Tag: latha mangeshkar

  • ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ

    ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ

    ತಾ ಮಂಗೆಶ್ಕರ್ ಅವರ ನಿಧನದಿಂದ ಇನ್ನೂ ಆಚೆ ಬಾರದ ಸಹೋದರಿ ಆಶಾ ಭೋಸ್ಲೆಗೆ ಮತ್ತೊಂದು ಆಘಾತ ಉಂಟಾಗಿದೆ. ದಂತಕಥೆ ಗಾಯಕಿಯ ಆಶಾ ಅವರ ಪುತ್ರ ಆನಂದ್ ಭೋಸ್ಲೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಮನೆಯಲ್ಲಿದ್ದ ಆನಂದ್ ಏಕಾಏಕಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಕೂಡಲೇ ಅವರನ್ನು ದುಬೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಏಕಾಏಕಿ ನೆಲದ ಮೇಲೆ ಬಿದ್ದ ಪರಿಣಾಮದಿಂದಾಗಿ ಅವರಿಗೆ ಕೆಲವು ಗಾಯಗಳಾಗಿವೆ. ಈ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

    ಕೆಲವು ದಿನಗಳ ಹಿಂದೆಯಷ್ಟೇ ಈ ಘಟನೆ ನಡೆದಿದ್ದು, ಆನಂದ್ ಭೋಸ್ಲೆ ಅವರನ್ನು ಮೊದಲು ಐಸಿಯುಗೆ ದಾಖಲಿಸಲಾಗಿತ್ತು. ಈಗವರು ಚೇತರಿಸಿಕೊಂಡಿದ್ದು, ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಲತಾ ಅವರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಕ್ಕೆ ಈ ಘಟನೆಯು ತೀವ್ರ ಆತಂಕ ಸೃಷ್ಟಿ ಮಾಡಿತ್ತು. ಇನ್ನೂ ಆಸ್ಪತ್ರೆಯಲ್ಲಿ ಆನಂದ್ ಚಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಪ್ರತಿದಿನವೂ ಆಶಾ ಭೋಸ್ಲೆಗೆ ಕರೆ ಮಾಡುತ್ತಿದ್ದಾರೆ.

    ಆಶಾ ಭೋಂಸ್ಲೆ ಅವರು ತಮ್ಮ ಮಗ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿದಾಗ ದುಬೈನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರು ಶೀಘ್ರದಲ್ಲೇ ಮುಂಬೈಗೆ ಹಿಂತಿರುಗುವುದಿಲ್ಲವಂತೆ. ಆನಂದ್ ಚೇತರಿಸಿಕೊಳ್ಳುತ್ತಿದ್ದು, ಮನೆಗೆ ಯಾವತ್ತು ತೆರಳಲಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.

    ಈ ವರ್ಷದ ಆರಂಭದಲ್ಲಿ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರ ಹಠಾತ್ ನಿಧನದಿಂದಾಗಿ ಇಡೀ ರಾಷ್ಟ್ರಕ್ಕೆ ಮತ್ತು ಮಂಗೇಶ್ಕರ್ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು.

  • ಅವರ ಮುಖದಲ್ಲಿ ನಗು ಇತ್ತು – ರೋಗಿಗಳನ್ನು ಸಮಾನವಾಗಿ ನೋಡಿಕೊಳ್ಳಿ ಎಂದಿದ್ದ ಗಾನ ಕೋಗಿಲೆ

    ಅವರ ಮುಖದಲ್ಲಿ ನಗು ಇತ್ತು – ರೋಗಿಗಳನ್ನು ಸಮಾನವಾಗಿ ನೋಡಿಕೊಳ್ಳಿ ಎಂದಿದ್ದ ಗಾನ ಕೋಗಿಲೆ

    ಮುಂಬೈ: ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮ್ದಾನಿ ಅವರು ದಿವಂಗತ ಲತಾ ಮಂಗೇಶ್ಕರ್‍ರವರು ಕೊನೆಯುಸಿರೆಳೆಯುವ ಸಂದರ್ಭದ ಅಂತಿಮ ಕ್ಷಣಗಳಲ್ಲಿ ‘ಅವರ ಮುಖದಲ್ಲಿ ನಗು ಇತ್ತು’ ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಲತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸಮ್ದಾನಿ, ಲತಾ ಜೀ ಅವರ ಆರೋಗ್ಯ ಹದಗೆಟ್ಟಾಗ ನಾನು ಅವರಿಗೆ ಚಿಕಿತ್ಸೆ ನೀಡುತ್ತಿದ್ದೆ. ಆದರೆ ಅವರ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಆದರೂ ನಾವು ನಮ್ಮ ಪ್ರಯತ್ನವನ್ನು ಮುಂದುವರೆಸಿದ್ದೆವು. ಆದರೆ ಅಂತಿಮವಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ದಿ.ಲತಾ ಮಂಗೇಶ್ಕರ್‌ಗೆ ಮರಳು ಕಲಾಕೃತಿ ಅರ್ಪಿಸಿದ ಸುದರ್ಶನ್ ಪಟ್ನಾಯಕ್

    ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನ ನನಗೆ ಒಂದು ಮಾತನ್ನು ಹೇಳಿದ್ದರು. ಯಾವಾಗಲೂ ನಿಮ್ಮ ಆಸ್ಪತ್ರೆಗೆ ಬರುವ ರೋಗಿಗಳೆಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಿ ಎಂದು ಹೇಳುತ್ತಿದ್ದರು. ಅಲ್ಲದೆ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಯಾವಾಗಲೂ ಸಿದ್ಧರಾಗಿರುತ್ತಿದ್ದರು. ಅವರು ಎಂದಿಗೂ ಚಿಕಿತ್ಸೆಗೆ ಹೆದರಿ ಅದರಿಂದ ದೂರವಿರಲಿಲ್ಲ ಎಂದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

    ಲತಾ ಜೀ ಅವರ ಸರಳ ಸ್ವಭಾವದ ಬಗ್ಗೆ ಮಾತನಾಡುತ್ತಾ ಡಾ ಸಮ್ದಾನಿ ಅವರು, ನನ್ನ ಜೀವನದುದ್ದಕ್ಕೂ ನಾನು ಅವರ ನಗುವನ್ನು ನೆನಪಿಟ್ಟುಕೊಂಡಿರುತ್ತೇನೆ. ನಿಧನ ಹೊಂದುವ ಅಂತಿಮ ಕ್ಷಣಗಳಲ್ಲಿಯೂ ಅವರ ಮುಖದಲ್ಲಿ ನಗು ಇತ್ತು. ಕಳೆದ ಕೆಲವು ವರ್ಷಗಳಿಂದ ಅವರ ಆರೋಗ್ಯವು ಸರಿ ಇರಲಿಲ್ಲ. ಆದ್ದರಿಂದ ಅವರು ಯಾರೊಂದಿಗೂ ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

    ನಾನು ಲತಾ ಅವರಿಗೆ ಚಿಕಿತ್ಸೆ ನೀಡುತ್ತಿರುವಾಗಿನಿಂದ ಅವರು ತುಂಬಾ ಕಡಿಮೆ ಮಾತನಾಡುತ್ತಿದ್ದರು. ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ದೇವರ ಯೋಜನೆ ಬೇರೆಯೇ ಇತ್ತು. ಅವರು ನಮ್ಮೆಲ್ಲರನ್ನೂ ಶಾಶ್ವತವಾಗಿಯೇ ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.

    ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಮಂಗೇಶ್ಕರ್ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾದೇ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಕ್ರಿಯೆ ನಡೆಸಲಾಯಿತು.

  • ದಿ.ಲತಾ ಮಂಗೇಶ್ಕರ್‌ಗೆ ಮರಳು ಕಲಾಕೃತಿ ಅರ್ಪಿಸಿದ ಸುದರ್ಶನ್ ಪಟ್ನಾಯಕ್

    ದಿ.ಲತಾ ಮಂಗೇಶ್ಕರ್‌ಗೆ ಮರಳು ಕಲಾಕೃತಿ ಅರ್ಪಿಸಿದ ಸುದರ್ಶನ್ ಪಟ್ನಾಯಕ್

    ಮುಂಬೈ: ಖ್ಯಾತ ಮರಳು ಕಲಾಕೃತಿಗಾರ ಸುದರ್ಶನ್ ಪಟ್ನಾಯಕ್ ಅವರು ದಿವಂಗತ ಲತಾ ಮಂಗೇಶ್ಕರ್ ಅವರಿಗೆ ಸುಂದರವಾದ ಮರಳು ಕಲಾಕೃತಿಯನ್ನು ಅರ್ಪಿಸಿದ್ದಾರೆ.

    ಸಂಗೀತ ದಂತಕಥೆ ಲತಾ ಮಂಗೇಶ್ಕರ್ ಅವರ ಶಾಶ್ವತ ಸ್ಮರಣೆಯನ್ನು ಗೌರವಿಸಲು, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‍ನಲ್ಲಿ ದಿವಂಗತ ಗಾಯಕಿಯ ಸುಂದರವಾದ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಕಲಾಕೃತಿಯಲ್ಲಿ ಲತಾ ಮಂಗೇಶ್ಕರ್‍ಗೆ ಪಟ್ನಾಯಕ್ ಅವರು ಬಿಳಿ ಸೀರೆಯನ್ನುಡಿಸಿ ಸೀರೆಯ ಬಾರ್ಡರ್‌ಗೆ ಚಿನ್ನದ ಬಣ್ಣವನ್ನು ಬಳಿದಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದ ಅಕ್ಷರಗಳೊಂದಿಗೆ ಲತಾ ಅವರ ಮೇಲೆ ಭಾರತದ ಧ್ವಜವನ್ನು ಹಾರಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

    ಕಲಾಕೃತಿಯ ಜೊತೆಗೆ, ಸುದರ್ಶನ್ ಅವರು “ಮೇರಿ ಆವಾಜ್ ಹೈ ಪೆಹೆಚಾನ್ ಹೈ” ಎಂದು ಬರೆದಿದ್ದು, ಇದು ಲತಾ ಅವರ ಧ್ವನಿಯ ಶಕ್ತಿಯನ್ನು ಸಂಕೇತಿಸುತ್ತದೆ. ಸುದರ್ಶನ್ ಪಟ್ನಾಯಕ್ ಅವರು 16 ವರ್ಷಗಳಿಂದ ತಮ್ಮ ಮರಳು ಕಲೆಯನ್ನು ರಚಿಸುತ್ತಿದ್ದಾರೆ. ಅವರ ಅನೇಕ ಮರಳು ಶಿಲ್ಪಗಳು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿವೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಗಾಯಕಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

    ನಿನ್ನೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕೂಡ ಮುಂಬೈಗೆ ತೆರಳಿದ್ದರು.

  • ಬೀದರ್‌ಗೂ ಲತಾ ಮಂಗೇಶ್ಕ‌ರ್‌ಗೂ ಇದೆ ನಂಟು- 2 ಬಾರಿ ಬಂದು ಹೋಗಿದ್ದ ಗಾನಲತೆ

    ಬೀದರ್‌ಗೂ ಲತಾ ಮಂಗೇಶ್ಕ‌ರ್‌ಗೂ ಇದೆ ನಂಟು- 2 ಬಾರಿ ಬಂದು ಹೋಗಿದ್ದ ಗಾನಲತೆ

    ಬೀದರ್: ಸಂಗೀತದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೊಡುಗೆ ಅಪಾರವಾಗಿದ್ದು, ಲತಾ ಮಂಗೇಶ್ಕರ್ ಗೆ ರಾಜ್ಯದ ಅದರಲ್ಲೂ ಬೀದರ್ ನಂಟು ಇದೆ.

    ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಶಾಹಜಾನಿ ಔರಾದ್ ನಲ್ಲಿ ಲತಾ ಮಂಗೇಶ್ಕರ್ 1971 ರ ಡಿಸೆಂಬರ್ 10 ರಲ್ಲಿ ತಂದೆ ದೀನಾನಾಥ್ ಮಂಗೇಶ್ಕರ್ ಹೆಸರಿನಲ್ಲಿ ಕಾಲೇಜು ಸ್ಥಾಪನೆ ಮಾಡಿದ್ದಾರೆ. ಕಾಲೇಜು ಸ್ಥಾಪನೆ ದಿನ ಸೇರಿದಂತೆ ಎರಡು ಬಾರಿ ಲತಾ ಮಂಗೇಶ್ಕರ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಯಾಕೆ ಮದುವೆಯಾಗಲಿಲ್ಲ – ಪ್ರೀತಿ, ವಿವಾಹ, ಮಕ್ಕಳ ಬಗ್ಗೆ ಏನು ಹೇಳ್ತಿದ್ರು ಗೊತ್ತಾ?

    ಈ ಕಾಲೇಜಿನ ಅಡಳಿತ ಮಂಡಳಿ ಲತಾ ಮಂಗೇಶ್ಕರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸೂಚಿಸಿದ್ದಾರೆ. ಇನ್ನೂ 1981 ರಲ್ಲಿ ಲತಾ ಮಂಗೇಶ್ಕರ್ ಹುಮ್ನಾಬಾದ್ ಹೊರ ವಲಯದ ಮಾಣಿಕ್ ಪ್ರಭು ಸಂಸ್ಥಾನಕ್ಕೂ ಭೇಟಿ ನೀಡಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ – ರಜೆ ಫೋಷಿಸಿದ ಮಹಾರಾಷ್ಟ್ರ ಸರ್ಕಾರ!

    ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ, ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಗ್ಗೆ 8.12ರ ಸುಮಾರಿಗೆ ಲತಾ ಸಾವನ್ನಪ್ಪಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಮುಂಬೈನ ನಿವಾಸಕ್ಕೆ ಲತಾ ಮಂಗೇಶ್ಕರ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಇದನ್ನೂ ಓದಿ: ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್

    ಸಂಜೆ 4 ಗಂಟೆವರೆಗೆ ಮನೆ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 4 ಗಂಟೆಗೆ ಶಿವಾಜಿ ಪಾರ್ಕ್‍ನತ್ತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆ ಲತಾ ಅವರ ನೆಚ್ಚಿನ ಬಣ್ಣವಾದ ಬಿಳಿ ಬಣ್ಣದ ಹೂಗಳಿಂದಲೇ ಪಾರ್ಥಿವ ಶರೀರದ ವಾಹನವನ್ನು ಸಿಂಗರಿಸಲಾಗಿತ್ತು. ಶಿವಾಜಿ ಪಾರ್ಕ್‍ನಲ್ಲಿ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ರಸ್ತೆಯ ಇಕ್ಕೆಲೆಗಳಲ್ಲಿ ನಿಂತು ಸಾವಿರಾರು ಅಭಿಮಾನಿಗಳು, ಜನರು ಅಂತಿಮ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ಮುಂಬೈನ ಹೃದಯ ಭಾಗದಲ್ಲಿರುವ ಶಿವಾಜಿಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರಿತು. ಶಿವಾಜಿ ಪಾರ್ಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ನಟ ಶಾರೂಖ್ ಖಾನ್ ಸೇರಿ ಹಲವು ಗಣ್ಯರು ಭಾವಪೂರ್ಣ ಬೀಳ್ಕೊಡುಗೆ ನೀಡಿದರು.

    ಭಾರತ ರತ್ನ, ಭಾರತಾಂಬೆಯ ಹೆಮ್ಮೆಯ ಪುತ್ರಿಗೆ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ರಾಷ್ಟ್ರಧ್ವಜವನ್ನು ಲತಾ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಲತಾ ಮಂಗೇಶ್ಕರ್ ಕುಟುಂಬದ ವತಿಯಿಂದ ವೈಯಕ್ತಿಕ ವಿಧಿವಿಧಾನಗಳು ನಡೆದವು. ಲತಾ ಅವರ ಸಹೋದರನ ಮಗ ಎಲ್ಲಾ ಕ್ರಿಯಾಧಿಗಳನ್ನು ನೆರವೇರಿಸಿ, ಚಿತೆಗೆ ಅಗ್ನಿ ಸ್ಪರ್ಶಿಸಿದರು.

  • ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ನೀವು ನಮ್ಮನ್ನು ಅಗಲಿದ್ದೀರಿ ಅಂತ ನಂಬಲಾಗುತ್ತಿಲ್ಲ: ಧರ್ಮೇಂದ್ರ

    ಮುಂಬೈ: ಲತಾ ಮಂಗೇಶ್ಕರ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಅಂತ ನಂಬಲಾಗುತ್ತಿಲ್ಲ ಎಂದು ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಧರ್ಮೇಂದ್ರ ಅವರು ಲತಾ ಮಂಗೇಶ್ಕರ್ ಅವರ ಜೊತೆ ಪ್ರೀತಿಯಿಂದ ಅಪ್ಪಿಕೊಂಡ ಪೋಸ್ಟ್‌ವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಾಯಕಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಇಡೀ ಜಗತ್ತು ನಿಮ್ಮಂತಹ ಧಿಮಂತ ಮಹಿಳೆಯನ್ನು ಕಳೆದುಕೊಂಡ ದುಃಖದಲ್ಲಿದೆ. ನೀವು ನಮ್ಮನ್ನು ತೊರೆದಿದ್ದೀರಿ ಅನ್ನುವದನ್ನೆ ನಂಬಲಾಗುತ್ತಿಲ್ಲ. ಲತಾ ಜೀ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.

