Tag: lawyer

  • ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಕೇಸ್‍ಗೆ ಟ್ವಿಸ್ಟ್- ಮತ್ತೊಂದು ಆಡಿಯೋ ವೈರಲ್

    ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಕೇಸ್‍ಗೆ ಟ್ವಿಸ್ಟ್- ಮತ್ತೊಂದು ಆಡಿಯೋ ವೈರಲ್

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತು ಮಾಜಿ ಸಂಸದ ಎಲ್‍ಆರ್ ಶಿವರಾಮೇಗೌಡ (Shivarame Gowda) ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ.

    ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.

    ಆಡಿಯೋದಲ್ಲಿ ಏನಿದೆ..?:
    ದೇವರಾಜೇಗೌಡ: ನಮಗೆ ನೋಟಿಸ್ ಕೊಡ್ತಾರಾ ಅಣ್ಣ ಎಸ್‍ಐಟಿಯವರು
    ಶಿವರಾಮೇಗೌಡ: ಕೊಡ್ತಾರೆ…ಕೊಡ್ತಾರೆ…ಕೊಡ್ತಾರೆ…
    ದೇವರಾಜೆಗೌಡ: ಅಲ್ಲಿ ಏನು ಮಾತಾಡೋದು ಅಣ್ಣ ಬೇರೆ…?
    ಶಿವರಾಮೇಗೌಡ: ಎಸ್‍ಐಟಿ ಅವರು ನೋಟಿಸ್ ಕೊಟ್ಟಾಗಲು ಡಿಕೆ ಬಗ್ಗೆ ಚಕಾರ ಎತ್ತಬೇಡ….
    ದೇವರಾಜೆಗೌಡ: ಸರಿ ಸರಿ ಅಣ್ಣ….
    ಶಿವರಾಮೇಗೌಡ: ನಾನ್ ಇವತ್ತಿಂದ ಹೋರಾಟ ಮಾಡ್ತಿಲ್ಲ..
    ದೇವರಾಜೆಗೌಡ: ಹೌದಾ ಅಣ್ಣ
    ಶಿವರಾಮೇಗೌಡ: ಈ ಕೃತ್ಯಗಳೆಲ್ಲಾ ಕಡಿಮೆ ಮಾಡಬೇಕು.. ನಮ್ಮ ತಾಲೂಕು ಕ್ಲೀನ್ ಆಗಬೇಕು ಅಂತಾ ನಾನು ಬಹಳ ದಿವಸದಿಂದ ಹೋರಾಟ ಮಾಡ್ತಾ ಇದ್ದೀನಿ… ವೀಡಿಯೋ ಬಿಟ್ಟಿರೋದು ಫೇಸ್‍ಬುಕ್‍ನಲ್ಲಿ.. ನಾನು ಹೋರಾಟ ಮಾಡ್ತಾ ಇದ್ದೀನಿ… ಕೋರ್ಟ್‍ನಲ್ಲೂ ಅವರ ವಿರುದ್ದವಾಗಿ ಹೋರಾಟ ಮಾಡಿದ್ದೀನಿ.. ಇದು ಬಿಟ್ರೆ ಬೇರೆ ಚರ್ಚೆನೆ ಇಲ್ಲ ಅಂತಾ ಹೇಳು….
    ದೇವರಾಜೆಗೌಡ: ಸರಿ ಸರಿ ಅಣ್ಣ..

    ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಶಿವರಾಮೇ ಗೌಡ ಮಾತನಾಡಿದ್ದರು ಎನ್ನಲಾದ ಆಡಿಯವನ್ನು ದೇವರಾಜೇ ಗೌಡರೇ ರಿಲೀಸ್ ಮಾಡಿದ್ದರು. ಇದೀಗ ಮತ್ತೊಂದು ಆಡಿಯೋ ವೈರಲ್ ಆಗುವ ಮೂಲಕ ಪ್ರಕರನವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    ದೇವರಾಜೇ ಗೌಡ ಪೊಲೀಸ್‌ ವಶಕ್ಕೆ: ಇತ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ.

    ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡ, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಅಲ್ಲದೇ ಪ್ರಜ್ವಲ್ ಲೈಂಗಿಕ ಕಿರುಕುಳದ ವೀಡಿಯೋಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.

  • ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ರಾಮನಗರ: ಜಿಲ್ಲೆಯಲ್ಲಿ (Ramanagar) ವಕೀಲರ ಧರಣಿಗೆ ಕುಮಾರಸ್ವಾಮಿಯೇ ಕಾರಣ. ಅಶಾಂತಿ ಸೃಷ್ಠಿಸುತ್ತಿರುವುದೇ ಜೆಡಿಎಸ್ (JDS) ಹಾಗೂ ಬಿಜೆಪಿ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ರಾಮನಗರದಲ್ಲಿ ಡಿ.ಕೆ. ಸಹೋದರರಿಂದ ಅಶಾಂತಿ ಸೃಷ್ಟಿ ಎಂದಿದ್ದ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕನಕಪುರದಲ್ಲಿ ಪ್ರತಿಕ್ರಿಯಿಸಿದ ಅವರು, ವಕೀಲರ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೋಮು ವಿಷಯದಲ್ಲಿ ಅವರು ಯಾವಾಗಲೂ ರಾಜಕೀಯ ಮಾಡುತ್ತಾರೆ. ಅವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ ಮತ್ತು ಪಿಎಸ್‌ಐ ಸಹ ಅಲ್ಪಸಂಖ್ಯಾತರಾಗಿದ್ದರಿಂದ ವಕೀಲರ ವಿಷಯದಲ್ಲಿ ರಾಜಕೀಯ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಸಹ ಅಲ್ಪಸಂಖ್ಯಾತ ಅಧಿಕಾರಿ ಬೇಡ ಎಂದಿದ್ದರು. ವಕೀಲರ ಹೋರಾಟಕ್ಕೆ ಸಂಬಂಧಿಸಿದಂತೆ, ಪಿಎಸ್‌ಐ ವಿರುದ್ಧ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದೆ ಎಂದರು. ಇದನ್ನೂ ಓದಿ: ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಗುರುವಾರ ಮಹಾಮಸ್ತಕಾಭಿಷೇಕ

  • ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ರಾಮನಗರ: ಜ್ಞಾನವಾಪಿ ಮಸೀದಿಯ (Gyanvapi Mosque) ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ, ಫೇಸ್‍ಬುಕ್‍ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ರಾಮನಗರ (Ramanagara) ಮೂಲದ ವಕೀಲನನ್ನ (Lawyer) ಪೊಲೀಸರು  (Police) ಬಂಧಿಸಿದ್ದಾರೆ.

    ಬಂಧಿತ ವಕೀಲನನ್ನು ಚಾನ್ ಪಾಷ ಎಂದು ಗುರುತಿಸಲಾಗಿದೆ. ಆರೋಪಿ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ವಿಚಾರಕ್ಕೆ ನ್ಯಾಯಾಧೀಶರನ್ನು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಪೋಸ್ಟ್‍ನಲ್ಲಿ ನ್ಯಾಯಾಧೀಶರನ್ನು ನಾಲಾಯಕ್, ಭ್ರಷ್ಟ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ – ನ್ಯಾಯಾಧೀಶರ ವಿರುದ್ಧ ವಕೀಲನಿಂದ ಅವಹೇಳನಕಾರಿ ಪೋಸ್ಟ್

    ಈ ಸಂಬಂಧ ಹಿಂದೂಪರ ಕಾರ್ಯಕರ್ತರು ಹಾಗೂ ಕೆಲ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ನ್ಯಾಯಾಂಗ ನಿಂದನೆ (Contempt Of Court) ಆರೋಪದಡಿ ಚಾನ್ ಪಾಷನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: 15 ಪತ್ರ ಬರೆದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ- ಚೆಲುವರಾಯಸ್ವಾಮಿ

  • ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಹರಿದ ಶೂನಿಂದ ಮದುವೆಗೆ ಹೋಗೋಕೆ ಆಗಿಲ್ಲ- ಅಂಗಡಿ ಮಾಲೀಕನಿಗೆ ವಕೀಲ ನೋಟಿಸ್!

    ಲಕ್ನೋ: ಹರಿದ ಶೂ ಕೊಟ್ಟನೆಂದು ಆರೋಪಿಸಿ ಅಂಗಡಿ ಮಾಲೀಕನಿಗೆ ವಕೀಲರೊಬ್ಬರು ನೋಟಿಸ್‌ ಕಳುಹಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜ್ಞಾನೇಂದ್ರ ಭನ್ ತ್ರಿಪಾಠಿಯವರು ಸಲ್ಮಾನ್ ಹುಸೇನ್ ಎಂಬವರಿಗೆ ಈ ನೋಟಿಸ್‌ ಕಳುಹಿಸಿದ್ದಾರೆ.

    ನೋಟಿಸ್‌ನಲ್ಲೇನಿದೆ..?: ತಮ್ಮ ಅಂಗಡಿಯಿಂದ ಖರೀದಿಸಿದ್ದ ಬೂಟುಗಳು ಹರಿದಿದ್ದರಿಂದ ತನ್ನ ಸೋದರಳಿಯನ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದು, ನಾನು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು ಎಂದು ನೋಟಿಸ್‌ನಲ್ಲಿ ತ್ರಿಪಾಠಿ ತಿಳಿಸಿದ್ದಾರೆ.

    ಏನಿದು ಘಟನೆ..?: ವೃತ್ತಿಯಲ್ಲಿ ವಕೀಲರಾಗಿರುವ ತ್ರಿಪಾಠಿಯವರು ಕಳೆದ ವರ್ಷ ನವೆಂಬರ್ 21 ರಂದು ಸಲ್ಮಾನ್ ಹುಸೇನ್ ಅವರ ಅಂಗಡಿಯಿಂದ ಶೂಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆರು ತಿಂಗಳ ವಾರಂಟಿಯೊಂದಿಗೆ ಪ್ರತಿಷ್ಠಿತ ಬ್ರಾಂಡ್‌ನ ಶೂಗಳು ಎಂದು ಅಂಗಡಿಯವನು ಹೇಳಿದ್ದಾನೆ. ಆದರೆ ಈ ಶೂಗಳು ಕೆಲವೇ ದಿನಗಳಲ್ಲಿ ಹರಿದುಹೋಗಿವೆ. ಈ ಕಾರಣದಿಂದ ತನ್ನ ಸೋದರಳಿಯನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತ್ರಿಪಾಠಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್‌ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಅಂಗಡಿ ಮಾಲೀಕನಿಗೆ ನೋಟಿಸ್:‌ ಜನವರಿ 19ರಂದು ಅಂಗಡಿಯವರಿಗೆ ನೋಟಿಸ್ ಕಳುಹಿಸಿದ್ದು (Lawyer Given Notice To shop Owner), ಅದರಲ್ಲಿ ಚಿಕಿತ್ಸೆಗೆ 2,100 ರೂ. ಖರ್ಚಾಗಿದ್ದು, ಖರೀದಿಸಿದ ಶೂಗೆ 1,200 ರೂ. ನೀಡಿದ್ದೇನೆ. ಹೀಗಾಗಿ ನನಗೆ 10 ಸಾವಿರ ನೀಡುವಂತೆ ತ್ರಿಪಾಠಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅಂಗಡಿ ಮಾಲೀಕ ಪರಿಹಾರ ನೀಡಲು ವಿಫಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

    ಆರೋಪ ನಿರಾಕರಿಸಿದ ಮಾಲೀಕ: ಇತ್ತ ಅಂಗಡಿಯ ಮಾಲೀಕ ಸಲ್ಮಾನ್ ಹುಸೇನ್ ಅವರು ತ್ರಿಪಾಠಿ ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೆ ಅವರು ಪ್ರತಿಷ್ಠಿತ ಬ್ರಾಂಡ್‌ನ ಶೂಗಳನ್ನು ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ತ್ರಿಪಾಠಿಯವರು 50% ರಿಯಾಯಿತಿಯಲ್ಲಿ ಶೂಗಳನ್ನು ಖರೀದಿಸಿದ್ದಾರೆ. ಆರು ತಿಂಗಳೊಳಗೆ ಶೂನ ಅಡಿಭಾಗವು ಹಾನಿಗೊಳಗಾಗುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಏನೂ ಆಗಿಲ್ಲ. ಅವರು ಬಲವಂತವಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ನನ್ನ ಮೇಲೆ ಅವರು ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

  • ಕಲಬುರಗಿಯಲ್ಲಿ ವಕೀಲನ ಬರ್ಬರ ಹತ್ಯೆ – 6 ಜನರ ವಿರುದ್ಧ ಎಫ್‌ಐಆರ್

    ಕಲಬುರಗಿಯಲ್ಲಿ ವಕೀಲನ ಬರ್ಬರ ಹತ್ಯೆ – 6 ಜನರ ವಿರುದ್ಧ ಎಫ್‌ಐಆರ್

    ಕಲಬುರಗಿ: ಕೋರ್ಟ್‌ಗೆ (Court) ತೆರಳುತ್ತಿದ್ದ ವೇಳೆ ವಕೀಲರೊಬ್ಬರನ್ನು (Lawyer) ಕೆಲ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ವೀರಣ್ಣ ಗೌಡ ಹತ್ಯೆಯಾದ ವಕೀಲ. ಇಂದು ಬೆಳಗ್ಗೆ ವೀರಣ್ಣ ಗೌಡ ಅವರನ್ನು ಹಂತಕರು ಶ್ರೀ ಗಂಗಾ ಅಪಾರ್ಟ್ಮೆಂಟ್‌ನಲ್ಲಿ ಕೊಲೆ ಮಾಡಿದ್ದಾರೆ. ಕೋರ್ಟ್‌ಗೆ ತೆರಳುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ವೀರಣ್ಣ ಗೌಡ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

    ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಹತ್ಯೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ನೀಲಕಂಠ ಪೊಲೀಸ್ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ, ಸಿದ್ರಾಮ್, ಅವ್ವಣ್ಣ, ಗುರು ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಲಾರಿ, ಟಾಟಾ ಏಸ್ ನಡುವೆ ಡಿಕ್ಕಿ – ನಾಲ್ವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ

  • ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    – ನಮ್ಮ ಇಡೀ ಊರಲ್ಲಿ ಲಾಯರ್ ಆಗಿದ್ದು ನಾನೊಬ್ಬನೇ

    ಬೆಂಗಳೂರು: ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ (Lawyer) ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸ ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.

    ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ಇತಿಹಾಸ ಬಿಚ್ಚಿಟ್ಟರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

    ನಾನು ಎವರೇಜ್ ಸ್ಟೂಡೆಂಟ್. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸ್, ಪಿಯುಸಿ ಬಂದ ಮೇಲೆ ಸೆಕೆಂಡ್ ಕ್ಲಾಸ್. ಡಿಗ್ರಿ ಬಂದ ಮೇಲೆ ಎವರೇಜ್ ಸ್ಟೂಡೆಂಟ್ ಆಗಿದ್ದೆ. ಆದರು ನಾನು ಇವತ್ತು ಸಿಎಂ ಆಗಿದ್ದೇನೆ. ಜೀವನದಲ್ಲಿ ಶ್ರಮ ಮುಖ್ಯ ಎಂದು ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ವಕೀಲ; ಸೊಸೆ, ಮೊಮ್ಮಗನೂ ಕೃತ್ಯಕ್ಕೆ ಸಾಥ್- ಪಾಪಿ ಮಗ ಅಂದರ್

    ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ವಕೀಲ; ಸೊಸೆ, ಮೊಮ್ಮಗನೂ ಕೃತ್ಯಕ್ಕೆ ಸಾಥ್- ಪಾಪಿ ಮಗ ಅಂದರ್

