Tag: Laptop

  • ಸಿದ್ದರಾಮಯ್ಯ ಸರ್ಕಾರದಲ್ಲಿ ಲ್ಯಾಪ್‍ಟಾಪ್ ಹಗರಣ?- ಗೋಲ್‍ಮಾಲ್ ಬಗ್ಗೆ `ಐಎಎಸ್’ ಪತ್ರ

    ಸಿದ್ದರಾಮಯ್ಯ ಸರ್ಕಾರದಲ್ಲಿ ಲ್ಯಾಪ್‍ಟಾಪ್ ಹಗರಣ?- ಗೋಲ್‍ಮಾಲ್ ಬಗ್ಗೆ `ಐಎಎಸ್’ ಪತ್ರ

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೊಂದು ಹಗರಣ ನಡೆದಿರುವ ಆರೋಪ ಕೇಳಿಬಂದಿದೆ. ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡ್ತಿವಿ ಎಂದ ಉನ್ನತ ಶಿಕ್ಷಣ ಇಲಾಖೆಯವರು ದುಡ್ಡು ಹೊಡೆಯೋಕೆ ಹೊರಟರಾ ಅನ್ನೋ ಅನುಮಾನ ಶುರುವಾಗಿದೆ.

    ವರ್ಗಾವಣೆಗೂ ಮುನ್ನ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತ ಅಜಯ್ ನಾಗಭೂಷಣ್ ಮುಖ್ಯಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡೋಕೆ ಸರ್ಕಾರ ಹೊರಟಿದೆ. ಆದ್ರೆ ಖರೀದಿಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ಗೋಲ್‍ಮಾಲ್ ನಡೆದಿರುವ ಸಾಧ್ಯತೆ ಇದೆ ಅಂತ ಹಿಂದಿನ ಆಯುಕ್ತ ಅಜಯ್ ನಾಗಭೂಷನ್ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ಕೋಟ್ಯಂತರ ರುಪಾಯಿ ವಹಿವಾಟು ನಡೆಯುವ ಆದೇಶಗಳಿಗೆ ಸರ್ಕಾರದ ಅಧಿಕಾರಿಗಳು ಸಹಿ ಹಾಕೋದು ಬಿಟ್ಟು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರ ಕೆಳಗೆ ಬರುವ ಭೋದಕ ಸಿಬ್ಬಂದಿ ಭಾಗ್ಯವಾನ್ ಮುದಿಗೌಡರ ಅವರಿಂದ ಸಹಿ ಮಾಡಿಸಿ ಆದೇಶ ಹೊರಡಿಸಲಾಗಿದೆ.

    ಒಂದು ಪ್ಯಾಕೇಜ್‍ನಲ್ಲಿ ಖರೀದಿ ಮಾಡೋದು ಬಿಟ್ಟು ನಾಲ್ಕು ಪ್ಯಾಕೇಜ್‍ಗಳಲ್ಲಿ ಖರೀದಿ ಮಾಡೋಕೆ ಹೊರಟ್ಟಿದ್ದಾರೆ. ಇದರಿಂದ ಗುಣಮಟ್ಟ ಹಾಗು ಬೇರೆ ಬೇರೆ ದರಗಳು ನಿಗಧಿಯಾಗೋ ಸಾಧ್ಯತೆ ಇದೆ ಅಂತ ಅಜಯ್ ಪತ್ರ ಬರೆದಿದ್ದಾರೆ. ಆದ್ರೆ ಪತ್ರ ಬರೆದು ಒಂದು ವಾರ ಕಳೆದ್ರು ಮುಖ್ಯಕಾರ್ಯದರ್ಶಿ ಕ್ಯಾರೆ ಅಂತಿಲ್ವಂತೆ.

  • ಬಸವಣ್ಣನನ್ನು ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ

    ಬಸವಣ್ಣನನ್ನು ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ

    ಬಳ್ಳಾರಿ: ಸಮ ಸಮಾಜದ ಬೀಜವನ್ನು ಬಸವಣ್ಣನವರು ಬಿತ್ತಿ ಹೋಗಿದ್ದಾರೆ. ಮುಂದುವರೆದ ರಾಷ್ಟ್ರಗಳಲ್ಲೂ ಸಹ ಸಮ ಸಮಾಜ ನಿರ್ಮಾಣವಾಗಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ನಡೆದ ದಾರಿ, ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಹೀಗಾಗಿ ಬಸವ ವ್ರತ ಬಸವ ಪಥ ಆಚರಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭವನ್ನು ನಗರದ ಕಿತ್ತೂರ ರಾಣಿ ಚೆನ್ನಮ್ಮ ಶಾಲಾ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, 1916ರಲ್ಲಿ ಆರಂಭವಾದ ವೀರಶೈವ ವಿದ್ಯಾವರ್ಧಕ ಸಂಘ ಲಕ್ಷಾಂತರ ಜನರಿಗೆ ಶಿಕ್ಷಣ ಹಾಗೂ ಅನ್ನದಾಸೋಹ ನೀಡಿದ ಹೆಮ್ಮೆ ಹೊಂದಿದೆ. ವಿವಿ ಸಂಘದ ಆಶ್ರಯದಲ್ಲಿ 40 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮೂಲಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

    ಶಿಕ್ಷಣ ಎಲ್ಲರಿಗೂ ಅತ್ಯಗತ್ಯವಾಗಿದೆ. ಸಮಾಜದಲ್ಲಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಇಲ್ಲದಿದ್ದರೆ ಸಾಮಾಜಿಕ ಆರ್ಥಿಕ ಅಸಮಾನತೆ ಎದುರಾಗುತ್ತೆ. ವೀರಶೈವ ವಿದ್ಯಾವರ್ಧಕ ಸಂಘ 22 ಸಾವಿರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

    ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮಂಗಳೂರು ಬೆಂಗಳೂರಿಗೆ ಆಗಮಿಸಿದ ಪರಿಣಾಮ ಮಂಗಳೂರು ಬೆಂಗಳೂರು ಜನರು ಶಿಕ್ಷಣದಲ್ಲಿ ಮುಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪದವಿ ತರಗತಿಗಳಲ್ಲಿ ಓದುತ್ತಿರುವ 1.96 ಲಕ್ಷ ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ಭಾಗ್ಯ ದೊರೆಯಲಿದೆ ಎಂದರು.

    ಸಮಾರಂಭದಲ್ಲಿ ಸಚಿವರಾದ ಸಂತೋಷ್ ಲಾಡ್, ಬಸವರಾಜ್ ರಾಯರೆಡ್ಡಿ, ಡಾ. ಶರಣ ಪ್ರಕಾಶ್ ಪಾಟೀಲ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಮುಖಂಡರಾದ ಎನ್ ತಿಪ್ಪಣ್ಣ, ಎಂಎಲ್‍ಸಿ ಕೆಸಿ ಕೊಂಡಯ್ಯ, ಅಲ್ಲಮ ವೀರಭದ್ರಪ್ಪ, ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಕೊಟ್ಟೂರು ಸಂಸ್ಥಾನ ಮಠದ ಶ್ರೀ ಸಂಗನಬಸವ ಮಹಾಸ್ವಾಮಿ ಉಪಸ್ಥಿತರಿದ್ದರು.

  • ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಭಾಗ್ಯ: ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು?

    ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಭಾಗ್ಯ: ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು?

    ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್, ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಉಚಿತ ಲ್ಯಾಪ್‍ಟಾಪ್ ನೀಡುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಬಜೆಟ್‍ನಲ್ಲಿ ಘೋಷಣೆಯಾದ ಅಂಶಗಳನ್ನು ನೀಡಲಾಗಿದೆ.

    ಉನ್ನತ ಶಿಕ್ಷಣ- 4401 ಕೋಟಿ ರೂ.
    – ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ. 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.

    – ಹೈದರಾಬಾದ್ ಕರ್ನಾಟಕ ಯೋಜನೆಯಡಿ ರಾಯಚೂರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ. ಯಾದಗಿರಿ, ರಾಯಚೂರಿನ ಎಲ್ಲ ಕಾಲೇಜುಗಳು ಹೊಸ ವಿವಿ ವ್ಯಾಪ್ತಿಗೆ.

    – 25 ಹೊಸ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆ – ತಲಾ 4 ಕೋಟಿ
    – 23 ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ – ತಲಾ 2 ಕೋಟಿ
    – ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿಗೆ 25 ಕೋಟಿ.
    – ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ಅನುದಾನ

    – ಹಂಪಿ ಕನ್ನಡ ವಿವಿ ಬೆಳ್ಳಿಹಬ್ಬದ ಅಂಗವಾಗಿ 25 ಕೋಟಿ
    – ಕರ್ನಾಟಕ ವಿವಿ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕೆ 7 ಕೋಟಿ
    – ಕರ್ನಾಟಕ ವಿವಿಯಲ್ಲಿ ಸಾಹು ಮಹಾರಾಜರ ಅಧ್ಯಯನ ಪೀಠ ಸ್ಥಾಪನೆ.
    – ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – 18,266 ಕೋಟಿ ರೂ.
    – ಜುಲೈಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ವಿತರಣೆ
    – ಬೇಸಿಗೆ, ರಜಾ ದಿನಗಳಿಗಾಗಿ ವಿಶ್ವಾಸ ಕಿರಣ ಯೋಜನೆ
    – 1 ನೇ ತರಗತಿಯಿಂದ ಆಂಗ್ಲಭಾಷೆ ಪರಿಣಾಮಕಾರಿ ಯೋಜನೆ
    – ಗ್ರಾಮಪಂಚಾಯ್ತಿ ಕೇಂದ್ರಗಳಲ್ಲಿ 12ನೇ ತರಗತಿವರೆಗೆ 176 ಸಂಯೋಜಿತ ಶಾಲೆಗಳು
    – 1 ಸಾವಿರ ಪ್ರೌಢ ಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಲ್ಲಿ ಐಟಿ@ಸ್ಕೂಲ್
    – ಶೂ ಮತ್ತು ಸಾಕ್ಸ್ ವಿತರಣೆ
    – 8 ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ ಸಮವಸ್ತ್ರ ವಿತರಣೆ
    – ಪ್ರಾಥಮಿಕೆ ಶಾಲೆಗಳಿಗೆ 10 ಸಾವಿರ, ಪ್ರೌಢಶಾಲೆಗಳಿಗೆ 1626, ಪಿಯುಗೆ 1191 ಉಪನ್ಯಾಸಕರನ್ನ ಎರಡು ಹಂತದಲ್ಲಿ ನೇಮಕ
    – ಶಿಕ್ಷಣ ಕಿರಣ ಯೋಜನೆಯಡಿ ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಾತಿ.