Tag: Launch

  • ಅಗ್ಗದ 2 ಏಸಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಅಗ್ಗದ 2 ಏಸಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಏಸಸ್ ಕಂಪೆನಿಯು ಬಜೆಟ್ ಗಾತ್ರದ ನೂತನ ಫೀಚರ್ ಗಳನ್ನೊಳಗೊಂಡ ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಏಸಸ್ ಝೆನ್‍ಫೋನ್ ಸಂಸ್ಥೆಯು ಭಾರತದಲ್ಲಿ ಬಜೆಟ್ ಗಾತ್ರದ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಸ್ಮಾರ್ಟ್ ಫೋನ್‍ಗಳನ್ನು ಬಿಡುಗಡೆ ಮಾಡಿದ್ದು, ಈ ಫೋನ್‍ಗಳು ರೆಡ್‍ಮೀ ಹಾಗೂ ರಿಯಲ್ ಮೀ ಒನ್ ಸ್ಮಾರ್ಟ್ ಫೋನ್‍ಗಳಿಗೆ ಪೈಪೋಟಿ ನೀಡಲಿವೆ.

    ತನ್ನ ಎರಡೂ ಸ್ಮಾರ್ಟ್ ಫೋನ್‍ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೊಸೆಸರ್ ಬಳಸಿದ್ದು, ಸುದೀರ್ಘ ಬ್ಯಾಟರಿಯನ್ನು ಸಹ ನೀಡಿದೆ. ಈ ನೂತನ ಫೋನ್‍ಗಳು ಇದೇ ಅಕ್ಟೋಬರ್ 30 ರಿಂದ ಆನ್‍ಲೈನ್ ಜಾಲತಾಣ ಫ್ಲಿಪ್‍ಕಾರ್ಟ್‍ಗಳಲ್ಲಿ ಗ್ರಾಹಕರಿಗೆ ಸಿಗಲಿವೆ.

    ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಗುಣ ವೈಶಿಷ್ಟ್ಯಗಳು:
    ಬೆಲೆ ಎಷ್ಟು?
    3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 7,499 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಮ್ಯಾಕ್ಸ್ ಎಂ1 ಲಭ್ಯವಿರಲಿದೆ. ಸ್ಮಾರ್ಟ್ ಫೋನ್ ಡೀಪ್ ಸೀ ಬ್ಲಾಕ್ ಹಾಗೂ ಸನ್‍ಲೈಟ್ ಗೋಲ್ಡ್ ಬಣ್ಣಗಳಲ್ಲಿ ಸಿಗುತ್ತದೆ.

    ಬಾಡಿ ಮತ್ತು ಡಿಸ್ಪ್ಲೇ:
    147.3 X 70.9 X 8.7 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 16:10 ಅನುಪಾತ 247 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 8 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸೆನ್ಸರ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    ಝೆನ್‍ಫೋನ್ ಲೈಟ್ ಎಲ್1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬೆಲೆ ಎಷ್ಟು?
    2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 5,999 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಲೈಟ್ ಎಲ್1 ಸ್ಮಾರ್ಟ್ ಫೋನ್ ಸಿಗುತ್ತದೆ. ಬ್ಲಾಕ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಫೋನ್ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    147.3 X 71.8 X 8.7 ಮಿ.ಮೀ., 140 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 295 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್, 512 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ನೀಡಲಾಗಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 5 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಟೊ 6 ಪ್ಲಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು? ಕ್ಯಾಶ್ ಬ್ಯಾಕ್ ಆಫರ್ ಎಷ್ಟಿದೆ?

    ಮೊಟೊ 6 ಪ್ಲಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು? ಕ್ಯಾಶ್ ಬ್ಯಾಕ್ ಆಫರ್ ಎಷ್ಟಿದೆ?

    ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ತನ್ನ ನೂತನ ಮೊಟೊ 6 ಫ್ಲಸ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ನೂತನ ಮೊಟೊ 6 ಪ್ಲಸ್ ಆವೃತ್ತಿಯಲ್ಲಿ ಸೆಲ್ಫಿಗಾಗಿ 8 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಗೋಲ್ಡ್, ಡೀಪ್ ಇಂಡಿಗೋ ಹಾಗೂ ನಿಮ್‍ಬಸ್ ಬಣ್ಣಗಳಲ್ಲಿ ಫೋನ್ ಲಭ್ಯವಿದ್ದು, ಮೊಟೊರೊಲ ಆಫ್‍ಲೈನ್, ಆನ್‍ಲೈನ್ ಸ್ಟೋರ್ ಹಾಗೂ ಅಮೇಜಾನ್ ಜಾಲತಾಣದಲ್ಲಿ ಸಿಗಲಿದೆ.

