Tag: Lausanne Diamond League

  • ಡೈಮಂಡ್ ಲೀಗ್ – ಎರಡನೇ ಸ್ಥಾನ ಪಡೆದ ನೀರಜ್ ಚೋಪ್ರಾ

    ಡೈಮಂಡ್ ಲೀಗ್ – ಎರಡನೇ ಸ್ಥಾನ ಪಡೆದ ನೀರಜ್ ಚೋಪ್ರಾ

    ಲೌಸನ್ನೆ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics) ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

    ಗುರುವಾರ ಸ್ವಿಜ್ಜರ್‌ಲ್ಯಾಂಡ್‌ನ ಲೌಸನ್ನೆ ಡೈಮಂಡ್ ಲೀಗ್ (Lausanne Diamond League) 2024 ರಲ್ಲಿ ಜಾವೆಲಿನ್ ಎಸೆತ (Javelin Throw)ಸ್ಪರ್ಧೆಯಲ್ಲಿ 89.49ಮೀ. ಎಸೆಯುವ ಮೂಲಕ ಸೀಸನ್‌ನ ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ.

    ಗ್ರೇನಡಾದ ಆಂಡರ್ಸನ್ ಪೀಟರ್ಸ್ (Anderson Peters) 90.61ಮೀ., ನೀರಜ್ ಚೋಪ್ರಾ 89.49ಮೀ., ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡರು.ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

    ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10ಮೀ. ದೂರ ಎಸೆದರು. ತಮ್ಮ ಮೊದಲ ನಾಲ್ಕು ಪ್ರಯತ್ನದವರೆಗೂ ಚೋಪ್ರಾ ಮೊದಲ ಮೂರು ಸ್ಥಾನಗಳಿಂದ ಹೊರಗುಳಿದ್ದರು. ಪೀಟರ್ಸ್ ತಮ್ಮ ಕೊನೆಯ ಪ್ರಯತ್ನದಲ್ಲಿ 90.61 ಮೀ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.

    ಚೋಪ್ರಾ ತನ್ನ ಐದನೇ ಪ್ರಯತ್ನದಲ್ಲಿ 85.58ಮೀ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ಮರಳಿದರು. ನಂತರ ತಮ್ಮ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ 89.49ಮೀ ಎಸೆಯುವ ಮೂಲಕ ಸೀಸನ್‌ನ ಎರಡನೇ ಸ್ಥಾನವನ್ನು ಪಡೆದುಕೊಂಡರು ಮತ್ತು ಸೀಸನ್‌ನ ಅತ್ಯುತ್ತಮ ಎಸೆತವನ್ನು ನಿರ್ಮಿಸಿದರು.ಇದನ್ನೂ ಓದಿ: ಮೊದಲ ಟೆಸ್ಟ್‌ನಲ್ಲೇ 41 ವರ್ಷದ ದಾಖಲೆ ಉಡೀಸ್‌ – 9ನೇ ಕ್ರಮಾಂಕದಲ್ಲಿ ಲಂಕಾ ಆಟಗಾರನ ಸಾಧನೆ

    ಲೌಸನ್ನೆ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಪಡೆಯುವ ಮೂಲಕ ಸೆಪ್ಟೆಂಬರ್‌ನಲ್ಲಿ ಬ್ರಸೆಲ್ಸ್ನಲ್ಲಿ ನಡೆಯಲಿರುವ ಈವೆಂಟ್‌ನ ಫೈನಲ್‌ನಲ್ಲಿ ಅಗ್ರ ಆರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಖಾತರಿಪಡಿಸಿಕೊಂಡಿದ್ದಾರೆ.

    ಮೊದಲ ಸ್ಥಾನ ಪಡೆದಿದ್ದ ಆಂಡರ್ಸನ್ ಪೀಟರ್ಸ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೂರನೇ ಸ್ಥಾನ ಪಡೆದರೆ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು.

  • Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

    Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

    ಬರ್ರೆನ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Olympics) ಚಿನ್ನಗೆದ್ದು ಭಾರತದ ಕೀರ್ತಿಪತಾಕೆ ಹಾರಿಸಿದ್ದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಲಾಸೆನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ್ದಾರೆ.

    ಒಲಿಂಪಿಕ್ಸ್‌ ಬಳಿಕ ಅದ್ಭುತ ಫಾರ್ಮ್‌ ಮುಂದುವರಿಸಿರುವ ನೀರಜ್‌ ಪ್ರತಿಷ್ಠಿತ ಡೈಮಂಡ್‌ ಲೀಗ್ (Lausanne Diamond League) ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಹಿಂದೆ ದೋಹಾ ಡೈಮಂಡ್ ಲೀಗ್‌ನಲ್ಲಿ ಗೆದ್ದಿದ್ದ ನೀರಜ್ ಚೋಪ್ರಾ, ಡೈಮಂಡ್‌ ಲೀಗ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    ಗಾಯದ ಸಮಸ್ಯೆಯಿಂದ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳದೇ ವಿಶ್ರಾಂತಿಯಲ್ಲಿದ್ದ ನೀರಜ್‌ ಇದೀಗ ಡೈಮಂಡ್‌ ಲೀಗ್‌ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ಹೌದು.. ಸ್ನಾಯು ಸೆಳೆತ ಕಾರಣದಿಂದಾಗಿ ಕಳೆದ ಜೂನ್ 4ರಂದು ನೆದರ್‌ಲ್ಯಾಂಡ್ಸ್‌ನ ಹೆಂಗೆಲೋದಲ್ಲಿ ನಡೆದ ಎಫ್‌ಬಿಕೆ ಗೇಮ್ಸ್ ಮತ್ತು ಜೂನ್ 13ರಂದು ಫಿನ್‌ಲ್ಯಾಂಡ್‌ನ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಿಂದಲೂ ಅವರು ಹೊರಗುಳಿಯಬೇಕಾಗಿತ್ತು.

    ಇದೀಗ ಸ್ವಿಡ್ಜರ್‌ಲ್ಯಾಂಡ್‌ನ ಲೌಸನ್ನೆಯಲ್ಲಿ ನಡೆದ ಲೀಗ್‌ ಫೈನಲ್‌ನಲ್ಲಿ 87.66 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದ (Javelin Throw) ನೀರಜ್‌, ಅಗ್ರಸ್ಥಾನದೊಂದಿಗೆ ಆಟ ಮುಗಿಸಿದ್ದಾರೆ. ನೀರಜ್ ಮೊದಲ ಪ್ರಯತ್ನದಲ್ಲೇ ಫೌಲ್‌ ಮಾಡಿದರು. 2ನೇ ಪ್ರಯತ್ನದಲ್ಲಿ 83.52 ಮೀಟರ್ ದೂರ ಜಾವೆಲಿನ್ ಎಸೆದರು. 3ನೇ ಪ್ರಯತ್ನದಲ್ಲಿ 85.04 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿದರೆ, ನಾಲ್ಕನೇ ಪ್ರಯತ್ನದಲ್ಲಿ ಮತ್ತೆ ಫೌಲ್‌ ಮಾಡಿದರು. ಆದರೆ 5ನೇ ಪ್ರಯತ್ನದಲ್ಲಿ ನೀರಜ್ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಅಗ್ರಸ್ಥಾನ ಕಾಯ್ದುಕೊಂಡರು.

    ಜರ್ಮನಿಯ ಜೂಲಿಯನ್ ವೆಬರ್ ಮತ್ತು ಜಕುಬ್ ವಡ್ಲೆಜ್ ತಮ್ಮ ಅಂತಿಮ ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀ ಹಾಗೂ 86.13 ಮೀ ದಾಖಲಿಸಿ 2 ಮತ್ತು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

    ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್ ಲೀಗ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 89.04 ಮೀ. ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ನೀರಜ್ ಪಾತ್ರರಾಗಿದ್ದರು. ‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]