Tag: Law Commission

  • NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು

    NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು

    ನವದೆಹಲಿ: ಸುಳ್ಳು ಆಶ್ವಾಸನೆಗಳು, ತಪ್ಪು ನಿರೂಪಣೆ ಮತ್ತು ವಿಚ್ಛೇದನದಂತಹ ಅಭ್ಯಾಸಗಳನ್ನು ತಡೆಯಲು ಎನ್‌ಆರ್‌ಐಗಳು (NRI) ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಕಾನೂನು ಆಯೋಗವು (Law Commission) ಶುಕ್ರವಾರ ಶಿಫಾರಸು ಮಾಡಿದೆ.

    ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗವು, ಅನಿವಾಸಿ ಭಾರತೀಯರು ಮದುವೆಯಾಗುವ ಮೋಸದ ವಿವಾಹಗಳು ಹೆಚ್ಚುತ್ತಿರುವ ಘಟನೆಯು ಆತಂಕಕಾರಿ ಪ್ರವೃತ್ತಿಯಾಗಿದೆ. ಈ ನಡುವೆ ವಿವಾಹಗಳು ಮೋಸಗೊಳಿಸುವಂತಿವೆ, ಭಾರತೀಯ ಸಂಗಾತಿಗಳನ್ನು ವಿಶೇಷವಾಗಿ ಮಹಿಳೆಯರನ್ನು ಅನಿಶ್ಚಿತ ಪರಿಸ್ಥಿತಿಗಳಲ್ಲಿ ಇರಿಸುತ್ತಿವೆ ಎಂದಿದೆ. ಇಂತಹ ಪರಿಸ್ಥಿತಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಅನಿವಾಸಿ ಭಾರತೀಯರು/ಒಸಿಐಗಳು ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲು

    ಹೊಸ ಕಾನೂನು ವಿಚ್ಛೇದನ, ಸಂಗಾತಿಯ ನಿರ್ವಹಣೆ, ಮಕ್ಕಳ ಪಾಲನೆ ಮತ್ತು ಪೋಷಣೆ, ಎನ್‌ಆರ್‌ಐಗಳು ಮತ್ತು ಒಸಿಐಗಳ ಮೇಲೆ ಸಮನ್ಸ್, ವಾರಂಟ್‌ಗಳು ಅಥವಾ ನ್ಯಾಯಾಂಗ ದಾಖಲೆಗಳನ್ನು ಪೂರೈಸುವ ನಿಬಂಧನೆಗಳನ್ನು ಒಳಗೊಂಡಿರಬೇಕು. ವೈವಾಹಿಕ ಸ್ಥಿತಿಯನ್ನು ಘೋಷಿಸುವುದು, ಸಂಗಾತಿಯ ಪಾಸ್‌ಪೋರ್ಟ್ ಅನ್ನು ಇನ್ನೊಂದಕ್ಕೆ ಲಿಂಕ್ ಮಾಡುವುದು ಮತ್ತು ಇಬ್ಬರ ಪಾಸ್‌ಪೋರ್ಟ್ಗಳಲ್ಲಿ ವಿವಾಹ ನೋಂದಣಿ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲು ಪಾಸ್‌ಪೋರ್ಟ್ ಕಾಯ್ದೆ, 1967ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಕಾನೂನು ಸಮಿತಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

    ಅದೇ ರೀತಿ ಮದುವೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ದೇಶೀಯ ನ್ಯಾಯಾಲಯಗಳು ನ್ಯಾಯವ್ಯಾಪ್ತಿಯನ್ನು ಹೊಂದಿರಬೇಕು. ವಿವಾಹಗಳಲ್ಲಿ ಉದ್ಭವಿಸುವ ವಿವಾದಗಳು ಸಾಮಾನ್ಯವಾಗಿ ವಿವಾದಗಳ ನ್ಯಾಯಯುತ ಮತ್ತು ನ್ಯಾಯಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಾನೂನು ವ್ಯವಸ್ಥೆಯ ಮಧ್ಯಪ್ರವೇಶದ ಅಗತ್ಯವಿರುತ್ತದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ

  • ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ನವದೆಹಲಿ: ಪ್ರತಿಭಟನೆ (Protest ), ಹೆದ್ದಾರಿ ತಡೆ, ಬಂದ್‌ ಇನ್ನಿತರ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾನೂನು ತಿದ್ದುಪಡಿ ಮಾಡಬೇಕು. ಪ್ರತಿಭಟನೆ ವೇಳೆ ಹಾನಿಯಾದ ಆಸ್ತಿಯ ಮೌಲ್ಯವನ್ನು ಹಾನಿಕೋರರಿಂದಲೇ ಸಂಪೂರ್ಣವಾಗಿ ವಸೂಲಿ ಮಾಡಬೇಕು. ನಂತರ ಮಾತ್ರವೇ ಜಾಮೀನು ನೀಡಬೇಕು ಎಂದು ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ (Law Commission) ಶಿಫಾರಸು ಮಾಡಿದೆ.

    ಪ್ರತಿಭಟನೆಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾದ (Public Property Damage) ಸಂದರ್ಭದಲ್ಲಿ, ಯಾರು ಪ್ರತಿಭಟನೆಯ ನೇತೃತ್ವ ವಹಿಸಿರುತ್ತಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರಿಂದಲೇ ಹಾನಿಗೊಳಗಾದ ಆಸ್ತಿ ಮೌಲ್ಯವನ್ನು ವಸೂಲಿ ಮಾಡಬೇಕು. ನಂತರ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವುದಕ್ಕೂ ಮುನ್ನ ಆಸ್ತಿಯ ಮೌಲ್ಯವನ್ನು ವಸೂಲಿ ಮಾಡಬೇಕು ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದಾಗ ಪ್ರತಿಭಟನಾಕಾರರಿಗೆ ಅಲ್ಪ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಆದರೆ, ಕಾನೂನು ಆಯೋಗವು ಜಾಮೀನು ನೀಡುವಾಗಲೇ ದಂಡದ ಮೊತ್ತ ವಸೂಲಿ ಮಾಡಬೇಕು ಎಂದು ಹೇಳಿದೆ. ಅದೂ ಕೂಡಾ ಸಾರ್ವಜನಿಕ ಆಸ್ತಿ ಪಾಸ್ತಿಯ ಮಾರುಕಟ್ಟೆ ಮೌಲ್ಯದಷ್ಟೇ ಹಣವನ್ನು ದಂಡದ ರೂಪದಲ್ಲಿ ಭರಿಸಬೇಕಾಗುತ್ತದೆ. ಕೆಲವು ಸ್ವತ್ತುಗಳ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಸಾಧ್ಯ ಆಗೋದಿಲ್ಲ. ಆಗ ನ್ಯಾಯಾಲಯವೇ ಸೂಕ್ತ ಮೊತ್ತ ನಿರ್ಧರಿಸಬೇಕಾಗುತ್ತದೆ ಎಂದು ಕಾನೂನು ಆಯೋಗ ಹೇಳಿದೆ.

    ಇದಕ್ಕಾಗಿ ಸರ್ಕಾರ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಾನೂನು ಆಯೋಗ ಹೇಳಿದೆ. ಕೇರಳ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿ ಇರುವ ಕಾನೂನನ್ನೂ ಉಲ್ಲೇಖಿಸಿದೆ. ಕೇರಳ ರಾಜ್ಯದಲ್ಲಿ ಖಾಸಗಿ ಸ್ವತ್ತುಗಳ ಹಾನಿ ತಡೆ ಕಾಯ್ದೆ ಜಾರಿಯಲ್ಲಿದೆ. ಜೊತೆಯಲ್ಲೇ ಪರಿಹಾರ ಕಾಯ್ದೆ ಕೂಡಾ ಇದೆ. ಇಂಥದ್ದೇ ಕಾನೂನನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ತರಬೇಕು ಎಂದು ಕಾನೂನು ಆಯೋಗ ಹೇಳಿದೆ. ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕೆ ಶುಕ್ರವಾರ ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ: ಮುತಾಲಿಕ್ ಆರೋಪ

    ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಇಂತಹ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಒಲವು ತೋರಿತ್ತು. ಆದ್ರೆ ಸಾಧ್ಯವಾಗಿರಲಿಲ್ಲ. ನಂತರ ಕೆಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಕೆಲ ಹೈಕೋರ್ಟ್‌ಗಳು ಇಂತಹ ಘಟನೆ ತಡೆಯಲು ಇಂತಹ ನಿದರ್ಶನಗಳನ್ನು ನೀಡಿದ್ದವು. ಇದೀಗ ಕಾನೂನು ಆಯೋಗವೇ ಕಾಯ್ದೆ ಬಗ್ಗೆ ಶಿಫಾರಸು ಮಾಡಿದೆ.

  • ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಸಿಸಿಐ – ಕೇಂದ್ರ ಕಾನೂನು ಆಯೋಗ ಶಿಫಾರಸು

    ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಸಿಸಿಐ – ಕೇಂದ್ರ ಕಾನೂನು ಆಯೋಗ ಶಿಫಾರಸು

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ (ಆರ್‌ಟಿಐ) ತರಲು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಈ ಕುರಿತು ಬುಧವಾರ ಕಾನೂನು ಆಯೋಗ ತನ್ನ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ತನ್ನ ವರದಿಯಲ್ಲಿ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ಕಾಯ್ದೆ ಆಡಿ ಬರುತ್ತಿದ್ದು, ಬಿಸಿಸಿಐ ಇದರ ಅಡಿ ಬರಲು ಸಾಧ್ಯವಿಲ್ಲ ಯಾಕೆ ಎಂದು ಪ್ರಶ್ನಿಸಿದೆ? ಅಷ್ಟೇ ಅಲ್ಲದೇ ಕಾಯ್ದೆಯ 12 ವಿಧಿಯ ಪ್ರಕಾರ ಬಿಸಿಸಿಐ ಸಂಸ್ಥೆಯನ್ನು ತರಲು ಶಿಫಾರಸ್ಸು ಮಾಡಿದೆ.

    ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆಯಾದರು ಸಹ ಆದರ ಅಡಿ ರಾಜ್ಯ ಸಂಸ್ಥೆಗಳನ್ನು ಒಳಗೊಂಡಂತೆ ಎಲ್ಲಾ ಸಂಸ್ಥೆಗಳು ಸಹ ಆರ್ ಟಿಐ ಕಾಯ್ದೆ ಅಡಿ ಬರಲು ತಿಳಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಕಾನೂನು ಆಯೋಗದ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿದರೆ ಸಾಮಾನ್ಯ ವ್ಯಕ್ತಿಯು ಸಹ ಆರ್ ಟಿಐ ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಬಿಸಿಸಿಐ ಸಂಸ್ಥೆ ಇತರೇ ಕ್ರಿಕೆಟ್ ಆಡುವ ರಾಷ್ಟ್ರಗಳು ಹಾಗೂ ಐಸಿಸಿ ಸಂಸ್ಥೆ ನಡುವೆ ಮಾಡಿಕೊಂಡಿರುವ ಒಪ್ಪಂದ ಕುರಿತು ಸಹ ಮಾಹಿತಿ ಪಡೆಯಬಹುದು.

    2016ರ ಜುಲೈ ನಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಸಂಸ್ಥೆಯನ್ನು ಆರ್ ಟಿಐ ಕಾಯ್ದೆ ಅಡಿ ತರಲು ಇರುವ ಕಾನೂನು ಅಂಶಗಳ ಕುರಿತು ವರದಿ ಸಲ್ಲಿಸುವಂತೆ ಕಾನೂನು ಆಯೋಗಕ್ಕೆ ಸೂಚಿಸಿತ್ತು. ಇದರ ಹಿನ್ನೆಲೆ ಕಾನೂನು ಆಯೋಗ ವರದಿಯನ್ನು ಸಲ್ಲಿಸಿದೆ. ಮತ್ತೊಂದು ವಿಶ್ಲೇಷಣೆ ಪ್ರಕಾರ ಈ ಶಿಫಾರಸ್ಸಿನ ಅನ್ವಯ ಬಿಸಿಸಿಐ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲು ಅವಕಾಶ ಲಭಿಸುತ್ತದೆ ಎನ್ನಲಾಗಿದೆ. ಈಗಾಗಲೇ ಪಾಕಿಸ್ತಾನ ಜೊತೆಗಿನ ಸರಣಿ ಆಯೋಜನೆ ವಿಚಾರದಲ್ಲಿ ಭಾರತ ವಿದೇಶಾಂಗ ನೀತಿಯೊಂದಿಗೆ ಬಿಸಿಸಿಐ ಅನುಮತಿ ಪಡೆಯವುದು ಕಡ್ಡಾಯವಾಗಿದೆ.

    ಕಾನೂನು ಆಯೋಗ ತನ್ನ ಶಿಫಾರಸ್ಸಿಗೆ ಸಾಕಷ್ಟು ಪೂರಕ ಅಂಶಗಳನ್ನು ನೀಡಿದ್ದು. ಬಿಸಿಸಿಐ 1997 ರಿಂದ ತೆರಿಗೆ ಪಾವತಿಸುವಲ್ಲಿ ಸರ್ಕಾರದಿಂದ ರಿಯಾಯಿತಿ ಪಡೆದಿದೆ. ಅಲ್ಲದೇ ಆಟಗಾರರು ಭಾರತ ತ್ರಿವರ್ಣ ಹಾಗೂ ಆಶೋಕ ಚಕ್ರ ಚಿಹ್ನೆಯನ್ನು ಬಳಕೆ ಮಾಡುವುದನ್ನು ಉಲ್ಲೇಖಿಸಿದೆ.

    ಕೇಂದ್ರ ಸರ್ಕಾರ ಈಗಾಗಲೇ ಬಿಸಿಸಿಐ ಸಂಸ್ಥೆಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಅಡಿ ಬರುವ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿತ್ತು. ಭಾರತ ಇತರೇ ಎಲ್ಲಾ ಕ್ರೀಡಾ ಸಂಸ್ಥೆಗಳು ರಾಷ್ಟ್ರೀಯ ಕ್ರೀಡಾ ಫೆಡರೇಷನ್(ಎನ್‍ಎಸ್‍ಎಫ್) ಅಡಿ ಕಾರ್ಯನಿರ್ವಹಿಸುತ್ತಿದೆ.