Tag: lavanya

  • ಮದುವೆ ವಿಡಿಯೋ ಮಾರಿಕೊಂಡಿಲ್ಲ : ವರುಣ್ ತೇಜ್ ಸ್ಪಷ್ಟನೆ

    ಮದುವೆ ವಿಡಿಯೋ ಮಾರಿಕೊಂಡಿಲ್ಲ : ವರುಣ್ ತೇಜ್ ಸ್ಪಷ್ಟನೆ

    ಮೆಗಾ ಫ್ಯಾಮಿಲಿಯ ಮದುವೆ ವಿಡಿಯೋವನ್ನು (Video) ಬರೋಬ್ಬರಿ 8 ಕೋಟಿ ರೂಪಾಯಿಗೆ ಒಟಿಟಿಗೆ ಮಾರಾಲಾಗಿದೆ ಎನ್ನುವ ಸುದ್ದಿ ಬುಸುಗುಟ್ಟಿತ್ತು. ವರುಣ್ ತೇಜ್ ಮತ್ತು ಲಾವಣ್ಯ ಮದುವೆ ವಿಡಿಯೋ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಯನ್ನು ವರುಣ್ ತೇಜ್ ಅಲ್ಲಗಳೆದಿದ್ದಾರೆ. ತಾವು ಯಾರಿಗೂ ವಿಡಿಯೋವನ್ನು ಮಾರಿಕೊಂಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

    ನಮ್ಮ ಮದುವೆ ವಿಡಿಯೋವನ್ನು ಯಾವುದೇ ಸಂಸ್ಥೆಗೆ ನಾವು ಮಾರಿಕೊಂಡಿಲ್ಲ. ದಯವಿಟ್ಟು ಸುಳ್ಳು ಸುದ್ದಿಯನ್ನು ನಂಬಬೇಡಿ ಮತ್ತು ಹರಡಬೇಡಿ ಎಂದು ವರುಣ್ ತೇಜ್ ಹೇಳಿಕೊಂಡಿದ್ದಾರೆ. ಈ ಮೂಲಕ ಎದ್ದಿರುವ ಸುದ್ದಿಯನ್ನು ತಣ್ಣಗೆ ಮಾಡಿದ್ದಾರೆ. ಈ ಹಿಂದೆ ನಯನತಾರಾ ಮತ್ತು ದೀಪಿಕಾ ಪಡುಕೋಣೆ ತಮ್ಮ ಮದುವೆ ವಿಡಿಯೋಗಳನ್ನು ಒಟಿಟಿಗೆ ಮಾರಿಕೊಂಡಿದ್ದರು. ಹಾಗಾಗಿ ವರುಣ್ ಕೂಡ ಹಾಗೆಯೇ ಮಾಡಿದ್ದಾರೆ ಎಂದು ಹೇಳಲಾಗಿತ್ತು.

    ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಜೋಡಿ ನವೆಂಬರ್ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯಲ್ಲಿ ಅದ್ದೂರಿಯಾಗಿ ಪ್ರೇಮ ಪಕ್ಷಿಗಳು ಮದುವೆಯಾಗಿದ್ದರು. ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ, ವಿಡಿಯೋ ಮಾತ್ರ ಆಚೆ ಬಂದಿರಲಿಲ್ಲ. ಹಾಗಾಗಿ ವಿಡಿಯೋ ಮಾರಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

    ಐದಾರು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದೆ ಈ ಜೋಡಿ. ಕೆಂಪು ಬಣ್ಣದ ಸೀರೆಯಲ್ಲಿ ಲಾವಣ್ಯ ಮಿಂಚಿದ್ರೆ, ಲೈಟ್ ಬಣ್ಣದ ಶೆರ್ವಾನಿಯಲ್ಲಿ ವರುಣ್ (Varun Tej) ಹೈಲೆಟ್ ಆಗಿದ್ದಾರೆ. ಅಲ್ಲದೇ, ಮೂರು ದಿನಗಳ ಕಾಲ ಮದುವೆಯ ಕಾರ್ಯಕ್ರಮಗಳನ್ನು ಇಟಲಿಯಲ್ಲೇ ನಡೆದಿದ್ದವು. ಎಲ್ಲವನ್ನೂ ಸುಂದರವಾಗಿ ವಿಡಿಯೋಗ್ರಫಿ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.‌

     

    ವರುಣ್ ಮದುವೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ‌, ಅಲ್ಲು ಅರ್ಜುನ್, ರಾಮ್ ಚರಣ್, ಸಾಯಿ ಧರಂ ತೇಜ್, ಪವನ್ ಕಲ್ಯಾಣ್, ಅಲ್ಲು ಸಿರೀಶ್ ಸೇರಿದಂತೆ ಇಡೀ ಮೆಗಾ ಫ್ಯಾಮಿಲಿ ಭಾಗಿಯಾಗಿತ್ತು. ‘ಮಿಸ್ಟರ್’ ಸಿನಿಮಾ ಚಿತ್ರೀಕರಣಕ್ಕಾಗಿ ಇಟಲಿಯಲ್ಲಿ ಮೊದಲು ಭೇಟಿಯಾಗಿದ್ದ ಈ ಜೋಡಿ, ಇದೀಗ ಇಲ್ಲಿಯೇ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ಇಟಲಿಯಲ್ಲಿಯೇ ಹನಿಮೂನ್‌ಗೂ ಪ್ಲ್ಯಾನ್ ಮಾಡಿದ್ದಾರೆ.

  • ಆಗಸ್ಟ್ 24ಕ್ಕೆ ಇಟಲಿಯಲ್ಲಿ ವರುಣ್-ಲಾವಣ್ಯ ಮ್ಯಾರೇಜ್

    ಆಗಸ್ಟ್ 24ಕ್ಕೆ ಇಟಲಿಯಲ್ಲಿ ವರುಣ್-ಲಾವಣ್ಯ ಮ್ಯಾರೇಜ್

    ಟಾಲಿವುಡ್ ಹೆಸರಾಂತ ನಟ ವರುಣ್ ತೇಜ್ (Varun Tej) ಹಾಗೂ ಬಹುಕಾಲದ ಗೆಳತಿ ಲಾವಣ್ಯ (Lavanya) ಮದುವೆ (Marriage) ಆಗಸ್ಟ್ 24 ರಂದು ಇಟಲಿಯಲ್ಲಿ (Italy) ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇಟಲಿಯ ಸುಂದರವಾದ ಸ್ಥಳವನ್ನು ಈಗಾಗಲೇ ಗೊತ್ತು ಮಾಡಲಾಗಿದ್ದು, ಕುಟುಂಬಸ್ಥರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಮೊನ್ನೆಯಷ್ಟೇ ವರುಣ್ ಭಾವಿ ಪತ್ನಿಯ ಮನೆಗೆ ಕಾಫಿಗೆ ಹೋಗಿದ್ದರು. ಅಲ್ಲಷ್ಟು ವಿಷಯಗಳ ವಿನಿಮಯವಾಗಿವೆ.

    ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತುವ ಮೂಲಕ ಲಾವಣ್ಯ- ವರುಣ್ ತೇಜ್ ಎಂಗೇಜ್ ಆಗಿದ್ದರು. ಈಗ ಈ ಲವ್ ಬರ್ಡ್ಸ್ ಫಾರಿನ್‌ಗೆ ಹಾರಿದ್ದಾರೆ. ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ಕಾಫಿ ಡೇಟ್ ಮಾಡ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ವೇಕೆಷನ್‌ಗೆ ವರುಣ್ ಸಹೋದರಿ ನಿಹಾರಿಕಾ ಕೂಡ ಸಾಥ್ ನೀಡಿದ್ದಾರೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು `ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂ’ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

     

    ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜೂನ್ 9ಕ್ಕೆ ವರುಣ್ ತೇಜ್- ಲಾವಣ್ಯ(Lavanya) ಎಂಗೇಜ್‌ಮೆಂಟ್ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರಿಗಷ್ಟೇ ಇದ್ದ ಆಹ್ವಾನದಲ್ಲಿ ನಟ ಚಿರಂಜೀವಿ ಅವರ ಅಳಿಯ ಚೈತನ್ಯ ಜಿವಿ ಗೈರಾಗಿದ್ದು, ನಿಹಾರಿಕಾ(Niharika) ಡಿವೋರ್ಸ್ (Divorce) ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ಪ್ರೀತಿಯ ಬಗ್ಗೆ ಎಲ್ಲೂ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ವರುಣ್-ಲಾವಣ್ಯ ಅವರ ಎಂಗೇಜ್‌ಮೆಂಟ್‌ನಲ್ಲಿ ನಿಹಾರಿಕಾ ಪತಿ ಚೈತನ್ಯ ಗೈರಾಗಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಈ ದಿನಕ್ಕಾಗಿ ಕಾಯುತ್ತಿದ್ದೆ, ನನ್ನ ಕುಟುಂಬಕ್ಕೆ ಸ್ವಾಗತ ಅಂತಾ ಸಹೋದರ ವರುಣ್ (Varun Tej) ಮತ್ತು ಭಾವಿ ಅತ್ತಿಗೆ ಜೊತೆ ಖುಷಿಯಿಂದ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ನಿಹಾರಿಕಾ ಪೋಸ್ಟ್‌ ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡ್ತಿದ್ದಂತೆ ಚೈತನ್ಯ ಎಲ್ಲಿ ಎಂದು ನಟಿ ಕಾಮೆಂಟ್ಸ್‌ಗಳ ಮೂಲಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

