Tag: Launch

  • 4,999ಕ್ಕೆ 4,000 ಎಂಎಎಚ್ ಬ್ಯಾಟರಿ, 4ಜಿ ಡ್ಯುಯಲ್ ಸಿಮ್ ಫೋನ್ ಲಭ್ಯ

    4,999ಕ್ಕೆ 4,000 ಎಂಎಎಚ್ ಬ್ಯಾಟರಿ, 4ಜಿ ಡ್ಯುಯಲ್ ಸಿಮ್ ಫೋನ್ ಲಭ್ಯ

    ನವದೆಹಲಿ: ಇಂಟೆಕ್ಸ್ ಕಂಪೆನಿಯು 4,999 ರೂ.ಗೆ ಇಂಡೋ-5 ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಆಂಡ್ರಾಯ್ಡ್ ನೂಗಟ್ ಓಎಸ್ ಹೊಂದಿರುವ ಫೋನ್ ಆಫ್‍ಲೈನ್ ಮತ್ತು ಆನ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿರಲಿದೆ.

    ಇಂಟೆಕ್ಸ್ ಇಂಡೋ-5 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 146.4 x 72.2 x 10.1 ಮಿ.ಮೀ., 162 ಗ್ರಾಂ ತೂಕ, ಡ್ಯುಯಲ್ ಸಿಮ್(ಮೈಕ್ರೋ ಸಿಮ್) 5 ಇಂಚಿನ ಐಪಿಸಿ ಎಲ್‍ಸಿಡಿ ಡ್ರ್ಯಾಗೊಂಟ್ರೈಲ್ ಟಚ್ ಸ್ಕ್ರೀನ್(720×1280 ಪಿಕ್ಸೆಲ್, 294ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7(ನೂಗಟ್), 1.25 ಗೀಗಾಹಟ್ರ್ಸ್ ಕ್ವಾಡ್ ಕೋರ್ ಪ್ರೊಸೆಸರ್, 2ಜಿಬಿ RAM/16 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ 128 ಜಿಬಿವರೆಗೆ ವಿಸ್ತರಣೆ ಮಾಡಬಹುದು.

    ಕ್ಯಾಮೆರಾ:
    ಮುಂದುಗಡೆ 8ಎಂಪಿ ಕ್ಯಾಮೆರಾ, ಹಿಂಭಾಗ 8ಎಂಪಿ ಹೆಚ್‍ಡಿಆರ್ ಜೊತೆಗೆ, ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್, ಪನೊರಮಾ ಸೌಲಭ್ಯ ಇದೆ.

    ಇತರೆ:
    2.5 ಕಾರ್ನಿಂಗ್ ಗ್ಲಾಸ್, 4ಜಿ ವೋಲ್ಟ್, ವೈ-ಫೈ, ಬ್ಲೂಟೂತ್4.0, ಜಿಪಿಎಸ್, 4,000 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

  • ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಬೀಜಿಂಗ್: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ 6 ಪ್ರೋ ಫೋನನ್ನು ಬಿಡುಗಡೆಗೊಳಿಸಿದೆ.

    ರೆಡ್‍ಮೀ 6 ಪ್ರೋ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಗೋಲ್ಡ್, ರೋಸ್ ಗೋಲ್ಡ್ , ಬ್ಲೂ ಹಾಗೂ  ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಜೂನ್ 26ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಭಾರತದಲ್ಲಿ ಈ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಬೆಲೆ ಎಷ್ಟು?
    3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 999 (ಅಂದಾಜು 10,400 ರೂ.), 4ಜಿಬಿ RAM/34ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,199 (ಅಂದಾಜು 12,500 ರೂ.) ಹಾಗೂ 4ಜಿಬಿ RAM/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,299 (ಅಂದಾಜು 13,500 ರೂ.) ಬೆಲೆ ನಿಗದಿ ಮಾಡಿದೆ.

    ರೆಡ್‍ಮಿ 6 ಪ್ರೋ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.33 X 71.68 X 8.75ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(2280X1080 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8953 ಸ್ನ್ಯಾಪ್ ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ 2.0 ಗೀಗಾಹಟ್ರ್ಸ್-ಕಾರ್ಟೆಕ್ಸ್-ಎ53ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ,3ಜಿಬಿ RAM/32 ಜಿಬಿ, 4ಜಿಬಿ RAM/32 ಜಿಬಿ ಹಾಗೂ 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ:
    ಮುಂಭಾಗ 5ಎಂಪಿ, ಸಾಪ್ಟ್ ಟೋನ್ ಸೇಲ್ಪಿ ಲೈಟ್ ವಿತ್ ಆಟೋ ಪೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಪ್ಯೂಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 4000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5ವೋಟ್ಸ್ ನ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

  • ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ನವದೆಹಲಿ: ಉಗ್ರಗಾಮಿಗಳಿಗೆ ಆರ್ಥಿಕ ಸಹಾಯ ನೀಡಿ ಭಾರತದಲ್ಲಿ ಅಶಾಂತಿ ನೆಲೆಸಲು ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ 100ನೇ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು ತಲೆನೋವಾಗಿ ಪರಿಣಮಿಸಿದೆ.

    ಹೌದು, ಇಸ್ರೋ ಸಂಸ್ಥೆ ಇಂದು ಬೆಳಗ್ಗೆ ಭಾರತದ 100 ನೇ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಆದರೆ ಭಾರತದ ಉಪಗ್ರಹ ಉಡಾವಣೆ ಯಶಸ್ವಿಯಾದ ಕೂಡಲೇ ಪಾಕಿಸ್ತಾನ ಈ ಕುರಿತು ಅಪಸ್ವರ ಎತ್ತಿದ್ದು, ಭಾರತದ ಈ ಉಪಗ್ರಹ ಯೋಜನೆಯಿಂದ ಪ್ರಾದೇಶಿಕ ವ್ಯೂಹಾತ್ಮಕ ಸ್ಥಿರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಆರೋಪಿಸಿದೆ.

    ಈ ಆರೋಪದ ಜೊತೆ ಭಾರತದ ಈ ಉಪಗ್ರಹ ತಂತ್ರಜ್ಞಾನವನ್ನು ತನ್ನ ಮಿಲಿಟರಿ ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡರೆ ದಕ್ಷಿಣ ಏಷ್ಯಾ ಖಂಡದಲ್ಲಿ ಶಾಂತಿಗೆ ದಕ್ಕೆ ಉಂಟಾಗಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.

    ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಭಾರತ ಉಡಾವಣೆ ಮಾಡಿರುವ ಉಪಗ್ರಹಗಳು ಮಿಲಿಟರಿ ಹಾಗೂ ನಾಗರಿಕ ಉದ್ದೇಶ ಎರಡಕ್ಕೂ ಬಳಕೆ ಮಾಡಿಕೊಳ್ಳಲು ಸಾಧ್ಯವಿದ್ದು, ಒಂದು ವೇಳೆ ಭಾರತ ಇದನ್ನೂ ಮಿಲಿಟರಿ ವ್ಯವಸ್ಥೆಯಲ್ಲಿ ಬಳಕೆ ಮಾಡಿಕೊಂಡರೆ ಅದು ಮಿಲಿಟರಿ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗಲಿದೆ. ಅಲ್ಲದೇ ಪ್ರಾದೇಶಿಕ ಸಂಬಂಧಗಳ ಆಸ್ಥಿರತೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇಸ್ರೋ ತನ್ನ 100ನೇ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿತ್ತು. ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಭಾರತದ ಉಪಗ್ರಹದ ಜೊತೆಗೆ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಿದ್ದವು. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರ ಹೊಂದಿತ್ತು. ಆದರೆ ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಐಆರ್ ಎನ್‍ಎಸ್‍ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿತ್ತು.

    ಸಾರ್ಕ್ ಉಪಗ್ರಹಕ್ಕೆ ಸಹಕರಿಸಲಿಲ್ಲ:
    2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ 2014ರ ಜೂನ್ ನಲ್ಲಿ ಕೇಳಿದ್ದರು. ಮೋದಿ ಆಶಯದಂತೆ ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ `ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಸ್ರೋ ತಯಾರಿಸಿ 2017ರ ಮೇ ತಿಂಗಳಿನಲ್ಲಿ ಕಕ್ಷೆಗೆ ಸೇರಿಸಿತ್ತು.

    ಈ ಮಹತ್ವದ ಯೋಜನೆಗೆ ಪಾಕಿಸ್ತಾನ ಸಹಕಾರ ನೀಡಿರಲಿಲ್ಲ. ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿತ್ತು. ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ.

    ಭಾರತಕ್ಕಿಂತಲೂ ಮೊದಲು ಅಂದರೆ 1961 ರಲ್ಲೇ ಪಾಕಿಸ್ತಾನ ಬಾಹ್ಯಾಕಾಶ ಕೇಂದ್ರವನ್ನು ಆರಂಭಿಸಿ ಸಂಶೋಧನೆಯಲ್ಲಿ ತೊಡಗಿತ್ತು. ನಂತರದಲ್ಲಿ 8 ವರ್ಷಗಳ ಬಳಿಕ ಭಾರತ ತನ್ನ ಬಾಹ್ಯಾಕಾಶ ಕೇಂದ್ರ ಇಸ್ರೋ ವನ್ನು ಸ್ಥಾಪಿಸಿತು. ಇಸ್ರೋ ತನ್ನ ಆಧುನಿಕ ಸಂಶೋಧನೆಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೀರ್ತಿ ಪಡೆದಿದೆ. ಅಲ್ಲದೇ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಗೆ ಪೈಪೋಟಿ ನೀಡುವ ಹಂತವನ್ನು ತಲುಪಿದೆ. ಇಸ್ರೋ ಕೇವಲ ಭಾರತದ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡದೇ ಈಗ ವಿದೇಶಿ ಉಪಗ್ರಹಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುಕೊಡುತ್ತಿದೆ.

    ತಿರುಗೇಟು ಕೊಟ್ಟ ಜನ:
    ಇಸ್ರೋ ಉಪಗ್ರಹ ಅಪಸ್ವರ ಎತ್ತಿದ ಪಾಕ್ ನಡೆಯಲ್ಲಿ ಖಂಡಿಸಿದ ಭಾರತೀಯರು, ನೀವು ಕ್ಷಿಪಣಿ, ಬಾಂಬ್ ತಯಾರಿಸುವುದರ ಜೊತೆಗೆ ಉಗ್ರರಿಗೆ ಆರ್ಥಿಕ ಸಹಾಯ ನೀಡುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಿ. ನಮ್ಮ ದೇಶದ ಸಾಧನೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.