Tag: land purchase

  • ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಜಮೀನು ಖರೀದಿಗೆ ತೆರಳಿದ್ದ ಮೂವರು ಸ್ಥಳದಲ್ಲೇ ಸಾವು

    ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಜಮೀನು ಖರೀದಿಗೆ ತೆರಳಿದ್ದ ಮೂವರು ಸ್ಥಳದಲ್ಲೇ ಸಾವು

    ಧಾರವಾಡ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಧಾರವಾಡ (Dharwad) ಜಿಲ್ಲೆಯ ಅಣ್ಣಿಗೇರಿ (Annigeri) ಬಳಿಯ ರಾಷ್ಟ್ರೀಯ ಹೆದ್ದಾರಿಯ ಭದ್ರಾಪುರ ಗ್ರಾಮದ ಬಳಿ ನಡೆದಿದೆ.

    ಅಪಘಾತದಲ್ಲಿ ಸಾವನ್ನಪ್ಪಿದ ಮೂವರನ್ನು ಮದನ್, ಸುರೇಶ್, ಹಾಗೂ ಎಲ್.ಎನ್ ವೇಣುಗೋಪಾಲ್ ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಮೈಸೂರು ಹಾಗೂ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ

    ಮೂವರು ಗದಗ ಜಿಲ್ಲೆಯ ಮುಂಡರಗಿಯಿಂದ ಬೆಂಗಳೂರು ಕಡೆಗೆ ಹೊರಟಾಗ ಈ ಘಟನೆ ಸಂಭವಿಸಿದೆ. ಗದಗ ಮುಂಡರಗಿಯಲ್ಲಿ ತೋಟ ಖರೀದಿ ಮಾಡಲು ಮೂವರು ಕಾರಿನಲ್ಲಿ ತೆರಳಿದ್ದರು. ತೋಟ ನೋಡಿಕೊಂಡು ಮರಳಿ ಬೆಂಗಳೂರಿಗೆ ಹೋಗುವಾಗ ಈ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ʻಮರಣ ಮಳೆʼಗೆ ಅಜ್ಜಿ, ಮೊಮ್ಮಕ್ಕಳು ಬಲಿ – 9 ಗಂಟೆಗಳ ಜೀವನ್ಮರಣ ಹೋರಾಟದ ನಂತ್ರ ಬದುಕುಳಿದ ತಾಯಿ!

    ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿ ಕೆಳಗೆ ಸಿಲುಕಿದ್ದ ಮೂವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ರಾಮನಗರ: ಜಮೀನಿನ ಮಾಲೀಕರು ಬದುಕಿದ್ದರೂ ಸಾವನ್ನಪ್ಪಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿರುವ ಘಟನೆ ರಾಮನಗರ ತಾಲೂಕಿನ ಭೈರಮಂಗಲದಲ್ಲಿ ನಡೆದಿದೆ.

    ಭೈರಮಂಗಲ ಗ್ರಾಮದ ಸಹೋದರರಾದ ಬಿಳಿಗಿರಿಯಪ್ಪ ಹಾಗೂ ಸ್ವಾಮಿ ವಂಚನೆಗೆ ಒಳಗಾದ ಮಾಲೀಕರು. ಅದೇ ಗ್ರಾಮದ ರಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿ. 2001ರಲ್ಲಿ ಜಮೀನು ಮಾರಾಟವಾಗಿದ್ದರೂ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ.

    ಬಿಳಿಗಿರಿಯಪ್ಪ ಹಾಗೂ ಸ್ವಾಮಿ ಅವರಿಗೆ ಸೇರಿದ್ದ 22 ಗುಂಟೆ ಜಮೀನನ್ನು ರಂಗಪ್ಪ ಮಾರಾಟ ಮಾಡಲು ಯತ್ನಿಸಿದ್ದ. ಈ ನಿಟ್ಟಿನಲ್ಲಿ ಆರೋಪಿ ರಂಗಪ್ಪ ಜಮೀನಿನ ಮಾಲೀಕರು ಮೃತಪಟ್ಟಿದ್ದಾರೆ ಎಂದು 2001ರಲ್ಲಿ ನಾಡ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ. ಬಳಿಕ ಜಮೀನನ್ನು ಮಾರಾಟ ಮಾಡಿದ್ದಾನೆ.

    ಸಹೋದರರು ಇತ್ತೀಚೆಗೆ ಜಮೀನಿನ ಬಗ್ಗೆ ದಾಖಲೆಗಳನ್ನು ಪಡೆಯಲು ತೆರಳಿದ್ದಾಗ ಜಮೀನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡಿದ್ದು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಣದಾಸೆಗೆ ಬದುಕಿರುವವರನ್ನೇ ಸತ್ತಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಜಮೀನು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.