Tag: lathicharge

  • ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಮಿಳು ಸಿನಿಮಾ ರಂಗದ ಇಬ್ಬರು ಸೂಪರ್ ಸ್ಟಾರ್ ಸಿನಿಮಾ ಒಂದೇ ದಿನದಂದು ಬಿಡುಗಡೆ ಆಗಿದೆ. ಅದು ಎಂಟು ವರ್ಷಗಳ ನಂತರ ಈ ಸ್ಟಾರ್ ನಟರ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿತ್ತು. ಆ ಇಬ್ಬರೂ ಕಲಾವಿದರ ಅಭಿಮಾನಿಗಳು ಕೂಡ ಕಳೆದ ಹದಿನೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಜಗಳಕ್ಕೆ ನಾಂದಿ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿದ್ದ ಗಲಾಟೆ, ಇದೀಗ ನಿಜ ಸ್ವರೂಪ ಪಡೆದುಕೊಂಡಿದೆ.

    ಹೌದು, ಇವತ್ತು ಅಜಿತ್ ನಟನೆಯ ‘ತುಣಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಸಿನಿಮಾ ಏಕಕಾಲಕ್ಕೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ರಿಲೀಸ್ ಆದ ಅಷ್ಟೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭಿಮಾನಿಗಳು, ಒಬ್ಬರಿಗೊಬ್ಬರು ಪೋಸ್ಟರ್ ಹರಿದುಕೊಂಡು ಕಿತ್ತಾಡಿದ್ದಾರೆ. ಅಭಿಮಾನಿಗಳ ಈ ಅತಿರೇಕಕ್ಕೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್ ಅಭಿಮಾನಿಗಳು ಪೋಸ್ಟರ್ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ಹರಡಿ ಅಜಿತ್ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರ ಮಧ್ಯ ಪ್ರವೇಶವಾಗಿ ಲಾಠಿ ಚಾರ್ಜ್ ಮಾಡುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ.

    ಮೊದಲಿನಿಂದಲೂ ಅಜಿತ್ ಮತ್ತು ವಿಜಯ್ ಅಭಿಮಾನಿಗಳು ಹೀಗೆ ಬಡಿದಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಈ ಬಾರಿ ಥಿಯೇಟರ್ ವಿಚಾರವಾಗಿ ತುಣಿವು ಮತ್ತು ವಾರಿಸು ನಿರ್ಮಾಪಕರ ನಡುವೆ ತೀರ್ವ ಸ್ಪರ್ಧಿ ಏರ್ಪಟ್ಟಿತ್ತು. ವಿಜಯ್ ಸಿನಿಮಾಗೆ ಅತೀ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು ಅಜಿಯ್ ಅವರ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿತ್ತು. ಮೊದಲು ಸೋಷಿಯಲ್ ಮೀಡಿಯಾದಲ್ಲಿ ಹತ್ತಿಕೊಂಡ ದ್ವೇಷದ ಉರಿ, ಇದೀಗ ಚಿತ್ರಮಂದಿರತನಕ ಕಾಲಿಟ್ಟಿದೆ. ಮುಂದೆ ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

    ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

    ಕೋಲ್ಕತ್ತಾ: ಲೋಕಸಭೆಯ ನಾಲ್ಕನೇ ಹಂತದ ಚುನಾವಣೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮತ್ತಷ್ಟು ಜೋರಾಗಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಈ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಬಿದಿರಿನ ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆ ಕ್ಷೇತ್ರದ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕಾರಿನ ಹಿಂಬದಿಯ ಗಾಜನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಡೆದು ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಾಬುಲ್ ಸುಪ್ರಿಯೊ, ಕೇಂದ್ರದ ಭದ್ರತಾ ಪಡೆಯೊಂದಿಗೆ ಇದ್ದೇನೆ. ಮತ ಚಲಾಯಿಸಲು ಜನರನ್ನು ಮತಗಟ್ಟೆಯೊಳಗೆ ಬಿಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ಅಸನ್ಸೋಲ್ ಕ್ಷೇತ್ರದ ಬೂತ್ ನಂಬರ್ 169, 113, 218, 20, 21, 22, 35 ಮತ್ತು 36ಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಬೂತ್‍ನಲ್ಲಿ ಕಳೆದ ರಾತ್ರಿ ಕೇಂದ್ರ ಸೇನಾ ಪಡೆಯನ್ನು ಈ ಬೂತ್‍ನ ಭದ್ರತೆಗೆ ನಿಯೋಜಿಸಲಾಗಿತ್ತು. ಅದರೆ ಬೆಳಗ್ಗೆ ರಾಜ್ಯ ಪೊಲೀಸರು ಭದ್ರತೆಗೆ ಬಂದಿದ್ದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಎರಡು ಪಕ್ಷದ ಕಾರ್ಯಕರ್ತರ ನಡುವೆ ದೊಡ್ಡ ಘರ್ಷಣೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

    ಘಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಭದ್ರತಾ ಕಾರ್ಯಕ್ಕೆ ಕೇಂದ್ರ ಸೇನಾ ಪಡೆಗಳೇ ಬರಬೇಕು ಎಂದು ಒತ್ತಾಯಿಸಿ ಬೂತ್ ನಂಬರ್ 125 ಮತ್ತು 129 ರಲ್ಲಿ ಮತದಾನವನ್ನು ನಿಲ್ಲಿಸಿದರು. ಅದರೆ ಕೆಂದ್ರ ಸೇನಾಪಡೆಗಳು ಭದ್ರತೆಗೆ ಬಾರದೆ ಇದ್ದರೂ ಮತದಾನ ನಡೆಯಬೇಕು ಎಂದು ತೃಣಮೂಲ ಕಾಂಗ್ರೆಸ್‍ನ ಕಾರ್ಯಕರ್ತರು ಮತದಾನವನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬೂತ್‍ಗಳಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.

    https://www.youtube.com/watch?v=Tc8q7ImMXGk

  • ಗ್ರಾಮಸ್ಥರು, ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಯ್ತು ಡಿಸಿಸಿ ಬ್ಯಾಂಕ್ ಸಭೆ – ಪೊಲೀಸರಿಂದ ಲಾಠಿಚಾರ್ಜ್

    ಗ್ರಾಮಸ್ಥರು, ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಯ್ತು ಡಿಸಿಸಿ ಬ್ಯಾಂಕ್ ಸಭೆ – ಪೊಲೀಸರಿಂದ ಲಾಠಿಚಾರ್ಜ್

    ದಾವಣಗೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಮುಂದೂಡುವ ವಿಚಾರವಾಗಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಡುವೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಆಸಗೋಡು ಗ್ರಾಮದಲ್ಲಿ ನಡೆದಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ಆಯೋಜಿಸಲಾಗಿತ್ತು. ಆದರೆ ಗ್ರಾಮದ ಕೆಲ ಮುಖಂಡರ ಗುಂಪು ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ ಇರುವ ಹಿನ್ನೆಲೆ ಚುನಾವಣೆ ನಡೆಸಬಾರದು. ಸಭೆ ನಡದರೆ ಗಲಾಟೆ ಆಗುತ್ತದೆ ಎಂದು ಸಭೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಡಿಸಿಸಿ ಬ್ಯಾಂಕ್ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ್ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೂ ಸಹ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

    ಈ ಸನ್ನಿವೇಶದಲ್ಲಿ ಪ್ರಾಣ ಹೋದರೂ ಸಭೆ ನಡೆಸಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಕೂಗಾಡಿ ಗೊಂದಲ ಸೃಷ್ಟಿಸಿದರು. ಇದನ್ನು ತಡೆಯಲು ಬಂದ ಪೊಲೀಸರ ನಡುವೆಯೂ ಗ್ರಾಮಸ್ಥರ ಮಾತಿನ ಚಕಮಕಿ ನಡೆಯಿತು. ಸನ್ನಿವೇಶವನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರು ಅಂತಿಮವಾಗಿ ಲಾಠಿ ಬೀಸಿದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಮಹಿಳೆಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು: ಕೇಂದ್ರ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಟ್ಯೂಬ್ ಲೈಟ್, ಕಲ್ಲು, ಅಲ್ಯೂಮಿನಿಯಂ ಫ್ರೇಂ ನಿಂದ ಕೈದಿಗಳು ಬಡಿದಾಡಿಕೊಂಡಿದ್ದು, ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಕೈದಿಗಳ ದಾಳಿ ನಡೆಸಿದ್ದಾರೆ. 5 ಜನ ಕೈದಿಗಳಿಗೆ ಗಂಭೀರ ಗಾಯಗೊಂಡಿದ್ದರೆ, 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈ ಮುರಿದಿದೆ.

    ಗಲಾಟೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮನವಿಗೂ ಕ್ಯಾರೇ ಎನ್ನದೇ ಕೈದಿಗಳು ಬಡಿದಾಟ ಮುಂದುವರಿಸಿದ್ದಕ್ಕೆ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ಬಳಿಕ ಜೈಲಿನೊಳಗೆ ಡಿಸಿಪಿ ಹನುಮಂತರಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.