Tag: lang

  • ಕೈಯಲ್ಲಿ ಮಚ್ಚು, ಲಾಂಗು ಹಿಡಿದ ಪಾಲಿಕೆ ಸದಸ್ಯ – ಕೇಳಿದ್ರೆ ಏನ್ ತಪ್ಪು ಅಂದ್ರು ಇಮ್ರಾನ್ ಪಾಷಾ

    ಕೈಯಲ್ಲಿ ಮಚ್ಚು, ಲಾಂಗು ಹಿಡಿದ ಪಾಲಿಕೆ ಸದಸ್ಯ – ಕೇಳಿದ್ರೆ ಏನ್ ತಪ್ಪು ಅಂದ್ರು ಇಮ್ರಾನ್ ಪಾಷಾ

    ಬೆಂಗಳೂರು: ಬಿಬಿಎಂಪಿ ಹಾಲಿ ಸದಸ್ಯರೊಬ್ಬರು ಈದ್ ಮಿಲಾದ್ ಆಚರಣೆ ವೇಳೆ ಲಾಂಗ್ ಪ್ರದರ್ಶನ ಮಾಡಿರೋ ಘಟನೆ ಇಂದು ಬೆಳಕಿಗೆ ಬಂದಿದೆ.

    ಈ ಘಟನೆ ಬ್ಯಾಟಾರಾಯನಪುರದ ಗೋರಿಪಾಳ್ಯದಲ್ಲಿ ಶನಿವಾರ ನಡೆದಿದ್ದು, ವಾರ್ಡ್ ನಂಬರ್ 135ರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರು ಓರ್ವ ಜನಪ್ರತಿನಿಧಿಯಾಗಿ ಸಾರ್ವಜನಿಕರ ಮುಂದೆಯೇ ಈ ರೀತಿ ವರ್ತನೆ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಇಮ್ರಾನ್ ಪಾಷಾ ಅವರನ್ನು ಮಾತನಾಡಿಸಿದಾಗ, ಸಾವಿರಾರು ಮಂದಿ ನಮ್ಮ ಮನೆ ಮುಂದೆ ನೆರೆದಿದ್ದರು. ಹಲವು ಕಡೆ ನನ್ನ ಆಮಂತ್ರಿಸಿದ್ದರು. ಹೀಗಾಗಿ ನಾನು ಅಲ್ಲಿ ಅನ್ನದಾನ ಮಾಡಿ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಹಲವು ಮಂದಿ ಯುವಕರು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಇದ್ದರು. ಆದ್ರೆ ಯಾರಿಗೂ ತೊಂದರೆ ಮಾಡೋ ಉದ್ದೇಶದಿಂದ ಅವರು ಲಾಂಗ್ ಹಿಡಿಕೊಂಡಿಲ್ಲ. ಈ ವೇಳೆ ಅವರು ಅಣ್ಣ ಬನ್ನಿ ಅಂತ ಕರೆದ್ರು. ಹೀಗಾಗಿ ನಾನು ಕೂಡ ಕೈಯಲ್ಲಿ ಲಾಂಗ್ ಹಿಡಿದೆ. ಅಂತೆಯೇ ಅವರೆಲ್ಲರೂ ನನ್ನ ಎತ್ತಿಕೊಂಡು ಕುಣಿದ್ರು ಅಂತ ಅವರು ಹೇಳಿದ್ರು.

    ಅಂದು ಈದ್ ಮಿಲಾದ್ ಆಗಿದ್ದುದರಿಂದ ಹಿಂದೂಸ್ತಾನದ ಎಲ್ಲಾ ರಾಜಕೀಯ ನಾಯಕರುಗಳು ಕೂಡ ಮೆರವಣಿಗೆ ಹೋಗಿ ಅವರ ಅಭಿಮಾನಿಗಳ ಜೊತೆ ಖುಷಿಯಿಂದ ಆಚರಣೆ ಮಾಡುತ್ತಾರೆ. ಅಷ್ಟಕ್ಕೂ ಅಲ್ಲಿ ನಾನು ಒಬ್ಬನೇ ಲಾಂಗ್ ಹಿಡಿದುಕೊಂಡಿಲ್ಲ. ಅಲ್ಲಿ ನೆರೆದಿದ್ದ ಹಲವರು ಹಿಡಿದುಕೊಂಡಿದ್ದರು. ಒಟ್ಟಿನಲ್ಲಿ ನಾನೇನು ತಪ್ಪು ಕೆಲಸ ಮಾಡಿಲ್ಲ ಅಂತ ಅವರು ಸಮರ್ಥಿಸಿಕೊಂಡ್ರು.

    ಸದ್ಯ ಕಾರ್ಪೋರೇಟರ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತ್ರೀವ ಆಕ್ರೋಶ ವ್ಯಕ್ತವಾಗುತ್ತಿದೆ.

     

  • ಕೆಪಿ ಅಗ್ರಹಾರದಲ್ಲಿ ರೌಡಿಗಳ ಪುಂಡಾಟ- ನಡುರಾತ್ರಿಯಲ್ಲಿ ಬೆಚ್ಚಿಬಿತ್ತು ರಾಜ್ಯ ರಾಜಧಾನಿ

    ಕೆಪಿ ಅಗ್ರಹಾರದಲ್ಲಿ ರೌಡಿಗಳ ಪುಂಡಾಟ- ನಡುರಾತ್ರಿಯಲ್ಲಿ ಬೆಚ್ಚಿಬಿತ್ತು ರಾಜ್ಯ ರಾಜಧಾನಿ

    ಬೆಂಗಳೂರು: ನಗರದಲ್ಲಿ ರೌಡಿಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಾನೆ ಇದೆ. ಪೊಲೀಸ್ರ ಭಯನೂ ಇಲ್ಲದೆ ಇರೋ ಪರಿಸ್ಥತಿ ಉಂಟಾಗಿದೆ. ಇದಕ್ಕೆ ಗುರುವಾರ ನಡೆದ ಘಟನೆ ಪುಷ್ಠಿ ನೀಡುತ್ತಿದೆ.

    ನಿನ್ನೆ ರಾತ್ರಿ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ರೌಡಿಗಳಿಂದ ದಾಂಧಲೆ ನೆಡೆದಿದೆ. ಮೂರು ಬೈಕ್‍ಗಳಲ್ಲಿ ಬಂದ ಆರು ಜನರ ತಂಡ ಲಾಂಗ್ ಮಚ್ಚುಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಸಂಜು ಅನ್ನೋ ರೌಡಿ ಶೀಟರ್ ಮನೆಗೆ ನುಗ್ಗಿ ರೌಡಿ ಜಯಂತ್ ಆಂಡ್ ಟೀಂ ಗಲಾಟೆ ಮಾಡಿದ್ದಾರೆ. ವಿಜಯನಗರ ಕಾಫಿ ಡೇ ನಲ್ಲಿ ಮಹೇಶ್ ಅನ್ನೋ ವ್ಯಕ್ತಿಯನ್ನು ಸಂಜು ಮರ್ಡರ್ ಆಗಿದ್ದ. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಸಂಜು, 20ದಿನಗಳ ಹಿಂದೆ ಸಂಜು ಜೈಲ್‍ನಿಂದ ಹೊರಗೆ ಬಂದಿದ್ದ. ಮಹೇಶ್ ಕೊಲೆ ಮಾಡಿದ ಸೇಡು ತೀರಿಸಲು ಸಂಜು ಸಿಗದ ಕಾರಣ ಅಕ್ಕಪಕ್ಕದವರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ.

    ಘಟನೆಯಲ್ಲಿ ವರುಣ್ ಎಂಬವರ ಮೇಲೆ ಹಲ್ಲೆಯಾಗಿದ್ದು, ಸದ್ಯ ವರಣ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂದ ಕೆಪಿ ಅಗ್ರಹಾರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.