    ಮೊಟೊ 6 ಪ್ಲಸ್ ಫೋನಿನ ಮೇಲೆ ಪೇಟಿಎಂ ಗ್ರಾಹಕರು 3,000 ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದ್ದು, ಗ್ರಾಹಕರು ಆಫ್‍ಲೈನ್ ಮಾರುಕಟ್ಟೆಗಳಲ್ಲಿ ಪೇಟಿಎಂ ಆ್ಯಪ್ ಮೂಲಕ ಹಣ ಪಾವತಿಸಿದರೆ, ತಕ್ಷಣವೇ ಡಿಸ್ಕೌಂಟ್ ಹಣ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

    ಇದಲ್ಲದೇ ಜಿಯೋ ಆ್ಯಪ್ ಗ್ರಾಹಕರು ಸಹ 4,500 ರೂಪಾಯಿ ವರೆಗಿನ ಕ್ಯಾಶ್ ಡಿಸ್ಕೌಂಟ್ ಇದೆ. ಗ್ರಾಹಕರು ಜಿಯೋದ 198 ಹಾಗೂ 299 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಕೂಡಲೇ 2,200 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ, 1,250 ರೂಪಾಯಿ ಮೌಲ್ಯದ ಕ್ಲಿಯರ್ ಟ್ರಿಪ್ ಕ್ಯಾಶ್‍ಬ್ಯಾಕ್ ವೋಚರ್ ಹಾಗೂ 1,000 ರೂಪಾಯಿ ಮೌಲ್ಯದ Ajio.com ಡಿಸ್ಕೌಂಟ್ ವೋಚರ್ ಪಡೆದುಕೊಳ್ಳಬಹುದು.

    ಮೊಟೊ 6 ಪ್ಲಸ್ ಫೋನಿನ ಗುಣವೈಶಿಷ್ಟ್ಯಗಳು:
    ಬೆಲೆ ಎಷ್ಟು?
    6 ಜಿಬಿ ರ‍್ಯಾಮ್​/64 ಜಿಬಿ ಆಂತರಿಕ ಮೆಮೊರಿಗೆ 22,499 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಭಾರತದಲ್ಲಿ ಒಂದೇ ಆವೃತ್ತಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    160 x 75.5 x 8 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.9 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (1080×2160 ಪಿಕ್ಸೆಲ್, 18:9 ಅನುಪಾತ 409ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಸ್ನ್ಯಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೊ 508 ಗ್ರಾಫಿಕ್ ಪ್ರೊಸೆಸರ್, 6 ಜಿಬಿ ರ‍್ಯಾಮ್​/64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿಯಾಗಿ 256 ಜಿಬಿ ವರೆಗೆ ವಿಸ್ತರಿಸಬಹುದು.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 12+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 3,200 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 15 ವೋಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಸಿಯೋಮಿ 6 ಸಿರೀಸ್‍ನ ಮೂರು ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಕ್ಸಿಯೋಮಿ 6 ಸಿರೀಸ್‍ನ ಮೂರು ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ಸಿಯೋಮಿಯು ತನ್ನ 6 ಸಿರೀಸ್ ನ ಎಂಐ 6ಎ, ಎಂಐ 6 ಹಾಗೂ ಎಂಐ 6 ಪ್ರೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

    ಕ್ಸಿಯೋಮಿಯ 6ಎ, 6 ಹಾಗೂ 6 ಪ್ರೋ ಫೋನುಗಳು ಎಂಐ ಆನ್‍ಲೈನ್ ಹಾಗೂ ಆಫ್‍ಲೈನ್ ಸ್ಟೋರ್ ಮತ್ತು ಅಮೇಜಾನ್ ಜಾಲತಾಣಗಳಲ್ಲಿ ಸೆಪ್ಟೆಂಬರ್ 11 ರಿಂದ ಲಭ್ಯವಿರಲಿದೆ.

