Tag: Laptop

  • ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚನೆ – ಆರೋಪಿ ಅರೆಸ್ಟ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮಾರಾಟ ಮಾಡುವುದಾಗಿ ವಂಚಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮೂಲದ ಅಮನ್ ಕುಮಾರ್ (20) ಬಂಧಿತ ಆರೋಪಿ. ಅಮನ್ ಓಎಲ್‍ಎಕ್ಸ್ ನಲ್ಲಿ 1.50 ಲಕ್ಷ ಮೌಲ್ಯದ ಲ್ಯಾಪ್‍ಟಾಪ್ ಜಾಹೀರಾತು ನೀಡಿದ್ದನು. ಈ ವೇಳೆ ದೂರುದಾರನೊಬ್ಬನು ವಂಚನೆಕೋರನನ್ನು ಸಂಪರ್ಕಿಸಿದ್ದನು. ಈ ಸಂದರ್ಭದಲ್ಲಿ ಆರೋಪಿಯು ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಎಂದು 72 ಸಾವಿರ ರೂ. ಪಡೆದಿದ್ದ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ದುಡ್ಡು ಪಡೆದ ಬಳಿಕ ಲ್ಯಾಪ್‍ಟಾಪ್ ಬದಲು ಖಾಲಿ ಪಾರ್ಸೆಲ್ ರವಾನಿಸಿದ್ದಾನೆ. ಈ ಕುರಿತು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಮುಸ್ಲಿಂ ಸಂಘಟನೆಗಳ ಪ್ರತಿಭಟನೆ – ಬೆಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

  • ಮನೆಗಳ್ಳತನ- ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶ

    ಮನೆಗಳ್ಳತನ- ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶ

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪ ವಿಭಾಗದ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನದಲ್ಲಿ 334 ಗ್ರಾಂ ಚಿನ್ನಾಭರಣ ಸೇರಿದಂತೆ 12,55000 ರೂ. ಮೌಲ್ಯದ ಕಳವು ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರ ದಿಕ್ಕು ತಪ್ಪಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು ವಶಕ್ಕೆ ಪಡೆದಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ರಸ್ತೆ ಬದಿಯ ಹೋಟೆಲ್‍ಗಳಲ್ಲಿ ಊಟಕ್ಕೆ ತೆರಳಿದ ವೇಳೆ ಲ್ಯಾಪ್‍ಟಾಪ್, ಮೊಬೈಲ್‍ನ್ನು ಕಳವು ಮಾಡುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ 12,50,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೇಲೂರು ಗಳಿಗೆ ತೇರಿನ ದಿನ ಕುರಾನ್ ಪಠಣೆ ನಮ್ಮ ಕೈಪಿಡಿಯಲ್ಲೇ ಇದೆ: ಸಿಇಒ ವಿದ್ಯುಲ್ಲತಾ

    ತ್ಯಾಮಗೊಂಡ್ಲು ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಒಟ್ಟು 26,55,000 ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣ ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

    ಈ ವೇಳೆ ಡಿವೈಎಸ್‍ಪಿ ಗೌತಮ್, ಸಿಪಿಐ ಕುಮಾರ್, ರಾಜೀವ್, ಶಿವಕುಮಾರ್, ಪಿಎಸ್‍ಐ ಸುರೇಶ್, ಮುರುಳಿ, ಚಿಕ್ಕನರಸಿಂಹಯ್ಯ ಸಿಬ್ಬಂದಿ ಉಪಸ್ಥಿತರಿದ್ದರು.

  • ದೆಹಲಿಯ ರೋಹಿಣಿ ಕೋರ್ಟ್‍ನಲ್ಲಿ ಸ್ಫೋಟ – ಪೊಲೀಸ್ ಸಿಬ್ಬಂದಿಗೆ ಗಾಯ

    ದೆಹಲಿಯ ರೋಹಿಣಿ ಕೋರ್ಟ್‍ನಲ್ಲಿ ಸ್ಫೋಟ – ಪೊಲೀಸ್ ಸಿಬ್ಬಂದಿಗೆ ಗಾಯ

    ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಎಲ್ಲಾ ಗೇಟ್‍ಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಆರಂಭದಲ್ಲಿ ಕೋರ್ಟ್ ರೂಂ 102 ರಲ್ಲಿ ಲ್ಯಾಪ್‍ಟಾಪ್ ಸ್ಫೋಟಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ದೆಹಲಿ ಪೊಲೀಸ್‍ನ ಉನ್ನತ ಮೂಲಗಳು ಕಡಿಮೆ ತೀವ್ರತೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಖಚಿತಪಡಿಸಿವೆ. ಘಟನೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ಮತ್ತು ಟಿಫಿನ್ ಬಾಕ್ಸ್ ತರಹದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ಅವರಿಗಿತ್ತು: ಬೊಮ್ಮಾಯಿ

    ಈ ಕುರಿತಂತೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, “ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಲ್ಯಾಪ್‍ಟಾಪ್ ಬ್ಯಾಗ್‍ನಲ್ಲಿ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿದೆ. ಈ ಘಟನೆ ಸಂಭವಿಸಿದ ಸ್ಥಳವನ್ನು ಸುತ್ತುವರಿಯಲಾಗಿದೆ. ಇದೀಗ ವಿಧಿವಿಜ್ಞಾನ ತಜ್ಞರು ಮತ್ತು ಎನ್‍ಎಸ್‍ಜಿ ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ದೆಹಲಿ ಪೊಲೀಸರ ವಿಶೇಷ ಸೆಲ್ ಘಟನೆ ಕುರಿತಂತೆ ತನಿಖೆ ನಡೆಸುತ್ತಿದ್ದು, ವಿಶೇಷ ಪೊಲೀಸ್ ಆಯುಕ್ತರು – ಕಾನೂನು ಮತ್ತು ಸುವ್ಯವಸ್ಥೆ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‍ಎಸ್‍ಜಿ) ತಂಡವನ್ನು ಸಹ ಕರೆಸಲಾಗಿತ್ತು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್‌ ರಾವತ್‌ ಅವ್ರು ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು

    ಘಟನೆ ಕುರಿತಂತೆ ಬೆಳಗ್ಗೆ 10.40ಕ್ಕೆ ಮಾಹಿತಿ ಲಭಿಸಿದ್ದು, ಏಳು ಅಗ್ನಿಶಾಮಕ ಟೆಂಡರ್‍ಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

  • ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ

    ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ

    ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ, ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಂಡು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಒಸಿಡಿ ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ರೋಸಿರುವ ಪತಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಆರ್.ಟಿ.ನಗರ ಸುಮಾ ಮತ್ತು ಜಯಂತ್ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಜಯಂತ್, ವಿವಾಹ ಬಳಿಕ ಪತ್ನಿ ಸುಮಾ ಜೊತೆಗೆ ಲಂಡನ್‍ಗೆ ಹೋಗುತ್ತಾರೆ. ಎಂಬಿಎ ಪದವೀಧರೆಯಾಗಿರುವ ಸುಮಾ ಲಂಡನ್‍ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಮೊದಲ ಮಗು ಹುಟ್ಟಿದ 2 ವರ್ಷದ ಬಳಿಕ ಸುಮಾಗೆ ಈ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಲಂಡನ್‍ನಿಂದ ಬೆಂಗಳೂರಿಗೆ ವಾಪಸ್ ಆಗಿರುವ ದಂಪತಿ ಕೌಟುಂಬಿಕ ಸಮಾಲೋಚನೆಗೆ ಬಳಗಾಗುತ್ತಾರೆ. ಈ ವೇಳೆ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ 2ನೇ ಮಗು ಜನಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಸುಮಾಳಿಗೆ ಈ ಸ್ವಚ್ಛತೆಯ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಮನೆಯನ್ನು ಪದೇ ಪದೇ ಸ್ಯಾನಿಟೈಸ್ ಮಾಡುವುದು ಮನೆಯ ಪೀಠೋಪಕರಣಗಳು, ಚಮಚ, ಪ್ಲೋರ್ ಮ್ಯಾಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. ಇದನ್ನೂ ಓದಿ: ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ

    ಲಾಕ್‍ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ ಎಂದಿದ್ದಾನೆ.


    ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ. ಈ ಘಟನೆ ಬಳಿಕ ಸುಮಾಳ ಸ್ವಚ್ಛತೆ ಹೆಚ್ಚಾಗುತ್ತದೆ. ಲಾಕ್‍ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ ಹೋಮ್ ಕೆಲಸ ಮಡುವಾಗ ಆತನ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸಿದ್ದಳು. ಮಕ್ಕಳು ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ಜಯಂತ್ ಇದೀಗ ಆಕೆಯಿಂದ ವಿಚ್ಛೇದನ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  • ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    – ತಂದೆಯ ರಾಸಲೀಲೆಯ ಸ್ಕ್ರೀನ್ ಶಾಟ್ ಸೇವ್ ಮಾಡಿದ್ದ ಪುತ್ರ
    – ಲ್ಯಾಪ್‍ಟಾಪ್‍ನಲ್ಲಿ ತಂದೆಯ ವಿರುದ್ಧ ಸಾಕ್ಷ್ಯ ಸಂಗ್ರಹ

    ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾವು ಸತ್ತ ಮೇಲೆ ನೀನು ನೆಮ್ಮದಿಯಾಗಿರಬಾರದು ಎಂದು ಶಂಕರ್ ರಾಸಲೀಲೆ ಬಯಲು ಮಾಡಿ ಮಗ ಮಧು ಸಾಗರ್ ಸಮರ ಸಾರಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ ಸಿಟಿ ಆಕ್ಸಿಡೆಂಟ್ ಕೇಸಿಗೆ ತಿಲಾಂಜಲಿ? – ಇಬ್ಬರ ಜೀವ ತೆಗೆದವನಿಗೆ ಸ್ಟೇಷನ್ ಬೇಲ್

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಪುತ್ರ ಮಧು ಸಾಗರ್, ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು. ನಮ್ಮ ಸಾವು ನಿನಗೆ ಪಾಠ ಆಗಬೇಕು. ನಮ್ಮ ಸಾವಿಗೆ ನಮ್ಮ ಅಪ್ಪನೇ ಕಾರಣ. ನಮ್ಮ ಅಪ್ಪನ ವಿರುದ್ಧ ನಾನು ಸಾಕ್ಷ್ಯ ಕಲೆ ಹಾಕಿದ್ದೇನೆ. ನಾನು ಸತ್ತ ಮೇಲೆ ಕೂಡ ನನ್ನ ಲ್ಯಾಪ್ ಟಾಪ್ ಅಲ್ಲಿ ಸಾಕ್ಷ್ಯಗಳನ್ನು ಇರುತ್ತದೆ. ನಮ್ಮ ಅಪ್ಪನ ಅಸಲಿ ಮುಖ ಅನಾವರಣ ಆಗುತ್ತದೆ. ಅಲ್ಲದೇ ನನ್ನ ಅಪ್ಪ ಬ್ಲಾಕ್ ಮೇಲ್ ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ.

    ಇದೀಗ ಪೊಲೀಸರು ಆ ಲ್ಯಾಪ್ ಟಾಪ್ ಗಳನ್ನು ರಿಟ್ರೀವ್ ಮಾಡಿದ್ದು, 15 ಸ್ಕ್ರೀನ್ ಶಾಟ್ ಗಳು ಸಿಕ್ಕಿದೆ. ಮನೆಯಲ್ಲಿ ಸಿಕ್ಕ ಪೆನ್ ಡ್ರೈವ್ ಮತ್ತು ಒಂದು ಲ್ಯಾಪ್ ಟಾಪ್ ಸಂಪೂರ್ಣ ಖಾಲಿ ಇತ್ತು. ಆದರೆ ಆಪಲ್ ಕಂಪನಿಯ ಲ್ಯಾಪ್ ಟಾಪ್ ಅಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ಅಪ್ಪನ ರಾಸಲೀಲೆಯ ಸ್ಕ್ರೀನ್ ಶಾಟ್ ಗಳನ್ನು ಆ ಲ್ಯಾಪ್‍ಟಾಪ್ ಅಲ್ಲಿ ಮಧು ಸಾಗರ್ ಇರಿಸಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:  ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ

    ಈ ವೇಳೆ ಶಂಕರ್ ಒಂದೇ ಒಂದು ಹೆಂಗಸಿನ ಜೊತೆಯಲ್ಲಿ ಮಾತ್ರ ಅಲ್ಲ, ನಾಲ್ವರು ಹೆಂಗಸರುಗಳ ಜೊತೆಯಲ್ಲಿ ವಾಟ್ಸಾಪ್ ಚಾಟ್ ಮಾಡಿರುವುದು ಬಹಿರಂಗಗೊಂಡಿದೆ. ಶಂಕರ್ ಮಗ ಮಧು ಸಾಗರ್ ಶಂಕರ್ ಮೊಬೈಲ್ ನಿಂದಲೇ ಈ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಮಧು ಸಾಗರ್ ಶಂಕರ್ ಮೊಬೈಲ್ ನಿಂದ ಸ್ಕ್ರೀನ್ ಶಾಟ್ ಗಳನ್ನು ಸೇವ್ ಮಾಡಿದ್ದಾನೆ. ಬಳಿಕ ಆ ಸ್ಕ್ರೀನ್ ಶಾಟ್‍ಗಳೆಲ್ಲವನ್ನೂ ತನ್ನ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹ ಮಾಡಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ ಗಳು ಈಗ ಪೊಲೀಸರ ಕೈ ಸೇರಿದೆ. ಅದರಲ್ಲಿ ಶಂಕರ್ ನಾಲ್ವರು ಮಹಿಳೆಯರ ಜೊತೆಯಲ್ಲಿ ಚಾಟ್ ಮಾಡಿ ಮಾತನಾಡಿದ್ದು, ಹಾಯ್, ಏನ್ಮಾಡ್ತಾ ಇದ್ದೀಯಾ? ಎಲ್ಲಿ ಇದ್ದೀಯಾ? ಇವತ್ತು ಏನಾದ್ರೂ ಸಿಕ್ತಿಯಾ? ಡ್ರಿಂಕ್ಸ್ ಮಾಡೋಣ ಇವತ್ತು ಜೊತೆ ಕಂಪನಿ ಕೊಡು ಅಂತ ಕರೆದಿರುವುದು. ಅಲ್ಲದೇ ಆ ನಾಲ್ವರು ಮಹಿಳೆಯರ ಜೊತೆ ಸ್ವಲ್ಪ ಅಸಭ್ಯವಾಗಿ ಚಾಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಈ ಕುರಿತಂತೆ ಪೊಲೀಸರು ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಿದ್ದಾರೆ.

