Tag: land

  • 8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    ಜೈಪುರ: ಜಮೀನು ವಿಚಾರವಾಗಿ ಎರಡು ಕುಟುಂಬಗಳ (Family) ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್‌ (Tractor) ಹರಿಸಿ ಬರ್ಬರವಾಗಿ ಕೊಂದಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ (Rajasthan’s Bharatpur) ನಡೆದಿದೆ.

    ಸಹೋದರ ನಿರ್ಪತ್ ಮೇಲೆ ಆರೋಪಿ ದಾಮೋದರ್‌ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಟ್ರ್ಯಾಕ್ಟರ್‌ ಓಡಿಸುತ್ತಿದ್ದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ ಗ್ರಾಮದ ಇತರ ಜನರು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾಗೆ ಮನಸೋತ ಕ್ರಿಕೆಟ್ ದೈತ್ಯ ಮ್ಯಾಥ್ಯೂ ಹೇಡನ್ ಪುತ್ರಿ

    ಬಹದ್ದೂರ್ ಸಿಂಗ್ ಮತ್ತು ಅಥರ್ ಸಿಂಗ್ ಅವರ ಕುಟುಂಬಗಳು ಭರತ್‌ಪುರದ ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬ ಸದಸ್ಯರು ವಿವಾದಿತ ಜಾಗಕ್ಕೆ ಟ್ರ್ಯಾಕ್ಟರ್‌ನಲ್ಲಿ ಬಂದಿದ್ದಾರೆ. ಕೆಲಸ ಸಮಯದಲ್ಲಿ ಅಥರ್ ಸಿಂಗ್ ಅವರ ಕುಟುಂಬ ಸ್ಥಳಕ್ಕೆ ಬಂದಿದೆ.

    ಎರಡು ಕುಟುಂಬಗಳು ಮುಖಾಮುಖಿಯಾದ ನಂತರ ಪರಸ್ಪರ ಘರ್ಷಣೆಗಿಳಿದು ಮತ್ತೊಬ್ಬರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಥರ್ ಸಿಂಗ್ ಅವರ ಪುತ್ರ ನಿರ್ಪತ್ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಆರೋಪಿ ದಾಮೋದರ್‌ ನಿರ್ಪತ್‌ ಪ್ರಾಣ ಹೋಗುವವರೆಗೂ 8 ಬಾರಿ ಟ್ರ್ಯಾಕ್ಟರ್‌ ಓಡಿಸಿದ್ದಾನೆ.

    ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರೂ ದಾಮೋದರ್‌ ತಲೆ ಕೆಡಿಸಿಕೊಳ್ಳದೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹದ: ಜೋಡೆತ್ತುಗಳಿಗೆ ಮೆಚ್ಚುಗೆ

    ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹದ: ಜೋಡೆತ್ತುಗಳಿಗೆ ಮೆಚ್ಚುಗೆ

    ಬಾಗಲಕೋಟೆ: ಕೃಷಿಯಲ್ಲಿ (Agriculture) ಇಂದು ಎತ್ತುಗಳನ್ನು ಬಳಸುವುದು ಅಪರೂಪ. ಹೀಗಿರುವಾಗ ಜಿಲ್ಲೆಯ (Bagalkot)ರೈತರೊಬ್ಬರು ಜೋಡೆತ್ತುಗಳ ಮೂಲಕ ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನನ್ನು ಹರಗುವ (ಹದ) ಮೂಲಕ ಸಾಧನೆ ಮಾಡಿದ್ದಾರೆ.

    ಘಟನೆಗುಳೇದಗುಡ್ಡ ಸಮೀಪದ ಬೂದನಗಡದ ಗ್ರಾಮದ ಭೀಮಪ್ಪ ಮಲ್ಲಪ್ಪ ವಾಲೀಕಾರ ಅವರ ಎತ್ತುಗಳು ಗುರುವಾರ ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹರಗಿ ವಿಶೇಷ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

    ಗುರುವಾರ ಬೆಳಗ್ಗೆ 5 ಗಂಟೆಗೆ ಜಮೀನು ಹರಗಲು ಆರಂಭಿಸಿ 7:30 ಗಂಟೆಗೆ 9 ಎಕರೆ ಜಮೀನನ್ನು ಹರಗಿದವು. ಅಲ್ಲದೇ ಈ ಎತ್ತುಗಳು ಸಾಧನೆ ಮಾಡಿದ ಬಳಿಕ 36 ಕಿ.ಮೀ. ದೂರದ ಬಾದಾಮಿ ಬನಂಶಕರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿಯ ಬನದೇವಿಗೆ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ

    ಮಂಗಳಗುಡ್ಡದ ಮಂಗಳಾದೇವಿ ದರ್ಶನ ಪಡೆದು ಮಧ್ಯಾಹ್ನ ಮರಳಿ ಬೂದನಗಡ ತಲುಪಿದವು. ವಿಶೇಷ ಸಾಧನೆ ಮಾಡಿದ ಎತ್ತುಗಳಿಗೆ ಗ್ರಾಮಸ್ಥರು ಗುಲಾಲ್ (ಬಣ್ಣ) ಎರಚಿ ಸಂಭ್ರಮಿಸಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ

    PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ

    ಬೆಂಗಳೂರು: ದಲಿತರ ಜಮೀನು ಹಕ್ಕು (Land Rights of Dalits) ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಖಡಕ್ಕಾಗಿ ನುಡಿದರು.

    ಸಿಎಂ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಿಟಿಸಿಎಲ್ ಕಾಯ್ದೆ (PTCL Act) ತಿದ್ದುಪಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

    ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನ್ಯಾಯ ಸಿಗುವ ತನಕ ಪ್ರತಿಭಟನೆ- ಎನ್.ಕುಮಾರ್

    ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು. ಭೂಮಿ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಅನ್ನೋ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ. ನಾವು ಮೊದಲೇ ಕೊಟ್ಟಿದ್ದ ಭರವಸೆಯಂತೆ ಈ ಸರ್ಕಾರದ ಮೊದಲನೆ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಹೆಚ್.ಸಿ ಮಹದೇವಪ್ಪ, ಹೆಚ್.ಕೆ ಪಾಟೀಲ್, ಡಾ.ಜಿ ಪರಮೇಶ್ವರ್‌, ಕೆ.ಹೆಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್ ರಾಜಣ್ಣ, ಆರ್.ಬಿ ತಿಮ್ಮಾಪುರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

    35 ಮಂದಿ ನಾಯಕರು ಭಾಗಿ:
    ಸಭೆಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಶ್ರೀಧರ್ ಕಲಿವೀರ, ಬಸವರಾಜ ಕೌತಾಳ್, ಮಂಜು, ಇಂದೂದರ ಹೊನ್ನಾಪುರ, ಹರಿರಾಮ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಎನ್. ಮುನಿಸ್ವಾಮಿ, ಎನ್.ವೆಂಕಟೇಶ್, ಡಿ.ಜಿ ಸಾಗರ್ ಸೇರಿ 35ಕ್ಕೂ ಅಧಿಕ ಮಂದಿ ದಲಿತ ಮುಖಂಡರು ಮತ್ತು ವಕೀಲರು ಉಪಸ್ಥಿತರಿದ್ದು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ಭೋಪಾಲ್: 100 ವರ್ಷದ ವೃದ್ಧೆಯೊಬ್ಬರು ತನ್ನ ಸುಮಾರು 15 ಎಕರೆ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಹೆಸರಿಗೆ ಬರೆದುಕೊಡುವುದಾಗಿ ಘೋಷಣೆ ಮಾಡಿದ್ದಾರೆ.

    ಅಜ್ಜಿಯನ್ನು ಮಂಗಿ ಬಾಯ್ ತನ್ವಾರ್ (Mangi Bai Tanwar) ಎಂದು ಗುರುತಿಸಲಾಗಿದೆ. ಇವರು ರಾಜ್‍ಘರ್ ಜಿಲ್ಲೆಯಿಂದ 65 ಕಿ.ಮೀ ದೂರದಲ್ಲಿರುವ ಜಾಗಿರ್ ಗ್ರಾಮದ ಹರಿಪುರ ನಿವಾಸಿ. ಸದ್ಯ ಅಜ್ಜಿ ಘೋಷಣೆ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲೇನಿದೆ..?: ನೆರೆಹೊರೆಯವರ ಜೊತೆ ಕುಳಿತಿರುವ ಅಜ್ಜಿಯು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ದೇಶಕ್ಕೆ ನರೇಂದ್ರ ಮೋದಿಯಿಂದ ಒಳ್ಳೆಯದಾಗಿದ್ದು, ಅವರು ಒಳ್ಳೊಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಅವರು ವಯಸ್ಸಾದವರಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.

    ಮಂಗಿ ಬಾಯ್‍ಗೆ 14 ಮಂದಿ ಮಕ್ಕಳಿದ್ದಾರೆ. ಈ ಮಧ್ಯೆ ಮೋದಿ ಕೂಡ ನನ್ನ ಮಗನಂತೆಯೇ. ಹೀಗಾಗಿ ನನ್ನ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿಗೆ ಅಜ್ಜಿ ಶುಭವನ್ನು ಕೂಡ ಹಾರೈಸಿದ್ದಾರೆ.  ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ನಾನು ತೀರ್ಥಯಾತ್ರೆಗೆ ಹೊರಟಿದ್ದ ಸಂದರ್ಭದಲ್ಲಿ ಮೋದಿಯವರು ನಮಗೆ ಉಳಿದುಕೊಳ್ಳಲು ಮನೆ, ಆಹಾರ ಹಾಗೂ ಹಣವನ್ನು ನೀಡುವ ಮೂಲಕ ತಮ್ಮ ಮನೆಯವರಂತೆಯೇ ಅತ್ಯಂತ ಪ್ರೀತಿಯಿಂದ ಯಾವುದೇ ತೊಂದರೆಯಾಗಂದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ನನ್ನದೇ ಮಗ ಎಂದುಕೊಂಡು ನನ್ನ ಜಮೀನು ಬರೆದುಕೊಡುವುದಾಗಿ ತಿಳಿಸಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

    ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

    ಬೆಂಗಳೂರು: ಆರ್‌ಎಸ್‍ಎಸ್‍ (RSS) ಅಂಗಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಶುಕ್ರವಾರ ಈ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ರಾಜ್ಯದ ನೂರಾರು ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡಿ ಆರ್‌ಎಸ್‌ಎಸ್‌ಗೆ ನೀಡಲಾಗಿದೆ. ‌ಸರ್ಕಾರಿ ಜಮೀನುಗಳನ್ನು ಆರ್‌ಎಸ್‌ಎಸ್ ಸೇರಿದಂತೆ ಅದರ ಅಂಗ ಸಂಸ್ಥೆಗಳಿಗೆ ನೀಡಿದ್ದಾರೆ.‌ ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗಾಗಿ ಹೀಗೆ ಮಾಡಿದ್ದಾರೆ ಎಂದು‌ ಆರೋಪ ಮಾಡಿದರು.

    ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಭೂಮಿ ನೀಡಲಾಗಿದೆ. ಹೇಗೆ ಕಾನೂನಾತ್ಮಕವಾಗಿ ನಡೆದಿದೆ ಎಂಬುದನ್ನು ಕಂದಾಯ ಇಲಾಖೆ ಪರಿಶೀಲಿಸಿ ಕ್ರಮ‌ಕೈಗೊಳ್ಳಲಿದೆ ಎಂದರು.  ಇದನ್ನೂ ಓದಿ: ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    `ಸಂಘ’ಕ್ಕೆ ಮಂಜೂರಾದ ಭೂಮಿಯ ಲೆಕ್ಕ
    * ದೇವನಹಳ್ಳಿಯಲ್ಲಿ ಚಾಣಕ್ಯ ಖಾಸಗಿ ವಿವಿಗೆ 116.16 ಎಕರೆ ಭೂಮಿ
    * ಕೆಐಎಡಿಬಿಗೆ ಸೇರಿದ 250 ಕೋಟಿ ಮೌಲ್ಯದ ಭೂಮಿ ಕೇವಲ 50.17 ಕೋಟಿಗೆ ಮಾರಾಟ
    * ಹೆಸರಘಟ್ಟದ ಹುರುಳಿಚಿಕ್ಕನಹಳ್ಳಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 9 ಎಕರೆ ಗೋಮಾಳ ಭೂಮಿ
    * ತಾವರೆಕೆರೆಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳ ಭೂಮಿ
    * ಆರ್‍ಎಸ್‍ಎಸ್ ಅಂಗಸಂಸ್ಥೆ ಜನಸೇವಾ ಟ್ರಸ್ಟ್‍ಗೆ 35.33 ಎಕರೆ ಪರಭಾರೆ
    * ಹೊಸಪೇಟೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 5 ಎಕರೆ ಜಮೀನು ಮಂಜೂರು
    * ಬಳ್ಳಾರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ ರಿಯಾಯಿತಿ ದರದಲ್ಲಿ ಸಿಎ ನಿವೇಶನ

  • ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

    ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಮತ್ತೆ ಬುಲ್ಡೋಜರ್ (Bulldozer) ಸದ್ದು ಮಾಡಿದ್ದು, ಕೊಲೆ ಆರೋಪಿಗಳಿಗೆ ಸೇರಿದ್ದ ಬೆಳೆದ ಬೆಳೆಗಳನ್ನು ನೆಲಸಮ ಮಾಡಲಾಗಿದೆ.

    ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್ 2 ವಾರಗಳ ಹಿಂದೆ ನಡೆದ ಕೊಲೆಯಲ್ಲಿ ಮುಖ್ಯ ಆರೋಪಿಗಳಾಗಿದ್ದರು. ಈ ಆರೋಪಿಗಳು (Accused) ದಾಮೋಹ್ ಜಿಲ್ಲೆಯಲ್ಲಿ ಇಬ್ಬರು ವೃದ್ಧರಾದ ಬದ್ರಿ ಶುಕ್ಲಾ (68) ಹಾಗೂ ಆತನ ಸಹೋದರ ರಾಮ್‍ಸೇವಕ್ ಶುಕ್ಲಾ (65) ಅವರನ್ನು ಭೂವಿವಾದಕ್ಕೆ ಸಂಬಂಧಿಸಿ ಗುಂಡಿಕ್ಕಿ ಕೊಲೆ ಮಾಡಿದ್ದರು.

    2021ರಲ್ಲಿ ಬದ್ರಿ ಶುಕ್ಲಾ ಹಾಗೂ ರಾಮ್‍ಸೇವಕ್ 3 ಎಕರೆ ಜಮೀನನ್ನು (Land) ಖರೀದಿಸಿದ್ದರು. ಅಂದಿನಿಂದ ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್‍ನೊಂದಿಗೆ ವಿವಾದ ನಡೆಯುತ್ತಿತ್ತು. ಫೆ. 28ರಂದು ಶುಕ್ಲಾರನ್ನು ಸಿಂಗ್‌ನ ಗುಂಪು ಮನೆಗೆ ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ: ದಳಪತಿ ವಿರುದ್ಧ ಗುಡುಗಿದ ಶಿವಲಿಂಗೇಗೌಡ

    ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಬುಲ್ಡೋಜರ್ ಅನ್ನು ತಂದು ಸಿಂಗ್‌ಗೆ ಜಮೀನಿನಲ್ಲಿದ್ದ ಬೆಳೆಗಳನ್ನು ನೆಲಸಮ ಮಾಡಿದ್ದಾರೆ. ಜೊತೆಗೆ ಸಿಂಗ್ ಕುಟುಂಬಸ್ಥರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅತ್ಯಾಚಾರಗೈದು ಬಾಲಕಿಯ ಕೊಲೆ- ಕಾಮುಕನಿಗೆ ಗಲ್ಲುಶಿಕ್ಷೆ

  • 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶರತ್

    6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶರತ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಬೆಳಗಾವಿ: ಜಮೀನು ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ (Bribe)  ಬೇಡಿಕೆ ಇಟ್ಟಿದ್ದ ಕಿತ್ತೂರು ತಹಶೀಲ್ದಾರ್ (Tahsildar) ಮತ್ತು ಕೇಸ್ ವರ್ಕರ್ 2 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ (Lokayukta) ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು (Kittur) ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಕೇಸ್ ವರ್ಕರ್ ಪ್ರಸನ್ನ ಜಿ ಲೋಕಾಯುಕ್ತ ಬಲೆಗೆ ಬಿದ್ದವರು. ಕಿತ್ತೂರು ತಾಲೂಕಿನ ಖೊದಾನಪೂರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವವರು ತಮ್ಮ 10 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿತ್ತೂರು ತಹಶೀಲ್ದಾರ್ 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್

    ಈ ಬಗ್ಗೆ ಬಾಪುಸಾಹೇಬ್ ಪುತ್ರ ರಾಜೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಕಿತ್ತೂರು ತಹಶೀಲ್ದಾರ್ ಮನೆಯಲ್ಲಿಯೇ ಜಮೀನಿನ ಖಾತೆ ಬದಲಾವಣೆ ಮಾಡಲು 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ  ದಾಳಿ ಮಾಡಿದ್ದಾರೆ. ಎರಡು ಲಕ್ಷ ಹಣ ಮತ್ತು ಶ್ಯೂರಿಟಿಗಾಗಿ 20 ಲಕ್ಷ ಮೌಲ್ಯದ ಖಾಲಿ ಚೆಕ್ ಅನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಬೆಳಗಾವಿ ಎಸ್‍ಪಿ ಯಶೋಧಾ ವಂಟಗೂಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಅಪೂರ್ಣ ಹುಲಗೂರ ತಂಡದ ಸಿಬ್ಬಂದಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಈಗಲೂ ಮೋದಿ ನಂ.1 ಜನಪ್ರಿಯ ನಾಯಕ

    Live Tv
    [brid partner=56869869 player=32851 video=960834 autoplay=true]

  • 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ

    1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ

    ಧಾರವಾಡ: ಈ ಹಿಂದೆ 1921ರಲ್ಲಿ ಒಂದು ರೂಪಾಯಿಗೆ ದೇವಸ್ಥಾನದ (Temple) ಜಾಗವನ್ನು ಭೂ ಬಾಡಿಗೆ ಮೇಲೆ 99 ವರ್ಷಗಳ ವರೆಗೆ ಲೀಸ್ (Lease) ಮೇಲೆ ಕೊಡಲಾಗಿತ್ತು. ಈಗ ಲೀಸ್ ಮುಕ್ತಾಯ ಆಗಿದ್ದು, ಜಾಗವನ್ನು ಬಿಟ್ಟು ಕೊಡುವಂತೆ ದೇವಸ್ಥಾನದ ಆಡಳಿತ ಮಂಡಳಿ ನೋಟಿಸ್ ನೀಡಿದೆ.

    ನಗರದ ಮಧ್ಯಭಾಗದಲ್ಲಿ ಇರುವ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಒಟ್ಟು ಜಾಗ 16 ಏಕರೆ ಇದೆ. ಅದರಲ್ಲಿ 3 ಏಕರೆ 35 ಗುಂಟೆ ಜಾಗದಲ್ಲಿ ದೇವಸ್ಥಾನ ಇದ್ದರೆ, ಉಳಿದ ಆಸ್ತಿ ಲೀಸ್ ಕೊಡಲಾಗಿದೆ. ಈ ಆಸ್ತಿಯಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದರೆ, ಕೆಲವರು ವ್ಯಾಪಾರಕ್ಕಾಗಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರಿಗೆ 1921ರಲ್ಲಿ ಒಂದು ರೂಪಾಯಿ ಭೂ ಬಾಡಿಗೆ ಮೇಲೆ 99 ವರ್ಷಗಳ ವರೆಗೆ ಲೀಸ್ ಮೇಲೆ ಕೊಡಲಾಗಿತ್ತು. ಈಗ ಲೀಸ್ ಮುಕ್ತಾಯ ಆಗಿದೆ. ಹೀಗಾಗಿ ದೇವಸ್ಥಾನ ಆಸ್ತಿ ಕೊಡಬೇಕು ಎಂದು ನೋಟಿಸ್ ಕೊಡಲಾಗುತ್ತಿದೆ. ಇದನ್ನೂ ಓದಿ: ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ

    ಸದ್ಯ ಲೀಸ್ ಪಡೆದವರು ಮನೆ ಹಾಗೂ ಕಟ್ಟಡ ಕಟ್ಟಿದ್ದರೆ. ದೇವಸ್ಥಾನದವರು ಹಿರಿಯರ ಸಮ್ಮುಖದಲ್ಲಿ ಅದರ ಬೆಲೆ ನಿಗದಿ ಮಾಡಿ ಅವರಿಗೆ ಆ ಹಣ ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವರು ದೇವಸ್ಥಾನದ ಆಸ್ತಿ ನಮಗೆ ಬಿಟ್ಟು ಕೊಡಬೇಕು ಎಂದು ಹೇಳಿದ್ದಾರೆ. ಆದರೆ ದೇವಸ್ಥಾನ ಆಡಳಿತ ಮಂಡಳಿ ಇದಕ್ಕೆ ಅವಕಾಶ ಕೊಡುತ್ತಿಲ್ಲ. ಈ ಲೀಸ್ ಆಸ್ತಿ ವಾಪಸ್ ಪಡೆಯುವ ದೇವಸ್ಥಾನ, ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ KAS ಹಾಗೂ IAS ತರಬೇತಿ ಕೊಡಬೇಕು ಎಂದಿದೆ. ಅದಕ್ಕಾಗಿ ಈ ಆಸ್ತಿ ವಾಪಸ್ ಪಡೆಯಲು ಮುಂದಾಗಿದೆ. ಅಲ್ಲದೇ ಕೆಲವು ಕಡೆ ರೂಂ ಕಟ್ಟಿ ಬಾಡಿಗೆ ಕೊಡುವ ಯೋಚನೆ ಇದೆ. ಇದರಿಂದ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ಸದ್ಯ ಇನ್ನು 10 ನೋಟಿಸ್ ಕೊಡಬೇಕಿದೆ. ಅವರಿಗೆ ಕೊಟ್ಟ ಮೇಲೆ ಮುಂದಿನ ಯೋಜನೆ ಆಗಲಿದೆ ಎಂದು ತಿಳಿಸಿದೆ. ದೇವಸ್ಥಾನ ಆಡಳಿತ ಮಂಡಳಿ ಯೋಚಿಸಿದಂತೆ ಎಲ್ಲವೂ ಆದರೆ, ದೇವಸ್ಥಾನ ಆಸ್ತಿ ವಾಪಸ್ ಬರಲಿದೆ. ಇದರಿಂದ ಭೂ ಬಾಡಿಗೆ ಕೂಡಾ ಹೆಚ್ಚಾಗಲಿದ್ದು, ಅದನ್ನೇ ಬಡ ಮಕ್ಕಳ ವಿದ್ಯೆಗಾಗಿ ಈ ದೇವಸ್ಥಾನ ಬಳಸಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಮೆ ಹಣಕ್ಕಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ

    Live Tv
    [brid partner=56869869 player=32851 video=960834 autoplay=true]

  • ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಚಿಕ್ಕಮಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಾತುಕತೆಗೆ ತೆರಳಿದ್ದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಗುಂಡು ತಾಗಿದ ವ್ಯಕ್ತಿಯನ್ನು ನಾರಾಯಣ್ ರಾಜ್ ಎಂದು ಗುರುತಿಸಲಾಗಿದೆ. ಮಾಕೋನಹಳ್ಳಿ ಗ್ರಾಮದ ರೈತ (Farmer) ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನು ಮನೋಜ್ ಎಂಬವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು (Land) ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು. ಈ ವೇಳೆ ಮನೋಜ್ ಖರೀದಿಸಿದ ಜಾಗವನ್ನು ದುಗ್ಗಪ್ಪಗೌಡ ಅವರು ಒತ್ತುವರಿ ಮಾಡಿ ಮನೆ ಕಟ್ಟಿದ್ದರು ಎಂದು ಹೇಳಲಾಗಿದೆ.

    crime

    ಹಾಗಾಗಿ, ಜಮೀನು ಖರೀದಿಸಿದ ಮನೋಜ್ ಹಾಗೂ ಅದೇ ಜಮೀನು ಪಕ್ಕದಲ್ಲಿದ್ದ ದುಗ್ಗಪ್ಪಗೌಡರಿಗೆ ಜಮೀನು ವಿವಾದ ಕೂಡ ಇತ್ತು. ಈ ಬಗ್ಗೆ ಮಾತನಾಡಲು ದುಗ್ಗಪ್ಪಗೌಡ ಅವರ ಮನೆ ಬಳಿ ಹೋದಾಗ ಮಹಡಿ ಮೇಲೆ ನಿಂತಿದ್ದ ದುಗ್ಗಪ್ಪಗೌಡ ಕೋವಿಯಿಂದ ಮಾತುಕತೆಗೆ ಬಂದವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನಾರಾಯಣ್‍ರಾಜ್ ಎಂಬುವರ ಕಾಲಿಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕುಂಭ ಕಳಶ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ

    ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಮೂಡಿಗೆರೆ ಪೊಲೀಸರು ರೈತ ಸಂಘದ ಅಧ್ಯಕ್ಷ ದುಗ್ಗಪ್ಪಗೌಡರನ್ನು ಬಂಧಿಸಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ನಿದ್ದೆಯಿಂದ ಎದ್ದೇಳಿ- ಬೊಮ್ಮಾಯಿಯವರನ್ನು ಕುಂಭಕರ್ಣನಿಗೆ ಹೋಲಿಸಿ, 150ನೇ ದಿನದ ಏಮ್ಸ್ ಹೋರಾಟ

    Live Tv
    [brid partner=56869869 player=32851 video=960834 autoplay=true]