Tag: Lance Naik Nazir Ahmad Wani

  • ಹಿಂದೆ ಉಗ್ರನಾಗಿದ್ದ ಹುತಾತ್ಮ ಸೇನಾನಿ ವಾನಿಗೆ ಅಶೋಕ ಚಕ್ರ

    ಹಿಂದೆ ಉಗ್ರನಾಗಿದ್ದ ಹುತಾತ್ಮ ಸೇನಾನಿ ವಾನಿಗೆ ಅಶೋಕ ಚಕ್ರ

    ನವದೆಹಲಿ: ಭಯೋತ್ಪಾದಕನಾಗಿದ್ದ ಆತ ಮನಪರಿವರ್ತನೆಗೊಂಡು ಸೇನೆ ಸೇರಿ ಹುತಾತ್ಮನಾಗಿ ಋಣ ತೀರಿಸಿದ್ದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾಸಿ ಅವರಿಗೆ ಭಾರತ ಸರ್ಕಾರ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಘೋಷಿಸಿದೆ.

    ಮೊದಲು ಉಗ್ರನಾಗಿದ್ದ ದಕ್ಷಿಣ ಕಾಶ್ಮೀರದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಮನಃ ಪರಿವರ್ತನೆ ಬಳಿಕ 2004ರಲ್ಲಿ ಸೇನೆ ಸೇರಿದ್ದರು. ಇವರ ಕರ್ತವ್ಯ ನಿಷ್ಠೆಗೆ 2007ರಲ್ಲಿ ಶೌರ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಉಗ್ರರ ಜೊತೆ ಹೋರಾಡುತ್ತಾ ತನ್ನ ಪ್ರಾಣವನ್ನು ದೇಶಕ್ಕೆ ಅರ್ಪಿಸಿದ್ದರು.

    ಗಣರಾಜ್ಯೋತ್ಸವದಂದು ಲ್ಯಾನ್ಸ್ ನಾಯಕ್ ನಝೀರ್ ಅಹಮದ್ ವಾನಿ ಕುಟುಂಬದವರು ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ಸೇನೆಯ ಶಾಂತಿ ಕಾಲದಲ್ಲಿ ನೀಡುವ ಅತ್ಯುನ್ನತ ಸೇನಾ ಪ್ರಶಸ್ತಿಯಾಗಿದೆ. 38 ವರ್ಷದ ವಾನಿ ಅವರು ಜಮ್ಮು ಕಾಶ್ಮೀರದ ಕುಲ್ಗಾಂನ ಅಶ್‍ಮುಜಿ ಪ್ರದೇಶದವರು. ವಾನಿ ಹುತಾತ್ಮರಾಗುವ ಮುನ್ನ ಅವರ ಅಸಾಧಾರಣ ಹೋರಾಟಕ್ಕೆ ಸೇನಾ ಮೆಡಲ್ ಕೂಡ ನೀಡಿ ಗೌರವಿಸಲಾಗಿತ್ತು. ಅಲ್ಲದೇ ಅಶೋಕ ಚಕ್ರ ಪ್ರಶಸ್ತಿ ಪಡೆದ ಮೊದಲ ಜಮ್ಮು ಕಾಶ್ಮೀರಿಗರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv