Tag: Laptop

  • ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

    ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

    – ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಅಂತ ಜ್ಯೋತಿ ಗೊತ್ತಿತ್ತು

    ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ (Jyoti Malhotra) ಕುರಿತು ಒಂದಾದಮೇಲೊಂದು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. 33 ವರ್ಷದ ಯೂಟ್ಯೂಬರ್‌ನ ಡಿಜಿಟಲ್‌ ಸಾಧನಗಳನ್ನು ಪರಿಶೀಲಿಸಿದ ಹರಿಯಾಣ ಪೊಲೀಸರು (Haryana Police) ಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.

    ಪೊಲೀಸ್‌ ಮೂಲಗಳು ಹೇಳುವಂತೆ, ಜ್ಯೋತಿ‌ ನಾಲ್ವರು ಪಾಕಿಸ್ತಾನಿ ಗುಪ್ತಚರ (Pakistani Intelligence) ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ನಾಲ್ವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ನಾಲ್ವರ ಪೈಕಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಡ್ಯಾನಿಶ್, ಅಹ್ಸಾನ್ ಮತ್ತು ಶಾಹಿದ್ ಸೇರಿದ್ದಾರೆ. ಸದ್ಯ ಪಾಕಿಸ್ತಾನ ಭದ್ರತಾ ಸಂಸ್ಥೆಯೊಳಗಿನ ಈ ಏಜೆಂಟರ ಹುದ್ದೆಗಳು ಮತ್ತು ಉದ್ಯೋಗ ಶೀರ್ಷಿಕೆಗಳನ್ನು ದೃಢೀಕರಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ಇದಕ್ಕೂ ಮುನ್ನವೇ ಜ್ಯೋತಿ ಮಲ್ಹೋತ್ರಾಳಾ ಲ್ಯಾಪ್‌ಟಾಪ್‌, ಫೋನ್‌ ಸೇರಿದಂತೆ ಹಲವು ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಅನೇಕ ಸಂದೇಶಗಳನ್ನ ಅಳಿಸಿದ ಹೊರತಾಗಿಯೂ 12 ಟಿಬಿ (12 ಸಾವಿರ ಜಿಬಿ) ಡೇಟಾವನ್ನು ರಿಟ್ರೀವ್‌ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಕ್‌ ಜೊತೆಗಿನ ಇನ್ನಷ್ಟು ಸುಳಿವುಗಳನ್ನು ಪತ್ತೆಹಚ್ಚಲು ಡೇಟಾಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ

    ಇನ್ನೂ ಈ ಡೇಟಾಗಳ ಪ್ರಕಾರ, ಯೂಟ್ಯೂಬರ್ ಜ್ಯೋತಿಗೆ ತಾನು ಮಾತಾಡ್ತಿರೋದು ಐಎಸ್‌ಐ ಅಧಿಕಾರಿಗಳ ಜೊತೆ ಎಂದು ಗೊತ್ತಿತ್ತು, ಆದರೂ ಭಯ ಇಲ್ಲದಂತೆ ಅವರೊಂದಿಗಿನ ಸಂಪರ್ಕವನ್ನು ಮುಂದುವರಿಸಿದ್ದಳು ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಶುರುವಾದ ಅರ್ಧ ಗಂಟೆಯ ನಂತರವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು: ಜೈಶಂಕರ್

    Jyoti Malhotra was walking through Pakisan streets with 6 men armed with AK 47 rifles

    ಇನ್ನೂ ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಜ್ಯೋತಿ ಮಲ್ಹೋತ್ರಾಗೆ ನೀಡಿದ ವಿಐಪಿ ಸ್ವಾಗತದ ಬಗ್ಗೆ ಈಗ ಭಾರೀ ಅನುಮಾನ ಮೂಡಿದೆ. ಪಾಕ್‌ನ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಪಾರ್ಟಿಗಳಿಗೆ ಆಕೆಯನ್ನೂ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

    ಸದ್ಯ ಹರಿಯಾಣದ ಹಿಸ್ಸಾರ್‌ ಪೊಲೀಸರ ಕಸ್ಟಡಿಯಲ್ಲಿ ಜ್ಯೋತಿ ಇದ್ದಾಳೆ.  ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ

  • `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    ಮಡಿಕೇರಿ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʻಯುವನಿಧಿʼಯಿಂದ (Yuvanidhi) ತನ್ನ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತಿದ್ದ 3,000 ರೂ. ಹಣ ಕೂಡಿಟ್ಟು ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿನಿಯೋರ್ವಳು ಲ್ಯಾಪ್‌ಟಾಪ್‌ (LapTop) ಖರೀದಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.

    ಸೋಮವಾರಪೇಟೆ ಪಟ್ಟಣದ ನಿವಾಸಿಯೂ ಆಗಿರುವ ಪದವೀಧರೆ ಇಶಾ ಆಸಿಫ್ ಯನ್ನ ಖಾತೆಗೆ ಬಂದ ಗ್ಯಾರಂಟಿ ಹಣ (Guarantee Scheme Money) ಕೂಡಿಟ್ಟು ಲ್ಯಾಪ್‌ಟಾಪ್‌ ಖರೀದಿಸಿದ್ದಾರೆ. ಅಲ್ಲದೇ ಈ ರೀತಿ ಉಚಿತವಾಗಿ ಬರುವ ಹಣವನ್ನು ಕೂಡಿಟ್ಟು ಪೋಷಕರಿಗೆ ಹೆಚ್ಚಿನ ಹೊರೆಯಾಗದಂತೆ ಮುಂದಿವ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಇಶಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Ramanagara | ಸರ್ಕಾರದ ಇ ಸ್ವತ್ತು ಸಾಫ್ಟ್‌ವೇರ್ ಹ್ಯಾಕ್ ಮಾಡಿ ದಾಖಲೆಗಳ ತಿದ್ದುಪಡಿ – ಮೂವರ ಬಂಧನ

    ಈ ಹಿನ್ನೆಲೆಯಲ್ಲಿ ಯುವನಿಧಿ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿಯನ್ನು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅಭಿನಂದಿಸಲಾಯಿತು. ಇದನ್ನೂ ಓದಿ: Vijayapura | ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ಯುವಕ ಸಾವು

    ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಎಂ ಕಾಂತರಾಜ್ ತಾಲ್ಲೂಕು ಪಂಚಾಯಿತಿ ಸಿ.ಇ.ಒ ಪರಮೇಶ್ ಕುಮಾ‌ರ್ ಹಾಗು ಸರ್ವ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

  • ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕೋಟಿ ಕೋಟಿ ಮೌಲ್ಯದ 5,13,400 ಸಿಗರೇಟ್‌ ಸೀಜ್‌

    ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕೋಟಿ ಕೋಟಿ ಮೌಲ್ಯದ 5,13,400 ಸಿಗರೇಟ್‌ ಸೀಜ್‌

    ಚಿಕ್ಕಬಳ್ಳಾಪುರ: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಕಸ್ಟಮ್ಸ್ ಅಧಿಕಾರಿಗಳು (Costums Officers) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

    ಸಿಂಗಾಪುರ, ಯುಎಇ, ಮಲೇಷಿಯಾ ಹಾಗೂ ಥೈಲಾಂಡ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    3,40,87,200 ರೂ. ಮೌಲ್ಯದ 5,13,400 ಸಿಗರೇಟ್‌ಗಳನ್ನು ಸೀಜ್‌ ಮಾಡಲಾಗಿದೆ. ಜೊತೆಗೆ 43 ಲ್ಯಾಪ್‌ಟಾಪ್ (Laptop)  ಹಾಗೂ 16 ಐಪೋನ್‌ (Iphone) ಗಳನ್ನು ವಶಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಅಂದು ನಟ್ವರ್ ಲಾಲ್, ಇಂದು ನೆಪೋಲಿಯನ್: ತನುಷ್ ಶಿವಣ್ಣ ನಟನೆಯ ಸಿನಿಮಾ

  • ಕಡಿಮೆ ಬೆಲೆಗೆ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಮುಂದಾದ ಜಿಯೋ

    ಕಡಿಮೆ ಬೆಲೆಗೆ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಮುಂದಾದ ಜಿಯೋ

    ಮುಂಬೈ: ಈಗಾಗಲೇ ಕಡಿಮೆ ಬೆಲೆಗೆ ಫೋನ್‌, ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿರುವ ರಿಲಯನ್ಸ್‌ ಜಿಯೋ (Reliance Jio) ಈಗ ಕ್ಲೌಡ್‌ ಲ್ಯಾಪ್‌ಟಾಪ್‌ (Cloud Laptop) ಬಿಡುಗಡೆ ಮಾಡಲು ಮುಂದಾಗಿದೆ.

    ಈ ವರ್ಷದ ಜುಲೈನಲ್ಲಿ 16,499 ರೂ.ಗೆ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿರುವ ಜಿಯೋ ಈಗ 15,000 ರೂ. ಬೆಲೆಯಲ್ಲಿ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

    ಕ್ಲೌಡ್‌ ಲ್ಯಾಪ್‌ಟಾಪ್‌ ತಯಾರಿ ಸಂಬಂಧ ಹಾರ್ಡ್‌ವೇರ್‌ ದಿಗ್ಗಜ ಕಂಪನಿಗಳಾದ ಹೆಚ್‌ಪಿ, ಏಸರ್‌, ಲೆನೊವೊ ಜೊತೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಉಪಗ್ರಹದಿಂದ ಇಂಟರ್‌ನೆಟ್‌ – ದೇಶದಲ್ಲೇ ಫಸ್ಟ್‌, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

    ಏನಿದು ಕ್ಲೌಡ್‌ ಲ್ಯಾಪ್‌ಟಾಪ್‌?
    ಲ್ಯಾಪ್‌ಟಾಪ್‌ನ ಬೆಲೆ ಅದರ ಹಾರ್ಡ್‌ವೇರ್‌ ಭಾಗಗಳಾದ ಮೆಮೊರಿ, ಪ್ರೊಸೆಸಿಂಗ್ ಪವರ್, ಚಿಪ್‌ಸೆಟ್, ಬ್ಯಾಟರಿ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ವೇರ್‌ ಬೇಕಾದರೆ ಬೆಲೆ ಹೆಚ್ಚಾಗುತ್ತದೆ. ಜಿಯೋ ಈಗ ಇವುಗಳ ಅವಲಂಬನೆ ಕಡಿಮೆ ಮಾಡಲು ಲ್ಯಾಪ್‌ಟಾಪ್‌ನ ಸಂಪೂರ್ಣ ಪ್ರಕ್ರಿಯೆ ಕ್ಲೌಡ್‌ನಲ್ಲೇ ನಡೆಸಲು ಮುಂದಾಗಿದೆ.

    ಕ್ಲೌಡ್-ಆಧಾರಿತ ಕಂಪ್ಯೂಟರ್‌ ಕೆಲಸ ಮಾಡಬೇಕಾದರೆ ಯಾವಾಗಲೂ ಲ್ಯಾಪ್‌ಟಾಪ್‌ಗೆ  ಇಂಟರ್ನೆಟ್ ಸಂಪರ್ಕದ ಇರಲೇಬೇಕು. ಆಫ್‌ಲೈನ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.

     

  • ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    ನವದೆಹಲಿ: 32 ಕಂಪನಿಗಳು ಭಾರತದಲ್ಲಿ (India) ಲ್ಯಾಪ್‌ಟಾಪ್‌ (Laptop) ತಯಾರಿಸಲು ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಹೇಳಿದ್ದಾರೆ.

    ಐಟಿ ಹಾರ್ಡ್‌ವೇರ್‌ಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ 2.0 ಗಾಗಿ ಸರ್ಕಾರವು 32 ಅರ್ಜಿಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 25 ದೇಶೀಯ ಕಂಪನಿಗಳಾಗಿವೆ ಎಂದು ಮಾಹಿತಿ ನೀಡಿದರು. ನವೆಂಬರ್‌ನಿಂದ ಚೀನಿ ಲ್ಯಾಪ್‌ಟಾಪ್ (Chini Laptop) ಆಮದುಗಳ ಮೇಲಿನ ನಿರ್ಬಂಧಗಳನ್ನು ಸರ್ಕಾರ ಘೋಷಿಸಿದ ದಿನಗಳ ನಂತರ ಈ ಪ್ರಕಟಣೆ ಬಂದಿದೆ.

    ಹೆಚ್‌ಪಿ, ಡೆಲ್‌, ಲೆನೊವೊ, ಥಾಂಪ್ಸನ್, ಏಸರ್ ಮತ್ತು ಏಸಸ್‌ನಂತಹ ಕಂಪನಿಗಳು ಈ ಯೋಜನೆಯಡಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲಿವೆ. ಹೆಚ್‌ಪಿ, ವಿವಿಡಿಎನ್‌, ಲೆನೊವೊ ಸರ್ವರ್‌ಗಳನ್ನು ತಯಾರಿಸಲಿವೆ.

     

    ನಾನು ಎಲ್ಲಾ ಕಂಪನಿಯೊಂದಿಗೆ ಮಾತನಾಡಿದ್ದೇನೆ. ಆಪಲ್‌ (Apple) ಕಂಪನಿ ಪಿಎಲ್‌ಐ ವ್ಯಾಪ್ತಿಗೆ ಸೇರಲು ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಸಾಧನಗಳನ್ನು ಆಪಲ್‌ ತಯಾರಿಸುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌!

    ಈ ನಿರ್ಧಾರದಿಂದ 3.35 ಲಕ್ಷ ಕೋಟಿ ರೂ. ಉತ್ಪಾದನೆ ನಿರೀಕ್ಷೆ ಇದ್ದು, ಸುಮಾರು 75 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ನೋಯ್ಡಾದಲ್ಲಿ ಮುಂದೆ ಡಿಕ್ಸನ್ ಕಾರ್ಖಾನೆಯ 25 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ಎಂದು ಅವರು ಹೇಳಿದರು.

    ಡೆಲ್‌ನಂತಹ ಕಂಪನಿಗಳು ಸಹ ಪಿಎಲ್‌ಐ ಯೋಜನೆಗೆ ಬರುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳ ತಯಾರಿಕೆಯು ಏಪ್ರಿಲ್ 2024 ರ ವೇಳೆಗೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     

    ಭಾರತ ನಿರ್ಬಂಧ ಹೇರಿದ್ದು ಯಾಕೆ?
    ಎಲೆಕ್ಟ್ರಾನಿಕ್ಸ್‌, ಮಷಿನರಿ, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಬಿಡಿಭಾಗಗಳು, ಸೋಲಾರ್‌ ಸೆಲ್‌ ಮಾಡ್ಯೂಲ್‌ ಭಾರತ ಚೀನಾದಿಂಧ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಈ ವಸ್ತುಗಳ ಪಾಲು 65%. ಅದರಲ್ಲೂ ಭಾರತದ ಕಂಪ್ಯೂಟರ್‌ ಆಮದಿನಲ್ಲಿ ಚೀನಾ ಪಾಲು70%ರಿಂದ 80% ರಷ್ಟಿದೆ.

    ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್‌ ಇನ್‌ ಒನ್‌ ಕಂಪ್ಯೂಟ​ರ್ಸ್‌, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳು ಆಮದಿಗೆ ನಿರ್ಬಂಧ ಹೇರಿದೆ. ಆದರೆ ಇದು ಸಂಪೂರ್ಣ ನಿಷೇಧವಲ್ಲ. ನಿರ್ಬಂಧ ಮಾತ್ರ ಹೇರಲಾಗಿದೆ. ಈ ಮೇಲೆ ತಿಳಿಸಿದ ಯಾವುದೇ ವಸ್ತುಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಅಥವಾ ಲೈಸೆನ್ಸ್‌ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

    ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ ಸೇರಿ 20 ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಒಂದು ಬಾರಿಯ ಸರ್ಕಾರ ವಿನಾಯ್ತಿ ನೀಡಲಾಗಿದೆ. ಕೇಂದ್ರ ಸರ್ಕಾರ ಹೇರಿದ ನಿರ್ಬಂಧ ಅಕ್ಟೋಬರ್‌ 31ವರೆಗೆ ಜಾರಿಯಾಗುವುದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯ: ಒಂಟಿ ಮಹಿಳೆಯ (Wpmen) ಮೃತದೇಹ ಮಲಗಿದ್ದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್‌ನಂತೆ ಕಂಡುಬಂದಿತ್ತು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಮೃತರ ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳು ಕಳುವಾಗಿದ್ದು, ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎನ್‌ಇಪಿ ತರುವ ಬದಲು ಡ್ರಗ್ಸ್ ದಂಧೆ ತಡೆಯಲಿ: ಕುಮಾರಸ್ವಾಮಿ

    ಮಾರಸಿಂಗನಹಳ್ಳಿ ಗ್ರಾಮದ ಪ್ರೇಮಾ (42) ಎಂಬಾಕೆ ಮೃತಪಟ್ಟ ಮಹಿಳೆ. ಪ್ರೇಮಾಳ ಗಂಡ 10 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಒಬ್ಬನೇ ಮಗ ಹಾಗೂ ಸೊಸೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗಾಗಿ ಪ್ರೇಮ ಊರಿನಲ್ಲಿ ಒಂಟಿಯಾಗಿ ವಾಸವಿದ್ದರು. ಇದನ್ನೂ ಓದಿ: ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಶನಿವಾರ ಊರಿಗೆ ಬಂದಿದ್ದ ಮಗ ಸೊಸೆ ಸೋಮವಾರ ಬೆಳಿಗ್ಗೆಯಷ್ಟೇ ವಾಪಸ್ಸಾಗಿದ್ರು. ಮಂಗಳವಾರ ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಈ ವೇಳೆ ಪ್ರೇಮಾ ಮನೆಯಿಂದ ದಟ್ಟ ಹೊಗೆ ಬರ್ತಿತ್ತು. ಬೆಂಕಿಯನ್ನು ನಂದಿಸಲು ಅಂತ ಒಳಗೆ ತೆರಳಿದವರಿಗೆ ಶಾಕ್ ಕಾದಿತ್ತು. ರೂಮಿನಲ್ಲಿ ಪ್ರೇಮ ಮಲಗಿದ್ದ ಮಂಚಕ್ಕೆ ಬೆಂಕಿ ಬಿದ್ದಿದ್ದು, ಅಷ್ಟರಲ್ಲಿ ಮೃತ ದೇಹ ಭಾಗಶಃ ಸುಟ್ಟು ಕರಕಲಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ತನಿಖೆ (Police Investigation) ವೇಳೆ ಗೊಂದಲಗಳು ಎದುರಾಗಿತ್ತು. ಹಿಂದೊಮ್ಮೆ ಅದೇ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಅದೇ ಸಮಸ್ಯೆ ಆಗಿರಬಹುದಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಬಳಿಕ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಹಾಗೂ ಕೆಇಬಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಕೆಲವು ಸಾಕ್ಷ್ಯಗಳನ್ನ ಕಲೆ ಹಾಕಿದ್ರು.

    ಮನೆಯ ಬೀರು ಬಾಗಿಲು ತೆರೆದಿತ್ತು. ಬಟ್ಟೆಗಳು ಚಲ್ಲಾಪಿಲ್ಲಿ ಆಗಿದ್ದವು. ಅದ್ರಲ್ಲಿದ್ದ ಸುಮಾರು 100 ಗ್ರಾಮ್ ಚಿನ್ನಾಭರಣ, ಒಂದು ಲ್ಯಾಪ್‌ಟಾಪ್ ಕಳುವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಕೋಲ್ಕತ್ತಾ: ಕೊರೊನಾ (Corona) ಲಾಕ್‍ಡೌನ್ ನಂತರ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವರ್ಕ್ ಫ್ರಮ್ ಹೋಮ್ (Work From Home) ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ (Groom) ತನ್ನ ಮದುವೆಯ ದಿನವೂ ಮಂಟಪದಲ್ಲಿ ಲ್ಯಾಪ್‍ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನೆ.

    ಕೋಲ್ಕತ್ತಾದ (Kolkata) ವರನೊಬ್ಬ ಪುರೋಹಿತರೊಂದಿಗೆ ಕುಳಿತು ತನ್ನ ಮದುವೆ ಕಾರ್ಯದ ಜೊತೆಗೆ ಲ್ಯಾಪ್‍ಟಾಪ್‍ನಲ್ಲಿ (Laptop) ಕೆಲಸವನ್ನು ಮಾಡುತ್ತಿದ್ದಾನೆ. ಇತ್ತ ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಾರೆ. ಆದರೆ ವರ ಪುರೋಹಿತರ ಕಡೆಗೆ ನೋಡದೇ ಆತ ತನ್ನ ಲ್ಯಾಪ್‍ಟಾಪ್‌ನಲ್ಲಿ ಕೆಲಸ ಮಾಡುತ್ತ ಮಗ್ನನಾಗಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Calcutta Instagrammers (@ig_calcutta)

    ಈ ಫೋಟೋವನ್ನು ಹಂಚಿಕೊಂಡಿರುವ ಇನ್‍ಸ್ಟಾಗ್ರಾಮ್ ಪೇಜ್‌ ಮದುವೆ ಸಮಯದಲ್ಲೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ತಿಳಿಸಿದೆ. ವರ ಲ್ಯಾಪ್‍ಟಾಪ್‍ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವರು ಆಫೀಸ್ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ಕೆಲವರು ಈ ಫೋಟೋ ನೋಡಿ ಹಾಸ್ಯ ಮಾಡಿದ್ದರೇ, ಇನ್ನೂ ಕೆಲವರು ಟೀಕಿಸಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಈ ವ್ಯಕ್ತಿಗೆ ತನ್ನ ಸ್ವಂತ ವಿವಾಹವನ್ನು ಆನಂದಿಸಲು ಸಹ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಮತ್ತೊಬ್ಬ ಕಾಮೆಂಟ್ ಮಾಡಿ, ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಯಾವುದೇ ಸಂಸ್ಥೆಯು ಉದ್ಯೋಗಿಯನ್ನು ಅವರ ಮದುವೆಯ ದಿನಗಳಲ್ಲಿ ಕೆಲಸ ಮಾಡಲು ಕೇಳುವುದಿಲ್ಲ ಎಂದಾತ ಅವನು ಮದುವೆಯಾಗುವ ಮಹಿಳೆಯನ್ನು ದೇವರು ಆಶೀರ್ವದಿಸುತ್ತಾನೆ ಎಂದು ವ್ಯಂಗ್ಯವಾಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    Live Tv
    [brid partner=56869869 player=32851 video=960834 autoplay=true]

  • ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ

    ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ

    ನವದೆಹಲಿ: ಕಳ್ಳನೊಬ್ಬ (Thief) ಲ್ಯಾಪ್ ಟಾಪ್ ಕದ್ದು, ಲ್ಯಾಪ್‍ಟಾಪ್‍ನಲ್ಲಿದ್ದ (Laptop) ಮಾಲೀಕನ ಇಮೇಲ್ ಐಡಿಯ ಮೂಲಕ ಕಳ್ಳತನ ಮಾಡಿರುವುದಕ್ಕೆ ಕ್ಷಮೆಯಾಚಿಸಿ ಮಾಲೀಕನಿಗೆ ಮೇಲ್ (Email) ಮಾಡಿರುವ ಘಟನೆ ನಡೆದಿದೆ.

    ಝ್ವಾಲಿ ಟಿಕ್ಸೋ ಎಂಬಾತ ಈ ಇಮೇಲ್‍ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ವೀಟ್ ಮಾಡಿದ್ದಾರೆ. ಕಳ್ಳನೊಬ್ಬ ನನ್ನ ಲ್ಯಾಪ್‍ಟಾಪ್‍ನ್ನು ಹಿಂದಿನ ರಾತ್ರಿ ಕಳವು ಮಾಡಿದ್ದ. ಆದರೆ ನನ್ನ ಇಮೇಲ್‍ನ್ನು ಬಳಸಿ ನನಗೆ ಮೇಲ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ.

    ಇಮೇಲ್‍ನಲ್ಲಿ ಏನಿದೆ?: ಬ್ರೋ ಹೌಜಿತ್, ನಾನು ನಿನ್ನೆ ನಿಮ್ಮ ಲ್ಯಾಪ್‍ಟಾಪ್ ಅನ್ನು ಕದ್ದಿದ್ದೇನೆ ಎಂದು ನನಗೆ ತಿಳಿದಿದೆ. ನಾನು ಜೀವನ ಸಾಗಿಸಲು ಕಷ್ಟಪಡುತ್ತಿದ್ದೇನೆ. ಇದರಿಂದಾಗಿ ನನಗೆ ಹಣದ ಅವಶ್ಯಕತೆಯಿದೆ. ಇದನ್ನೂ ಓದಿ: ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

    ನೀವು ಕೆಲಸದಲ್ಲಿ ಬ್ಯುಸಿರುವುದನ್ನು ನಾನು ಗಮನಿಸಿದ್ದೆ. ಆ ಸಂದರ್ಭದಲ್ಲಿ ನಾನು ನಿಮ್ಮ ಲ್ಯಾಪ್‍ಟಾಪ್‍ನ್ನು ಕದ್ದೆ. ನಿಮಗೆ ಅಗತ್ಯವಿರುವ ಯಾವುದೇ ಫೈಲ್‍ಗಳಿದ್ದರೆ ದಯವಿಟ್ಟು ಸೋಮವಾರ 12 ಗಂಟೆಗೆ ಮೊದಲು ನನ್ನನ್ನು ಎಚ್ಚರಿಸಿ. ನಾನು ಆ ಫೈಲ್‍ನ್ನು ನಿಮಗೆ ಕಳುಹಿಸುತ್ತೇನೆ. ಏಕೆಂದರೆ ಈಗಾಗಲೇ ನಾನು ಲ್ಯಾಪ್‍ಟಾಪ್‍ನ್ನು ಮಾರಾಟ ಮಾಡಲು ಗ್ರಾಹಕನನ್ನು ಹುಡುಕಿದ್ದೇನೆ ಎಂದು ಬರೆದ ಆ ಕಳ್ಳ, ಲ್ಯಾಪ್‍ಟಾಪ್ ಕದ್ದಿರುವುದಕ್ಕೆ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ಈ ಟ್ವೀಟ್‍ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಗೆ ಕೆಲಸ ನೀಡಲು ಸಾಧ್ಯವಿರುವ ಯಾರಾದರೂ, ದಯವಿಟ್ಟು ನೀಡಿ ಎಂದು ಬರೆದಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ಇಷ್ಟು ಪಾವತಿಸಲೇಬೇಕು?

    Live Tv
    [brid partner=56869869 player=32851 video=960834 autoplay=true]

  • ಸಿಎಂ ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳವು!

    ಸಿಎಂ ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳವು!

    ಬೆಂಗಳೂರು: (Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಿವಾಸದ ಸಮೀಪ ಇರುವ ಪಿಜಿಯೊಂದರಲ್ಲಿ ಲ್ಯಾಪ್‌ಟಾಪ್‌ (Laptop) ಕಳುವಾಗಿರುವ ಘಟನೆ ನಡೆದಿದೆ.

    ಇಲ್ಲಿನ ಆರ್‌.ಟಿ.ನಗರದಲ್ಲಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳುವಾಗಿದೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೇ ಸಹಾಯ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಲಾಗಿದೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    ಶಶಾಂಕ್ ಮಾಲ್ವಿಯಾ ಎಂಬಾತ ನಗರ ಪೊಲೀಸರಿಗೆ ಹಾಗೂ ಸಿಎಂಗೆ ಟ್ವೀಟ್‌ ಮಾಡಿದ್ದಾನೆ. ʻನಿಮ್ಮ ಮನೆಯ ಸಮೀಪದ ಪಿಜಿಯಲ್ಲಿ ಕಳ್ಳತನ ಆಗಿದೆ. ಮೊಬೈಲ್‌ ಹಾಗೂ ಲ್ಯಾಪ್‌ಟ್ಯಾಪ್ ಕಳ್ಳತನ ಆಗಿದೆ. ದಯವಿಟ್ಟು ಸಹಾಯ ಮಾಡಿ ಅಂತ ಸಿಎಂಗೆ ಮನವಿ ಮಾಡಿದ್ದಾನೆ.

    ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಕಳ್ಳರು ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕಳ್ಳತನದ ದೃಶ್ಯ ಸಿಸಿಟಿಪಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    Live Tv
    [brid partner=56869869 player=32851 video=960834 autoplay=true]

  • ಏಕರೂಪದ ಚಾರ್ಜರ್‌ ಜಾರಿಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಕೇಂದ್ರ : ಸಭೆಯಲ್ಲಿ ಏನಾಯ್ತು?

    ಏಕರೂಪದ ಚಾರ್ಜರ್‌ ಜಾರಿಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಕೇಂದ್ರ : ಸಭೆಯಲ್ಲಿ ಏನಾಯ್ತು?

    ನವದೆಹಲಿ: ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್‌ ಸಾಧನಗಳಿಗೆ ಏಕರೂಪದ ಚಾರ್ಜರ್‌ ರೂಪಿಸಲು ತಜ್ಞರ ಸಮಿತಿ ರಚಿಸುವುದಾಗಿ ಹೇಳಿದೆ.

    ಏಕರೂಪದ ಚಾರ್ಜರ್‌ ಜಾರಿಗೊಳಿಸಲು ಸರ್ಕಾರ ಕಾಲಮಿತಿ ನಿಗದಿ ಮಾಡಿಲ್ಲ. ಆದರೆ ಈ ಬಗ್ಗೆಅಧ್ಯಯನ ನಡೆಸಲು ಮೂರು ಅಧ್ಯಯನ ಗುಂಪುಗಳನ್ನು ರಚಿಸಲು ಮುಂದಾಗಿದೆ.

    ಬುಧವಾರ ಮೊಬೈಲ್ ಹ್ಯಾಂಡ್‌ಸೆಟ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್ ಸ್ಪೀಕರ್‌, ವಯರ್‌ಲೆಸ್ ಇಯರ್‌ಬಡ್‌ ಮತ್ತು ಸ್ಮಾರ್ಟ್ ವಾಚ್‌ಗಳು ಸೇರಿದಂತೆ ಇತರ ಸಾಧನಗಳಲ್ಲಿ ಏಕರೂಪದ ಚಾರ್ಚರ್‌ ಬಳಕೆ ಸಂಬಂಧ ಕಂಪನಿಗಳ ಜೊತೆ ಸರ್ಕಾರ ಸಭೆ ನಡೆಸಿದೆ.

    ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸ್ಯಾಮ್‌ಸಂಗ್‌, ಆಪಲ್‌, ಹೆಚ್‌ಪಿ, ಡೆಲ್‌, ಲೆನೆವೊ ಅಲ್ಲದೇ ಫಿಕ್ಕಿ, ಸಿಐಐ, ಐಸಿಇಎ ಸಂಘಟನೆಗಳ ಜೊತೆ ಐಐಟಿ ಡೆಲ್ಲಿ ಐಐಟಿ ಬಿಎಚ್‌ಯು ಭಾಗಿಯಾಗಿದ್ದವು.

    ಹಾರ್ಡ್‌ವೇರ್‌ ಕಂಪನಿಗಳಾದ ಡೆಲ್‌ ಮತ್ತು ಎಚ್‌ಪಿ ಏಕರೂಪದ ಚಾರ್ಜರ್‌ಗೆ ವಿರೋಧ ವ್ಯಕ್ತಪಡಿಸಿದೆ. ಫೀಚರ್‌ ಫೋನ್‌ ಹೊರತುಪಡಿಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಟೈಪ್‌ ಸಿ ಚಾರ್ಜರ್‌ ಬಳಕೆಯಾಗುತ್ತಿವೆ ಎಂದು ಫೋನ್‌ ತಯಾರಕಾ ಕಂಪನಿಗಳು ತಿಳಿಸಿವೆ.

    ಹೈ ಎಂಡ್‌ ವರ್ಕ್‌ಸ್ಟೇಷನ್‌ ಮತ್ತು ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಸಿಪಿಯು(ಸೆಂಟ್ರಲ್‌ ಪ್ರೊಸೆಸಿಂಗ್‌ ಯೂನಿಟ್‌) ಮತ್ತು ಜಿಪಿಯು(ಗ್ರಾಫಿಕ್ಸ್‌ ಪ್ರೊಸೆಸಿಂಗ್‌ ಯೂನಿಟ್‌) ಹೆಚ್ಚು ಹೆಚ್ಚು ಪವರ್‌ ಬೇಕಾಗಿರುವುದರಿಂದ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಿಗೆ ಒಂದೇ ರೀತಿಯ ಚಾರ್ಜರ್‌ ನೀಡಲು ಸಾಧ್ಯವಿಲ್ಲ ಎನ್ನುವುದು ಲ್ಯಾಪ್‌ಟಾಪ್‌ ತಯಾರಕರ ವಾದ.

    ಯುರೋಪಿಯನ್‌ ಒಕ್ಕೂಟ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗ ಯುಎಸ್‌ಬಿ -ಸಿ ಚಾರ್ಜರ್‌ ಕಡ್ಡಾಯ ಮಾಡಿದೆ. ಈ ಮೊದಲು ಇದ್ದ ಮೈಕ್ರೋ ಯುಎಸ್‌ಬಿ ಚಾರ್ಜರ್‌ ಅನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾತ್ರ ಸಿಕ್ಕಿಸಬೇಕಾಗುತ್ತದೆ. ಆದರೆ ಯುಎಸ್‌ಬಿ ಸಿ ಚಾರ್ಜರ್‌ ಅನ್ನು ಯಾವುದೇ ದಿಕ್ಕಿನಲ್ಲೂ ಪ್ಲಗ್‌ ಮಾಡಬಹುದಾಗಿದೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್‌ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.

    ಈಗಾಗಲೇ ಯುರೋಪಿಯನ್‌ ಯೂನಿಯನ್‌ ಸಣ್ಣ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್‌ ಕಡ್ಡಾಯ ಮಾಡಿದ್ದು 2024ರಲ್ಲಿ ಜಾರಿಗೆ ಬರಲಿದೆ.

    ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಗ್‌ ಪೋರ್ಟ್‌ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಈ ಹಿಂದೆ ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್‌ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ.

    Live Tv
    [brid partner=56869869 player=32851 video=960834 autoplay=true]