    ರೆಡ್‍ಮಿ ಎಂಐ 6ಎ ಗುಣವೈಶಿಷ್ಟ್ಯಗಳು:

    ಬೆಲೆ ಎಷ್ಟು?
    2 ಜಿಬಿ ರ‍್ಯಾಮ್​/16 ಜಿಬಿ ಆಂತರಿಕ ಮೆಮೊರಿಗೆ 5,999 ರೂಪಾಯಿ ಹಾಗೂ 3 ಜಿಬಿ ರ‍್ಯಾಮ್​/32 ಜಿಬಿ ಆಂತರಿಕ ಮೆಮೊರಿಗೆ 6,999 ರೂಪಾಯಿ ಬೆಲೆಯನ್ನು ನಿಗಪಡಿಸಿದ್ದು, ಗ್ರೇ, ಬ್ಲೂ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    147.5 x 71.5 x 8.3 ಮಿ.ಮೀ., 145 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.45 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1440 ಪಿಕ್ಸೆಲ್, 18:9 ಅನುಪಾತ 295ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ ಹೀಲಿಯೋ ಎ22, ಕ್ವಾಡ್ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಎಂಐ 9.0 ಆವೃತ್ತಿ ಅಪ್‍ಡೇಟೆಡ್, 2 ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ಹಾಗೂ 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಿಸಬಹುದು.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ರೆಡ್‍ಮಿ ಎಂಐ 6 ಗುಣವೈಶಿಷ್ಟ್ಯಗಳು:

    ಬೆಲೆ ಎಷ್ಟು?
    3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 7,999 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 9,499 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ. ಗ್ರೇ, ಬ್ಲೂ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    147.5 x 71.5 x 8.3 ಮಿ.ಮೀ., 146 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.45 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1440 ಪಿಕ್ಸೆಲ್, 18:9 ಅನುಪಾತ 295 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ 6762 ಅಕ್ಟಾ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಪವರ್ ವಿಆರ್ ಜೆ8320 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 9 ಆವೃತ್ತಿ ಅಪ್‍ಡೇಟೆಡ್, 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಣೆ ಮಾಡಬಹುದು.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 12ಎಂಪಿ+5ಎಂಪಿ ಡ್ಯುಯೆಲ್ ಕ್ಯಾಮೆರಾ ಜೊತೆಗೆ ಆಟೋಮ್ಯಾಟಿಕ್ ಹೆಚ್‍ಡಿಆರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಇದಲ್ಲದೇ ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸೌಲಭ್ಯವನ್ನು ಹೊಂದಿದೆ.

    ರೆಡ್‍ಮಿ ಎಂಐ 6 ಪ್ರೋ ಗುಣವೈಶಿಷ್ಟ್ಯಗಳು:

    ಬೆಲೆ ಎಷ್ಟು?
    3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 10,999 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 12,999 ರೂಪಾಯಿ ಬೆಲೆ ನಿಗದಿಪಡಿಸಿದೆ. ಬ್ಲಾಕ್, ಬ್ಲೂ ಹಾಗೂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    149.3 x 71.7 x 8.8 ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×2280 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 625 ಅಕ್ಟಾ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಹೆಚ್ಚುವರಿ 256 ಜಿಬಿವರೆಗೆ ವಿಸ್ತರಿಸಬಹುದು.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+5 ಎಂಪಿ ಡ್ಯುಯೆಲ್ ಕ್ಯಾಮೆರಾ ಜೊತೆಗೆ ಆಟೋಮ್ಯಾಟಿಕ್ ಹೆಚ್‍ಡಿಆರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲ್ಮಾನ್ ಅಭಿನಯದ ಭಾರತ್ ಟೀಸರ್ ಔಟ್

    ಸಲ್ಮಾನ್ ಅಭಿನಯದ ಭಾರತ್ ಟೀಸರ್ ಔಟ್

    ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಟೀಸರ್ ಅನ್ನು ಸ್ವಾಂತತ್ರ್ಯೋತ್ಸವ ದಿನದಂದೇ ಬಿಡುಗಡೆ ಮಾಡಲಾಗಿದೆ.

