Tag: law

  • ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ನವದೆಹಲಿ: ಮಾದಕ ವಸ್ತು ಖರೀದಿ, ಮಾರಾಟ, ಸೇವೆನೆ ವಿದುದ್ಧ ಕಠಿಣ ಕ್ರಮಕ್ಕೆ ದೇಶಾದ್ಯಂತ ಒತ್ತಾಯ ಹೆಚ್ಚುತ್ತಿರುವ ನಡುವೆಯೇ, ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣಪ್ರಮಾಣದ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಅಪರಾಧದಿಂದ(ಜೈಲು ಶಿಕ್ಷೆಯಿಂದ) ಹೊರಗಡೆ ಇಡುವ ಮಹತ್ವ ಶಿಫಾರಸನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮಾಡಿದೆ. ಈ ಶಿಫಾರಸನ್ನು ಕೇಂದ್ರ ಕಂದಾಯ ಇಲಾಖೆಗೆ ಕಳಿಸಲಾಗಿದ್ದು, ಮಾದಕ ವಸ್ತು ನಿಗ್ರಹ ಕಾಯ್ದೆಎನ್‍ಡಿಪಿಎಸ್( Narcotic Drugs and Psychotropic Substances Act)ತಿದ್ದು ಪಡಿ ಮಾಡಬೇಕು ಎಂದು ತಿಳಿಸಿದೆ.

    ಇದೀಗ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೂ ಮುನ್ನ ಕನ್ನಡದ ಚಿತ್ರರಂಗದ ಹಲವು ಕಲಾವಿದರು ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಈ ಹೊಸ ಪ್ರಸ್ತಾಪಕ್ಕೆ ಮಹತ್ವ ಬಂದಿದೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈಗ ಇರುವ ಎನ್‍ಡಿಪಿಎಸ್(NDPS) ಕಾಯ್ದೆ ಪ್ರಕಾರ ಮಾದಕ ವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ ತಾವಾಗೇ ಈ ವ್ಯಸನಿಗಳು ಮನಃಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ತಮ್ಮ ಚಟವನ್ನು ಬಿಟ್ಟರೆ ಅವರಿಗೆ ತನಿಖೆ ಹಾಗೂ ಜೈಲಿನಿಂದ ವಿನಾಯ್ತಿ ದೊರಕುತ್ತದೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಈಗ ಹೊಸ ಪ್ರಸ್ತಾವದ ಪ್ರಕಾರ, ವೈಯಕ್ತಿಕ ಕಾರಣಗಳಿಗೆ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಕೊಡಿಸಬೇಕು. ಜೈಲುವಾಸದ ಬಲೆಗೆ ಈ ಆಯ್ಕೆಯುನ್ನು ಅವರಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಈಗಿನ ಎನ್‍ಡಿಪಿಎಸ್ ಕಾಯ್ದೆಯ 27ನೇ ಪರಿಚ್ಛೇದ ಹೇಳುವಂತೆ ಯಾವುದೇ ಮಾದಕ ವಸ್ತು ಇಟ್ಟುಕೊಂಡವರಿಗೆ 1ವರ್ಷದವರೆಗೆ ಕೈಲು ಶಿಕ್ಷೆ ಹಾಗೂ 20 ಸಾವಿರವರೆಗೆ ದಂಡ ವಿಧಿಸಲಾಗುತ್ತಿದೆ.

  • ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಲಾ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ: ಸಿದ್ದರಾಮಯ್ಯ

    ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಲಾ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ: ಸಿದ್ದರಾಮಯ್ಯ

    ಬೆಂಗಳೂರು: ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನಗೆ ಪ್ರೊ.ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರಣಕ್ಕೂ ಬರುತ್ತಿರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು ಅಂತೇಳಿದ್ರು.

    ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ ನಡುವೆ ಆತ್ಮೀಯತೆ ಬೆಳೆಯಿತು ಅಂತಾ ನೆನಪು ಮೆಲಕು ಹಾಕಿದ್ರು ಸಿದ್ದರಾಮಯ್ಯ. ಇದನ್ನೂ ಓದಿ: ಮೇಯರ್ ಸ್ಥಾನ ಕೊಟ್ಟವರ ಜೊತೆ ಮೈತ್ರಿ – ಕಲಬುರಗಿ ಜೆಡಿಎಸ್ ಸದಸ್ಯರು 

    ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್ ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ. ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ ಅಂತಾ ನೆನಪಿಸಿಕೊಂಡ್ರು.

    ರಾಜಕಾರಣದ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನವಿತ್ತು. ಇಂಥವರ ಸಂಪರ್ಕದಿಂದ ನಾನು ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಹಾಯವಾಯಿತು. ತೇಜಸ್ವಿಯವರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪುಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಪ್ರತೀ ಸೋಮವಾರ ಸಂಜೆ 5 ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೊಟೇಲ್ ಒಂದರಲ್ಲಿ ಸೇರುತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಳೆಯ ದಿನಗಳನ್ನು ನೆನಪಿಸಿಕೊಂಡರು.

  • ಕಾಮುಕರಿಗೆ ಭಯ ಹುಟ್ಟಬೇಕು ಅಂತಹ ಕಾನೂನು ತರುತ್ತೇವೆ : ಈಶ್ವರಪ್ಪ

    ಕಾಮುಕರಿಗೆ ಭಯ ಹುಟ್ಟಬೇಕು ಅಂತಹ ಕಾನೂನು ತರುತ್ತೇವೆ : ಈಶ್ವರಪ್ಪ

    ಶಿವಮೊಗ್ಗ: ಅತ್ಯಾಚಾರ ನಡೆಸುವ ಕಾಮುಕರಿಗೆ ಭಯ ಹುಟ್ಟಬೇಕು ಅಂತಹ ಕಾನೂನು ಜಾರಿಗೆ ತರುವ ಕುರಿತು ಕ್ಯಾಬಿನೆಟ್‍ನಲ್ಲಿ ಚರ್ಚೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದ ಆಯನೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದರು. ಈ ವೇಳೆ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಚರ್ಚಿಸಿದ್ದರು. ಆದರೆ ಆ ವಿಷಯ ಚರ್ಚೆ ಆಯಿತು ಅಷ್ಟೇ ಜಾರಿಗೆ ಬರಲಿಲ್ಲ. ಅತ್ಯಾಚಾರ ನಡೆಸುವ ನೀಚರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬದಲಾವಣೆಯ ಅವಶ್ಯಕತೆ ಇದೆ. ಕಾಮುಕರಿಗೆ ಕಾನೂನು ಹಾಗೂ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ. ಹಿಗಾಗಿಯೇ ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರಲಾಗುವುದು ಎಂದರು. ಇದನ್ನೂ ಓದಿ:  ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ

    ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅತ್ಯಾಚಾರ ಪ್ರಕರಣವನ್ನು ಭೇದಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಮೈಸೂರು ಹಾಗು ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ್ದಾರೆ. ಕಿಡಿಗೇಡಿ ನೀಚರನ್ನು ಹುಡುಕಿ ಬಂಧಿಸಿರುವುದು ನನಗೆ ಸಂತೋಷವಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇದನ್ನೂ ಓದಿ:  ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

  • ಆ.14 ರಂದು ಚಿಕ್ಕೋಡಿಯಲ್ಲಿ ಬೃಹತ್ ಲೋಕ ಅದಾಲತ್

    ಆ.14 ರಂದು ಚಿಕ್ಕೋಡಿಯಲ್ಲಿ ಬೃಹತ್ ಲೋಕ ಅದಾಲತ್

    ಚಿಕ್ಕೋಡಿ: ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ. ಈ ಲೋಕ ಅದಾಲತ್‍ನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್ ಚವ್ಹಾಣ್ ಅವರು ಕರೆ ನೀಡಿದ್ದಾರೆ.

    ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ.

    ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚವ್ಹಾಣ್ ಅವರು, ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದೇ ಅನೇಕ ವ್ಯಾಜ್ಯಗಳು ಇತ್ಯರ್ಥ ಆಗದೇ ಉಳಿದುಕೊಂಡಿವೆ. ಹೀಗಾಗಿ ಲೋಕ ಅದಾಲತ್, ನೆನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಲೋಕ ಅದಾಲತ್ ಮೂಲಕ ಸಾರ್ವಜನಿಕರು, ಕಕ್ಷಿದಾರರು, ಬ್ಯಾಂಕ್ ಮತ್ತು ವಿವಿಧ ಸಂಸ್ಥೆಗಳು ತಮ್ಮ ವ್ಯಾಜ್ಯಗಳಿಂದ ರಾಜೀಯಾಗಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶದ್ರೋಹ ಕಾನೂನು ಈಗಲೂ ಅಸ್ತಿತ್ವದಲ್ಲಿರಬೇಕೆ? – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಲೋಕ ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಅಂದರೆ ಚೆಕ್ ಅಮಾನ್ಯ ಪ್ರಕರಣ, ವಾಹನ ಅಪಘಾತ ಪರಿಹಾರ, ಸಾಲ ವಸೂಲಾತಿ, ಕೌಟುಂಬಿಕ ಮತ್ತು ಜೀವನಾಂಶ (ವಿಚ್ಛೇದನ ಹೊರತುಪಡಿಸಿ) ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಅದಾಲತ್ ಒಂದು ಸುವರ್ಣ ಅವಕಾಶ ಆಗಿರುತ್ತದೆ. ಸಾರ್ವಜನಿಕರು ಲೋಕ ಅದಾಲತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಟಿ.ಶ್ರೀಕಾಂತ್, ವಿಜಯ ಕುಮಾರ್ ಬಾಗಡೆ, ಆಶೋಕ ಆರ್.ಎಚ್, ನಾಗರ ಪಾಟೀಲ್, ಸರಕಾರಿ ಅಭಿಯೋಜಕ ವೈ.ಜಿ.ತುಂಗಳ, ಎಜೆಪಿ ಆರ್.ಐ.ಖೋತ, ಎಲ್.ವಿ.ಬೋರನ್ನವರ ಭಾಗಿಯಾಗಿದ್ದರು.

  • ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯ- ವಿಚ್ಛೇದನ ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು

    ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯ- ವಿಚ್ಛೇದನ ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು

    ಪಣಜಿ: ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗೋವಾ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಚಿಂತಿಸಿದೆ.

    ಈ ಕುರಿತು ಗೋವಾ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಸೋಮವಾರ ಮಾಹಿತಿ ನೀಡಿದ್ದು, ಗೋವಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಆ್ಯಂಡ್ ರೂರಲ್ ಡೆವಲಪ್‍ಮೆಂಟ್(ಜಿಐಪಿಎಆರ್ ಡಿ) ಕೌನ್ಸಲಿಂಗ್ ಕೋರ್ಸ್ ಹಾಗೂ ಇದರ ಸ್ವರೂಪವನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗದಗ- ಏಪ್ರಿಲ್, ಮೇನಲ್ಲಿ 21 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    ರಾಜ್ಯದಲ್ಲಿ ವಿವಾಹಪೂರ್ವ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಹೊಸ ನೀತಿಯನ್ನು ತರುತ್ತಿದ್ದು, ಧಾರ್ಮಿಕ ಸಂಸ್ಥೆಗಳೂ ಸಹ ಇದರಲ್ಲಿ ಭಾಗವಹಿಸಲಿವೆ. ಗೋವಾದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳನ್ನು ತಡೆಯಲು ಈ ಕಾನೂನು ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

    ವಿವಾಹವಾಗಿ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ ಹೆಚ್ಚು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿವಾಹಕ್ಕೂ ಮೊದಲು ಕೌನ್ಸಲಿಂಗ್ ನಡೆಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ಮೂಲಕ ದಾಂಪತ್ಯದ ಕುರಿತು ಅರಿವು ಮೂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಪ್ರತಿ ತಿಂಗಳು ಎಷ್ಟು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ ಎಂಬ ನಿರ್ದಿಷ್ಟ ಅಂಕಿ ಅಂಶಗಳು ಸದ್ಯ ನಮ್ಮ ಬಳಿ ಇಲ್ಲ. ಆದರೆ ಇತ್ತೀಚೆಗೆ ಈ ಸಂಖ್ಯೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ಕೌನ್ಸಲಿಂಗ್ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

  • ಕಾರಿನಲ್ಲಿ ಮಾಸ್ಕ್ ಧರಿಸದ ದಂಪತಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್

    ಕಾರಿನಲ್ಲಿ ಮಾಸ್ಕ್ ಧರಿಸದ ದಂಪತಿ – ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್

    ನವದೆಹಲಿ: ವೀಕೆಂಡ್ ಲಾಕ್‍ಡೌನ್ ಪಾಲಿಸದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ದಂಪತಿ ಪೊಲೀಸ್‍ಗೆ ಅವಾಜ್ ಹಾಕಿರುವ ಘಟನೆ ದೆಹಲಿಯ ದರಿಯಾಗಂಜ್‍ನಲ್ಲಿ ನಡೆದಿದೆ.

    ಕಾರಿನ ಒಳಗೆ ಮಾಸ್ಕ್ ಧರಿಸಿಲ್ಲ ಎಂದು ದಂಪತಿಯನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ ಕಫ್ರ್ಯೂ ಪಾಸ್ ಸಹ ಅವರ ಬಳಿ ಇರಲಿಲ್ಲ. ಈ ವೇಳೆ ತಾವು ಮಾಡಿದ ತಪ್ಪನ್ನು ತಿದ್ದುಕೊಂಡು ಸೌಮ್ಯವಾಗಿ ವರ್ತಿಸದೆ ದಂಪತಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

    ನಾನು ಇಲ್ಲಯೇ ನನ್ನ ಗಂಡನಿಗೆ ಮುತ್ತು ಇಡುತ್ತೇನೆ ನೀವು ನನ್ನನ್ನು ತಡೆಯಬಹುದೇ? ಕಾರ್ ಏಕೆ ನಿಲ್ಲಿಸಿದ್ದೀರಿ? ಎಂದು ಮಹಿಳೆ ಪೊಲೀಸರಿಗೆ ಹೇಳುತ್ತಾ ಕೂಗಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಪೊಲೀಸರು ಮಹಿಳೆಗೆ ಮನವರಿಕೆ ಮಾಡಿದರೂ ಸುಮ್ಮನಾಗದೆ ದಂಪತಿ ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದಾರೆ. ಪೊಲೀಸರು ಮಹಿಳಾ ಪೊಲೀಸ್ ಕರೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

  • ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ಕಠಿಣ ಕ್ರಮ: ಸುಧಾಕರ್ ಸ್ಪಷ್ಟನೆ

    ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ಕಠಿಣ ಕ್ರಮ: ಸುಧಾಕರ್ ಸ್ಪಷ್ಟನೆ

    – ಔಷಧಿ, ಲಸಿಕೆಯ ಕೊರತೆ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ. ಆದರೆ ಲಾಕ್‍ಡೌನ್ ಹೊರತುಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವರಾದ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆ ಸಿಎಂ ಕರೆದಿದ್ದಾರೆ. ಸಭೆ ಮಾಡಿ ವಿಪಕ್ಷಗಳ ಸಲಹೆ ಪಡೆಯುತ್ತೇವೆ. ರಾಜ್ಯದಲ್ಲಿ ಔಷಧಿ, ಲಸಿಕೆ ಕೊರತೆ ಇಲ್ಲ. ಕೊರತೆ ಆಗದಂತೆ ಎಲ್ಲಾ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

