Tag: Lal Singh Chadha

  • ‘ಲಾಲ್ ಸಿಂಗ್ ಚಡ್ಡಾ’ ಸೋತಿಲ್ಲ, ನಷ್ಟವೂ ಆಗಿಲ್ಲ ಎಂದ ನಿರ್ಮಾಣ ಸಂಸ್ಥೆ

    ‘ಲಾಲ್ ಸಿಂಗ್ ಚಡ್ಡಾ’ ಸೋತಿಲ್ಲ, ನಷ್ಟವೂ ಆಗಿಲ್ಲ ಎಂದ ನಿರ್ಮಾಣ ಸಂಸ್ಥೆ

    ಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತಿದೆ, ಬಾಕ್ಸ್ ಆಫೀಸಿನಲ್ಲಿ ಅದು ಮಕಾಡೆ ಮಲಗಿದೆ ಎಂದೆಲ್ಲ ಮಾತುಗಳು ಕೇಳಿ ಬಂದವು. ಥಿಯೇಟರ್ ಖಾಲಿ ಹೊಡೀತಿವೆ ಎಂದೂ ಸುದ್ದಿ ಆಗಿತ್ತು. ಸಾವಿರಾರು ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದೂ ಹೇಳಲಾಗಿತ್ತು. ಹೀಗಾಗಿ ನಿರ್ಮಾಪಕರಿಗೆ ಈ ಸಿನಿಮಾ ಭಾರೀ ನಷ್ಟ ಮಾಡಿದೆ ಎಂದು ವರದಿ ಆಗಿತ್ತು.

    ಆದರೆ, ಅಸಲಿ ವಿಷಯವೇ ಬೇರೆ ಇದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ನಾವು ನಿರೀಕ್ಷೆ ಮಾಡಿದಷ್ಟು ಹಣ ಬಾರದೇ ಇರಬಹುದು. ಆದರೆ, ಸಿನಿಮಾ ನಿರ್ಮಾಣ ಸಂಸ್ಥೆಗೆ ಲಾಸ್ ಮಾಡಿಲ್ಲ. ನಷ್ಟವನ್ನೂ ಮಾಡಿಲ್ಲ. ನಾವು ಹಾಕಿರುವ ಬಂಡವಾಳ ಈಗಾಗಲೇ ಬಂದಿದೆ. ಹಾನಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಹೇಳಿಕೊಂಡಿದೆ. ಕಪೋಕಲ್ಪಿತ ವಿಷಯಗಳನ್ನು ನಂಬಬೇಡಿ ಎಂದು ಹೇಳಿದೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಇತ್ತೀಚಿನ ವರ್ಷಗಳಲ್ಲಿ ಆಮೀರ್ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದವು. ಆದರೆ, ಲಾಲ್ ಸಿಂಗ್ ಚಡ್ಡಾ ಅಷ್ಟೇನೂ ದುಡ್ಡು ಮಾಡದೇ ಇದ್ದರೂ, ನಿರ್ಮಾಪಕರಿಗೆ ಲಾಸ್ ಅಂತೂ ಮಾಡಿಲ್ಲ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಈ ಮೂಲಕ ಈ ಸಿನಿಮಾ ಲಾಭ ಹಾನಿಯ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಲ್ ಸಿಂಗ್ ಚಡ್ಡಾ: ಸ್ಪೆಷಲ್ ಮನವಿ ಮಾಡಿದ ಕರೀನಾ ಕಪೂರ್

    ಲಾಲ್ ಸಿಂಗ್ ಚಡ್ಡಾ: ಸ್ಪೆಷಲ್ ಮನವಿ ಮಾಡಿದ ಕರೀನಾ ಕಪೂರ್

    ಮೀರ್ ಖಾನ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ನ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿ ಮೂರ್ನಾಲ್ಕು ದಿನಗಳು ಕಳೆದಿವೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಬಾಯ್ಕಾಟ್ ಬಿಸಿ ಎದುರಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಟ್ರೆಂಡ್ ವೈರಲ್ ಆಗಿದ್ದರಿಂದ ಚಿತ್ರ ರಿಲೀಸ್ ಆದ ನಂತರವೂ ಸಾವಿರಾರು ಸ್ಕ್ರೀನ್ ಗಳಲ್ಲಿ ಪ್ರದರ್ಶನ ರದ್ದು ಮಾಡಲಾಗಿತ್ತು. ಆಮೀರ್ ಖಾನ್ ವೃತ್ತಿ ಜೀವನದ ಅತ್ಯಂತ ಕಳೆ ಪ್ರದರ್ಶನ ಕಂಡ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ.

    ಬಾಯ್ಕಾಟ್ ಕೂಗು ಜೋರಾಗುತ್ತಿದ್ದಂತೆಯೇ ಸ್ವತಃ ಆಮೀರ್ ಖಾನ್ ಅಖಾಡಕ್ಕೆ ಇಳಿದರು. ಬಾಯ್ಕಾಟಿಗೆ ಕಾರಣವಾಗಿದ್ದ ವಿಷಯದ ಕುರಿತು ಮಾತನಾಡಿ, ಕ್ಷಮೆ ಕೂಡ ಕೇಳಿದರು. ತಮಗೆ ದೇಶದ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು. ಆಮೀರ್ ಏನೇ ಹೇಳಿದರೂ, ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಹಿಂದೂಪರ ಕಾರ್ಯಕರ್ತರು ಘೋಷಿಸಿ ಆಗಿತ್ತು. ಅದರಿಂದ ಸಿನಿಮಾಗೆ ತೊಂದರೆಯ ಆಯಿತು.

    ಇದೀಗ ಈ ಕುರಿತಂತೆ ಕರೀನಾ ಕಪೂರ್ ಅಭಿಮಾನಿಗಳಿಗೆ ಮತ್ತು ಹಿಂದೂಪರ ಕಾರ್ಯಕರ್ತರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಸಿನಿಮಾ ಬಾಯ್ಕಾಟ್ ಮಾಡುವುದರಿಂದ ಹಲವರಿಗೆ ತೊಂದರೆ ಆಗಲಿದೆ. 250ಕ್ಕೂ ಹೆಚ್ಚು ಜನರು ಈ ಸಿನಿಮಾಗಾಗಿ ಕೆಲಸ ಮಾಡಿದ್ದೇವೆ. ಬರೋಬ್ಬರಿ ಎರಡು ವರ್ಷಗಳ ಕಾಲ ಶ್ರಮ ಹಾಕಿದ್ದೇವೆ. ಈ ಕಾರಣಕ್ಕಾಗಿ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಒಂದು ಕಡೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಬೆಂಕಿಗೆ ಇಂಚಿಂಚು ಸುಡುತ್ತಿದ್ದರೆ, ಇತ್ತ ಕಡೆ ಇದೇ ಕಾರಣಕ್ಕಾಗಿ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಾಗಿಕೆ. ಈಗಾಗಿ ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ರಿಪೋರ್ಟ್ ಅಷ್ಟಕಷ್ಟೇ ಇದೆ. ರಕ್ಷಾ ಬಂಧನಕ್ಕಿಂತಲೂ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್ ಓಕೆ ಎನ್ನುವಂತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸೇನೆಗೆ ಅವಮಾನ ಮಾಡಿದ್ಯಾ ಲಾಲ್ ಸಿಂಗ್ ಚಡ್ಡಾ ಸಿನಿಮಾ? : ಮತ್ತೊಂದು ವಿವಾದಕ್ಕೆ ಕಾರಣವಾದ ಆಮೀರ್

    ಭಾರತೀಯ ಸೇನೆಗೆ ಅವಮಾನ ಮಾಡಿದ್ಯಾ ಲಾಲ್ ಸಿಂಗ್ ಚಡ್ಡಾ ಸಿನಿಮಾ? : ಮತ್ತೊಂದು ವಿವಾದಕ್ಕೆ ಕಾರಣವಾದ ಆಮೀರ್

    ಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನೋಡುಗರು ಕೂಡ ಅಷ್ಟೇ ಚೆನ್ನಾಗಿ ಸ್ಪಂದಿಸಿದ್ದಾರೆ. ಆದರೆ, ವಿವಾದಗಳು ಮಾತ್ರ ನಿಲ್ಲುತ್ತಿಲ್ಲ. ಸಿನಿಮಾ ರಿಲೀಸ್ ಗೂ ಮುನ್ನ ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಸಿನಿಮಾ ರಿಲೀಸ್ ಆದ ಮೇಲೂ ಈ ಬಾಯ್ ಕಾಟ್ ಕೂಗು ನಿಂತಿಲ್ಲ. ಈ ಹಿಂದೆ ಆಮೀರ್ ಖಾನ್ ಹೇಳಿದ ಅಸಹಿಷ್ಣತೆ ಹೇಳಿಕೆ ಸದ್ದು ಮಾಡಿದ್ದಾರೆ. ಈ ಬಾರಿ ಸಿನಿಮಾದ ಕಟೆಂಟ್ ಕಾರಣದಿಂದಾಗಿ ವಿವಾದ ಎದ್ದಿದೆ.

    ಈವರೆಗೂ ಭಾರತೀಯರು ಮಾತ್ರ ಬಹಿಷ್ಕಾರದ ಬೆದರಿಕೆ ಹಾಕಿದ್ದರು. ಈ ಬಾರಿ ಇಂಥದ್ದೊಂದು ಕರೆ ನೀಡಿದ್ದು, ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್. ಈ ಕುರಿತು ಟ್ವಿಟ್ ಮಾಡಿರುವ ಇವರು, ಭಾರತೀಯ ಸೇನೆಗೆ ಮತ್ತು ಸಿಖ್ ಸಮುದಾಯಕ್ಕೆ ಅವಮಾನ ಮಾಡುವಂತಹ ಕಥೆ ಈ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

    ಮಾಂಟಿ ಪನೇಸರ್ ಮೂಲತಃ ಪಂಜಾಬಿನವರು. ಅವರು ಇಂಗ್ಲೆಂಡ್ ಪರವಾಗಿ ಕ್ರಿಕೆಟ್ ಆಡಿದವರು. ಈಗಲೂ ಭಾರತ ಮತ್ತು ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡವರು. ಹಾಗಾಗಿಯೇ ಆಮೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅರೆಜ್ಞಾನ ಹೊಂದಿದ ಸಿಖ್ ಒಬ್ಬ ಭಾರತೀಯ ಸೇನೆಗೆ ಸೇರುತ್ತಾನೆ ಎಂದು ಸಿನಿಮಾದಲ್ಲಿ ಆಮೀರ್ ತೋರಿಸುವ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಯ್ ಕಾಟ್ ನಡುವೆಯೂ ಕೋಟಿ ಕೋಟಿ ಎಣಿಸಿದ ‘ಲಾಲ್ ಸಿಂಗ್ ಚಡ್ಡಾ’ ಫಿಲ್ಮ್

    ಬಾಯ್ ಕಾಟ್ ನಡುವೆಯೂ ಕೋಟಿ ಕೋಟಿ ಎಣಿಸಿದ ‘ಲಾಲ್ ಸಿಂಗ್ ಚಡ್ಡಾ’ ಫಿಲ್ಮ್

    ಬಾಲಿವುಡ್ ಹೆಸರಾಂತ ನಟ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಆಮೀರ್ ಆಡಿದ್ದರು ಎನ್ನಲಾದ ಮಾತಿನಿಂದಾಗಿ ಈ ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು.

    ಈ ದೇಶದಲ್ಲಿ ಅಸಹಿಷ್ಣತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಆಮೀರ್ ಈ ಹಿಂದೆ ಹೇಳಿದ್ದರಂತೆ. ಇದೇ ಮಾತನ್ನು ಇಟ್ಟುಕೊಂಡು ಇವತ್ತು ಬಾಯ್ ಕಾಟ್ ಮಾತುಗಳನ್ನು ಆಡಲಾಗುತ್ತಿದೆ. ದೇಶ ದ್ರೋಹದಂತಹ ಹೇಳಿಕೆಯನ್ನು ಕೊಟ್ಟಿರುವ ಆಮೀರ್ ಖಾನ್ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ

    ಏನೇ ಬಾಯ್ ಕಾಟ್ ನಡೆದರೂ, ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಕೋಟಿ ಕೋಟಿ ಹಣವನ್ನು ಚಿತ್ರವು ಬಾಚುತ್ತಿದೆಯಂತೆ. ಈಗಾಗಲೇ ದಾಖಲೆ ರೀತಿಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆಗಿದೆಯಂತೆ. ಹಾಗಾಗಿ ಸಹಜವಾಗಿಯೇ ಆಮೀರ್ ಖುಷಿಯಲ್ಲಿದ್ದರೆ, ಇವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರಿಂದ ಭರ್ಜರಿ ಲಾಭ ಮಾಡಬಹುದು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಿಟೌನ್ ನಲ್ಲಿ ಎರಡು ಮೆಗಾ ಬಜೆಟ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಮುಂದಿನ ವಾರ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದ್ದರೆ, ಇದರ ಬೆನ್ನಿಂದೆಯೇ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ರಕ್ಷಾ ಬಂಧನ್ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಈ ಎರಡೂ ಚಿತ್ರಗಳಿಗೂ ಬೈಕಾಟ್ ಬೇನೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಟ್ರೆಂಡ್ ಕ್ರಿಯೇಟ್ ಆಗಿದೆ.

    ಆಮೀರ್ ಖಾನ್ ಎರಡ್ಮೂರು ವರ್ಷಗಳ ಹಿಂದೆ ದೇಶದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮತ್ತು ಪಿಕೆ ಸಿನಿಮಾದಲ್ಲಿ ಹಿಂದೂ ದೇವರಿಗೆ ಅಗೌರವ ತೋರಿದ್ದಾರೆ ಎನ್ನುವ ಕಾರಣಕ್ಕಾಗಿ ಲಾಲ್ ಸಿಂಗ್ ಚಡ್ಡಾವನ್ನು ಹಿಂದೂಗಳು ನೋಡಬಾರದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ. ಈ ಕುರಿತು ಸ್ವತಃ ಆಮೀರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭಾರತವನ್ನು ಪ್ರೀತಿಸುವಂತವನು ಎಂದು ಹೇಳುವ ಮೂಲಕ ಸಮಾಧಾನಿಸಿದ್ದಾರೆ. ಇದನ್ನೂ ಓದಿ:ಪತಿ ಪಾದದ ಬಳಿ ಕೂತು ಪೂಜಿಸಿದಕ್ಕೆ ಟ್ರೋಲ್ ಆದ ನಟಿ ಪ್ರಣಿತಾ

    ಇತ್ತ ದೇಶಪರ, ದೇಶಭಕ್ತಿ ಸಾರುವಂತಹ ಅನೇಕ ಚಿತ್ರಗಳನ್ನು ಮಾಡಿರುವ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನಕ್ಕೆ ಕಥೆ ಬರೆದವರು ಕೂಡ ಹಿಂದೂಗಳಿಗೆ ಅವಹೇಳನ ಮಾಡುವಂತಹ ಟ್ವಿಟ್ ಗಳನ್ನು ಮಾಡಿದ್ದರು ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನೂ ಬೈಕಾಟ್ ಮಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದಕ್ಕೆ ಕಂಗನಾ ರಣಾವತ್ ಕೂಡ ಧ್ವನಿ ಎತ್ತಬೇಕು ಎಂದು ಒತ್ತಡ ಹೇರಿದ್ದಾರೆ. ಇದಕ್ಕೂ ಉತ್ತರ ನೀಡಿದ ಕಂಗನಾ, ದೇಶ ಮತ್ತು ಹಿಂದೂಗಳ ಪರ ಯಾರೇ ಅಗೌರವ ತೋರಿದರೂ, ಅಂತಹ ಸಿನಿಮಾಗಳನ್ನು ಒಪ್ಪಬೇಡಿ ಎಂದು ಟ್ವಿಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಇದು ಆಮೀರ್ ಖಾನ್ ಮಾಡಿರುವ ಸಂಚು ಎಂದು ಆರೋಪಿಸಿದ ಕಂಗನಾ

    ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಇದು ಆಮೀರ್ ಖಾನ್ ಮಾಡಿರುವ ಸಂಚು ಎಂದು ಆರೋಪಿಸಿದ ಕಂಗನಾ

    ಮ್ಮ ಸಿನಿಮಾಗೆ ಪ್ರಚಾರ ಸಿಗಲಿ ಎಂದು, ಸಿನಿಮಾ ರಿಲೀಸ್ ಗೂ ಮುನ್ನ ನೆಗೆಟಿವ್ ಸುದ್ದಿ ಹರಡಲಿ ಎಂದು ಸ್ವತಃ ಆಮೀರ್ ಖಾನ್ ಅವರೇ ಈ ರೀತಿ ಸಂಚು ಮಾಡಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಈ ವರ್ಷ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಗೆದ್ದಿರುವುದು ಕೇವಲ ಮೂರೇ ಮೂರು ಸಿನಿಮಾಗಳು. ಈ ಭಯ ಇರುವುದರಿಂದಲೇ ಆಮೀರ್ ಖಾನ್ ನೆಗೆಟಿವ್ ಪಬ್ಲಿಸಿಟಿ ಮಾಡುತ್ತಿದ್ದಾರೆ ಎಂದಿದ್ದಾರೆ ಕಂಗನಾ.

    ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೊಂದು ರೀಮೇಕ್ ಚಿತ್ರ. ಈ ಕುರಿತೂ ಕಂಗನಾ ಲೇವಡಿ ಮಾಡಿದ್ದು, ಬಾಲಿವುಡ್ ನಲ್ಲಿ ರೀಮೇಕ್ ಸಿನಿಮಾಗಳು ವರ್ಕ್ ಆಗುವುದಿಲ್ಲ. ಈ ನೆಲದ ಕಥೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಮಾಡಲಿ. ಹಿಂದೂ ದೇವರನ್ನು ಹೀಯಾಳಿಸಿ ಮಾಡಿದ ಪಿಕೆ ಚಿತ್ರವೇ ಸೂಪರ್ ಹಿಟ್ ಸಿನಿಮಾ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅದರಿಂದ ಆಚೆ ಬಂದು ಈ ಸಮಾಜಕ್ಕೆ ಉತ್ತಮ ಸಿನಿಮಾ ಕೊಟ್ಟೆ ಎನ್ನುವ ಸಮಾಧಾನ ಅವರಿಗೆ ಬರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್

    ಗಂಗೂಬಾಯಿ ಕಾಥಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಭೂಲ್ ಭುಲಯ್ಯ ಸಿನಿಮಾಗಳನ್ನು ಹೆಸರಿಸಿರುವ ಕಂಗನಾ, ಈ ಚಿತ್ರಗಳಷ್ಟೇ ಬಾಲಿವುಡ್ ನಲ್ಲಿ ಗೆದ್ದಿವೆ. ದಿ ಕಾಶ್ಮೀರ್ ಫೈಲ್ಸ್ ಸತ್ಯದ ಅನಾವರಣಕ್ಕೆ ಸಾಕ್ಷಿ ಆಯಿತು. ಇನ್ನೊಂದು ಸಿನಿಮಾ ನೈಜ ಕಥೆಯನ್ನು ಆಧರಿಸಿತ್ತು. ಮತ್ತೊಂದು ಕಾಮಿಡಿ. ಕಾಮಿಡಿ ಸಿನಿಮಾವಾಗಿದ್ದರೂ, ಅಲ್ಲಿ ಯಾರ ಮನಸ್ಸಿಗೂ ನೋವನ್ನುಂಟು ಮಾಡುವಂತಹ ಕಥೆ ಇರಲಿಲ್ಲವೆಂದು ಆಮೀರ್ ಖಾನ್ ಅವರನ್ನು ಕಾಲೆಳೆದಿದ್ದಾರೆ ಕಂಗನಾ.

    Live Tv
    [brid partner=56869869 player=32851 video=960834 autoplay=true]

  • ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ದೇ ತಿಂಗಳು ಬಾಲಿವುಡ್  ಖ್ಯಾತ ನಟ ಆಮೀರ್ ಖಾನ್ ನಟನೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಆಮೀರ್ ಖಾನ್ ಈ ಹಿಂದೆ ಆಡಿದ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ಬೈಕಾಟ್ ಮಾಡಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

    ಈ ಕುರಿತಂತೆ ಸ್ವತಃ ಆಮೀರ್ ಖಾನ್ ಮೊನ್ನೆಯಷ್ಟೇ ಮಾತನಾಡಿದ್ದು, ನಾನು ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ದೇಶ ವಿರೋಧಿ ಮಾತುಗಳನ್ನು ಆಡಿಲ್ಲ. ಆದರೂ, ನನ್ನ ಮೇಲೆ ದೇಶದ್ರೋಹದ ಮಾತುಗಳನ್ನು ಆಡಲಾಗುತ್ತಿದೆ. ಇದನ್ನೇ ನೆನಪಾಗಿಟ್ಟುಕೊಂಡು ಸಿನಿಮಾವನ್ನು ಬೈಕಾಟ್ ಮಾಡಬೇಕೆಂದು ಹೇಳಲಾಗುತ್ತಿದೆ. ಇದು ಸರಿಯಾದದ್ದು ಅಲ್ಲ. ಆ ರೀತಿ ಟ್ರೆಂಡ್ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

    ಈ ಬೈಕಾಟ್ ಕುರಿತಂತೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕರಿಷ್ಮಾ, ವಿರೋಧಿಗಳಿಗೆ ಸಖತ್ ಚಾಟಿ ಬೀಸಿದ್ದು, ಬೈಕಾಟ್ ವಿಚಾರದಲ್ಲಿ ಕ್ಯಾರೆ ಅನಬಾರದು ಅಂದಿದ್ದಾರೆ. ಈ ಸಿನಿಮಾವನ್ನು ನೋಡಿ, ಆನಂತರ ಮಾತನಾಡಿ ಎಂದೂ ಅವರು ತಿಳಿಸಿದ್ದಾರೆ. ಕೆಲವರು ಮಾತ್ರ ಈ ರೀತಿ ಆಡುತ್ತಿದ್ದಾರೆ. ಉಳಿದವರು ಬೆಂಬಲಿಸಿದ್ದಾರೆ. ಹಾಗಾಗಿ ಬೈಕಾಟ್ ಅನ್ನುವವರನ್ನು ಗಣನೆಗೆ ತಗೆದುಕೊಳ್ಳಬೇಡಿ ಎಂದು ಆಮೀರ್ ಗೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ‘ಲಾಲ್ ಸಿಂಗ್ ಚಡ್ಡ’ ಸಿನಿಮಾ ಇದೇ ಆಗಸ್ಟ್ 11 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಬಿಡುಗಡೆಗೆ ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಒಂದು ಕಡೆ ಆಮೀರ್ ಖಾನ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಭಿಮಾನಿಯಾನ ಶುರು ಮಾಡಿದ್ದಾರೆ.

    ಹಲವು ವರ್ಷಗಳ ಹಿಂದೆ  ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇರಲು ನನ್ನ ಪತ್ನಿಗೂ ನನಗೂ ಕಷ್ಟವಾಗುತ್ತಿದೆ. ದೇಶ ತೊರೆಯುವಂತಹ ವಾತಾವರಣ ಉಂಟಾಗುತ್ತಿದೆ ಎಂದು ಬಹಿರಂಗವಾಗಿ ನುಡಿದಿದ್ದರು. ಆಗ ಆಮೀರ್ ಖಾನ್ ಮೇಲೆ ಅನೇಕರು ಮುಗಿಬಿದ್ದಿದ್ದರು. ಈಗಲೇ ನೀವು ದೇಶ ತೊರೆಯಬಹುದು ಎಂದು ಕಾಮೆಂಟ್ ಮಾಡಿದ್ದರು. ಈಗ ಅದನ್ನೇ ಇಟ್ಟುಕೊಂಡು ಬೈಕಾಟ್ ಅಭಿಯಾನ ಶುರು ಮಾಡಿದ್ದಾರೆ ಹಲವರು. ಹಾಗಾಗಿಯೇ ಈ ಕುರಿತು ಆಮೀರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ

    ನನ್ನನ್ನು ದೇಶವಿರೋಧಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ನಾನು ಅಪ್ಪಟ ದೇಶಾಭಿಮಾನಿ. ನನಗೆ ದೇಶದ ಬಗ್ಗೆ ಹೆಮ್ಮೆಯಿದೆ. ಆದರೆ, ಯಾರೋ ಅದನ್ನು ನೆಗೆಟಿವ್ ಆಗಿ ಬಿಂಬಿಸುತ್ತಿದ್ದಾರೆ. ದಯವಿಟ್ಟು ಸಿನಿಮಾವನ್ನು ಬಹಿಷ್ಕರಿಸುವ ಮಾತುಗಳನ್ನು ಆಡಬೇಡಿ. ಎಲ್ಲರೂ ಬಂದು ಸಿನಿಮಾ ನೋಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಆಮೀರ್ ಕಾಮೆಂಟ್ ಮಾಡಿದ್ದಾರೆ. ದೇಶ ಪ್ರೇಮದ ಬಗ್ಗೆ ಅನುಮಾನ ವ್ಯಕ್ತ ಪಡಿಸಬೇಡಿ. ನನಗೂ ದೇಶದ ಬಗ್ಗೆ ಅಪಾರ ಅಭಿಮಾನವಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ನಾಗ ಚೈತನ್ಯರ ಕೈ ಹಿಡಿಯಲಿಲ್ಲ ಥ್ಯಾಂಕ್ ಯೂ ಸಿನಿಮಾ

    ನಟ ನಾಗ ಚೈತನ್ಯರ ಕೈ ಹಿಡಿಯಲಿಲ್ಲ ಥ್ಯಾಂಕ್ ಯೂ ಸಿನಿಮಾ

    ಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ನಂತರ ಇವರಿಬ್ಬರ ಬದುಕಿನಲ್ಲೂ ಹಲವು ಬದಲಾವಣೆಗಳು ಆಗಿವೆ. ಈ ನೋವಿನಿಂದ ಇಬ್ಬರೂ ಆಚೆ ಬಂದು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುತ್ತಿವೆ. ಅತೀ ಹೆಚ್ಚು ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊದಲಿಗಿಂತಲೂ ಇದೀಗ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ ಸಮಂತಾ.

    ಆದರೆ, ನಾಗ ಚೈತನ್ಯ ಬದುಕಿನಲ್ಲಿ ಇದು ಉಲ್ಟಾ ಆಗುತ್ತಿದೆ. ಡಿವೋರ್ಸ್ ನಂತರ ಇದೇ ಮೊದಲ ಬಾರಿಗೆ ನಾಗ ಚೈತನ್ಯ ನಟನೆಯ ‘ಥ್ಯಾಂಕ್ ಯೂ’ ಚಿತ್ರ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಈ ಸಿನಿಮಾ ನಿರಾಸೆ ಮೂಡಿಸಿದೆ. ಅಷ್ಟೇನೂ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಕೂಡ ಸಿಕ್ಕಿಲ್ಲ. ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಮಕಾಡೆ ಮಲಗಿದ್ದರಿಂದ ನಾಗ ಚೈತನ್ಯ ಅವರಿಗೆ ಸಹಜವಾಗಿಯೇ ನೋವು ತಂದಿದೆ. ಅಭಿಮಾನಿಗಳು ಕೂಡ ನೆಗೆಟಿವ್ ರಿವಿವ್ಯೂ ನೀಡಿರುವುದರಿಂದ ತೀರಾ ಅಪ್ ಸೆಟ್ ಆಗಿದ್ದಾರೆ ಎನ್ನುವ ಸುದ್ದಿಯಾಗಿದೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ

    ಅಮೀರ್ ಖಾನ್ ನಟನಯೆ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಸಖತ್ ವೈರಲ್ ಕೂಡ ಆಗಿದೆ. ನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲೂ ಈ ಸಿನಿಮಾವಿದೆ. ಹಾಗಾಗಿ ಥ್ಯಾಂಕ್ ಯೂ ಸೋಲನ್ನು ಈ ಸಿನಿಮಾ ಮರೆಸಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಒಂದು ಕಡೆ ಸಮಂತಾ ಏರುದಿಕ್ಕಿನತ್ತ ಮುಖ ಮಾಡಿದ್ದರೆ, ನಾಗ ಚೈತನ್ಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಆದರೂ, ಲಾಲ್ ಸಿಂಗ್ ಛಡ್ಡಾ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]