Tag: Laliga Premier League

  • ಫುಟ್‍ಬಾಲ್ ಅಂಗಳದಲ್ಲಿ ಕೆಜಿಎಫ್ ಕ್ರೇಜ್

    ಫುಟ್‍ಬಾಲ್ ಅಂಗಳದಲ್ಲಿ ಕೆಜಿಎಫ್ ಕ್ರೇಜ್

    ಲಂಡನ್: ಯಶ್ ನಟನೆಯ ಕೆಜಿಎಫ್-2 ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಇದೀಗ ನಡೆಯುತ್ತಿರುವ ಲಾಲಿಗ ಫುಟ್‍ಬಾಲ್ ಲೀಗ್‍ನಲ್ಲಿ ಕೆಜಿಎಫ್ ಕ್ರೇಜ್ ಹುಟ್ಟಿಸಿದೆ.


    ಹೌದು ಕನ್ನಡ ಚಿತ್ರ ಕೆಜಿಎಫ್-2 ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಗೊಂಡು ಸಿನಿ ರಸಿಕರ ಮನಗೆದ್ದಿದೆ. ಸಿನಿಮಾ ನೋಡಿದ ಬಳಿಕ ಅಭಿಮಾನಿಗಳು ಸಿನಿಮಾವನ್ನು ಮೆಚ್ಚಿಕೊಂಡು ಸಿನಿಮಾದ ಡೈಲಾಗ್ ಮತ್ತು ಸನ್ನಿವೇಶಗಳನ್ನು ತಮ್ಮದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇಂದು ಜನಪ್ರಿಯ ಫುಟ್‍ಬಾಲ್ ಲೀಗ್ ಲಾಲಿಗ ಮೂರು ಸ್ಟಾರ್ ತಂಡಗಳ ಆಟಗಾರರಾದ ಕರೀಮ್, ಗ್ರೀಜ್ಮನ್, ಫೆರಾನ್ ಹೆಸರನ್ನು ಸೇರಿಸಿಕೊಂಡು ಲಲಿಗಾ ಲೀಗ್‍ನ ಕೆಜಿಎಫ್ ಸ್ಟಾರ್ಸ್‍ಗಳು ಎಂದು ಕೆಜಿಎಫ್-2ಗೆ ಟ್ರಿಬ್ಯೂಟ್ ಮಾಡಿದೆ. ಇದನ್ನೂ ಓದಿ: ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ನಿನ್ನೆ ವಿಶ್ವ ಶ್ರೇಷ್ಠ, ಜನಪ್ರಿಯ ಇಂಗ್ಲೀಷ್ ಪ್ರೀಮಿಯರ್ ಲೀಗ್‍ನ ಫುಟ್‍ಬಾಲ್ ಕ್ಲಬ್‍ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಸಿಟಿ, ಕೆಜಿಎಫ್‍ಗೆ ಸ್ಪೆಷಲ್ ಟ್ರಿಬ್ಯೂಟ್ ನೀಡಿತ್ತು. ಮ್ಯಾಂಚೆಸ್ಟರ್ ಸಿಟಿಯ ಮೂವರು ಸ್ಟಾರ್ ಆಟಗಾರರಾದ ಕೆವಿನ್, ಗುಂಡೋಗನ್, ಫೋಡೆನ್ ಹೆಸರುಗಳ ಮೊದಲ ಅಕ್ಷರಗಳನ್ನು ಜೋಡಿಸಿಕೊಂಡು ಇದು ನಮ್ಮ ಕೆಜಿಎಫ್ ಸ್ಟಾರ್ಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಈ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತ ಐಪಿಎಲ್‍ನಲ್ಲಿ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರೆಲ್ಲರೂ ಸೇರಿ ಕೆಜಿಎಫ್-2 ಸಿನಿಮಾ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

     

    View this post on Instagram

     

    A post shared by Manchester City (@mancity)

    ಭಾರತದ ಎಲ್ಲಾ ರಾಜ್ಯಗಳಲ್ಲೂ `ಕೆಜಿಎಫ್ ಚಾಪ್ಟರ್ 2′ ಕಲೆಕ್ಷನ್ ನಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗೆಯೇ ವಿದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ಯ ಎಲ್ಲೆಲ್ಲೂ ಯಶ್ ಮೇನಿಯಾ ಜೋರಾಗಿದೆ. ಈಗಾಗಲೇ ಚಿತ್ರ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ಆಫೀಸ್‍ನಲ್ಲಿ ದಾಖಲೆ ಬರೆದಿದೆ. ಸದ್ಯ ಕೆಜಿಎಫ್ ಹವಾ ಜೋರಾಗಿದ್ದು ಇದೀಗ ಕ್ರೀಡಾ ಕ್ಷೇತ್ರದಲ್ಲೂ ಕ್ರೇಜ್ ಹುಟ್ಟುಹಾಕಿ ಮಿಂಚುತ್ತಿದೆ.