Tag: Lanke film

  • 75 ದಿನದತ್ತ ಲೂಸ್ ಮಾದ ಯೋಗಿ ‘ಲಂಕೆ’ ಸಿನಿಮಾ ಗೆಲುವಿನ ಯಾನ

    75 ದಿನದತ್ತ ಲೂಸ್ ಮಾದ ಯೋಗಿ ‘ಲಂಕೆ’ ಸಿನಿಮಾ ಗೆಲುವಿನ ಯಾನ

    ಲೂಸ್ ಮಾದ ಯೋಗಿ ಅಭಿನಯದ ಲಂಕೆ ಗೆಲುವಿನ ಯಾನ ಇನ್ನೂ ಮುಗಿದಿಲ್ಲ. ಸಾಕಷ್ಟು ನಿರೀಕ್ಷೆಯೊಂದಿಗೆ ಸೆಪ್ಟೆಂಬರ್ 10ಕ್ಕೆ ತೆರೆಕಂಡ ಚಿತ್ರ ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡದೆ ಮನರಂಜಿಸಿತ್ತು. ಬಹು ಕಾಲದ ನಂತರ ಯೋಗಿಗೂ ಒಂದು ಸೂಪರ್ ಹಿಟ್ ನೀಡಿರುವ ಸಿನಿಮಾ ಈಗ ಗೆಲುವಿನ ಸಂಭ್ರಮದಲ್ಲಿದೆ. 75 ದಿನದತ್ತ ಯಶಸ್ವಿಯಾಗಿಯೂ ಮುನ್ನುಗ್ಗುತ್ತಿದೆ.

    ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾವನ್ನು ನೋಡಿ ಮೆಚ್ಚಿ ಅಪ್ಪಿಕೊಂಡ ಪ್ರೇಕ್ಷಕ ಮಹಾ ಪ್ರಭುಗಳು ಚಿತ್ರತಂಡಕ್ಕೆ ಫುಲ್ ಮಾಕ್ರ್ಸ್ ನೀಡಿದ್ದರು. ಚಿತ್ರತಂಡ ಕೂಡ ಪ್ರೇಕ್ಷರಿಂದ ಸಿಕ್ಕ ಪ್ರೀತಿ ಮೆಚ್ಚುಗೆಗೆ ಸಂತಸ ಪಟ್ಟಿತ್ತು. 25 ದಿನಗಳ ಸಂಭ್ರಮವನ್ನು ಖುಷಿಯಿಂದ ಆಚರಿಸಿತ್ತು. ಇದೀಗ ಆ 25 ದಿನದ ಸಂಭ್ರಮ, 50 ದಿನವನ್ನು ಪೂರೈಸಿದ್ದು ಲಂಕೆ ಸಿನಿಮಾ 75ನೇ ದಿನದತ್ತ ಯಶಸ್ವಿ ಪ್ರದರ್ಶನ ಕಾಣುತ್ತ, ಪ್ರೇಕ್ಷಕರನ್ನು ರಂಜಿಸುತ್ತಾ ಮುನ್ನುಗ್ಗುತ್ತಿದೆ.

    ಕೊರೊನಾ ಸಂಕಷ್ಟ ಕಾಲದಲ್ಲಿಯೂ ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿದ್ದ ಲಂಕೆ ಚಿತ್ರತಂಡ ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಒಂದೊಂದಾಗಿ ಬಿಡುಗಡೆಯಾಗುತ್ತಿದ್ದ ಸಿನಿಮಾಗಳ ನಡುವೆಯೂ ಒಂದೊಳ್ಳೆ ಫುಲ್ ಪ್ಯಾಕೇಜ್ ಮನರಂಜನೆಯೊಂದಿಗೆ ಬಂದ ಸಿನಿಮಾ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಂತಿತ್ತು. ಇದೀಗ ಎಲ್ಲಾ ಅಡೆತಡೆಗಳ ನಡುವೆ ಸಿನಿಮಾ ಸೂಪರ್ ಸಕ್ಸಸ್ ಕಂಡಿರೋದು ಚಿತ್ರತಂಡಕ್ಕೂ ಹೇಳಲಾರದ ಸಂಭ್ರಮವನ್ನು ಉಂಟು ಮಾಡಿದ್ದು ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.

     

    ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದ ಲಂಕೆ ಮಾಸ್ ಆಕ್ಷನ್ ಹಾಗೂ ಪಕ್ಕಾ ಕಮರ್ಶಿಯಲ್ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿತ್ತು. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯನ್ನೊಳಗೊಂಡ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಗಾಯತ್ರಿ ಜೈರಾಮ್, ಶರತ್ ಲೋಹಿತಾಶ್ವ, ಶೋಬ್ ರಾಜ್, ಸುಚೇಂದ್ರ ಪ್ರಸಾದ್, ವಾಣಿಶ್ರೀ ಒಳಗೊಂಡ ದೊಡ್ಡ ತಾರಾಗಣವಿದೆ. ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ರಮೇಶ್ ಬಾಬು ಛಾಯಾಗ್ರಾಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟರ್ಟೈನರ್ಸ್ ಬ್ಯಾನರ್ ಅಡಿ ಲಂಕೆ ಚಿತ್ರವನ್ನು ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • ಲಂಕೆ ಅಡ್ಡಾದಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್

    ಲಂಕೆ ಅಡ್ಡಾದಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್

    ಲೂಸ್ ಮಾದ ಯೋಗಿ ಅಭಿನಯದ ಲಂಕೆ ಸಿನಿಮಾ ಟಾಕ್ ಗಾಂಧಿನಗರದಲ್ಲಿ ಜೋರಾಗಿದೆ. ಸೆಪ್ಟೆಂಬರ್ 10ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ರಾಮ್ ಪ್ರಸಾದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಎರಡು ವೀಡಿಯೋ ಸಾಂಗ್ಸ್ ಬಿಡುಗಡೆ ಮಾಡಿರುವ ಚಿತ್ರತಂಡ ಮತ್ತೊಂದು ಸ್ಪೆಷಲ್ ಸಾಂಗ್ ಬಿಡುಗಡೆ ಮಾಡುವ ತಯಾರಿಯಲ್ಲಿದ್ದು, ಸದ್ಯಕ್ಕೆ ಈ ಸ್ಪೆಷಲ್ ಹಾಡಿನ ಸ್ಟಿಲ್ಸ್ ಬಿಡುಗಡೆ ಮಾಡಿ ಗಮನ ಸೆಳೆದಿದೆ. ತೆರೆ ಮೇಲೆ ಮೊಡಿ ಮಾಡಲು ಹೊರಟಿದ್ದಾರೆ ಲೂಸ್ ಮಾದ ಯೋಗಿ, ಕ್ಯಾವ್ಯಾ ಶೆಟ್ಟಿ ಜೋಡಿ.

    ಬ್ಲ್ಯಾಕ್ ಡ್ರೆಸ್ ನಲ್ಲಿ ಸಖತ್ ಹಾಟ್ ಅಂಡ್ ಗ್ಲ್ಯಾಮರ್ ಲುಕ್ ಹಾಗೂ ಮಾದಕ ನೋಟದಿಂದ ಪಡ್ಡೆಗಳ ನಿದ್ದೆ ಕದಿಯುತ್ತಿದ್ದಾರೆ. ಇದನ್ನೂ ಓದಿ: ‘ಲಂಕೆ’ ಟ್ರೇಲರ್ ಕಂಡು ಪ್ರೇಕ್ಷಕರು ಥ್ರಿಲ್ – ಸಿನಿಮಾ ನೋಡೋದೊಂದೇ ಬಾಕಿ ಎಂದ ಯೋಗಿ ಫ್ಯಾನ್ಸ್

    ಯೋಗಿ ಮತ್ತು ಕ್ಯಾವ್ಯಾ ಶೆಟ್ಟಿ ಜೋಡಿ ಮೊಡಿ ಮಾಡದೇ ಇರಲು ಸಾಧ್ಯವೇ ಇಲ್ಲ. ಅಷ್ಟು ಬೋಲ್ಡ್ ಆಗಿ ಇಬ್ಬರು ಕಾಣಿಸಿಕೊಂಡಿದ್ದಾರೆ.

     ಯೋಗಿ ಹಾಗೂ ಕಾವ್ಯಾ ಶೆಟ್ಟಿ ಕೆಮಿಸ್ಟ್ರಿ ಕೂಡ ಅಷ್ಟೇ ಚೆನ್ನಾಗಿ ಆನ್ ಸ್ಕ್ರಿನ್ ಮೇಲೆ ಮೂಡಿಬಂದಿದೆ. ಇದನ್ನೂ ಓದಿ:  ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಸೆ.10ರಂದು ಚಿತ್ರಮಂದಿರಕ್ಕೆ

    ಯೋಗಿ ಚಿತ್ರದಲ್ಲಿ ಡಿಫ್ರೆಂಟ್ ಲುಕ್ ಮ್ಯಾನರಿಸಂ, ಪವರ್ ಫುಲ್ ಆಕ್ಷನ್ ಸೀನ್‍ಗಳ ಮೂಲಕ ಕಾಣಿಸಿಕೊಂಡಿದ್ದಾರೆ.

    ಧನಂಜಯ್ ಕೊರಿಯೋಗ್ರಫಿಯಲ್ಲಿ ಮೂಡಿ ಬಂದ ಹಾಳಾದ ಜವಾನಿ ಹಾಡಿನ ಸ್ಟಿಲ್ಸ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಕರಾವಳಿ ಬೆಡಗಿ ಕಾವ್ಯಾ ಶೆಟ್ಟಿ ಸಖತ್ ಬೋಲ್ಡ್ ಅಂಡ್ ಹಾಟ್ ಲುಕ್‍ನಲ್ಲಿ ಯೋಗಿ ಜೊತೆ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕಂತೂ ಬಿಡುಗಡೆಯಾಗಿರುವ ಹಾಡಿನ ಸ್ಟಿಲ್ಸ್ ಸಖತ್ ವೈರಲ್ ಆಗಿವೆ.

    ನಾಲ್ಕೈದು ಸೆಟ್ ನಲ್ಲಿ `ಹಾಳಾದ ಜವಾನಿ’ ಹಾಡನ್ನು ಚಿತ್ರೀಕರಿಸಲಾಗಿದ್ದು, ಫೈರ್, ಸ್ಪಾರ್ಕ್, ಸ್ಯಾಂಡ್ ಒಳಗೊಂಡಂತೆ ಹಲವು ಎಲಿಮೆಂಟ್‍ಗಳನ್ನು ಹಾಡಿಗಾಗಿ ಬಳಸಲಾಗಿದೆ. ಗೀತರಚನೆಗಾರ ಗೌಸ್ ಫೀರ್ ಸಾಹಿತ್ಯಕ್ಕೆ ಐಶ್ವರ್ಯ ರಂಗರಾಜನ್ ದನಿಯಾಗಿದ್ದು, ವಾಸು ದೀಕ್ಷಿತ್ ಮ್ಯೂಸಿಕ್ ಕಿಕ್ ಅಭಿಮಾನಿಗಳನ್ನು ರಂಜಿಸಲಿದೆ.

     

    ಚಿತ್ರತಂಡ `ಯೋಗಿ ಬಾಸು’ ಹಾಗೂ `ನಯನಕೆ ನಯನ’ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಯೂಟ್ಯೂಬ್ ನಲ್ಲಿ ಈ ಹಾಡುಗಳು ಒಂದು ಮಿಲಿಯನ್‍ಗೂ ಹೆಚ್ಚಿನ ವೀವ್ಸ್ ಪಡೆದುಕೊಂಡಿವೆ. ಇದೀಗ `ಹಾಳಾದ ಜವಾನಿ’ ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

     ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಸಿನಿಮಾ ಮಾಸ್ ಆಕ್ಷನ್ ಡ್ರಾಮಾ ಕಥಾಹಂದರ ಒಳಗೊಂಡಿದೆ. ನೈಜ ಘಟನೆ ಆಧಾರಿತ ಈ ಸಿನಿಮಾ ಮೂಲಕ ಒಂದಿಷ್ಟು ವಿಚಾರಗಳನ್ನು ಮಾಡರ್ನ್ ಆಗಿ ಹೇಳ ಹೊರಟಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಲೂಸ್ ಮಾದನಿಗೆ ಹುಟ್ಟುಹಬ್ಬದ ಸಂಭ್ರಮ- ಗಿಫ್ಟ್ ಆಗಿ ಲಂಕೆ ಟೀಸರ್ ರಿಲೀಸ್

    ರಮೇಶ್ ಬಾಬು ಛಾಯಾಗ್ರಾಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

    ಕೃಷಿ ತಾಪಂಡ, ಕಾವ್ಯಾಶೆಟ್ಟಿ, ಎಸ್ಟರ್ ನರೋನ್ಹಾ, ಗಾಯತ್ರಿ ಜೈರಾಮ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಶೋಬ್ ರಾಜ್, ಸುಚೇಂದ್ರ ಪ್ರಸಾದ್, ವಾಣಿಶ್ರೀ ಸೇರಿದಂತೆ ಹಲವು ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ.