Tag: Lalu Prasad Yadav

  • ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ಪಾಟ್ನಾ: ಬಿಹಾರದಲ್ಲಿ (Bihar) ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಇನ್ನೂ ಅಂತಿಮಗೊಳ್ಳದ ಕಾರಣ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ (Lalu Prasad Yadav) ಕರೆ ಮಾಡಿ ನೇರವಾಗಿ ಮಾತನಾಡಿದ್ದಾರೆ.

    ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಶನಿವಾರ ಡೆಡ್‌ಲೈನ್‌ ಆಗಿದೆ. ಒಂದು ದಿನ ಮಾತ್ರ ಬಾಕಿ ಇದ್ದರೂ ಮೈತ್ರಿ ಪಕ್ಷದಲ್ಲಿ ಒಮ್ಮತ ಮೂಡಿಲ್ಲ.

    2020 ರಲ್ಲಿ ಕಾಂಗ್ರೆಸ್‌ (Congress) ಸ್ಪರ್ಧಿಸಿದ 70 ಕ್ಷೇತ್ರಗಳಲ್ಲಿ ಕೇವಲ 19 ರಲ್ಲಿ ಮಾತ್ರ ಜಯಗಳಿಸಿತ್ತು. ಹೀಗಿದ್ದರೂ ಕಾಂಗ್ರೆಸ್‌ ಅಷ್ಟೇ ಸ್ಥಾನಗಳನ್ನು ನೀಡುವಂತೆ ಕೇಳಿದ್ದು ಆರ್‌ಜೆಡಿ (RJD) ಸೋತ ಕ್ಷೇತ್ರಗಳನ್ನು ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಸೀಟು ಹಂಚಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

    ಮಾಧ್ಯಮಗಳು ವರದಿ ಮಾಡಿದಂತೆ ಕಳೆದ ಬಾರಿ ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೆ ಈ ಬಾರಿ 135 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಕಳೆದ ಬಾರಿ 70 ರಲ್ಲಿ ಕಣಕ್ಕೆ ಇಳಿದಿದ್ದರೆ ಈ ಬಾರಿ 60 ಕ್ಷೇತ್ರ ಪಡೆಯಬಹುದು ಎನ್ನಲಾಗುತ್ತಿದೆ.

    ಮುಖೇಶ್ ಸಹಾನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ 16 ಸ್ಥಾನಗಳು ಸಿಗುವ ಸಾಧ್ಯತೆಯಿದೆ. ತೇಜಸ್ವಿ ಯಾದವ್ ಅವರ ಆಡಳಿತದಲ್ಲಿ ಉಪಮುಖ್ಯಮಂತ್ರಿಯಾಗುವುದಾಗಿ ಬಹಿರಂಗವಾಗಿ ಹೇಳಿಕೊಳ್ಳುವ ಸಹಾನಿ 30 ರಿಂದ 40 ಸ್ಥಾನಗಳನ್ನು ಕೇಳುತ್ತಿದ್ದಾರೆ.

  • ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

    ನೀವು ಪಿತೂರಿಯಲ್ಲಿ ತೊಡಗಿದ್ದೀರಿ – ರೈಲ್ವೇ ಹಗರಣದಲ್ಲಿ ಲಾಲು, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

    ನವದೆಹಲಿ: ಬಿಹಾರ ಚುನಾವಣೆ (Bihar Election) ದಿನಾಂಕ ಘೋಷಣೆಯಾಗಿರುವಾಗಲೇ ಆರ್‌ಜೆಡಿಗೆ (RJD) ಬಿಗ್‌ ಶಾಕ್‌ ಸಿಕ್ಕಿದೆ. ಭಾರತೀಯ ರೈಲ್ವೇಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ (Lalu Prasad Yadav), ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ (Rabri Devi) ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tejashwi Yadav) ವಿರುದ್ಧ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿದೆ.

    ವಿಶೇಷ ನ್ಯಾಯಾಧೀಶ (ಭ್ರಷ್ಟಾಚಾರ ತಡೆ ಕಾಯ್ದೆ) ವಿಶಾಲ್ ಗೊಗ್ನೆ ಅವರು, ರಾಬ್ಡಿ ದೇವಿ ಹಾಗೂ ತೇಜಸ್ವಿ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಮೋಸದ ಆರೋಪ ಹೊರಿಸಿದ್ದಾರೆ. ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವಾಗ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

    ನ್ಯಾಯಾಲಯವು ಲಾಲು ಪ್ರಸಾದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ಆರೋಪಗಳನ್ನು ಹೊರಿಸಿದೆ. ದೋಷಾರೋಪ ನಿಗದಿ ಮಾಡುವ ಆದೇಶದ ವೇಳೆ ಮೂವರು ಖುದ್ದಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಮೂವರಿಗೂ ಕೋರ್ಟ್ ಸೆಪ್ಟೆಂಬರ್ 24ರಂದೇ ಸೂಚಿಸಿತ್ತು. ಇದನ್ನೂ ಓದಿ:  ಬಿಹಾರದಲ್ಲಿ ಸೀಟು ಹಂಚಿಕೆ ಇತ್ಯರ್ಥ – ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ

    ನೀವು ಪಿತೂರಿಯಲ್ಲಿ ತೊಡಗಿದ್ದೀರಿ ಮತ್ತು ಸರ್ಕಾರದ ಸೇವಕರಾಗಿ ನಿಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನೀವು ಟೆಂಡರ್ ಮೇಲೆ ಪ್ರಭಾವ ಬೀರಿದ್ದೀರಿ ಮತ್ತು ಅರ್ಹತಾ ಷರತ್ತುಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಿದ್ದೀರಿ ಎಂದು ಕೋರ್ಟ್‌ ಹೇಳಿದೆ.

    ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಏನಿದೆ?
    2004 ಮತ್ತು 2014 ರ ನಡುವೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಪುರಿ ಮತ್ತು ರಾಂಚಿಯಲ್ಲಿರುವ ಭಾರತೀಯ ರೈಲ್ವೆಯ ಹೋಟೆಲ್‌ಗಳನ್ನು ಮೊದಲು IRCTCಗೆ ವರ್ಗಾಯಿಸಲಾಗಿತ್ತು. ನಂತರ ಅದರ ಕಾರ್ಯಾಚರಣೆ, ನಿರ್ವಹಣೆ ಮತ್ತು ನಿರ್ವಹಣೆಗಾಗಿ ಬಿಹಾರದ ಪಾಟ್ನಾದಲ್ಲಿರುವ ಸುಜಾತಾ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆಗೆ ನೀಡಲಾಯಿತು.

    ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಮಾಡಲಾಗಿದೆ. ಖಾಸಗಿ ಸಂಸ್ಥೆಯಾದ ಸುಜಾತಾ ಹೋಟೆಲ್ಸ್‌ಗೆ ಸಹಾಯ ಮಾಡಲು ಷರತ್ತುಗಳನ್ನು ಬದಲಾಯಿಸಲಾಗಿದೆ. ಇದನ್ನೂ ಓದಿ:  ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಚಾರ್ಜ್‌ಶೀಟ್‌ನಲ್ಲಿ ಐಆರ್‌ಸಿಟಿಸಿಯ ಗ್ರೂಪ್ ಜನರಲ್ ಮ್ಯಾನೇಜರ್‌ಗಳಾದ ವಿ ಕೆ ಅಸ್ತಾನಾ ಮತ್ತು ಆರ್ ಕೆ ಗೋಯಲ್, ಮತ್ತು ಸುಜಾತಾ ಹೋಟೆಲ್ಸ್‌ನ ನಿರ್ದೇಶಕರು ಮತ್ತು ಚಾಣಕ್ಯ ಹೋಟೆಲ್‌ನ ಮಾಲೀಕರಾದ ವಿಜಯ್ ಕೊಚ್ಚರ್, ವಿನಯ್ ಕೊಚ್ಚರ್ ಅವರ ಹೆಸರುಗಳಿವೆ.

    ಈಗ ಲಾರಾ ಪ್ರಾಜೆಕ್ಟ್ಸ್ ಎಂದು ಕರೆಯಲ್ಪಡುವ ಡಿಲೈಟ್ ಮಾರ್ಕೆಟಿಂಗ್ ಕಂಪನಿ ಮತ್ತು ಸುಜಾತಾ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಸಂಸ್ಥೆಗಳಾಗಿ ಹೆಸರಿಸಲಾಗಿದೆ.

  • ನೈತಿಕ ಮೌಲ್ಯಗಳ ಕೊರತೆ – ಆರ್‌ಜೆಡಿಯಿಂದ ಪುತ್ರ ತೇಜ್ ಪ್ರತಾಪ್‌ರನ್ನ ಹೊರದಬ್ಬಿದ ಲಾಲು ಪ್ರಸಾದ್‌ ಯಾದವ್‌

    ನೈತಿಕ ಮೌಲ್ಯಗಳ ಕೊರತೆ – ಆರ್‌ಜೆಡಿಯಿಂದ ಪುತ್ರ ತೇಜ್ ಪ್ರತಾಪ್‌ರನ್ನ ಹೊರದಬ್ಬಿದ ಲಾಲು ಪ್ರಸಾದ್‌ ಯಾದವ್‌

    ಪಾಟ್ನಾ: ಮಹತ್ವದ ಬೆಳವಣಿಗೆಯೊಂದರಲ್ಲಿ ʻನೈತಿಕ ಮೌಲ್ಯಗಳ ಕೊರತೆʼ ಆರೋಪದ ಮೇಲೆ, ರಾಷ್ಟ್ರೀಯ ಜನತಾ ದಳ (RJD)ದ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ (Lalu Prasad Yadav) ಅವರು, ತಮ್ಮ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (Tej Pratap Yadav) ಅವರನ್ನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ ಅಲ್ಲದೇ ಕುಟುಂಬದಿಂದಲೂ ಹೊರಹಾಕಿದ್ದಾರೆ.

    ಈ ಕುರಿತು ಲಾಲು ಪ್ರಸಾದ್‌ ಯಾದವ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತೇಜ್‌ ಪ್ರತಾಪ್‌ ಅವರ ಸಹೋದರ ತೇಜಸ್ವಿ ಯಾದವ್‌, ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನ ನಮ್ಮ ತಂದೆಯವರು ರವಾನಿಸಿದ್ದಾರೆ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್

    ಮುಂದುವರೆದು, ರಾಷ್ಟ್ರೀಯ ಜನತಾದಳ ಪಕ್ಷ ಬಿಹಾರದ ಜನರಿಗೆ ಸಮರ್ಪಿತವಾಗಿದೆ. ನನ್ನ ಅಣ್ಣನ ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನವು ವಿಭಿನ್ನವಾಗಿದೆ. ಅವರು ತಮ್ಮ ವೈಯಕ್ತಿಕ ನಿರ್ಧಾರಗಳನ್ನ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ವಯಸ್ಕರಾಗಿದ್ದು, ನಿರ್ಧಾರಗಳನ್ನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಅಂತ ತೇಜಸ್ವಿ ಯಾದವ್‌ (Tejashwi Yadav) ಹೇಳಿದ್ದಾರೆ. ಇದನ್ನೂ ಓದಿ: ಟೆಸ್ಟ್‌ ನಿವೃತ್ತಿ ಬಳಿಕ ಟೆಂಪಲ್‌ ರನ್‌; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ

    ಅಲ್ಲದೇ ತೇಜ್‌ ಪ್ರತಾಪ್‌ ಯಾದವ್‌ರನ್ನ ಕುಟುಂಬದಿಂದಲೂ ಹೊರಹಾಕಲಾಗಿದೆ. ಅಣ್ಣ ತಮ್ಮ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಕುಟುಂಬದಲ್ಲಿ ಯಾರನ್ನೂ ತಮ್ಮವರೆಂದು ಪರಿಗಣಿಸುವುದಿಲ್ಲ. ಹೀಗಾಗಿ ಸಹೋದರನನ್ನು ಕುಟುಂಬದಿಂದಲೂ ಹೊರಹಾಕುವ ನಿರ್ಧಾರವನ್ನ ನಮ್ಮ ತಂದೆ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್

    ಇನ್ನೂ ಸಾಮಾಜಿಕ ಜಾಲತಾಣದಲ್ಲಿನ 1 ಪೋಸ್ಟ್‌ನಿಂದ ಉಂಟಾದ ಗದ್ದಲ, ತೇಜ್‌ ಪ್ರತಾಪ್‌ ಅವರ ಉಚ್ಚಾಟನೆಗೆ ಕಾರಣ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ತೇಜ್‌ ಪ್ರತಾಪ್‌ ಒಂದು ದಿನದ ಹಿಂದೆಯಷ್ಟೇ 12 ವರ್ಷಗಳ ಪ್ರೀತಿ ಬಹಿರಂಗಪಡಿಸಿದ್ದರು. ಈ ಬೆನ್ನಲ್ಲೇ ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ.

  • ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

    ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

    – ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ

    ಪಾಟ್ನಾ: ಆರೋಗ್ಯ ಹದಗೆಟ್ಟ ಕಾರಣ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಬಿಹಾರದ ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದೆಹಲಿಗೆ ತೆರಳುವ ಸಲುವಾಗಿ ಸಂಜೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಲಾಲೂ ಪ್ರಸಾದ್ ಯಾದವ್ ಅವರ ಬ್ಲಡ್ ಶುಗರ್ ಲೆವೆಲ್ (Blood Sugar Level) ಏರಿಕೆಯಾಗಿ ಆರೋಗ್ಯ ಹದಗೆಟ್ಟಿದೆ. ಏರ್ ಅಂಬುಲೆನ್ಸ್ ಮೂಲಕ ಲಾಲೂ ಪ್ರಸಾದ್ ಅವರನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್‌ ವಕ್ಫ್‌ಗೆ ನೀಡ್ತಿತ್ತು: ಕಿರಣ್‌ ರಿಜಿಜು

    ಬಿಹಾರದ 13 ಕೋಟಿ ಜನರ ಆಶೀರ್ವಾದ ಲಾಲೂ ಪ್ರಸಾದ್ ಯಾದವ್ ಅವರೊಂದಿಗಿದೆ. ಚಿಂತಿಸುವ ಅಗತ್ಯವಿಲ್ಲ ಎಂದು ಆರ್‌ಜೆಡಿ ನಾಯಕ ಭಾಯಿ ವೀರೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿ ಮೇಲೆ ರೇಪ್‌ ಆರೋಪ – ಶಿಕ್ಷಕಿ ಬಂಧನ

    ಕಳೆದ ವರ್ಷ ಲಾಲೂ ಪ್ರಸಾದ್ ಅವರನ್ನು ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಪಡಿಸಲಾಯಿತು. ಅವರ ಆರೋಗ್ಯ ಹದಗೆಟ್ಟ ಬಳಿಕ ಜುಲೈ 2024ರಲ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಲಾಲೂ ಪ್ರಸಾದ್ ದಾಖಲಾಗಿದ್ದರು. ಡಿಸೆಂಬರ್ 2022ರಲ್ಲಿ ಸಿಂಗಾಪುರದಲ್ಲಿ ಲಾಲೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಕಿರಿಯ ಮಗಳು ರೋಹಿಣಿ ಆಚಾರ್ಯ ತಮ್ಮ ಮೂತ್ರಪಿಂಡವನ್ನು ತಂದೆಗೆ ದಾನ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ: ಆರ್.ವಿ.ದೇಶಪಾಂಡೆ

  • ಪ್ರಾಣಿಗಳ ಮೇವು ತಿಂದವರು ರೈತರ ಕಲ್ಯಾಣದ ಬಗ್ಗೆ ಯೋಚಿಸಲ್ಲ: ಲಾಲು ವಿರುದ್ಧ ಮೋದಿ ವ್ಯಂಗ್ಯ

    ಪ್ರಾಣಿಗಳ ಮೇವು ತಿಂದವರು ರೈತರ ಕಲ್ಯಾಣದ ಬಗ್ಗೆ ಯೋಚಿಸಲ್ಲ: ಲಾಲು ವಿರುದ್ಧ ಮೋದಿ ವ್ಯಂಗ್ಯ

    – ಜಂಗಲ್‌ ರಾಜ್ಯದವ್ರು ಮಹಾಕುಂಭ ಮೇಳ ಟೀಕಿಸ್ತಾರೆ

    ಪಾಟ್ನಾ: ಬಿಹಾರದ (Bihar) ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav) ವಿರುದ್ಧ‌ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಪ್ರಾಣಿಗಳಿಗೆ ಮೀಸಲಾದ ಮೇವು ತಿಂದವರು ರೈತರ ಕಲ್ಯಾಣದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಬಿಹಾರದ ಭಾಗಲ್ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮಹಾಕುಂಭ ಮೇಳ ಕುರಿತು ಬಿಜೆಪಿ ವಿರುದ್ಧ ಆರ್‌ಜೆಡಿ ನಾಯಕರ ಟೀಕೆಗಳನ್ನು ಉಲ್ಲೇಖಿಸಿ, ಜಂಗಲ್‌ ರಾಜ್ಯದವ್ರು ನಮ್ಮ ಪರಂಪರೆ ಮತ್ತು ನಂಬಿಕೆಯನ್ನು ದ್ವೇಷಿಸುತ್ತಾರೆ. ಯುರೋಪಿನ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಜನರು ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಂತಹ ಪವಿತ್ರ ಆಚರಣೆಯನ್ನು ಟೀಕಿಸುತ್ತಿದ್ದಾರೆ. ರಾಮ ಮಂದಿರವನ್ನು ವಿರೋಧಿಸುವವರು ಮಹಾ ಕುಂಭದ ಬಗ್ಗೆ ಅಪಪ್ರಚಾರ ಮಾಡಲು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿ ಕೆಟ್ಟದಾಗಿ ಮಾತನಾಡುವವರನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

    ಕೇಂದ್ರ ಮತ್ತು ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಯಾವಾಗಲೂ ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಈ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೆ, ದೇಶಾದ್ಯಂತ ನನ್ನ ರೈತ ಸಹೋದರ ಸಹೋದರಿಯರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಪಡೆಯುತ್ತಿರಲಿಲ್ಲ. ಸರ್ಕಾರದ ಪ್ರಯತ್ನಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಕೃಷಿ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ ಎಂದಿದ್ದಾರೆ.

    ನಮ್ಮ ಸರ್ಕಾರದ ಅವಧಿಯಲ್ಲಿ ಹಲವಾರು ಕೃಷಿ ಉತ್ಪನ್ನಗಳನ್ನು ಮೊದಲ ಬಾರಿಗೆ ರಫ್ತು ಮಾಡಲಾಗಿದೆ. ಈಗ, ಬಿಹಾರದ ಮಖಾನಾ (ಫಾಕ್ಸ್‌ನಟ್) ಆ ಅವಕಾಶ ಸಿಕ್ಕಿದೆ. ಇದು ಜಾಗತಿಕ ಮಾರುಕಟ್ಟೆಗಳನ್ನು ತಲುಪಬೇಕಾದ ಸೂಪರ್‌ಫುಡ್ ಆಗಿದೆ. ಈ ವರ್ಷದ ಬಜೆಟ್‌ನಲ್ಲಿ, ಸರ್ಕಾರವು ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಅದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದಿದ್ದಾರೆ.

  • ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಇಂಡಿಯಾ) ಮರಳಲು ಬಯಸಿದರೆ ಅವರಿಗೆ ಒಕ್ಕೂಟದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಹೇಳಿಕೆ ನೀಡಿದ್ದಾರೆ. ನಾಯಕತ್ವಕ್ಕಾಗಿ ಒಕ್ಕೂಟದಲ್ಲಿ ಒಳಜಗಳ ನಡೆಯುತ್ತಿರುವ ಹೊತ್ತಲ್ಲಿ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

    ಮಂಗಳವಾರ ಆರ್‌ಜೆಡಿ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಜನ್ಮದಿನವಾಗಿತ್ತು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಜನ್ಮದಿನದಂದು ಆಯೋಜಿಸಲಾದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪತ್ರಕರ್ತರು ಸಿಎಂ ನಿತೀಶ್ ಕುಮಾರ್ ಮರಳುವ ಬಗ್ಗೆ ಕೇಳಿದಾಗ ಬಾಗಿಲು ಸದಾ ತೆರೆದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್ ಕಾನೂನು ರದ್ದಾಗೋವರೆಗೂ ಹೋರಾಟ: ಯತ್ನಾಳ್

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರಿಗಾಗಿ ಒಕ್ಕೂಟದ ಬಾಗಿಲು ತೆರೆದಿದೆ. ಅವರು ಒಗ್ಗೂಡಿ ಕೆಲಸ ಮಾಡಲಿ, ಮಹಾಮೈತ್ರಿಯೊಂದಿಗೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಈ ಹೇಳಿಕೆ ರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಎನ್‌ಡಿಎ ಪಾಳಯದ ಚಡಪಡಿಕೆಯನ್ನೂ ಹೆಚ್ಚಿಸಿದೆ. ಇದನ್ನೂ ಓದಿ: ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಘೋಷಣೆ

    ಕೆಲ ದಿನಗಳ ಹಿಂದೆಯಷ್ಟೇ ಮಾತನಾಡಿದ್ದ ಲಾಲೂ ಪುತ್ರ ಮಾಜಿ ಡಿಸಿಎಂ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರು ಈಗ ಸುಸ್ತಾಗಿದ್ದಾರೆ. ಅವರಿಗೆ ಮಹಾಮೈತ್ರಿಕೂಟದ ಬಾಗಿಲು ಮುಚ್ಚಿದೆ. ಆದರೆ ಸಿಎಂ ನಿತೀಶ್ ಕುಮಾರ್ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೆ ಅದನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಇದಾದ ಬಳಿಕ ಲಾಲೂ ಪ್ರಸಾದ್ ಅವರ ಈ ಹೇಳಿಕೆ ಎಲ್ಲರನ್ನೂ ಅಚ್ಚರಿಪಡಿಸಿದೆ. ಇದನ್ನೂ ಓದಿ: ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟ – ಜೆಡಿಎಸ್‌ ಹಿರಿಯ ನಾಯಕರ ಅಸಮಾಧಾನ

  • ಉದ್ಯೋಗಕ್ಕಾಗಿ ಭೂಮಿ ಪ್ರಕರಣ – ಮಾಜಿ ಸಿಎಂ ಲಾಲು ಪ್ರಸಾದ್, ಇಬ್ಬರು ಪುತ್ರರಿಗೆ ಜಾಮೀನು

    ಉದ್ಯೋಗಕ್ಕಾಗಿ ಭೂಮಿ ಪ್ರಕರಣ – ಮಾಜಿ ಸಿಎಂ ಲಾಲು ಪ್ರಸಾದ್, ಇಬ್ಬರು ಪುತ್ರರಿಗೆ ಜಾಮೀನು

    ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ (Land For Job Case) ಆರ್‌ಜೆಡಿ (RJD) ಮುಖ್ಯಸ್ಥ ಮತ್ತು ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಅವರ ಪುತ್ರರಾದ ತೇಜಸ್ವಿ ಯಾದವ್ (Tejashwi Yadav), ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಜಾಮೀನು (Bail) ನೀಡಿದೆ.

    ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ತಲಾ 1 ಲಕ್ಷ ರೂ. ಬಾಂಡ್‌ಗಳ ಮೇಲೆ ಜಾಮೀನು ಮಂಜೂರು ಮಾಡಿದರು. ಎಲ್ಲಾ ಮೂವರು ಆರೋಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಏರಿದ ಚಿರತೆ

    ಪ್ರಕರಣದ ವಿಚಾರಣೆ ಹಿನ್ನೆಲೆ ಆರೋಪಿಗಳು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾಗಿದ್ದರು. ಇದಕ್ಕೂ ಮುನ್ನ ಅವರ ವಿರುದ್ಧದ ಪೂರಕ ಆರೋಪಪಟ್ಟಿಯನ್ನು ಆಧರಿಸಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅಂತಿಮ ವರದಿಯನ್ನು ಆಗಸ್ಟ್ 6 ರಂದು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ಕುರ್ಚಿ ಕಾದಾಟ ಮಧ್ಯೆ ಸತೀಶ್ ಜಾರಕಿಹೊಳಿಯನ್ನು ಭೇಟಿಯಾದ ವಿಜಯೇಂದ್ರ

    2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಮಧ್ಯಪ್ರದೇಶದ ಜಬಲ್‌ಪುರ ಮೂಲದ ರೈಲ್ವೆಯ ಪಶ್ಚಿಮ ಮಧ್ಯವಲಯದಲ್ಲಿ ಗ್ರೂಪ್-ಡಿ ಉದ್ಯೋಗಗಳಿಗೆ ಜನರನ್ನು ನೇಮಿಸಿದರು. ಇದಕ್ಕೆ ಬದಲಾಗಿ ಉಡುಗೊರೆ ರೂಪದಲ್ಲಿ ಅವರಿಂದ ಭೂಮಿ ಪಡೆದು ಲಾಲು ಪ್ರಸಾದ್ ತನ್ನ ಕುಟುಂಬದ ಮತ್ತು ಸಹಚರರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಇದನ್ನೂ ಓದಿ: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ

  • ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ನವದೆಹಲಿ: ಆರ್‌ಜೆಡಿ ಮುಖ್ಯಸ್ಥ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಮಾಜಿ ಸಿಎಂ ವೈದ್ಯರ ನಿಗಾದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕುಟುಂಬದ ಸದಸ್ಯರು ಆಸ್ಪತ್ರೆಗೆ ಹಾಜರಾಗಿದ್ದು, ಅವರ ಆರೈಕೆಯಲ್ಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

    ಪ್ರಿನ್ಸ್‌ ಯಾದವ್‌ ಎಂಬವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, ಲಾಲು ಪ್ರಸಾದ್‌ ಯಾದವ್‌ ಅವರು ಅನಾರೋಗ್ಯದ ಕಾರಣ ಏಮ್ಸ್‌ಗೆ ದಾಖಲಾಗಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಬಿಹಾರದ ಎಲ್ಲಾ ಜನರು ದೇವರನ್ನು ಪ್ರಾರ್ಥಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾಜಿ ಸಿಎಂ ಆಸ್ಪತ್ರೆಯ ಬೆಡ್‌ನಲ್ಲಿರುವ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

  • ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನ- ಲಾಲು ಪ್ರಸಾದ್‌ ಯಾದವ್‌ ಭವಿಷ್ಯ

    ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನ- ಲಾಲು ಪ್ರಸಾದ್‌ ಯಾದವ್‌ ಭವಿಷ್ಯ

    ಪಾಟ್ನಾ: ಆಗಸ್ಟ್‌ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಪತನವಾಗಲಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ವರಿಷ್ಠ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ (Lalu Prasad Yadav) ಭವಿಷ್ಯ ನುಡಿದಿದ್ದಾರೆ.

    ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ ಎಂದರು. ಜೊತೆಗೆ ಕೇಂದ್ರದ ಮೋದಿ (Narendra Modi) ಸರ್ಕಾರ ಅತ್ಯಂತ ದುರ್ಬಲವಾಗಿದ್ದು, ಆಗಸ್ಟ್‌ನಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಎಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇದೇ ವೇಳೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav), ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು. ನಮ್ಮ ಪಕ್ಷಕ್ಕೆ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಇದ್ದವು. ನಮ್ಮ ಸಿದ್ಧಾಂತದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಮ್ಮ ಹೋರಾಟವನ್ನು ಮುಂದುವರಿಸಿದೆವು. ಕೆಲವೊಮ್ಮೆ ನಾವು ಯಶಸ್ವಿಯಾಗಿದ್ದೇವೆ ಮತ್ತು ಕೆಲವೊಮ್ಮೆ ನಾವು ವಿಫಲರಾಗಿದ್ದೇವೆ. ಆದರೆ ನಮ್ಮ ಕಾರ್ಯಕರ್ತರು ದೃಢವಾಗಿ ಉಳಿದರು ಎಂದು ಹೇಳಿದರು.

    ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲು ನಾವು ಜನತಾದಳದ ಭಾಗವಾಗಿದ್ದೆವು. ಈಗ ನಾವು ಬೇರ್ಪಟ್ಟಿದ್ದೇವೆ. ನಮ್ಮ ಪಕ್ಷ ಅಪ್ಪನ ಪಕ್ಷ. ಆರ್‌ಜೆಡಿ ಮತಗಳಲ್ಲಿ 9%ರಷ್ಟು ಏರಿಕೆ ದಾಖಲಾಗಿದ್ದರೆ, ಎನ್‌ಡಿಎ ಪಾಲು ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: 15‌ ದಿನಗಳಲ್ಲಿ 10 ಸೇತುವೆ ಕುಸಿತ – ಜಲಸಂಪನ್ಮೂಲ ಇಲಾಖೆಯ 11 ಎಂಜಿನಿಯರ್‌ಗಳು ಅಮಾನತು

  • ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    – ಆರ್‍ಜೆಡಿ ಮುಖ್ಯಸ್ಥನ ವಿರುದ್ಧ ಮೋದಿ ಕಿಡಿ

    ಪಾಟ್ನಾ: ಮುಸ್ಲಿಮ್ ಮೀಸಲಾತಿ ರಾಜಕೀಯ ಜೋರಾಗಿದೆ. ಎಲ್ಲಾ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡ್ಬೇಕು ಎಂದು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿಯವರು (Narendra Modi) ಐಎನ್‍ಡಿಐಎ ಒಕ್ಕೂಟದ ನಾಯಕರೊಬ್ರು ಎಲ್ಲಾ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದಿದ್ದಾರೆ. ಇಂತಹ ಹೇಳಿಕೆ ನೀಡಿದ್ರೂ ಕಾಂಗ್ರೆಸ್ ಸುಮ್ಮನಿದೆ ಅಂದ್ರೆ ಆ ಒಕ್ಕೂಟದ ಆಶಯ ಎಸ್‍ಸಿ-ಎಸ್‍ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡುವುದೇ ಆಗಿದೆ ಅಂತಲೇ ಅರ್ಥ ಎಂದು ಕುಟುಕಿದ್ದಾರೆ. ಇದನ್ನೂ ಓದಿ: NDAಗೆ 400ಕ್ಕೂ ಹೆಚ್ಚು ಸೀಟುಗಳು ಯಾಕೆ ಬೇಕು..?: ಪ್ರಚಾರದಲ್ಲಿ ಮೋದಿ ರಿವೀಲ್‌

    ಈ ನಡುವೆ ಕರ್ನಾಟಕ ಬಿಜೆಪಿ ಹಂಚಿಕೊಂಡಿದ್ದ ಮೀಸಲಾತಿ ಕುರಿತ ವೀಡಿಯೋವನ್ನು ತೆಗೆದು ಹಾಕುವಂತೆ ಟ್ವಿಟ್ಟರ್‍ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಉಗ್ರರಿಗೆ ಕಾಂಗ್ರೆಸ್ ಕ್ಲೀನ್‍ಚಿಟ್ ಕೊಡ್ತಿದೆ ಅಂತಾನೂ ಮೋದಿ ಆರೋಪಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿ, ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲಾಗ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.