Tag: lawmakers

  • ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ಕೀನ್ಯಾ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿದ ವಿಚಿತ್ರ ಪ್ರಸಂಗವೊಂದು ಕಿನ್ಯಾದಲ್ಲಿ ನಡೆದಿದೆ.

    ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಬುಧವಾರ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ ಭಾರೀ ದುರ್ವಾಸನೆ ಉಂಟಾಗಿತ್ತು. ಪರಿಣಾಮ ಕಲಾಪದಲ್ಲಿದ್ದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡುವಂತಾಗಿತ್ತು.  ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಅಸೆಂಬ್ಲಿಯಲ್ಲಿ ದುರ್ವಾಸನೆ ಹರಡುತ್ತಿದ್ದಂತೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ಎಡ್ವಿನ್ ಕಾಕಾಚ್ ಅವರು, ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.

    ತಕ್ಷಣವೇ ಆರೋಪ ಎದುರಿಸಿದ ಸದಸ್ಯರೊಬ್ಬರು ಎದ್ದು ನಿಂತು, ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

    ಸ್ಪೀಕರ್ ಎಡ್ವಿನ್ ಕಾಕಾಚ್ ಅವರು ಸಿಬ್ಬಂದಿಯನ್ನು ಕರೆದು ಏರ್ ಫ್ರೆಶನರ್, ವೆನಿಲ್ಲಾ ಅಥವಾ ಸ್ಟ್ರಾಬೆರಿ ಸುಗಂಧವನ್ನು ತಂದು ರೂಮ್‍ಗೆ ಸ್ಪೇಪ್ರೆ ಮಾಡಿ ಎಂದು ಸೂಚನೆ ನೀಡಿದರು. ಇದೇ ವೇಳೆ, ಇಂತಹ ದುರ್ವಾಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಸದನವನ್ನು ಕೆಲ ಸಮಯ ಮುಂದೂದರು ಎಂದು ವರದಿಯಾಗಿದೆ.

    ಹೂಸು ವಾಸನೆಗೆ ಕಲಾಪ ಮುಂದೂಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಿನ್ಯಾ ಸಂಸತ್‍ಗೆ ಮಹಿಳಾ ಸದಸ್ಯರೊಬ್ಬರು ಮಗುವನ್ನು ಹೊತ್ತುಕೊಂಡು ಬಂದಿದ್ದರು. ಮಗುವನ್ನು ನೋಡಿದ ಸ್ಪೀಕರ್ ಅವರು ಮಗುವನ್ನು ಎತ್ತಿಕೊಂಡು ಕಲಾಪದಿಂದ ಹೊರ ಹೋಗುವಂತೆ ಸೂಚನೆ ನೀಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

  • ರಾಕ್ಷಸ ರಾಜಕಾರಣ ಇತಿಶ್ರೀಯಾಗಿದೆ, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ – ವಿಶ್ವನಾಥ್

    ರಾಕ್ಷಸ ರಾಜಕಾರಣ ಇತಿಶ್ರೀಯಾಗಿದೆ, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ – ವಿಶ್ವನಾಥ್

    ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಇತಿಶ್ರೀಯಾಗಿದ್ದು, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.

    ವಿಶ್ವಾಸ ಮತಯಾಚನೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸರ್ಕಾರ ಪತನವಾಗಿದೆ. ಸದ್ಯ ಪುಣೆಯಲ್ಲಿದ್ದೇವೆ, ನಮ್ಮ ಜೊತೆ ಬಂದಿರುವ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಜೊತೆ ಸಾತ್ವಿಕ ರಾಜಕಾರಣ ಮಾಡುವ ಕುರಿತು ಹಾಗೂ ಸಾತ್ವಿಕ ವಾತಾವರಣ ಸೃಷ್ಟಿಸುವ ಕುರಿತು ಸಹ ಚರ್ಚಿಸಲಾಗುವುದು ತಿಳಿಸಿದರು.

