Tag: Lawrence

  • ಸಲ್ಮಾನ್ ಕೊಲೆ ಬೆದರಿಕೆ ಪ್ರಕರಣ : ಭೂಗತ ಪಾತಕಿಯೊಬ್ಬನ ಬಂಧನ

    ಸಲ್ಮಾನ್ ಕೊಲೆ ಬೆದರಿಕೆ ಪ್ರಕರಣ : ಭೂಗತ ಪಾತಕಿಯೊಬ್ಬನ ಬಂಧನ

    ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಬಂಧನವಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದ್ದ ರಾಜಸ್ಥಾನ (Rajasthan) ಭೂಗತ ಪಾತಕಿ ಎನ್ನಲಾದ ವ್ಯಕ್ತಿಯನ್ನು ಮುಂಬೈ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. 21ರ ವಯಸ್ಸಿನ ಧಕದ್ ರಾಮ್ ಬಿಷ್ಣೋಯಿ (Dhakad Ram Bishnoi) ಎಂಬಾತನೇ ಬಂಧಿದನಾದ ವ್ಯಕ್ತಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈತ ರಾಜಸ್ಥಾನದ ಜೋದ್ ಪುರ್ ಬಳಿಯ ಸಿಯೋಗಿ ಕಿ ಧಾನಿ ನಿವಾಸಿ ಎಂದು ಹೇಳಲಾಗುತ್ತಿದೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ. ಇದನ್ನೂ ಓದಿ: ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

    salman

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.

    ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದು,  ಲಾರೆನ್ಸ್ ಅಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಈಗಾಗಲೇ ಶೋಧ ಕಾರ್ಯವನ್ನೂ ಶುರು ಮಾಡಿದ್ದಾರೆ.

  • ಅನಾಹುತ ನಡೆದು ಬಿಟ್ಟಿದ್ದರೆ ಶಾರ್ಪ್ ಶೂಟರ್ ಗುಂಡಿಗೆ ಬಲಿಯಾಗುತ್ತಿದ್ದ ಸಲ್ಮಾನ್ ಖಾನ್

    ಅನಾಹುತ ನಡೆದು ಬಿಟ್ಟಿದ್ದರೆ ಶಾರ್ಪ್ ಶೂಟರ್ ಗುಂಡಿಗೆ ಬಲಿಯಾಗುತ್ತಿದ್ದ ಸಲ್ಮಾನ್ ಖಾನ್

    ಲ್ಮಾನ್ ಖಾನ್ ಹತ್ಯೆಯ ಸಂಚು ಕುರಿತಂತೆ ದಿನಕ್ಕೊಂದು ಶಾಕಿಂಗ್ ಸುದ್ದಿಗಳು ಬರುತ್ತಿವೆ. ನಿನ್ನೆಯಷ್ಟೇ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವೇ ಸಲ್ಮಾನ್ ಖಾನ್ ಹತ್ಯೆಕ್ಕೆ ಸಿದ್ಧತೆ ಮಾಡಿಕೊಂಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಇವತ್ತು ಮತ್ತೊಂದು ಸುದ್ದಿಯನ್ನು ಹೊರಹಾಕಿದ್ದಾರೆ. ಸಲ್ಮಾನ್ ಕೊಲ್ಲಲು ಗ್ಯಾಂಗ್ ಸ್ಟರ್ ಲಾರೆನ್ಸ್ ಶಾರ್ಪ್ ಶೂಟರ್ ಒಬ್ಬರನ್ನು ನೇಮಕ ಮಾಡಿದ್ದನಂತೆ. ಸಲ್ಮಾನ್ ಮನೆ ಮುಂದಿನ ಅಪಾರ್ಟ್ ಮೆಂಟ್ ನಲ್ಲೇ ಆ ಶಾರ್ಪ್ ಶೂಟರ್ ಇದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

    ಈ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರಿಗೆ ಪತ್ರವೊಂದನ್ನು ಬರೆದು, ಸಲ್ಮಾನ್ ಖಾನ್ ಕೊಲ್ಲುವ ಬೆದರಿಕೆ ಹಾಕಿದ್ದ. ಇದರ ಬೆನ್ನೆಲ್ಲೇ, ಮುಂಬೈ ಪೊಲೀಸ್ ತೀವ್ರ ತನಿಖೆ ಶುರು ಮಾಡಿತ್ತು. ಜೈಲಿನಲ್ಲಿರುವ ಲಾರೆನ್ಸ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲಿಂದ ಒಂದೊಂದೇ ಶಾಕಿಂಗ್ ಸುದ್ದಿಗಳೂ ರಿವೀಲ್ ಆಗುತ್ತಿವೆ. ಅದರಲ್ಲೂ ವಿಕ್ರಮ್ ಬ್ರಾರ್ ಎಂಬ ವ್ಯಕ್ತಿಯ ಕುರಿತು ಪೊಲೀಸ್ ರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಇವನೇ ಶಾರ್ಪ್ ಶೂಟರ್ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ರಾಷ್ಟ್ರೀಯ ಮಾಧ್ಯಮವೊಂದು ಸುದ್ದಿ ಮಾಡಿದಂತೆ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ಕೊಲೆ ಮಾಡಲೆಂದೇ ಸಲ್ಮಾನ್ ಖಾನ್ ವಾಸಿಸುವ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ಮುಂದೆ ಶಾರ್ಪ್ ಶೂಟರ್ ಅನ್ನು ನೇಮಿಸಿದ್ದ ಎಂಬ ಮಾಹಿತಿಯನ್ನು ಹೊರಹಾಕಿದೆ. ಆ ವ್ಯಕ್ತಿ ವಿಕ್ರಮ್ ಬ್ರಾರ್ ಆಗಿದ್ದ ಎಂದು ಅದು ವರದಿ ಮಾಡಿದೆ. ಸಲ್ಮಾನ್ ಖಾನ್ ಮನೆಯಿಂದ ಹೊರಟಾಗ, ಅವರ ಕಾರನ್ನು ಚೇಸ್ ಮಾಡಿ, ಕೊಲ್ಲುವ ಸಂಚು ರೂಪಿಸಿದ್ದರು ಎಂದು ಅದು ವರದಿ ಮಾಡಿದೆ.