Tag: last day

  • ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನ

    ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ದರ್ಶನಕ್ಕೆ ಇಂದು ಕಡೆಯ ದಿನಾಗಿದ್ದು ಬಾಗಿಲು ಹಾಕಲು ಕ್ಷಣಗಣನೆ ಆರಂಭವಾಗಿದೆ.

    ಇಂದು ಮಧ್ಯಾಹ್ನ 12:30ರ ನಂತರ ದೇವಾಲಯದ ಬಾಗಿಲು ಹಾಕಲಾಗುತ್ತೆ. ಬಾಗಿಲು ಹಾಕುವಾಗ ಹಚ್ಚಿಸಿಟ್ಟ ದೀಪ ಒಂದು ವರ್ಷದ ನಂತರ ಬಾಗಿಲು ತೆರೆದಾಗಲೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂವು ವರ್ಷ ಕಳೆದರೂ ಬಾಡುವುದಿಲ್ಲ ಎಂಬ ನಂಬಿಕೆಯಿದೆ.

    ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಹೀಗಾಗಿ ಬಹುತೇಕ ಭಕ್ತರು ಈ ವರ್ಷ ಹಾಸನಾಂಬೆ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಇದೇ ನವೆಂಬರ್ 5ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದ್ದು ಇಂದು ಬಾಗಿಲನ್ನು ಹಾಕಲಾಗುತ್ತಿದೆ.

    ಕೊನೆಯ ದಿನವಾಗಿದ್ದರಿಂದ ಇಂದು ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಸಿಟಿ ರವಿ ದೇಗುಲ್ಲೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

  • 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆಯ ದಿನ

    14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆಯ ದಿನ

    ಬೆಂಗಳೂರು: 14 ಕ್ಷೇತ್ರಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಕೊನೆಯ ದಿನ. ಸಂಜೆಯವರೆಗೆ ಪ್ರಚಾರಕ್ಕೆ ಅವಕಾಶವಿದ್ದು ನಂತರ ಮನೆಮನೆ ಪ್ರಚಾರ ಮಾತ್ರ ನಡೆಸಲು ಅನುಮತಿಯಿದೆ.

    ಕೊನೆಯ ದಿನ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳ ಸರ್ಕಸ್ ನಡೆಸುತ್ತಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಈ ದಿನದ ಮೇಲೆ ಆಯೋಗ ಹದ್ದಿನಕಣ್ಣನ್ನು ಇಟ್ಟಿದೆ.

    ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ಮುಕ್ತಾಯಕ್ಕೆ 48 ತಾಸು ಮುನ್ನ ಅಂದರೆ ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

    ಸ್ಥಳೀಯ ಮತದಾರರಲ್ಲದ ನಾಯಕರೂ ಇಂದು ಸಂಜೆಯೇ ಕ್ಷೇತ್ರಗಳನ್ನು ಬಿಟ್ಟು ಹೊರಡಬೇಕಾಗುತ್ತದೆ. ಈ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳು ರೋಡ್ ಶೋ ನಡೆಸಿ ಮತಯಾಚನೆ ನಡೆಸುತ್ತಾರೆ.

    ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬಳಿಕ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಬುಧವಾರ ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಈ ಪ್ರಚಾರದ ವೇಳೆ ಮತದಾರರಿಗೆ ನಾನಾ ಆಮಿಷಗಳನ್ನು ಒಡ್ಡುವ ಸಾಧ್ಯತೆಯಿತೆ. ಈ ರೀತಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.

  • ವಿದ್ಯಾರ್ಥಿಗಳು ಶಾಲೆಯ ಕೊನೆಯ ದಿನದ ಸಂಭ್ರಮಾಚರಣೆ ಮಾಡಿದ ವಿಡಿಯೋ ವೈರಲ್

    ವಿದ್ಯಾರ್ಥಿಗಳು ಶಾಲೆಯ ಕೊನೆಯ ದಿನದ ಸಂಭ್ರಮಾಚರಣೆ ಮಾಡಿದ ವಿಡಿಯೋ ವೈರಲ್

    ವಾಷಿಂಗ್ಟನ್: ಶಾಲೆಯ ಕೊನೆ ದಿನ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಸಂಭ್ರಮವಿರುತ್ತದೆ. ಹಾಗೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಸಾವಿರಾರು ಕಾಗದಗಳನ್ನ ಎಸೆಯೋ ಮೂಲಕ ಶಾಲೆಯ ಕೊನೆಯ ದಿನದ ಸಂಭ್ರಮಾಚರಣೆಯನ್ನ ಮಾಡಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಅರಿಝೋನಾದ ಚಾಂಡ್ಲರ್‍ನಲ್ಲಿರೋ ಬಾಶಾ ಹೈ ಸ್ಕೂಲ್‍ನ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ರೀತಿ ಸಂಭ್ರಮಾಚರಣೆ ಮಾಡಿದ್ದಾರೆ. ಪ್ರತಿವರ್ಷ ಶಾಲೆಯ ಕೊನೆಯ ದಿನದಂದು ವಿದ್ಯಾರ್ಥಿಗಳು ಎಷ್ಟು ಸಾಧ್ಯವೋ ಅಷ್ಟು ಪೇಪರ್‍ಗಳನ್ನ ಒಟ್ಟುಗೂಡಿಸಿ ಶಾಲೆಯ ಮೆಟ್ಟಿಲುಗಳ ಮೇಲೆ ಬೀಳುವಂತೆ ಎಸೆಯುತ್ತಾರೆ. ಅಷ್ಟೇ ಅಲ್ಲ, ರಾಶಿರಾಶಿಯಾಗಿ ಬಿದ್ದ ಪೇಪರ್‍ಗಳ ಮೇಲೆ ಜಾರು ಬಂಡಿ ಕೂಡ ಆಡ್ತಾರೆ.

    ಇಷ್ಟೆಲ್ಲಾ ಮಾಡಿದ್ರೂ ಶಿಕ್ಷಕರು ಏನೂ ಕೇಳಲ್ವಾ ಅಂದ್ರಾ? ಇಲ್ಲ. ಇದನ್ನೆಲ್ಲಾ ಕೊನೆಯಲ್ಲಿ ವಿದ್ಯಾರ್ಥಿಗಳೇ ಸ್ವಚ್ಛ ಮಾಡೋದ್ರಿಂದ ಬೈಗುಳವಿಲ್ಲ. ಈ ವಿಶಿಷ್ಟ ಸಂಭ್ರಮಾಚರಣೆಯನ್ನ ಜಾರ್ಡನ್ ವೈಟ್ ಅನ್ನೋ ವಿದ್ಯಾರ್ಥಿಯೊಬ್ಬರು ವಿಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಇದೀಗ ಸಖತ್ ವೈರಲ್ ಆಗಿದೆ.

    ವಿದ್ಯಾರ್ಥಿಗಳೆಲ್ಲರೂ 5..4…3..2..1… ಅಂತ ಕೌಂಟ್‍ಡೌನ್ ಮಾಡಿ ಕೊನೆಯಲ್ಲಿ ಚೀರುತ್ತಾ ಖುಷಿಯಿಂದ ಪೇಪರ್‍ಗಳನ್ನ ಎರಚಿದ್ದಾರೆ. ಸುಮಾರು ಒಂದೂವರೆ ನಿಮಿಷಗಳವರೆಗೆ ಪೇಪರ್‍ನ ಸುರಿಮಳೆಯೇ ಆಗುತ್ತದೆ. ಮೆಟ್ಟಿಲ ಮೇಲೆ ಬಿದ್ದ ಪೇಪರ್ ರಾಶಿಯ ಮೇಲೆ ವಿದ್ಯಾರ್ಥಿಗಳು ಜಾರಿಕೊಂಡು ಕೆಳಗೆ ಬಂದಿದ್ದಾರೆ. ಈ ವಿಡಿಯೋವನ್ನ ಮೇ 27ರಂದು ಅಪ್‍ಲೋಡ್ ಮಾಡಲಾಗಿದ್ದು ಈವರೆಗೆ 74 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 33 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

    ಸಂಭ್ರಮಾಚರಣೆ ಮುಗಿದ ಬಳಿಕ ಈ ಪೇಪರ್‍ಗಳನ್ನ ರೀಸೈಕಲ್ ಮಾಡಲಾಗಿದೆ ಅಂತ ಜಾರ್ಡನ್ ವೈಟ್ ತಿಳಿಸಿದ್ದಾರೆ.