    ನಮಗೆ ಕೈ ಕೊಟ್ಟು ಹೋದವರು ನಿಮಗೂ ಕೈ ಕೊಡುವುದಿಲ್ಲವೇ ಎಂದು ಸಿಎಂ ಸದನದಲ್ಲಿ ಬಿಜೆಪಿಗೆ ಕೇಳಿದ ಪ್ರಶ್ನೆ ಕುರಿತು ಉತ್ತರಿಸಿದ ಅವರು, ಹೇಳಿದವರೂ ಸಹ ಎಲ್ಲರಿಗೂ ಉದ್ದಕ್ಕೂ ಕೈ ಕೊಟ್ಟೇ ಬಂದವರು. ಸುಮ್ಮನೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೀವು ಪಕ್ಷ ದ್ರೋಹದ ರೂವಾರಿ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಪಕ್ಷ ದ್ರೋಹ ಮಾಡಿಲ್ಲ. ಶಾಸಕಾಂಗ ಪಕ್ಷದ ನಾಯಕರಿಗೆ ಹಾಗೂ ಸಿಎಂಗೆ ಈ ಹಿಂದೆಯೇ ತಿಳಿಸಿದ್ದೆ. ನಾನು ಡೀಸೆಂಟ್ ಹಾಕಿದ್ದೇನೆ ಡಿಫೆಕ್ಟ್ ಹಾಕಿಲ್ಲ. ನಾನು ಯಾವತ್ತೂ ಡಿಫೆಕ್ಟ್ ಮಾಡಿಲ್ಲ ಎಂದು ತಿಳಿಸಿದರು.

    ಇಷ್ಟು ವರ್ಷಗಳ ಕಾಲ ಪಕ್ಷದಲ್ಲಿದ್ದುಕೊಂಡು ಇಂತಹ ಪರಿಸ್ಥಿತಿಗೆ ತಂದರಲ್ಲ ಎಂಬ ಕೊರಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರಗುವವರು ನಾವಲ್ಲ. ಕುರ್ಚಿಗೆ ಅಂಟಿಕೊಂಡವರು. ನಾವು ಕುರ್ಚಿಗೆ ಅಂಟಿಕೊಂಡಿಲ್ಲ. ನಮಗೆ ಆ ರೀತಿ ಅನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೋವು ಆಗಿತ್ತು. ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಹಿತಕ್ಕಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಪಬ್ಲಿಕ್ ಟಿವಿಗೆ ತಿಳಿಸಿದರು.

    ನನ್ನ ಸ್ವಕ್ಷೇತ್ರವನ್ನು ತೊರೆದು ಒಂದು ತಿಂಗಳಾಗಿದೆ. ಎಂದೂ ನಾನು ಇಷ್ಟು ದಿನ ಕ್ಷೇತ್ರದ ಜನತೆಯೊಂದಿಗೆ ದೂರವಿಲ್ಲ. ಕೂಡಲೇ ಎಲ್ಲರೊಂದಿಗೆ ಚರ್ಚಿಸಿ ಬರುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

  • ದೋಸ್ತಿಗಳಿಗೆ ಕೈ ಕೊಟ್ಟ ‘ಆನೆ’

    ದೋಸ್ತಿಗಳಿಗೆ ಕೈ ಕೊಟ್ಟ ‘ಆನೆ’

    ಚಾಮರಾಜನಗರ: ಮೊನ್ನೆಯಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಎಸ್‍ಪಿ ಶಾಸಕ ಎನ್.ಮಹೇಶ್ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ವಿಶ್ವಾಸ ಮತಯಾಚನೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಆರಂಭದಲ್ಲಿ ಯಾರಿಗೂ ಬೆಂಬಲ ನೀಡದಿರುವಂತೆ ಮಾಯಾವತಿ ಅವರು ಸೂಚಿಸಿದ್ದು ಹೀಗಾಗಿ ಯಾವ ಪಕ್ಷಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಸದನ ಆರಂಭವಾಗುವುದಕ್ಕೂ ಮುನ್ನಾದಿನ ಪ್ರತಿಕ್ರಿಯೆ ನೀಡಿ, ನಿಮ್ಮ ಇಷ್ಟ ಯಾರಿಗಾದರೂ ಬೆಂಬಲ ನೀಡಿ ಎಂದು ಮಾಯಾವತಿ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದರು.

    ಇದೀಗ ಅತೃಪ್ತ ಶಾಸಕರ ಮನವೊಲಿಸುವಲ್ಲಿಯೂ ಮೈತ್ರಿ ನಾಯಕರು ವಿಫಲವಾಗಿದ್ದು, ಇದರ ಬೆನ್ನಲ್ಲೇ ಶಾಸಕ ಎನ್.ಮಹೇಶ್ ಸಹ ಬೆಂಬಲ ನೀಡುವುದಿಲ್ಲ ಎಂದು ಹೇಳಿರುವುದು ಮೈತ್ರಿ ಸರ್ಕಾರಕ್ಕೆ ಆಘಾತವನ್ನುಂಟು ಮಾಡಿದೆ.

    ಈ ಕುರಿತು ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಎನ್.ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದು, ಹೀಗಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಎರಡು ದಿನ ನನಗೆ ಖಾಸಗಿ ಕೆಲಸ ಇತ್ತು ಹೀಗಾಗಿ ಸದನಕ್ಕೆ ಹೋಗಿರಲಿಲ್ಲ. ನಾಳೆಯೂ ಸಹ ಕ್ಷೇತ್ರದಲ್ಲಿ ಖಾಸಗಿ ಕೆಲಸವಿದ್ದು, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ದೇಶದ ಯಾವುದೇ ರಾಜ್ಯದಲ್ಲಿ ಕಡಿಮೆ ಸೀಟು ಪಡೆದು ಸಿಎಂ ಆಗಿಲ್ಲ – ಮಾಳವಿಕಾ

    ದೇಶದ ಯಾವುದೇ ರಾಜ್ಯದಲ್ಲಿ ಕಡಿಮೆ ಸೀಟು ಪಡೆದು ಸಿಎಂ ಆಗಿಲ್ಲ – ಮಾಳವಿಕಾ

    ಬೆಂಗಳೂರು: ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಕಡಿಮೆ ಸೀಟು ಪಡೆದ ಪಕ್ಷದಿಂದ ಸಿಎಂ ಆಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡೆ ಮಾಳವಿಕಾ ವ್ಯಂಗ್ಯವಾಡಿದ್ದಾರೆ.

    ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 37 ಸೀಟು ಇಟ್ಟುಕೊಂಡು ಸಿಎಂ ಆಗಿದ್ದೆ ಬಹಳ ಆಶ್ಚರ್ಯದ ವಿಷಯ. ಇಷ್ಟು ಕಡಿಮೆ ಸೀಟು ಪಡೆದವರು ದೇಶದ ಯಾವುದೇ ರಾಜ್ಯದಲ್ಲಿ ಸಿಎಂ ಆಗಿಲ್ಲ ಎಂದು ಹೇಳಿದರು.

    ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸ್ಥಿತಿ ಸಹ ಹಾಗೆ ಇತ್ತು, ಅಧಿಕಾರ ಬೇಕಿದ್ದರಿಂದ ಎಲ್ಲಾ ತ್ಯಾಗ ಮಾಡಿದರು. ಜೆಡಿಎಸ್ ಪಕ್ಷ ಹೇಳಿದ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಕಡಿಮೆ ಸೀಟು ಪಡೆದವರನ್ನು ಸಿಎಂ ಮಾಡಿದರು ಎಂದು ಹೇಳಿದರು.

    ಸಿಎಂ ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. 18 ಶಾಸಕರು ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಸಂಖ್ಯಾ ಬಲ 100 ಕ್ಕೆ ಇಳಿದಿದೆ. ಬಿಜೆಪಿ ಸಂಖ್ಯಾ ಬಲ 107 ಇದೆ. ಸಹಜವಾಗಿ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡಬೇಕು. ಎಲ್ಲಾ ಸಚಿವರ ರಾಜೀನಾಮೆ ನೀಡಿದ ಮೇಲೆ ಸದನದಲ್ಲಿ ಹೇಗೆ ಚರ್ಚೆ ಮಾಡಬೇಕು. ಸದನದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು ಎಂದು ಪ್ರಶ್ನೆ ಮಾಡಿದರು.

  • ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು

    – ಸಂಪುಟ ವಿಸ್ತರಣೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಬಿಗ್ ಶಾಕ್
    – ಈ ವಾರ ಎಲ್ಲವೂ ನಿರ್ಧಾರ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಲು ಅತೃಪ್ತರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇದರ ಭಾಗವಾಗಿ ಮಾಜಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.

    ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವ ಆಡಿಯೋ ಧ್ವನಿ ಪಬ್ಲಿಕ್ ಟಿವಿಗೆ ಲಭ್ಯವಿದ್ದು, ರಾಜೀನಾಮೆ ನಿರ್ಧಾರ ಮಾಡಿರುವುದು ನಿಜ, ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಈ ವಾರ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಚಿವ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ  

    ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದು ಖಚಿತವಾಗಿದ್ದು, ಯಾವ ಸಮಯದಲ್ಲಿ ಎಷ್ಟು ಮಂದಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದನ್ನು ಮಾತ್ರ ತಿಳಿಯಬೇಕಿದೆ. ಕಾಂಗ್ರೆಸ್ಸಿನ 5 ಜನ ಪರಿಷತ್ ಸದಸ್ಯರು ಹಾಗೂ 5 ರಿಂದ 6 ಜಿಲ್ಲೆಗಳ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಆಪ್ತ ಕಾಂಗ್ರೆಸ್ ಎಂಎಲ್‍ಸಿ ವಿವೇಕ್ ರಾವ್ ಪಾಟೀಲ್ ಸೇರಿದಂತೆ, ಹಲವು ಮುಖಂಡರು ರಮೇಶ್ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ನಿರ್ಧಾರ ರಾಜ್ಯ ರಾಜಕೀಯ ವಲಯದಲ್ಲಿ ಏನು ಪರಿಣಾಮ ಉಂಟು ಮಾಡಲಿದೆ ಎನ್ನುವುದು ಈ ವಾರ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾದಾಮಿಗೆ ಶಾಸಕರು ಸಿದ್ದರಾಮಯ್ಯನವರೋ, ಚಿಮ್ಮನಕಟ್ಟಿ ಸುಪುತ್ರನೋ-ಸಾರ್ವಜನಿಕರಲ್ಲಿ ಮೂಡಿದೆ ಗೊಂದಲ?

    ಬಾದಾಮಿಗೆ ಶಾಸಕರು ಸಿದ್ದರಾಮಯ್ಯನವರೋ, ಚಿಮ್ಮನಕಟ್ಟಿ ಸುಪುತ್ರನೋ-ಸಾರ್ವಜನಿಕರಲ್ಲಿ ಮೂಡಿದೆ ಗೊಂದಲ?

    ಬಾಗಲಕೋಟೆ: ಜಿಲ್ಲೆಯ ಬದಾಮಿ ವಿಧಾನಸಭೆ ಕ್ಷೇತ್ರಕ್ಕೆ ಶಾಸಕರು ಯಾರು ಎಂಬ ಗೊಂದಲ ಜನರಲ್ಲಿ ಉಂಟಾಗುತ್ತಿದೆ. ಏಕೆಂದರೆ ಬದಾಮಿ ಶಾಸಕ ಸಿದ್ದರಾಮಯ್ಯನವರು ತಿಂಗಳಿಗೆ ಒಮ್ಮೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದರು, ಬಾದಾಮಿ ವಿಧಾನಸಭೆ ಕ್ಷೇತ್ರದ ತುಂಬ ನಿತ್ಯ ಶಾಸಕರು ಎಂಬ ಸ್ಟೀಕರ್ ಅಂಟಿಸಿಕೊಂಡಿರುವ ಕಾರು ಮಾತ್ರ ಓಡಾಡುತ್ತಲೇ ಇರುತ್ತದೆ.

    ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಚುನಾವಣೆಯ ವೇಳೆ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಸದ್ಯ ಸಿದ್ದರಾಮಯ್ಯ ಬದಾಮಿ ಶಾಸಕರಾದರೆ ಬಿಬಿ ಚಿಮ್ಮನಕಟ್ಟಿ ಹಾಗೂ ಅವರ ಪುತ್ರ ಭೀಮಸೇನ್ ಚಿಮ್ಮನಕಟ್ಟಿ ತಾವು ಓಡಾಡುವ ಕಾರಿಗೆ ಶಾಸಕರು ಎಂಬ ಸ್ಟಿಕರ್ ಹಾಕಿಕೊಂಡಿದ್ದಾರೆ. ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿ ಬಳಸಬೇಕಾದ ಸವಲತ್ತನ್ನ ಚಿಮ್ಮನಕಟ್ಟಿ ಅವರ ಮಗ ಬಳಸುತ್ತಿದ್ದಾರೆ.

    ಬಾದಾಮಿ ಕ್ಷೇತ್ರದ ತುಂಬಾ ಶಾಸಕರು ಎಂಬ ಸ್ಟಿಕರ್ ಇರುವ ಕಾರಿನಲ್ಲೇ ಸಂಚರಿಸುತ್ತಿದ್ದು, ಮಾಜಿ ಶಾಸಕ ಚಿಮ್ಮನಕಟ್ಟಿ ಇಲ್ಲವೇ ಅವರ ಪುತ್ರ ಕಾರಿನಲ್ಲಿ ಸಂಚರಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews