Tag: Lalu Prasad

  • ಬಿಜೆಪಿ ನಾಯಕಿ ಕೈಹಿಡಿದ ಲಾಲುಗೆ ಶಿಕ್ಷೆ ವಿಧಿಸಿದ್ದ ಜಡ್ಜ್

    ಬಿಜೆಪಿ ನಾಯಕಿ ಕೈಹಿಡಿದ ಲಾಲುಗೆ ಶಿಕ್ಷೆ ವಿಧಿಸಿದ್ದ ಜಡ್ಜ್

    ಪಾಟ್ನಾ: ಮೇವು ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‍ಗೆ ಶಿಕ್ಷೆ ವಿಧಿಸಿದ್ದ ಸಿಬಿಐ ಮಾಜಿ ವಿಶೇಷ ನ್ಯಾಯಾಧೀಶರು ಬಿಜೆಪಿ ನಾಯಕಿಯನ್ನು ವಿವಾಹವಾಗಿದ್ದಾರೆ.

    ಮಾಜಿ ವಿಶೇಷ ಸಿಬಿಐ ನ್ಯಾಯಾಧೀಶ ಶಿವ್ ಪಾಲ್ ಸಿಂಗ್ (59) ಅವರು ತಮಗಿಂತ 9 ವರ್ಷ ಕಿರಿಯ ವಕೀಲರಾದ ಬಿಜೆಪಿ ನಾಯಕಿ ನೂತನಾ ತಿವಾರಿ (50) ಅವರನ್ನು ಕೆಲವು ದಿನಗಳ ಹಿಂದೆ ದುಮ್ಕಾ ಜಿಲ್ಲೆಯ ಬಸುಕಿನಾಥ್ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ.

    ಶಿವ್ ಪಾಲ್ ಸಿಂಗ್ ಅವರು ಕಳೆದ 3 ವರ್ಷಗಳಿಂದ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ-1 ಆಗಿ ನೇಮಕಗೊಂಡಿದ್ದಾರೆ. ಈ ಮೊದಲು ವಿಶೇಷ ಸಿಬಿಐ ನ್ಯಾಯಾಧೀಶರಾಗಿದ್ದ ಅವರು ಮೇವು ಹಗರಣದ ಎರಡು ಪ್ರಕರಣಗಳಲ್ಲಿ ಬಿಹಾರದ ಮಾಜಿ ಸಿಎಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‍ಗೆ ಶಿಕ್ಷೆ ವಿಧಿಸಿದ್ದರು. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ನ್ಯಾಯಾಧೀಶ ಶಿವ್ ಪಾಲ್ ಸಿಂಗ್ ಅವರಿಗೆ ಈಗಾಗಲೇ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. 2006ರಲ್ಲಿ ತಮ್ಮ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು. ಅದೇ ರೀತಿ ನೂತನ್ ಅವರು ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೂ ಮಗಳಿದ್ದಾಳೆ. ಇವರಿಬ್ಬರೂ ತಮ್ಮ ಮಕ್ಕಳು ಹಾಗೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆಯಾಗಲು ನಿರ್ಧರಿಸಿದರು.

    ಇದೀಗ ಅವರ ಮದುವೆ ಬಿಹಾರ ಹಾಗೂ ಜಾರ್ಖಂಡ್‍ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅನೇಕರು ಈ ಮದುವೆಯನ್ನು ಶ್ಲಾಘಿಸಿದ್ದು, ವಿಧವೆ ವಕೀಲೆಯೊಂದಿಗೆ ಅಂತಾರ್ಜಾತಿ ವಿವಾಹವಾಗಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ ಮೂಲದ ಶಿವ್ ಪಾಲ್ ಸಿಂಗ್ ಅವರು 2023ರ ಮಾ. 21ಕ್ಕೆ ಜಾರ್ಖಂಡ್ ನ್ಯಾಯಧೀಶ ಹುದ್ದೆಯಿಂದ ನಿವೃತ್ತಿಯನ್ನು ಹೊಂದಲಿದ್ದಾರೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    Live Tv
    [brid partner=56869869 player=32851 video=960834 autoplay=true]

  • ಮದುವೆ ಕಾರ್ಡ್ ಮೇಲೆ ಲಾಲು ಪ್ರಸಾದ್ ಫೋಟೋ ಹಾಕಿಸಿದ ಅಭಿಮಾನಿ

    ಮದುವೆ ಕಾರ್ಡ್ ಮೇಲೆ ಲಾಲು ಪ್ರಸಾದ್ ಫೋಟೋ ಹಾಕಿಸಿದ ಅಭಿಮಾನಿ

    ಪಾಟ್ನಾ: ಬಿಹಾರದ ವೈಶಾಕಿ ಜಿಲ್ಲೆಯ ವರನೋರ್ವ ತನ್ನ ಮದುವೆಯ ಕಾರ್ಡ್ ಮೇಲೆ ಲಾಲು ಪ್ರಸಾದ್ ಯಾದವ್ ಫೋಟೋವನ್ನು ಮುದ್ರಿಸುವ ಮೂಲಕ ಆರ್‌ಜೆಡಿ ಮುಖ್ಯಸ್ಥನ ಮೇಲಿರುವ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿಸಿದ್ದಾರೆ. ಅಲ್ಲದೆ ಆರ್‌ಜೆಡಿಯು ಪಕ್ಷದ ಚಿಹ್ನೆ ಜೊತೆಗೆ ಲಾಲು ಯಾದವ್‍ನನ್ನು ಬಿಡುಗಡೆಗೊಳಿಸುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

    ಹೌದು, ವೈಶಾಲಿಯ ರಾಹುವಾ ಗ್ರಾಮದ ನಿವಾಸಿಯಾಗಿರುವ ಪವನ್ ಕುಮಾರ್ ಏಪ್ರಿಲ್ 23ರಂದು ವಿವಾಹವಾಗಲಿದ್ದಾರೆ. ಹಾಗಾಗಿ ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಆರ್‌ಜೆಡಿ  ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ಲಾಲು ಪ್ರಸಾದ್ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಆರೋಗ್ಯ ಸಚಿವ ತೇಜ್ ಮಗ ಪವನ್, ಪ್ರತಾಪ್ ಯಾದವ್ ರಾಜ್ಯ ಅಧ್ಯಕ್ಷ ಜಗದಾನಂದ್ ಸಿಂಗ್ ಸೇರಿದಂತೆ ಆರ್‍ಜೆಡಿ ಪ್ರಮುಖ ನಾಯಕರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ.

    ಲಾಲು ಪ್ರಸಾದ್ ಬಡಕುಟುಂಬದಿಂದ ಬಂದಿದ್ದಾರೆ. ನನಗೆ ಉನ್ನತ ಅಧಿಕಾರಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಲಾಲು ಪ್ರಸಾದ್ ಖಂಡಿತವಾಗಿ ಶೀಘ್ರವೇ ಬಿಡುಗಡೆಯಾಗುತ್ತಾರೆ ಮತ್ತು ಆರೋಗ್ಯವಾಗಿರುತ್ತಾರೆ ಎಂದು ಭರವಸೆ ಹೊಂದಿದ್ದಾರೆ. ಜೊತೆಗೆ ತಮ್ಮ ಮದುವೆಗೆ ಲಾಲು ಪ್ರಸಾದ್ ಹಾಗೂ ಅವರ ಇಡೀ ಕುಟುಂಬ ಆಗಮಿಸಿ ಆಶೀರ್ವದಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ವಿಚ್ಛೇದನಕ್ಕೆ ಅರ್ಜಿಸಲ್ಲಿಸಿ ಮನೆಬಿಟ್ಟು ಹೋಗಿದ್ದ ಲಾಲು ಪುತ್ರ ಪತ್ತೆ!

    ವಿಚ್ಛೇದನಕ್ಕೆ ಅರ್ಜಿಸಲ್ಲಿಸಿ ಮನೆಬಿಟ್ಟು ಹೋಗಿದ್ದ ಲಾಲು ಪುತ್ರ ಪತ್ತೆ!

    -ಪಟ್ಟಣದ ಯುವತಿಯ ಜೊತೆಗೆ ಮದುವೆ ನಿರಾಕರಿಸಿದ್ದರೂ ಒತ್ತಾಯಿಸಿದ್ದ ಲಾಲು

    ಪಾಟ್ನಾ: ವಿಚ್ಛೇದನ ವಿಚಾರವಾಗಿ ಮನನೊಂದು ಮನೆಬಿಟ್ಟು ಹೋಗಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರ, ಶಾಸಕ ತೇಜ್ ಪ್ರತಾಪ್ ಯಾದವ್ ಹರಿದ್ವಾರದಲ್ಲಿ ಇದ್ದಾರೆ ಎಂದು ವರದಿಯಾಗಿದೆ.

    ತೇಜ್ ಪ್ರತಾಪ್ ಯಾದವ್ ಐಶ್ವರ್ಯ ರಾಯ್ ಜೊತೆಗೆ ವಿವಾಹವಾಗಿ ಕೆಲವೇ ತಿಂಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆಯಿಂದ ಮಾನಸಿಕವಾಗಿ ಕುಗ್ಗಿದ್ದ ತೇಜ್ ಪ್ರತಾಪ್ ಜೈಲಿನಲ್ಲಿದ್ದ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿ ಮರಳುವಾಗ ನಾಪತ್ತೆಯಾಗಿದ್ದರು.

    ತೇಜಸ್ ಫೋನ್ ಮಾಡಿದ್ದ. ವಿಚ್ಛೇದನ ಸಮಸ್ಯೆ ಬಗೆಹರಿಯುವವರೆಗೆ ನಾನು ಮನೆಯಿಂದ ದೂರ ಇರುತ್ತೇನೆ ಅಂತಾ ತಿಳಿಸಿದ್ದಾನೆ. ಹೀಗಾಗಿ ಹಬ್ಬಕ್ಕೆ ಹಾಗೂ ನನ್ನ ಹುಟ್ಟು ಹಬ್ಬಕ್ಕೆ ತೇಜಸ್ ಬರಲು ನಿರಾಕರಿಸಿದ್ದಾನೆ ಎಂದು ಹಿರಿಯ ಸಹೋದರಿ ತೇಜಸ್ವಿನಿ ಯಾದವ್ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ತೇಜ್ ಪ್ರತಾಪ್ ಯಾದವ್ ಆರು ತಿಂಗಳ ಹಿಂದೆಯಷ್ಟೇ ಆರ್‌ಜೆಡಿ ಪಕ್ಷದ ಮಾಜಿ ಸಚಿವ ಚಂದ್ರಿಕಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯ ರಾಯ್ ಅವರನ್ನು ವಿವಾಹವಾಗಿದ್ದರು. ಆದರೆ ಈ ಮದುವೆ ನನಗೆ ಇಷ್ಟವಿಲ್ಲದೆ ನಡೆದು ಹೋಗಿದೆ ಅಂತಾ ನವೆಂಬರ್ 2ರಂದು ಪಾಟ್ನಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

    ಈ ವೇಳೆ ಮಾಧ್ಯಮಗಳ ಮಾತನಾಡಿದ್ದ ತೇಜ್ ಪ್ರತಾಪ್ ಯಾದವ್ ಅವರು, ಪಟ್ಟಣದಲ್ಲಿ ಬೆಳೆದಿದ್ದ ಐಶ್ವರ್ಯಾ ರಾಯ್ ಅವರನ್ನು ಮದುವೆಯಾಗಲು ನನಗೆ ಇಷ್ಟವಿರಲಿಲ್ಲ. ಈ ಕುರಿತು ತಂದೆ ತಾಯಿಗೆ ಮುಂಚೆಯೇ ಹೇಳಿದ್ದೆ. ನನ್ನ ಮಾತನ್ನು ಯಾರೋಬ್ಬರೂ ಕೇಳಲಿಲ್ಲ. ಈಗ ಆಕೆಯ ಜೊತೆಗೆ ದಾಂಪತ್ಯ ಜೀವನ ಸಾಗಿಸಲು ನನ್ನಿಂದ ಅಸಾಧ್ಯ ಎಂದು ಹೇಳಿದ್ದರು.

    ನಾನು ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತಾ ಸ್ಪಷ್ಟಪಡಿಸಿದ್ದರು. ವಿಚ್ಛೇದನ ಅರ್ಜಿ ವಿಚಾರಣೆ ನವೆಂಬರ್ 29ರಂದು ನಡೆಯಲಿದ್ದು, ಮನೆಯಲ್ಲಿ ಇದ್ದರೆ ತಮ್ಮ ನಿರ್ಧಾರವನ್ನು ಬದಲಿಸಲು ಪ್ರಯತ್ನಗಳು ನಡೆಯುತ್ತವೆ. ಹೀಗಾಗಿ ನಾನು ಮನೆಯಿಂದ ದೂರ ಉಳಿಯುವುದೇ ಉತ್ತಮ ಅಂತಾ ತೇಜ್ ಪ್ರತಾಪ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ಬಹುಕೋಟಿ ಮೇವು ಹಗರಣ: ಲಾಲೂ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

    ಬಹುಕೋಟಿ ಮೇವು ಹಗರಣ: ಲಾಲೂ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

    ನವದೆಹಲಿ: ಬಹುಕೋಟಿ ಮೇವು ಹಗರಣ ಸಂಬಂಧ ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‍ ವಿಚಾರಣೆ ಎದುರಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

    ಲಾಲೂ ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.

    ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳು ಪ್ರತ್ಯೇಕ ವಿಚಾರಣೆ ಎದುರಿಸಬೇಕು ಅಷ್ಟೇ ಅಲ್ಲದೇ ಹಾಗೂ 9 ತಿಂಗಳೊಳಗೆ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ಸುಪ್ರೀಂ ಆದೇಶದಲ್ಲಿ ಹೇಳಿದೆ.

    ಏನಿದು ಪ್ರಕರಣ?
    20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲೂ ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.