     

    ಸದ್ಯ ಒಂದೇ ಕುಟುಂಬದ ಐವರ ಸಾವು ಪ್ರಕರಣ ಟ್ವಿಸ್ಟ್ ಸಿಕ್ಕಿದ್ದು, ಈಗಾಗಲೇ ಕಾನೂನು ಸಲಹೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ಶಂಕರ್ ವಿರುದ್ಧ ಮಕ್ಕಳು ತಮ್ಮ ಸಾವಿಗೆ ತಂದೆ ಶಂಕರ್ ನ ನೇರವಾಗಿ ಹೊಣೆ ಮಾಡಿರುವುದು ಹಾಗೂ ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆ ಐಪಿಸಿ 306 ಅಡಿಯಲ್ಲಿ ಶಂಕರ್ ವಿರುದ್ಧ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಜೊತೆಗೆ ಶಂಕರ್ ಜೊತೆಗೆ 9 ತಿಂಗಳ ಮಗು ಕೊಂದ ಹಿನ್ನಲೆ ಮೃತ ಸಿಂಧೂರಾಣಿ ಮೇಲೆ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

     

  • ಸಿಲಿಕಾನ್ ಸಿಟಿಯಲ್ಲಿ ಸೂಟುಬೂಟಿನ ಕಳ್ಳ – ಸಭ್ಯಸ್ಥನ ವೇಷದಲ್ಲಿ ಬಂದು ಕಳ್ಳತನ

    ಸಿಲಿಕಾನ್ ಸಿಟಿಯಲ್ಲಿ ಸೂಟುಬೂಟಿನ ಕಳ್ಳ – ಸಭ್ಯಸ್ಥನ ವೇಷದಲ್ಲಿ ಬಂದು ಕಳ್ಳತನ

    – ಸಿಟಿವಿಯಲ್ಲಿ ಸೆರೆಯಾಗಿದೆ ದೃಶ್ಯ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಹಗಲು ಹೊತ್ತಲ್ಲೇ ರಾಜಾರೋಷವಾಗಿ ಬಂದು ಕಳ್ಳತನ ಮಾಡುತ್ತಾರೆ. ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ಕದ್ದೊಯ್ದರೂ ಹೇಳೋರಿಲ್ಲ ಕೇಳೋರಿಲ್ಲ ಅನ್ನೋವಂತಾಗಿದೆ.

    ಹೌದು. ಹಗಲು ಹೊತ್ತಲ್ಲಿಯೇ ಮನಗೆ ನುಗ್ಗಿ ಕಳ್ಳನೊಬ್ಬ ತನ್ನ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಬಯಲಾಗಿದೆ. ಈ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯ ವೀರನಪಾಳ್ಯದಲ್ಲಿ ನಡೆದಿದೆ. ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್ ಮೆಂಟ್ ನ ಮೊದಲನೇ ಮಹಡಿಯಲ್ಲಿ ಈ ಕಳ್ಳತನ ನಡೆದಿದೆ. ಇದನ್ನೂ ಓದಿ: ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ರಿಚರ್ಡ್ ಬ್ರಾನ್ಸನ್, ಸಿರಿಶಾ ಬಾಂದ್ಲಾ

    ಖದೀಮ 4 ಮಹಡಿಯ ಇಡೀ ಅಪಾರ್ಟ್ ಮೆಂಟ್ ಫುಲ್ ಹುಡುಕಾಡಿದ್ದಾನೆ. ಐದು ನಿಮಿಷ ಬಾಗಿಲು ಓಪನ್ ಮಾಡಿದ್ದೇ ಲ್ಯಾಪ್ ಟಾಪ್ ಮಾಯವಾಗಿದೆ. ಬಾಗಿಲು ಓಪನ್ ಇರುವ ಮನೆ ನೋಡಿ ಕಳ್ಳ ಒಳನುಗ್ಗಿದ್ದಾನೆ. ಸೂಟು ಬೂಟು ಹಾಕಿಕೊಂಡು ಕಳ್ಳ ಎಂಟ್ರಿ ಕೊಟ್ಟಿದ್ದಾನೆ. ಒಬ್ಬನೇ ಪಕ್ಕಾ ಅಫಿಷಿಯಲ್ ರೀತಿ ಬಂದ ಅಸಾಮಿ ಲ್ಯಾಪ್ ಟಾಪ್ ಕದ್ದು ಪರಾರಿಯಾಗಿದ್ದಾನೆ.

