Tag: lawyer

  • ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    – CJI ಗವಾಯಿ ಜೊತೆ ಮಾತನಾಡಿದ ಪ್ರಧಾನಿ

    ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ (BR Gavai) ಮೇಲೆ ವಕೀಲರೊಬ್ಬರು ಶೂ ಎಸೆದ ಆಘಾತಕಾರಿ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಕೋರ್ಟ್ ಹಾಲ್-1ರಲ್ಲಿ ವಿಚಾರಣೆಯ ವೇಳೆ 71 ವರ್ಷದ ವಕೀಲ ಕಿಶೋರ್ ರಾಕೇಶ್ ಎಂಬುವವರು ಶೂ ಎಸೆದಿದ್ದಾರೆ. ಘಟನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಜೆಐ ಗವಾಯಿ ಅವರೊಂದಿಗೆ ಪ್ರಧಾನಿ ಮೋದಿ (PM Modi) ಮಾತನಾಡಿದ್ದಾರೆ. ಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ. ಬಳಿಕ ಎಕ್ಸ್‌ ಪೋಸ್ಟ್‌ನಲ್ಲಿ ಸಂದೇಶವೊಂದನ್ನ ಹಂಚಿಕೊಂಡಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಜಿ ಅವರೊಂದಿಗೆ ಮಾತನಾಡಿದೆ. ಇಂದು ಮುಂಜಾನೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣವಾಗಿ ಖಂಡನೀಯ. ಅಲ್ಲದೇ ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತಿಯುತ ನಡೆಯನ್ನ ನಾನು ಮೆಚ್ಚುತ್ತೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ಎತ್ತಿ ತೋರಿಸುದೆ ಎಂದು ಬರೆದುಕೊಂಡಿದ್ದಾರೆ.

    ಕೋರ್ಟ್‌ ಹಾಲ್‌ನಲ್ಲಿ ಏನಾಯ್ತು?
    ಗವಾಯಿ ಅವರು ವಕೀಲರಿಂದ ಪ್ರಕರಣಗಳ ಉಲ್ಲೇಖವನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಆರೋಪಿ ವಕೀಲ ಪೀಠದ ಬಳಿಗೆ ತೆರಳಿ, ತನ್ನ ಶೂವನ್ನು ನ್ಯಾಯಮೂರ್ತಿಯವರ ಮೇಲೆ ಎಸೆಯಲು ಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ, ವಕೀಲನನ್ನು ಹೊರಗೆ ಕರೆದೊಯ್ದಿದ್ದಾರೆ. ಈ ವೇಳೆ, `ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ’ ಅಂತ ವಕೀಲ ಕೂಗಿದ್ದಾನೆ. ಈ ಆಘಾತಕಾರಿ ಬೆಳವಣಿಗೆಯ ಹೊರತಾಗಿಯೂ ಸಿಜೆಐ ಗವಾಯಿ ತಾಳ್ಮೆ ವಹಿಸಿದ್ದರು. ಘಟನೆಯಿಂದ `ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಅಂತ ಕೋರ್ಟ್‌ನಲ್ಲಿದ್ದ ವಕೀಲರಿಗೆ ವಾದ ಮುಂದುವರಿಸಲು ಸೂಚಿಸಿದ್ದಾರೆ.

    ದೆಹಲಿ ಪೊಲೀಸರ ಪ್ರಕಾರ ಆರೋಪಿ ವಕೀಲ ಕಿಶೋರ್ ರಾಕೇಶ್‌ನನ್ನು ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ವಕೀಲ ಕಿಶೋರ್ ಮಯೂರ್ ವಿಹಾರ್ ಪ್ರದೇಶದ ನಿವಾಸಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನೋಂದಾಯಿತ ಸದಸ್ಯರಾಗಿದ್ದಾರೆ. ಘಟನೆ ಬೆನ್ನಲ್ಲೇ ದೇಶಾದ್ಯಂತ ಯಾವುದೇ ವಕೀಲಿಕೆ ಮಾಡದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಕೇಶ್ ಕಿಶೋರ್ ಅವರನ್ನು ಸಸ್ಪೆಂಡ್ ಮಾಡಿದೆ.

    ಈ ಮಧ್ಯೆ, ಸಿಜೆ ಮೇಲೆ ಶೂ ಎಸೆದ ಪ್ರಕರಣವನ್ನ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಬಿ.ಎಸ್ ಗವಾಯಿ ಮೇಲೆ ಶೂ ಎಸೆದ ಕಿಡಿಗೇಡಿ ವಕೀಲನನ್ನ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಎಕ್ಸ್‌ನಲ್ಲಿ ಒತ್ತಾಯಿಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಕಿಡಿಕಾರಿದ್ದಾರೆ.

  • 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    ಲಕ್ನೋ: 12 ದಿನಗಳ ಹಿಂದೆ ಮಧ್ಯಪ್ರದೇಶದ ರೈಲಿನಿಂದ ನಾಪತ್ತೆಯಾಗಿದ್ದ ಮಹಿಳಾ ತರಬೇತಿ ವಕೀಲೆ ಅರ್ಚನಾ ತಿವಾರಿ (Archana Tiwari) ಉತ್ತರ ಪ್ರದೇಶದ ಲಿಂಖಿಂಪುರ ಖೇರಿ ನಗರದಲ್ಲಿ (Lakhimpur Kheri City) ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್‌ನ (Bhopal) ಸರ್ಕಾರಿ ರೈಲ್ವೆ ಪೊಲೀಸರು (GRP) ಅರ್ಚನಾರನ್ನ ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದು, ಭೋಪಾಲ್‌ಗೆ ಕರೆದೊಯ್ದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ರಕ್ಷಾಬಂಧನ ಹಬ್ಬಕ್ಕಾಗಿ ಇದೇ ಆಗಸ್ಟ್‌ 7-8ರ ತಡರಾತ್ರಿ ಅರ್ಚನಾ ಇಂದೋರ್‌ನಿಂದ ಕಟ್ನೆಗೆ ರೈಲಿನಲ್ಲಿ ಹೊರಟಿದ್ದರು. ಆದ್ರೆ ತಮ್ಮ ನಿಗದಿತ ಸ್ಥಾನ ತಲುಪದಿದ್ದಾಗ ನಾಪತ್ತೆಯಾಗಿರುವುದು ಗೊತ್ತಾಯಿತು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ವಿಚಾರಣೆ ಬಳಿಕ ಹೊರ ಬರಬೇಕಿದೆ ಸತ್ಯ
    ಕಳೆದ 12 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಕೊನೆಗೂ ಅರ್ಚನಾರನ್ನ ಭಾರತ-ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ರಾಹುಲ್ ಕುಮಾರ್ ಲೋಧಾ ಹೇಳಿದ್ದಾರೆ. ಪೊಲೀಸರು ಅರ್ಚನಾರನ್ನ ಭೋಪಾಲ್‌ಗೆ ಕರೆತರುತ್ತಿದ್ದು, ಹೇಳಿಕೆ ದಾಖಲಿಸಿದ ಬಳಿಕವೇ ಇಡೀ ಘಟನಾ ವಿವರ ತಿಳಿಯಲಿದೆ ಎಂದು ತಿಳಿಸಿದ್ದಾರೆ.

    ರಕ್ಷಣಾ ಬಂಧನ ಹಬ್ಬಕ್ಕೆ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಅರ್ಚನಾ ಇಂದೊರ್‌ನಿಂದ ಹೊರಟಿದ್ದರು, ಕೊನೆಯದಾಗಿ ಇಟಾರ್ಸಿ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಸಂಪರ್ಕ ಸಾಧ್ಯವಾಗಿರಲಿಲ್ಲ.

    ಅರ್ಚನಾ ತಿವಾರಿ ತಿವಾರಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಅಭ್ಯಾಸ ವಕೀಲರಾಗಿದ್ದರು. ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

  • ಸುಪ್ರೀಂ ಕೋರ್ಟ್ ಆವರಣದಲ್ಲೇ ಶ್ವಾನ ಪ್ರಿಯನ ಕೆನ್ನೆಗೆ ಬಾರಿಸಿದ ಲಾಯರ್‌

    ಸುಪ್ರೀಂ ಕೋರ್ಟ್ ಆವರಣದಲ್ಲೇ ಶ್ವಾನ ಪ್ರಿಯನ ಕೆನ್ನೆಗೆ ಬಾರಿಸಿದ ಲಾಯರ್‌

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲೇ ವಕೀಲರೊಬ್ಬರು (Lawyer) ಶ್ವಾನ ಪ್ರಿಯನ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ.

    ದೆಹಲಿಯಲ್ಲಿನ ಬೀದಿ ನಾಯಿಗಳನ್ನು (Stray Dogs) ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಆದೇಶದ ವಿರುದ್ಧ ಅ.11 ರಂದು ಸುಪ್ರೀಂ ಕೋರ್ಟ್ ಹೊರಗೆ ಶ್ವಾನ ಪ್ರಿಯರು ಮತ್ತು ವಕೀಲರ ನಡುವೆ ವಾಗ್ವಾದ ವಾಗಿದೆ. ಈ ವೇಳೆ, ವಕೀಲರೊಬ್ಬರು ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸೋ ತೀರ್ಪನ್ನು ಪರಿಶೀಲಿಸುತ್ತೇನೆ: ಸಿಜೆಐ

    ವೈರಲ್‌ ಆದ ವಿಡಿಯೋ ಆದೇಶ ಬಂದ ದಿನದ್ದು ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ವಿಡಿಯೋದಲ್ಲಿ, ಶ್ವಾನಪ್ರಿಯರು ವಕೀಲರನ್ನು ನಿಂದಿಸುವುದು ಸಹ ದಾಖಲಾಗಿದೆ. ಈ ವೇಳೆ ಕೋಪಗೊಂಡ ವಕೀಲರು ಹಲ್ಲೆ ನಡೆಸಿದ್ದಾರೆ.

    ಸೋಮವಾರ ಸುಪ್ರೀಂ ಕೋರ್ಟ್‌ ದೆಹಲಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ ಮಕ್ಕಳು ಮತ್ತು ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಮಕ್ಕಳು ಹೆದರಿಕೆ ಇಲ್ಲದೇ ಹೊರಗೆ ಓಡಾಡಬೇಕು ಎಂದರೆ ಸೂಕ್ತ ಕ್ರಮಕೈಗೊಳ್ಳಬೇಕು. ಯಾವ ಮಕ್ಕಳು ರೇಬಿಸ್‌ಗೆ ತುತ್ತಾಗಬಾರದು. 2 ತಿಂಗಳೊಳಗಾಗಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿತ್ತು. ಈ ತೀರ್ಪಿನ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

    ಈ ತೀರ್ಪು ಹೊರಬೀಳುತ್ತಿದ್ದಂತೆ ಪ್ರಾಣಿಪ್ರಿಯರು, ಸೆಲೆಬ್ರಿಟಿಗಳು ತೀರ್ಪಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರು ಸಹ ಈ ಆದೇಶವನ್ನು ತೀವ್ರವಾಗಿ ಟೀಕಿಸಿದ್ದರು. 3 ಲಕ್ಷ ನಾಯಿಗಳಿವೆ ಅವುಗಳನ್ನು ಆಶ್ರಯ ತಾಣಕ್ಕೆ ಸಾಗಿಸಲು, ನಿರ್ವಹಿಸಲು ಸುಮಾರು 15,000 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು.

    ಹಲವಾರು ಆಕ್ಷೇಪಗಳು ಕೇಳಿಬಂದ ಬೆನ್ನಲ್ಲೇ ಆದೇಶವನ್ನು ಮರುಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ತಿಳಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

  • ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

    ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

    ಪಾಟ್ನಾ: ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.

    ಸಾರ್ವಜನಿಕರ ಎದುರೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಒಂದು ವಾರದಲ್ಲಿ ನಡೆದ ಮೂರನೇ ಕೊಲೆ ಇದಾಗಿದೆ. ಪಾಟ್ನಾದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತವಾಗಿದೆ.

    ವಕೀಲ ಜಿತೇಂದ್ರ ಕುಮಾರ್ ಅವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಕನಿಷ್ಠ ಮೂರು ಗುಂಡುಗಳನ್ನು ಹಾರಿಸಿ ದಾಳಿಕೋರರು ಪರಾರಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಗಂಭೀರ ಗಾಯಗೊಂಡಿದ್ದ ವಕೀಲನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ದಾಳಿ ನಡೆದಾಗ ಜಿತೇಂದ್ರ ಕುಮಾರ್ ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಕುಡಿಯಲು ಹೋಗಿದ್ದಾಗ ಘಟನೆ ನಡೆದಿದೆ. ಅಪರಾಧ ನಡೆದ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

    ಈ ವಾರದ ಆರಂಭದಲ್ಲಿ ಬಿಹಾರದ ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಯಾಗಿತ್ತು. ಇವರ ಬೆನ್ನಲ್ಲೇ ಪಶುವೈದ್ಯ ಮತ್ತು ರೈತರಾಗಿದ್ದ ಬಿಜೆಪಿ ನಾಯಕ ಸುರೇಂದ್ರ ಕೆವಾತ್ ಅವರನ್ನು ಸಹ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

  • ಯುವ ವಕೀಲೆ ಅನುಮಾನಸ್ಪದ ಸಾವು – ಮನನೊಂದು ಯುವಕ ಆತ್ಮಹತ್ಯೆ

    ಯುವ ವಕೀಲೆ ಅನುಮಾನಸ್ಪದ ಸಾವು – ಮನನೊಂದು ಯುವಕ ಆತ್ಮಹತ್ಯೆ

    ನೆಲಮಂಗಲ: ಯುವ ವಕೀಲೆಯೊಬ್ಬರು (Lawyer) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ನಡೆದಿದೆ.

    ರಮ್ಯ(27) ಸಾವನ್ನಪ್ಪಿದ ವಕೀಲೆ. ನೆಲಮಂಗಲ ಬಳಿಯ ಶ್ರೀನಿವಾಸಪುರದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ನಿಧನ

    ವಕೀಲೆ ಮನೆಯಲ್ಲೇ ವಾಸವಿದ್ದ ಪುನೀತ್(22) ಎಂಬ ಯುವಕನೂ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವುಡ್ ವರ್ಕ್ ಕೆಲಸ ಮಾಡ್ಕೊಂಡಿದ್ದ ಪುನೀತ್, ವಕೀಲೆಯ ಮನೆಯಲ್ಲಿ ವಾಸವಿದ್ದ. ವಕೀಲೆಯ ಮನೆಯಲ್ಲಿ ಸಾಕುಮಗನಂತೆ ಜೀವನ ನಡೆಸುತ್ತಿದ್ದ ಪುನೀತ್, ಆಕೆಯ ಸಾವು ನೋಡಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ


    ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಘಟನೆಯ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಟ್ರಾಸಿಟಿ ಕೇಸ್‌ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್‌ ಸೂಚನೆ

    ಅಟ್ರಾಸಿಟಿ ಕೇಸ್‌ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್‌ ಸೂಚನೆ

    ಬೆಂಗಳೂರು: ಅಟ್ರಾಸಿಟಿ ಪ್ರಕರಣಗಳಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್‌ಗಳು (Public Prosecutor) ಸರಿಯಾಗಿ ವಾದಿಸಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಬೇಕು ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿಧಾನಸೌಧದಲ್ಲಿ (Vidhana Soudha) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳು ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ, ಡಿಸಿಗಳು, ಎಸ್ಪಿಗಳು, ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

    ಅಟ್ರಾಸಿಟಿ ಪ್ರಕರಣಗಳಲ್ಲಿ (Atrocity Case) ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಸರಿಯಾಗಿ ವಾದಿಸಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಬೇಕು. ದೌರ್ಜನ್ಯ ಮಾಡಿದವರು ಸುಲಭವಾಗಿ ಜಾಮೀನು ಪಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸುವುದು ಎಲ್ಲರ ಜವಾಬ್ದಾರಿ. ದೌರ್ಜನ್ಯ ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿಯನ್ನು ನಿಗದಿತ ಅವಧಿಯ ಒಳಗಾಗಿ ಸಲ್ಲಿಸಬೇಕು ಅಂತ ಸೂಚನೆ ನೀಡಿದ್ರು.

    ಸಿಎಂ ಸಭೆ ಹೈಲೈಟ್ಸ್…

    • ಬ್ಯಾಕ್‌ಲಾಗ್‌, ನೇಮಕಾತಿ ಮತ್ತು ಮುಂಬಡ್ತಿ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಇಲಾಖೆವಾರು ಸಭೆ ನಡೆಸಲು ಮುಖ್ಯಕಾರ‍್ಯದರ್ಶಿಯವರಿಗೆ ಸೂಚನೆ.
    • ದೇವದಾಸಿ ಪದ್ದತಿ ಯಾವುದೇ ಜಿಲ್ಲೆಗಳಲ್ಲಿ ನಡೆದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಅವರೇ ನೇರ ಹೊಣೆ. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಕುರಿತು ಯಾವುದೇ ದೂರಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು.
    • ಅರಣ್ಯ ಹಕ್ಕು ಸಮಿತಿ ನಿಗದಿತವಾಗಿ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು. 3,430 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಇನ್ನೂ ಬಾಕಿಯಿದ್ದು, ಇದನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು.
    • ಹಕ್ಕುಪತ್ರ ನೀಡಿದ ಬಳಿಕ ಪಹಣಿಯಲ್ಲಿ‌ ಅವರ ಹೆಸರು ನಮೂದಿಸುವ ಕಾರ್ಯ ತ್ವರಿತಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು.
    • ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. 60 ದಿನಗಳ ಒಳಗಾಗಿ ಆರೋಪಪಟ್ಟಿ ದಾಖಲಿಸಬೇಕು. ಇನ್ನೂ 665 ಪ್ರಕರಣಗಳು ತನಿಖೆಗೆ ಬಾಕಿಯಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನ್ಯಾಯಾಲಯಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ.
    • ಪ್ರತಿ ಜಿಲ್ಲೆಯಲ್ಲಿ ಡಿಸಿಆರ್‌ಇ ಕೋಶವನ್ನು‌ ಸ್ಥಾಪಿಸುವ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
    • ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಬೇಕು. ಪ್ರಾಸಿಕ್ಯೂಶನ್ ಸಹ ಪರಿಶೀಲನೆ ನಡೆಸಬೇಕು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಈ ಸಭೆಯಲ್ಲಿ ಭಾಗವಹಿಸಬೇಕು.
    • ಮೃತಪಟ್ಟ ಪ್ರಕರಣಗಳಲ್ಲಿ ಅನುಕಂಪ ಆಧಾರದ ಉದ್ಯೋಗಕ್ಕಾಗಿ ಮೃತಪಟ್ಟ ದಿನಾಂಕದಿಂದ 3 ವರ್ಷದ ಒಳಗೆ, ಅಪ್ರಾಪ್ತ ವಯಸ್ಸಿನ ಮಕ್ಕಳು 18 ವರ್ಷಗಳನ್ನು ಪೂರೈಸತಕ್ಕದ್ದು, ಎಂಬ ಮಿತಿಯನ್ನು ತೆಗೆದು ಹಾಕುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    • ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಅಂತಹ ಪ್ರಮಾಣ ಪತ್ರ ನೀಡುವ ಅಧಿಕಾರಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುತ್ತದೆ. ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಸಿಎಂ ತಾಕೀತು ಮಾಡಿದರು.

  • ಬೆಂಗಳೂರು| ಕೋರ್ಟ್‌ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು| ಕೋರ್ಟ್‌ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಕೋರ್ಟ್‌ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ ಗಡಿ ಹೊಸೂರಿನಲ್ಲಿ ನಡೆದಿದೆ.

    ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನ ನಡೆದಿದೆ. ಕಣ್ಣನ್, ಕೋರ್ಟ್ ಆವರಣದಲ್ಲಿ ಹಲ್ಲೆಗೊಳಗಾದ ವಕೀಲ. ಆನಂದ್ ಎಂಬಾತ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

    ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಹೊಸೂರು ಒಂದೇ ಕಡೆ ಇದ್ದ ಜಾಗ. ಇಂತಹ ಸ್ಥಳದಲ್ಲೇ ವಕೀಲನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನ್ಯಾಯಾಲಯದ ಆವರಣದಲ್ಲಿ ವಕೀಲ ಕಣ್ಣನ್ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹಲ್ಲೆ ಖಂಡಿಸಿ ರಸ್ತೆಯಲ್ಲಿ ಕುಳಿತು ವಕೀಲರು ಪ್ರತಿಭಟನೆ ಮಾಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

  • Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

    Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

    ರಾಮನಗರ: ವಕೀಲೆಯೊಬ್ಬರು (Women lawyer) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗ ಬಡಾವಣೆಯಲ್ಲಿ ನಡೆದಿದೆ.

    ವಾಸುಕಿ (25) ಆತ್ಮಹತ್ಯೆ ಮಾಡಿಕೊಂಡ ವಕೀಲೆ. ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿದ್ದ ವಕೀಲೆ ವಾಸುಕಿ, ಗುರುವಾರ (ಆ.22) ಸಂಜೆ ಮಾಗಡಿಯ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ (Magadi Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

  • ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರು

    ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರು

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇ ಗೌಡಗೆ (Advocate Devaraje Gowda) ಜಾಮೀನು ಮಂಜೂರು ಆಗಿದೆ.

    ದೇವರಾಜೇ ಗೌಡ ಅವರು ಜಾಮೀನು ಕೋರಿ ಹೈಕೋರ್ಟ್‍ಗೆ (Highcourt) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಇಂದು ಆದೇಶ ನೀಡಿದೆ.

