Tag: lawmaker

  • ಇಮ್ರಾನ್ ಖಾನ್‌ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ

    ಇಮ್ರಾನ್ ಖಾನ್‌ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸ್ವಲ್ಪ ಹಾನಿಯಾದರೂ ಸುಮ್ಮನಿರಲ್ಲ, ಶೆಹಬಾಜ್ ಷರೀಫ್ ಸರ್ಕಾರ ಹಾಗೂ ಉನ್ನತ ಅಧಿಕಾರಿಗಳ ವಿರುದ್ಧ ಆತ್ಮಹತ್ಯಾ ದಾಳಿ ನಡೆಸುವುದಾಗಿ ಪಾಕಿಸ್ತಾನದ ಶಾಸಕರೊಬ್ಬರು ಬೆದರಿಕೆ ಒಡ್ಡಿದ್ದಾರೆ.

    ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಅತಾವುಲ್ಲಾ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋವೊಂದರಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

    ವೀಡಿಯೋದಲ್ಲೇನಿದೆ?
    ಇದು ದೇಶವನ್ನು ನಡೆಸುತ್ತಿರುವವರಿಗೆ ಎಚ್ಚರಿಕೆ, ಇಮ್ರಾನ್ ಖಾನ್ ಅವರ ತಲೆ ಮೇಲಿನ ಒಂದು ಕೂದಲಿಗೆ ಹಾನಿಯಾದರೂ ನೀವಾಗಲೀ ನಿಮ್ಮ ಮಕ್ಕಳಾಗಲೀ ಉಳಿಯುವುದಿಲ್ಲ. ನಿಮ್ಮ ಮೇಲೆ ಆತ್ಮಾಹುತಿ ದಾಳಿ ನಡೆಸುವ ಮೊದಲಿಗ ನಾನೇ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾನು ಮಾತ್ರವಲ್ಲ ಸಾವಿರಾರು ಜನರು ನಿಮ್ಮ ಮೇಲೆ ಇದೇ ರೀತಿಯಾಗಿ ತಿರುಗಿ ಬೀಳಲು ಸಿದ್ದರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ವ್ಯಕ್ತಿ ಅರೆಸ್ಟ್ ಕೇಸ್- ಮಸೀದಿ ಬಳಿ ನೆಲೆಸಿದ್ದವನಿಗೆ ಇತ್ತಾ ಉಗ್ರರ ಜೊತೆ ನಂಟು?

    ಇತ್ತೀಚೆಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ನಡೆಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಅವರಿಗೆ ಹೆಚ್ಚಿನ ವೈಯಕ್ತಿಕ ಭದ್ರತೆ ನೀಡಲಾಗಿದೆ. ಇಮ್ರಾನ್ ಖಾನ್‌ಗೆ ಏನಾದರೂ ಅಪಾಯವಾದರೆ ಇದಕ್ಕೆ ಸರ್ಕಾರವೇ ಹೊಣೆ ಎನ್ನುವ ರೀತಿಯಲ್ಲಿ ಶಾಸಕ ವೀಡಿಯೋದಲ್ಲಿ ಈ ಹೇಳಿಕೆ ನೀಡಿದ್ದಾರೆ.