    ಮಹಾರಾಷ್ಟ್ರ ಮಾದರಿ ಟಫ್ ರೂಲ್ಸ್ ಜಾರಿ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಅವರು, ನಿನ್ನೆ ಸಿಎಂ ಯಡಿಯೂರಪ್ಪ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದಾರೆ. ರಾಜ್ಯದಲ್ಲಿ ಸೋಂಕು, ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕಳೆದ ವರ್ಷದಷ್ಟೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಭೆ ಮಾಡಿದ್ದಾರೆ. ಲಾಕ್‍ಡೌನ್ ಹೊರತು ಪಡಿಸಿ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾಗಿದೆ. ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಆಗಿದೆ. ಸಿಎಂ ಎರಡು ದಿನ ಪ್ರವಾಸ ಇದ್ದಾರೆ. ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ಕಠಿಣ ನಿಯಮಗಳ ಕುರಿತು ಕ್ರಮ ತಗೋತೀವಿ ಎಂದು ತಿಳಿಸಿದ್ದಾರೆ.

    ಭಾನುವಾರ ಸರ್ವ ಪಕ್ಷಗಳ ಸಭೆಯನ್ನು ಸಿಎಂ ಕರೆದಿದ್ದಾರೆ. ಅ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಲಹೆಗಳನ್ನು ಪಡೆಯುತ್ತೇವೆ. ಸರ್ಕಾರ ಒಂದೇ ಈ ಕೆಲಸ ಮಾಡೋದಲ್ಲ. ಎಲ್ಲರೂ ಈ ಕೆಲಸಕ್ಕೆ ಕೈ ಜೋಡಿಸಬೇಕಾಗಿದೆ. ಹೀಗಾಗಿ ವಿಪಕ್ಷ ಸಭೆ ಕರೆಯಲಾಗಿದೆ ಎಂದಿದ್ದಾರೆ.

    ಮದುವೆ ಸೇರಿದಂತೆ ಜನ ಸೇರುವ ಸಮಾರಂಭಗಳಿಗೆ ಕಡಿವಾಣ ಹಾಕಬೇಕಾಗಿದೆ. ಜನರೇ ಸ್ವಯಂ ಆಗಿ ನಿರ್ಬಂಧ ಹಾಕಿಕೊಳ್ಳಬೇಕು. ಜನರೇ ಜನತಾ ಕಫ್ರ್ಯೂಗೆ ಕೈ ಜೋಡಿಸಬೇಕು. ನೈಟ್ ಕಫ್ರ್ಯೂ ಸಮಯ ಬದಲಾವಣೆ ಮಾಡುವ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೆವೆ ಎಂದರು.

  • ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷಗಟ್ಟಲೇ ದಂಡ ಕಟ್ಟಿದ ಪ್ರಧಾನಿ

    ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಲಕ್ಷಗಟ್ಟಲೇ ದಂಡ ಕಟ್ಟಿದ ಪ್ರಧಾನಿ

    ಓಸ್ಲೋ: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಪ್ರಧಾನಿಗೆ ದಂಡ ಹಾಕುವ ಮೂಲಕವಾಗಿ ತಮ್ಮ ಪ್ರಾಮಾಣಿಕತೆಯನ್ನು ಯರೋಪಿನ ನಾರ್ವೆ ಪೋಲಿಸರು ಮೆರೆದಿದ್ದಾರೆ.

    ನಾರ್ವೆ ಪ್ರಧಾನಿ ಎರ್ನಾ ಸೊಲ್ಬೆರ್ಗ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ಕುಟುಂಬದೊಂದಿಗೆ ಕೋವಿಡ್ ನಿಯಮವಾದ ಸಾಮಾಜಿಕ ಅಂತರವನ್ನು ಉಲ್ಲಂಘಿಸಿದ್ದರು. ಇದಕ್ಕಾಗಿ ಪೊಲೀಸರು ಬರೋಬ್ಬರಿ 20 ಸಾವಿರ ನಾರ್ವೆ ಕ್ರೌನ್ಸ್(ಅಂದಾಜು 1.75 ಲಕ್ಷ ರೂ.) ದಂಡವನ್ನು ವಿಧಿಸಿದ್ದಾರೆ.