    ಈ ಹಿಂದೆ ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ದೇವರಾಜೇ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದನ್ನು ಪ್ರಶ್ನಿಸಿ ದೇವರಾಜೇಗೌಡ ಅವರು ಹೈಕೋರ್ಟ್‍ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇದನ್ನೂಓದಿ: ಅರ್ಧ ಕೆಜಿ ಚಿನ್ನ, 50 ಲಕ್ಷ ನೀಡಿದ್ರೂ ವರದಕ್ಷಿಣೆಗಾಗಿ ಮಗಳ ಹತ್ಯೆ – ಪೋಷಕರ ಆರೋಪ

    ಏನಿದು ಪ್ರಕರಣ?: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಮಹಿಳೆಯೊಬ್ಬರ ಮೇಲೆ ದೇವರಾಜೇ ಗೌಡ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty- Niveditha Gowda) ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

    ವಕೀಲೆ ಅನಿತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಡಿವೋರ್ಸ್‌ ಪ್ರೊಸೆಸ್‌ ಬೇಗ ಆಗಿದ್ದೇಗೆ..?: ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಇಬ್ಬರೂ ಯಾವುದೇ ಕಾರಣಕ್ಕೂ ಡಿವೋರ್ಸ್ ಪರಿಹಾರದ ಮಾತಿಗೇ ಬರಲಿಲ್ಲ. ಉತ್ತಮ ಫ್ರೆಂಡ್ಸ್ ಆಗಿ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಗಂಡ-ಹೆಂಡತಿಯಾಗಲು ಇಷ್ಟಪಡಲಿಲ್ಲ. ಡಿಸ್ಪ್ಯೂಟ್ ಇದ್ದಲ್ಲಿ ಪ್ರೊಸೆಸ್ ತಡವಾಗುತ್ತೆ. ಆದರೆ ಇವರ ಕೇಸ್ ನಲ್ಲಿ ಇಬ್ಬರದ್ದೂ ಒಂದೇ ಮಾತಾಗಿತ್ತು. 13-ಬಿ ಪ್ರಕಾರ ವಿಚ್ಛೇದನ ಧಾವೆಯಲ್ಲಿ ಒಂದು ವರ್ಷದಿಂದ ಪರಸ್ಪರ ದೂರ ಇರುವುದು ಹಾಗೂ ಹೊಂದಾಣಿಕೆ ಇಲ್ಲದಿರೋದನ್ನ ತೋರಿಸಿದ್ದರಿಂದ ವಿಚ್ಛೇದನದ ಪ್ರೊಸೆಸ್ ಬೇಗ ಆಗಿದೆ ಎಂದು ಹೇಳಿದರು.

    ಕಳೆದ ಮೂರು ತಿಂಗಳಿಂದ ಸಮಯಾವಕಾಶ ಕೊಟ್ಟು ಕೌನ್ಸೆಲಿಂಗ್ ಕೂಡ ಮಾಡಲಾಯಿತು. ಆದರೂ ಇಬ್ಬರ ನಿರ್ಧಾರ ಒಂದೇ ಇರೋದ್ರಿಂದ ಜೂನ್ 7 ರ ಶುಕ್ರವಾರದಂದು ವಿಚ್ಛೇದನ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅನಿತಾ ತಿಳಿಸಿದರು.

    ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಬಳಿಕ 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪ್ರೋಸ್ ಮಾಡಿದ್ದರು. ಅಲ್ಲದೇ 2020 ಫೆಬ್ರವರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

    ಇದಾದ ಬಳಿಕ ಚೆನ್ನಾಗಿಯೇ ಇದ್ದ ಜೋಡಿ, ಸೊಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ನಿವೇದಿತಾ ರಿಯಾಲಿ ಶೋದಲ್ಲಿ ಕೂಡ ಕೆಲ ಸಮಯದ ಹಿಂದೆ ಕಾಣಿಸಿಕೊಂಡಿದ್ದರು. ಸದ್ಯ ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಶುಕ್ರವಾರ ದಿಢೀರ್ ಎಂದು ಶಾಂತಿನಗರದ ಫ್ಯಾಮಿಲಿ ಕೋರ್ಟ್‍ಗೆ ಹಾಜರಾಗಿ ಅಭಿಮಾನಿಗಳಿಗೆ ಶಾಕ್ ನೀಡಿ ಗೊಂದಲಕ್ಕೀಡು ಮಾಡಿದ್ದರು. ನಂತರ ಸಂಜೆಯ ವೇಳೆಗೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ವಿಚ್ಛೇದನ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.