Tag: land

  • ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

    ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

    ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

    ಇಂದು ಬೆಳಿಗ್ಗೆ 9:53ರ ಸುಮಾರಿಗೆ ಭೂಮಿಯಿಂದ ಭಾರೀ ವಿಚಿತ್ರ ರೀತಿಯಲ್ಲಿ ಸದ್ದು ಕೇಳಿಬಂದಿದೆ. ಇದು ಇಂದು ಮಾತ್ರ ಅಲ್ಲ ಗ್ರಾಮದಲ್ಲಿ ಈ ಹಿಂದೆ ಅನೇಕ ಬಾರಿ ಮೇಲಿಂದ ಮೇಲೆ ಭೂಮಿಯಿಂದ ಈ ರೀತಿಯ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ಭೂಕಂಪನದ ಅನುಭವ ಆದಂತಾಗಿದೆ. ಶಬ್ಧ ಬರಲು ಮೂಲ ಕಾರಣ ಏನು ಎನ್ನುವುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಇದನ್ನೂ ಓದಿ: ಕಲಬುರಗಿ ಕೋಟೆ ವೀಕ್ಷಿಸಿದ ನಿರಾಣಿ

    ಕಳೆದ ಐದು ವರ್ಷಗಳಿಂದ ಈ ಗ್ರಾಮದಲ್ಲಿ ಭೂಮಿಯಿಂದ ಕಂಪಿಸುವ ಶಬ್ದ ಅನೇಕ ಬಾರಿ ಕೇಳಿ ಬಂದ ಪರಿಣಾಮ, ಇಲ್ಲಿ ರಿಕ್ಟರ್ ಮಾಪನ ಸಹ ಕೆಲ ವರ್ಷಗಳ ಹಿಂದೆ ಅಳವಡಿಸಿದ್ದರು. ಆದರೆ ರಿಕ್ಟರ್ ಮಾಪನದಲ್ಲಿ ಇಲ್ಲಿಯವರೆಗೆ ಭೂಕಂಪದ ಬಗ್ಗೆ ಯಾವುದೇ ದಾಖಲಾಗಿಲ್ಲ. ಹೀಗಾಗಿ ಇದು ವಿಜ್ಞಾನಿಗಳಿಗೆ ದೊಡ್ಡ ತಲೆ ನೋವಾಗಿದೆ. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 80 ಕೋಟಿ ಮೌಲ್ಯದ ಜಾಗ ವಶ

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 80 ಕೋಟಿ ಮೌಲ್ಯದ ಜಾಗ ವಶ

    ಮೈಸೂರು: ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಕಬಳಿಸಿರುವುದು, ಒತ್ತುವರಿ ಮಾಡಿಕೊಂಡಿರುವ ನಿವೇಶನಗಳನ್ನು ಪತ್ತೆ ಮಾಡಿ ತನ್ನ ಸುಪರ್ದಿಗೆ ಪಡೆಯುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 80 ಕೋಟಿ ರೂ. ಬೆಲೆ ಬಾಳುವ ನಿವೇಶನವನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

    ಮೈಸೂರು ತಾಲ್ಲೂಕಿನ ಕಸಬಾ ಹೋಬಳಿ ಹಿನಕಲ್ ಗ್ರಾಮದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ವ್ಯಕ್ತಿಯೊಬ್ಬ ಭೂಮಿ ತಮ್ಮದೆಂದು ಹೇಳುತ್ತಿದ್ದ ಜಾಗವನ್ನು ಕಾರ್ಯಾಚರಣೆ ಮೂಲಕ ಸುಪರ್ದಿಗೆ ಪಡೆಯಲಾಗಿದೆ.

    ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ.331/4 ಮತ್ತು 331/5ರಲ್ಲಿ 8 ಎಕರೆ 31 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಮುಡಾ ಪರಿಹಾರವನ್ನು ನೀಡಿತ್ತು. ನಿಯಮಾನುಸಾರ ಸ್ವಾಧೀನ ಪ್ರಕ್ರಿಯೆಗಳು ಮುಗಿದು ಮುಡಾ ವ್ಯಾಪ್ತಿಗೆ ಜಮೀನು ಸೇರಿತ್ತು. ಆದರೆ, ಭೂ ಮಾಲೀಕರು ಭೂಸ್ವಾಧೀನ ಪ್ರಕ್ರಿಯೆ ನಂತರ ಭೂಮಿ ಬಿಟ್ಟು ಕೊಡುವ ಬದಲಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಎಚ್‍ಡಿಡಿ ಫೋಟೋ ತೆಗೆದಿದ್ದು ಯಾಕೆ – ಹಾಸನದಲ್ಲಿ ಜನಪ್ರತಿನಿಧಿಗಳ ಮಧ್ಯೆ ಗಲಾಟೆ

    ನ್ಯಾಯಾಲಯವು ಭೂಸ್ವಾಧೀನ ಪ್ರಕ್ರಿಯ ಕಾರ್ಯ ಮುಗಿದ ಮೇಲೆ ತಾವು ಯಾವುದೇ ನಿರ್ದೇಶನ ನೀಡಲು ಬರುವುದಿಲ್ಲವೆಂದು ಹೇಳಿ ಆದೇಶ ನೀಡಿತ್ತು. ಹೀಗಿದ್ದರೂ ಭೂ ಮಾಲೀಕರು ಜಾಗ ತೆರವು ಮಾಡಿರಲಿಲ್ಲ. ಅಧಿಕಾರಿಗಳು ಕೂಡ ದಾಖಲೆಗಳನ್ನು ಪರಿಶೀಲಿಸದಿರುವ ಜೊತೆಗೆ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ ಕುಳಿತಿದ್ದರು. ಆದರೆ, ಒಂದು ವರ್ಷದಿಂದ ಮುಡಾ ಆಸ್ತಿಯನ್ನು ಗುರುತು ಮಾಡಿ ಕೈಬಿಟ್ಟು ಹೋಗಿರುವುದನ್ನು ವಾಪಸ್ ಪಡೆಯಲು ಮುಂದಾಗಿರುವ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು, ಕಳೆದ ಮೂರು ತಿಂಗಳಿನಿಂದ ಸರ್ವೆ ನಂ 331/4, 331/5ರ ಕಡತಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಲ್ಲದೆ, ನ್ಯಾಯಾಲಯ ನೀಡಿದ್ದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ದಾಖಲೆಗಳು ಮೂಡಾ ಪರವಾಗಿ ಇದ್ದ ಕಾರಣ ಅಕ್ರಮ ತೆರವು ಮಾಡಲಾಗಿದೆ. ಈ ಜಾಗದ ಮಾರುಕಟ್ಟೆ ದರವು ಚದರ ಮೀಟರ್‍ಗೆ 5 ಸಾವಿರ ರೂ. ಇದ್ದು, 8.31 ಎಕರೆಗೆ ಅಂದಾಜು 80 ಕೋಟಿ ರೂ. ಮೌಲ್ಯ ಹೊಂದಿದೆ. ನಿವೇಶನವನ್ನು ಜೆಸಿಬಿ ಯಂತ್ರಗಳಿಂದ ಶುಚಿಗೊಳಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಯೆಂದು ಸಾರ್ವಜನಿಕ ಸೂಚನಾ ನಾಮಫಲಕ ಹಾಕುವ ಜತೆಗೆ ಅತಿಕ್ರಮ ಪ್ರವೇಶ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

  • ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ

    ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ

    ಮಡಿಕೇರಿ: ಕೋಟ್ಯಂತರ ರೂಪಾಯಿಯ ಆಸ್ತಿ ಇದ್ದರೂ ಇತ್ತೀಚಿನ ದಿನಗಳಲ್ಲಿ ದಾನ ನೀಡುವವರ ಸಂಖ್ಯೆ ತೀರಾ ವಿರಳ. ಆದರೆ ಇಳಿ ವಯಸ್ಸಿನ ವೃದ್ಧೆ ಲಕ್ಷಾಂತರ ರೂ. ಬೆಲೆ ಬಾಳುವ ತಮ್ಮ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್‌ ಅನಾಥಶ್ರಮಕ್ಕೆ ದಾನ ನೀಡಿ ಮಾದರಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆಯ ನಿವಾಸಿ ಬೋಳ್ಳಮ್ಮ (82) ಅವರು ತಮಗೆ ಇರುವ ಅಲ್ಪಸ್ವಲ್ಪ ಆಸ್ತಿಯಲ್ಲಿ 30 ಸೆಂಟ್ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್‌ ಅನಾಥಾಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಸುಂಟಿಕೊಪ್ಪ ಸಮೀಪ ಇರುವ ಅಶ್ರಮದ ಮಾಲೀಕ ರಮೇಶ್ ಅವರು ಸರ್ಕಾರ ಯಾವುದೇ ಯೋಜನೆಯ ಸಹಾಯ ಪಡೆಯದೆ, ಬಾಡಿಗೆ ಮನೆ ಮಾಡಿಕೊಂಡು ಪ್ರಸ್ತುತ 28 ಅನಾಥರಿಗೆ ಆಶ್ರಯ ನೀಡಿದ್ದಾರೆ.

    ಸಂಕಷ್ಟದಲ್ಲಿ ಆಶ್ರಮ ನಡೆಸುತ್ತಿರುವುದನ್ನು ಗಮನಿಸಿದ ವೃದ್ಧೆ, ತಮಗೆ ಇರುವ ಸ್ವಲ್ಪ ಜಾಗವನ್ನೇ ಅನಾಥಶ್ರಮಕ್ಕೆ ದಾನ ನೀಡಿ ಮಾನವೀಯತೆ ಮೇರೆದಿದ್ದಾರೆ. ಇಂದು ನಾಗರಪಂಚಮಿ ಹಬ್ಬ ಆಗಿರುವುದರಿಂದ ಶಾಸಕ ಅಪ್ಪಚ್ಚು ರಂಜನ್ ಮೂಲಕ ಜಾಗ ದಾನದ ಪತ್ರವನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತಾನಾಡಿದ ಶಾಸಕ ಅಪ್ಪಚ್ಚು ರಂಜನ್, ಅನಾಥಾಶ್ರಮಕ್ಕೆ ಇನ್ನಷ್ಟು ಜಾಗದ ಅವಶ್ಯಕತೆ ಇರುವುದರಿಂದ ವಯಕ್ತಿಕವಾಗಿ ಇನ್ನೂ 70 ಸೆಂಟ್ ಜಾಗ ಖರೀದಿಸಿ, ಒಟ್ಟು ಒಂದು ಎಕರೆ ಜಾಗದಲ್ಲಿ ಒಳ್ಳೆಯ ಅಶ್ರಮ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

    ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಅಟ್ಟುವನಹಳ್ಳಿ ಗ್ರಾಮದ ಮಹದೇವು ಜಮೀನಿನಲ್ಲಿ ಯುವಕನ ಶವ ಪತ್ತೆಯಾಗಿದೆ. ಸುಮಾರು 30-35 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಎಸೆದು ಹೋಗಿದ್ದಾರೆ. ಯುವಕ ಯಾರು ಎಲ್ಲಿಯವನು ಎಂದು ಇನ್ನೂ ಪತ್ತೆಯಾಗಿಲ್ಲ.

    ಸದ್ಯ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕೊಲೆಯಾಗಿರುವ ಯುವಕನ ಶರೀರವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಸಿಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

  • ಜಮೀನು ಗಲಾಟೆ- ಮಹಿಳೆ ಮೇಲೆ ಗುಂಡಿನ ದಾಳಿ

    ಜಮೀನು ಗಲಾಟೆ- ಮಹಿಳೆ ಮೇಲೆ ಗುಂಡಿನ ದಾಳಿ

    ಕಲಬುರಗಿ: ಜಮೀನಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಕ್ಷುಲಕ ಕಾರಣಕ್ಕೆ ಜಮೀನಿನ ವಿಚಾರವಾಗಿ ನಡೆದ ವಾಗ್ವಾದಲ್ಲಿ ಕಡಗಂಚಿ ಗ್ರಾಮದ ಮಹಿಳೆ ನಿರ್ಮಲ ಸಾತಲಿಂಗಪ್ಪ (38) ಮೇಲೆ ಗುಂಡಿನ ದಾಳಿ ನಡೆದಿದೆ. ಅದೇ ಗ್ರಾಮದ ನಾಗರಾಜ ವಾಣಿ ಗುಂಡು ಹಾರಿಸಿದ ಆರೋಪಿಯಾಗಿದ್ದು, ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಎರಡನೇ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಾಗಿ, ಗಾಯಗೊಂಡಿದ್ದಾರೆ.

    ಸದ್ಯ ಆರೋಪಿ ನಾಗರಾಜನನ್ನು ಬಂಧಿಸಲಾಗಿದ್ದು, ಈ ಸಂಬಂಧ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • ಹೊಟ್ಟೆ ನೋವು ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆ

    ಹೊಟ್ಟೆ ನೋವು ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆ

    ಶಿವಮೊಗ್ಗ: ಹೊಟ್ಟೆ ನೋವು ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ನಡೆದಿದೆ.

    ಮೃತ ಯುವತಿಯನ್ನು ಚಂದ್ರಗುತ್ತಿ ಗ್ರಾಮದ ನಾಗರಾಜ ಮರಡಿ ಅವರ ಪುತ್ರಿ ಸುಚಿತ್ರಾ (17) ಎಂದು ಗುರುತಿಸಲಾಗಿದೆ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸುಚಿತ್ರಾರಿಗೆ ಕೆಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು.

    ಪೋಷಕರು ಜಮೀನು ಕೆಲಸಕ್ಕೆ ತೆರಳಿದ್ದ ವೇಳೆ ಸುಚಿತ್ರಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದೇ ಇರುವುದರಿಂದ ಹೊಟ್ಟೆನೋವು ತಾಳಲಾರದೇ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಈ ಸಂಬಂಧ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದು. ಪೊಲೀಸರು ಘಟನೆ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

  • ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ

    ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ

    ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರ ಆದೇಶ ನೀಡಿದ್ಯಾ ಎಂದು ಪ್ರಶ್ನಿಸಿ ಇದು ಎತ್ತಿನ ಮುಂದೆ ಚಕ್ಕಡಿ (ಎತ್ತಿನ ಗಾಡಿ) ಹೂಡಿದ ಹಾಗೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

    ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ವರ್ಗಾವಣೆ/ಮಾರಾಟ ವಿಚಾರವಾಗಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

    ಸಾಮಾಜಿಕ ಕಾರ್ಯಕರ್ತ ಕೆಎ ಪೌಲ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಸಂಪುಟ ಸಭೆ ಒಪ್ಪಿಗೆ ಪಡೆಯದೇ ಮೇ 6 ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ? ಈ ಸಂಬಂಧ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿದೆ.

    ಸಂಪುಟದ ಒಪ್ಪಿಗೆ ಇಲ್ಲದೆ ಸರ್ಕಾರಿ ಆದೇಶ ಹೊರಡಿಸಿದ್ದು ಹೇಗೆ?. ಮೇ 6ರ ಸರ್ಕಾರಿ ಆದೇಶದ ಪ್ರತಿ ಹಾಗೂ ಜೂನ್ 15 ರ ಆದೇಶ ಕಾರ್ಯರೂಪ ಮೆಮೋ, ಸಂಪುಟದ ಒಪ್ಪಿಗೆ ಇಲ್ಲದೇ ಜಾರಿ ಮಾಡಿದ ಆದೇಶದ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ಆಸ್ತಿಯ ಮಾರಾಟ/ವರ್ಗಾವಣೆ ಆದೇಶ ಹೊರಡಿಸಬಹುದೇ? ಎಂಬುದರ ಬಗ್ಗೆ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಕೋರ್ಟ್ ಜುಲೈ 16ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: ಜಿಂದಾಲ್‍ಗೆ 3,667 ಎಕರೆ ಪರಭಾರೆ ಆದೇಶ ವಾಪಸ್ – ಕ್ಯಾಬಿನೆಟ್‍ನಲ್ಲಿ ಏನಾಯ್ತು?

    ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿ ಪರಭಾರೆ ಮಾಡಲಾಗಿದೆ. ಅತ್ಯಂತ ಕಡಿಮೆ ದರಕ್ಕೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಕಳೆದ ವಿಚಾರಣೆ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೂನ್.14ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೆಮೊವನ್ನು ಸಲ್ಲಿಸಿದ್ದರು. ಅದರಲ್ಲಿ ಸರ್ಕಾರ ಏಪ್ರಿಲ್ 26ರ ಸಂಪುಟ ಸಭೆಯಲ್ಲಿ ಜೆಎಸ್‍ಡಬ್ಲ್ಯು ಲಿಮಿಟೆಡ್‍ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಳಿಕ ನಡೆದ ಸಭೆಗಳಲ್ಲಿ ನಿರ್ಧಾರ ಫೈನಲ್ ಆಗಿರಲಿಲ್ಲ ಎಂದು ಉಲ್ಲೇಖ ಮಾಡಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣರನ್ನು ಪಿಐಎಲ್‍ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ಒಪ್ಪಿಗೆ ಕೊಟ್ಟಿತ್ತು.

  • ದಾಯಾದಿಗಳ ನಡುವೆ ಜಮೀನು ವಿವಾದ- ಗುಂಪು ಗಲಾಟೆಯಲ್ಲಿ ಕೆಲವರಿಗೆ ಗಾಯ

    ದಾಯಾದಿಗಳ ನಡುವೆ ಜಮೀನು ವಿವಾದ- ಗುಂಪು ಗಲಾಟೆಯಲ್ಲಿ ಕೆಲವರಿಗೆ ಗಾಯ

    ಕೋಲಾರ: ಜಮೀನು ವಿವಾದ ಹಿನ್ನೆಲೆ ದಾಯಾದಿಗಳ ಮಧ್ಯೆ ಜಗಳ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಮೀನಿನ ಮೇಲೆ ನೀರು ಹರಿಯುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇದಾಗಿದೆ. ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದ ಮುಲಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಾದ ಮುನಿರಾಜು, ಸೊಣ್ಣಪ್ಪ, ಅಂಜಿನಪ್ಪ ಮತ್ತು ಸಹೋದರರು ಸೇರಿ ಚಿಕ್ಕ ಹೆಂಡತಿ ಮಕ್ಕಳಾದ ಮನೋಜ್ ಮತ್ತು ಮದನ್ ಸೇರಿದಂತೆ ಮುನಿಯಾಕಲಪ್ಪ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆಯಲ್ಲಿ ಮನೋಜ್ ತಲೆಗೆ ತೀವ್ರವಾಗಿ ಗಾಯವಾಗಿದ್ದು ತಲೆಗೆ ನಾಲ್ಕು ಹೊಲಿಗೆಯನ್ನು ಮಾಡಲಾಗಿದೆ.

    ಮುನಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಿಗೆ ನೀಡಬೇಕಾದ ಭಾಗವನ್ನು ಗ್ರಾಮದ ಹಿರಿಯರು ಸೇರಿ ನ್ಯಾಯ ಪಂಚಾಯಿತಿ ಮಾಡಿ ವಿಭಾಗ ನೀಡಿದ್ದು, ಅದರ ಜಮೀನು ಪಕ್ಕ ಚಿಕ್ಕ ಹೆಂಡತಿ ಮಕ್ಕಳು ಜಮೀನಿನಲ್ಲಿ ಕೆಲಸಮಾಡುತ್ತಿರುವಾಗ ಏಕಾ ಏಕಿ ರಾಡ್ ಮೂಲಕ ಹಲ್ಲೆ ಮಾಡಿದ್ದಾರೆ. ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ,

  • ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    – ಗ್ರಾಮೀಣ ಜನರಿಗೆ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಮಾಸ್ಟರ್ ಪ್ಲಾನ್

    ಯಾದಗಿರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆಗಾಗಿ ಬಡಿದಾಡಿಕೊಳ್ಳುತ್ತಿದ್ದರೆ, ಯಾದಗಿರಿಯಲ್ಲಿ ಮಾತ್ರ ಮನೆಗೆ ಹೋಗಿ ಲಸಿಕೆ ಕೊಟ್ಟರೂ ಜನ ಮಾತ್ರ ಲಸಿಕೆ ಪಡೆಯಿತ್ತಿಲ್ಲ. ಇನ್ನೂ ಗ್ರಾಮೀಣ ಭಾಗದ ಜನ ಬೆಳಗ್ಗೆ ಜಮೀನು ಕೆಲಸಕ್ಕೆ ಹೋದರೆ ಮತ್ತೆ ರಾತ್ರಿಯೇ ಮನೆಗೆ ಸೇರುತ್ತಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಲಸಿಕೆ ವಿತರಣೆ ಕುಂಠಿತವಾಗಿದೆ.

    ಯಾದಗಿರಿ ಆರೋಗ್ಯ ಸಿಬ್ಬಂದಿ ಮಾತ್ರ ಜನರಿಗೆ ಶತಾಗತಾಯ ಲಸಿಕೆ ನೀಡಲು ಹರಸಹಾಸ ಪಡುತ್ತಿದ್ದಾರೆ. ಸೀದಾ ರೈತರ ಜಮೀನುಗಳಿಗೆ ತೆರಳಿ ಸಿಬ್ಬಂದಿ ಜಮೀನುಗಳಲ್ಲಿಯೇ ಲಸಿಕೆ ವಿತರಣೆ ಮಾಡುತ್ತಿದ್ದಾರೆ. ಮರದ ಕೆಳಗೆ, ರಸ್ತೆಯಲ್ಲಿ, ಬೆಳೆಗಳ ಮಧ್ಯೆ ಹೀಗೆ ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ ಹಾಕಲಾಗುತ್ತಿದೆ.

    ಡಾ.ಲಕ್ಷ್ಮಿಕಾಂತ್ ಮತ್ತು ಅವರ ತಂಡ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಲಸಿಕೆ ಪಡೆಯಲು ಕುಂಟು ನೆಪ ಹೇಳಿ, ಜಮೀನಿಗೆ ಹೋಗತ್ತಿದ್ದ ಜನ ಆರೋಗ್ಯ ಸಿಬ್ಬಂದಿ ಪ್ಲಾನ್ ಗೆ ಥಂಡಾ ಹೊಡೆದಿದ್ದಾರೆ. ಇದನ್ನೂ ಓದಿ:ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ

  • ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಯಾದಗಿರಿ: ಸರ್ಕಾರ ಕೊಟ್ಟ ಜಮೀನಿನಲ್ಲಿ ಉಳುಮೆ ಮಾಡಲು ಪಕ್ಕದ ಜಮೀನಿನ ಮಾಲೀಕರು ಬಿಡದ ಕಾರಣ, ನೊಂದ ಕುಟುಂಬವೊಂದು ಜಮೀನು ಕೊಡಿಸಿ ಇಲ್ಲವೇ ವಿಷ ಕೊಡಿ ಎಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಗೆ ಮುಂದಾಗಿದೆ.

    ಜಿಲ್ಲೆಯ ಶಹಾಪುರ್ ತಾಲೂಕಿನ ಹೊಸಕೇರ ಬಾಂಗ್ಲಾ ತಾಂಡಾದಲ್ಲಿ ಕಳೆದ ಇಪ್ಪತ್ತು ವರ್ಷದ ಹಿಂದೆ ಸರ್ಕಾರದ ಜಮೀನನ್ನು ಟೋಪುನಾಯಕ ಎಂಬುವರರಿಗೆ ಕೊಡಲಾಗಿತ್ತು. ಜೊತೆಗೆ ಹಕ್ಕು ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಆ ವೇಳೆಯಲ್ಲಿ ಜಮೀನಿಗೆ ಸರ್ವೆ ಮಾಡದ ಕಾರಣ, ಟೋಪುನಾಯಕ ಕುಟುಂಬಕ್ಕೆ ಜಮೀನಿನಲ್ಲಿ ಉಳುಮೆ ಮಾಡಲು ಪ್ರತಿ ವರ್ಷ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್

    ಟೋಪುನಾಯಕ ಕುಟುಂಬ ಎರಡು ವರ್ಷಗಳಿಂದ ಸರ್ವೆ ಮಾಡಿ ಕೊಡಿ ಎಂದು ಶಹಾಪುರ್ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಟೋಪು ನಾಯಕ ಅವರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ಇದೀಗ ತಮ್ಮ ಜಾಗದ ಹಕ್ಕುಪತ್ರವನ್ನು ಪಕ್ಕದ ಜಮೀನಿನ ಮರೆಪ್ಪ ಪಟೇಲರಿಗೆ ನೀಡಲಾಗಿದೆ ಎಂದು ಸಂತ್ರಸ್ತ ಟೋಪುನಾಯಕ ಅವರು ಆರೋಪಿಸಿ ಧರಣಿಗೆ ಮುಂದಾಗಿದ್ದಾರೆ.