲ್ಲ. ಕಂಪೆನಿಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ರೆಬೆಲ್ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ

    ರಮೇಶ್ ಅವರ ಕಂಪೆನಿಗೆ ಅಪೆಕ್ಸ್ ಬ್ಯಾಂಕ್ ನಿಂದ 2019 ರಲ್ಲಿ ಮತ್ತು 2021 ರಲ್ಲಿ ನೊಟೀಸ್ ಜಾರಿಯಾಗಿದೆ. ಅಪೆಕ್ಸ್ ಬ್ಯಾಂಕ್ ನೋಟೀಸ್ ನ ಮೊದಲ ವಿರುದ್ಧ ಧಾರವಾಡ ಪೀಠದಲ್ಲಿ ರಮೇಶ್ ಪ್ರಶ್ನೆ ಮಾಡ್ತಾರೆ. ಕೋರ್ಟ್ ಆರು ವಾರದೊಳಗೆ ಸಾಲ ತೀರಿಸಬೇಕೆಂದು ಆದೇಶ ಮಾಡುತ್ತೆ. ಆದರೆ ರಮೇಶ್ ಜಾರಕಿಹೊಳಿ ಸಾಲ ಮರುಪಾವತಿ ಮಾಡಿಲ್ಲ ಎಂದು ಹೇಳಿ ಜಾರಕಿಹೊಳಿ ಬ್ಯಾಂಕ್ ವಂಚನೆ ಕುರಿತ ದಾಖಲೆ ಬಿಡುಗಡೆ ಮಾಡಿದರು.

    ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಯನ್ನು ಸರ್ಕಾರ ದಿವಾಳಿ ಸಂಸ್ಥೆ ಅಂತ ಘೋಷಿಸಿದೆ. ಸರ್ಕಾರವೇ ದಿವಾಳಿ ಅಂತ ಘೋಷಿಸಿದ್ರೂ ಆ ಕಂಪೆನಿ ಕಬ್ಬು ಅರೆಯುವ ಕೆಲಸ ಮಾಡ್ತಿದೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಯಿ 2021 ರಲ್ಲಿ 60 ಕೋಟಿ ಸಂಪಾದನೆ ಮಾಡಿದೆ. ಬೋರ್ಡ್ ಮೆಂಬರ್ ಗಳಾಗಿರುವ ಆರು ಜನರ ಖಾತೆಗೆ ಹಣ ಹೋಗುತ್ತೆ. ಕಂಪೆನಿ ಬೋರ್ಡ್ ನಲ್ಲಿ ರಮೇಶ್, ಅವರ ಮಗ, ಮಗಳು ಇದ್ದಾರೆ. ಇವರೆಲ್ಲರಿಗೂ 60 ಕೋಟಿಯಲ್ಲಿ ಪಾಲು ಕೊಡಲಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದರು.

    ಇಡಿ ಏನು ಮಾಡ್ತಿದೆ?, ಕೇಂದ್ರ ಸರ್ಕಾರ ಏನ್ ಮಾಡ್ತಿದೆ?, ರಮೇಶ್ ಜಾರಕಿಹೊಳಿ ಅವರ ವಂಚನೆ ಇಡಿ ಕಣ್ಣಿಗೆ ಬಿದ್ದಿಲ್ವಾ..?. ನಾನು. ಬೆಂಗಳೂರಿನಲ್ಲಿ ಇರುವ ಇಡಿ ಕಚೇರಿಯಲ್ಲಿ ದೂರು ದಾಖಲು ಮಾಡ್ತೇನೆ. ರಮೇಶ್ ಜಾರಕಿಹೊಳಿ ವಂಚನೆ ವಿರುದ್ಧ ದೂರು ಕೊಡ್ತೇನೆ. ನಂತರ ಹೈಕೋರ್ಟ್ ನಲ್ಲಿ ಐಟಿ ವಿರುದ್ಧ ಪೆಟಿಷನ್ ಹಾಕ್ತೇನೆ. ಐಟಿಯವರು ರಮೇಶ್ ಜಾರಕಿಹೊಳಿಗೆ ಕೇವಲ ಒಂದು ನೊಟೀಸ್ ಕೊಟ್ಟು ಸುಮ್ಮನಾಗಿದೆ. ಐಟಿ ಇಲಾಖೆಯಿಂದ ಮುಂದೆ ಕಾನೂನು ಕ್ರಮ ಯಾಕೆ ಕೈಗೊಳ್ಳಲಿಲ್ಲ?. ಐಟಿ ಸರ್ಕಾರದ ಕೈಗೊಂಬೆಯಾಗಿ ಇದೆಯಾ ಎಂದು ಅವರು ಪ್ರಶ್ನಸಿದರು.

