Tag: Lawsuit

  • ಸಲ್ಮಾನ್ ಖಾನ್‌ಗೆ ಬಿಗ್ ರಿಲೀಫ್ – ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

    ಸಲ್ಮಾನ್ ಖಾನ್‌ಗೆ ಬಿಗ್ ರಿಲೀಫ್ – ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

    ಮುಂಬೈ: ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು (Criminal Lawsuit) ಬಾಂಬೆ ಹೈಕೋರ್ಟ್ (High Court) ರದ್ದುಗೊಳಿಸಿದೆ. 2019ರಲ್ಲಿ ಪತ್ರಕರ್ತರೊಬ್ಬರು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ (Bharati Dangre) ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

    ಮುಂಬೈನ (Mumbai) ಬೀದಿಗಳಲ್ಲಿ ಸಲ್ಮಾನ್ ಖಾನ್ ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಪತ್ರಕರ್ತರೊಂದಿಗೆ ಜಗಳವಾಡಿ ಅವರ ಫೋನ್ ಕಸಿದುಕೊಂಡಿದ್ದರು ಎಂದು ಆರೋಪಿಸಿ ಪತ್ರಕರ್ತರೊಬ್ಬರು ದೂರು ನೀಡಿದ್ದರು. ದೂರಿನ ಅನ್ವಯ ನೀಡಲಾದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇದನ್ನೂ ಓದಿ: ಮಹಿಳಾ ಸಮಾನತೆ ಸಾರಿದ ನೆಲದಲ್ಲಿ ಪುರುಷರದ್ದೇ ದರ್ಬಾರ್

    ಈ ಮೊದಲು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆ ಸಲ್ಮಾನ್ ಖಾನ್ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಇದನ್ನೂ ಓದಿ: ದೈವನರ್ತನದ ವೇಳೆಯೇ ನರ್ತಕ ಕುಸಿದು ಬಿದ್ದು ಸಾವು

    ಈ ಆದೇಶಕ್ಕೆ ತಡೆ ನೀಡುವಂತೆ ಮತ್ತು ಪ್ರಕರಣವನ್ನು ರದ್ದು ಮಾಡುವಂತೆ ಸಲ್ಮಾನ್ ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬದ್ ಪೊಂಡಾ (Abad Ponda), ಪತ್ರಕರ್ತರು ತಮ್ಮ ಫೋಟೊ/ವೀಡಿಯೋ ಚಿತ್ರೀಕರಣ ಮಾಡದಂತೆ ತಡೆಯುವಂತೆ ತಮ್ಮ ಅಂಗರಕ್ಷಕರು ಕೇಳಿಕೊಂಡಿದ್ದರು. ಅದಾಗ್ಯೂ ಪೊಟೊ ವಿಡಿಯೋ ಚಿತ್ರಿಕರಣಕ್ಕೆ ಮುಂದಾದಾಗ ವಾಗ್ವಾದ ಏರ್ಪಟ್ಟಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಾರೀ ಸ್ಫೋಟ- ಪೊಲೀಸರಿಂದ ಶೋಧ

  • ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ವಾಷಿಂಗ್ಟನ್: ಸಂಸ್ಥೆಯ ಆರ್ಥಿಕ ನಿರೀಕ್ಷೆ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಹೂಡಿಕೆದಾರರನ್ನು ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬೆಟರ್ ಡಾಟ್ ಕಾಮ್‌ನ ಮುಖ್ಯ ಕಾರ್ಯನಿರ್ವಾಹಕ ವಿಶಾಲ್ ಗಾರ್ಗ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

    ಸಾಫ್ಟ್‌ಬ್ಯಾಂಕ್ ಬೆಂಬಲಿತ ಕಂಪನಿಯ ಮಾರಾಟ ಹಾಗೂ ಕಾರ್ಯಾಚರಣೆಗಳ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸಾರಾ ಪಿಯರ್ಸ್ ತನ್ನ ಮೊಕದ್ದಮೆಯಲ್ಲಿ ಗಾರ್ಗ್ ತನ್ನ ಆರ್ಥಿಕ ಸ್ಥಿತಿಯ ಕಾರಣ ಹೂಡಿಕೆದಾರರು ಹಿಂದೇಟು ಹಾಕುವ ಸಂದರ್ಭ ಎಸ್‌ಪಿಎಸಿ ಯೊಂದಿಗೆ ವಿಲೀನವಾಗುವ ಬಗ್ಗೆ ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಡಿ ಸಮನ್ಸ್ – ವಿಚಾರಣೆಯಿಂದ ವಿನಾಯಿತಿ ಕೋರಿದ ಸೋನಿಯಾ

    ನ್ಯಾಯಾಲಯದಲ್ಲಿ ಪಿಯರ್ಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ಒಪ್ಪಂದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೂ ಆರ್ಥಿಕ ಪರಿಹಾರ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಟರ್ ಡಾಟ್ ಕಾಮ್‌ನ ವಕೀಲರು, ಕಂಪನಿಯ ಹಣಕಾಸು, ಲೆಕ್ಕಪತ್ರದ ಬಗ್ಗೆ ವಿಶ್ವಾಸವಿದೆ ಹಾಗೂ ಈ ಮೊಕದ್ದಮೆಯನ್ನು ನಾವು ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ಕಳೆದ ವರ್ಷ ಬೆಟರ್ ಡಾಟ್ ಕಾಮ್ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಷೇರು ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂಬಂಧ ಬೆಟರ್ ಡಾಟ್ ಕಾಮ್ ವಿಶೇಷ ಉದ್ದೇಶದ ಸ್ವಾದೀನ ಕಂಪನಿ ಅರೋರಾ ಜೊತೆ ವಿಲೀನ ಮಾಡಿಕೊಂಡಿತ್ತು. 7.7 ಶತಕೋಟಿ ಡಾಲರ್(ಸುಮಾರು 59 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಈ ವಿಲೀನ ಪ್ರಕ್ರಿಯೆ ಶೀಘ್ರವೇ ಕೊನೆಯಾಗುವ ಸಾಧ್ಯತೆಯಿದೆ.

  • ಜೈವಿಕ ಅಸ್ತ್ರ ಕೊರೊನಾ – ಚೀನಾ ವಿರುದ್ಧ 20 ಲಕ್ಷ ಕೋಟಿ ಡಾಲರ್ ಕೇಸ್ ದಾಖಲು

    ಜೈವಿಕ ಅಸ್ತ್ರ ಕೊರೊನಾ – ಚೀನಾ ವಿರುದ್ಧ 20 ಲಕ್ಷ ಕೋಟಿ ಡಾಲರ್ ಕೇಸ್ ದಾಖಲು

    ವಾಷಿಂಗ್ಟನ್: ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕದ ನಡುವೆ ವಾಕ್ಸಮರ ನಡೆಯುತ್ತಿದೆ. ಆದರೆ ಅಮೆರಿಕದ ವಕೀಲರೊಬ್ಬರು ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ವಕೀಲ ಲ್ಯಾರಿ ಕ್ಲೇಮನ್ ಹಾಗೂ ಅವರ ಫ್ರೀಡಮ್ ವಾಚ್ ಸಂಸ್ಥೆ, ಟೆಕ್ಸಾಸ್ ನ ಬಝ್ ಫೋಟೋಸ್ ಎಂಬ ಕಂಪೆನಿಯ ಜತೆಗೂಡಿ ಚೀನಾ ಸರ್ಕಾರ, ಚೀನಾ ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ಅದರ ನಿರ್ದೇಶಕ ಶಿ ಝೆಂಗ್ಲಿ, ಚೀನಾ ಸೇನೆಯ ಮೇ.ಜ. ಚೆನ್ ವೈ ವಿರುದ್ಧ 20 ಲಕ್ಷಕೋಟಿ ಡಾಲರ್ ಕೇಸ್ ದಾಖಲಿಸಿದ್ದಾರೆ.

    ಭಯೋತ್ಪಾದಕರಿಗೆ ನೆರವು, ಅಮೆರಿಕದ ನಾಗರಿಕರ ಸಾವು ಹಾಗೂ ನಷ್ಟವನ್ನುಂಟುಮಾಡುವ ಸಂಚು, ನಿರ್ಲಕ್ಷ್ಯ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ. 20 ಲಕ್ಷ ಕೋಟಿ ಚೀನಾದ ಜಿಡಿಪಿಗಿಂತಲೂ (ಒಟ್ಟು ದೇಶೀಯ ಉತ್ಪನ್ನ) ಹೆಚ್ಚಿನದ್ದಾಗಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

    ಜನಸಮೂಹವನ್ನು ಕೊಲ್ಲಲೆಂದೇ ಉದ್ದೇಶಪೂರ್ವಕವಾಗಿ ಈ ಜೈವಿಕ ಅಸ್ತ್ರವನ್ನು ವುಹಾನ್ ವೈರಾಲಜಿ ಸಂಸ್ಥೆಯಿಂದಲೇ ಬಿಡುಗಡೆ ಮಾಡಲಾಗಿದೆ. ಅಮೆರಿಕದ ಜೊತೆ ತನ್ನ ಶತ್ರು ದೇಶಗಳ ಪ್ರಜೆಗಳನ್ನು ಹತ್ಯೆ ಮಾಡಲೆಂದು ಚೀನಾ ಈ ವೈರಸನ್ನು ಮೊದಲೇ ಸಿದ್ಧಪಡಿಸಿಕೊಂಡಿತ್ತು. ಆದರೆ ಯಾವುದೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳದೇ ಅಂತಾರಾಷ್ಟ್ರೀಯ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಚೀನಾ ಈ ವೈರಸ್ ಬಿಡುಗಡೆ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಡೊನಾಲ್ಡ್ ಟ್ರಂಪ್ ಕೊರೊನಾವನ್ನು ‘ಚೈನಿಸ್ ವೈರಸ್’ ಎಂದು ಕರೆದರೆ ಚೀನಾದ ಅಧಿಕಾರಿ ಇದು ಅಮೆರಿಕದವರು ಬಿಡುಗಡೆ ಮಾಡಿದ ವೈರಸ್ ಎಂದು ಆರೋಪಿಸುತ್ತಿದ್ದಾರೆ. ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಚೀನಾವನ್ನು ಮಣಿಸಲು ಅಮೆರಿಕದ ಯೋಧರು ವುಹಾನ್ ನಲ್ಲಿ ಈ ವೈರಸ್ ಬಿಡುಗಡೆ ಮಾಡಿರಬಹುದು ಎಂಬ ಆರೋಪ ಮಾಡುತ್ತಿದ್ದಾರೆ.

    ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಗರಂ ಆಗಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಅವರು ಅಮೆರಿಕಕ್ಕೆ ಖಾರವಾದ ಪ್ರಶ್ನೆಗಳನ್ನು ಕೇಳಿದ್ದರು.

    ಅಮೆರಿಕದಲ್ಲಿ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ? ಯಾವ ಆಸ್ಪತ್ರೆಯಲ್ಲಿ ಪೀಡಿತರು ದಾಖಲಾಗಿದ್ದಾರೆ. ಅಮೆರಿಕದ ಸೈನಿಕರು ವುಹಾನ್ ನಲ್ಲಿ ಈ ಮಾರಣಾಂತಿಕ ವೈರಸ್ ತಂದಿರಬಹುದು. ಈ ವಿಚಾರದಲ್ಲಿ ನೀವು ಪಾರದರ್ಶಕವಾಗಿ ನಡೆದುಕೊಳ್ಳಿ. ಸಾರ್ವಜನಿಕವಾಗಿ ಡೇಟಾವನ್ನು ಬಿಡುಗಡೆ ಮಾಡಿ. ನಾವು ಮಾಹಿತಿಗಳನ್ನು ತಿಳಿಸಿದಂತೆ ನೀವು ಯಾಕೆ ತಿಳಿಸುತ್ತಿಲ್ಲ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದರು.

    ಅಮೆರಿಕ ಚೀನಾವನ್ನು ದೂರುವ ಬದಲು ಕೊರೊನಾ ವೈರಸ್ ತಡೆಗಟ್ಟಲು ಕ್ರಮಕೈಗೊಳ್ಳಲಿ. ನಮ್ಮನ್ನು ದೂರುವುದರಿಂದ ಅಮೆರಿಕದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.