Tag: land dispute

  • Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    ಕೋಲಾರ: ಜಮೀನು ವಿವಾದದ (Land Dispute) ಹಿನ್ನೆಲೆಯಲ್ಲಿ ತಲ್ವಾರ್‌ನಿಂದ ತಲೆಗೆ ಹೊಡೆದು ತಮ್ಮನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಚಲಪತಿ ಅಲಿಯಾಸ್ ವೆಂಕಟಾಚಲಪತಿ (50) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲೇ ವಾಸ ಮಾಡುವ ತಮ್ಮ ಮುನಿರಾಜು (40) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ತಲ್ವಾರ್‌ನಿಂದ ಕೊಚ್ಚಿ ತಮ್ಮ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ರಾಮಾಪುರದಲ್ಲಿ (Ramapura) ಇಂದು ಮುಂಜಾನೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಅಣ್ಣ ಚಲಪತಿ ಜಮೀನಿನಲ್ಲಿ ಸರಿಯಾಗಿ ಭಾಗ ಕೊಡದ ಹಿನ್ನೆಲೆ ಹಲವು ಬಾರಿ ನ್ಯಾಯ ಪಂಚಾಯ್ತಿಗಳನ್ನು ಮಾಡಲಾಗಿದೆ. ಜೊತೆಗೆ ಜಮೀನು ವಿವಾದ ನ್ಯಾಯಾಲಯದಲ್ಲೂ ಇದ್ದು, ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ 35 ಲಕ್ಷ ಹಣ ಕೊಟ್ಟು ತೀರ್ಮಾನ ಸಹ ಮಾಡಿಕೊಂಡಿದ್ದಾನೆ. ಆದರೆ ಇಂದು ಮುಂಜಾನೆ ಕುರಿ ಶೆಡ್‌ಗೆ ತೆರಳಿದ ಅಣ್ಣನನ್ನ ಹಿಂಬಾಲಿಸಿದ ತಮ್ಮ ಮುನಿರಾಜು ಶೆಡ್‌ನಲ್ಲಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ; Golden Book of World Records ನಲ್ಲಿ ದಾಖಲು

    ಇನ್ನೂ ಮನೆಯಿಂದ ಶೆಡ್‌ಗೆ ಚಲಪತಿ ತೆರಳುವ ಹಾಗೂ ನಂತರ ತಮ್ಮ ಮುನಿರಾಜು ಶೆಡ್‌ಗೆ ತೆರಳಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ ಮುನಿರಾಜು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗೂ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಮೇಘಸ್ಫೋಟ – 5 ದಿನಗಳಲ್ಲಿ 3ನೇ ದುರಂತ

    ಇನ್ನೂ ಚಲಪತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಪತಿಯನ್ನ ತಲ್ವಾರ್‌ನಿಂದ ಕೊಚ್ಚಿ ಚುಚ್ಚಿಕೊಲೆ ಮಾಡಿದ್ದಾರೆ. ಇದರಲ್ಲಿ ಮುನಿರಾಜು ಮಾತ್ರವಲ್ಲದೇ ಸಾಕಷ್ಟು ಜನರ ಕುತಂತ್ರ ಸಹ ಇದೆ. ಅಲ್ಲದೆ ಕೊಲೆ ಮಾಡಿದ ಬಳಿಕ ಮತ್ತಷ್ಟು ತಲೆಗಳನ್ನ ಬಲಿ ಪಡೆಯುವುದಾಗಿಯೂ ಅವರೇ ಹೇಳಿದ್ದಾರೆ ಎಂದು ಪತ್ನಿ ನಾರಾಯಣಮ್ಮ ಹಾಗೂ ತಂಗಿ ಸುನಂದಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ – ಪ್ರವಾಹ ಭೀತಿ

  • Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಕೋಲಾರ: ಜಮೀನು ವಿವಾದ (Land Dispute) ಹಿನ್ನೆಲೆ ಅಣ್ಣ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಎನ್‌ಜಿ ಹುಲ್ಕರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಆಸ್ತಿಯಲ್ಲಿ ನಾಲ್ಕು ಗುಂಟೆ ಪಾಲು ಬೇಕೆಂದು ಮೂವರು ಅಣ್ಣ ತಮ್ಮಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಸದರಿ ಜಮೀನಿನಲ್ಲಿ ತಮ್ಮ ರಮೇಶ್ ಶೆಡ್ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

    ಈ ಬಗ್ಗೆ ವಿಚಾರ ತಿಳಿದ ಸೀನಪ್ಪ (ಶ್ರೀನಿವಾಸ್) ಮತ್ತು ಸಂಪಂಗಿ ಇಬ್ಬರೂ ರಮೇಶ್ ಬಳಿ ತಕರಾರು ತೆಗೆದಿದ್ದಾರೆ. ಸೀನಪ್ಪ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಕೋಪಾವೇಶದಲ್ಲಿ ಸೀನಪ್ಪ ಪಕ್ಕದಲ್ಲಿದ್ದ ದೊಣ್ಣೆಯನ್ನು ತೆಗೆದು ರಮೇಶ್‌ಗೆ ಬಲವಾಗಿ ಹೊಡೆದ ಪರಿಣಾಮ ರಮೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆ ನಡೆಯುವಾಗ ಅಕ್ಕಪಕ್ಕದ ಜನರೂ ಗುಂಪುಗೂಡಿದ್ದು, ತಮ್ಮ ಮೃತನಾದ ಎಂದು ತಿಳಿಯುತ್ತಿದ್ದಂತೆ ಭಯದಿಂದ ಸೀನಪ್ಪ ಮತ್ತು ಸಂಪಂಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಸೀನಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಪಂಗಿ ಪರಾರಿಯಾಗಿದ್ದು, ಬೇತಮಂಗಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

  • ಜಮೀನು ವಿವಾದದಲ್ಲಿ 2 ಕುಟುಂಬಗಳ ನಡುವೆ ಗಲಾಟೆ, ಕೊಲೆ ಬೆದರಿಕೆ – 8 ಮಂದಿ ವಿರುದ್ಧ ಎಫ್‌ಐಆರ್‌

    ಜಮೀನು ವಿವಾದದಲ್ಲಿ 2 ಕುಟುಂಬಗಳ ನಡುವೆ ಗಲಾಟೆ, ಕೊಲೆ ಬೆದರಿಕೆ – 8 ಮಂದಿ ವಿರುದ್ಧ ಎಫ್‌ಐಆರ್‌

    ಮೈಸೂರು: ಜಮೀನು ವಿವಾದದಲ್ಲಿ (Land Dispute) ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದ ವೇಳೆ ಕೊಲೆ ಬೆದರಿಕೆ ಹಾಕಿದ 8 ಮಂದಿ ವಿರುದ್ದ ಎಫ್‌ಐಆರ್ ದಾಖಲಾದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರತ್ನಮ್ಮ ಎಂಬುವವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದೇ ಗ್ರಾಮದ ಸ್ವಾಮಿ, ವಸಂತ, ಅರ್ಜುನ, ಶಾಂತಮ್ಮ, ರವಿ, ಸಿದ್ದರಾಜು, ನಾಗರಾಜು ಹಾಗೂ ಸಿದ್ದಯ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

    ಕೊಳಘಟ್ಟ ಗ್ರಾಮದ ಸರ್ವೆ ನಂ.73 ರ 4 ಎಕ್ರೆ ಜಮೀನಿನ ವಿಚಾರದಲ್ಲಿ ರತ್ನಮ್ಮ ಹಾಗೂ ಸ್ವಾಮಿ ಕುಟುಂಬದ ನಡುವೆ ವಿವಾದ ಇದ್ದು ಜಮೀನು ಸರ್ವೆ ನಡೆಸುವಂತೆ ರತ್ನಮ್ಮ ಮನವಿ ಮಾಡಿದ್ದರು. ಇದನ್ನೂ ಓದಿ: ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ

    ಈ ಹಿನ್ನೆಲೆ ಪರಿಶೀಲನೆ ನಡೆಸಲು ಗ್ರಾಮ ಲೆಕ್ಕಿಗ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಂದ ಸ್ವಾಮಿ ಸೇರಿದಂತೆ 8 ಮಂದಿಜಮೀನು ಪರಿಶೀಲನೆ ನಡೆಸಲು ಬಿಡದೆ ಗಲಾಟೆ ಮಾಡಿದ್ದಾರೆ. ಈ ವೇಳೆ ರತ್ನಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.  ಇದನ್ನೂ ಓದಿ: ಕಚೇರಿಯಲ್ಲೇ ಕುಳಿತು ಆನೆಗಳನ್ನು ಕಾಡಿಗಟ್ಟಲು ಪ್ಲ್ಯಾನ್‌ – `ಡಿವೈಸ್’ ಬಳಕೆಗೆ ಮುಂದಾದ ಅರಣ್ಯ ಇಲಾಖೆ!

  • ಹರ್ಯಾಣ| ಭೂ ವಿವಾದ; ಬಿಜೆಪಿ ಮಂಡಲ ಅಧ್ಯಕ್ಷನ ಭೀಕರ ಹತ್ಯೆ

    ಹರ್ಯಾಣ| ಭೂ ವಿವಾದ; ಬಿಜೆಪಿ ಮಂಡಲ ಅಧ್ಯಕ್ಷನ ಭೀಕರ ಹತ್ಯೆ

    ಚಂಡೀಗಢ: ಬಿಜೆಪಿಯ ಮುಂಡ್ಲಾನಾ ಮಂಡಲ ಅಧ್ಯಕ್ಷ (BJP Mundlana Mandal President) ಮತ್ತು ಗ್ರಾಮ ಸಂಖ್ಯಾದಾರ ಸುರೇಂದ್ರ (Surendra Jawahar) ಅವರನ್ನು ಶುಕ್ರವಾರ ರಾತ್ರಿ ಹರ್ಯಾಣದ ಸೋನಿಪತ್‌ನ (Sonipat) ಜವಾಹರ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಭೂ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಮೋನು ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದೆ. ಶುಕ್ರವಾರ ರಾತ್ರಿ 9:15ರ ಸುಮಾರಿಗೆ ಮಂಡಲ ಅಧ್ಯಕ್ಷ ಸುರೇಂದ್ರ ಜವಾಹರ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ದೃಶ್ಯದಲ್ಲಿ ಸುರೇಂದ್ರ ಮನೆಯ ಹೊರಗಿನ ಬೀದಿಯಲ್ಲಿ ನಿಂತಿದ್ದರು. ನೆರೆಮನೆಯ ಮೋನು ಸ್ಥಳಕ್ಕೆ ಬಂದು ಸುರೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ. ಸುರೇಂದ್ರ ತಪ್ಪಿಸಿಕೊಂಡು ಹತ್ತಿರದ ದಿನಸಿ ಅಂಗಡಿಗೆ ನುಗ್ಗಿದ ವೇಳೆ ದಾಳಿಕೋರ ಒಳಗೆ ಹೋಗಿ ಎರಡನೇ ಗುಂಡು ಹಾರಿಸಿದ್ದಾನೆ. ದಾಳಿಕೋರ ಮೋನು ಹಣೆಗೆ ಒಂದು ಗುಂಡು, ಹೊಟ್ಟೆಗೆ ಎರಡನೇ ಗುಂಡು ಹಾರಿಸಿ ಪರಾರಿಯಾಗಿದ್ದ. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್‌ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ

    ಮಂಡಲ ಅಧ್ಯಕ್ಷ ಸುರೇಂದ್ರ ಆರೋಪಿ ಮೋನುವಿನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಜಮೀನನ್ನು ಖರೀದಿಸಿದ್ದರು. ಇದರಿಂದಾಗಿ ಸುರೇಂದ್ರನ ಮೇಲೆ ಮೋನು ದ್ವೇಷ ಇಟ್ಟುಕೊಂಡಿದ್ದ. ಸುರೇಂದ್ರನಿಗೆ ಖರೀದಿಸಿದ ಜಮೀನಿನಲ್ಲಿ ಕಾಲಿಡದಂತೆ ಮೋನು ಬೆದರಿಕೆ ಹಾಕಿದ್ದ. ಆದರೆ ಇದಕ್ಕೆ ಜಗ್ಗದ ಸುರೇಂದ್ರ ಭೂಮಿಯನ್ನು ಉಳುಮೆ ಮಾಡಿದ್ದ. ಇದರಿಂದ ಕೋಪಗೊಂಡ ಮೋನು ಕೊಲೆ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್‌ ಆಪ್ತ ವಶಕ್ಕೆ

    ಪೊಲೀಸರು ಶವವನ್ನು ಖಾನ್ಪುರ್ ಕಲಾನ್ ಗ್ರಾಮದಲ್ಲಿರುವ ಭಗತ್ ಫೂಲ್ ಸಿಂಗ್ ಸರ್ಕಾರಿ ಮಹಿಳಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೃತ ಸುರೇಂದ್ರ ಪತ್ನಿ ದೂರಿನ ಆಧರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿ ಕೆಲವೆ ಹೊತ್ತಿನಲ್ಲಿ ಮೋನುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಉಗ್ರವಾದದ ದಾಖಲೆ ಪ್ರಪಂಚದ ಮುಂದಿದೆ: ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್‌ಗೆ ಭಾರತ ತಿರುಗೇಟು

  • ಜಮೀನು ವಿವಾದ – ಒಂದು ಎಕರೆ ಕಾಫಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

    ಜಮೀನು ವಿವಾದ – ಒಂದು ಎಕರೆ ಕಾಫಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

    ಹಾಸನ: ಜಮೀನಿನ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ಕಿಡಿಗೇಡಿಗಳು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳನ್ನು ನಾಶಪಡಿಸಿದ ಘಟನೆ ಬೇಲೂರಿನ ದೋಲನಮನೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕುರಂ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಜೆಸಿಬಿಯಿಂದ ನಾಶ ಮಾಡಲಾಗಿದೆ.

    ಗ್ರಾಮದ ಮೊಸೀನ್, ಜಾಹಿದ್, ಅಫನಾನ್ ಶಾಕೀರ್ ಎಂಬವರು ಕಾಫಿ ತೋಟವನ್ನು ನಾಶ ಮಾಡಿದ್ದಾರೆ ಎಂದು ಕುರುಂ ಆರೋಪಿಸಿದ್ದಾರೆ. ಇನ್ನೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

     

  • Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ

    Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ

    ಮಂಡ್ಯ: ಪೊಲೀಸ್ ಠಾಣೆಯಲ್ಲಿಯೇ (Mandya Police Station) ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

    ಸಾಗರ್ ಎಂಬಾತ ಪೊಲೀಸ್ ಸಿಬ್ಬಂದಿಗೆ ಅವಾಜ್ ಹಾಕಿ ಹಲ್ಲೆ ನಡೆಸಿದ್ದಾನೆ. ಜಮೀನು ವಿವಾದದ (Land Dispute) ಸಂಬಂಧ ಸಾಗರ್ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ಸಾಗರಗಳನ್ನು ಪೊಲೀಸರು ಕರೆಸಿದ್ದರು. ಇದನ್ನೂ ಓದಿ: ಸಿಖ್ ಸಂಪ್ರದಾಯದಂತೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ; ಗೌರವ ಸಮರ್ಪಣೆ

    ಈ ವೇಳೆ ಪೊಲೀಸ್ ಪೇದೆ ಅಭಿಷೇಕ್ ಹಾಗೂ ಸಾಗರ್ ನಡುವೆ ಮಾತಿನ ಚಕಮಕಿ ಆಗಿದೆ. ಈ ವೇಳೆ ಪೇದೆ ಅಭಿಷೇಕ್ ಸಾಗರ್‌ಗೆ ಒಂದು ಏಟು ಹೊಡೆದಿದ್ದಾರೆ. ನಂತರ ಸಾಗರ್ ಪೇದೆ ಅಭಿಷೇಕ್‌ಗೆ ಅವಾಜ್ ಹಾಕಿ ಹೊಡೆದಿದ್ದಾನೆ. ಹಲ್ಲೆ ನಡೆಸಿದ್ದಲ್ಲದೇ ಪೇದೆ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ನಡೆಸಿ ಸಾಗರ್‌ ಪರಾರಿಯಾಗಲು ಯತ್ನಿಸಿದ್ದಾನೆ.

    ಬಳಿಕ ಸಾಗರ್ ನನ್ನ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

  • ಬಿಹಾರದಲ್ಲಿ 80 ಕ್ಕೂ ಅಧಿಕ ದಲಿತರ ಮನೆಗಳಿಗೆ ಬೆಂಕಿ: ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಜಂಗಲ್ ರಾಜ್ ಎಂದ ಕಾಂಗ್ರೆಸ್

    ಬಿಹಾರದಲ್ಲಿ 80 ಕ್ಕೂ ಅಧಿಕ ದಲಿತರ ಮನೆಗಳಿಗೆ ಬೆಂಕಿ: ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಜಂಗಲ್ ರಾಜ್ ಎಂದ ಕಾಂಗ್ರೆಸ್

    ಬಿಹಾರ: ನವಾಡದಲ್ಲಿ (Nawada) ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಬಿಹಾರದ (Bihar) ಎನ್‌ಡಿಎ (NDA) ಸರ್ಕಾರವನ್ನು ಕಾಂಗ್ರೆಸ್ (Congress) ಗುರುವಾರ ತರಾಟೆಗೆ ತೆಗೆದುಕೊಂಡಿದ್ದು, ಇದು ರಾಜ್ಯದಲ್ಲಿ ‘ಜಂಗಲ್ ರಾಜ್’ ಅಸ್ತಿತ್ವದಲ್ಲಿರುವುದಕ್ಕೆ ಸಾಕ್ಷಿಯಾಗಿದೆ. ದಲಿತರು ಮತ್ತು ವಂಚಿತರ ಬಗ್ಗೆ ಆಡಳಿತ ಅಸಡ್ಡೆ ತೋರಿಸುತ್ತಿದೆ ಎಂದು ಟೀಕಿಸಿದೆ.

    ನಾವಡದಲ್ಲಿ ದಲಿತರ ಬುಧವಾರ 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ನರೇಂದ್ರ ಮೋದಿ (Narendra Modi) ಮತ್ತು ನಿತೀಶ್ ಕುಮಾರ್ ಆಡಳಿತದಲ್ಲಿ ಬಿಹಾರದಾದ್ಯಂತ ಬೆಂಕಿ ಕಾಣಿಸಿಕೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ತೊಂದರೆಯಾಗುವುದಿಲ್ಲ, ಬಡವರು ಸುಟ್ಟುಹೋಗಿದ್ದಾರೆ. ಸತ್ತರೂ ಅವರಿಗೆ ಕಾಳಜಿಯಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿ ಬಂಧನ

    ಭೂ ವಿವಾದದ ಸಂಬಂಧ ಬಿಹಾರದ ನಾವಡಾ ಜಿಲ್ಲೆಯಲ್ಲಿ ಸುಮಾರು 80 ಕ್ಕೂ ಅಧಿಕ ಮನೆಗಳಿಗೆ ಬೆಂಕಿ ಹಚ್ಚಿಲಾಗಿತ್ತು. ಘಟನೆ ನಡೆದ ಒಂದು ದಿನದ ನಂತರ ಪೊಲೀಸರು 15 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಉಳಿದ ಶಂಕಿತರನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ವರ್ಮಾ ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ, ಬಿಎಸ್‌ವೈಯಿಂದ ಜಂಟಿ ಡಿನೋಟಿಫೈ – ಕಾಂಗ್ರೆಸ್ ಸಚಿವರಿಂದ ಗಂಭೀರ ಆರೋಪ

    ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಸ್ಥಳದಲ್ಲೇ ಇದ್ದು, ನಿರಾಶ್ರಿತರಿಗೆ ಆಹಾರ ಮತ್ತು ಕುಡಿಯುವ ನೀರುವ ಸೇರಿದಂತೆ ಇತರೆ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ ಹಾಗೂ ಸಂತ್ರಸ್ತರಿಗೆ ತಾತ್ಕಾಲಿಕ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:ಮುಡಾ ಹಣ ವರುಣ ಕ್ಷೇತ್ರಕ್ಕೆ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

    ನಾವಡಾ ಎಸ್ಪಿ ಅಭಿನವ್ ಧಿಮಾನ್ ಮಾತನಾಡಿ, ಸಂಜೆ 7 ಗಂಟೆಯ ಸುಮಾರಿಗೆ ತೋಲಾದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಬಂದಿದ್ದು, ತಕ್ಷಣ ಪೊಲೀಸರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಪ್ರಾಥಮಿಕ ತನಿಖೆ ಪ್ರಕಾರ, ಈ ಘಟನೆಗೆ ಜಮೀನು ವಿವಾದ ಕಾರಣ ಎಂದು ತಿಳಿದು ಬಂದಿದೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇನ್ನು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರನ್ನು ಆಯೋಜಿಸಲಾಗಿದೆ ಎಂದರು. ಇದನ್ನೂ ಓದಿ: ದಾವಣಗೆರೆ ಗಣೇಶ ಮೆರವಣಿಗೆಯ ವೇಳೆ ಕಲ್ಲು ತೂರಾಟ – ಪೊಲೀಸರ ಮೇಲೂ ಬಿತ್ತು ಕಲ್ಲು

  • ಹಳೇ ವೈಷಮ್ಯಕ್ಕೆ 9 ಎಕರೆ ಹತ್ತಿ ಬೆಳೆ ನಾಶ – ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು

    ಹಳೇ ವೈಷಮ್ಯಕ್ಕೆ 9 ಎಕರೆ ಹತ್ತಿ ಬೆಳೆ ನಾಶ – ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು

    ರಾಯಚೂರು: ಜಮೀನು ವಿವಾದ (Land Dispute) ಹಿನ್ನೆಲೆ ಹಳೇ ವೈಷಮ್ಯಕ್ಕೆ ದೂರದ ಸಂಬಂಧಿಕರೇ 9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು (Cotton Crop) ಟ್ರ‍್ಯಾಕ್ಟರ್‌ನಿಂದ (Tractor) ನಾಶ ಮಾಡಿರುವ ಘಟನೆ ರಾಯಚೂರಿನ (Raichur) ಮಾನ್ವಿ (Manvi) ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ.

    ನಾಲ್ಕು ತಿಂಗಳ ಬೆಳೆಯನ್ನು ಎಲ್ಲರೆದುರೆ ಸಂಪೂರ್ಣವಾಗಿ ನಾಶಮಾಡಲಾಗಿದೆ. ನರಸಿಂಹ ಹಾಗೂ ಹುಲಿಗೆಪ್ಪ ಕುಟುಂಬ ಉಳುಮೆ ಮಾಡುತ್ತಿದ್ದರು. ಜಮೀನಿನಲ್ಲಿದ್ದ ಹತ್ತಿ ಬೆಳೆಯನ್ನು ಅಬ್ರಾಹಂಪ್ಪ, ಮಾರೆಪ್ಪ, ಪ್ರಭಾಕರ್ ಸೇರಿ ಹಲವರು ನಾಶ ಮಾಡಿದ್ದಾರೆ ಅಂತ ರೈತರು (Farmers) ಆರೋಪಿಸಿದ್ದಾರೆ. ಮಳೆ ಕೊರತೆಯ ನಡುವೆಯೂ ಉತ್ತಮ ಫಸಲು ಬಂದಿತ್ತು. ಹತ್ತಿ ಗಿಡಗಳು ಕಾಯಿಕಟ್ಟಿದ್ದವು. ಆದರೆ ಹತ್ತಿ ಬೆಳೆ ಕೈಗೆ ಸಿಗುವ ಮೊದಲೇ ಸಂಪೂರ್ಣ ನಾಶಮಾಡಿದ್ದಾರೆ. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಮರ್ಯಾದಾ ಹತ್ಯೆ – ಅನ್ಯಜಾತಿ ಯುವಕನನ್ನ ಪ್ರೀತಿಸುತ್ತಿದ್ದಳೆಂದು ತಂದೆಯಿಂದಲೇ ಮಗಳ ಕೊಲೆ

    ಘಟನೆ ಹಿನ್ನೆಲೆ 28 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಲಕ್ಷಾಂತರ ರೂ. ಬೆಳೆ ಕೈಗೆ ಸೇರುವುದಿತ್ತು. ಬೆಳೆ ನಷ್ಟವಾಗಿರುವುದರಿಂದ ನಮಗೆ ನ್ಯಾಯ ಸಿಗಬೇಕು ಅಂತ ಉಳುಮೆ ಮಾಡಿದ್ದ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Breaking: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ IT ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭುಗಿಲೆದ್ದ ಜನಾಂಗೀಯ ಘರ್ಷಣೆ: 105 ಸಾವು, 291 ಮಂದಿಗೆ ಗಂಭೀರ ಗಾಯ

    ಭುಗಿಲೆದ್ದ ಜನಾಂಗೀಯ ಘರ್ಷಣೆ: 105 ಸಾವು, 291 ಮಂದಿಗೆ ಗಂಭೀರ ಗಾಯ

    ಖಾರ್ಟೂಮ್: ಸುಡಾನ್‍ನ ಬ್ಲೂ ನೈಲ್ ರಾಜ್ಯದಲ್ಲಿ ಜನಾಂಗೀಯ ಘರ್ಷಣೆ ಭುಗಿಲೆದ್ದಿದ್ದು ಭೂ-ವಿವಾದ ಮಾರಣಾಂತಿಕ ರೂಪ ಪಡೆದಿದೆ. ಈ ಘರ್ಷಣೆಯಿಂದ 105 ಜನರು ಸಾವನ್ನಪ್ಪಿದ್ದು, 291 ಮಂದಿಗೆ ಗಂಭೀರ ಗಾಯವಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವರು ಬುಧವಾರ ತಿಳಿಸಿದ್ದಾರೆ.

    ರಾಜ್ಯ ಆರೋಗ್ಯ ಸಚಿವ ಜಮಾಲ್ ನಾಸರ್ ಅವರು ಈ ಕುರಿತು ಮಾತನಾಡಿದ್ದು, ಬರ್ಟಿ ಮತ್ತು ಹೌಸಾ ಜನಾಂಗೀಯ ಗುಂಪುಗಳ ಸದಸ್ಯರ ನಡುವೆ ಜುಲೈ 11 ರಂದು ಇಥಿಯೋಪಿಯಾ ಮತ್ತು ದಕ್ಷಿಣ ಸುಡಾನ್‍ನ ಗಡಿಯಲ್ಲಿ ದಕ್ಷಿಣ ರಾಜ್ಯದ ಹೋರಾಟ ಪ್ರಾರಂಭವಾಯಿತು. 17,000 ಕ್ಕೂ ಹೆಚ್ಚು ಜನರು ಹೋರಾಟದಿಂದ ತಮ್ಮ ಮನೆಗಳನ್ನು ಬಿಟ್ಟು ಬಂದಿದ್ದರು. ಈ ಘರ್ಷಣೆ ವೇಳೆ 105 ಜನರು ಮೃತಪಟ್ಟಿದ್ದು, 291 ಜನರು ಗಾಯಗೊಂಡಿದ್ದಾರೆ. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್ 

    ಸೇನೆಯು ಶನಿವಾರದಿಂದ ಹೋರಾಟವನ್ನು ಕಡಿಮೆ ಮಾಡಿದೆ. ಸ್ಥಳಾಂತರಗೊಂಡವರಿಗೆ ಆಶ್ರಯ ನೀಡುವುದು ಈಗಿನ ಸವಾಲಾಗಿದೆ. 14,000 ಜನರು ಅಲ್-ದಮಾಜಿನ್‍ನಲ್ಲಿರುವ ಮೂರು ಶಾಲೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ನಡೆದಿದ್ದೇನು?
    ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಬ್ಲೂ ನೈಲ್ ರಾಜ್ಯದಲ್ಲಿ 5,63,000 ಜನರಿಗೆ ನೆರವು ನೀಡಲಾಗಿದೆ. ಸುಡಾನ್, ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಅಕ್ಟೋಬರ್ ದಂಗೆಯಿಂದ ಆಳವಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದೆ. ಇದನ್ನೂ ಓದಿ: ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ 

    ಭೂಮಿಗೆ ಪ್ರವೇಶವನ್ನು ಮೇಲ್ವಿಚಾರಣೆ ಮಾಡಲು ನಾಗರಿಕ ಪ್ರಾಧಿಕಾರವನ್ನು ರಚಿಸುವ ಹೌಸಾ ವಿನಂತಿಯನ್ನು ಬರ್ಟಿಸ್ ತಿರಸ್ಕರಿಸಿದ ನಂತರ ಬ್ಲೂ ನೈಲ್‍ನಲ್ಲಿ ಹೋರಾಟವು ಭುಗಿಲೆದ್ದಿದೆ. ಖಾರ್ಟೌಮ್, ಉತ್ತರ ಕೊರ್ಡೋಫಾನ್, ಕಸ್ಸಾಲಾ, ಗೆಡಾರೆಫ್ ಮತ್ತು ಪೆÇೀರ್ಟ್ ಸುಡಾನ್‍ನಲ್ಲಿ ಸಾವಿರಾರು ಜನರು ಮಂಗಳವಾರ ಪ್ರತಿಭಟನೆ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

    ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

    ಹಾವೇರಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೀರೇಶ್ ಕುಪಗಡ್ಡಿ ಮತ್ತು ಶಿವಾನಂದ ಕೋಡಿಹಳ್ಳಿ ಕುಟುಂಬದ ನಡುವೆ ಗಲಾಟೆ ನಡೆದಿದೆ. ಈ ಎರಡು ಕುಟುಂಬದವರು ಜಮೀನಿನಲ್ಲಿಯೇ ಕಲ್ಲು ಹಾಗೂ ಮಣ್ಣಿನಹೆಂಟೆಯಿಂದ ಹೊಡೆದಾಡಿಕೊಂಡಿದ್ದಾರೆ. ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಮೀನಿಗೆ ಬಂದಿದ್ದ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಎಂಬುದನ್ನು ಲೆಕ್ಕಿಸದೇ ಹಲ್ಲೆ ನಡೆದಿದೆ. ಕಲ್ಲು, ಮಣ್ಣಿನ ಹೆಂಟೆಗಳ ಏಟಿಗೆ ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.

    POLICE JEEP

    ಈ ಘಟನೆಯಲ್ಲಿ ಗಾಯಗೊಂಡು ಅಸ್ವಸ್ಥರನ್ನು ಹಾನಗಲ್ ತಾಲೂಕಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕೋಡಿಹಳ್ಳಿ ಕುಟುಂಬದ ಹತ್ತು ಜನರ ವಿರುದ್ಧ ಜೀವ ಬೆದರಿಕೆ ದೂರನ್ನು ವೀರೇಶ್ ಕುಪಗಡ್ಡಿ ದಾಖಲು ಮಾಡಿದ್ದಾರೆ. ಜೊತೆಗೆ ಕುಪಗಡ್ಡಿ ಕುಟುಂಬದ 12 ಜನರ ವಿರುದ್ಧ ಜೀವ ಬೆದರಿಕೆ ಕೇಸ್‌ನ್ನು ಶಿವಾನಂದ ಕೋಡಿಹಳ್ಳಿ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆಡೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