    Live Tv

  • ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಬೆಂಗಳೂರು: ಈ ಹಿಂದೆ ಸಡಗರ, ಡೀಲ್ ರಾಜ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಜ್ ಗೋಪಿ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಪಯಣಿಗರು ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಗ್‍ಬಾಸ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಟ್ರೈಲರ್ ಅನಾವರಣಗೊಳಿಸಿದರು. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರ ಕಥೆ ಇದಾಗಿದೆ. ನಲವತ್ತು ದಾಟಿದ ಈ ಸ್ನೇಹಿತರು ಮನೆಯಲ್ಲಿ ಹೆಂಡತಿಯರ ವಿರೋಧದ ನಡುವೆಯೂ ಗೋವಾ ಪಯಾಣ ಆರಂಭಿಸುತ್ತಾರೆ. ನಂತರ ಈ ನಾಲ್ವರ ಜರ್ನಿಯಲ್ಲಿ ಏನೆಲ್ಲಾ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂಬುದೇ ಪಯಣಿಗರ ಚಿತ್ರದ ಕಥೆ. ಕೆಂಪಿರುವೆ ಖ್ಯಾತಿಯ ಲಕ್ಷ್ಮಣ್, ಶಿವಶಂಕರ್ ಅಶ್ವಿನ್ ಹಾಸನ್, ರಾಘವೇಂದ್ರ ಹಾಗೂ ಇತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ರಾಜ್‍ಗೋಪಿ ಅವರವರ ಜೀವನದಲ್ಲಿ ಪ್ರತಿಯೊಬ್ಬರು ಪಯಣಿಗರೇ. ಆ ಪಯಣ ಮುಗಿಯುವವರೆಗೆ ನಾವು ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿಡಿ ಅನ್ನೋದೆ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಲವ್ ಜರ್ನಿ, ಕಾಮಿಡಿ ಜರ್ನಿ ಎರಡೂ ಇದೆ. ಸಂಸಾರದ ನೊಗವನ್ನು ಹೊತ್ತ ಈ ನಾಲ್ವರು ಗೋವಾ ಪ್ರಯಾಣಕ್ಕೆ ಅಲ್ಲಿ ಏನೋ ಒಂದು ಎಡವಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಅದರಿಂದ ಹೇಗೆ ಹೊರಬರುತ್ತಾರೆ. ಪ್ರತಿಯೊಬ್ಬರ ಜೀವನಕ್ಕೆ ಬೆಲೆ ಕೊಡಬೇಕು, ಕುಟುಂಬಕ್ಕೆ ಬೆಲೆ ಕೊಡಬೇಕು. ಮನೆಯವರಿಗೆ ಒಂದಷ್ಟು ಕಾಲವನ್ನು ಮೀಸಲಿಡಿ ಎಂದು ಈ ಚಿತ್ರದ ಮೂಲಕ ಸಂದೇಶ ಹೇಳಹೊರಟಿದ್ದೇವೆ ಎಂದು ಹೇಳಿದರು. ವಿನು ಮನಸ್ಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 60-70 ಭಾಗದಷ್ಟು ಚಿತ್ರದ ಕಥೆ ಕಾರಿನಲ್ಲೇ ನಡೆಯುತ್ತದೆ.

  • ರೂಪೇಶ್, ಲಕ್ಷ್ಮಣ್ ಆಯ್ತು – ಈಗ ಸಿಎಂ ಪರಮಾಪ್ತ ಪುತ್ರನ ಜೊತೆಗೂ ವರ್ಷಿಣಿ ಲವ್ವಿಡವ್ವಿ.!

    ರೂಪೇಶ್, ಲಕ್ಷ್ಮಣ್ ಆಯ್ತು – ಈಗ ಸಿಎಂ ಪರಮಾಪ್ತ ಪುತ್ರನ ಜೊತೆಗೂ ವರ್ಷಿಣಿ ಲವ್ವಿಡವ್ವಿ.!

    ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ದಿನವಷ್ಟೆ ಆರೋಪಿ ವರ್ಷಿಣಿ ತನ್ನ ಪ್ರಿಯಕರನಿಗೆ ಗೊತ್ತಿಲ್ಲದೆ ಮೃತ ಲಕ್ಷ್ಮಣನನ್ನು ಪ್ರೀತಿ ಮಾಡುತ್ತಿದ್ದಳು ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು. ಆದ್ರೆ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತ ಶಾಸಕರೊಬ್ಬರ ಪುತ್ರನ ಜೊತೆಗೆ ಕೂಡ ಲವ್ವಿಡವ್ವಿ ಇಟ್ಟುಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಆರೋಪಿ ವರ್ಷಿಣಿಗೆ ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಜೊತೆ ಸಂಬಂಧ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ರೌಡಿ ಲಕ್ಷ್ಮಣನ ಕೊಲೆಯ ಹಿಂದೆ ಶಾಸಕನ ಪುತ್ರನ ಕೈವಾಡ ಇದೆಯಾ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!

    ಸಿಸಿಬಿ ಪೊಲೀಸರು ಕೊಲೆಯಾದ ರೌಡಿ ಲಕ್ಷ್ಮಣ್‍ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಆರೋಪಿ ವರ್ಷಿಣಿಯ ಫೋನ್ ಪರಿಶೀಲನೆ ನಡೆಸಿದ್ದಾರೆ. ಆಗ ಶಾಸಕರೊಬ್ಬರ ಪುತ್ರನ ಹಾಗೂ ವರ್ಷಿಣಿ ನಡುವಿನ ಕಾಲ್ ಡೀಟೈಲ್ಸ್ ಸಿಕ್ಕಿದೆ. ಹೀಗಾಗಿ ಇದೀಗ ಇಬ್ಬರ ಫೋನ್ ಕಾಲ್ ಡೀಟೈಲ್ಸ್ ಪಡೆದು ಸಿಸಿಬಿ ಪೊಲೀಸರು ತುಂಬಾ ಆಳವಾಗಿ ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ:  ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    ಒಂದು ವೇಳೆ ಲಕ್ಷ್ಮಣನ ಕೊಲೆ ಕೇಸ್ ನಲ್ಲಿ ಶಾಸಕನ ಪುತ್ರನ ಕೈವಾಡ ಇರುವುದು ಸಾಬೀತಾದರೆ ಶಾಸಕನ ಪುತ್ರನಿಗೆ ಕಂಟಕ ಎದುರಾಗಲಿದ್ದು, ಪ್ರಭಾವಿ ಶಾಸಕರ ಪುತ್ರನನ್ನ ತನಿಖೆಗೊಳಪಡಿಸುವ ಸಾಧ್ಯತೆ ಇದೆ. ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ರೌಡಿ ಲಕ್ಷ್ಮಣ ಸ್ಪರ್ಧೆ ಮಾಡಿದ್ದನು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಲು ಲಕ್ಷ್ಮಣ್ ಮುಂದಾಗಿದ್ದನು.

    ಸದ್ಯಕ್ಕೆ ಸಿಸಿಬಿ ಪೊಲೀಸರು ರೌಡಿ ಲಕ್ಷ್ಮಣ್‍ನ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ತನಿಖೆ ಮಾಡುತ್ತಿದ್ದಾರೆ. ಆದರೆ ಬಂಧಿತ ಆರೋಪಿಗಳು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸುತ್ತಿದ್ದಾರೆ. ಅದೇ ರೀತಿ ಆರೋಪಿ ವರ್ಷಿಣಿ ಕೂಡ ಕೊಲೆಗೆ ಸಾಥ್ ನೀಡಿದ್ದವರ ಬಗ್ಗೆ ಮಾಹಿತಿ ನೀಡುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!

    ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!

    ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಆರೋಪಿ ವರ್ಷಿಣಿ ಮೃತ ಇತ್ತ ಲಕ್ಷ್ಮಣನ ಜೊತೆಯೂ ಪ್ರೀತಿ ಅತ್ತ ರೂಪೇಶನ ಜೊತೆ ಲವ್ವಿಡವ್ವಿ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಆರೋಪಿ ವರ್ಷಿಣಿಯ ಈ ಡಬಲ್ ರೋಲ್ ಬಗ್ಗೆ ತಿಳಿಯದೆ ಪ್ರಿಯಕರ ರೂಪೇಶ್ ಬಕ್ರವಾಗಿದ್ದು, ತನ್ನ ಪ್ರೀತಿಗೆ ಅಡ್ಡವಾಗಿದ್ದಾನೆ ಎಂದು ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿದ್ದಾನೆ. ಆರೋಪಿ ವರ್ಷಿಣಿ ಮತ್ತು ಲಕ್ಷ್ಮಣನ ಪ್ರೀತಿ ವಿಚಾರ ಅಸಲಿಗೆ ರೂಪೇಶನಿಗೆ ಗೊತ್ತೇ ಇರಲಿಲ್ಲ. ರೂಪೇಶನ ಲವ್ ಮಾಡುವುದರ ಜೊತೆಗೆ ಲಕ್ಷ್ಮಣನ ಜೊತೆಯೂ ಲವ್ವಿಡವ್ವಿ ಆಡುತ್ತಿದ್ದಳು. ವರ್ಷಣಿಯ ಅಸಲಿ ಬಣ್ಣ ಗೊತ್ತಾಗದೇ ಆರೋಪಿ ರೂಪೇಶ್ ಲಕ್ಷ್ಮಣನ ಮರ್ಡರ್ ಗೆ ಕೈ ಹಾಕಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ:  ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ


    ರೂಪೇಶ್ ತನ್ನ ಪ್ರೀತಿಗೆ ಅಡ್ಡಿಯಾಗುತ್ತಿದ್ದನು ಎಂದು ಹತ್ಯೆಗೆ ಪ್ಲಾನ್ ಮಾಡಿದ್ದನು. ಈ ಹತ್ಯೆಗೆ ಆರೋಪಿ ವರ್ಷಿಣಿ ಸಹಕರಿಸಿದ್ದಳು. ಆರೋಪಿ ವರ್ಷಿಣಿ ಮೋಜು ಮಸ್ತಿಗೆ ಲಕ್ಷ್ಮಣನ ದುಡ್ಡು ಬೇಕಿತ್ತು. ಎಂಜಾಯ್ ಮೆಂಟ್‍ಗೆ ರೂಪೇಶ್ ನ ಜೊತೆ ಸುತ್ತಾಡುತ್ತಿದ್ದಳು. ಹಲವು ಬಾರಿ ಲಕ್ಷ್ಮಣ್‍ ವರ್ಷಿಣಿಯ ಖಾತೆಗೆ ದುಡ್ಡು ಹಾಕಿದ್ದವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

    ಹತ್ಯೆಯ ಪ್ಲಾನ್:
    ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ್‍ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದನು. ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ್‍ನನ್ನು ಕೆಲವೇ ಕ್ಷಣಗಳಲ್ಲಿ ರೌಡಿಗಳು ಕೊಲೆ ಮಾಡಿದ್ದರು. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    – ಲಂಡನಿನಲ್ಲೇ ಕುಳಿತು ಕೊಲೆಗೆ ವರ್ಷಿಣಿ ಸ್ಕೆಚ್
    – ಕಾಲ್ಸ್ ವಿವರಗಳ ಮೂಲಕ ಹತ್ಯೆಯ ರಹಸ್ಯ ಪತ್ತೆ

    ಬೆಂಗಳೂರು: ವಾಟ್ಸಪ್‍ಗೆ ಗೆಳತಿ ವರ್ಷಿಣಿ ಕಳುಹಿಸಿದ ಫೋಟೋ ನೋಡಿ ಹೋಟೆಲ್‍ನಿಂದ ಹೊರ ಬಂದು ರೌಡಿ ಲಕ್ಷ್ಮಣ್ ಕೊಲೆಯಾಗಿದ್ದಾನೆ.

    ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದಾನೆ.

    ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ ಕೆಲವೇ ಕ್ಷಣಗಳಲ್ಲಿ ಕೊಲೆಯಾಗಿ ಹೋಗಿದ್ದ.

    ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದ. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದಾನೆ. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದಾರೆ. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

    ರೂಮ್‍ಬುಕ್ ಏಕೆ?
    ಆರೋಪಿ ವರ್ಷಿಣಿ ಹೋಟೆಲ್ ಬುಕ್ ಮಾಡು ನಿನ್ನ ಜೊತೆ ಎರಡು ದಿನ ಇರುತ್ತೇನೆ ಎಂದು ಲಕ್ಷ್ಮಣ್‍ಗೆ ಹೇಳಿದ್ದಳು. ನಮ್ಮ ಅಪ್ಪ-ಅಮ್ಮನದು ಮದುವೆ ವಾರ್ಷಿಕೋತ್ಸವ ಇದೆ. ನಿನ್ನ ಜೊತೆ ಎರಡು ದಿನ ಇದ್ದು ಬಳಿಕ ಮನೆಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಎಂದಿದ್ದಳು. ಅಷ್ಟೇ ಅಲ್ಲದೇ ಆರ್.ಆರ್.ನಗರ ಅಥವಾ ಬೆಂಗಳೂರು ಹೊರವಲಯದಲ್ಲಿ ರೂಮ್ ಮಾಡುವಂತೆ ಹೇಳಿದ್ದಳು. ಆಗ ಲಕ್ಷ್ಮಣ್ ಆ ಭಾಗದಲ್ಲಿ ನನಗೆ ಪರಿಚಯದವರು ಇದ್ದಾರೆ ಎಂದು ಅಲ್ಲಿ ರೂಮ್‍ಬುಕ್ ಮಾಡಲು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 6ರಂದು ಆರ್.ಜಿ ರಾಯಲ್ಸ್ ಹೋಟೆಲ್‍ಗೆ ಲಕ್ಷ್ಮಣ್ ಹೋಗಿದ್ದಾನೆ. ಆದರೆ ಅಂದು ರೂಮ್ ಸಿಗದೇ ಇದ್ದ ಕಾರಣ ವಾಪಸ್ ಹೋಗಿದ್ದಾನೆ. ಬಳಿಕ ಮಾರನೇ ದಿನ ಬಂದು ರೂಮ್ ಬುಕ್ ಮಾಡಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದ.

    ಆರೋಪಿಗಳು ತಪ್ಪೊಪ್ಪಿಗೆ:
    ನಾನು 10 ಲಕ್ಷ ಹಣ ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಕೇಸ್ ದಾಖಲಿಸಿ ಲಕ್ಷ್ಮಣ್ ಜೈಲಿಗೆ ಕಳುಹಿಸಿದ್ದ. ನಂತರ ವರ್ಷಿಣಿ ವಿಚಾರಕ್ಕೆ ಪೊಲೀಸ್ ಠಾಣೆಗೆ ಬಂದು ಅವಾಜ್ ಕೂಡ ಹಾಕಿದ್ದನು. ಇದರಿಂದ ಜೈಲಿಗೆ ಹೋದಾಗ ಅಲ್ಲಿಯೇ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಮಾಡಿದ್ದೆ. ಅಷ್ಟೇ ಅಲ್ಲದೆ ಲಕ್ಷ್ಮಣ್ ನಮ್ಮ ಲವ್ ಬ್ರೇಕ್ ಮಾಡಲು ಪ್ರಯತ್ನ ಮಾಡಿದ್ದನು. ನಾನು ಜೈಲಿನಿಂದ ಹೊರಗಡೆ ಬಂದಾಗ ಮತ್ತೆ ವರ್ಷಿಣಿಯ ಫೋನ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದೆ. ಆಗ ವರ್ಷಿಣಿ ಲಂಡನ್‍ನಲ್ಲಿದ್ದಳು. ನಾನ್ ಫೋನ್ ಮಾಡಿ ಮಾತನಾಡಿದ್ದೆ.

    ನಮ್ಮ ಲವ್ ಬ್ರೇಕ್‍ಅಪ್ ಆಗಿದ್ದಕ್ಕೆ ಅವಳು ಬೇಜಾರ್ ಮಾಡಿಕೊಂಡಿರಲಿಲ್ಲ. ಈ ವೇಳೆ ಅವಳು ಏನಾದರೂ ಮಾಡಿ ಲಕ್ಷ್ಮಣ್ ಗೆ ಬುದ್ಧಿ ಕಲಿಸಬೇಕು ಎಂದು ಹೇಳಿದ್ದಳು. ಅವಳಿಗೂ ಲಕ್ಷ್ಮಣನ ಮೇಲೆ ಕೋಪ ಇತ್ತು. ಅದಕ್ಕೆ ನನಗೆ ಸಪೋರ್ಟ್ ಮಾಡಿದ್ದಳು. ಇತ್ತ ನನಗೆ ಲಕ್ಷ್ಮಣ್ ಕೊಟ್ಟಿದ್ದ ಟಾರ್ಚರ್ ನಿಂದ ನಾನು ಕೊಲೆಗೆ ಸ್ಕೆಚ್ ಹಾಕಿದ್ದೆ. ನಾನು ವರ್ಷಿಣಿಗೆ ಫೋನಿನಲ್ಲೆ ಪ್ಲಾನ್ ಬಗ್ಗೆ ತಿಳಿಸಿದ್ದೆ ಎಂದು ಸಿಸಿಬಿ ಪೊಲೀಸರ ಬಳಿ ಎ1 ಆರೋಪಿ ರೂಪೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಕಾಲ್ ರೆಕಾರ್ಡಿಂಗ್ ಪತ್ತೆ:
    ರೂಪೇಶ್ ಮತ್ತು ವರ್ಷಿಣಿ ಸಂಭಾಷಣೆಯ ಫೋನ್ ಕಾಲ್ಸ್ ಪತ್ತೆಯಾಗಿದ್ದು, ಇಬ್ಬರು ಲಕ್ಷ್ಮಣ್‍ನ ಹತ್ಯೆ ಬಗ್ಗೆ ಮಾತನಾಡಿರುವುದು ರೆಕಾರ್ಡ್ ಆಗಿದೆ. ವಾಟ್ಸಪ್ ಕಾಲ್ ಹಾಗೂ ನಾರ್ಮಲ್ ಕಾಲ್ ವಿವರಗಳ ಮೂಲಕ ಕೊಲೆಯ ರಹಸ್ಯ ಪತ್ತೆಯಾಗಿದೆ. ವರ್ಷಿಣಿಯನ್ನ ಮುಂದೆ ಬಿಟ್ಟು ಕೊಲೆ ಮಾಡಿದ್ದ ಸಂಚು ಆಡಿಯೋದಲ್ಲಿ ಬಹಿರಂಗವಾಗಿದೆ. ಸದ್ಯಕ್ಕೆ ಪೊಲೀಸರು ಕಾಲ್ ಡಿಟೇಲ್ಸ್ ಇಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ .

    ನಾನು ಲಂಡನ್‍ಗೆ ಬಂದ ನಂತರ ರೂಪೇಶ್ ಕರೆ ಮಾಡಿದ್ದನು. ಲಕ್ಷ್ಮಣ್ ಮುಗಿಸುವ ಬಗ್ಗೆ ಪ್ರಸ್ತಾಪಿಸಿದ್ದನು. ಲಂಡನ್‍ನಲ್ಲಿ ಇದ್ದುಕೊಂಡೆ ನಾನು ಹೇಳಿದ್ದಂತೆ ಮಾಡಬೇಕು ಎಂದಿದ್ದನು ಎಂದು ಸಿಸಿಬಿ ಮುಂದೆ ಆರೋಪಿ ವರ್ಷಿಣಿ ಕೊಲೆಗೆ ಸಹಕಾರ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆರೋಪಿಗಳ ಬೆನ್ನತ್ತಿದ ಸಿಸಿಬಿ – ಲಕ್ಷ್ಮಣನ ಹತ್ಯೆಗೆ ಸಂಬಂಧಿಸಿದಂತೆ ಇನ್ನೊಬ್ಬನ ಮೇಲೆ ಫೈರಿಂಗ್

    ಆರೋಪಿಗಳ ಬೆನ್ನತ್ತಿದ ಸಿಸಿಬಿ – ಲಕ್ಷ್ಮಣನ ಹತ್ಯೆಗೆ ಸಂಬಂಧಿಸಿದಂತೆ ಇನ್ನೊಬ್ಬನ ಮೇಲೆ ಫೈರಿಂಗ್

    ಬೆಂಗಳೂರು: ರೌಡಿ ಲಕ್ಷ್ಮಣ ಹತ್ಯೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನಕ್ಕೊಬ್ಬ ಆರೋಪಿಗೆ ಗುಂಡೇಟು ನೀಡಿ ಬಂಧಿಸುತ್ತಿದ್ದಾರೆ. ನಿನ್ನೆಯಷ್ಟೇ ಹೇಮಿಯನ್ನು ಬಂಧಿಸಿದ ಪೊಲೀಸರು ಇಂದು ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ.

    ಆರೋಪಿ ಆಕಾಶ್ ಅಲಿಯಾಸ್ ಮಾಮನ ಕಾಲಿಗೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ ಉತ್ತರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆರೋಪಿ ಮಾಮನನ್ನು ಬಂಧಿಸಲು ಸಿಸಿಬಿ ಪೊಲೀಸರು ಹೋಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಸಿಸಿಬಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ, ಪೊಲೀಸ್ ಪೇದೆಗಳಾದ ಅರುಣ್, ಶಾಂತರಾಜು ಮತ್ತು ಸತೀಶ್ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಪೇದೆ ಅರುಣ್ ಕುಮಾರ್ ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ರೌಡಿ ಲಕ್ಷ್ಮಣ ಕೊಲೆ ಪ್ರಕರಣ- ಮೊತ್ತೊಬ್ಬ ರೌಡಿ ಕಾಲಿಗೆ ಗುಂಡು

    ಮಂಗಳವಾರ ಲಕ್ಷ್ಮಣ್ ಹತ್ಯೆ ಪ್ರಕರಣದ 6 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೇ ಕೇಸಿನ ಪ್ರಮುಖ ಆರೋಪಿ ರೌಡಿ ಆಕಾಶ್ ಭಾಗಿಯಾಗಿರುವ ಮಾಹಿತಿ ಸಿಕ್ಕಿತ್ತು. ಮಂಗಳವಾರ ತಡರಾತ್ರಿ ರೌಡಿ ಆಕಾಶ್ ಉತ್ತರಹಳ್ಳಿಯ ಪೂರ್ಣಪ್ರಜ್ಞ ನಗರದಲ್ಲಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಲು ಹೋದಾಗ ಪೆಪ್ಪರ್ ಸ್ಪ್ರೇ ಹೊಡೆದು ಮುಖ್ಯಪೇದೆ ಅರುಣ್ ಮೇಲೆ ಹಲ್ಲೆ ಮಾಡಿದ್ದನು. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಮುರುಗೇಂದ್ರಯ್ಯ ಫೈರ್ ಮಾಡಿದ್ದಾರೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ಹೇಳಿದ್ದಾರೆ.

    ಹತ್ಯೆಯಾದ ಲಕ್ಷ್ಮಣ್‍ಗೆ ಮಚ್ಚಿನಿಂದ ಹೊಡೆದಿರುವವರ ಪೈಕಿ ಈ ರೌಡಿ ಆಕಾಶ್ ಕೂಡ ಭಾಗಿಯಾಗಿದ್ದ. ಕ್ಯಾಟ್ ರಾಜ ಹಾಗೂ ಹೇಮಿ ಟೀಂನಲ್ಲಿ ರೌಡಿ ಆಕಾಶ್ ಗುರುತಿಸಿಕೊಂಡಿದ್ದನು. ಸದ್ಯ ಬಂಧಿತರಾಗಿರುವ ಎಲ್ಲಾ ಆರೋಪಿಗಳು ವಿಚಾರಣೆ ವೇಳೆ ಲಕ್ಷ್ಮಣ್ ಹತ್ಯೆ ಕೇಸಿನಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಳ್ಳುತ್ತಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಲಕ್ಷ್ಮಣ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

    ಈ ಹಿಂದೆ ಡಿಕೆ ಶಿವಕುಮಾರ್ ಮನೆಯ ಮೇಲೆ, ಅವರ ಸಂಬಂಧಿಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ಈಗ ಮತ್ತೆ ಅವರ ಆಪ್ತರಾದ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಸದಾಶಿವ ನಗರದಲ್ಲಿರುವ ಅವರ ಮನೆ ಮತ್ತು ಬಸವೇಶ್ವರ ನಗದಲ್ಲಿರುವ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಲಕ್ಷ್ಮಣ್ ಸಿಎಂ ಹಾಗೂ ಡಿಕೆಶಿಗೆ ಆಪ್ತರಾಗಿದ್ದು, ಅವರ ಮನೆಯ ಮೇಲೆ ನಡೆಯುತ್ತಿರುವ 2ನೇ ದಾಳಿ ಇದಾಗಿದೆ.