Tag: land

  • ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!

    ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!

    ಚಾಮರಾಜನಗರ: ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ಮೈಸೂರಿನ ರಾಣಿ ಪ್ರಮೋದಾದೇವಿ ಒಡೆಯರ್ (Pramod Devi Wadiyar) ಚಾಮರಾಜನಗರ ಜಿಲ್ಲಾಧಿಕಾರಿ (Chamarajanagara DC) ಪತ್ರ ಬರೆದಿದ್ದರಿಂದ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

    ಸಿದ್ದಯ್ಯನಪುರದ ಮೂಲ ಹೆಸರೇ ಜಯಚಾಮರಾಜೇಂದ್ರ ಪುರಂ. ಈಗ ಊರಿಗೆ ಊರೇ ಖಾಲಿ ಮಾಡಬೇಕಾದ ಆತಂಕ ಎದುರಾಗಿದೆ. 4,000 ಕ್ಕೂ ಹೆಚ್ಚು ಜನರು ಸಿದ್ದಯ್ಯನಪುರ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಇಂದಿಗೂ ಮಹಾರಾಜರ ಫೋಟೋವನ್ನು ಮನೆಯ ದೇವರ ಕೋಣೆಯಲ್ಲಿ ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮ ದಿನ ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ಮಹಾರಾಜರಿಗೆ ಸೇರಿರುವ 4,500 ಎಕ್ರೆ ಭೂಮಿ ವರ್ಗಕ್ಕೆ ಪ್ರಮೋದಾದೇವಿ ಪತ್ರ

    ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿ ದಾನ ನೀಡಿದ್ದಾರೆ. 1982 ರಲ್ಲಿ ಸಚಿವರಾಗಿದ್ದ ಬಿ ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗಲೂ ಮಹಾರಾಜರ ಹೆಸರೇಳಿಕೊಂಡು ಬದುಕುತ್ತಿದ್ದೇವೆ. ರಾಣಿ ಪ್ರಮೋದಾದೇವಿಗೆ ಖಾತೆ ಮಾಡಿಕೊಟ್ಟಲ್ಲಿ ಇಡೀ ಗ್ರಾಮದವರು ಮೈಸೂರು ಅರಮನೆಗೆ ಹೋಗುತ್ತೇವೆ. ಅವರೇ ನಮಗೆ ಹಿಟ್ಟು ಬಟ್ಟೆ ಕೊಟ್ಟು ಸಾಕಲಿ ಅಂತಿದ್ದಾರೆ.

    ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ಟರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತದೆ. ಮಕ್ಕಳು ಮರಿ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ನಾವು ಇದ್ರು ಇಲ್ಲೇ ಸತ್ರು ಇಲ್ಲೇ ಸಾಯ್ತೀವಿ ಎಂದು ಸಿದ್ದಯ್ಯನಪುರ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    ಚಾಮರಾಜನಗರ ತಾಲ್ಲೂಕಿನ ವಿವಿಧೆಡೆ 4,500 ಎಕರೆಗು ಹೆಚ್ಚು ಭೂಮಿ ಮೈಸೂರು (Mysuru) ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರ ಮೈಸೂರಿನ ರಾಣಿ ಬರೆದಿದ್ದರು.ಇದೇ ವ್ಯಾಪ್ತಿಯಲ್ಲಿ ಸಿದ್ದಯ್ಯನಪುರ ಗ್ರಾಮ ಬರುತ್ತದೆ. ಮೈಸೂರು ಮಹಾರಾಜರು ಹಾಗೂ ಭಾರತ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಪ್ರಮೋದಾದೇವಿ ಉಲ್ಲೇಖಿಸಿದ್ದಾರೆ.

  • ಮೈಸೂರು ಮಹಾರಾಜರಿಗೆ ಸೇರಿರುವ 4,500 ಎಕ್ರೆ ಭೂಮಿ ವರ್ಗಕ್ಕೆ ಪ್ರಮೋದಾದೇವಿ ಪತ್ರ

    ಮೈಸೂರು ಮಹಾರಾಜರಿಗೆ ಸೇರಿರುವ 4,500 ಎಕ್ರೆ ಭೂಮಿ ವರ್ಗಕ್ಕೆ ಪ್ರಮೋದಾದೇವಿ ಪತ್ರ

    ಚಾಮರಾಜನಗರ: ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಪತ್ರ ಬರೆದಿದ್ದಾರೆ.

    ಚಾಮರಾಜನಗರ ಜಿಲ್ಲಾಧಿಕಾರಿಗೆ (Chamarajanagara DC) ಪತ್ರ ಬರೆದಿದ್ದಾರೆ. ಕಳೆದ ಮಾರ್ಚ್ 20 ರಂದೇ ಪತ್ರ ಬರೆದಿದ್ದು, ಇವರು ಚಾಮರಾಜನಗರ ತಾಲೂಕಿನ ವಿವಿಧೆಡೆ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ – ಗ್ರಾಹಕರಿಗೆ ಯಾವುದೇ ಹೊರೆ ಇಲ್ಲ

    ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ, ಹರದನಹಳ್ಳಿ, ಉಮ್ಮತ್ತೂರು ಬೂದಿತಿಟ್ಟು, ಕರಡಿ ಹಳ್ಳ, ಚಾಮರಾಜನಗರ, ಕನ್ನಿಕೆರೆ ಬಸವಾಪುರದ ಸರ್ವೆ ನಂಬರ್ ಗಳಲ್ಲಿರುವ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರು ಹಾಗು ಭಾರತ ಸರ್ಕಾರದ ನಡುವೆ 1,950 ರಲ್ಲಿ ಆಗಿರುವ ಒಪ್ಪಂದದ ಪ್ರಕಾರ ಇದೆಲ್ಲಾ ಮೈಸೂರು ಮಹಾರಾಜರ ಖಾಸಗಿ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 10 ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿ – ಭವಾನಿ ರೇವಣ್ಣಗೆ ಹೂಮಳೆ, ಆರತಿ ಬೆಳಗಿ ಸ್ವಾಗತ

    ಖಾತೆ ಆಗುವ ತನಕ ದುರಸ್ತಿ, ಬೇರೆಯವರಿಗೆ ಖಾತೆ ಹಾಗೂ ಯಾವುದೇ ರೀತಿಯ ವಹಿವಾಟು ನಡೆಸದಂತೆ ತಕರಾರು ಅರ್ಜಿ ಜೊತೆಗೆ ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಮೋದಾದೇವಿ ಮನವಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: Breaking | ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ

  • 138 ಕೋಟಿ ಹೂಡಿಕೆ, 160 ಉದ್ಯೋಗ ಸೃಷ್ಟಿ: ರನ್ಯಾ ರಾವ್‌ಗೆ KIADB 12 ಎಕ್ರೆ ಜಾಗ ಸಿಕ್ಕಿದ್ದು ಹೇಗೆ?

    138 ಕೋಟಿ ಹೂಡಿಕೆ, 160 ಉದ್ಯೋಗ ಸೃಷ್ಟಿ: ರನ್ಯಾ ರಾವ್‌ಗೆ KIADB 12 ಎಕ್ರೆ ಜಾಗ ಸಿಕ್ಕಿದ್ದು ಹೇಗೆ?

    ಬೆಂಗಳೂರು: ಚಿನ್ನದ ಕಳ್ಳಸಾಗಣೆ (Gold Smuggling Case) ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ (Ranya Rao) ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ ಎಂದುಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಸಿಇಒ ಡಾ. ಮಹೇಶ್ ಭಾನುವಾರ ಹೇಳಿದ್ದಾರೆ.

    ಹಿಂದಿನ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2023ರ ಜನವರಿ 2ರಂದು ನಡೆದ 137ನೇ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್‌ಎಲ್‌ಎಸ್‌ಡಬ್ಲ್ಯು ಸಿಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಸದರಿ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ  ರೂ.ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ, ಸುಮಾರು 160 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು‌ ಎಂದು ಅವರು ವಿವರಿಸಿದ್ದಾರೆ.

  • ಆಸ್ತಿಗಾಗಿ ಸ್ವಂತ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ತಂಗಿ!

    ಆಸ್ತಿಗಾಗಿ ಸ್ವಂತ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ತಂಗಿ!

    ಚಿಕ್ಕೋಡಿ: ಆಸ್ತಿಗಾಗಿ ಸ್ವಂತ ತಂಗಿಯೇ (Sister) ಅಣ್ಣನ ಮೇಲೆ ಹಲ್ಲೆ ಮಾಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ (Atahani) ಪಟ್ಟಣ ಹೊರ ವಲಯದಲ್ಲಿ ನಡೆದಿದೆ.

    ಶಂಕರ್ ಭಜಂತ್ರಿ ಕುಟುಂಬದ ಮೇಲೆ ತಂಗಿ ಹಾಗೂ ಆಕೆಯ ಮಕ್ಕಳಿಂದ ಹಲ್ಲೆ (Assault) ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೂರು ಎಕರೆ ಆಸ್ತಿಯಲ್ಲಿ ಪಾಲು ನೀಡದ್ದಕ್ಕೆ ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ತಡರಾತ್ರಿ ಮನೆಗೆ ನುಗ್ಗಿ ಆರೋಪಿಗಳು ಹಲ್ಲೆ ಮಾಡಿದ್ದಾರೆ.

     

    ಗಲಾಟೆಯಲ್ಲಿ ಶಂಕರ್ ಭಜಂತ್ರಿ, ಆನಂದ ಭಜಂತ್ರಿ, ಸುಧೀರ್, ವಜ್ರಮುನಿ ಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದ (Maharashtra) ಮಿರಜ್ ಆಸ್ಪತ್ರೆಗೆ ಗಾಯಾಳುಗಳು ರವಾನಿಸಲಾಗಿದೆ. ಇದನ್ನೂ ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ಸಹೋದರಿ ಲಕ್ಷ್ಮಿ ಭಜಂತ್ರಿ ಮತ್ತು ಕುಟುಂಬಸ್ಥರಿಂದ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

     

  • ವಕ್ಫ್‌ ಮಂಡಳಿಯ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ: ಜೆಪಿಸಿಗೆ ಅಶೋಕ್‌ ಮನವಿ

    ವಕ್ಫ್‌ ಮಂಡಳಿಯ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಿ: ಜೆಪಿಸಿಗೆ ಅಶೋಕ್‌ ಮನವಿ

    – ಕೇಂದ್ರ ಸಚಿವರಿಗೆ ಹಾಗೂ ಜಂಟಿ ಸಂಸದೀಯ ಸಮಿತಿಗೆ ಪತ್ರ

    ಬೆಂಗಳೂರು: ಕರ್ನಾಟಕದ ವಕ್ಫ್‌ ಮಂಡಳಿಗೆ (Karnataka Waqf Board) ಸಂಬಂಧಿಸಿದ ಎಲ್ಲಾ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಅವರು ಕೇಂದ್ರ ಸಚಿವರಿಗೆ ಹಾಗೂ ವಕ್ಫ್‌ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ.

    ರೈತರ ಜಮೀನು (Farmers Land) ಹಾಗೂ ಹಿಂದೂ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನುಗಳನ್ನು ವಕ್ಫ್‌ ಮಂಡಳಿ ಕಬಳಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah), ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ (JP Nadda) ಹಾಗೂ ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ (Jagdambika Pal) ಅವರಿಗೆ ಪತ್ರ ಬರೆದಿದ್ದಾರೆ.

    ಕೇಂದ್ರ ಸರ್ಕಾರದಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ತರಲು ಜಂಟಿ ಸಂಸದೀಯ ಸಮಿತಿ ರಚಿಸಿದ್ದು, ವಕ್ಫ್‌ ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರಲು ಈ ಸಮಿತಿ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್‌ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್‌ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರ್‌.ಅಶೋಕ್‌ ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ

     

    ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್‌ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ ವಕ್ಫ್‌ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ಕೂಡ ತನ್ನದು ಎಂದು ಹೇಳಿಕೊಂಡಿದೆ. ಹಿಂದೂ ಸ್ಮಶಾನ ಕೂಡ ತನ್ನದು ಎಂದು ವಕ್ಫ್‌ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ. 13ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂಧಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ಕೂಡ ವಕ್ಫ್‌ ತನ್ನದೆಂದು ಘೋಷಿಸಿಕೊಂಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದು ಜನರಲ್ಲಿ ಆತಂಕ ಉಂಟುಮಾಡಿದ್ದು, ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ಕೂಡ ನಡೆದಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿಯು ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಬೇಕು ಹಾಗೂ ವಕ್ಫ್‌ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕೆಂದು ಆರ್‌.ಅಶೋಕ್‌ ಮನವಿ ಮಾಡಿದ್ದಾರೆ.

     

  • ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

    ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

    – ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ
    – ಜಾಗದ ಬಳಿ ಮಸೀದಿ, ದರ್ಗಾ ಇಲ್ಲದೇ ಇದ್ದರೂ ವಕ್ಫ್‌ ಬೋರ್ಡ್‌ಗೆ ಸೇರ್ಪಡೆ

    ಯಾದಗಿರಿ: ವಿಜಯಪುರದ ಬಳಿಕ ಯಾದಗಿರಿ (Yadagiri) ಜಿಲ್ಲೆಯ ಸಾವಿರಕ್ಕೂ ಹೆಚ್ಚು ರೈತರಿಗೆ ವಕ್ಫ್‌ ಬೋರ್ಡ್‌ (Waqf Board) ಶಾಕ್‌ ನೀಡಿದೆ. ರೈತರ ಭೂಮಿ (Farmers Land) ಪಹಣಿ ಕಾಲಂ ನಂಬರ್ 11 ರ ಮೇಲೆ ವಕ್ಪ್ ಎಂದು ನಮೂದಾಗಿದ್ದು ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ರೈತಾಪಿ ವರ್ಗ ಅಕ್ಷರಶಃ ಬೀದಿಗೆ ಬಂದಿದ್ದು ವಕ್ಪ್ ಕಾಯ್ದೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರ ಜಿಲ್ಲೆ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್

     

    ಜಿಲ್ಲೆಯ 1440 ರೈತರ ಕೃಷಿ ಭೂಮಿ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಈ ಹಿಂದೆ ವಂಶಪಾರಂಪರಿಕವಾಗಿ ರೈತರು ಉಳುಮೆ ಮಾಡುತ್ತಿದ್ದರು. ಹಾಗೆ ಅವರ ವಂಶದವರ ಹೆಸರೇ ಪಹಣಿಯಲ್ಲಿ ಇತ್ತು. 2018 ರಲ್ಲಿ ಕೊಂಗಡಿ ಗ್ರಾಮದ ರೈತ ಸುನೀಲ್ ಹವಾಲ್ದಾರ್ ತನ್ನ ತಂದೆ ಅಂಬಣ್ಣನ ಹೆಸರಿನಿಂದ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಆಗಲೂ ಸಹ ಪಹಣಿಯಲ್ಲಿ ಎಲ್ಲಿಯೂ ವಕ್ಫ್‌ ಎಂದು ಇರಲಿಲ್ಲ. ಕೆಲ ದಿನಗಳ ಬಳಿಕ ಕೊಂಗಡಿ ಗ್ರಾಮದ ಕೆಲ ಜಮೀನನ್ನು ರೈಲ್ವೆ ಇಲಾಖೆ ಹಳಿ ಕಾಮಗಾರಿಗಾಗಿ ಸ್ವಾಧೀನ ಪಡಿಸಿಕೊಂಡಿತು. ಈ ವೇಳೆ  ಪರಿಹಾರದ ಹಣ ನೀಡಲು ರೈತರು ಪಹಣಿ ಸೇರಿ ಅಗತ್ಯ ದಾಖಲೆ ಸಲ್ಲಿಸಿದ್ದರು. ಆಗ ರೈತರ ಪಹಣಿಯಲ್ಲಿನ 11 ನಂಬರ್ ಕಾಲಂನಲ್ಲಿ ವಕ್ಫ್‌ ಎಂದು ನಮೂದಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ
    ಯತ್ನಾಳ್ ಕಿಡಿ

    ರೈತರು ಜಮೀನು ಬಳಿ ಯಾವುದೇ ದರ್ಗಾ, ಮಸೀದಿಗಳು ಇಲ್ಲದೇ ಇದ್ದರೂ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ರೈಲ್ವೇ ಕಾಮಗಾರಿ ಪರಿಹಾರ ಹಣ ಪಡೆಯಲು ಮುಂದಾದಾಗ 2020 ರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

    ಈಗ ಗ್ರಾಮದ ರೈತರೆಲ್ಲರೂ ಕೋರ್ಟ್ ಮೆಟ್ಟಿಲೇರಿದ್ದರಿಂದ ಸುಮಾರು 200 ಕೋಟಿ ರೂ.ಗೂ ಅಧಿಕ ಪರಿಹಾರ ರೈತರಿಗೆ ಸಿಗದೇ ಅಲ್ಲಿಯೇ ನಿಂತಿದೆ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಬೆಳೆ ಪರಿಹಾರ, ಬೆಳೆ ಸಾಲವೂ ಸಿಗದೇ ಅನ್ನದಾತರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

    ಸರ್ಕಾರ ಹಾಗೂ ವಕ್ಪ್ ಕಾಯ್ದೆ ವಿರುದ್ಧ ಅನ್ನದಾತರು ಈಗ ಆಕ್ರೋಶ ಹೊರ ಹಾಕುತ್ತಿದ್ದು ಕೂಡಲೇ ರೈತರ ಪಹಣಿಯಲ್ಲಿನ ವಕ್ಫ್‌ ಹೆಸರನ್ನು ಕೈ ಬೀಡಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಆಗ್ರಹಿಸಿದ್ದಾರೆ.

     

  • ಕೋರ್ಟ್ ತೀರ್ಪನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ – ಹೆಚ್‌ಎಂಟಿ ಭೂಮಿ ವಶಕ್ಕೆ ಹೆಚ್‌ಡಿಕೆ ಕಿಡಿ

    ಕೋರ್ಟ್ ತೀರ್ಪನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ – ಹೆಚ್‌ಎಂಟಿ ಭೂಮಿ ವಶಕ್ಕೆ ಹೆಚ್‌ಡಿಕೆ ಕಿಡಿ

    -ಶ್ರೀನಿವಾಸಪುರದ ಮಾಜಿ ಸ್ಪೀಕರ್ ಅರಣ್ಯ ಭೂಮಿ ಒತ್ತುವರಿ ಪ್ರಸ್ತಾಪಿಸಿ ಟಾಂಗ್

    ಬೆಂಗಳೂರು: ಕೋರ್ಟ್ ಕೊಟ್ಟಿರುವ ತೀರ್ಪನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್‌ಎಂಟಿ ಕಂಪನಿಗೆ (HMT Company) ಸೇರಿದ ಐದು ಎಕರೆ ಜಮೀನನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ವಶಕ್ಕೆ ಪಡೆದುಕೊಂಡಿದ್ದಕ್ಕೆ ನಾವು ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗುವುದು ಖಚಿತ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Photo Gallery | ಹೆಚ್‌.ಡಿ.ದೇವೇಗೌಡರ ಭೇಟಿಯಾದ ಉಪರಾಷ್ಟ್ರಪತಿ – ಪುತ್ರ ಹೆಚ್‌ಡಿಕೆ ಹೆಗಲ ಮೇಲೆ ಕೈಹಾಕಿ ಫೋಟೋಗೆ ದೊಡ್ಡಗೌಡ್ರು ಪೋಸ್‌

    ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ. ಈ ಕುರಿತು ಸಚಿವ ಈಶ್ವರ್ ಖಂಡ್ರೆಯವರು (Eshwar Khandre) ಮೊದಲು ನೋಡಬೇಕು. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಲೂಟಿ ಹೊಡೆದಿರುವುದನ್ನು ನೋಡಿ, ಎಷ್ಟು ಎಕರೆ ಲೂಟಿ ಆಗಿದೆ? ತಿಳಿದುಕೊಳ್ಳಿ. ಶುಕ್ರವಾರ (ಅ.25) ಐದು ಎಕರೆ ಭೂಮಿಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಸಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಹೆಚ್‌ಎಂಟಿ ಹಾಗೂ ಅಧಿಕಾರಿಗಳು ತಲೆ ಬಾಗಬೇಕಾಗುತ್ತದೆ ಎಂದು ಆಗ್ರಹಿಸಿದರು.ಇದನ್ನೂ ಓದಿ: ಧರ್ಮ ಕಾರ್ಯಗಳ ಮೂಲಕ ಶೃಂಗೇರಿ ಮಠ ಮುಂಚೂಣಿಯಲ್ಲಿದೆ: ಡಿಕೆಶಿ

  • MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Paravathi) ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ಬಂದ 14 ಸೈಟ್. ಹಾಗಾದರೆ ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ವಿವಾದ?
    ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು ಈಗ ವಿವಾದದ ಕೇಂದ್ರಬಿಂದು. ಇದನ್ನೂ ಓದಿ: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    ಬದಲಿ ನಿವೇಶನಕ್ಕೆ ಪತ್ರ
    ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ. ವಿಷಯ ಏನೆಂದರೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ.

    ಹಗರಣದ ವಾಸನೆ ಬಂದಿದ್ದು ಯಾಕೆ?
    ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38,284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. ಸಿಎಂ ಪತ್ನಿ ಅಲ್ಲದೇ ಹಲವು ಮಂದಿ ಭೂಮಿಯನ್ನು ಮುಡಾ ವಶಪಡಿಸಿಕೊಂಡಿದೆ. ಸಿಎಂ ಪತ್ನಿಗೆ ಹಂಚಿಕೆ ಮಾಡಿದಂತೆ ಇವರಿಗೂ ಜಾಗವನ್ನು ವಿಜಯನಗರ ಬಡಾವಣೆಯಲ್ಲಿ ಜಾಗ ಹಂಚಿಕೆ ಮಾಡಿಲ್ಲ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ಹೈಕೋರ್ಟ್ ನಿರ್ದೇಶನ

     

    ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂ. ನಿಂದ 3,000 ರೂ.ವರೆಗೆ ದರ ಇದೆ. ಆದರೆ ವಿಜಯನಗರದಲ್ಲಿ ಚದರ ಅಡಿಗೆ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ. ಸಿಎಂ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಈ ಜಾಗ ಹಂಚಿಕೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಒಂದನೇಯದಾಗಿ ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಎರಡನೇಯದ್ದು ಬೇರೆ ಕಡೆ ಭೂಮಿ ಕೊಟ್ಟಿರುವುದು, ಮೂರನೇಯದ್ದು 50-50 ಅನುಪಾತ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿ ಈಗ ಸಿಎಂ ಸಂಕಷ್ಟಕ್ಕೆ ಕಾರಣವಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    50:50 ಅನುಪಾತದ ಅಡಿ ನಿವೇಶನ ಹಂಚಿಕೆ ಬಗ್ಗೆ ಒಂದೂವರೆ ತಿಂಗಳ ಹಿಂದೆ ಆರ್‌ಟಿಐ (RTI) ಕಾರ್ಯಕರ್ತರು ಧ್ವನಿ ಎತ್ತಿದ್ದರು. ಈ ವೇಳೆ ಸಿಎಂ ಪತ್ನಿಗೂ ನಿವೇಶನ ಹಂಚಿಕೆ ಆಗಿರುವ ದಾಖಲೆ ಬೆಳಕಿಗೆ ಬಂದವು. ಹೀಗಾಗಿ ಹಗರಣ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.

     

     

  • ಆಸ್ತಿ ವಿಚಾರಕ್ಕೆ ಕಿತ್ತಾಟ – ಕಾರು ಹತ್ತಿಸಿ ಸಹೋದರನನ್ನೇ ಹತೈಗೈದ, ವಿಡಿಯೋ ಲಭ್ಯ

    ಆಸ್ತಿ ವಿಚಾರಕ್ಕೆ ಕಿತ್ತಾಟ – ಕಾರು ಹತ್ತಿಸಿ ಸಹೋದರನನ್ನೇ ಹತೈಗೈದ, ವಿಡಿಯೋ ಲಭ್ಯ

    ಶಿವಮೊಗ್ಗ: ಆಸ್ತಿ (Property) ವಿಚಾರಕ್ಕೆ ಫೆ.29 ರಂದು ಸಹೋದರನನ್ನು  ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.

    ಶಿವಮೊಗ್ಗ (Shivamogga) ಜಿಲ್ಲೆ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ ರಫೀಕ್‌ (45) ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಕಳೆದ ವರ್ಷ ತನ್ನ ಸಹೋದರನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜಾಮೀನಿನ ಮೇಲೆ ರಫೀಕ್ ಜೈಲಿನಿಂದ (Jail) ಹೊರಗಡೆ ಬಂದಿದ್ದ.

     

    ಜೈಲಿನಿಂದ ಬಂದ ರಫೀಕ್‌ನ ಮತ್ತೊಬ್ಬ ಸಹೋದರ ಇದಾಯಸ್‌ ಸಾಗರದ ಚಿಪ್ಪಳ್ಳಿಯಲ್ಲಿ ಕೊಲೆ ಮಾಡಿದ್ದ. ರಫೀಕ್ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಈಗ ಇದಾಯಸ್‌ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

     

  • ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ವಿವಸ್ತ್ರಗೊಳಿಸುವ ಜೊತೆಗೆ ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಬೆಳಗಾವಿ (Belagavi) ಜಿಲ್ಲೆಯ ಕಾಗವಾಡದ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿದೆ. ರಾಮಪ್ಪಗೆ ಎಂಬವರಿಗೆ 1991ರಲ್ಲಿ ಸರ್ಕಾರ 3 ಎಕರೆ ಜಮೀನು ನೀಡಿತ್ತು. ಆ ಬಳಿಕದಿಂದ ರಾಮಪ್ಪ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ರಾಮಪ್ಪಗೆ ಸೇರಿದ ಜಮೀನಿನ 20 ಗುಂಟೆಯನ್ನು ಒತ್ತುವರಿ ಮಾಡಿದ್ದಾರೆ. ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ವಿರುದ್ಧ ಒತ್ತುವರಿ ಆರೋಪ ಕೇಳಿಬಂದಿದೆ.

    ನಮಗೆ ರಾಜಕೀಯ ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಜಮೀನು ಜೊತೆ ರಸ್ತೆಗೆ ಮೀಸಲಿಟ್ಟ ಜಾಗವೂ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಪ್ರಶ್ನಿಸಲು ಹೋಗಿದ್ದ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ವಿವಸ್ತ್ರಗೊಳಿಸಿ ವಿಕೃತಿ ಮೆರೆಯುವುದರ ಜೊತೆಗೆ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿರುವ ಆರೋಪವನ್ನು ರಾಮಪ್ಪ ಮಾಡಿದ್ದಾರೆ. ಇದನ್ನೂ ಓದಿ: ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ

    ಈ ಹಿಂದೆಯೂ ನಡೆದಿತ್ತು ಇಂಥದ್ದೇ ಘಟನೆ: ಎರಡು ತಿಂಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಅದುಕೂಡ ಜಮೀನು ವಿಚಾರವಾಗಿತ್ತು. ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದರು. 6 ಎಕರೆ ಭೂಮಿ ಆಕೆಯ ಮಾವನ ಹೆಸರಿನಲ್ಲಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಜಮೀನು ಹೊಂದಿದ್ದರು. ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಹೊಡೆದು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.