Tag: latur

  • ಚಾಕೊಲೇಟ್‌ಗಾಗಿ ಹಣ ಕೇಳಿದ್ದಕ್ಕೆ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ

    ಚಾಕೊಲೇಟ್‌ಗಾಗಿ ಹಣ ಕೇಳಿದ್ದಕ್ಕೆ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ

    ಮುಂಬೈ: ಚಾಕೊಲೇಟ್‌ಗಾಗಿ ಹಣ ಕೇಳಿದ್ದಕ್ಕೆ ಕುಡಿದ ಮತ್ತಿನಲ್ಲಿ 4 ವರ್ಷದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ಲಾತೂರ್ (Latur) ಜಿಲ್ಲೆಯ ಉದ್ವೀರ್ ತಾಲೂಕಿನ ಭೀಮಾ ತಾಂಡದಲ್ಲಿ ನಡೆದಿದೆ.

    ಆರೋಪಿಯನ್ನು ಬಾಲಾಜಿ ರಾಥೋಡ್ ಹಾಗೂ ಮೃತ ಬಾಲಕಿಯನ್ನು ಆರುಷಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ದಾಖಲೆ ಬರೆದ ಸಿದ್ದರಾಮಯ್ಯ

    ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಬಾಲಾಜಿಗೆ ಕುಡಿತದ ಚಟವಿತ್ತು. ಹೀಗಾಗಿ ಪ್ರತಿದಿನ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈತನ ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋದ ಪತ್ನಿ, ತನ್ನ ತಂದೆಯೊಂದಿಗೆ ಇದ್ದಳು. ಕೊಲೆಯಾದ ದಿನ ಮಧ್ಯಾಹ್ನ ಮೃತ ಆರುಷಿ, ಚಾಕೊಲೇಟ್ ತೆಗೆದುಕೊಳ್ಳಲು ಹಣ ಕೇಳಿದ್ದಳು. ಅದೇ ಕೋಪದಿಂದ ಸೀರೆಯಿಂದ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

    ಈ ಕುರಿತು ಆರೋಪಿಯ ಪತ್ನಿ ವರ್ಷಾ ದೂರು ದಾಖಲಿಸಿದ್ದು, ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 60 ವರ್ಷದಿಂದ ಉಳುಮೆ ಮಾಡ್ತಿದ್ದ ರೈತನಿಗೆ ಶಾಕ್ – ತಹಶೀಲ್ದಾರ್ ಸಹಿ ನಕಲಿಸಿ, 8 ಎಕರೆ ಬೇರೆಯವ್ರ ಹೆಸರಿಗೆ ವರ್ಗ

  • ಚಿಕಿತ್ಸೆಗೆ ಬಂದಿದ್ದ ಯುವತಿಗೆ ಬಲವಂತವಾಗಿ ಸಗಣಿ ತಿನ್ನಿಸಿದ ಮಾಂತ್ರಿಕ

    ಚಿಕಿತ್ಸೆಗೆ ಬಂದಿದ್ದ ಯುವತಿಗೆ ಬಲವಂತವಾಗಿ ಸಗಣಿ ತಿನ್ನಿಸಿದ ಮಾಂತ್ರಿಕ

    ಲಾತೂರ್: ಚಿಕಿತ್ಸೆಗಾಗಿ ಬಂದಿದ್ದ 18 ವರ್ಷದ ಯುವತಿಗೆ ಮಾಂತ್ರಿಕನೊಬ್ಬ ಬಲವಂತವಾಗಿ ಸಗಣಿ ತಿನ್ನಿಸಿದ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

    ಬಿಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಯುವತಿ ಕೆಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇದರಿಂದ ಆಕೆಗೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ನಂಬಿದ್ದ ಆಕೆಯ ಪೋಷಕರು ಚಿಕಿತ್ಸೆಗಾಗಿ ಯುವತಿಯನ್ನು ಜೂನ್ 4ರಂದು ಬೀದರ್‍ನ ಮಾಂತ್ರಿಕನೊಬ್ಬನ ಬಳಿ ಕರೆತಂದಿದ್ದರು.

    ಮಾಂತ್ರಿಕ ಚಿಕಿತ್ಸೆಯ ನೆಪದಲ್ಲಿ ಯುವತಿಗೆ ಥಳಿಸಿ, ಬಲವಂತವಾಗಿ ಸಗಣಿಯನ್ನು ತಿನ್ನಿಸಿದ್ದಾನೆ. ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇದನ್ನು ವಿಡಿಯೋ ಮಾಡಿ ಸಾಮಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಮಗನ ಸಮಸ್ಯೆ ಪರಿಹಾರಕ್ಕಾಗಿ ತಾಯಿಯನ್ನು 7 ಬಾರಿ ಸಂಭೋಗಿಸಿ 21 ಲಕ್ಷ ದೋಚಿದ್ದ ಕಾಮಿ ಜ್ಯೋತಿಷಿ ಅರೆಸ್ಟ್!

    ಘಟನೆಯ ಸಂಬಂಧ ಯುವತಿಯ ತಂದೆ ಹಾಗೂ ಮಾಂತ್ರಿಕ ಸೇರಿದಂತೆ 6 ಜನರ ವಿರುದ್ಧ ಲಾತೂರು ಜಿಲ್ಲೆಯ ಚಾಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಭಾಕರ್ ಕೆಸಳೆ (35), ಗಂಗಾಧರ್ ಶೇವಲೆ (65), ಪಂಡಿತ್ ಕೋರೆ (37) ಮತ್ತು ದಗಡು ಶೇವಲೆ (40) ಎಂಬವರನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗಾಗಿ ಕರ್ನಾಟಕದ ಬೀದರ್‍ಗೆ ಪೊಲೀಸರ ತಂಡವೊಂದನ್ನ ಕಳುಹಿಸಲಾಗಿದೆ ಎಂದು ಡಿಎಸ್‍ಪಿ ವಿಕಾಸ್ ನಾಯಕ್ ಹೇಳಿದ್ದಾರೆ.

    ನರಬಲಿ ತಡೆ ಹಾಗೂ 2013ರ ಮಹಾರಾಷ್ಟ್ರ ಅಘೋರಿ ಆಚರಣೆ ಮತ್ತು ಮಾಟ ಮಂತ್ರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

     

  • ಮಹಾರಾಷ್ಟ್ರ ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ಫಡ್ನಾವಿಸ್ ಪಾರು

    ಮಹಾರಾಷ್ಟ್ರ ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ಫಡ್ನಾವಿಸ್ ಪಾರು

    ಲಾತೂರ್: ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನಾವಿಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗುರುವಾರದಂದು ಲಾತೂರ್‍ನ ನೀಲಾಂಗಾ ಬಳಿ ಲ್ಯಾಂಡ್ ಆಗುವ ವೇಳೆ ಅಪಘಾತಕ್ಕೀಡಾಗಿದೆ.

    ವರದಿಗಳ ಪ್ರಕಾರ ಮುಖ್ಯಮಂತ್ರಿ ಫಡ್ನಾವಿಸ್ ಹಾಗೂ ಹೆಲಿಕಾಪ್ಟರ್‍ನನಲ್ಲಿದ್ದ ಇತರರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ.

    ಈ ಬಗ್ಗೆ ಸ್ವತಃ ದೇವೇಂದ್ರ ಫಡ್ನಾವಿಸ್ ಟ್ವೀಟ್ ಮಾಡಿದ್ದು, ನಮ್ಮ ಹೆಲಿಕಾಪ್ಟರ್ ಲಾತೂರ್‍ನಲ್ಲಿ ಅಪಘಾತಕ್ಕೀಡಾಗಿದ್ದು ನಿಜ. ಆದ್ರೆ ನಾನು ಮತ್ತು ನನ್ನ ತಂಡ ಸುರಕ್ಷಿತವಾಗಿದ್ದೇವೆ. ಗಾಬರಿಯಾಗುವಂತದ್ದೇನೂ ಇಲ್ಲ ಎಂದು ಹೇಳಿದ್ದಾರೆ.

    ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.