Tag: Law and Order

  • ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು

    ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು

    ರಾಂಚಿ: ಮಾವಿನ ಹಣ್ಣುಗಳನ್ನು (Mangoes) ಕೀಳುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸಹೋದರರಿಬ್ಬರು ಕೊಲೆಗೀಡಾದ ಘಟನೆ ಜಾರ್ಖಂಡ್‌ನ (Jharkhand) ಪಾಕುರ್‌ನಲ್ಲಿ ನಡೆದಿದೆ.

    ಮೃತರನ್ನು ಡೇವಿಧನ್ ಮುರ್ಮು ಮತ್ತು ವಕೀಲ ಮುರ್ಮು ಎಂದು ಗುರುತಿಸಲಾಗಿದೆ. ಗಣೇಶಪುರ ಗ್ರಾಮದಲ್ಲಿ ರಾತ್ರಿ ಹಣ್ಣನ್ನು ಕೀಳುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದು, ಇಬ್ಬರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ ವ್ಯಕ್ತಿಗೆ ಚಾಕು ಇರಿತ – 10 ದಿನಗಳ ಕಾಲ ಒದ್ದಾಡಿ ಪ್ರಾಣಬಿಟ್ಟ

    ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಗಲಾಟೆಯಲ್ಲಿ ಭಾಗಿಯಾದ ಹೆಚ್ಚಿನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ. ಅಲ್ಲದೇ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ (Law And Order) ಕಾಪಾಡಲು ಪೊಲೀಸರನ್ನು (Police) ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್

  • ಬಾಲಚಂದ್ರ ಜಾರಕಿಹೊಳಿ ಬದಲು ಆಪ್ತ ಕಾರ್ಯದರ್ಶಿಗಳಿಂದ ಕಾಮಗಾರಿ ಉದ್ಘಾಟನೆ : ಕಾಂಗ್ರೆಸ್

    ಬಾಲಚಂದ್ರ ಜಾರಕಿಹೊಳಿ ಬದಲು ಆಪ್ತ ಕಾರ್ಯದರ್ಶಿಗಳಿಂದ ಕಾಮಗಾರಿ ಉದ್ಘಾಟನೆ : ಕಾಂಗ್ರೆಸ್

    ಬೆಳಗಾವಿ: ‘ಅರಭಾವಿ ಕ್ಷೇತ್ರದಲ್ಲಿ ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ಶಾಸಕರ ಬದಲಿಗೆ, ಅವರ ಆಪ್ತ ಕಾರ್ಯದರ್ಶಿಗಳೇ ಉದ್ಘಾಟಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುತ್ತದೆ. ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಒತ್ತಾಯಿಸಿದರು.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಶಾಸಕ ಬಾಲಚಂದ್ರ ಜಾರಕಿಹೊಳಿ ಆರು ಆಪ್ತ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ವಿವಿಧ ಯೋಜನೆಗಳಡಿ ನಿರ್ಮಿಸಿದ ಕಟ್ಟಡಗಳನ್ನು ಅವರೇ ಉದ್ಘಾಟಿಸುತ್ತಿದ್ದಾರೆ. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಸಕರು ಕಾಣೆಯಾಗಿದ್ದಾರೆ. ಆಪ್ತ ಕಾರ್ಯದರ್ಶಿಗಳು ಎಲ್ಲ ಕೆಲಸ ಮಾಡುವುದಾದರೆ ಶಾಸಕರಾದರೂ ಏಕೆ ಬೇಕು?’ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    ‘ಜನಪ್ರತಿನಿಧಿಗಳ ಬದಲಿಗೆ ಬೇರೆಯವರು ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿ ಸರ್ಕಾರಿ ನಿಯಮ ಉಲ್ಲಂಘಿಸಿದ್ದಾರೆ. ಜಿಲ್ಲಾಧಿಕಾರಿಗಳು ಇದಕ್ಕೆ ಸ್ಪಷ್ಟನೆ ನೀಡಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲು ನಾವೂ ಸಿದ್ಧರಿದ್ದೇವೆ. ನಮಗೂ ಅವಕಾಶ ನೀಡಬೇಕು’ ಎಂದು ತಿಳಿಸಿದರು. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

    ‘ಅರಭಾವಿ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಗಮನಸೆಳೆಯಲು ಡಿಸಿ ಕಚೇರಿ ಎದುರು ಪ್ರತಿಭಟಿಸಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಎದುರು ಧರಣಿ ನಡೆಸಲಾಗುವುದು. ಪ್ರಧಾನಿಗೆ ದೂರು ನೀಡಲಾಗುವುದು’ ಎಂದರು.

    ಮುಖಂಡ ರಮೇಶ್ ಉಟಗಿ ಮಾತನಾಡಿ, ‘ಶಾಸಕರಿಗೆ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ. ಹೊಸದಾಗಿ ರಚನೆಯಾದ ಮೂಡಲಗಿ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳೂ ಇನ್ನೂ ಆರಂಭಗೊಂಡಿಲ್ಲ. ನಿರೀಕ್ಷಿತ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಪ್ತ ಕಾರ್ಯದರ್ಶಿಗಳೇ ಆಯ್ಕೆ ಮಾಡುತ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಮೂಡಲಗಿ ಪರಿಸ್ಥಿತಿ ಬಿಹಾರಕ್ಕಿಂತಲೂ ಕಡೆಯಾಗಲಿದೆ’ ಎಂದರು.

  • ಮೂರು ಮದ್ವೆಯಾದವನ ವಿರುದ್ಧ ದೂರು ದಾಖಲಿಸಿದ ಮಹಿಳಾ ಸಂಘಟನೆ-ಕ್ರಮಕೈಗೊಳ್ಳದ ಪೊಲೀಸರ ಕ್ರಮಕ್ಕೆ ಆಕ್ರೋಶ

    ಮೂರು ಮದ್ವೆಯಾದವನ ವಿರುದ್ಧ ದೂರು ದಾಖಲಿಸಿದ ಮಹಿಳಾ ಸಂಘಟನೆ-ಕ್ರಮಕೈಗೊಳ್ಳದ ಪೊಲೀಸರ ಕ್ರಮಕ್ಕೆ ಆಕ್ರೋಶ

    ರಾಮನಗರ: ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸ್ ರ ಕ್ರಮವನ್ನು ಖಂಡಿಸಿ ಸ್ವರಾಜ್ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಡಿವೈಎಸ್ಪಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ವ್ಯಕ್ತಿಯೋರ್ವ ಮೂರು ಮದುವೆಯಾಗಿದ್ದರು. ಈ ವಿಚಾರವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರು ಚುನಾವಣೆ ಕರ್ತವ್ಯದಲ್ಲಿದ್ದರಿಂದ ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಆದರೆ ಚುನಾವಣೆ ಮುಗಿದು ಇಷ್ಟು ದಿನಗಳು ಕಳೆದರೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‍ಐ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ.

    ದೂರನ್ನು ಪಡೆದರೂ ಎಫ್‍ಐಆರ್ ದಾಖಲಿಸಿಲ್ಲ. ಮೂರು ಮದುವೆಯಾದ ವ್ಯಕ್ತಿ ಮಾತ್ರ ನಿರ್ಭಯವಾಗಿ ಓಡಾಡಿಕೊಂಡಿದ್ದಾನೆ. ಇದು ಹೀಗೆ ಮುಂದುವರಿದರೆ ಸಮಾಜದಲ್ಲಿ ಇದು ಇತರರ ಮೇಲೆ ಪರಿಣಾಮ ಬೀರಬಹುದು. ದೂರು ದಾಖಲಿಸಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ಚನ್ನಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪೊಲೀಸರ ಸೇವೆ ರಾಜಕೀಯ ವ್ಯಕ್ತಿಗಳಿಗೆ ಸೀಮಿತವಾಗಿದೆ ಎಂದು ಆರೋಪಿಸಿ, ಮಧ್ಯರಾತ್ರಿಯವರೆಗೆ ಡಿವೈಎಸ್ಪಿ ಕಚೇರಿ ಬಾಗಿಲಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಆದರೆ ಈ ಕುರಿತಂತೆ ಮೂರು ಮದುವೆಯಾದ ವ್ಯಕ್ತಿಯ ಯಾವ ಪತ್ನಿಯರಿಂದಲೂ ಇದೂವರೆಗೂ ಯವುದೇ ದೂರು ದಾಖಲಾಗಿಲ್ಲ. ಆತ ಮೂವರೂ ಪತ್ನಿಯರೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೂ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

    ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕ್ಷೇತ್ರದಲ್ಲಿಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ಕೂಡಲೇ ಅದನ್ನು ಸರಿಪಡಿಸುವಂತೆ ಪ್ರತಿಭಟನಾ ನಿರತರು ಸಿಎಂ ಎಚ್ ಡಿ ಕುಮಾರಸ್ವಾಮಿಯವರಿಗೂ ಕೂಡ ಮನವಿ ಮಾಡಿದ್ದಾರೆ.