Tag: Land Scam Case

  • ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಬೆಂಗಳೂರು: ಸಿದ್ದರಾಮಯ್ಯಗೆ (Siddaramaiah) ಈಗ ಮೂರು ಸಂಕಟ, ಮೂರು ಹೋರಾಟ ಇವೆ. ಭಾವನಾತ್ಮಕ ಸಂಕಟ.. ರಾಜಕೀಯ ಸಂಕಟ.. ಕಾನೂನು ಸಂಕಟಗಳು ಇವೆ.

    ಮೂರು ಸಂಕಟಗಳನ್ನ ಹೋರಾಟದ ಮೂಲಕವೇ ಸಮಚಿತ್ತದಿಂದ ಎದುರಿಸಬೇಕಾಗಿದೆ. ಎಫ್‌ಐಆರ್ (FIR) ದಾಖಲಾದರೇ ಸಾರ್ವಜನಿಕವಾಗಿ ಕಾಣಿಸಿ ಕೊಳ್ಳದ ಪತ್ನಿ ವಿಚಾರಣೆ ಎದುರಿಸಬೇಕು. ಇದು ಸಹಜವಾಗಿಯೇ ಸಿಎಂ ಸಿದ್ದರಾಮಯ್ಯಗೆ ಇದು ಅರಗಿಸಿಕೊಳ್ಳಲಾಗದ ವಿಷಯ. ಅನಿರೀಕ್ಷಿತವಾಗಿ ಕುಟುಂಬದಿಂದಲೇ ಬಂದ ಆರೋಪವನ್ನ ಭಾವನಾತ್ಮಕ ಹೋರಾಟದ ಮೂಲಕ ಎದುರಿಸಬೇಕಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಇನ್ನು ರಾಜಕೀಯ ಸಂಘರ್ಷ (Political conflict) ಮಾಡದ ಹೊರತು ಅಧಿಕಾರ ಉಳಿಸಿಕೊಳ್ಳಲು ಆಗದು. ರಾಜ್ಯಪಾಲರ ರಾಜಕೀಯ ಪಿತೂರಿ ಆರೋಪದಿಂದ ಹಿಡಿದು ಅಧಿಕಾರ ಉಳಿಸಿಕೊಳ್ಳುವ ತನಕ ರಾಜಕೀಯ ಹೋರಾಟ ಮಾಡುವುದು ಅನಿವಾರ್ಯ. ಆರೋಪ ಮುಕ್ತರಾಗಲು ಕೋರ್ಟ್ ನಲ್ಲೇ (Karnataka Highcourt) ಹೋರಾಟ ನಡೆಸಬೇಕಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಇಷ್ಟು ವರ್ಷದ ರಾಜಕಾರಣದಲ್ಲಿ ಕಾಪಾಡಿಕೊಂಡು ಬಂದಿದ್ದದ್ದನ್ನ ಮರಳಿಪಡೆಯಲು ಕಾನೂನು ಹೋರಾಟ ಅಗತ್ಯ. ಕಾನೂನು ಹೋರಾಟದ ಮೂಲಕ ಜಯಿಸಿ ಬಂದು ವಿರೋಧಿಗಳಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಮೂರು ಸಂಕಟಗಳನ್ನ ಅನುಭವಿಸಿಯೇ ಮೇಲೆದ್ದು ಬರ್ತಾರಾ? ವಿರೋಧಿಗಳ ಬಾಯಿ ಮುಚ್ಚಿಸುತ್ತಾರಾ? ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

  • ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸದ್ಯಕ್ಕೆ ರಾಜಕೀಯವಾಗಿ ಸೇಫ್. ಆದ್ರೆ ಮುಂದೆನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ (Congress High Command) ಸಿಎಂ ಸಿದ್ದರಾಮಯ್ಯ ಪರ ನಿಂತಿರುವ ಬಗ್ಗೆ ಹಲವು ರಾಜಕೀಯ ಲೆಕ್ಕಚಾರಗಳು ಇವೆ ಎನ್ನಲಾಗಿದೆ.

    ಕುರುಬ, ಹಿಂದುಳಿದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ (Congress) ಕಡೇ ತನಕ ಸಿದ್ದರಾಮಯ್ಯ ಪರ ನಿಲ್ಲಲು ಸಂದೇಶ ರವಾನಿಸಿದೆ. ಕೋರ್ಟ್ ಮುಂದೆ ಕಾನೂನು ಹೋರಾಟ ಕ್ಲಿಯರ್ ಆದ ಬಳಿಕವೇ ಬೇರೆ ತೀರ್ಮಾನ ಮಾಡೋಣ ಎಂಬುದು ಎಐಸಿಸಿ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    ರಾಜಕೀಯ ಹೋರಾಟದಲ್ಲಿ ಹಿಂದೆ ಸರಿಯಬಾರದು, ಸಿದ್ದರಾಮಯ್ಯ ಕೈ ಬಿಡಬಾರದು, ಹಿಂದುಳಿದ ವರ್ಗದ ನಾಯಕ, ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಡೇ ಹಂತದ ತನಕ ಕಾನೂನು ಹೋರಾಟ ನಡೆಯಲಿ… ಅಲ್ಲಿ ತನಕ ಸಿದ್ದರಾಮಯ್ಯ ಜೊತೆ ಇರಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಅಮಿತ್‌ ಶಾ

    ರಾಜಕೀಯ ಕಾರಣಗಳಿಗಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿರುವುದು ಸ್ಪಷ್ಟ. ಪಕ್ಷ, ಸರ್ಕಾರ ಎರಡನ್ನೂ ಇಕ್ಕಟಿಗೆ ಸಿಲುಕಿಸುವ ವಿರೋಧಿಗಳ ಯತ್ನಕ್ಕೆ ಜಯ ಸಿಗಬಾರದೆಂಬ ತಂತ್ರಗಾರಿಕೆ ಕಾಂಗ್ರೆಸ್ ಹೈಕಮಾಂಡ್‌ನದ್ದು. ಹಾಗಾಗಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್. ರಾಜಕೀಯ ಬಲ ಕೊಟ್ಟಿರುವ ಹೈಕಮಾಂಡ್, ಮುಂದೆಯೂ ಹೀಗೆ ಇರುತ್ತಾ? ಎಂಬುದನ್ನ ಕಾದುನೋಡಬೇಕಿದೆ.  ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ 

  • ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ – ಸಿದ್ದರಾಮಯ್ಯ ಎದುರಿಸಲಿರೋ ಸಂಕಷ್ಟಗಳೇನು?

    ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ – ಸಿದ್ದರಾಮಯ್ಯ ಎದುರಿಸಲಿರೋ ಸಂಕಷ್ಟಗಳೇನು?

    ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜಕೀಯ ಹಾಗೂ ಕಾನೂನು ಎರಡೂ ಹೋರಾಟಗಳನ್ನು ಒಟ್ಟೊಟ್ಟಿಗೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

    ಕಾನೂನು ಹೋರಾಟಕ್ಕೆ ವಕೀಲರ ನೆರವು ಸಿಗಲಿದೆ. ಆದರೆ ರಾಜಕೀಯ ಹೋರಾಟಕ್ಕೆ ಪಕ್ಷದ ನೆರವು ಅನಿವಾರ್ಯವಾಗಿದೆ. ಸಂಪುಟ ಸಹುದ್ಯೋಗಿಗಳು ಸೇರಿದಂತೆ ಶಾಸಕರು ಹಾಗೂ ಹೈಕಮಾಂಡ್ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳೆಬೇಕಾದ ಧರ್ಮ ಸಂಕಟದಲ್ಲಿ ಸಿಎಂ ಸಿಲುಕಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ

    ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆಯಲ್ಲಿ ಅವರು ಸಿಲುಕಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊತ್ಯುವವರೆಗೂ ಒತ್ತಡಕ್ಕೆ ಸಿಲುಕಲಿದ್ದಾರೆ.

    ಸಿಎಂಗೆ ಎದುರಾಗಲಿರುವ ಸಂಕಷ್ಟಗಳು!
    ಕೋರ್ಟ್ ಮುಂದೆ ನಿಲ್ಲಬೇಕಾದ ಅನಿವಾರ್ಯತೆ, ಪತ್ನಿ ಸಹ ಕೋರ್ಟ್‌ ಹೋಗಬೇಕಾದ ಮುಜುಗರ, ಆಡಳಿತದ ಜೊತೆ ಕೋರ್ಟ್ ಕೇಸ್ ನಿರ್ವಹಿಸಬೇಕಾದ ಒತ್ತಡ, ಮುಡಾ ನಿವೇಶನ ವಾಪಸ್ ಕೊಡಬೇಕಾಗಬಹುದು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು

    ಕೇಸ್ ತಿರುವು ಪಡೆದರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾದ ಆತಂಕ. ಹೈಕಮಾಂಡ್ ಬೆಂಬಲ, ಆಪ್ತ ವಲಯವೂ ದೂರ ಸರಿಯುವ ಸಾಧ್ಯತೆ, ಪಕ್ಷದ ಮೇಲಿನ ಹಿಡಿತ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದ ಸವಾಲು, ಪ್ರತಿಪಕ್ಷಗಳಿಂದ ನಿರಂತರವಾಗಿ ಟೀಕೆ ಎದುರುಸಬೇಕಾದ ಅನಿವಾರ್ಯತೆ, ಅಧಿಕಾರಿಗಳ ಮೇಲಿನ ಹಿಡಿತ ಸಡಿಲವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಈ ಸಿಎಂಗಿದೆ ಎನ್ನಲಾಗಿದೆ.

  • ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

    ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ – ಸಿಎಂ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಮುಡಾ ಸೈಟ್ (MUDA Scam Case) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ.

    ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಕಾನೂನು ಮೊರೆ ಹೋಗಲಿದ್ದಾರೆ. ಈ ಕಾನೂನು ಸಮರ ಸಿದ್ದರಾಮಯ್ಯನವರೇ ಮಾಡಬೇಕಿದೆ. ಇದನ್ನೂ ಓದಿ: ಸಿಎಂಗೆ ಮುಡಾ ಸಂಕಷ್ಟ – ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ

    ವೈಯಕ್ತಿಕವಾಗಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಕಾನೂನು ಸಮರ ಮುಂದುವರೆಸಬೇಕು. ಪ್ರಾಸಿಕ್ಯೂಷನ್ ಅಸಾಂವಿಧಾನಿಕ, ಕಾನೂನುಬಾಹಿರ ಅಂತಾ ಕೋರ್ಟ್‌ಗೆ ಸಿಎಂ ಮನವರಿಕೆ ಮಾಡಬೇಕಾಗುತ್ತದೆ.

    ರಾಜ್ಯಪಾಲರ ವಿವೇಚನಾ ಅಧಿಕಾರ ಪ್ರಶ್ನಿಸುವ ಹಕ್ಕು ಸರ್ಕಾರಕ್ಕೆ ಇಲ್ಲ. ರಾಜ್ಯಪಾಲರು ಅನುಮತಿ ಕೊಟ್ಟ ಪ್ರಾಸಿಕ್ಯೂಷನ್ ಬಗ್ಗೆ ಪ್ರಶ್ನೆ ಮಾಡಬೇಕಾಗುತ್ತದೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ: ಪರಮೇಶ್ವರ್

    ಸಿಎಂ ಮುಂದಿರುವ ಆಯ್ಕೆ ಏನು?
    * ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಬಹುದು.
    * ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಸಿಎಂಗೆ ಅವಕಾಶ ಇದೆ.
    * 2022ರಲ್ಲಿ ಮುಡಾ ಸೈಟ್ ಸಿಎಂಗೆ ಹಂಚಿಕೆ ಆಗಿರೋದು. ಹೀಗಾಗಿ ರಾಜ್ಯಪಾಲರಿಗೆ ಅಧಿಕಾರ ಇಲ್ಲ ಅಂತಾ ವಾದಿಸಬಹುದು.
    * ಸ್ಪೀಕರ್‌ಗೆ ಅವಕಾಶ ಇದೆ ಅಂತಾ ಕೋರ್ಟ್‌ನಲ್ಲಿ ಪ್ರಸ್ತಾಪಿಸಬಹುದು.

  • ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ಗೆ ಜಾಮೀನು ಮಂಜೂರು

    ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ಗೆ ಜಾಮೀನು ಮಂಜೂರು

    ರಾಂಚಿ: ಜಾರ್ಖಂಡ್ (Jharkhand) ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕನನ್ನು ಜಾರಿ ನಿರ್ದೇಶನಾಲಯ (ಇಡಿ) ಜ.31 ರಂದು ಬಂಧಿಸಿತ್ತು. ನಕಲಿ ದಾಖಲೆ ಸೃಷ್ಟಿಸಿ ರಾಂಚಿಯಲ್ಲಿ ಕೋಟ್ಯಂತರ ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ (Land Scam Case) ಯೋಜನೆ ಹೊಂದಲಾಗಿತ್ತು ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳು- ನಾನು ಯಾವುದಕ್ಕೂ ಹೆದರಲ್ಲ ಎಂದ ಓವೈಸಿ

    ಕಳೆದ ತಿಂಗಳು ಎರಡು ಬಾರಿ ಹಿನ್ನಡೆಯ ನಂತರ ಇಂದು ಜಾಮೀನು ಆದೇಶ ಬಂದಿದೆ. ಮೊದಲಿಗೆ, ರಾಂಚಿ ವಿಶೇಷ ನ್ಯಾಯಾಲಯವು ಸೊರೇನ್ ಜಾಮೀನನ್ನು ನಿರಾಕರಿಸಿತ್ತು.

    ಪ್ರಕರಣ ಸಂಬಂಧ ಇಡಿ ವಿಚಾರಣೆ ಎದುರಿಸಿದ್ದ ಹೇಮಂತ್ ಸೊರೇನ್ ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರನ್ನು ಬಂಧಿಸಲಾಯಿತು. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