Tag: Lalbagh Botanical Garden

  • Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    ಲಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕೆಂದು ಮನ ಬಯಸುತ್ತದೆ. ಪ್ರೀತಿಯ (Love) ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ (Valentine’s Day)- ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.

    `ಹೇ ಹೃದಯ
    ಅವಳ ಕಿರುನಗೆ ನೆನಪಿದೆಯ
    ಧರೆಯ ಮೇಲೆ ಅಂತಹ ಹೆಣ್ಣಿರುವಳೇ
    ಹೇ ಹೃದಯ
    ಅವಳ ಸಿಹಿ ನುಡಿ ಕೇಳಿದೆಯ
    ಶೃತಿಯಲ್ಲಿರೊ ಹೆಣ್ಣು ಹುಟ್ಟಿರುವಳೇ
    ಅವಳ ನಾನು ಪ್ರೀತಿಸಬೇಕು, ಹೇ ಹೃದಯ…’

    ಎಂಬ ಎಸ್‌ಪಿಬಿ ಅವರ ಧನಿಯಲ್ಲಿ ಮೂಡಿದ ಹಂಸಲೇಖ ಅವರ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲಿನಲ್ಲಿ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲದೇ `ಜಗವೇ ನೀನು ಗೆಳತಿಯೇ…., ಸುಮ್ಮನೆ ಹೀಗೆ ನಿನ್ನನೇ ನೋಡುತಾ ಪ್ರೇಮಿಯಾದೆನೆ..’ ಮತ್ತಿತರ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

    ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ನಂದಿಬೆಟ್ಟ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಫ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬಿಸಿ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡುತ್ತಾರೆ. ಇದನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಪ್ರೇಮವನ್ನೂ ಹೀಗೂ ಅರ್ಥಮಾಡಿಕೊಳ್ಳಬಹುದು ಅಂತಾ ಹೇಳಿಬಿಡ್ತಾರೆ. ಇನ್ನೂ ಕೆಲ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..

    ಹಿಂದೆಲ್ಲಾ ಪ್ರೇಮಕ್ಕಾಗಿ ಹಂಬಲಿಸುತ್ತಿದ್ದ ಯುವ ಸಮೂಹದಲ್ಲಿ ಕೆಲವರು ಪತ್ರಗಳನ್ನು ಬರೆದು ತಿಂಗಳಾನುಗಟ್ಟಲೇ ಅವರ ಮನೆಯ ಬಳಿಯೆಲ್ಲಾ ಅಲೆದು ಸರ್ಕಸ್ ಮಾಡಿ ಸುಸ್ತಾಗುತ್ತಿದ್ದರು. ಕೊನೆಯಲ್ಲಿ `ಅವಳು ನಮ್ಮಂಥವರಿಗೆಲ್ಲ ಸಿಗಲ್ಲ ಬಿಡು’ ಎಂದು ಬೈದುಕೊಂಡು ಸಮಾಧಾನ ಮಾಡಿಕೊಳ್ತಿದ್ರು. ಆದರೀಗ ಆಧುನಿಕತೆ ಬದಲಾಗಿದ್ದು, ಪ್ರೀತಿ ಹೇಳುವುದು ಕ್ಷಣಮಾತ್ರ ಸುಖವಾಗಿದೆ. ವಾಟ್ಸಾಪ್, ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲವರು ಮದುವೆಗೆ ಮುನ್ನ ಒಂದಷ್ಟು ದಿನಗಳು ಮಾತ್ರವೇ ಪ್ರೇಮಕಾಲವೆಂದು ಭಾವಿಸುತ್ತಾರೆ. ಆ ದಿನಗಳಲ್ಲಂತೂ ತಾವೂ ಪ್ರೇಮಿಗಳಾಗಿ ಕೈ-ಕೈ ಹಿಡಿದು ಸುತ್ತಾಡುವುದೇನು? ಭವಿಷ್ಯದ ಬಗ್ಗೆ ವಿಚಾರವನ್ನೂ ವಿನಿಮಯವೇನು ಅಬ್ಬಾ! ಹೇಳಲಸಾಧ್ಯ ನಮ್ಮ ಪಡ್ಡೆ ಹುಡುಗರಂತೂ `ಪ್ರಿಯೆ ನಿನಗಾಗಿ ಚಂದ್ರನನ್ನೇ ತಂದುಕೊಡುವೆ’ ಎಂದೂ ಹೇಳಿ ಮರ ಹತ್ತಿಸುವುದು ಉಂಟೂ.. ಈ ದಿನಗಳು ಮನಸ್ಸುಗಳಲ್ಲಿ ತುಂಬುವ ಮರೆಯದ ಕ್ಷಣಗಳೆಂದರೆ ತಪ್ಪಾಗಲಾರದು.

    ಪ್ರೇಮಿಗಳ ದಿನ ಆಚರಿಸುವುದೇಕೆ?
    ಪ್ರೇಮಿಗಳ ದಿನಾಚರಣೆಯು ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು `ಇಂತಿ ನಿಮ್ಮ ವ್ಯಾಲೇಂಟಿನ್’ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು `ವ್ಯಾಲೇಂಟಿನ್ಸ್ ಡೇ’ (ಪ್ರೇಮಿಗಳ ದಿನ) ಎಂದು ಆಚರಣೆ ಮಾಡುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಷ್ಪ ಲೋಕ ಅನಾವರಣಗೊಳ್ಳಲಿದೆ. ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.

    ಸಾಂದರ್ಭಿಕ ಚಿತ್ರ

    ಗಾಜಿನಮನೆಯಲ್ಲಿ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಡಾ.ರಾಜ್, ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆಗಳನ್ನು ಪುಷ್ಪಗಳಲ್ಲಿ ಅರಳಿಸಲಾಗಿದೆ. ನಾಳೆಯಿಂದ ಆಗಸ್ಟ್ 15ರ ವರೆಗೂ ಫಲಪುಷ್ಪ ಪ್ರದರ್ಶನ ಇರಲಿದ್ದು, ಪ್ರತಿದಿನ ನಿತ್ಯ 12 ಗಂಟೆಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ. ಇದನ್ನೂ ಓದಿ: ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಪ್ರಿಯಾ ಮೋಹನ್‍ಗೆ 5 ಲಕ್ಷ ನಗದು ಪುರಸ್ಕಾರ: ನಾರಾಯಣಗೌಡ

    ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂ.ಪಾಯಿ ಪ್ರವೇಶ ಶುಲ್ಕ ಇದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]