    ಭಾರತ್ ಸಿನಿಮಾವು ಬಾಲಿವುಡ್‍ನ ಖ್ಯಾತ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ರವರು ಮಾತೃ ದೇಶವನ್ನು ಹುಡುಕುತ್ತಾ ಪ್ರಯಾಣಿಸುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ್ ಸಿನಿಮಾವು 2019ರ ಈದ್ ನಂದು ಬಿಡುಗಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ.

    ಖುದ್ದು ಸಲ್ಮಾನ್ ಖಾನ್‍ರವರು ಇಂದು ಭಾರತ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ, ತಮ್ಮ ಟ್ವಿಟ್ಟರ್ ನಲ್ಲಿ, ಕೆಲವು ಸಂಬಂಧಗಳು ರಕ್ತದಿಂದ ಬಂದಿದ್ದರೆ, ಇನ್ನೂ ಕೆಲವು ಮಣ್ಣಿನಿಂದ ಬಂದಿರುತ್ತವೆ, ಆದರೆ ನಾನೂ ಎರಡನ್ನೂ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಭಾರತ್ ಸಿನಿಮಾದಲ್ಲಿ, ಮಾಜಿ ವಿಶ್ವಸುಂದರಿ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಶಾ ಪಟನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಮತ್ತು ಟಬೂ ಸಹ ಅಭಿನಯಿಸಿದ್ದಾರೆ. ಚಿತ್ರ ದಕ್ಷಿಣಯ ಕೊರಿಯಾದ ಒಡೇ ಟು ಮೈ ಫಾದರ್ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ 1940 ರಲ್ಲಿ ಭಾರತ ವಿಭಜನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು, 70ರ ದಶಕದ ಶೈಲಿಯಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗಿದೆ.

    ಸಲ್ಮಾನ್ ಖಾನ್ ಜೊತೆ ಮೂರನೇ ಬಾರಿ ಜಾಫರ್ ಚಿತ್ರಕ್ಕೆ ಕೈಜೋಡಿಸಿದ್ದು, ಈ ಮೊದಲು ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದ ಸುಲ್ತಾನ್ ಹಾಗೂ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 9 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 9 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಸ್ಯಾಮ್‍ಸಂಗ್ ತನ್ನ ನೂತನ ಹೈ ಎಂಡ್ ಮಾದರಿಯ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

    ನೂತನ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ತಾಮ್ರ, ನೇರಳೆ, ಸಮುದ್ರ ನೀಲಿ, ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.

    ಬೆಲೆಎಷ್ಟು?
    6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಮಾದರಿಗೆ 67,900 ರೂ. ಆಗಿದ್ದು, 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿ ಮಾದರಿಗೆ 84,900 ರೂ. ನಿಗದಿಯಾಗಿದೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳೆರಡರಲ್ಲೂ ನೂತನ ಸ್ಯಾಮಸಂಗ್ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಖರೀದಿಗೆ ಸಿಗಲಿದೆ.

    ಸ್ಯಾಮಸಂಗ್ ಗೆಲಾಕ್ಸಿ ನೋಟ್ 9ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 161.9 x 76.4 x 8.8 ಮಿ.ಮೀ., 201 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.4 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1440×2960 ಪಿಕ್ಸೆಲ್, 18.5:9 ಅನುಪಾತ 516ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಎಕ್ಸಿನೋಸ್ 9810 ಅಕ್ಟಾ ಕೋರ್ ಪ್ರೊಸೆಸರ್ 2.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 630 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ, ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, ಐರಿಸ್ ಸೆನ್ಸರ್ ಹೊಂದಿದೆ. 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಜೊತೆಗೆ ಫಾಸ್ಟ್ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0) ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬಿಡುಗಡೆಯಾಯ್ತು ಕ್ಸಿಯೋಮಿಯ ನೂತನ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು? ಬೆಲೆ ಎಷ್ಟು?

    ಬಿಡುಗಡೆಯಾಯ್ತು ಕ್ಸಿಯೋಮಿಯ ನೂತನ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು? ಬೆಲೆ ಎಷ್ಟು?

    ನವದೆಹಲಿ: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ ಎಂಐ ಎ2 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ನೂತನ ರೆಡ್‍ಮೀ ಎಂಐ ಎ2 ಸ್ಮಾರ್ಟ್ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 20ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+20ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಬ್ಲೂ, ಗೋಲ್ಡ್, ರೋಸ್ ಗೋಲ್ಡ್ ಹಾಗೂ ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ.

    ಬೆಲೆ ಎಷ್ಟು?
    ನೂತನ 6 ಜಿಬಿ RAM/64 ಜಿಬಿ ಆವೃತ್ತಿಗೆ 16,990 ಬೆಲೆ ನಿಗದಿಪಡಿಸಿದ್ದು, ಎಂಐ ವೆಬ್‍ಸೈಟ್ ಹಾಗೂ ಅಮೇಜಾನ್ ವೆಬ್‍ಸೈಟ್ ನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಿರಲಿದೆ.

    ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 158.7 x 75.4 x 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ:
    ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 5ಜಿ ಆವೃತ್ತಿಯ ಮೊಟೊರೊಲದ ನೂತನ ಜೆಡ್ 3 ಸ್ಮಾರ್ಟ್ ಫೋನ್ ಬಿಡುಗಡೆ

    5ಜಿ ಆವೃತ್ತಿಯ ಮೊಟೊರೊಲದ ನೂತನ ಜೆಡ್ 3 ಸ್ಮಾರ್ಟ್ ಫೋನ್ ಬಿಡುಗಡೆ

    – ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಲಿನೊವೋ ಒಡೆತನದ ಮೊಟೊರೊಲ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯು ತನ್ನ ನೂತನ ಜೆಡ್ 3, 5ಜಿ ಆವೃತ್ತಿಯ ನೂತನ ಸ್ಮಾಟ್ ಫೋನನ್ನು ಅಮೇರಿಕಾದ ಚಿಕಾಗೋದಲ್ಲಿ ಅನಾವರಣಗೊಳಿಸಿದೆ.

    ವಿಶ್ವದ ಹಳೆಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಮೊಟೊರೊಲಾ ಸದ್ಯ ಲಿನೊವೋ ಕಂಪೆನಿಯ ಒಡೆತನದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನೂತನ ಫೀಚರ್ ಹೊಂದಿರುವ ಮೊಟೊರೊಲಾ ಈಗ ತನ್ನ 5ಜಿ ಆವೃತ್ತಿಯ ನೂತನ ಮೊಟೊರೊಲಾ ಜೆಡ್ 3 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ಮೊಟೊರೊಲಾ ಜೆಡ್ 3, 5ಜಿ ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. 2019ರ ವೇಳೆಗೆ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರಲಿದೆ ಎನ್ನಲಾಗಿದೆ.

    ಬೆಲೆ ಎಷ್ಟು?
    4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನಿಗೆ ಅಮೆರಿಕಾದಲ್ಲಿ 480 ಡಾಲರ್ ನಿಗದಿಪಡಿಸಿದೆ. (ಅಂದಾಜು 32,000 ರೂಪಾಯಿ)

    ಜೆಡ್ 3 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 156.5 x 76.5 x 6.8 ಮಿ.ಮೀ., 156 ಗ್ರಾಂ ತೂಕ, 5ಜಿ ಆವೃತ್ತಿಯ ಸಿಂಗಲ್ ಸಿಮ್(ನ್ಯಾನೋ ಸಿಮ್) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.1 ಇಂಚಿನ ಸೂಪರ್ ಅಮಾಲಾಯಿಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×160 ಪಿಕ್ಸೆಲ್, 18:9 ಅನುಪಾತ 402ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8998 ಸ್ನ್ಯಾಪ್ ಡ್ರಾಗನ್ 835 ಆಕ್ಟಾ ಕೋರ್ ಪ್ರೊಸೆಸರ್ 2.35 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 540 ಗ್ರಾಫಿಕ್ಸ್ ಪ್ರೊಸೆಸರ್, 1 ಟಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್ ಲಾಕ್ ಹಾಗೂ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    https://www.youtube.com/watch?v=tWaGF1pz1uo&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸ್ಯಾಮ್‍ಸಂಗ್ ನ ನೂತನ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಸ್ಯಾಮ್‍ಸಂಗ್ ನ ನೂತನ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಯಾದ ಸ್ಯಾಮ್‍ಸಂಗ್ ತನ್ನ ಬಜೆಟ್ ಗಾತ್ರದ ನೂತನ ಸ್ಯಾಮ್‍ಸಂಗ್ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

    ನೂತನ ಗೆಲಕ್ಸಿ ಆನ್ 8 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 16ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

    ಬೆಲೆಎಷ್ಟು?
    4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿರು ಸ್ಯಾಮ್‍ಸಂಗ್ ಗ್ಯಾಲಕ್ಸಿ ಆನ್ 8 ಬೆಲೆ 16,990 ರೂ. ಆಗಿದೆ. ಸದ್ಯ ಕೇವಲ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಸಿಗಲಿದೆ.

    ಫೋನಿನ ಗುಣ ವೈಶಿಷ್ಟ್ಯಗಳು:
    ಡಿಸ್ಪ್ಲೇ: 6 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1480 ಪಿಕ್ಸೆಲ್, 18.5:9 ಅನುಪಾತ ) ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ, ವಿತ್ ಮೆಮೊರಿ ಕಾರ್ಡ್ ಸೌಲಭ್ಯ,

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 450 ಅಕ್ಟಾ ಕೋರ್ ಪ್ರೊಸೆಸರ್ 1.6 ಗೀಗಾಹಟ್ರ್ಸ್ ಸ್ಪೀಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, 256 ಜಿಬಿ ವಿಸ್ತರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 16ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 16ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 3,500 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

    https://www.youtube.com/watch?v=deIjcKYsvlw

  • ಶೀಘ್ರವೇ ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು?

    ಶೀಘ್ರವೇ ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು?

    ನವದೆಹಲಿ: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ ಎಂಐ ಎ2 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಆಗಸ್ಟ್ 8 ರಂದು ಬಿಡುಗಡೆ ಮಾಡಲಿದೆ.

    ನೂತನ ರೆಡ್‍ಮೀ ಎಂಐ ಎ2 ಸ್ಮಾರ್ಟ್ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 20ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+20ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಬ್ಲೂ, ಗೋಲ್ಡ್, ರೋಸ್ ಗೋಲ್ಡ್ ಹಾಗೂ ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ.

    ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 158.7 x 75.4 x 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ:
    ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

  • ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಗಳಿಸಲು ನೋಕಿಯಾ ಬಜೆಟ್ ಗಾತ್ರದಲ್ಲಿ ತನ್ನ ನೂತನ ಆವೃತ್ತಿಯ ನೋಕಿಯಾ 3.1 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಈ ಮೊದಲು ನೋಕಿಯಾ ಕಂಪೆನಿ ಇದೇ ವರ್ಷ ಮೇ ತಿಂಗಳಲ್ಲಿ ರಷ್ಯಾದ ಮಾಸ್ಕೋ ನಗರದಲ್ಲಿ ಬಜೆಟ್ ಗಾತ್ರದ ನೂತನ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸಿತ್ತು. ಇಂದು ಇದೇ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

    ನೂತನ ನೋಕಿಯಾ 3.1 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13 ಎಂಪಿ ಹೊಂದಿರುವ ಕ್ಯಾಮೆರಾವಿದೆ. ಬ್ಲೂ ಕಾಪರ್, ಬ್ಲಾಕ್ ಕ್ರೋಮ್ ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಜುಲೈ 21 ರಿಂದ ಪೇಟಿಎಂ ಮಾಲ್ ಆ್ಯಪ್ ಹಾಗೂ ನೋಕಿಯಾ ವೆಬ್‍ಸೈಟ್‍ಗಳಲ್ಲಿ ಈ ನೂತನ ಫೋನ್ ಸಿಗಲಿದೆ.

    ಬೆಲೆ ಎಷ್ಟು?
    2ಜಿಬಿ RAM/16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,499 ಆಗಿದ್ದು, ಕೇವಲ ಒಂದೇ ಒಂದು ಆವೃತ್ತಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

    ನೋಕಿಯಾ 3.1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 146.25 x 68.65 x 8.70ಮಿ.ಮೀ., 138.30 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.20 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 310ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಆಕ್ಟಾ ಕೋರ್ ಪ್ರೊಸೆಸರ್, 1.5 ಗೀಗಾಹಟ್ರ್ಸ್ ಮೀಡಿಯಟೆಕ್ ಎಂಟಿ6750, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 2ಜಿಬಿ RAM/16 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಹಾಗೂ ಇತರೆ ಫ್ಯೂಚರ್ ಗಳು:
    ಮುಂಭಾಗ 8ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 2,990 ಎಂಎಹೆಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.