    ವರುಣ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರೋದು ನಿಹಾರಿಕಾ ಜೊತೆಗಿನ ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೂಲಗಳ ಪ್ರಕಾರ, ನಿಹಾರಿಕಾ- ಚೈತನ್ಯ (Chaitanya) ಡಿವೋರ್ಸ್ ಪಡೆದಿರುವುದು ನಿಜ. ಹಾಗಾಗಿ ಇದೀಗ ನಿಹಾರಿಕಾ, ಆಕ್ಟಿಂಗ್-ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಕ್ಕಳಾದ ಶ್ರೀಜಾ, ನಿಹಾರಿಕಾ ಡಿವೋರ್ಸ್ ವಿಚಾರ ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿದೆ.

  • ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದ `ದಾಸಪುರಂದರ’ ನಟಿ ಲಾವಣ್ಯ

    ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದ `ದಾಸಪುರಂದರ’ ನಟಿ ಲಾವಣ್ಯ

    ಕಿರುತೆರೆ ಲೋಕದಲ್ಲಿ ಸಾಲು ಸಾಲು ಕಲಾವಿದರು ಹಸೆಮಣೆ ಏರುತ್ತಿದ್ದಾರೆ. ಇತ್ತೀಚೆಗಷ್ಟೇ `ನಾಗಿಣಿ 2′ ಖ್ಯಾತಿಯ ನಿನಾದ್ ಕೂಡ ಅದ್ದೂರಿಯಾಗಿ ಮದುವೆ ಆಗಿದ್ದರು. ಈಗ `ರಾಜ ರಾಣಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ನಟ ಶಶಿ ಹೆಗ್ಡೆ ಮತ್ತು ಲಾವಣ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಖಾಸಗಿ ವಾಹಿನಿಯ `ದಾಸಪುರಂದರ’ ಸೀರಿಯಲ್‌ನ ಪದ್ಮಾ ಪಾತ್ರಧಾರಿ ಲಾವಣ್ಯ, ನಟ ಶಶಿ ಹೆಗ್ಡೆ ಅವರನ್ನು ವಿವಾಹವಾಗಿದ್ದಾರೆ. ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ರಾಜ ರಾಣಿಯಿಂದ ಪರಿಚಯವಾದ ಸ್ನೇಹಿತರಾಗಿದ್ದ ಶಶಿ ಮತ್ತು ಲಾವಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷಗಳ ಪ್ರೀತಿಯ ಪಯಣದ ನಂತರ ಹಸೆಮಣೆ ಏರಿದ್ದಾರೆ.

    ಇಬ್ಬರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ವೈರಲ್ ಆಗಿದೆ ಫೋಟೋಗಳನ್ನು ಸೇರ್ ಮಾಡಿ ನಟ ಶಶಿ ಸಾಮಾಜಿಕ ಜಾಲತಾಣದಲ್ಲಿ `ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿದೆ. ನಮ್ಮ ಮನೆಯ ಅರಸಿ, ನೀವೆಲ್ಲರೂ ನಮಗೆ ಹರಸಿ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

     

    View this post on Instagram

     

    A post shared by Shashi Hegde (@shashi_hegde_official)

    ಇನ್ನು ಕಿರುತೆರೆಯ ಮತ್ತೋರ್ವ ನಟ ವಿಜಯ್ ಕುಮಾರ್ ಕೂಡ ಸರಳವಾಗಿ ಮದುವೆ ಆಗಿದ್ದಾರೆ. ಟಿವಿ ಲೋಕದ ಜನಪ್ರಿಯ ಧಾರಾವಾಹಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ರಾಮು ಕೂಡ ಹಸೆಮಣೆ ಏರಿದ್ದಾರೆ.