    ಲತಾ ಮಂಗೇಶ್ಕರ್‍ರವರು ಧರ್ಮೇಂದ್ರ ಮತ್ತು ಅವರ ಪತ್ನಿ ಹೇಮಾ ಮಾಲಿನಿ ಇಬ್ಬರನ್ನೂ ತುಂಬಾ ಇಷ್ಟಪಡುತ್ತಿದ್ದರು. ಅವರು, ಡಿಯೋಲ್ ಕುಟುಂಬದೊಂದಿಗೆ ಅತ್ಯಂತ ಸೌಹಾರ್ದಯುತ ಮತ್ತು ವಿಶೇಷ ಸಂಬಂಧವನ್ನು ಹೊಂದಿದ್ದರು. ಲತಾ ಅವರು ಹಿರಿಯ ನಟನ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

    ಧರ್ಮೇಂದ್ರ ಅವರ ಹಲವು ಚಿತ್ರಗಳಿಗೆ ಲತಾ ಮಂಗೇಶ್ಕರ್ ತಮ್ಮ ಧ್ವನಿಯನ್ನು ನೀಡಿದ್ದು, ಅವುಗಳಲ್ಲಿ `ಸಾಥಿಯಾ ನಹಿ ಜಾನಾ ಕೆ ಜೀ ನಾ ಲಗೇ`, `ಕಲ್ ಕಿ ಹಸೀನ್ ಮುಲಾಕತ್ ಕೆ ಲಿಯೇ`, `ಗಿರ್ ಗಯಾ ಜುಮ್ಕಾ ಗಿರ್ನೆ ದೋ`, `ಜಿಲ್ಮಿಲ್ ಸಿತಾರೋನ್ ಕಾ ಅಂಗನ್ ಹೋಗಾ`, ಹೀಗೆ ಅನೇಕ ಹಾಡುಗಳಿಗೆ ತಮ್ಮ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಗಾಯಕಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

  • ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್

    ನಾವು ಲತಾ ಮಂಗೇಶ್ಕರ್ ಅವರ ಸಾಂಗ್‍ಗಳನ್ನು ಕೇಳಿ ಬೆಳೆದಿದ್ದೇವೆ: ಶಿವರಾಜ್ ಕುಮಾರ್

    ಬೆಂಗಳೂರು: ನಾವು ಬಾಲಿವುಡ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸಂತಾಪ ವ್ಯಕ್ತಪಡಿಸಿದರು.

    ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾವು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ. ಭಾರತೀಯ ಚಲನಚಿತ್ರರಂಗದಲ್ಲಿ ಲತಾ ಅವರದ್ದು ಅತ್ಯುತ್ತಮ ಧ್ವನಿ ಎಂದರೇ ತಪ್ಪಾಗಲಾರದು. ಅಷ್ಟೇ ಅಲ್ಲದೆ ಅವರು ಹಾಡೋದನ್ನು ಬಿಟ್ಟು ಅದರ ಆಚೆಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ

    ಲತಾ ಮಂಗೇಶ್ಕರ್ ಅವರನ್ನು ಭೇಟಿಯಾಗುವ ಭಾಗ್ಯ ನನಗೆ ಇದುವರೆಗೂ ಸಿಗಲಿಲ್ಲ. ಅಪ್ಪಾಜಿ ಡಾ. ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದರು. ನಮ್ಮ ಮಾವನವರಾದ ಬಂಗಾರಪ್ಪ ಅವರು ಕೂಡಾ ಅವರನ್ನು ಭೇಟಿ ಆಗಿದ್ದರು. ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಒಮ್ಮೆ ಅವರು ಬೆಂಗಳೂರಿಗೆ ಬಂದಿದ್ದ ಫೋಟೋವನ್ನು ನೋಡಿದ್ದು, ಮಧು ಬಂಗಾರಪ್ಪ ಅವರು ಅದನ್ನು ತೋರಿಸಿದ್ದರು ಎಂದು ಹೇಳಿದರು.

    ಅಪ್ಪಾಜಿ ರಾಜ್‍ಕುಮಾರ್ ಅವರು ಈ ಹಿಂದೆ ಬಾಂಬೆಯಲ್ಲಿದ್ದಾಗ ಲತಾರವರನ್ನು ಭೇಟಿ ಆಗಿದ್ದಾರೆ. ಅವರ ಧ್ವನಿ ಭಾರತೀಯ ಚಲನಚಿತ್ರರಂಗದಲ್ಲಿ ಎಂದಿಂದಿಗೂ ಅಜರಾಮರ. ಬೇರೆ ಮಕ್ಕಳಿಗೂ ಹಾಡಲು ಪ್ರೋತ್ಸಾಹ ನೀಡುತ್ತಿದ್ದು, ಅಂತ ಒಳ್ಳೇಯ ವಕ್ತಿತ್ವದ ಗಾಯಕಿಯನ್ನು ಕಳೆದುಕೊಂಡಿರುವುದು ನಮಗೆ ತುಂಬಾ ನೋವು ತಂದಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ಇದು ಒಂದು ದೊಡ್ಡ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಲತಾ ಅವರು ಹಾಡಿರುವ ಅನೇಕ ಹಿಂದಿ ಸಾಫ್ಟ್, ಡಿವೋಶನಲ್ ಹಾಗೂ ಎಮೋಷನಲ್ ಹಾಡುಗಳ ಛಾಪು ಯಾವಗಲೂ ಸಂಗೀತಕ್ಷೇತ್ರದಲ್ಲಿ ಅಚ್ಚ ಅಳಿಯದೇ ಇದ್ದೇ ಇರುತ್ತೆ. ಅವರು ಹಾಡಿರುವ ಯಾವುದೇ ಹಾಡನ್ನು ಕೇಳಿದರು ಸಾಕು ಲತಾ ಮಂಗೇಶ್ಕರ್ ಅವರೇ ಹಾಡಿದ್ದಾರೆ ಅಂತಾ ಗೊತ್ತಾಗುತ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಮುರಿದರು.

  • ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

    ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

    ಮುಂಬೈ: ಖ್ಯಾತಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.

    ಜನವರಿ 8 ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಯಕಿಯನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅಲ್ಲಿ ಅವರು ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    CORONA-VIRUS.

    ಗಾಯಕಿಯ ವಕ್ತಾರೆ ಅನುಷಾ ಶ್ರೀನಿವಾಸನ್ ಐಯ್ಯರ್ ಅವರು ಲತಾ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅವರು, ಲತಾ ದೀದಿ ಸದ್ಯ ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ಪ್ರತಿ ಸಮದನಿ ಹಾಗೂ ಅವರ ತಂಡ ಚಿಕಿತ್ಸೆ ನೀಡುತ್ತಿದೆ. ಲತಾ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಲತಾ ಅವರ ಆರೋಗ್ಯದ ಬಗ್ಗೆ ಊಹಾಪೋಗಳು ಹರಿದಾಡಿತ್ತು. ದಿನದಿಂದ ದಿನಕ್ಕೆ ಗಾಯಕಿ ಆರೋಗ್ಯ ಕ್ಷೀಣಿಸುತ್ತಿದೆ ಎಂಬುದಾಗಿ ಹಬ್ಬಿತ್ತು. ಇದರಿಂದ ಸಿಟ್ಟಿಗೆದ್ದ ವಕ್ತಾರೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ ಎಂಬುದಾಗಿ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

    ಇಂತಹ ಊಹಾಪೋಹಗಳಿಂದ ಲತಾ ಅವರ ಕುಟುಂಬಕ್ಕೆ ನೋವಾಗಿದೆ. ಲತಾ ದೀದಿ ಆರೋಗ್ಯ ಸುಧಾರಿಸುತ್ತಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಪಂದಿಸುತ್ತಿದ್ದಾರೆ. ದಯಮಾಡಿ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಲ್ಲದೇ ವೈರಲ್ ಕೂಡ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.