    ಸ್ನೇಹ ಎಂಬ ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕದ್ದೊಯ್ದಿದ್ದಾನೆ. ಸ್ನೇಹ ಬಾಗಿಲು ಓಪನ್ ಇಟ್ಟು ಬಾಲ್ಕನಿಯಲ್ಲಿದ್ದಳು. ಇತ್ತ ತಾಯಿ ಬೆಡ್ ರೂಂ ನಲ್ಲಿ ಮಲಗಿದ್ದರು. ಈ ವೇಳೆ ಹಾಲ್ ನಲ್ಲಿ ಯಾರೂ ಇಲ್ಲದಿರುವುದನ್ನು ಕಿಟಕಿ ಮೂಲಕ ನೋಡಿ ಖಾತರಿ ಪಡಿಸಿಕೊಂಡ ಅಸಾಮಿ, ನಂತರ ಒಳಗೆ ನುಗ್ಗಿ ಡೈನಿಂಗ್ ಟೇಬಲ್ ನಲ್ಲಿ ಇದ್ದ ಲ್ಯಾಪ್ ಟಾಪ್ ಕದ್ದು ಎಸ್ಕೇಪ್ ಆಗಿದ್ದಾನೆ.

    ಕಳ್ಳತನ ಕೃತ್ಯ ಅಪಾರ್ಟ್ ಮೆಂಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಕೂಡ ಸೋನ ಟವರ್ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ ನಡೆದಿದ್ದು, ಬೆಳಗ್ಗಿನ ಜಾವ 5.30 ರ ಸುಮಾರಿಗೆ ಬಂದು ಮೊಬೈಲ್ ಕದ್ದೊಯ್ಯಲಾಗಿದೆ.

    ಲ್ಯಾಪ್ ಟಾಪ್ ಕಳ್ಳತನ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

    ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಯಾರಿಯ ಜೊತೆಗೆ ಹೂವು ಮಾರುವ ಯುವತಿ ಬನಶಂಕರಿಗೆ ಇಂದು ಲ್ಯಾಪ್ ಟಾಪ್ ಹಸ್ತಾಂತರ ಮಾಡಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆದಿಶಕ್ತಿ ದೇವಾಲಯದಲ್ಲಿ ಹೂವು ಮಾರುವ ಯುವತಿ ಬನಶಂಕರಿ ಓದಿಗೆ ಹಲವು ಕೈಗಳು ನೆರವು ಮುಂದುವರಿಸಿದೆ.

    ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬನಶಂಕರಿ ಓದಿಗೆ ಸಹಾಯ ಆಗಲೀ ಎಂದು ಲ್ಯಾಪ್ ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಮೀಷನರ್, ವಿದ್ಯೆ ಬಡತನ ದೂರ ಮಾಡುತ್ತದೆ. ಆಕೆಯ ಆಸಕ್ತಿ ಕಂಡು ನಾನು ಲ್ಯಾಪ್ ಟ್ಯಾಪ್ ವಿತರಣೆ ಮಾಡಿರುವೆ. ಇದನ್ನ ಯುವತಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.

    ಇದೇ ವೇಳೆ ಯುವತಿ ಬನಶಂಕರಿ ಮಾತನಾಡಿ, ತುಂಬಾ ಖುಷಿ ಆಯಿತು. ಓದುವಾಗ ಈ ನೆರವು ಸಿಕ್ಕಿದು ನನ್ನ ಭಾಗ್ಯ ಎಂದರು. ನೆನ್ನೆಯಷ್ಟೇ ಪಬ್ಲಿಕ್ ಟಿವಿ ವತಿಯಿಂದ ಯುವತಿ ಓದಿಗಾಗಿ ಟ್ಯಾಬ್ ವಿತರಣೆ ಸಹ ಮಾಡಲಾಗಿದೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

  • ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ

    ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಸಂಬಂಧ ನನಗೆ ತಿಳಿದಿರುವ ಪ್ರಕಾರ ಸುಮಾರು ಸಚಿವರುಗಳು 15-16 ಮಠಗಳಿಗೆ ಭೇಟಿ ನೀಟಿದ್ದಾರೆ. ಲ್ಯಾಪ್‍ಟಾಪ್ ತಗೆದುಕೊಂಡು ಹೋಗಿ ಮಠಾಧೀಶರಿಗೆ ತೋರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವರು ಯಾಕೆ ಮಠಕ್ಕೆ ಹೋಗಿದ್ದಾರೆ. ಕೆಲವರು ಲ್ಯಾಪ್‍ಟಾಪ್ ಸಹಾ ತೆಗೆದುಕೊಂಡು ಹೋಗಿದ್ದಾರಂತೆ. ಹೋದದ್ದು ಯಾಕೆ? ಏನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿಎಂ ರೇಸ್ ಬಗ್ಗೆ ನಾನು ಹೇಳಿಕೆ ನೀಡಲ್ಲ, 1 ಸಹಿ ಸಂಗ್ರಹ ನಡೆದಿತ್ತು: ಬೆಲ್ಲದ

    65 ಶಾಸಕರ ಸಹಿಗೆ ಕಿಮ್ಮತ್ತಿದ್ದರೆ ಅದನ್ನು ಬಹಿರಂಗ ಪಡಿಸಲಿ. ಲ್ಯಾಪ್‍ಟಾಪ್ ತಂದು ಸ್ವಾಮೀಜಿಯವರಿಗೆ ತೋರಿಸಿದ್ದರು ಎಂಬ ಮಾಹಿತಿ ಇದೆ. ಅದೇನು ಎಂಬುದರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ. ಲ್ಯಾಪ್‍ಟಾಪ್ ಹೊತ್ತೊಯ್ದು ಸ್ವಾಮೀಜಿಗಳ ಬಳಿ ಹೋದ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಅದೇಕೆ ಸಚಿವರು ಹೋಗಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಪರವಾಗಿ 65ಕ್ಕೂ ಹೆಚ್ಚು ಶಾಸಕರ ಸಹಿ: ರೇಣುಕಾಚಾರ್ಯ

    ಈಗ ಸಹಿ ಅಭಿಯಾನ ಅಂತಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ, ಲ್ಯಾಪ್‍ಟಾಪಲ್ಲಿ ಏನಿತ್ತು ಎಂದು ಜನಕ್ಕೆ ತೋರಿಸಲಿ. ಜನ ಸಾಯುತ್ತಿದ್ದಾರೆ. ನಮಗೆ ಬೂದಿ ನೀಡುತ್ತಿದ್ದಾರೆ. ಗ್ರಾಮಿಣಾಭಿವೃದ್ದಿ ಇಲಾಖೆ ವಿಚಾರವಾಗಿ ಸಹಿ ಹಾಕಿರೋದು ನೋಡಿದ್ದೇವೆ. ರಾಜ್ಯಪಾಲರ ಸಹಿ ಹಾಕಿದ್ದು ಗೊತ್ತಿದೆ. ಮಠಕ್ಕೆ ಹೋಗಿರುವುದು ಗೊತ್ತಿದೆ. ಸಿಡಿ ವಿಚಾರವಾಗಿಯೂ ಗೊತ್ತಿದೆ ಎಂದು ಡಿಕೆಶಿ ಹೇಳಿದರು.

  • ಎರಡು ಕೈ ಕಳೆದುಕೊಂಡರೂ ಛಲ ಬಿಡದೇ ಶಿಕ್ಷಕಿಯಾದ ಸಾಧಕಿ

    ಎರಡು ಕೈ ಕಳೆದುಕೊಂಡರೂ ಛಲ ಬಿಡದೇ ಶಿಕ್ಷಕಿಯಾದ ಸಾಧಕಿ

    ಲಕ್ನೋ: ಈಕೆ ಆ ದೇವರ ಇಚ್ಛೆಯೆಂಬಂತೆ ವಿದ್ಯುತ್ ಶಾಕ್ ಹೊಡೆದು ಎರಡು ಕೈಗಳನ್ನು ಕಳೆದುಕೊಂಡಾಕೆ. ಆದರೆ ಈಕೆಯ ಮನೋಸ್ಥೈರ್ಯದ ಮುಂದೆ ಈ ಸಮಸ್ಯೆ ಕಾಡಲೇ ಇಲ್ಲ. ಸಾಧಿಸಬೇಕೆಂಬ ಛಲದಂಕ ಮಲ್ಲೆಯಾಗಿ ಇದೀಗ ಕೈ ಇದ್ದವರಿಗೂ ಸಾಧಿಸಲಾಗದಂತಹ ಮಹೋತ್ತರವಾದ ಗುರಿಯೊಂದಿಗೆ ಮುನ್ನುಗ್ಗಿ ನಿಜವಾದ ಮಹಿಳಾ ಸಾಧಕಿಯ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

    ಈಕೆಯ ಹೆಸರು ಪ್ರಗತಿ ಉತ್ತರ ಪ್ರದೇಶದ ಮೊರಾದಾಬಾದ್ ನ ಹಳ್ಳಿ ಹುಡುಕಿ 2010ರಲ್ಲಿ ತನಗೆ ಅರಿವಿಲ್ಲದೆ ವಿದ್ಯುತ್ ತಂತಿಯನ್ನು ಮುಟ್ಟಿ ತನ್ನ ಎರಡು ಕೈಯನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈ ಇಲ್ಲ ಎಂದು ಸುಮ್ಮನೆ ಕುಳಿತಿದ್ದರೆ ಇಂದು ಪ್ರಗತಿ ಯಾರಿಗೂ ತಿಳಿಯುತ್ತಿರಲಿಲ್ಲ. ಇದೀಗ ಈಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರು ಕೂಡ ತನ್ನ ಸಾಧನೆಯ ಛಲ ಬಿಡದೆ ಅರ್ಧ ತುಂಡಾಗಿರುವ ಎರಡು ಕೈಗಳನ್ನು ಬಳಸಿಕೊಂಡು ಎಲ್ಲರಂತೆ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಬಳಸುವ ಮೂಲಕ ಜ್ಞಾನರ್ಜನೆ ಮಾಡಿ ಮುನ್ನುಗ್ಗುತ್ತಿದ್ದಾಳೆ.

    ಪ್ರಗತಿ ಕೈಗಳು ಇಲ್ಲವೆಂದು ಸುಮ್ಮನಿರದೆ, ತನ್ನ ಅರ್ಧ ತುಂಡಾಗಿರುವ ಕೈಯನ್ನು ಬಳಸಿಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಬಂದ ಹಣದಿಂದ ಬ್ಯಾಕಿಂಗ್ ಪ್ರವೇಶ ಪರೀಕ್ಷೆ ಬರೆಯಬೇಕೆಂಬ ಹಂಬಲದೊಂದಿಗೆ ಸಾಧನೆಯ ಹಾದಿಯಲ್ಲಿ ತೊಡಗಿಕೊಂಡಿದ್ದಾಳೆ.

    ಪ್ರಗತಿ ತನ್ನ ಕೈ ಕಳೆದುಕೊಂಡು ಪಟ್ಟ ಕಷ್ಟ ಆ ನೋವು, ಕಿಳರಿಮೆಗಳನ್ನು ಸಹಿಸಿಕೊಂಡು ನಾನು ಏನಾದರೂ ಸಾಧಿಸಿ ತೊರಿಸಬೇಕೆಂಬ ಛಲದಿಂದಾಗಿ ಮುನ್ನಡೆಯುವ ಮೂಲಕ ನಿಜವಾದ ಮಹಿಳಾ ದಿನದ ಧೀರ ಮಹಿಳೆಯಾಗಿ ಇತರರಿಗೆ ಸ್ಫೂರ್ತಿಯಾಗುತ್ತಿದ್ದಾಳೆ.

  • ಡೇಟಾ, ಫೋನ್‌ ಆಯ್ತು ಈಗ ಲ್ಯಾಪ್‌ಟಾಪ್‌ –  ಬರಲಿದೆ ಕಡಿಮೆ ಬೆಲೆಯ ಜಿಯೋಬುಕ್‌

    ಡೇಟಾ, ಫೋನ್‌ ಆಯ್ತು ಈಗ ಲ್ಯಾಪ್‌ಟಾಪ್‌ – ಬರಲಿದೆ ಕಡಿಮೆ ಬೆಲೆಯ ಜಿಯೋಬುಕ್‌

    ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ, ಕಡಿಮೆ ಬೆಲೆಯ ಫೋನ್‌ ನೀಡಿದ ಬಳಿಕ ಜಿಯೋ ಕಂಪನಿ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಮುಂದಾಗಿದೆ,

    ಈ ಲ್ಯಾಪ್‌ಟಾಪ್‌ಗೆ ಜಿಯೋಬುಕ್‌ ಎಂದು ಹೆಸರನ್ನು ಇಡಲಾಗಿದ್ದು ಕಸ್ಟಮೈಸ್ಡ್‌ ಆಂಡ್ರಾಯ್ಡ್‌ ಓಎಸ್‌ ಇರಲಿದೆ. ಇದರಲ್ಲಿ ಜಿಯೋ ಅಪ್‌ಗಳು ಇನ್‌ ಬಿಲ್ಟ್‌ ಇರಲಿದ್ದು 4ಜಿ ಎಲ್‌ಟಿಇ ಬೆಂಬಲ ನೀಡಲಿದೆ ಎಂದು ʼಎಕ್ಸ್‌ಡಿಎ ಡೆವಲಪರ್ಸ್‌ʼ ವರದಿ ಮಾಡಿದೆ.

    ಕೊರೊನಾ ಸಮಯದಲ್ಲಿ ಫೋನ್‌ ಮೂಲಕ ವ್ಯವಹಾರ ನಡೆಸುತ್ತಿರುವ ಗ್ರಾಹಕರ ಗಮನದಲ್ಲಿಟ್ಟುಕೊಂಡು ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಚೀನಾದ ಬ್ಲೂಬ್ಯಾಂಕ್‌ ಕಮ್ಯೂನಿಕೇಷನ್‌ ಟೆಕ್ನಾಲಜಿ ಜೊತೆ ಸೇರಿ ಈ ಲ್ಯಾಪ್‌ಟಾಪ್‌ ತಯಾರಿಸಲು ಮಾತುಕತೆ ನಡೆದಿದೆ. ಈಗಾಗಲೇ ಜಿಯೋ ಫೋನ್‌ ಮಾದರಿಯನ್ನು ಈ ಕಂಪನಿ ತಯಾರಿಸಿದೆ.

    ಕಳೆದ ಸೆಪ್ಟೆಂಬರ್‌ನಲ್ಲೇ ಈ ಯೋಜನೆ ಆರಂಭವಾಗಿದ್ದು, ಉತ್ಪನ್ನ ಈಗ ಅಂತಿಮ ಹಂತದಲ್ಲಿದೆ. ಏಪ್ರಿಲ್‌ ವೇಳೆಗೆ ಉತ್ಪನ್ನದ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಬಿಡುಗಡೆಯಾದ ಚಿತ್ರದಲ್ಲಿ ವಿಂಡೋಸ್‌ ಕೀ ಇದೆ. ಆದರೆ ಇದು ವಿಂಡೋಸ್‌ ಕೀ ಅಲ್ಲ.

    1,366*768 ಪಿಕ್ಸೆಲ್‌, ಕ್ವಾಲಕಂ ಸ್ನಾಪ್‌ಡ್ರಾಗನ್‌ 665 ಎಸ್‌ಒಸಿ ಪ್ರೊಸೆಸರ್‌, ಸ್ನಾಪ್‌ಡ್ರಾಗನ್‌ ಎಕ್ಸ್‌ 12  4ಜಿ ಮೊಡೆಮ್‌, 2 ಜಿಬಿ ರಾಮ್‌, ಮಿನಿ ಎಚ್‌ಡಿಎಂಐ ಕನೆಕ್ಟರ್‌, ಡ್ಯುಯಲ್‌ ಬ್ಯಾಂಡ್‌ ವೈಫೈ, ಬ್ಲೂಟೂತ್‌ ಜೊತೆಗೆ ಜಿಯೋ ಸ್ಟೋರ್‌, ಜಿಯೋ ಮೀಟ್‌, ಜಿಯೋ ಪೇಜ್‌ ಆಪ್‌ಗಳು ಮೊದಲೇ ಇನ್‌ಸ್ಟಾಲ್‌ ಆಗಿರಲಿದೆ.

    ಈ ಲ್ಯಾಪ್‌ಟಾಪ್‌ ಬೆಲೆ ಎಷ್ಟಿರಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಬಜೆಟ್‌ ಸೆಗ್ಮೆಂಟ್‌ ದರದಲ್ಲಿ ಇರಲಿದೆ ಎನ್ನಲಾಗುತ್ತಿದೆ.

    ಕೊರೊನಾ ವೈರಸ್‌ ಬಂದ ನಂತರ ಕಚೇರಿಗಳು ಮುಚ್ಚಲ್ಪಟ್ಟಿದ್ದು ಮನೆಯಿಂದಲೇ ಕೆಲಸಗಳು ನಡೆಯುತ್ತಿದೆ. ಹೀಗಾಗಿ ಲ್ಯಾಪ್‌ಟಾಪ್‌ಗಳ ಬೇಡಿಕೆ ದಿಢೀರ್‌ ಹೆಚ್ಚಾಗಿದೆ. ಇದರಿಂದಾಗಿ ಡೆಲ್‌, ಎಚ್‌ಪಿ ಮತ್ತು ಲೆನೆವೊ ಕಂಪನಿಗಳು ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಭಾರೀ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿದೆ. ಈ ಕಾರಣಕ್ಕೆ ಜಿಯೋ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ನಿರ್ಮಾಣಕ್ಕೆ ಮುಂದಾಗಿದೆ.