Tag: Lawyer Jagadish

  • ಲಾಯರ್ ಜಗದೀಶ್ ಸಾವಿಗೆ ಟ್ವಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು

    ಲಾಯರ್ ಜಗದೀಶ್ ಸಾವಿಗೆ ಟ್ವಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು

    ಬೆಂಗಳೂರು: ವಕೀಲ ಜಗದೀಶ್ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆ ವೇಳೆ ರಹಸ್ಯ ಬಯಲಾಗಿದೆ.

    ಶನಿವಾರ ರಾತ್ರಿ ವಕೀಲ ಜಗದೀಶ್ ಅವರ ದೇಹ ರಕ್ತಸಿಕ್ತವಾಗಿ ನೈಸ್ ರಸ್ತೆಯಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ಮೃತ ಜಗದೀಶ್ ಸೋದರ ಸಂಬಂಧಿಯೊಬ್ಬರು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸಾವಿಗೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ.ಇದನ್ನೂ ಓದಿ: ಲಾಯರ್‌ ಜಗದೀಶ್‌ ಹತ್ಯೆ? – ನೈಸ್‌ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರೋ ದೇಹ

    ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ, ವಕೀಲ ಜಗದೀಶ್ ಸಾವಿಗೆ ರೋಡ್ ರೇಜ್ ಕಾರಣವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೇಲ್ನೋಟಕ್ಕೆ ಜಗದೀಶ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ವಕೀಲ್ ಜಗದೀಶ್ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಅವರ ಕಾರಿಗೆ ಲಾರಿಯೊಂದು ಟಚ್ ಆಗಿದೆ. ಟಚ್ ಆಗುತ್ತಿದ್ದಂತೆ ಚಾಲಕ ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿದ್ದ. ಆಗ ಜಗದೀಶ್ ಕಾರು ನಿಲ್ಲಿಸಿ ಲಾರಿ ಚಾಲಕನ ಬಳಿಗೆ ಹೋಗಿದ್ದಾರೆ. ಈ ವೇಳೆ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದದ ಭರದಲ್ಲಿ ಜಗದೀಶ್ ಅರಿವಿಲ್ಲದೇ ನಡುರಸ್ತೆಗೆ ಹೋಗಿದ್ದಾರೆ. ಇದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯ ಹಿಂಬದಿಯ ಭಾಗ ಜಗದೀಶ್‌ಗೆ ಟಚ್ ಆಗಿದೆ. ಇದರಿಂದ ತಕ್ಷಣ ಕೆಳಗೆ ಬಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.

    ಲಾರಿ ಚಾಲಕನಿಗೆ ಹಿಂಬದಿಗೆ ಏನೋ ತಾಗಿದೆ ಎಂದು ಅನಿಸಿದಾಗ, ಸುಮಾರು ಅರ್ಧ ಕಿ.ಮೀ ಮುಂದೆ ಹೋಗಿ ಲಾರಿ ನಿಲ್ಲಿಸಿದ್ದ. ಆದರೆ ಯಾರು ಲಾರಿಯ ಹಿಂದೆ ಬರದ ಕಾರಣ ಏನು ಆಗಿಲ್ಲ ಎಂದು ಹಾಗೆಯೇ ತೆರಳುತ್ತಾನೆ ಎಂದು ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ.

    ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೆಂಗೇರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ. ಇನ್ನೂ ಮೃತ ಜಗದೀಶ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ.ಇದನ್ನೂ ಓದಿ: ರೇಬೀಸ್‌ ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ 7ರ ಬಾಲಕಿ ಸಾವು

  • ಲಾಯರ್‌ ಜಗದೀಶ್‌ ಹತ್ಯೆ? – ನೈಸ್‌ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರೋ ದೇಹ

    ಲಾಯರ್‌ ಜಗದೀಶ್‌ ಹತ್ಯೆ? – ನೈಸ್‌ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರೋ ದೇಹ

    ಬೆಂಗಳೂರು: ನೈಸ್‌ ರಸ್ತೆಯಲ್ಲಿ ವಕೀಲ ಜಗದೀಶ್‌ ಅವರ ರಕ್ತಸಿಕ್ತ ದೇಹ ಬಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಲಾಯರ್ ಜಗದೀಶ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೈಸ್ ರೋಡ್‌ನಲ್ಲಿ ರಕ್ತಸಿಕ್ತವಾಗಿ ದೇಹ ಬಿದ್ದಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಮೀನು ವ್ಯಾಪಾರಿಯ ಹತ್ಯೆಗೆ ಯತ್ನ – ಹಿಂದೂ ಮಹಿಳೆಯ ಸಮಯಪ್ರಜ್ಞೆಯಿಂದ ಬಚಾವ್

    ಘಟನೆ ಸಂಬಂಧ ಸಂಬಂಧಿಕರಿಂದ ಕೊಲೆ ಪ್ರಕರಣ ದಾಖಲಾಗಿದೆ. ವಕೀಲ ಜಗದೀಶ್ ಸಾವಿನ‌ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಜಗದೀಶ್ ಬಿದ್ದಿರುವ ಸ್ಥಳದಿಂದ 200 ಮೀಟರ್ ದೂರದಲ್ಲಿ ಅವರ ಕಾರು ಪತ್ತೆ ಆಗಿದೆ.

    ಕಾರು ಹಿಂದೆ ಮುಂದೆ ನಜ್ಜುಗುಜ್ಜಾಗಿದೆ. ಹಾಗಾಗಿ, ಜಗದೀಶ್ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದ್ದು, ಕೆಂಗೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವ್ವರ್ ಜೊತೆ ಸಿಕ್ಕಿಬಿದ್ದ ಪತ್ನಿ – ಸಿಟ್ಟಿಗೆದ್ದ ಪತಿಯಿಂದ ಡಬಲ್ ಮರ್ಡರ್

  • ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ

    – ಪೋಷಕರಿಗೆ ಫೋನ್ ಮಾಡುವಂತೆ ಯುವತಿಗೆ ಪೊಲೀಸರಿಂದ ಒತ್ತಡ

    ಬೆಂಗಳೂರು: ಸಿಡಿ ಪ್ರಕರಣ ಒಂದು ಹಂತಕ್ಕೆ ಬಂದ ನಂತರವೇ ಯುವತಿ ಪೋಷಕರ ಬಳಿ ಹೋಗುವದಾಗಿ ಹೇಳಿದ್ದಾರೆ. ಸಂತ್ರಸ್ತೆ ಪೋಷಕರು ಆರೋಪಿಗಳ ಪರ ಇರೋದರಿಂದ ಯುವತಿ ಹೋಗುತ್ತಿಲ್ಲ ಎಂದು ವಕೀಲ ಜಗದೀಶ್ ಹೇಳಿದ್ದಾರೆ.

    ಸಂತ್ರಸ್ತೆ ಪೋಷಕರ ಬಳಿ ಹೋಗಲು ಒಪ್ಪುತ್ತಿಲ್ಲ. ಅಲ್ಲಿಗೆ ಹೋದ್ರೆ ನಾನು ಎಮೋಷನಲ್ ಆಗುತ್ತೆ ಅಂತ ಹೇಳುತ್ತಿದ್ದಾರೆ. ಅದು ಅವರ ಕೂಸು. ನಮ್ಮ ಆಶ್ರಯ ಕೇಳಿದಷ್ಟು ದಿನ ನಾವು ನೀಡುತ್ತೇವೆ. ಯಾಕೆ ಸ್ವಾವಲಂಬಿಯಾಗಿದ್ದು, ತನ್ನ ನಿರ್ಧಾರ ತೆಗೆದುಕೊಳ್ಳಲು ಶಕ್ತಳಿದ್ದಾಳೆ. ಪೋಷಕರು ಬಳಿ ಹೋಗುವುದು ಸಂತ್ರಸ್ತೆಯ ಇಚ್ಛೆ. ಆ ವಿಷಯದಲ್ಲಿ ನಾವು ತಲೆ ಹಾಕಲ್ಲ ಎಂದು ತಿಳಿಸಿದರು.

    ಸದ್ಯ ಯುವತಿ ಎಸ್‍ಐಟಿ ತನಿಖೆ ಎದುರಿಸುತ್ತಿದ್ದಾರೆ. ವಿಚಾರಣೆ ವೇಳೆ ಅಲ್ಲಿಯ ಕೆಲ ಪೊಲೀಸರು ಪೋಷಕರಿಗೆ ಫೋನ್ ಮಾಡುವಂತೆ ಒತ್ತಡ ಹಾಕುತ್ತಿರುವ ವಿಷಯವನ್ನ ಸಂತ್ರಸ್ತೆ ನಮ್ಮ ಬಳಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪೋಷಕರ ಜೊತೆ ಮಾತನಾಡಲು ಮತ್ತು ಭೇಟಿಯಾಗಲು ಇಷ್ಟವಿಲ್ಲ ಎಂದು ಯುವತಿ ನಮ್ಮ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ನೀಡಿದರು.