    ಚಂಡೀಗಢ: ಪಂಜಾಬ್‌ನ (Punjab) ಹೃದಯಭಾಗದಲ್ಲಿರುವ ರೋಪಾರ್‌ನ ಗ್ಯಾನಿ ಜೈಲ್ ಸಿಂಗ್ ನಗರ ಎಂಬ ಶಾಂತ ಪಟ್ಟಣದಲ್ಲಿ ಒಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನಗರದ ಖ್ಯಾತ ವಕೀಲನೊಬ್ಬ (Lawyer) ತನ್ನ ವೃದ್ಧ ತಾಯಿಗೆ (Mother) ಮನಬಂದಂತೆ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆರೆಹೊರೆಯವರು ಘಟನೆಯನ್ನು ತಿಳಿದು ಬೆಚ್ಚಿಬಿದ್ದಿದ್ದಾರೆ.

    ವೃದ್ಧ ಮಹಿಳೆ ಆಶಾರಾಣಿ (73) ತನ್ನ ಮಗ, ಸೊಸೆ ಹಾಗೂ ಮೊಮ್ಮಗನೊಂದಿಗೆ ಪಂಜಾಬ್‌ನ ರೂಪ್‌ನಗರದಲ್ಲಿ ವಾಸವಿದ್ದರು. ಚೆನ್ನಾಗಿ ಓದಿಸಿ, ಲಾಯರ್ ಆಗುವವರೆಗೆ ಪೋಷಿಸಿದ ತಾಯಿಗೇ ಮಗನಾದ ಅಂಕುರ್ ವರ್ಮಾ ನಿರ್ದಯವಾಗಿ ಪದೇ ಪದೇ ಥಳಿಸಿದ್ದಾನೆ. ಈ ಕೃತ್ಯಕ್ಕೆ ವೃದ್ಧೆಯ ಸೊಸೆ ಹಾಗೂ ಮೊಮ್ಮಗನೂ ಸಾಥ್ ನೀಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.

    CRIME

    ಆಶಾರಾಣಿ ಅವರ ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ವೃದ್ಧೆಗೆ ಮಗ ಹಾಗೂ ಸೊಸೆ ದೈಹಿಕ ಹಿಂಸೆ ನೀಡುತ್ತಿದ್ದರು. ಅವರ ಈ ಎಲ್ಲಾ ಕೃತ್ಯಗಳು ತಾಯಿಯ ಕೊಠಡಿಯಲ್ಲಿ ಮಗನೇ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಕಂಡುಹಿಡಿಯುವಲ್ಲಿ ವೃದ್ಧೆಯ ಮಗಳಾದ ದೀಪಶಿಖಾ ಯಶಸ್ವಿಯಾಗಿದ್ದಾರೆ. ತನ್ನ ಸಹೋದರನ ಕೃತ್ಯ ಕಣ್ಣಾರೆ ಕಂಡು ದೀಪಶಿಖಾ ದಿಗ್ಬ್ರಮೆಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ

    ವೀಡಿಯೋದಲ್ಲೇನಿದೆ?
    ಸಂತ್ರಸ್ತೆಯ ಮೊಮ್ಮಗ ಮೊದಲು ಆಶಾರಾಣಿ ಅವರ ಹಾಸಿಗೆ ಮೇಲೆ ನೀರು ಸುರಿಯುವುದು ಕಂಡುಬಂದಿದೆ. ನಂತರ ವೃದ್ಧೆ ಹಾಸಿಗೆ ಒದ್ದೆ ಮಾಡಿದ್ದಾಗಿ ಹೆತ್ತವರಿಗೆ ದೂರು ನೀಡಿದ್ದಾನೆ. ನಂತರ ಆರೋಪಿ ಅಂಕುರ್ ಹಾಗೂ ಆತನ ಪತ್ನಿ ಸುಧಾ ಹಾಸಿಗೆಯನ್ನು ಪರಿಶೀಲಿಸಿದ್ದಾರೆ. ವೃದ್ಧ ತಾಯಿಯೇ ಹಾಸಿಗೆ ಒದ್ದೆ ಮಾಡಿದ್ದಾಗಿ ಭಾವಿಸಿ ಅಂಕುರ್ ಆಕೆಗೆ ಹಾಸಿಗೆ ಮೇಲೆ ಮಲಗಿದ್ದಾಗಲೇ ಪದೇ ಪದೇ ಹಲ್ಲೆ ಮಾಡಿದ್ದಾನೆ. ಆಕೆಯ ಬೆನ್ನಿಗೆ ಪದೇ ಪದೇ ಗುದ್ದಿದ್ದು ಮಾತ್ರವಲ್ಲದೇ ನಿಮಿಷಗಳವರೆಗೆ ನಿರಂತರವಾಗಿ ಕಪಾಳಮೋಕ್ಷವೂ ಮಾಡಿದ್ದಾನೆ. ಆಕೆಯ ಕೂದಲನ್ನು ನಿರ್ದಯವಾಗಿ ಎಳೆದಾಡುವ ಭಯಾನಕ ದೃಶ್ಯಗಳು ವೀಡಿಯೋದಲ್ಲಿ ಕಾಣಿಸಿಕೊಂಡಿದೆ.

