Tag: Lawyer Sudarshan

  • ಕೊನೆ ಕ್ಷಣದಲ್ಲಿ ರಾಗಿಣಿ ಪರ ವಕೀಲ ಕೋರ್ಟ್ ವಿಚಾರಣೆಗೆ ಗೈರಾಗಿದ್ದೇಕೆ?

    ಕೊನೆ ಕ್ಷಣದಲ್ಲಿ ರಾಗಿಣಿ ಪರ ವಕೀಲ ಕೋರ್ಟ್ ವಿಚಾರಣೆಗೆ ಗೈರಾಗಿದ್ದೇಕೆ?

    – ತಂದೆಯ ನಿರ್ಧಾರದಿಂದ ಮತ್ತೆ ಸಿಸಿಬಿ ಕಸ್ಟಡಿಗೆ ಸೇರಿದ್ರಾ?

    ಬೆಂಗಳೂರು: ನಟಿ ರಾಗಿಣಿಯನ್ನು ಮತ್ತೆ 5 ದಿನ ನ್ಯಾಯಾಲಯ ಸಿಸಿಬಿ ಕಸ್ಟಡಿಗೆ ನೀಡಿದೆ. ಆದರೆ ಇಂದು ಕೋರ್ಟಿಗೆ ಹಾಜರು ಪಡಿಸಿದ ಸಂದರ್ಭದಲ್ಲಿ ರಾಗಿಣಿ ಪರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲರು ಕೋರ್ಟಿಗೆ ಗೈರು ಹಾಜರಾಗಿದ್ದು ಏಕೆ ಎಂಬ ಪ್ರಶ್ನೆ ಬಹುತೇಕ ಮಂದಿಯನ್ನು ಕಾಡಿತ್ತು. ಸದ್ಯ ಈ ಪ್ರಶ್ನೆಗಳಿಗೆ ವಕೀಲ ಸುದರ್ಶನ್ ಪಬ್ಲಿಕ್ ಟಿವಿಗೆ ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸುದರ್ಶನ್, ನಾನು ರಾಗಿಣಿ ಅವರ ಪ್ರಕರಣವನ್ನು ಪ್ರತಿನಿಧಿಸುತ್ತಿಲ್ಲ. ಏಕೆಂದರೆ ನನಗೆ ಪ್ರಕರಣವನ್ನು ಪ್ರತಿನಿಧಿಸದಂತೆ ಅವರ ತಂದೆಯವರೆ ಲಿಖಿತ ಸಂದೇಶ ನೀಡಿದ್ದರು. ಆದ್ದರಿಂದ ನಾನು ಪ್ರಕರಣದಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ನಟಿ ರಾಗಿಣಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಫ್‍ಐಆರ್ ನಲ್ಲಿ ಆರೋಪಗಳ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ. ಅಲ್ಲದೇ ಸೀಜ್ ಮೆಮೋದಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ರಾಗಿಣಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಆದ್ದರಿಂದ ಪೊಲೀಸರ ತನಿಖೆಯಲ್ಲಿ ಲೋಪವಿದೆ. ಆರೋಪಿ ರವಿಶಂಕರ್ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ವಸ್ತು ಪತ್ತೆಯಾಗಿರುವ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷಿಗಳು ಇಲ್ಲದೇ, ಕೇವಲ ಸೆಕೆಂಡರಿ ಅಂಶಗಳನ್ನು ಉಲ್ಲೇಖಿಸಿ ಆರೋಪ ಸಾಬೀತು ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರಾಥಮಿಕ ಸಾಕ್ಷಿಗಳಿಗೆ ಪೂರಕವಾಗಿ ಸೆಕೆಂಡರಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈಗ ಸೆಕೆಂಡರಿ ಅಂಶಗಳ ಆಧಾರದಲ್ಲೇ ಅವರ ಬಂಧನವಾಗಿದೆ. ಇದನ್ನೇ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿ ಅರ್ಜಿ ಸಲ್ಲಿಕೆ ಮಾಡಿದ್ದೇವು ಎಂದು ವಕೀಲ ಸುದರ್ಶನ್ ವಿವರಿಸಿದರು.

    ಅಂತಿಮ ಕ್ಷಣದಲ್ಲಿ ರಾಗಿಣಿ ಅವರ ತಂದೆ ಸಂದೇಶ ಕಳುಹಿಸಿ ನನಗೆ ಪ್ರಕರಣದ ಪರ ಹಾಜರಾದಂತೆ ಸೂಚಿಸಿದ್ದರು. ಅಲ್ಲದೇ ಬೇರೆ ವಕೀಲರ ಮೂಲಕ ನ್ಯಾಯಾಲಕ್ಕೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿರುವುದರಿಂದ ಹೊಸ ವಕೀಲರು ಇದೇ ಅರ್ಜಿಯನ್ನು ಪ್ರತಿನಿಧಿಸಬಹುದು ಅಥವಾ ಹೊಸ ಅರ್ಜಿಯನ್ನು ಸಲ್ಲಿಸಬಹುದು. ಪ್ರಕರಣದ ಹಿನ್ನೆಲೆಯನ್ನು ಪರಿಶೀಲನೆ ನಡೆಸಿರುವುದರಿಂದ ಖಂಡಿತ ಅವರಿಗೆ ಜಾಮೀನು ಲಭಿಸುವ ಅವಕಾಶವಿತ್ತು ಎಂದರು.

    ಇತ್ತ ನ್ಯಾಯಾಲಯದಲ್ಲಿ ಹಾಜರಿದ್ದ ಸಿಸಿಬಿ ಪರ ವಕೀಲರು ಸಿಸಿಬಿ ಪೊಲೀಸರ ಮನವಿ ಮೇರೆಗೆ ಮತ್ತೆ 10 ದಿನಗಳ ಕಸ್ಟಡಿಗೆ ನೀಡಲು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಐದು ದಿನಗಳ ಕಾಲ ಕಸ್ಟಡಿಗೆ ನೀಡಿದೆ. ಇದನ್ನು ಸ್ವತಃ ಸಿಸಿಬಿ ಪೊಲೀಸರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎನ್ನಲಾಗಿದ್ದು, ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ 2ನೇ ಬಾರಿ ಕಸ್ಟಡಿಗೆ ಮನವಿ ಮಾಡಿದರೆ 2-3 ದಿನ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಂತಿಮ ಕ್ಷಣದಲ್ಲಿ ರಾಗಿಣಿ ಅವರ ತಂದೆ ಪ್ರಕರಣದ ವಕೀಲರನ್ನು ಬದಲಿಸಿದ್ದು ರಾಗಿಣಿ ಅವರಿಗೆ ಮುಳುವಾಯಿತು ಎನ್ನಲಾಗಿದೆ.

  • ರಾಗಿಣಿ ವಿರುದ್ಧ ಯಾವುದೇ ಸಾಕ್ಷಿ ಲಭಿಸಿಲ್ಲ, ತಪ್ಪೊಪ್ಪಿಕೊಂಡಿಲ್ಲ: ವಕೀಲ ಸುದರ್ಶನ್

    ರಾಗಿಣಿ ವಿರುದ್ಧ ಯಾವುದೇ ಸಾಕ್ಷಿ ಲಭಿಸಿಲ್ಲ, ತಪ್ಪೊಪ್ಪಿಕೊಂಡಿಲ್ಲ: ವಕೀಲ ಸುದರ್ಶನ್

    – ರಾಗಿಣಿ ಮನೆಯಲ್ಲೇ ಏನು ಸಿಕ್ಕಿಲ್ಲ
    – ಖಂಡಿತ ಜಾಮೀನು ಸಿಗುತ್ತಿತ್ತು
    – ರವಿಶಂಕರ್ ಹೆಸರು ಎಫ್‌ಐರ್‌ನಲ್ಲಿ ಇಲ್ಲ

    ಬೆಂಗಳೂರು: ನಟಿ ರಾಗಿಣಿ ಅವರು ಸಿಸಿಬಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಅವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ರಾಗಿಣಿ ಪರ ವಕೀಲರಾಗಿರುವ ಸುದರ್ಶನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ರಾಗಿಣಿ ಅವರನ್ನು ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ವಹಿಸಿದ ಕುರಿತು ಮಾಹಿತಿ ನೀಡಿದ ಅವರು, ಸದ್ಯ ನಾನು ಅವರ ಪ್ರಕರಣವನ್ನು ಪ್ರತಿನಿಧಿಸುತ್ತಿಲ್ಲ. ಏಕೆಂದರೆ ನನಗೆ ಪ್ರಕರಣವನ್ನು ಪ್ರತಿನಿಧಿಸದಂತೆ ಅವರ ತಂದೆಯವರೆ ನನಗೆ ಲಿಖಿತ ಸಂದೇಶ ನೀಡಿದ್ದಾರೆ. ಆದ್ದರಿಂದ ನಾನು ಪ್ರಕರಣದಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ರಾಗಿಣಿ

    ರಾಗಿಣಿ ಅವರ ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಟಿ ರಾಗಿಣಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಫ್‍ಐಆರ್‍ನಲ್ಲಿ ಈ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ. ಆದ್ದರಿಂದ ಪೊಲೀಸರ ತನಿಖೆಯಲ್ಲಿ ಲೋಪ ಇದೆ. ಅಲ್ಲದೇ ಸೀಜ್ ಮೆಮೋದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ರಾಗಿಣಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಕೇವಲ ಆರೋಪಿಗಳ ಹೇಳಿಕೆ ಆಧರಿಸಿ ಅರೆಸ್ಟ್ ಮಾಡಿದ್ದಾರೆ ಅಷ್ಟೇ. ಆದ್ದರಿಂದಲೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದೆವು. ಈಗ ನಾನು ಪ್ರಕರಣದಿಂದ ಹೊರ ನಡೆದಿರುವುದರಿಂದ ಅವರು ಬೇರೆ ವಕೀಲರೊಂದಿಗೆ ಈಗಾಗಲೇ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಮುಂದುವರಿಸಬಹುದು ಅಥವಾ ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂದರು. ಇದನ್ನೂ ಓದಿ: ಸಂಜನಾ ಪರಿಚಯವೇ ಪ್ರಶ್ನೆಗೆ ಥ್ಯಾಂಕ್ಯೂ, ಥ್ಯಾಂಕ್ಯೂ ಎಂದು ಹೇಳಿ ಹೊರಟ ಜಮೀರ್

    ರವಿಶಂಕರ್ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ವಸ್ತು ಪತ್ತೆಯಾಗಿರುವ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷಿಗಳು ಇಲ್ಲದೇ, ಕೇವಲ ಸೆಕೆಂಡರಿ ಅಂಶಗಳನ್ನು ಉಲ್ಲೇಖಿಸಿ ಆರೋಪ ಸಾಬೀತು ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರಾಥಮಿಕ ಸಾಕ್ಷಿಗಳಿಗೆ ಪೂರಕವಾಗಿ ಸೆಕೆಂಡರಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈಗ ಸೆಕೆಂಡರಿ ಅಂಶಗಳ ಆಧಾರದಲ್ಲೇ ಅವರ ಬಂಧನವಾಗಿದೆ. ಇದನ್ನೇ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿ ಅರ್ಜಿ ಸಲ್ಲಿಕೆ ಮಾಡಿದ್ದೇವು ಎಂದರು. ಇದನ್ನೂ ಓದಿ: ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

    ಇಂತಹ ಪ್ರಕರಣದಲ್ಲಿ ಸೀಜ್ ಮೆಮೋ ಪ್ರಮುಖವಾಗುತ್ತದೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರೆ ಬಹುಬೇಗ ಅವರಿಗೆ ಜಾಮೀನು ಲಭಿಸುತ್ತಿತ್ತು. ಆದರೆ ಅವರು ವಕೀಲರನ್ನು ದಿಢೀರ್ ಬದಲಾವಣೆ ಮಾಡಿದ್ದು ಏಕೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕಸ್ಟಡಿಗೆ ಪಡೆದಿದ್ದಾರೆ. ಯಾವುದೇ ಪೊಲೀಸರು ಮೌಖಿಕವಾಗಿ ನೀಡುವ ಹೇಳಿಕೆ ಪ್ರಕರಣದಲ್ಲಿ ಪ್ರಮುಖವಾಗುವುದಿಲ್ಲ. ಅವರು ಲಿಖಿತವಾಗಿ ಕೋರ್ಟಿಗೆ ನೀಡಿರುವ ವರದಿಯಷ್ಟೇ ಸಾಕ್ಷಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

    ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ರಾಗಿಣಿ ಅವರನ್ನು ಬಂಧಿಸಿದ್ದಾರೆ ಅಷ್ಟೇ. ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಅವರ ಬಂಧನವಾಗಿದ್ದು, ಪ್ರಾಥಮಿಕ ಸಾಕ್ಷಿ ಇಲ್ಲದೇ ಡಿಜಿಟಲ್ ಸಾಕ್ಷಿಗಳನ್ನು ಪ್ರಸ್ತುತ ಪಡಿಸಿ ಬಂಧನ ಮಾಡಿರುವುದು ಸರಿಯಲ್ಲ ಎಂಬುವುದು ನನ್ನ ವಾದ. ರವಿಶಂಕರ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಮಾಡಿಲ್ಲ. ಆದರೆ ಅವರನ್ನು ಬಂಧನ ಮಾಡಲಾಗಿದೆ. ಏಕೆ ಅವರ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ರವಿಶಂಕರ್ ಅವರ ಹೇಳಿಕೆಯಿಂದ ಆರೋಪ ಸಾಬೀತು ಮಾಡಲು ಆಗುವುದಿಲ್ಲ. ಆದರೆ ರಾಗಿಣಿ ಅವರ ವಿರುದ್ಧ ಸಾಕ್ಷಿ ಇಲ್ಲದೇ ಆರೋಪ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಲೋಪವಿದೆ. ಕಾನೂನಿನ ಅಡಿ ಪ್ರಕರಣದ ವಿಚಾರಣೆ ನಡೆಸದೆ ಅವರನ್ನು ಬಂಧಿಸಿದ್ದಾರೆ ಎಂದರು.

    ಇಂದು ರಾಗಿಣಿ ಅವರ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ರಾಗಿಣಿ ಪರ ವಕೀಲರು ಹಾಜರಿರಲಿಲ್ಲ. ಪರಿಣಾಮ ಸಿಸಿಬಿ ಪೊಲೀಸರು ಮನವಿ ಮೇರೆಗೆ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಇದನ್ನು ಸ್ವತಃ ಸಿಸಿಬಿ ಪೊಲೀಸರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎನ್ನಲಾಗಿದ್ದು, ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ 2ನೇ ಬಾರಿ ಕಸ್ಟಡಿಗೆ ಮನವಿ ಮಾಡಿದರೆ 2-3 ದಿನ ನೀಡಲಾಗುತ್ತಿತ್ತು ಎನ್ನಲಾಗಿದೆ.