  • ಯುವತಿಯನ್ನ ಎಸ್‍ಐಟಿ ವಶಕ್ಕೆ ನೀಡಿಲ್ಲ: ವಕೀಲ ಜಗದೀಶ್

    ಯುವತಿಯನ್ನ ಎಸ್‍ಐಟಿ ವಶಕ್ಕೆ ನೀಡಿಲ್ಲ: ವಕೀಲ ಜಗದೀಶ್

    – ಸಂತ್ರಸ್ತೆ ಬಂದು ಹೇಳಿಕೆ ದಾಖಲಿಸಿದ್ರೂ ಆರೋಪಿ ಬಂಧನ ಆಗಿಲ್ಲ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣದ ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದರು. ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಾದ ಬಳಿಕ ಯುವತಿಯನ್ನ ಧ್ವನಿ ಪರೀಕ್ಷೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ಕರೆ ತರಲಾಗಿದೆ. ಈ ವೇಳೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಸಂತ್ರಸ್ತೆಯನ್ನ ಎಸ್‍ಐಟಿಯ ವಶಕ್ಕೆ ನೀಡಿಲ್ಲ. ಧ್ವನಿ ಪರೀಕ್ಷೆ ಬಳಿಕ ನಾಳೆ ಮತ್ತೆ ವಿಚಾರಣೆಗೆ ಕರೆತರಲಾಗುವುದು ಎಂದು ತಿಳಿಸಿದರು.

    ಎಸ್‍ಐಟಿ ಅಧಿಕಾರಿಗಳು ಸೆಕ್ಷನ್ 161 ಪ್ರಕಾರ ಧ್ವನಿ ಪರೀಕ್ಷೆ ಮಾಡಬೇಕೆಂದಾಗ ನಾವೇ ಕಕ್ಷಿದಾರರನ್ನ ಕರೆ ತಂದಿದ್ದೇವೆ. ಪರೀಕ್ಷೆ ಬಳಿಕ ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ನಾವು ಆಕೆಗೆ ನೀಡಿದ ಮಾತನ್ನ ಪೂರ್ಣಗೊಳಿಸಿದ್ದೇವೆ. ಪ್ರಕರಣ ದಾಖಲಾಗಿದ್ದು ಸುಳ್ಳು ಅಂದವರಿಗೆ ಸತ್ಯ ಏನು ಅನ್ನೋದು ಅರ್ಥವಾಗಿದೆ. ಯುವತಿ ಬಂದಾಯ್ತು, ಹೇಳಿಕೆ ದಾಖಲಾಯ್ತು. ಹಾಗಾಗಿ ಸರ್ಕಾರ ಮತ್ತು ಪೊಲೀಸರು ಈ ಕೂಡಲೇ ಆರೋಪಿಯನ್ನ ಬಂಧಿಸಬೇಕೆಂದು ಜಗದೀಶ್ ಆಗ್ರಹಿಸಿದರು.

    ಅತ್ಯಾಚಾರ ಪ್ರಕರಣದ ಆರೋಪಿ ಬೆಂಗಳೂರು, ಬೆಳಗಾವಿ ಅಂತ ಓಡಾಡುತ್ತಿರೋದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗ ಆರೋಪಿಯನ್ನ ಬಂಧಿಸಬೇಕಾಗಿದೆ. ಇನ್ನು ಪೊಲೀಸರು ಯುವತಿಗೆ ಸೂಕ್ತ ಭದ್ರತೆ ನೀಡುವದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರು ಯುವತಿಗೆ ನಿರ್ಭೀತಿಯ ವಾತಾವರಣ ನಿರ್ಮಿಸಿದ್ದಾರೆ. ಇಂದು ಯುವತಿಯ ವಿಚಾರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಂತ್ರಸ್ತೆಯನ್ನ ಯಾರೂ ಅಪಹರಿಸಿಲ್ಲ. ಯುವತಿ ವಯಸ್ಕಳಾಗಿದ್ದು, ಪೋಷಕರ ಸಹಾಯವಿಲ್ಲದೇ ತನ್ನ ನಿರ್ಧಾರವನ್ನ ತೆಗೆದುಕೊಳ್ಳುವ ತಿಳುವಳಿಕೆ ಇದೆ. ನ್ಯಾಯಾಲಯ ಸಹ ಯುವತಿಯ ಹೇಳಿಕೆಯನ್ನ ಒಪ್ಪಿಕೊಳ್ಳುತ್ತೇವೆ. ಮೊದಲು ಅತ್ಯಾಚಾರದ ಪ್ರಕರಣ ತನಿಖೆ ನಡೆಯಲಿ. ನಂತ್ರ ಯುವತಿ ಪೋಷಕರು ದಾಖಲಿಸಿದ ದೂರಿನ ತನಿಖೆ ನಡೆಯಲಿ ಎಂದರು.