    ಕಳೆದ ತಿಂಗಳು ಎರ್ನಾ ಸೋಲ್ಬೆರ್ಗ್ ತಮ್ಮ ಕುಟುಂಬದವರ ಜೊತೆಗೆ ಜನ್ನದಿನಾಚರಣೆಯನ್ನು ಆಚರಿಸಿಕೊಂಡಿದ್ದರು. ದಂಡವನ್ನು ಕಟ್ಟುವುದರ ಜೊತೆಗೆ ಎರ್ನಾ ಸೊಲ್ಬೆರ್ಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ ಎಂದು ವರದಿಯಾಗಿದೆ.

  • ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ

    ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ

    ಹುಬ್ಬಳ್ಳಿ/ಧಾರವಾಡ: ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿವಿಚಾರವಾಗಿ ಕೋಲಾರ ಜಿಲ್ಲಾ ಅರೋಗ್ಯಾಧಿಕಾರಿ, ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ, ಹುಬ್ಬಳ್ಳಿಯಲ್ಲಿ ವಾಸವಾಗಿರುವ ಎಕ್ಸಿಕ್ಯೂಟಿವ್ ಇಂಜಿನೀಯರ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಹುಬ್ಬಳ್ಳಿಯ ರಾಜೀವ್ ಗಾಂಧಿ ನಗರದ ಮನೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ವಾಸವಾಗಿರುವ ಎಕ್ಸಿಕ್ಯೂಟಿವ್ ಇಂಜಿನೀಯರ್ ದೇವರಾಜ್ ಶಿಗ್ಗಾಂವಿ ಎಂಬವರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದೇವರಾಜ್ ಶಿಗ್ಗಾಂವ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ನೀರಾವರಿ ಇಲಾಖೆಯಲ್ಲಿದ್ದ ದೇವರಾಜ್ ಸದ್ಯ ಧಾರವಾಡದ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಇಂದು ಮೂರು ವಾಹನಗಳೊಂದಿಗೆ ಆಗಮಿಸಿರುವ ಎಸಿಬಿ ತಂಡ ರಾಜೀವ ಗಾಂಧಿ ನಗರ, ಬಾಲಾಜಿ ನಗರ, ಕೋಟಿಲಿಂಗ ನಗರ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಮೂರು ತಂಡಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಮನೆಯ ಪ್ರತಿ ಕಡೆಯೂ ತಪಾಸಣೆ ಮಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಎಸಿಬಿ ದಾಳಿ ಆರಂಭವಾದಾಗಿಂದ ಮನೆಯ ಯಾವುದೇ ಸದಸ್ಯರನ್ನ ಹೊರಗೆ ಬಿಡದೇ ಹಲವು ದಾಖಲಾತಿಗಳನ್ನ ಕೇಳಿ ಪಡೆದು ಪರಿಶೀಲನೆ ಮುಂದುವರಿಸಿದ್ದಾರೆ.

    ಕೋಲಾರ ಜಿಲ್ಲಾ ಅರೋಗ್ಯಾಧಿಕಾರಿಗೆ ಎಸಿಬಿ ಶಾಕ್ ನೀಡಿದೆ. ಡಿಹೆಚ್‍ಓ ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ಚಿತ್ರದುರ್ಗದಲ್ಲಿ ಎಸಿಬಿ ಅಧಿಕಾರಿಗಳು ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶಿಲನೆ ಮಾಡುತ್ತಿದ್ದಾರೆ.

  • ಕೃಷಿ ಕಾನೂನುಗಳಿಗೆ ತಡೆ ನೀಡಿ, ಇಲ್ಲ ನಾವೇ ತಡೆ ನೀಡಲಿದ್ದೇವೆ – ಕೇಂದ್ರಕ್ಕೆ ಸುಪ್ರೀಂ

    ಕೃಷಿ ಕಾನೂನುಗಳಿಗೆ ತಡೆ ನೀಡಿ, ಇಲ್ಲ ನಾವೇ ತಡೆ ನೀಡಲಿದ್ದೇವೆ – ಕೇಂದ್ರಕ್ಕೆ ಸುಪ್ರೀಂ

    ನವದೆಹಲಿ : ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆ ನಿರಾಶದಾಯಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ರಕ್ತಪಾತಗಳಾದರೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

    ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹಾಯ್ದಿದೆ.

    ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ‌ನಡೆಯುತ್ತಿದೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಡೆ ಸಮಾಧಾನ ತಂದಿಲ್ಲ. ಇಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಕೋರ್ಟ್ ಗಮನಿಸುತ್ತಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ರ‍್ಯಾಲಿ ನಡೆಯಲಿದ್ದು ಪರಿಸ್ಥಿತಿ ಕೈ ಮೀರಿ ಹೋದರೆ ಯಾರು ಹೊಣೆ ಎಂದು ಸುಪ್ರೀಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದೆ.

    ಕೊರೊನಾ ವೈರಸ್ ಭೀತಿ ನಡುವೆ ತೀವ್ರ ಚಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಆಹಾರ ಮತ್ತು ನೀರಿನ ಬಗ್ಗೆ ಯಾರು ಕಾಳಜಿ ವಹಿಸುತ್ತಿದ್ದಾರೆ? ಅಲ್ಲಿ ಸಾಮಾಜಿಕ ಅಂತರ ಕಾಪಾಡಲಾಗುತ್ತದೆಯೇ? ಭವಿಷ್ಯದಲ್ಲಿ ತಪ್ಪುಗಳಾದರೆ ಅದಕ್ಕೆ ಪ್ರತಿಯೊಬ್ಬರು ಜವಾಬ್ದಾರಾಗುತ್ತೇವೆ. ಯಾರೊಬ್ಬರ ರಕ್ತವೂ ನಮ್ಮ ಕೈಯಲ್ಲಿ ಬೇಡ ಎಂದು ನ್ಯಾ.ಎಸ್.ಎ ಬೊಬ್ಡೆ ಅಭಿಪ್ರಾಯಪಟ್ಟರು.

    ನಾವು ಮಧ್ಯಸ್ಥಿಕೆವಹಿಸಬೇಕು ಎಂದರೆ ಸದ್ಯ ಮೂರು ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಬೇಕು ಇಲ್ಲದಿದ್ದರೆ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನೀವೂ ಕಾನೂನುಗಳನ್ನು ತಡೆ ಹಿಡಿಯದಿದ್ದರೆ ನಾವು ಕಾನೂನುಗಳಿಗೆ ತಡೆ ನೀಡಬೇಕು ಎಂದು ನ್ಯಾ. ಬೊಬ್ಡೆ ಹೇಳಿದರು.

    ರೈತರು ಹೋಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾದರೆ ಸಮಿತಿ ರಚಿಸುವುದನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ. ಸಮಸ್ಯೆಯನ್ನು ಸಮಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದಿರುವ ನ್ಯಾ. ಬೊಬ್ಡೆ ನಿವೃತ್ತಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

    ನಮ್ಮಿಂದ ನೇಮಕಗೊಳ್ಳುವ ಸಮಿತಿಯ ಮೂಲಕ ಕೃಷಿ ಕಾನೂನು ಸಮಸ್ಯೆಗೆ ಪರಿಹಾರವನ್ನು ನೀಡುವ ಆದೇಶವನ್ನು ರವಾನಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ ಮತ್ತು ತಜ್ಞರ ಸಮಿತಿಯ ಮುಖ್ಯಸ್ಥರಾಗಬಲ್ಲ ಮಾಜಿ ಸಿಜೆಐಗಳ ಹೆಸರನ್ನು ಸೂಚಿಸುವಂತೆ ಕೇಂದ್ರ ಮತ್ತು ರೈತ ಸಂಘಗಳಿಗೆ ಸೂಚಿಸಿದೆ. ಸಮತಿ ರಚನೆ ಬಗ್ಗೆ ನಾಳೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ‌ ನೀಡಲಿದೆ.