Tag: Lamborghini

  • ಲ್ಯಾಂಬೋರ್ಗಿನಿ ಭೀಕರ ಅಪಘಾತ; ಫುಟ್ಬಾಲ್‌ ಆಟಗಾರ ಡಿಯೋಗೊ ದುರಂತ ಸಾವು

    ಲ್ಯಾಂಬೋರ್ಗಿನಿ ಭೀಕರ ಅಪಘಾತ; ಫುಟ್ಬಾಲ್‌ ಆಟಗಾರ ಡಿಯೋಗೊ ದುರಂತ ಸಾವು

    – ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಅಣ್ಣ-ತಮ್ಮ ದುರಂತ ಅಂತ್ಯ 

    ಮ್ಯಾಡ್ರಿಡ್: ಲಿವರ್‌ಪೂಲ್ ಫುಟ್ಬಾಲ್ (Liverpool footballer) ಆಟಗಾರ ಡಿಯೋಗೊ ಜೋಟಾ (Diogo Jota) ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    28 ವಯಸ್ಸಿನ ಜೋಟಾ ಅವರು ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಉತ್ತರ ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸ್ಪೇನ್‌ನ ಝಮೋರಾದಲ್ಲಿ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು, ಅಪಘಾತದ ನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

    ಜೋಟಾ ಅವರು ಲ್ಯಾಂಬೋರ್ಘಿನಿ ಚಾಲನೆ ಮಾಡುತ್ತಿದ್ದರು. ಪೋರ್ಚುಗೀಸ್ ಗಡಿಯ ಸಮೀಪವಿರುವ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಬಳಿ A-52 ನಲ್ಲಿ ಓವರ್‌ಟೇಕ್ ಮಾಡುವಾಗ ಕಾರಿನ ಟೈರ್‌ ಸ್ಫೋಟಗೊಂಡು ಅಪಘಾತ ಸಂಭವಿಸಿದೆ.

    ಡಿಯೋಗೊ ಅವರ ಕಿರಿಯ ಸಹೋದರ, ಪೋರ್ಚುಗೀಸ್ ತಂಡದ ಎಫ್‌ಸಿ ಪೆನಾಫಿಯೆಲ್ ಪರ ಆಡಿದ್ದ ಸಹ ವೃತ್ತಿಪರ ಫುಟ್‌ಬಾಲ್ ಆಟಗಾರ ಆಂಡ್ರೆ ಸಿಲ್ವಾ (26) ಕೂಡ ವಾಹನದಲ್ಲಿದ್ದರು. ಅಪಘಾತದಲ್ಲಿ ಇಬ್ಬರೂ ಸಹೋದರರು ಪ್ರಾಣ ಕಳೆದುಕೊಂಡಿದ್ದಾರೆ.

    ಜೂನ್ 22 ರಂದು ಪೋರ್ಟೊದಲ್ಲಿ ಜೋಟಾ, ರೂಟ್ ಕಾರ್ಡೋಸೊ ಅವರನ್ನು ವಿವಾಹವಾದ ಬೆನ್ನಲ್ಲೇ ಈ ಮಾರಕ ಅಪಘಾತ ಸಂಭವಿಸಿದೆ.

  • Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!

    Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!

    ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಡುರಸ್ತೆಯಲ್ಲಿಯೇ ವಾಹನಗಳು ಬೆಂಕಿಗಾಹುತಿಯಾಗುವ ಪ್ರಕರಣಗಳು ನಡೆಯುತ್ತವೆ. ಆದರೆ ಹೈದರಾಬಾದ್‌ನಲ್ಲಿ ಮಾತ್ರ 1 ಕೋಟಿ ಮೌಲ್ಯದ ಕಾರಿಗೆ ರಸ್ತೆಯಲ್ಲಿಯೇ ಬೆಂಕಿ ಹಚ್ಚಿರುವ ವಿಚಿತ್ರ ಘಟನೆಯೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಹೈದರಾಬಾದ್ ಹೊರವಲಯದ ಮಾಮಿಡಿಪಲ್ಲಿ ರಸ್ತೆಯಲ್ಲಿ ಏಪ್ರಿಲ್‌ 13 ರಂದು ನಡೆದಿದೆ. ಕಾರಿಗೆ ಬೆಂಕಿಯಿಟ್ಟವನನ್ನು ಅಹ್ಮದ್‌ ಎಂದು ಗುರುತಿಸಲಾಗಿದೆ. ಸದ್ಯ ರಸ್ತೆಯಲ್ಲಿಯೇ 1 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ (Lamborghini) ಸ್ಪೋರ್ಟ್ಸ್‌ ಕಾರು (Luxury Sports Car) ಧಗಧಗಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

    ನಡೆದಿದ್ದೇನು..?: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರ ನೀರಜ್ ಎಂಬಾತ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್‌ ಕಾರನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಅವರು ತನ್ನ ಸ್ನೇಹಿತರಿಗೆ ಖರೀದಿದಾರರನ್ನು ಹುಡುಕುವಂತೆ ಹೇಳಿದ್ದರು. ಅಂತೆಯೇ ಸ್ನೇಹಿತ ಅಮನ್‌ ಮತ್ತೊಬ್ಬ ಸ್ನೇಹಿತನ ಜೊತೆ ಅಹ್ಮದ್‌ ಎಂಬಾತನಿಗೆ ಕಾರು ತೋರಿಸಲೆಂದು ತೆಗೆದುಕೊಂಡು ಹೋಗಿದ್ದನು.

    ಕಾರು ಖರೀದಿ ವಿಚಾರದ ಕುರಿತು ಅಮನ್‌ ಸ್ನೇಹಿತ ಹಾಗೂ ಅಹ್ಮದ್ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಇಬ್ಬರ ನಡುವಿನ ಹಣದ ಚರ್ಚೆ ವಿಕೋಪಕ್ಕೆ ಹೋಗಿದೆ. ಆಗ ಇಬ್ಬರನ್ನು ಸಮಾಧಾನಪಡಿಸಲು ಅಮನ್ ಮುಂದಾಗಿದ್ದಾರೆ. ಆದರೆ‌ ಮಾತಿನ ಚಕಮಕಿ ತಾರಕ್ಕೇರಿ ಗುಂಪೊಂದು ಅಮನ್ ನನ್ನು ತಳ್ಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂಬುದಾಗಿ ಆರೋಪಿಸಲಾಗಿದೆ.

    ಸದ್ಯ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೀರಜ್ ಸ್ಥಳಿಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಫನ್ ವರ್ಲ್ಡ್ ಮಾಲೀಕನ ಪುತ್ರ ಸನ್ನಿ ಸಬರ್ ವಾಲ್ ರೇಸ್ ಮಾಡಿ, ಲ್ಯಾಂಬೋರ್ಗಿನಿ ಕಾರನ್ನು ಪೊಲೀಸ್ ಚೌಕಿಗೆ ಗುದ್ದಿಸಿದ್ದು ದೊಡ್ಡ ಸುದ್ದಿಯಾಗಿತ್ತು.

    ಸಿಟಿಒ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಗೆ ಸನ್ನಿ ಸಬರ್ ವಾಲ್ ತನ್ನ ಲ್ಯಾಂಬೋರ್ಗಿನಿ ಕಾರು ಗುದ್ದಿಸಿದ್ದ. ಆ ಬಳಿಕ ಸ್ಥಳದಲ್ಲೇ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದ ಸನ್ನಿ ಸಬರ್ ವಾಲ್‍ನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದರು. ಇದೀಗ ಅವತ್ತು ಅಪಘಾತ ಮಾಡಿದಾಗಿನ ವಿಡಿಯೋ ಲಭ್ಯವಾಗಿದೆ.

    ಮೂರು ಐಷಾರಾಮಿ ಕಾರುಗಳು ಸಿಗ್ನಲ್‍ನಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಬಂದು ನಿಂತಿವೆ. ಆಗ ಜೋರಾಗಿ ಹೋಗಿ ಕಾರ್ ಯೂಟರ್ನ್ ಮಾಡಿರುವ ಸನ್ನಿ ಸಬರ್ ವಾಲ್, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಎಲ್ಲಾ ದೃಶ್ಯಗಳು ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಕೊಹ್ಲಿ-ಧೋನಿಗಿಂತ ದುಬಾರಿ ಕಾರಿನ ಒಡೆಯರಾದ ಪಾಂಡ್ಯ ಬ್ರದರ್ಸ್

    ಕೊಹ್ಲಿ-ಧೋನಿಗಿಂತ ದುಬಾರಿ ಕಾರಿನ ಒಡೆಯರಾದ ಪಾಂಡ್ಯ ಬ್ರದರ್ಸ್

    ಮುಂಬೈ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಸಹೋದರರು ಮತ್ತೊಂದು ದುಬಾರಿ ಕಾರು ಖರೀದಿಸಿ, ಸುದ್ದಿಯಾಗಿದ್ದಾರೆ.

    ಕೆಲವು ತಿಂಗಳುಗಳ ಹಿಂದೆಯಷ್ಟೇ 2.19 ಕೋಟಿ ರೂ. ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯನ್ನು ಹಾರ್ದಿಕ್ ಪಾಂಡ್ಯ ತಮ್ಮದಾಗಿಸಿಕೊಂಡಿದ್ದರು. ಸದ್ಯ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಹಾಗೂ ವಿಂಡೀಸ್ ಪ್ರವಾಸದಿಂದ ವಾಪಸ್ ಆಗಿರುವ ಕೃನಾಲ್ ಪಾಂಡ್ಯ ಮುಂಬೈನಲ್ಲಿ ದುಬಾರಿ ಲ್ಯಾಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರನ್ನು ಖರೀದಿಸಿದ್ದಾರೆ.

    https://www.instagram.com/p/B1Oeo8PhO8_/?utm_source=ig_embed

    ಲಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರಿನ ಪ್ರಸ್ತುತ ಬೆಲೆಯು 3.73 ಕೋಟಿ ರೂ. (ಎಕ್ಸ್ ಶೋ ರೂಂ) ಆಗಿದೆ. ಪಾಂಡ್ಯ ಬ್ರದರ್ಸ್ ಸದ್ಯ ಇಂತಹದೊಂದು ದುಬಾರಿ ಮೌಲ್ಯದ ಕಾರಿನ ಒಡೆಯರಾಗಿದ್ದಾರೆ.

    ಕಾರು ಪ್ರಿಯರಾಗಿರುವ ಪಾಂಡ್ಯ ಬ್ರದರ್ಸ್ ಭಾರತ ತಂಡ ಪ್ರವೇಶಿಸುವ ಮುನ್ನ ಲೋನ್ ಮೂಲಕ ಕಾರು ಖರೀದಿಸಿದ್ದರು. ಆದರೆ ಐಪಿಎಲ್ ನಲ್ಲಿ ದುಬಾರಿ ಬೆಲೆ ಪಡೆದಿರುವ ಅವರಿಬ್ಬರು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಮಿಂಚುತ್ತಿದ್ದಾರೆ. ಇದೀಗ ಇವರ ಬಳಿ ದುಬಾರಿ ಕಾರುಗಳಾದ ಲ್ಯಾಂಡ್ ರೋವರ್, ರೇಂಜ್ ರೋವರ್, ಮರ್ಸಡೀಸ್ AMG g63, ಆಡಿ A6 ಕಾರುಗಳ ಜೊತೆಗೆ ಲ್ಯಾಂಬೋರ್ಗಿನಿ ಸೇರಿಕೊಂಡಿದೆ.

    https://www.instagram.com/p/B1OEwF4nMls/?utm_source=ig_embed

    ಕಾರಿನ ವಿಶೇಷತೆ ಏನು?:
    ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಂಬೋರ್ಗಿನಿ ಹುರಾಕನ್ ಇವಿಒ ಅನ್ನು ಬಿಡುಗಡೆ ಮಾಡಲಾಯಿತು. 0-100 ಕಿಮೀ ವೇಗ ಪಡೆಯಲು ಈ ಕಾರು ತೆಗೆದುಕೊಳ್ಳುವ ಸಮಯ ಕೇವಲ 2.9 ಸೆಕೆಂಡುಗಳು ಮಾತ್ರ.

    ಪಾಂಡ್ಯ ಬ್ರದರ್ಸ್ ಮಾತ್ರವಲ್ಲದೆ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ ಸೇರಿದಂತೆ ಹಲವು ಆಟಗಾರರು ದುಬಾರಿ ಕಾರುಗಳ ಕಲೆಕ್ಷನ್ ನಲ್ಲಿ ಮಂಚೂಣಿಯಲ್ಲಿದ್ದಾರೆ.

  • ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ನೀಡಿದ ಬೆಂಗ್ಳೂರು ಉದ್ಯಮಿ

    ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ನೀಡಿದ ಬೆಂಗ್ಳೂರು ಉದ್ಯಮಿ

    ಬೆಂಗಳೂರು: ನಮಗೆ ಇಷ್ಟವಾದವರಿಗೆ ಅವರಿಗೆ ಇಷ್ಟವಾದುದನ್ನು ಉಡುಗೊರೆಯಾಗಿ ನೀಡುವುದು ಒಂದು ಖುಷಿಯ ಸಂಗತಿ. ಅದರಂತೆ ಸಿಲಿಕಾನ್ ಸಿಟಿಯ ಉದ್ಯಮಿಯೊಬ್ಬರು ತಮ್ಮ ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಲಾ ಫೆಮ್ಮೆ ಎಂಬ ಕಂಪನಿಯ ಸಿಇಓ ನಿಲುಫರ್ ಶೆರಿಫ್ ಎಂಬವರು ಹೆಂಡತಿಗೆ ಇಷ್ಟವಾದ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಹಳದಿ ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದು. ಈ ವಿಡಿಯೋವನ್ನು ಆಟೊಮೊಬಿಲಿ ಅರ್ಡೆಂಟ್ ಎಂಬ ಕಂಪನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ.

    https://www.instagram.com/p/Byz77QqHHHF/?utm_source=ig_embed

    ಈ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಕಾರಿನ ಬೆಲೆ 4.80 ಕೋಟಿ ರೂ. ಆಗಿದ್ದು ಇದರ ಆರಂಭಿಕ ಮೌಲ್ಯವೇ 3 ಕೋಟಿ ಇದೆ. ಈ ಕಾರು ಹೆಚ್ಚು ದುಬಾರಿ ಇರುವ ಎಡಬ್ಲ್ಯುಡಿ ಮಾದರಿಯ ರೂಪಾಂತರವಾಗಿದ್ದು, ಗ್ರೌಂಡ್ ಕ್ಲಿಯರೆನ್ಸ್ ಅನ್ನು 45 ಎಂಎಂ ಹೆಚ್ಚಿಸುವಷ್ಟು ಸಾಮಥ್ರ್ಯ ಇರುವ ಸೂಪರ್ ಕಾರ್ ಆಗಿದೆ. ಕೇವಲ 3 ಸೆಕೆಂಡ್‍ಗಳಲ್ಲಿ ತನ್ನ ವೇಗವನ್ನು ಗಂಟೆಗೆ 100 ಕಿ.ಮೀ ಹೆಚ್ಚಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ.

    ಈ ಲ್ಯಾಂಬೋರ್ಗಿನಿ ಹರಾಕೆನ್ ಇಟಾಲಿಯನ್ ಕಾರು ಉತ್ಪಾದಕರಿಂದ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಲ್ಯಾಂಬೋರ್ಗಿನಿ ಕಂಪನಿಯಿಂದ ಇತ್ತೀಚೆಗೆ ಉರುಸ್ ಎಂಬ ಎಸ್‍ಯುವಿಯನ್ನು ಬಿಡುಗಡೆ ಮಾಡಿದ್ದು ಇದು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗಿದೆ.

    ಈ ರೀತಿಯ ಕಾರುಗಳನ್ನು ಉಡುಗೊರೆಯಾಗಿ ಕೊಡುವುದು ಭಾರತದಲ್ಲಿ ಅಪರೂಪ. ಇದಕ್ಕೂ ಮುಂಚೆ ಯುಎಇ ಮೂಲದ ಎನ್‍ಆರ್‍ಐ ಸೋಹನ್ ರಾಯ್ ಎಂಬುವವರು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಪತ್ನಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ಅವರ ಪತ್ನಿ ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ ವಿಶ್ವದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

    ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಲಾದ 11 ಮಿಲಿಯನ್ ಯುರೋ (85.65 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ.

    2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಎಂಬ ಕಾರನ್ನು ಖರೀದಿ ಮಾಡಿದ್ದಾರೆ. ಈಗ ಈ ಕಾರನ್ನು ಖರೀದಿ ಮಾಡಿದರೂ ಕಾರಿನ ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವುದರಿಂದ 2021ಕ್ಕೆ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

    ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಈ ಒಂದು ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 260 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯ ಹೊಂದಿದೆ.

    ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರಗಳನ್ನು ಹೊಂದಿದ್ದಾರೆ.

  • ಮತ್ತೊಂದು ಲ್ಯಾಂಬೋರ್ಗಿನಿ ಕಾರಿಗೆ ಒಡೆಯನಾದ ದರ್ಶನ್

    ಮತ್ತೊಂದು ಲ್ಯಾಂಬೋರ್ಗಿನಿ ಕಾರಿಗೆ ಒಡೆಯನಾದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಈಗಾಗಲೇ ಒಂದು ಲ್ಯಾಂಬೋರ್ಗಿನಿ ಕಾರಿದ್ದು, ಈಗ ಮತ್ತೊಂದು ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಒಡೆಯರಾಗಿದ್ದಾರೆ.

    ಇತ್ತೀಚೆಗೆ ದರ್ಶನ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ದರ್ಶನ್ ಅವರ ಬಳಿ ಈಗಾಗಲೇ 5 ಕೋಟಿ ರೂ.ಯ ಲ್ಯಾಂಬೋರ್ಗಿನಿ ಕಾರಿದೆ. ಈಗ ಅವರು ಮತ್ತೊಂದು ಲ್ಯಾಂಬೋರ್ಗಿನಿ ಕಾರಿಗೆ ಒಡೆಯರಾಗಿದ್ದಾರೆ.

    ದರ್ಶನ್ ಅವರು ಮೂರುವರೆ ಕೋಟಿ ರೂ.ಯ ಹಳದಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. ದರ್ಶನ್ ಅವರು ಕಾರು ಖರೀದಿಸಿರುವ ಫೋಟೋ ಹಾಗೂ ವಿಡಿಯೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ದರ್ಶನ್ ಸಂಕ್ರಾಂತಿ ಹಬ್ಬದ ದಿನದಂದು ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಖರೀದಿಸಿದ್ದರು. ಮೈಸೂರಿಗೆ ಆ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.

    ದರ್ಶನ್ ಅವರಿಗೆ ಕಾರ್ ಮೇಲೆ ಹೆಚ್ಚು ಪ್ರೀತಿ. ಈಗಾಗಲೇ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್, ಲ್ಯಾಂಬೋರ್ಗಿನಿ ಕಾರುಗಳಿದೆ. ಈಗ ಈ ಕಾರಿನ ಲಿಸ್ಟ್ ನಲ್ಲಿ ಲ್ಯಾಂಬೋರ್ಗಿನಿ ಉರುಸ್ ಕಾರು ಸೇರ್ಪಡೆಯಾಗಿದೆ.

  • ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಪಣಜಿ: ಇಟಲಿಯ ಲಂಬೋರ್ಗಿನಿ ಹುರಕೇನ್ ಹಾಗೂ ಮಿಗ್ 29ಕೆ ಫೈಟರ್ ನಡುವೆ ಗೋವಾ ವಿಮಾನ ನಿಲ್ದಾಣದಲ್ಲಿ ರೇಸ್ ನಡೆದಿದೆ.

    ಲಂಬೋರ್ಗಿನಿ ವೇಗವಾಗಿ ಚಲಿಸಿದರೂ ಮಿಗ್ ವಿಮಾನವನ್ನು ಸೋಲಿಸಲು ಆಗಲಿಲ್ಲ. ಆರಂಭದಲ್ಲಿ ನಿಧಾನವಾಗಿ ಬಳಿಕ ವೇಗವನ್ನು ಹೆಚ್ಚಿಸಿಕೊಂಡ ವಿಮಾನ ಕೊನೆಗೆ ಲಂಬ ಕೋನದಲ್ಲಿ ಟೇಕಾಫ್ ಆಗಿದೆ. ಭಾರತೀಯ ನೌಕಾಪಡೆಯಿಂದ ಯುವ ಜನರನ್ನು ಭಾರತೀಯ ಸೇನೆ ಸೇರಲು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ನೌಕಾ ಸೇನೆಯಲ್ಲಿ 735 ಪೈಲಟ್ ಗಳ ನೇಮಕಕ್ಕೆ ಅನುಮತಿ ಸಿಕ್ಕಿದ್ದು, 91 ಹುದ್ದೆ ಖಾಲಿಯಿದೆ. ಭಾರತೀಯ ಸೇನೆಯ 794 ಹುದ್ದೆ ಭರ್ತಿಗೆ ಅನುಮತಿ ಸಿಕ್ಕಿದ್ದರೂ 192 ಹುದ್ದೆಗಳು ಖಾಲಿಯಿದೆ.

    https://www.youtube.com/watch?v=mRr1v4XFZU0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

    ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

    ಬೆಂಗಳೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಯಾಂಡಲ್‍ವುಡ್ ನ ದುಬಾರಿ ನಟ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಾರೆ. ಆದರೆ ಈಗ ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸುವ ಮೂಲಕ ಅದನ್ನು ನಿರೂಪಿಸಿದ್ದಾರೆ.

    ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನ್ ಅವರ ಜೊತೆಯಲ್ಲಿ ಅವರ ಹಲವು ಗೆಳೆಯರು ಸಾಥ್ ನೀಡಿದ್ದಾರೆ.

    ದರ್ಶನ್ ಅವರಿಗೆ ಹೇಳಿ ಕೇಳಿ ಕಾರ್ ಮೇಲೆ ಹೆಚ್ಚು ಪ್ರೀತಿ. ಈಗಾಗಲೇ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್, ಫಾರ್ಚ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಆದರೆ ಇದೊಂದು ಲ್ಯಾಂಬೋರ್ಗಿನಿ ಕಾರ್ ಮಾತ್ರ ಇರಲಿಲ್ಲ. ಅಷ್ಟಕ್ಕೂ ನ್ಯೂ ಎಡಿಷನ್ ನ ಈ ಲ್ಯಾಂಬೋರ್ಗಿನಿ ಕಾರ್ ಬೆಲೆ ಬರೋಬ್ಬರಿ 5 ಕೋಟಿ ರೂ. ಎನ್ನಲಾಗಿದೆ.

    ಬೆಂಗಳೂರಿನಲ್ಲಂತೂ ಕೆಲವೇ ಕೆಲವು ಗಣ್ಯರ ಬಳಿ ಈ ಕಾರ್ ಇದ್ದು, ಸ್ಯಾಂಡಲ್ ವುಡ್‍ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ದರ್ಶನ್ ಒಡೆಯರಾಗಿದ್ದಾರೆ. ಈ ಹಿಂದೆ ದರ್ಶನ್ ತಮ್ಮ ಬಳಿಯಿದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದರು.

    ಸದ್ಯ ದರ್ಶನ್ ಈಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾಂಗಣವಿರುವ ಈ ಸಿನಿಮಾ ಬಿಡುಗಡೆಗಾಗಿ ಕರ್ನಾಟಕ ಜನತೆ ಕಾಯುತ್ತಿದ್ದಾರೆ.

  • ವಿಡಿಯೋ: ಲ್ಯಾಂಬೋರ್ಗಿನಿಯನ್ನ ಓವರ್ ಟೇಕ್ ಮಾಡಿದ ಸ್ವಿಫ್ಟ್- ಭೀಕರ ಅಪಘಾತವಾಗಿ ಇಕೋ ಕಾರ್ ಚಾಲಕ ಸಾವು

    ವಿಡಿಯೋ: ಲ್ಯಾಂಬೋರ್ಗಿನಿಯನ್ನ ಓವರ್ ಟೇಕ್ ಮಾಡಿದ ಸ್ವಿಫ್ಟ್- ಭೀಕರ ಅಪಘಾತವಾಗಿ ಇಕೋ ಕಾರ್ ಚಾಲಕ ಸಾವು

    ನವದೆಹಲಿ: ಸ್ವಿಫ್ಟ್ ಡಿಸೈರ್ ಕಾರ್‍ವೊಂದು ಲ್ಯಾಂಬೋರ್ಗಿನಿ ಕಾರನ್ನ ಓವರ್ ಟೇಕ್ ಮಾಡಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿ ಸಮೀಪದ ನೊಯ್ಡಾ ಸೆಕ್ಟರ್ 135 ಬಳಿ ನಡೆದಿದೆ.

    ಮಾರುತಿ ಇಕೋ ವಾಹನವನ್ನ ಚಾಲನೆ ಮಾಡುತ್ತಿದ್ದ 20 ವರ್ಷದ ಯುವಕ ಮೃತ ದುರ್ದೈವಿ. ಅಪಘಾತದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಯಾಗಿದೆ. ಮಾರುತಿ ಸ್ವಿಫ್ಟ್ ಡಿಸೈರ್, ಲ್ಯಾಂಬೋರ್ಗಿನಿ ಹಾಗೂ ಇಕೋ ಕಾರು ಒಂದರ ಪಕ್ಕ ಒಂದು ಹೋಗುತ್ತಿದ್ದವು. ಮೊದಲಿಗೆ ಸ್ವಿಫ್ಟ್ ಕಾರು ಲ್ಯಾಂಬೋರ್ಗಿನಿಯನ್ನ ಓವರ್ ಟೇಕ್ ಮಾಡಿ ಮುಂದೆ ಹೋಗಿದೆ. ಈ ವೇಳೆ ಲ್ಯಾಂಬೋರ್ಗಿನಿ ಚಾಲಕ ಸ್ವಲ್ಪ ಎಡಕ್ಕೆ ತಿರುಗಿದ್ದು, ಎಡ ಭಾಗದಲ್ಲಿ ಬರುತ್ತಿದ್ದ ಇಕೋ ಕಾರ್‍ಗೆ ಗುದ್ದಿದೆ. ಪರಿಣಾಮ ಇಕೋ ಕಾರು ಪಲ್ಟಿಯಾಗಿ ಪಕ್ಕದ ಕಾಡು ಪ್ರದೇಶದತ್ತ ಉರುಳಿಕೊಂಡು ಹೋಗಿದೆ.

    ಮಾರುತಿ ಇಕೋದಲ್ಲಿದ್ದ ಯುವಕನನ್ನು ದೆಹಲಿಯ ಮಂಡವಾಲಿ ನಿವಾಸಿ ಅರ್ಶದ್ ಅಹ್ಮದ್ ಎಂದು ಗುರುತಿಸಲಾಗಿದೆ. ಅರ್ಶದ್ ಅವರನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಸ್ವಿಫ್ಟ್ ಡಿಸೈರ್‍ನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಲ್ಯಾಂಬೋರ್ಗಿನಿಯ ಚಾಲಕನನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.