    ಸಹೋದರ ತಾಯಿ ಮೇಲೆ ಎಸಗಿದ್ದ ದೈಹಿಕ ಕಿರುಕುಳವನ್ನು ಅರಿತ ದೀಪಶಿಖಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸ್ ತಂಡ ಮತ್ತು ಎನ್‌ಜಿಒ ಅಧಿಕಾರಿಗಳು ಶನಿವಾರ ಘಟನಾ ಸ್ಥಳ ತಲುಪಿ ವೃದ್ಧೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿಗಳು ತಾಯಿಯ ಮಾನಸಿಕ ಸ್ಥಿತಿ ಸರಿಯಿಲ್ಲ, ನಾವು ಆಕೆಯ ಆರೈಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

    ಇದೀಗ ಸಿಸಿಟಿವಿ ಸಾಕ್ಷಿಯ ಆಧಾರದ ಮೇಲೆ ಪೊಲೀಸರು ವಕೀಲ ಅಂಕುರ್ ವರ್ಮಾನನ್ನು ಬಂಧಿಸಿದ್ದಾರೆ. ಆಸ್ತಿಯನ್ನು ಸುಲಿಗೆ ಮಾಡಲು ಸ್ವಯಂಪ್ರೇರಿತರಾಗಿ ಗಾಯಗೊಳಿಸುವುದು, ಅಕ್ರಮ ಬಂಧನ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯ ಸೆಕ್ಷನ್ 24ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪರಿಚಿತರಿಂದ ಗುಂಡಿನ ದಾಳಿ – ಅಂಗಡಿ ಮಾಲೀಕ ಸ್ಥಳದಲ್ಲೇ ಸಾವು

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಣೆಯಾಗಿದ್ದ ಲಾಯರ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಲಾಯರ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ಬಾಗಲಕೋಟೆ: ಕಾಣೆಯಾಗಿದ್ದ ಲಾಯರ್ (Lawyer) ಕೊಲೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ತುಮ್ಮರಮಟ್ಟಿ (Tummaramatti) ಗ್ರಾಮದಲ್ಲಿ ನಡೆದಿದೆ.

    ಗಿರೀಶ್ ಕಾಡಣ್ಣವರ (38) ಕೊಲೆಯಾದ ಲಾಯರ್. ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಗಿರೀಶ್ ಅಕ್ಟೋಬರ್ 15ರಂದು ಮನೆಯಿಂದ ನಾಪತ್ತೆಯಾಗಿದ್ದರು. ಗ್ರಾಮದ ವಾರಿ ಮಲ್ಲಯ್ಯನ ಗುಡಿ ಬೆಟ್ಟದ ಮೇಲೆ ಇವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತರು ಇವರ ತಲೆ ಮತ್ತು ದೇಹವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಈಜು ಬಾರದೇ ಯುವಕ ಕೆರೆಯಲ್ಲಿ ಮುಳುಗಿ ಸಾವು

    ಕೊಲೆ ಮಾಡಿದ್ದು ಯಾರು? ಹತ್ಯೆ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಲೇಡಿಹಿಲ್‌ನಲ್ಲಿ ಕಾರು ಹಿಟ್ & ರನ್ – ಓರ್ವ ಯುವತಿ ಸಾವು, ನಾಲ್ವರಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

    ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

    ಬೆಂಗಳೂರು: ಉದ್ಯಮಿಗೆ ವಂಚನೆ ಪ್ರಕರಣದಲ್ಲಿ (Fraud Case) ಅಭಿನವ ಹಾಲಶ್ರೀ (Abhinava Halashree) ಸ್ವಾಮೀಜಿ ಅರೆಸ್ಟ್ ಬೆನ್ನಲ್ಲೇ, ಮೈಸೂರಿನ (Mysuru) ವಕೀಲರೊಬ್ಬರು (Lawyer) ಹಿರೇಹಡಗಲಿಯ ಮಠಕ್ಕೆ (Mutt) 56 ಲಕ್ಷ ರೂ. ಹಣ ತಂದಿಟ್ಟಿದ್ದಾರೆ. ಈ ಹಣದ ಮೂಲ ಯಾವುದು? ಎಲ್ಲಿಂದ ಬಂತು ಎನ್ನುವ ಬಗ್ಗೆ ವಕೀಲ ಪ್ರಣವ್ ಪ್ರಸಾದ್ ಡಿಸಿಪಿಯವರಿಗೆ (DCP) ಪತ್ರ ಬರೆದಿದ್ದಾರೆ.

    ಇಷ್ಟು ಮಾತ್ರವಲ್ಲದೇ ಹಣದ ಕುರಿತು ಪ್ರಣವ್ ಪ್ರಸಾದ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಡಿಸಿಪಿಯವರಿಗೆ ಪ್ರಣವ್ ಪ್ರಸಾದ್ ಬರೆದ ಪತ್ರದಲ್ಲಿ (Letter) ಮಠಕ್ಕೆ ಹಣ ಬಂದ ಬಗ್ಗೆ ಉಲ್ಲೇಖವಾಗಿದ್ದು, ಪತ್ರದಲ್ಲಿನ ಸಂಪೂರ್ಣ ಸಾರಾಂಶ ಇಲ್ಲಿದೆ. ಇದನ್ನೂ ಓದಿ: ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡುತ್ತದೆ: ಶಿವರಾಜ್ ತಂಗಡಗಿ

    ಪತ್ರದಲ್ಲಿ ಏನಿದೆ?
    ಪ್ರಣವ್ ಪುಸಾದ್ 53 ವರ್ಷ, ಆದ ನಾನು ಮೈಸೂರಿನನಲ್ಲಿ ನೆಲೆಸಿದ್ದು ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ. ಚೈತ್ರ ಕುಂದಾಪುರ ಪಕರಣದಲ್ಲಿ ಸುದ್ದಿಯಲ್ಲಿರುವ ಅಭಿನವ ಹಾಲಶ್ರೀ ಸ್ವಾಮಿಜಿಗಳು ನನಗೂ ಮತ್ತು ನನ್ನ ಕುಟುಂಬಸ್ಥರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿನಿಂದ ನಮ್ಮ ಒಡನಾಟದಲ್ಲಿ ಇದ್ದರು. ಇದನ್ನೂ ಓದಿ: ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಇವರು ನಮ್ಮ ಮನೆಗೆ ಬರುವುದು, ಆಶೀರ್ವಚನ ನೀಡುವುದು, ಪ್ರಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಹೀಗಾಗಿ ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದೆವು. ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು. ಇದನ್ನೂ ಓದಿ: ಶಿವಕುಮಾರ್ ಒಬ್ಬ ನೀರಿನ ಕಳ್ಳ, ಆಯೋಗ್ಯ: ಈಶ್ವರಪ್ಪ ಕಿಡಿ

    ಅದಾದ ನಂತರ ಕರೆ ಮಾಡಿದ ಚಾಲಕ ರಾಜು, ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದ. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವರಿಗೆ ಹಲವು ಬಾರಿ ಹೇಳಿದ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡೆ ತಲೆಹಾಕಲಿಲ್ಲ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಒಗ್ಗಟ್ಟು, ಸರ್ವಪಕ್ಷ ಸಂಸದರ ಬೆಂಬಲ: ಡಿಕೆಶಿ

    ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಮಬವರಿಗೆ ಈ ಹಣವನ್ನು ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ತಮ್ಮ ಗಮನಕ್ಕೆ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ಹಂಚಿಕೊಳ್ಳುತ್ತಿದ್ದೇನೆ. ನನಗೆ ಜೀವ ಭಯವಿದ್ದು ರಕ್ಷಣೆ ನೀಡಬೇಕೆಂದು ಡಿಸಿಪಿಯವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ CWMA ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದ ವಕೀಲನ ಮೇಲೆ ಮಾಜಿ ಪತ್ನಿಯಿಂದ ಗಂಭೀರ ಆರೋಪ

    ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದ ವಕೀಲನ ಮೇಲೆ ಮಾಜಿ ಪತ್ನಿಯಿಂದ ಗಂಭೀರ ಆರೋಪ

    ಹಾಸನ: ಪ್ರಜ್ವಲ್ ರೇವಣ್ಣ (Prajwal Revanna) ಅವರ ಸಂಸದ ಸ್ಥಾನದ ಅಸಿಂಧು ಪ್ರಕರಣದ ದೂರುದಾರ ವಕೀಲ (Lawyer) ದೇವರಾಜೇಗೌಡ ಹಲವಾರು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಅವರ ಮಾಜಿ ಪತ್ನಿ ಭಾಗ್ಯ ಆರೋಪಿಸಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಹಾಸನ ಹಾಗೂ ಬೆಂಗಳೂರಿನಲ್ಲಿ ಹಲವರಿಗೆ ವಂಚನೆ ಮಾಡಿದ್ದಾರೆ. 2016 ರಲ್ಲಿ ಯಾವುದೇ ಆಸ್ತಿ ಇಲ್ಲದ ವ್ಯಕ್ತಿ 2023ರ ವೇಳೆಗೆ 84 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ ಅದು ಹೇಗೆ ಸಾಧ್ಯ? ಅಲ್ಲದೇ 13 ವರ್ಷಗಳ ಹಿಂದೆ ನನ್ನಿಂದ ವಿಚ್ಛೇದನ ಪಡೆದುಕೊಂಡ ಬಳಿಕ ನನ್ನ ಚಾರಿತ್ರ್ಯ ಹರಣ ಮಾಡಿದ್ದಾರೆ. ಪ್ರಭಾವಿ ರಾಜಕಾರಣಿ ಜೊತೆಗೆ ತನಗೆ ಸಂಬಂಧ ಇದೆ ಎಂದು ಆರೋಪ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಒಪ್ಪಿ ಬಂದರೆ ಕೋಲಾರ ಕ್ಷೇತ್ರ ಬಿಟ್ಟು ಕೊಡುವ ನಿರ್ಧಾರ: ಮುನಿಸ್ವಾಮಿ

    ನಾವಿಬ್ಬರೂ ಹಾಸನದ ಕಾಮಸಮುದ್ರದವರು, 26 ವರ್ಷಗಳ ಹಿಂದೆ ಮದುವೆ ನಡೆದಿತ್ತು. ಮದುವೆ ಬಳಿಕ 13 ವರ್ಷ ಸಂಸಾರ ಮಾಡಿದ್ದೆವು. ಬಳಿಕ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದರು. ಇವರ ಹಿಂಸೆ ತಾಳದೇ ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

    ವಿಚ್ಛೇದನದ ಬಳಿಕ ಕೂಡ ರಾಜಕಾರಣಿಗಳೊಂದಿಗೆ ಸಂಬಂಧ ಇದೆ ಎಂದು ಚಾರಿತ್ರ್ಯ ಹರಣ ಮುಂದುವರೆಸಿದ್ದಾರೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ನೆಟೆ ರೋಗ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡಿದ ಸರ್ಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]